ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 13, 2016
Question 1 |
1.ಈ ಕೆಳಗಿನ ಯಾವ ರಾಜ್ಯ ಇತ್ತೀಚೆಗೆ ಶೇ.100% ವಿದ್ಯುದೀಕರಣ ಸಾಧಿಸದ ದಕ್ಷಿಣ ಭಾರತದ ಮೊದಲ ರಾಜ್ಯವೆನಿಸಿದೆ?
ಕರ್ನಾಟಕ | |
ಕೇರಳ | |
ಆಂಧ್ರ ಪ್ರದೇಶ | |
ಮಹಾರಾಷ್ಟ್ರ |
ಆಂಧ್ರಪ್ರದೇಶ ಶೇ.100% ವಿದ್ಯುದೀಕರಣ ಸಾಧಿಸದ ದೇಶದ ಎರಡನೇ ರಾಜ್ಯ ಹಾಗೂ ದಕ್ಷಿಣ ಭಾರತದ ಮೊದಲ ರಾಜ್ಯವಾಗಿದೆ. ಗುಜರಾತ್ ಶೇ.100 ಗೃಹ ವಿದ್ಯುದೀಕರಣದ ಸಾಧನೆ ಮಾಡಿದ ದೇಶದ ಮೊದಲ ರಾಜ್ಯ. ಜೆ ಎಂ ಫಿನಾನ್ಶಿಯಲ್ಸ್ ವಿವಿಧ ರಾಜ್ಯಗಳಲ್ಲಿನ ವಿದ್ಯುದೀಕರಣ ಕುರಿತಾಗಿ ನಡೆಸಲಾದ ರಾಷ್ಟ್ರ ಮಟ್ಟದ ಸಮೀಕ್ಷೆಯಲ್ಲಿ ಈ ವಿಷಯವನ್ನು ಪ್ರಕಟಿಸಲಾಗಿದೆ. ರಾಜ್ಯದಲ್ಲಿನ ವಿದ್ಯುತ್ ಪ್ರಸರಣ ಮತ್ತು ವಿತರಣೆಯ ಜಾಲವನ್ನು ಬಲಪಡಿಸಲು ಮುಂದಿನ ಐದು ವರ್ಷಗಳಿಗೆ 20,000 ಕೋಟಿ ರೂ.ಗಳನ್ನು ಹೂಡಲು ಆಂಧ್ರ ಸರ್ಕಾರ ತೀರ್ಮಾನಿಸಿದೆ. ಉತ್ತರ ಪ್ರದೇಶ, ಮಧ್ಯಪ್ರದೇಶ, ಬಿಹಾರ, ಒಡಿಶಾ ಮತ್ತು ಅಸ್ಸಾಂ ರಾಜ್ಯಗಳಲ್ಲಿ ಶೇ 35% ಗ್ರಾಮೀಣ ಕುಟುಂಬಗಳು ವಿದ್ಯುತ್ ಸೌಲಭ್ಯದಿಂದ ವಂಚಿತವಾಗಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
Question 2 |
2. 3ನೇ “ಬ್ರಿಕ್ಸ್ ನಗರೀಕರಣ ವೇದಿಕೆ (BRICS Urbanisation Forum Meet)” ಸಭೆ ಈ ಕೆಳಗಿನ ಯಾವ ನಗರದಲ್ಲಿ ಆರಂಭಗೊಂಡಿತು?
ಪುಣೆ | |
ವಿಶಾಖ ಪಟ್ಟಣ | |
ಚೆನ್ನೈ | |
ಹೈದ್ರಾಬಾದ್ |
ಮೂರನೇ ಬ್ರಿಕ್ಸ್ ನಗರೀಕರಣ ವೇದಿಕೆ ಸಭೆ ಆಂಧ್ರಪ್ರದೇಶ ವಿಶಾಖಪಟ್ಟಣದಲ್ಲಿ ಆರಂಭಗೊಂಡಿದೆ. ಮೂರು ದಿನಗಳ ಕಾಲ ನಡೆಯಲಿರುವ ಈ ಸಭೆಯನ್ನು ಕೇಂದ್ರ ಸಚಿವ ವೆಂಕಯನಾಯ್ಡು ಉದ್ಘಾಟನೆ ಭಾಷಣ ಮಾಡುವ ಮೂಲಕ ಚಾಲನೆ ನೀಡಿದರು. ಪರಿವರ್ತನೆ ಮತ್ತು ನಗರೀಕರಣದಿಂದ ಉದ್ಬವಿಸುತ್ತಿರುವ ಸವಾಲುಗಳನ್ನು ಪರಿಣಾಮಕಾರಿಯಾಗಿ ಎದುರಿಸುವ ಬಗ್ಗೆ ಬ್ರಿಕ್ಸ್ ಪಾಲುಗಾರಿಕೆ ರಾಷ್ಟ್ರಗಳು ಚರ್ಚಿಸಲಿವೆ. ಇದರ ಜೊತೆಗೆ ಹವಾಮಾನ ಬದಲಾವಣೆ, ನೈರ್ಮಲ್ಯ ನಿರ್ವಹಣೆ, ಸ್ಮಾರ್ಟ್ ನಗರ, ನಗರ ಮೂಲಸೌಕರ್ಯ ಆರ್ಥಿಕ ನೆರವು ಸೇರಿದಂತೆ ವಸತಿ ಸೌಕರ್ಯಗಳ ಬಗ್ಗೆ ಚರ್ಚಿಸಲಾಗುವುದು. ಬ್ರಿಕ್ಸ್ ರಾಷ್ಟ್ರಗಳ ನೂರು ಮತ್ತು ವಿಶ್ವದ ಇತರೆ ರಾಷ್ಟ್ರಗಳಿಂದ ಸುಮಾರು 400 ಪ್ರತಿನಿಧಿಗಳು ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ.
Question 3 |
3. ________ ದಿನದಂದು “ರಾಷ್ಟ್ರೀಯ ಹಿಂದಿ ದಿವಸ್” ಅನ್ನು ಆಚರಿಸಲಾಗುತ್ತದೆ?
ಸೆಪ್ಟೆಂಬರ್ 10 | |
ಸೆಪ್ಟೆಂಬರ್ 11 | |
ಸೆಪ್ಟೆಂಬರ್ 13 | |
ಸೆಪ್ಟೆಂಬರ್ 14 |
ಪ್ರತಿ ವರ್ಷ ಸೆಪ್ಟೆಂಬರ್ 14 ರಂದು “ರಾಷ್ಟ್ರೀಯ ಹಿಂದಿ ದಿವಸ್” ಅನ್ನು ರಾಷ್ಟ್ರವ್ಯಾಪ್ತಿ ಆಚರಿಸಲಾಗುತ್ತದೆ. ಈ ದಿನದಂದು 1949 ರಲ್ಲಿ ಹಿಂದಿಯನ್ನು ಕೇಂದ್ರದ ಅಧಿಕೃತ ಆಡಳಿತ ಭಾಷೆಯನ್ನಾಗಿ ಅಳವಡಿಸಿಕೊಳ್ಳಲಾಯಿತು. [ವಿಶ್ವ ಹಿಂದಿ ದಿನ: ವಿಶ್ವ ಹಿಂದಿ ದಿನವನ್ನು ಪ್ರತಿ ವರ್ಷ ಜನವರಿ 10ರಂದು ಆಚರಿಸಲಾಗುತ್ತದೆ. 2006ರಲ್ಲಿ ಮೊದಲ ಬಾರಿಗೆ ವಿಶ್ವ ಹಿಂದಿ ದಿವಸ್ ಅನ್ನು ಆಚರಿಸಲಾಯಿತು. ಹಿಂದಿ ಭಾಷೆ ವಿಶ್ವದ ನಾಲ್ಕನೇ ಅತಿ ದೊಡ್ಡ ಭಾಷೆ].
Question 4 |
4. ಈ ಕೆಳಗಿನ ಯಾವ ದೇಶಕ್ಕೆ ಅಮೆರಿಕಾ ತನ್ನ ಇತಿಹಾಸದಲ್ಲೇ ಅತಿ ದೊಡ್ಡ ಒಪ್ಪಂದವೆನ್ನಲಾದ 38 ಬಿಲಿಯನ್ ಡಾಲರ್ ಮಿಲಿಟರಿ ನೆರವು ನೀಡಲು ಒಪ್ಪಿಗೆ ನೀಡಿದೆ?
ಇರಾನ್ | |
ಸಿರಿಯಾ | |
ಇಸ್ರೇಲ್ | |
ಪಾಕಿಸ್ತಾನ |
ಇಸ್ರೇಲ್ ದೇಶಕ್ಕೆ ಮುಂದಿನ ಹತ್ತು ವರ್ಷಗಳ ಕಾಲ 38 ಬಿಲಿಯನ್ ಡಾಲರ್ ಮಿಲಿಟರಿ ನೆರವು ನೀಡುವ ಮಹತ್ವದ ಒಪ್ಪಂದಕ್ಕೆ ಅಮೆರಿಕಾ ಸಹಿ ಹಾಕಿದೆ. ಅಮೆರಿಕಾ ಇತಿಹಾಸ ಇಷ್ಟು ಮೊತ್ತದ ಮಿಲಿಟರಿ ನೆರವು ನೀಡುತ್ತಿರುವುದು ಇದೇ ಮೊದಲು ಎನ್ನಲಾಗಿದೆ. ಕಳೆದ ಹತ್ತು ತಿಂಗಳಿಂದ ನಡೆಯುತ್ತಿದ್ದ ಮಾತುಕತೆಗೆ ಅಂತಿಮವಾಗಿ ಅಮೆರಿಕಾ ಒಪ್ಪಿಗೆ ನೀಡಿದ್ದು, ಪ್ರಸ್ತುತ ಅಮೆರಿಕಾ ವಾರ್ಷಿಕ 3.1 ಬಿಲಿಯನ್ ಡಾಲರ್ ನೆರವನ್ನು ಇಸ್ರೇಲ್ ದೇಶಕ್ಕೆ ನೀಡುತ್ತಿದ್ದು, ಒಪ್ಪಂದದಿಂದ 3.8 ಬಿಲಿಯನ್ ಡಾಲರ್ಗೆ ಏರಿಕೆಯಾಗಲಿದೆ.
Question 5 |
5. ಈ ಕೆಳಗಿನ ಯಾವ ನಗರ “ಟ್ರಾಕ್ ಏಷ್ಯಾ ಸೈಕ್ಲಿಂಗ್ ಸ್ಪರ್ಧೆ”ಯ ಆತಿಥ್ಯವಹಿಸಲಿದೆ?
ನವದೆಹಲಿ | |
ಬೆಂಗಳೂರು | |
ರಾಂಚಿ | |
ಭುಬನೇಶ್ವರ್ |
ಭಾರತ ಈ ಬಾರಿಯ ಟ್ರಾಕ್ ಏಷ್ಯಾ ಸೈಕ್ಲಿಂಗ್ ಸ್ಪರ್ಧೆಯನ್ನು ಆಯೋಜಿಸುತ್ತಿದೆ. ನವದೆಹಲಿಯ ಇಂದಿರಾ ಗಾಂಧಿ ಸ್ಪೋರ್ಟ್ ಕಂಪ್ಲೆಕ್ಸ್ ನಲ್ಲಿ ಈ ಸ್ಪರ್ಧೆ ಸೆಪ್ಟೆಂಬರ್ 14 ರಂದು ಆರಂಭಗೊಂಡಿದೆ. ಅಂತಾರಾಷ್ಟ್ರೀಯ ಸೈಕ್ಲಿಂಗ್ ಫೆಡರೇಷನ್ ನಿಂದ ಮಾನ್ಯತೆ ಪಡೆದಿರುವ ಈ ಸ್ಪರ್ಧೆಯಲ್ಲಿ ಪಾಕಿಸ್ತಾನ ಸೇರಿದಂತೆ 11 ರಾಷ್ಟ್ರಗಳ 150 ಸ್ಪರ್ಧಿಗಳು ಭಾಗವಹಿಸಲಿದ್ದಾರೆ.
Question 6 |
6. ಪ್ರತಿಷ್ಠಿತ “ಲೆಮೆಲ್ಸನ್-ಎಂಐಟಿ (Lemelson-MIT)” ಪ್ರಶಸ್ತಿ ಪಡೆದ ಭಾರತೀಯ ಮೂಲದ ವಿಜ್ಞಾನಿ ಯಾರು?
ರವೀಂದ್ರ ಖಲೇಜ | |
ರಮೇಶ್ ರಸ್ಕರ್ | |
ಕಿರಣ್ ಠಾಕೂರ್ | |
ವಿನಯ್ ಗುಪ್ತಾ |
ಭಾರತ ಮೂಲದ ವಿಜ್ಞಾನಿ ರಮೇಶ್ ರಸ್ಕರ್ ಅವರು ಪ್ರತಿಷ್ಠಿತ ಲೆಮೆಲ್ಸನ್-ಎಂಐಟಿ (Lemelson-MIT)” ಪ್ರಶಸ್ತಿಗೆ ಭಾಜನರಾಗಿದ್ದಾರೆ. ವಿನೂತನ ಆವಿಷ್ಕಾರಗಳ ಮೂಲಕ ಜಾಗತಿಕ ಮಟ್ಟದಲ್ಲಿ ಜೀವನ ಸುಧಾರಿಸಲು ಇವರು ನೀಡಿರುವ ಕೊಡುಗೆಯನ್ನು ಗುರುತಿಸಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಪ್ರಶಸ್ತಿಯು ರೂ 5 ಲಕ್ಷ (500000 ಯುಸ್ ಡಾಲರ್) ಒಳಗೊಂಡಿದೆ. ನಾಸಿಕ್ ಮೂಲದ ರಸ್ಕರ್ ಎಂಐಟಿ ಮೀಡಿಯ ಲ್ಯಾಬ್ನಲ್ಲಿ ಕ್ಯಾಮರ ಕಲ್ಚರ್ ರಿಸರ್ಚ್ ಗ್ರೂಪ್ ಅನ್ನು ಸ್ಥಾಪಿಸಿದ್ದಾರೆ. ಸುಮಾರು 75ಕ್ಕೂ ಹೆಚ್ಚು ಪೇಟೆಂಟ್ ಗಳನ್ನು ತಮ್ಮ ಹೆಸರಿನಲ್ಲಿ ರಸ್ಕರ್ ಹೊಂದಿದ್ದಾರೆ. ತಂತ್ರಜ್ಞಾನ ಅನ್ವೇಷಣೆ ಮೂಲಕ ಸಮಾಜಕ್ಕೆ ಅಪಾರ ಕೊಡುಗೆ ನೀಡುವ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ.
Question 7 |
7. ಭಾರತದ “ದೇವೇಂದ್ರ ಝಝಾರಿಯಾ” ಅವರು ಯಾವ ಕ್ರೀಡೆಯಲ್ಲಿ ಪ್ಯಾರಾಲಿಂಪಿಕ್ಸ್ ನಲ್ಲಿ ಎರಡು ಬಾರಿ ಚಿನ್ನ ಗೆದ್ದು ಸಾಧನೆ ಮಾಡಿದ್ದಾರೆ?
ಈಜು | |
ಜಾವೆಲಿನ್ | |
ಹೈಜಂಪ್ | |
ಲಾಂಗ್ ಜಂಪ್ |
ಪ್ಯಾರಾಲಿಂಪಿಕ್ಸ್ ನ ಜಾವಲಿನ್ ಎಸೆತದಲ್ಲಿ ಭಾರತದ ದೇವೇಂದ್ರ ಝಝಾರಿಯಾ ಅವರು ಚಿನ್ನದ ಪದಕ ಗೆದ್ದಿದ್ದಾರೆ. ಆ ಮೂಲಕ ಎರಡನೇ ಬಾರಿ ಈ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದು ದಾಖಲೆ ನಿರ್ಮಿಸಿದರು. ಝಝಾರಿಯಾ 2004 ರ ಅಥೆನ್ಸ್ ಗೇಮ್ಸ್ನಲ್ಲಿ 62.15 ಮೀಟರ್ ಎಸೆದು ಪದಕ ಗೆದ್ದಿದ್ದರು. ದೇವೆಂದ್ರ ಈ ಬಾರಿ 63.97 ಮೀಟನ್ ದೂರ ಜಾವ್ಲಿನ್ ಎಸೆದು ತಮ್ಮದೇ ದಾಖಲೆ ಅಳಿಸಿ ಚಿನ್ನಕ್ಕೆ ಮುತ್ತಿಟ್ಟರು.
Question 8 |
8. 21ನೇ ಕಾನೂನು ಆಯೋಗದ ಅಧ್ಯಕ್ಷರು__________?
ಎ.ಪಿ. ಷಾ | |
ಸತ್ಯ ಪಾಲ್ ಜೈನ್ | |
ಬಿ.ಎಸ್.ಚೌಹಣ್ | |
ರವಿ ಆರ್ ತ್ರಿಪಾಠಿ |
ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಬಿ ಎಸ್ ಚೌಹಣ್ ಅವರು 21ನೇ ಕಾನೂನು ಆಯೋಗದ ಅಧ್ಯಕ್ಷರಾಗಿದ್ದಾರೆ. ಗುಜರಾತ್ ಹೈಕೋರ್ಟ್ನ ನಿವೃತ್ತ ನ್ಯಾಯಾಧೀಶ ರವಿ ಆರ್ ತ್ರಿಪಾಠಿ ಅವರು ಆಯೋಗದ ಪೂರ್ಣ ಅವಧಿ ಸದಸ್ಯರಾಗಿದ್ದಾರೆ. ಸತ್ಯ ಪಾಲ್ ಜೈನ್ ಆಯೋಗದ ಅರೆಕಾಲಿಕ ಸದಸ್ಯರಾಗಿದ್ದಾರೆ.
Question 9 |
9. ಈ ಕೆಳಗಿನ ಯಾವುದು ಅಂಚೆ ದೂರುಗಳನ್ನು ದಾಖಲಿಸಲು ಕೇಂದ್ರ ಸರ್ಕಾರ ಜಾರಿಗೊಳಿಸಿರುವ “ಉಚಿತ ಟೋಲ್ ನಂಬರ್” ಆಗಿದೆ?
1900 | |
1924 | |
1933 | |
1999 |
ಅಂಚೆ ಸಂಬಂಧಿತ ದೂರುಗಳನ್ನು ದಾಖಲಿಸಲು ಕೇಂದ್ರ ಸರ್ಕಾರ “1924” ಸಂಖ್ಯೆಯ ಉಚಿತ ಟೋಲ್ ನಂಬರ್ ಅನ್ನು ಜಾರಿಗೊಳಿಸಿದೆ. ಪ್ರಾಥಮಿಕ ದಿನಗಳಲ್ಲಿ ದಿನದ 12 ಗಂಟೆಗಳ ಕಾಲ ಈ ನಂಬರ್ ಕಾರ್ಯನಿರ್ವಹಿಸಲಿದೆ. ಹಿಂದಿ, ಇಂಗ್ಲೀಷ್ ಮತ್ತು ಮಲೆಯಾಳಂ ಭಾಷೆಗಳಲ್ಲಿ ಈ ಸೇವೆ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಇತರೆ ಭಾಷೆಗಳಲ್ಲಿ ಸೇವೆ ದೊರೆಯಲಿದೆ.
Question 10 |
ದೇಶದಲ್ಲಿ ಬಡತನ ನಿರ್ಮೂಲನೆ ಕಾರ್ಯತಂತ್ರ ರೂಪಿಸುವ ಸಲುವಾಗಿ ಈ ಕೆಳಗಿನ ಯಾವ ಸಮಿತಿ ಇತ್ತೀಚೆಗೆ ವರದಿಯನ್ನು ಸಲ್ಲಿಸಿತು?
ಸುರೇಶ್ ರಂಗರಾಜನ್ ಸಮಿತಿ | |
ಅರವಿಂದ್ ಪನಗರಿಯಾ | |
ವಿವೇಕ್ ದೇಬರಾಯ್ ಸಮಿತಿ | |
ಚಿದಂಬರಂ ಸಮಿತಿ |
ದೇಶದಲ್ಲಿ ಬಡತನ ನಿರ್ಮೂಲನೆ ಕಾರ್ಯತಂತ್ರ ರೂಪಿಸುವ ಸಲುವಾಗಿ ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ್ ಪನಗರಿಯಾ ಅರವಿಂದ್ ಪನಗರಿಯಾ ನೇತೃತ್ವದ ಸಮಿತಿ ವರದಿಯನ್ನು ಸಲ್ಲಿಸಿದೆ. ಬಡತನ ರೇಖೆಗಿಂತ ಕೆಳಗಿನವರನ್ನು (ಬಿಪಿಎಲ್) ಗುರುತಿಸಲು ಹೊಸ ಸಮಿತಿಯೊಂದನ್ನು ರಚಿಸಬೇಕು ಎಂದು ಕಾರ್ಯ ಪಡೆಯು ಸಲಹೆ ಮಾಡಿದೆ. ಬಡತನ ನಿರ್ಮೂಲನೆಗೆ ಕಾರ್ಯತಂತ್ರ ರೂಪಿಸಲು ರಚಿಸ ಲಾಗಿರುವ ಕಾರ್ಯಪಡೆಯಲ್ಲಿ ನೀತಿ ಆಯೋಗದ ಸದಸ್ಯ ವಿವೇಕ್ ದೇಬರಾಯ್, ಗ್ರಾಮೀಣಾಭಿವೃದ್ಧಿ ಇಲಾಖೆ, ವಸತಿ ಮತ್ತು ನಗರ ಬಡತನ ನಿರ್ಮೂಲನೆ ಇಲಾಖೆಯ ಕಾರ್ಯದರ್ಶಿ ಸದಸ್ಯರಾಗಿದ್ದು, ಕಾರ್ಯಪಡೆಯು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವರದಿ ಸಲ್ಲಿಸಿದೆ. ಬಡತನ ರೇಖೆಗಿಂತ ಕೆಳಗಿನವರನ್ನು ಗುರುತಿಸುವ ಸಮಿತಿಯಲ್ಲಿ ರಾಜ್ಯ ಸರ್ಕಾರಗಳ ಪ್ರತಿನಿಧಿಗಳನ್ನು ಸೇರಿಸಿ ಕೊಳ್ಳಬೇಕು ಎಂದು ವರದಿಯಲ್ಲಿ ಹೇಳಲಾಗಿದೆ. 2015ರ ಫೆಬ್ರುವರಿಯಲ್ಲಿ ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ ನೀತಿ ಆಯೋಗದ ಆಡಳಿತ ಮಂಡಳಿಯ ಪ್ರಥಮ ಸಭೆಯಲ್ಲಿ ಕಾರ್ಯ ತಂಡ ರಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿತ್ತು.
ಪ್ರಶ್ನೆ ಮತ್ತು ಉತ್ತರಗಳನ್ನು ಒದಲು ಮತ್ತು ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ
Thanks sir
Thank u sir
ಧನ್ಯವಾದಗಳು ಸರ್
thans sir