ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 14, 2016

Question 1

1.ಈ ಕೆಳಗಿನ ಯಾರು ಇತ್ತೀಚೆಗೆ ವಿಶ್ವ ಬ್ಯಾಂಕ್ (World Bank) ಅಧ್ಯಕ್ಷರಾಗಿ ನೇಮಕಗೊಂಡರು?

A
ಜಿಮ್ ಯಾಂಗ್ ಕಿಮ್
B
ನ್ಯಾನ್ಸಿ ಬರ್ಡ್ಸಲ್
C
ಫಿಲಿಪ್ ಜೆ ಹ್ಯಾಲ್ಲನ್
D
ಪಾಲ್ ಫಾರ್ಮರ್
Question 1 Explanation: 
ಜಿಮ್ ಯಾಂಗ್ ಕಿಮ್:

ವಿಶ್ವಬ್ಯಾಂಕ್ನ ಹಾಲಿ ಅಧ್ಯಕ್ಷರಾಗಿರುವ ಜಿಮ್ ಯಾಂಗ್ ಕಿಮ್ ಅವರು ಎರಡನೇ ಅವಧಿಗೆ ವಿಶ್ವಬ್ಯಾಂಕ್ ಅಧ್ಯಕ್ಷರಾಗಿ ನೇಮಕಕೊಂಡಿದ್ದಾರೆ. ಕಿಮ್ ಮುಂದಿನ ಐದು ವರ್ಷಗಳ ತನಕ ಈ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ.ಕಿಮ್ ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನಗೊಂಡ ಏಕೈಕ ವ್ಯಕ್ತಿಯಾಗಿದ್ದರು. 2012 ರಲ್ಲಿ ಕಿಮ್ ಅವರು ವಿಶ್ವಬ್ಯಾಂಕ್ ನ 12ನೇ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಇವರಿಗಿಂತಲೂ ಮುಂಚೆ ಅಧ್ಯಕ್ಷರಾಗಿದ್ದ ಜೇಮ್ಸ್ ವೊಲ್ಫೆನ್ಸೊಹನ್ ರವರು ಸಹ ಎರಡು ಅವಧಿಗೆ ಅಧ್ಯಕ್ಷರಾಗಿದ್ದರು.

Question 2

2. ಅಮೆರಿಕಾ ಮೂಲದ ತಮಿಳು ಸಂಗಮ್ ನೀಡುವ ತಮಿಳು ರತ್ನ ಪ್ರಶಸ್ತಿಯನ್ನು ಯಾರಿಗೆ ನೀಡಲಾಯಿತು?

A
ಪಿ. ಚಿದಂಬರಂ
B
ಜಯಲಲಿತ
C
ಸುಬ್ರಮಣ್ಯಯನ್ ಸ್ವಾಮಿ
D
ಕಮಲ್ ಹಾಸನ್
Question 2 Explanation: 
ಸುಬ್ರಮಣ್ಯಯನ್ ಸ್ವಾಮಿ:

ಹಿರಿಯ ಬಿಜೆಪಿ ನಾಯಕ ಮತ್ತು ರಾಜ್ಯ ಸಭಾ ಸದಸ್ಯ ಸುಬ್ರಮಣ್ಯಯನ್ ಸ್ವಾಮಿ ರವರಿಗೆ ತಮಿಳು ರತ್ನ ಪ್ರಶಸ್ತಿಯನ್ನು ನೀಡಲಾಗಿದೆ. ಅಮೆರಿಕಾದ ತಮಿಳು ಸಂಗಮ್ ಈ ಪ್ರಶಸ್ತಿಯನ್ನು ನೀಡುತ್ತಿದ್ದು, ಭ್ರಷ್ಟಚಾರ ಮತ್ತು ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆ ತರುವಲ್ಲಿ ಸ್ವಾಮಿ ರವರ ಶ್ರಮವನ್ನು ಪರಿಗಣಿಸಿ ಪ್ರಶಸ್ತಿಯನ್ನು ನೀಡಲಾಗಿದೆ. ಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಮತ್ತು ನಿರ್ದೇಶಕ ಭಾರತಿ ರಾಜ ಅವರಿಗೆ ಈ ಹಿಂದೆ ಪ್ರಶಸ್ತಿಯನ್ನು

Question 3

3. “ಎನಿಥಿಂಗ್ ಎಬೌಟ್ ಖಮೋಶಿ (Anything About Khamoshi)” ಪುಸ್ತಕ ಈ ಕೆಳಗಿನ ಯಾವ ಗಣ್ಯವ್ಯಕ್ತಿಯ ಜೀವನ ಚರಿತ್ರೆ ಆಗಿದೆ?

A
ಅಟಲ್ ಬಿಹಾರಿ ವಾಜಪೇಯಿ
B
ಶತ್ರುಘ್ನ ಸಿನ್ಹಾ
C
ನಿತಿನ್ ಗಡ್ಕಾರಿ
D
ಮನ ಮೋಹನ್ ಸಿಂಗ್
Question 3 Explanation: 
ಶತ್ರುಘ್ನ ಸಿನ್ಹಾ:

“ಎನಿಥಿಂಗ್ ಎಬೌಟ್ ಖಮೋಶಿ” ಪುಸ್ತಕ ನಟ ಮತ್ತು ರಾಜಕಾರಣಿಯಾದ ಶತ್ರುಘ್ನ ಸಿನ್ಹಾ ರವರ ಜೀವನ ಚರಿತ್ರೆ ಕುರಿತ ಪುಸ್ತಕವಾಗಿದೆ. ಭಾರತಿ ಎಸ್ ಪ್ರಧಾನ್ ಅವರು ಈ ಪುಸ್ತಕವನ್ನು ಬರೆದಿದ್ದಾರೆ.

Question 4

4. 2016-17 ದುಲೀಪ್ ಟ್ರೋಪಿಯನ್ನು ಗೆದ್ದುಕೊಂಡ “ಇಂಡಿಯಾ ಬ್ಲೂ” ತಂಡದ ನಾಯಕ ಯಾರು?

A
ಗೌತಮ್ ಗಂಭೀರ್
B
ಯುವರಾಜ್ ಸಿಂಗ್
C
ವಿನಯ್ ಕುಮಾರ್
D
ರಾಬಿನ್ ಉತ್ತಪ್ಪ
Question 4 Explanation: 
ಗೌತಮ್ ಗಂಭೀರ್:

ಗೌತಮ್ ಗಂಭೀರ್ ನೇತೃತ್ವದ ಇಂಡಿಯಾ ಬ್ಲೂ ತಂಡಕ್ಕೆ 2016-17 ದುಲೀಪ್ ಟ್ರೋಫಿ ಲಭಿಸಿದೆ. ಪ್ರಶಸ್ತಿಗಾಗಿ ನಡೆದ ಅಂತಿಮ ಹಣಾಹಣಿಯಲ್ಲಿ ಇಂಡಿಯಾ ರೆಡ್ ವಿರುದ್ಧ ಇಂಡಿಯಾ ಬ್ಲೂ 355 ರನ್ ಗಳ ಅಮೋಘ ಜಯ ದಾಖಲಿಸಿತು. ಇದೇ ಮೊದಲ ಬಾರಿಗೆ ಪಿಂಕ್ ಬಾಲ್ ಅನ್ನು ಈ ಟೂರ್ನಿಯಲ್ಲಿ ಬಳಸಲಾಗಿತ್ತು.

Question 5

5. ಗಲಭೆ ಪೀಡಿತ ಕಾಶ್ಮೀರದಲ್ಲಿ ಶಾಂತಿ ಸುವ್ಯವಸ್ಥೆ ಮರುಸ್ಥಾಪಿಸುವ ಸಲುವಾಗಿ ಭಾರತೀಯ ಸೇನೆ ಯಾವ ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸಿದೆ?

A
ಆಪರೇಷನ್ ಕಾಮ್ ಡೌನ್
B
ಆಪರೇಷನ್ ಫಾರ್ ಪೀಸ್
C
ಆಪರೇಷನ್ ರಕ್ಷಕ್
D
ಆಪರೇಷನ್ ಸೆಕ್ಯೂರ್
Question 5 Explanation: 
ಆಪರೇಷನ್ ಕಾಮ್ ಡೌನ್:

ಕಾಶ್ಮೀರದಲ್ಲಿ ನಿರಂತರವಾಗಿರುವ ಹಿಂಸಾಚಾರವನ್ನು ಹತ್ತಿಕ್ಕಲು ಭಾರತೀಯ ಸೇನೆ “ಆಪರೇಷನ್ ಕಾಮ್ ಡೌನ್” ಹೆಸರಿನಲ್ಲಿ ಕಾರ್ಯಾಚರಣೆ ಆರಂಭಿಸಿದೆ. ದಕ್ಷಿಣ ಕಾಶ್ಮೀರದಲ್ಲಿ ಉಗ್ರರು ಮತ್ತು ದಂಗೆಕೋರರನ್ನು ಮಟ್ಟಹಾಕುವ ಸಲುವಾಗಿ ನಾಲ್ಕು ಸಾವಿರ ಯೋಧರನ್ನು ಈ ಕಾರ್ಯಾಚರಣೆಯಡಿ ನಿಯೋಜಿಸಲಾಗಿದೆ.

Question 6

6. ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ (International Day for Democracy)ವನ್ನು ಯಾವಾ ದಿನದಂದು ಆಚರಿಸಲಾಗುತ್ತದೆ?

A
ಸೆಪ್ಟೆಂಬರ್ 12
B
ಆಗಸ್ಟ್ 15
C
ಸೆಪ್ಟೆಂಬರ್ 15
D
ಅಕ್ಟೋಬರ್ 15
Question 6 Explanation: 
ಸೆಪ್ಟೆಂಬರ್ 15:

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನು ಸೆಪ್ಟೆಂಬರ್ 15 ರಂದು ಆಚರಿಸಲಾಗುತ್ತದೆ. ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ತತ್ವಗಳನ್ನು ಎತ್ತಿಹಿಡಿಯುವ ಸಲುವಾಗಿ ವಿಶ್ವಸಂಸ್ಥೆ 2007 ರಲ್ಲಿ ಸೆಪ್ಟೆಂಬರ್ 15 ಅನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವೆಂದು ಘೋಷಿಸಿತು. ಪ್ರಜಾಪ್ರಭುತ್ವ ಮತ್ತು 2030 ಸುಸ್ಥರಿ ಅಭಿವೃದ್ದಿ ಅಜೆಂಡ (Democracy and the 2030 Agenda for Sustainable Development) ಇದು ಈ ವರ್ಷದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಧ್ಯೇಯವಾಕ್ಯ.

Question 7

7. ಈ ಕೆಳಗಿನ ಯಾವ ಎರಡು ದೇಶಗಳು ದಕ್ಷಿಣ ಅಮೆರಿಕಾ ಖಂಡದ ನೆಲಾವೃತವಾದ (Landlocked Countries) ದೇಶಗಳಾಗಿವೆ?

A
ಈಕ್ವಡಾರ್ ಮತ್ತು ಬೊಲಿವಿಯ
B
ಕೊಲುಂಬಿಯ ಮತ್ತು ಗುಯಾನ
C
ಬೊಲಿವಿಯ ಮತ್ತು ಪರಾಗ್ವೆ
D
ಸುರಿನಮ್ ಮತ್ತು ಕೊಲುಂಬಿಯ
Question 7 Explanation: 
ಬೊಲಿವಿಯ ಮತ್ತು ಪರಾಗ್ವೆ:

ಬೊಲಿವಿಯ ಮತ್ತು ಪರಾಗ್ವೆ ದಕ್ಷಿಣ ಅಮೆರಿಕಾದ ನೆಲಾವೃತವಾದ ಎರಡು ದೇಶಗಳಾಗಿವೆ.

Question 8

8. ಇತ್ತೀಚೆಗೆ “ಮೆರಂಟಿ ಚಂಡಮಾರುತ (Typhoon Meranti)” ಯಾವ ದೇಶಕ್ಕೆ ಅಪ್ಪಳಿಸಿತು?

A
ಚೀನಾ
B
ಮೆಕ್ಸಿಕೊ
C
ಅಮೆರಿಕಾ
D
ಇಂಡೊನೇಷ್ಯಾ
Question 8 Explanation: 
ಚೀನಾ:

ಈ ವರ್ಷದ ಬಲಿಷ್ಠ ಚಂಡಮಾರುತ ಎನ್ನಲಾದ “ಮೆರಂಟಿ” ಚೀನಾಗೆ ಅಪ್ಪಳಿಸಿದೆ. ಗಂಟೆಗೆ 250 ಕಿ.ಮೀ ವೇಗದಲ್ಲಿ ಈ ಚಂಡಮಾರುತ ಬೀಸುತ್ತಿದ್ದು, ಸಾವಿರಾರು ಜನರು ಅಪಾಯ ಸಿಲುಕ್ಕಿದ್ದಾರೆ.

Question 9

9. ಫೋರ್ಬ್ಸ್ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆವ ಟಿವಿ ನಟಿಯರ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಮೊದಲ ನಟಿ ಯಾರು?

A
ಪ್ರಿಯಾಂಕ ಚೋಪ್ರಾ
B
ರಾಗಿಣಿ ಖನ್ನಾ
C
ದೃಷ್ಟಿ ದಾಮಿ
D
ಕೃತಿಕಾ ಕಮ್ರಾ
Question 9 Explanation: 
ಪ್ರಿಯಾಂಕ ಚೋಪ್ರಾ:

ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಫೋರ್ಬ್ಸ್ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆವ ಕಿರುತೆರೆ ನಟಿಯರ ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಮೊದಲ ನಟಿ ಎನಿಸಿದ್ದಾರೆ. ಅಮೆರಿಕಾದ ಕಿರುತೆರೆ ಥ್ರಿಲ್ಲರ್ ಸರಣಿ “ಕ್ವಾಂಟಿಕೊ (Quantico)” ದಲ್ಲಿ ಅಭಿನಯಿಸುವ ಮೂಲಕ ಪ್ರಿಯಾಂಕ ಕಿರುತೆರೆಗೆ ಪಾದಾರ್ಪಣೆ ಮಾಡಿದ್ದರು. ಚೋಪ್ರಾ ಅವರು ಈ ಪಟ್ಟಿಯಲ್ಲಿ ಎಂಟನೇ ಸ್ಥಾನವನ್ನು ಗಳಿಸಿದ್ದಾರೆ. ಅಮೆರಿಕಾದ ಪ್ರಖ್ಯಾತ ಕಿರುತೆರೆ ನಟಿ ಸೋಫಿಯಾ ವೆರ್ಗರ ಮೊದಲ ಸ್ಥಾನವನ್ನು ಪಡೆದುಕೊಂಡಿದ್ದಾರೆ.

Question 10

10. ಈ ಕೆಳಗಿನ ಯಾವ ಜೋಡಿ ಸರಿಯಾಗಿ ಹೊಂದಾಣಿಕೆ ಆಗಿದೆ?

I) ವಿಟಮಿನ್ B2 -ರೈಬೊಪ್ಲೇವಿನ್

II) ವಿಟಮಿನ್ B3 - ನಿಯಾಸಿನ್

III) ವಿಟಮಿನ್ B7 - ಬಯೋಟಿನ್

IV) ವಿಟಮಿನ್ B12 –ಸೈನೊಕೊಬಲಮೈನ್

ಸರಿಯಾದ ಉತ್ತರವನ್ನು ಈ ಕೆಳಗೆ ನೀಡಿರುವ ಕೋಡ್ ಮೂಲಕ ಗುರುತಿಸಿ:

A
I & II
B
II & III
C
I, II & III
D
ಮೇಲಿನ ಎಲ್ಲವೂ
Question 10 Explanation: 
ಮೇಲಿನ ಎಲ್ಲವೂ ಸರಿಯಾಗಿವೆ.
There are 10 questions to complete.

[button link=”http://www.karunaduexams.com/wp-content/uploads/2016/09/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಸೆಪ್ಟೆಂಬರ್-ಕ್ವಿಜ್-14.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

3 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 14, 2016”

  1. ಸಂತೋಷ್ ಗೌಡರ

    ಧನ್ಯವಾದಗಳು ಸರ್

Leave a Comment

This site uses Akismet to reduce spam. Learn how your comment data is processed.