ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 17, 2016

Question 1

1. ಈ ಕೆಳಗಿನ ಯಾವ ನಗರದಲ್ಲಿ ಭಾರತದ ಸಾಂಸ್ಕೃತಿಕ ಉತ್ಸವ “ನಮಸ್ತೆ ಫ್ರಾನ್ಸ್” ಆರಂಭಗೊಂಡಿತು?

A
ಪ್ಯಾರಿಸ್
B
ನವದೆಹಲಿ
C
ಲಿಯಾನ್
D
ಮುಂಬೈ
Question 1 Explanation: 
ಪ್ಯಾರಿಸ್:

ಭಾರತದ ಸಾಂಸ್ಕೃತಿಕ ಉತ್ಸವ “ನಮಸ್ತೆ ಫ್ರಾನ್ಸ್” ಪ್ಯಾರಿಸ್ ನಲ್ಲಿ ಆರಂಭಗೊಂಡಿದೆ. ಎರಡುವರೆ ತಿಂಗಳ ಕಾಲ ನಡೆಯುವ ಈ ಉತ್ಸವದಲ್ಲಿ ಭಾರತದ ಸಂಪ್ರಾದಾಯಿಕ ಕಲೆ, ಸಂಗೀತ, ನೃತ್ಯ, ಸಾಹಿತ್ಯ ಮತ್ತು ಸಿನಿಮಾವನ್ನು ಪ್ರದರ್ಶಿಸಲಾಗುವುದು. ಸೆಪ್ಟೆಂಬರ್ 15 ರಿಂದ ನವೆಂಬರ್ 30 ರವರೆಗೆ ಈ ಉತ್ಸವ ಫ್ರಾನ್ಸ್ನ ವಿವಿಧ ನಗರಗಳಲ್ಲಿ ನಡೆಯಲಿದೆ. ಭಾರತ ಮತ್ತು ಫ್ರಾನ್ಸ್ ನಡುವೆ ಸಂಸ್ಕೃತಿ ವಿನಿಮಯಕ್ಕೆ ಈ ಉತ್ಸವ ವೇದಿಕೆಯಾಗಲಿದೆ.

Question 2

2. ಮೊದಲ “ವಿಶ್ವ ಕಿವುಡರ ಶೂಟಿಂಗ್ ಚಾಂಪಿಯನ್ ಷಿಪ್ (Worlds Deaf Shooting Championship)” ಯಾವ ದೇಶದಲ್ಲಿ ನಡೆಯಿತು?

A
ಭಾರತ
B
ರಷ್ಯಾ
C
ಚೀನಾ
D
ಜಪಾನ್
Question 2 Explanation: 
ರಷ್ಯಾ:

ಮೊದಲ “ವಿಶ್ವ ಕಿವುಡರ ಶೂಟಿಂಗ್ ಚಾಂಪಿಯನ್ ಷಿಪ್” ರಷ್ಯಾದ ಕಝನ್ ಅಲ್ಲಿ ಸೆಪ್ಟೆಂಬರ್ 7 ರಿಂದ 17 ವರೆಗೆ ನಡೆಯಿತು. ಭಾರತದ ಶೂಟರ್ ಪ್ರಿಯೇಷ್ ದೇಶಮುಖ್ ಅವರು ಈ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದು ಕಂಚು ಗೆದ್ದುಕೊಂಡರು. ಉಕ್ರೇನ್ ನ ಸ್ವಿಟ್ಲಾನ ಯಾಟ್ಸೆಂಕೊ ಪ್ರಥಮ ಸ್ಥಾನ ಮತ್ತು ಸೆರ್ಬಿಯಾದ ಗೊರ್ಡನಾ ಮಿಕೊವಿಕ್ ಎರಡನೇ ಸ್ಥಾನವನ್ನು ಗಳಿಸಿದರು.

Question 3

3. 2016 ವಿಶ್ವ ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕ (World Economic Freedom Index)ದಲ್ಲಿ ಭಾರತ ಎಷ್ಟನೇ ಸ್ಥಾನವನ್ನು ಪಡೆದುಕೊಂಡಿದೆ?

A
96
B
110
C
112
D
121
Question 3 Explanation: 
112:

2016 ವಿಶ್ವ ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ 112 ನೆ ಸ್ಥಾನ ಪಡೆದುಕೊಂಡಿದೆ. 159 ದೇಶಗಳ ಪಟ್ಟಿಯಲ್ಲಿ ಭಾರತ 10 ಸ್ಥಾನ ಕೆಳಗೆ ಇಳಿದಿದೆ. ಆರ್ಥಿಕ ಸ್ವಾತಂತ್ರ್ಯ ವಿಷಯದಲ್ಲಿ ಹಾಂಕಾಂಗ್‌ ಮೊದಲ ಸ್ಥಾನದಲ್ಲಿದ್ದು, ಸಿಂಗಪುರ, ನ್ಯೂಜಿಲೆಂಡ್‌, ಸ್ವಿಟ್ಜರ್ಲೆಂಡ್‌, ಕೆನಡಾ, ಮಾರಿಷಸ್‌, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ನಂತರದ ಸ್ಥಾನದಲ್ಲಿ ಇವೆ. ಕಾನೂನು ವ್ಯವಸ್ಥೆ, ನಿಯಂತ್ರಣವೂ ಸೇರಿದಂತೆ ಹಲವಾರು ವಿಭಾಗಗಳಲ್ಲಿ ಭಾರತದ ಸಾಧನೆ ಕಳಪೆಯಾಗಿದೆ ಎಂದು ಆರ್ಥಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ವಾರ್ಷಿಕ ವರದಿ 2016ರಲ್ಲಿ ಹೇಳಲಾಗಿದೆ. ಕಾನೂನು ವ್ಯವಸ್ಥೆ ಮತ್ತು ಆಸ್ತಿ ಹಕ್ಕು (86ನೇ ಸ್ಥಾನ), ಕರೆನ್ಸಿಯ ಸ್ಥಿರ ಮೌಲ್ಯ (136ನೇ ಸ್ಥಾನ), ಅಂತರರಾಷ್ಟ್ರೀಯ ವ್ಯಾಪಾರದ ಸ್ವಾತಂತ್ರ್ಯ (144ನೇ ಸ್ಥಾನ)ಮತ್ತು ನಿಯಂತ್ರಣ ವಿಷಯಗಳಲ್ಲಿ 132 ನೇ ಸ್ಥಾನವನ್ನು ಭಾರತದ ಪಡೆದುಕೊಂಡು ಕಳಪೆ ಸಾಧನೆ ಕಳಪೆ ಸಾಧನೆ ಮಾಡಿದೆ. ವೆನೆಜುವೆಲಾ ಪಟ್ಟಿಯಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ.

Question 4

4. ವಿಶ್ವ ಸಂಸ್ಥೆಯ ಮಾನವ ಕಳ್ಳಸಾಗಣಿಕೆ ವಿರುದ್ದ ಅಭಿಯಾನಕ್ಕೆ ಈ ಕೆಳಗಿನ ಯಾರನ್ನು ಸದ್ಭಾವನಾ ರಾಯಭಾರಿಯನ್ನಾಗಿ ನೇಮಕಮಾಡಲಾಗಿದೆ?

A
ನಾದಿಯಾ ಮುರಾದ್ ಬಸಿ
B
ಮಲಾಲ ಯೂಸೆಫ್
C
ಬಸಿಯಾ ಸುಲ್ತಾನ್
D
ನಿರಾಣಿ ಮುಕ್ತಯಾರ್
Question 4 Explanation: 
ನಾದಿಯಾ ಮುರಾದ್ ಬಸಿ:

ಐಎಸ್ಐಎಸ್ ಭಯೋತ್ಪಾದಕರ ಲೈಂಗಿಕ ಗುಲಾಮಕ್ಕೆ ಬಲಿಯಾಗಿ ಬದುಕುಳಿದಿರುವ ಇರಾಕ್ ನ ಯಾಜಿದಿ ಜನಾಂಗಕ್ಕೆ ಸೇರಿದ ನಾದಿಯಾ ಮುರಾದ್ ಬಸಿ ಅವರನ್ನು ವಿಶ್ವ ಸಂಸ್ಥೆಯ ಮಾನವ ಕಳ್ಳಸಾಗಣಿಕೆ ವಿರುದ್ದ ಅಭಿಯಾನಕ್ಕೆ ರಾಯಭಾರಿಯನ್ನಾಗಿ ನೇಮಕ ಮಾಡಲಾಗಿದೆ. ಇಪ್ಪತ್ಮೂರು ವರ್ಷದ ನಾದಿಯಾ ಕೂಡ ಮಾನವ ಕಳ್ಳಸಾಗಣೆಯಿಂದ ಬಚಾವಾದ ಹೆಣ್ಣುಮಗಳು. ಈ ರೀತಿ ಸಂತ್ರಸ್ತೆಯೊಬ್ಬಳಿಗೆ ಇಂಥ ಗೌರವ ಸಿಗುತ್ತಿರುವುದು ಸಹ ಇದೇ ಮೊದಲು. ನಾದಿಯಾ ಅವರು ಮಾನವ ಕಳ್ಳಸಾಗಣಿಕೆಯಲ್ಲಿ ಬದುಕುಳಿದವರ ಘನತೆ ಹೆಚ್ಚಿಸುವ ಕೆಲಸವನ್ನು ಅಭಿಯಾನದಲ್ಲಿ ಹಮ್ಮಿಕೊಳ್ಳಲ್ಲಿದ್ದಾರೆ.

Question 5

5. ಇತ್ತೀಚೆಗೆ ಮುಕ್ತಾಯಗೊಂಡ “2016 ಟ್ರಾಕ್ ಏಷ್ಯಾ ಸೈಕ್ಲಿಂಗ್ ಕಪ್”ನ ಪದಕಗಳ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದ ದೇಶ ಯಾವುದು?

A
ಹಾಂಕ್ ಕಾಂಗ್
B
ಭಾರತ
C
ಪಾಕಿಸ್ತಾನ
D
ಜಪಾನ್
Question 5 Explanation: 

2016 ಟ್ರಾಕ್ ಏಷ್ಯಾ ಸೈಕ್ಲಿಂಗ್ ಕಪ್ ನಲ್ಲಿ ಹಾಂಕ್ ಕಾಂಗ್ 18 ಪದಕ (11 ಚಿನ್ನ, 4 ಬೆಳ್ಳಿ, 3 ಕಂಚು)ಗಳನ್ನು ಗೆಲ್ಲುವ ಮೂಲಕ ಪ್ರಥಮ ಸ್ಥಾನವನ್ನು ಪಡೆದುಕೊಂಡಿತು. ಭಾರತ ಐದು ಚಿನ್ನ, ನಾಲ್ಕು ಬೆಳ್ಳಿ ಮತ್ತು ಮೂರು ಕಂಚು ಗೆಲ್ಲುವ ಮೂಲಕ ಒಟ್ಟು 16 ಪದಕಗಳನ್ನು ಗೆದ್ದು ಎರಡನೇ ಸ್ಥಾನವನ್ನು ಪಡೆದುಕೊಂಡಿತು. ಈ ಬಾರಿಯ ಟ್ರಾಕ್ ಏಷ್ಯಾ ಸೈಕ್ಲಿಂಗ್ ಕಪ್ ಅನ್ನು ಭಾರತ ಆಯೋಜಿಸಿದ್ದು, ನವದೆಹಲಿಯಲ್ಲಿ ನಡೆಯಿತು.

Question 6

6. ಯಾವ ಸಮಿತಿ ಇತ್ತೀಚೆಗೆ ದೇಶದಲ್ಲಿ ಬೇಳೆಕಾಳುಗಳ ಉತ್ಪಾದನೆ ಮತ್ತು ಬೆಲೆ ಏರಿಕೆ ತಡೆಯುವ ಸಲುವಾಗಿ ತನ್ನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತು?

A
ಅರವಿಂದ್ ಪನಗರಿಯಾ ಸಮಿತಿ
B
ರತ್ನಾಕರ್ ಕುಲಕರ್ಣಿ ಸಮಿತಿ
C
ಅರವಿಂದ್ ಸುಬ್ರಮಣಿಯನ್ ಸಮಿತಿ
D
ಈಶ್ವರ್ ಚಂದ್ರ ಸಮಿತಿ
Question 6 Explanation: 
ಅರವಿಂದ್ ಸುಬ್ರಮಣ್ಯಂ ಸಮಿತಿ:

ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್ ಸುಬ್ರಮಣಿಯನ್ ಸಮಿತಿ ದೇಶದಲ್ಲಿ ಬೇಳೆಕಾಳುಗಳ ಉತ್ಪಾದನೆ ಮತ್ತು ಬೆಲೆ ಏರಿಕೆ ತಡೆಯುವ ಸಲುವಾಗಿ ತನ್ನ ಶಿಫಾರಸನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿತು. ಬೇಳೆಕಾಳುಗಳ ಉತ್ಪಾದನೆ ಹೆಚ್ಚಿಸಲು ಮತ್ತು ಬೆಲೆ ಏರಿಕೆ ತಡೆಯಲು ಕನಿಷ್ಠ ಬೆಂಬಲ ಬೆಲೆಯನ್ನು(ಎಂಎಸ್‌ಪಿ) ಪ್ರತಿಕ್ವಿಂಟಲ್‌ಗೆ ₹1 ಸಾವಿರದವರೆಗೆ ಹೆಚ್ಚಿಸುವುದೂ ಸೇರಿದಂತೆ ವ್ಯಾಪಕ ಸುಧಾರಣಾ ಕ್ರಮಗಳನ್ನು ಸಮಿತಿಯು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.ಉತ್ಪಾದನೆ ಹೆಚ್ಚಿಸಲು ರೈತರಿಗೆ ಉತ್ತೇಜನ ನೀಡಬೇಕು. ಇದಕ್ಕಾಗಿ ಕನಿಷ್ಠ ಬೆಂಬಲ ಬೆಲೆ ಏರಿಕೆ ಮಾಡಬೇಕಿದೆ. ಜತೆಗೆ ರಫ್ತು ನಿಷೇಧ ಮತ್ತು ದಾಸ್ತಾನು ಮಿತಿಯನ್ನು ಹಿಂದಕ್ಕೆ ಪಡೆಯಬೇಕು ಎಂದೂ ಸಮಿತಿಯು ತನ್ನ ಶಿಫಾರಸಿನಲ್ಲಿ ತಿಳಿಸಿದೆ.ತ್ವರಿತವಾಗಿ ಬೇಳೆಕಾಳುಗಳನ್ನು ಸಂಗ್ರಹಿಸಲು ಮತ್ತು ರೈತರಿಗೆ ಉತ್ಪಾದನಾ ಸಬ್ಸಿಡಿ ನೀಡಲು ಅನುಕೂಲವಾಗುವಂತೆ ಆಹಾರಧಾನ್ಯಗಳನ್ನು ಸಂಗ್ರಹಿಸುವ ಸಂಸ್ಥೆಗಳಿಗೆ ಹೆಚ್ಚುವರಿಯಾಗಿ ₹10 ಸಾವಿರ ಕೋಟಿ ನೀಡುವಂತೆಯೂ ಸಮಿತಿ ಸಲಹೆ ನೀಡಿದೆ.‘

Question 7

7. ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಚದಿನ (Coastal Clean Up Day)ವನ್ನು ಯಾವ ದಿನದಂದು ಆಚರಿಸಲಾಗುತ್ತದೆ?

A
ಸೆಪ್ಟೆಂಬರ್ 14
B
ಸೆಪ್ಟೆಂಬರ್ 17
C
ಸೆಪ್ಟೆಂಬರ್ 16
D
ಸೆಪ್ಟೆಂಬರ್ 19
Question 7 Explanation: 
ಸೆಪ್ಟೆಂಬರ್ 17:

ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಚದಿನವನ್ನು ಸೆಪ್ಟೆಂಬರ್ 17 ರಂದು ಆಚರಿಸಲಾಗುತ್ತದೆ. ಓಷಿಯನ್ ಕನ್ಸರ್ವೆನ್ಸಿ ಸಂಸ್ಥೆ ಅಂತಾರಾಷ್ಟ್ರೀಯ ಕರಾವಳಿ ದಿನವನ್ನು ಆಚರಿಸುತ್ತಿದ್ದು, ಈ ದಿನದಂದು ಸಮುದ್ರ ಸ್ವಚ್ಚತೆ ಬಗ್ಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು.

Question 8

8. ಈ ಕೆಳಗಿನ ಯಾರು “ಭಾರತೀಯ ಪ್ರಾಣಿ ದಯಾ ಮಂಡಳಿ”ಯ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ?

A
ಕತ್ರೀನಾ ಕೈಫ್
B
ಸೌಂದರ್ಯ ರಜನಿಕಾಂತ್
C
ವಿದ್ಯಾ ಬಾಲನ್
D
ಶೃತಿ ಹಾಸನ್
Question 8 Explanation: 
ಸೌಂದರ್ಯ ರಜನಿಕಾಂತ್:

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಸೌಂದರ್ಯ ಅವರು ಭಾರತೀಯ ಪ್ರಾಣಿ ದಯಾ ಮಂಡಳಿಯ ರಾಯಭಾರಿಯಾಗಿ ಹಾಗೂ ಮಂಡಳಿಯ ಸಹ ಸದಸ್ಯರಾಗಿ ನೇಮಕಗೊಂಡಿದ್ದಾರೆ.ಸೌಂದರ್ಯ ಅವರು ಭಾರತೀಯ ಪ್ರಾಣಿ ದಯಾ ಮಂಡಳಿಯ ರಾಯಭಾರಿಯಾಗಿ ಸಿನಿಮಾಗಳಲ್ಲಿ ಬಳಸುವ ಪ್ರಾಣಿಗಳ ರಕ್ಷಣೆ ಬಗ್ಗೆ ಕಾಳಜಿ ವಹಿಸಲಿದ್ದಾರೆ. ಚೆನ್ನೈನಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ಭಾರತೀಯ ಪ್ರಾಣಿ ದಯಾ ಮಂಡಳಿ,ಪರಿಸರ ಮತ್ತು ಅರಣ್ಯ ಸಚಿವಾಲಯದಡಿ

Question 9

9. ಇತ್ತೀಚೆಗೆ ನಿಧನರಾದ “ಎಡ್ವರ್ಡ್ ಅಲ್ಬೀ” ರವರು ಯಾವ ಕ್ಷೇತ್ರದಲ್ಲಿ ಪ್ರಸಿದ್ದಿ ಹೊಂದಿದ್ದರು?

A
ಸಿನಿಮಾ
B
ನಾಟಕಕಾರ
C
ಕಲೆ
D
ಪತ್ರಿಕೋದ್ಯಮ
Question 9 Explanation: 
ನಾಟಕಕಾರ:

ಪುಲಿಟ್ಜರ್ ಪ್ರಶಸ್ತಿ ವಿಜೇತ ಅಮೆರಿಕಾದ ನಾಟಕಕಾರ “ಎಡ್ವರ್ಡ್ ಅಲ್ಬೀ” ನಿಧನರಾದರು. ಅಲ್ಬೀ ಅವರ “ವೂ ಅಫ್ರೆಡ್ ಆಫ್ ವರ್ಜಿನಿಯಾ ವೂಲ್ಫ್ಸ್(Who Afraid of Virginia Woolf’s)” ಅವರಿಗೆ ಸಾಕಷ್ಟು ಮನ್ನಣೆ ತಂದು ಕೊಟ್ಟ ನಾಟಕವಾಗಿದೆ. ಎಡ್ವರ್ಡ್ ಅವರು ಮೂರು ಬಾರಿ ಪುಲಿಟ್ಜರ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

Question 10

10. “His Bloody Project” ಪುಸ್ತಕದ ಲೇಖಕರು________?

A
ಗ್ರಾಮೆ ಮಕ್ರೆ ಬರ್ನೆಟ್
B
ವಿಲಿಯಂ ಜೋನ್ಸ್
C
ಕಿರಣ್ ದೇಸಾಯಿ
D
ಡೇವಿಡ್ ಫಿಲಿಫ್ಸ್
Question 10 Explanation: 

ಗ್ರಾಮೆ ಮಕ್ರೆ ಬರ್ನೆಟ್ (Gramae Macrae Burnet) “His Bloody Project” ಪ್ರಸ್ತಕದ ಲೇಖಕರು. His Bloody Project ಪುಸ್ತಕ 2016 ಮ್ಯಾನ್ ಬುಕರ್ ಸಾಹಿತ್ಯ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿರುವ ಪುಸ್ತಕಗಳಲ್ಲಿ ಅಂತಿಮ ಪಟ್ಟಿಯಲ್ಲಿದ್ದು, ಪ್ರಶಸ್ತಿ ಪಡೆಯುವ ನಿರೀಕ್ಷೆ ಮೂಡಿಸಿದೆ.

There are 10 questions to complete.

[button link=”http://www.karunaduexams.com/wp-content/uploads/2016/09/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಸೆಪ್ಟೆಂಬರ್-ಕ್ವಿಜ್-17.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

Leave a Comment

This site uses Akismet to reduce spam. Learn how your comment data is processed.