ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು.
ಕ್ವಿಜ್-21
Question 1 |
1.ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ಯಾವ ಮಂತ್ರಾಲಯದಡಿಯಲ್ಲಿ ಬರುವುದು?
ಪರಿಸರ ಮಂತ್ರಾಲಯ | |
ಪ್ರವಾಸೋದ್ಯಮ ಮಂತ್ರಾಲಯ | |
ಸಂಸ್ಕೃತಿ ಮಂತ್ರಾಲಯ | |
ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಾಲಯ |
Question 2 |
2. ಈ ಮುಂದಿನ ಹೇಳಿಕೆಗಳನ್ನು ಗಮನಿಸಿ
1. ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರ ನ್ಯಾಯಾಲಯವೇ ಜಿಲ್ಲೆಯ ಅತ್ಯುನ್ನತ ಕ್ರಿಮಿನಲ್ ನ್ಯಾಯಾಲಯವಾಗಿದೆ
2. ರಾಜ್ಯಪಾಲರು ಉಚ್ಛನ್ಯಾಯಾಲಯದ ಮುಖ್ಯ ನ್ಯಾಯಾಧೀಶರ ಜೊತೆ ಪರಾಮರ್ಶೆ ನಡೆಸಿ ಜಿಲ್ಲಾ ನ್ಯಾಯಾಧೀಶರುಗಳನ್ನು ನೇಮಕ ಮಾಡುತ್ತಾರೆ
3. ಜಿಲ್ಲಾ ನ್ಯಾಯಾಧೀಶರಾಗುವಂತಹ ವ್ಯಕ್ತಿ ಕನಿಷ್ಟ ಏಳು ವರ್ಷಗಳ ಕಾಲ ನ್ಯಾಯವಾದಿಯಾಗಿರಬೇಕು ಅಥವಾ ಕೇಂದ್ರ ಇಲ್ಲವೇ ರಾಜ್ಯ ನ್ಯಾಯಾಂಗ ಸೇವೆ ಸಲ್ಲಿಸಿರಬೇಕು
4. ಸೆಷನ್ಸ್ ನ್ಯಾಯಾಧೀಶರು ಮರಣದಂಡನೆಯನ್ನು ವಿಧಿಸಿದಾಗ, ಅದನ್ನು ಕಾರ್ಯಾಚರಣೆಗೆ ತರುವ ಮುನ್ನ ಹೈಕೋರ್ಟ್ ಆ ನಿರ್ಣಯವನ್ನು ದೃಢೀಕರಿಸಬೇಕು
ಈ ಹೇಳಿಕೆಗಳಲ್ಲಿ ಸರಿಯಾದುವನ್ನು ಗುರುತಿಸಿ:
1, 2 ಮತ್ತು 3 | |
1, 2 ಮತ್ತು 4 | |
1, 3 ಮತ್ತು 4 | |
ಮೇಲಿನ ಎಲ್ಲವೂ |
Question 3 |
3. ಲೋಕಸಭೆಗೆ ಸಂಬಂಧಿಸಿದಂತೆ ಈ ಮುಂದಿನ ಹೇಳಿಕೆಗಳನ್ನು ಗಮನಿಸಿ
1. ಲೋಕಸಭಾಧ್ಯಕ್ಷರು ಸದನವನ್ನು ಅನಿರ್ದಿಷ್ಟ ಕಾಲದವರೆಗೆ ಮುಂದೂಡುವ ಅಧಿಕಾರವನ್ನು ಹೊಂದಿದ್ದಾರೆ. ಆದರೆ ಮುಂದೂಡಿದ ನಂತರ ಸದನವನ್ನು ಕರೆಯುವ ಅಧಿಕಾರ ರಾಷ್ಟ್ರಪತಿಗಳಿಗೆ ಮಾತ್ರ ಇದೆ
2. ಲೋಕಸಭೆಯ ಪ್ರಥಮ ಅಧಿವೇಶನ ಸೇರಿ 5 ವರ್ಷಗಳ ನಂತರ ವಿಶೇಷ ಸಂದರ್ಭಗಳಲ್ಲಿ ಅದರ ಅವಧಿಯನ್ನು ಹೆಚ್ಚಿಸದಿದ್ದರೆ, ರಾಷ್ಟ್ರಪತಿಗಳು ಸದನವನ್ನು ವಿಸರ್ಜನೆಗೊಳಿಸದಿದ್ದರೂ ತಾನೇ ತಾನಾಗಿ ಅದು ವಿಸರ್ಜನೆಗೊಳ್ಳುತ್ತದೆ
3. ಲೋಕಸಭೆಯ ವಿಸರ್ಜನೆಯ ನಂತರವೂ ಮುಂದಿನ ಸದನದ ಪ್ರಥಮ ಅಧಿವೇಶನದವರೆಗೆ ಲೋಕಸಭಾಧ್ಯಕ್ಷರು ಅವರ ಸ್ಥಾನದಲ್ಲಿ ಮುಂದುವರೆಯುತ್ತಾರೆ
ಮೇಲಿನ ಹೇಳಿಕೆಗಳಲ್ಲಿ ಯಾವುವು ಸರಿ:
1 ಮತ್ತು 3 | |
1 ಮತ್ತು 2 | |
2 ಮತ್ತು 3 | |
ಮೇಲಿನ ಎಲ್ಲವೂ |
Question 4 |
4. ಭಾರತೀಯ ಚುನಾವಣಾ ಆಯೋಗದ ಕುರಿತಾದ ಈ ಮುಂದಿನ ಅಂಶಗಳನ್ನು ಗಮನಿಸಿ:
1. ಇದು ಸ್ವತಂತ್ರ ಮತ್ತು ನಿಷ್ಪಕ್ಷಪಾತಿ ಚುನಾವಣೆ ಮೇಲ್ವಿಚಾರಣೆ ಹಾಗೂ ನಿರ್ದೇಶನ ಮಾಡುತ್ತದೆ
2. ಸಂಸತ್ತು, ರಾಜ್ಯ ಶಾಸನಸಭೆ, ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿ – ಈ ಎಲ್ಲಾ ಚುನಾವಣೆಗಳಿಗೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸುತ್ತದೆ
3. ರಾಜಕೀಯ ಪಕ್ಷಗಳಿಗೆ ಮಾನ್ಯತೆ ಕೊಡುವುದು; ರಾಜಕೀಯ ಪಕ್ಷಗಳಿಗೆ ಮತ್ತು ಚುನಾವಣೆಯಲ್ಲಿ ಸ್ಪರ್ಧಿಸುವ ವ್ಯಕ್ತಿಗಳಿಗೆ ಚುನಾವಣಾ ಚಿಹ್ನೆಯನ್ನು ನೀಡುತ್ತದೆ
4. ಚುನಾವಣಾ ವಾದವಿವಾದಗಳ ವಿಚಾರವಾಗಿ ಅಂತಿಮ ನಿರ್ಣಯ ಕೈಗೊಳ್ಳುವುದು
ಇವುಗಳಲ್ಲಿ ಚುನಾವಣಾ ಆಯೋಗದ ಕಾರ್ಯಗಳು ಯಾವುವು?
2, 3 ಮತ್ತು 4 | |
1, 2 ಮತ್ತು 3 | |
1, 3 ಮತ್ತು 4 | |
ಮೇಲಿನ ಎಲ್ಲವೂ |
Question 5 |
5. ಈ ಮುಂದಿನ ಹೇಳಿಕೆಗಳನ್ನು ಗಮನಿಸಿ
1. ಸುಟ್ಟ ಸುಣ್ಣವನ್ನು ಗಾಜಿನ ಉತ್ಪಾದನೆಯಲ್ಲಿ ಬಳಸಲಾಗುತ್ತದೆ
2. ಅಡುಗೆ ಸೋಡಾವನ್ನು ಅಗ್ನಿಶಾಮಕಗಳಲ್ಲಿ ಬಳಸಲಾಗುತ್ತದೆ
3. ಜಿಪ್ಸಮ್ ಅನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್ ನ ಉತ್ಪಾದನೆಯಲ್ಲಿ ಬಳಸಲಾಗುತ್ತದೆ
ಈ ಹೇಳಿಕೆಗಳಲ್ಲಿ ಯಾವುದು ಸರಿ?
1 ಮತ್ತು 3 | |
1 ಮತ್ತು 2 | |
2 ಮತ್ತು 3 | |
ಮೇಲಿನ ಎಲ್ಲವೂ |
Question 6 |
6. ಭಾರತೀಯ ಸಂಸತ್ತಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವುದು ಸರಿಯಾದ ಹೇಳಿಕೆ ಅಲ್ಲ
ವಿನಿಯೋಗ ಮಸೂದೆಯನ್ನು ಕಾನೂನಾಗಿ ಜಾರಿಗೆ ತರುವ ಮುನ್ನ ಸಂಸತ್ತಿನ ಎರಡೂ ಸದನಗಳಿಂದ ಒಪ್ಪಿಗೆ ದೊರೆತಿರಬೇಕು | |
ವಿನಿಯೋಗ ಮಸೂದೆಯನ್ವಯ ವಿನಿಯೋಜನೆಗೆ ಒಪ್ಪಿಗೆ ದೊರಕದ ಹೊರತು ಭಾರತದ ಸಂಚಿತ ನಿಧಿಯಿಂದ ಹಣವನ್ನು ತೆಗೆಯುವಂತಿಲ್ಲ | |
ಹೊಸ ಕರಗಳನ್ನು ಪರಿಚಯಿಸಲು ಹಣಕಾಸು ಮಸೂದೆಯ ಅಗತ್ಯವಿದೆ, ಈಗಾಗಲೇ ಜಾರಿಯಲ್ಲಿರುವ ಕರಗಳ ದರಗಳಲ್ಲಿ ಬದಲಾವಣೆ ಮಾಡಲು ಯಾವುದೇ ಮಸೂದೆ ಅಥವಾ ಕಾಯ್ದೆಯ ಅಗತ್ಯವಿಲ್ಲ | |
ಅಧ್ಯಕ್ಷರ ಶಿಫಾರಸ್ಸು ಇಲ್ಲದೆ ಯಾವುದೇ ಧನ ಮಸೂದೆಯನ್ನು ಸದನದಲ್ಲಿ ಮಂಡಿಸುವಂತಿಲ್ಲ |
ಹೊಸ ಕರಗಳನ್ನು ಪರಿಚಯಿಸಲು ಹಣಕಾಸು ಮಸೂದೆಯ ಅಗತ್ಯವಿದೆ, ಈಗಾಗಲೇ ಜಾರಿಯಲ್ಲಿರುವ ಕರಗಳ ದರಗಳಲ್ಲಿ ಬದಲಾವಣೆ ಮಾಡಲು ಯಾವುದೇ ಮಸೂದೆ ಅಥವಾ ಕಾಯ್ದೆಯ ಅಗತ್ಯವಿಲ್ಲ
Question 7 |
7. ಪಟ್ಟಿ I ರಲ್ಲಿ ಕೊಟ್ಟಿರುವ ಸಮುದ್ರಗಳನ್ನು ಪಟ್ಟಿ II ರಲ್ಲಿ ನೀಡಿರುವ ಯಾವ ದೇಶಕ್ಕೆ ಸಂಬಂಧಿಸಿದೆ ಎಂಬುದನ್ನು ಹೊಂದಿಸಿ ಬರೆಯಿರಿ.
ಪಟ್ಟಿ I ಪಟ್ಟಿ II
A. ಕಪ್ಪು ಸಮುದ್ರ 1. ಬಲ್ಗೇರಿಯಾ
B. ಕೆಂಪು ಸಮುದ್ರ 2. ಚೀನಾ
C. ಹಳದಿ ಸಮುದ್ರ 3. ಏರಿಟ್ರಿಯಾ
D. ಕ್ಯಾಸ್ಪಿಯನ್ ಸಮುದ್ರ 4. ಕಝಕಿಸ್ತಾನ
A-1, B-3, C-2, D-4 | |
A-4, B-3, C-1, D-2 | |
A-1, B-2, C-3, D-4 | |
A-4, B-1, C-2, D-3 |
Question 8 |
8. “14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಯಾವುದೇ ಕಾರ್ಖಾನೆ ಅಥವಾ ಗಣಿ, ಇಲ್ಲವೆ ಬೇರೆ ಯಾವುದೇ ಅಪಾಯಕಾರಿ ಉದ್ಯೋಗಕ್ಕೆ ಹಚ್ಚುವಂತಿಲ್ಲ” ಎಂದು ಭಾರತೀಯ ಸಂವಿಧಾನದ ಎಷ್ಟನೇ ಅನುಚ್ಛೇದ ಸೂಚಿಸುತ್ತದೆ
ಅನುಚ್ಛೇದ 19 | |
ಅನುಚ್ಛೇದ 8 | |
ಅನುಚ್ಛೇದ 24 | |
ಅನುಚ್ಛೇದ 9 |
Question 9 |
9. ಮಾರುಕಟ್ಟೆಯಲ್ಲಿ ಮಾರಲಾಗುವ ಸ್ಟಾಂಡರ್ಡ್ 18 ಕ್ಯಾರಟ್ ಚಿನ್ನ ಹೊಂದಿರುವುದು
75% ಭಾಗ ಚಿನ್ನ ಮತ್ತು 25% ಭಾಗ ಇತರೆ ಲೋಹಗಳು | |
91.6% ಭಾಗ ಚಿನ್ನ ಮತ್ತು 8.4% ಭಾಗ ಇತರೆ ಲೋಹಗಳು | |
80% ಭಾಗ ಚಿನ್ನ ಮತ್ತು 20% ಭಾಗ ಇತರೆ ಲೋಹಗಳು | |
70% ಭಾಗ ಚಿನ್ನ ಮತ್ತು 30% ಭಾಗ ಇತರೆ ಲೋಹಗಳು |
(ಸ್ಟಾಂಡರ್ಡ್ 18 ಕ್ಯಾರಟ್ ಚಿನ್ನ ಎಂದರೆ 18 ಭಾಗ ಚಿನ್ನ ಮತ್ತು 6 ಭಾಗ ಇತರೆ ಲೋಹಗಳು (18+6=24), 916 ಹಾಲ್ ಮಾರ್ಕ್ ಚಿನ್ನದಲ್ಲಿ 22 ಭಾಗ ಚಿನ್ನ ಮತ್ತು 2 ಭಾಗ ಇತರೆ ಲೋಹಗಳು ಅಂದರೆ 91.6% ಚಿನ್ನ ಹೊಂದಿರುತ್ತದೆ)
Question 10 |
10. ಈ ಕೆಳಗಿನ ಯಾವ ವಿಧದ ಸೂಕ್ಷ್ಮ ಜೀವಿಗಳನ್ನು ಕೈಗಾರಿಕೆಗಳಲ್ಲಿ ಬಹಳವಾಗಿ ಬಳಸಲಾಗುತ್ತದೆ
ಏಕಾಣು ಜೀವಿಗಳು | |
ಸೂಕ್ಷ್ಮ ಪಾಚಿಗಳು | |
ಶಿಲೀಂದ್ರಗಳು | |
ಮೇಲಿನ ಎಲ್ಲವೂ |
Nice sir
super