ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು.

ಕ್ವಿಜ್-22

Question 1

1. ಅಕ್ಟೋಬರ್ 1959 ರಲ್ಲಿ ಭಾರತದಲ್ಲಿ ಪ್ರಥಮ ಬಾರಿಗೆ ಪಂಚಾಯತ್ ರಾಜ್ ವ್ಯವಸ್ಥೆಯನ್ನು ಯಾವ ರಾಜ್ಯದಲ್ಲಿ ಜಾರಿಗೊಳಿಸಲಾಯಿತು

A
ಕರ್ನಾಟಕ
B
ರಾಜಸ್ತಾನ
C
ಕೇರಳ
D
ಮಹಾರಾಷ್ಟ್ರ
Question 1 Explanation: 
ರಾಜಸ್ತಾನ
Question 2

2. ಈ ಕೆಳಗಿನ ಜೋಡಿಗಳಲ್ಲಿ ಯಾವುದು/ವು ಸರಿಯಾಗಿ ಹೊಂದಿಕೆಯಾಗಿದೆ

1. ಮೃಚ್ಛಕಟಿಕ - ಶೂದ್ರಕ

2. ಬುದ್ಧಚರಿತ - ವಸುಬಂಧು

3. ಮುದ್ರಾರಾಕ್ಷಸ - ವಿಶಾಖದತ್ತ

4. ಹರ್ಷಚರಿತ - ಬಾಣಬಟ್ಟ

ಕೆಳಗಿನ ಸಂಕೇತಗಳನ್ನು ಬಳಸಿ ಸರಿಯಾದ ಉತ್ತರವನ್ನು ಆಯ್ಕೆ ಮಾಡಿ

A
1, 3 ಮತ್ತು 4
B
1, 2 ಮತ್ತು 3
C
2, 3 ಮತ್ತು 4
D
ಮೇಲಿನ ಎಲ್ಲವೂ
Question 2 Explanation: 
1, 3 ಮತ್ತು 4
Question 3

3. ಬ್ಯಾಂಕುಗಳು ತಮ್ಮ ನಗದು ಹಣ ಮತ್ತು ಒಟ್ಟು ಆಸ್ತಿಗಳ ನಡುವೆ ಹೊಂದಿರಲೇಬೇಕಾದ ಅನುಪಾತವನ್ನು ಈ ರೀತಿ ಕರೆಯುತ್ತಾರೆ.

A
ಶಾಸನೀಯ ಬ್ಯಾಂಕ್ ಅನುಪಾತ (Statutory Bank Ratio)
B
ಶಾಸನೀಯ ದ್ರವ್ಯತ್ವ ಅನುಪಾತ (Statutory Liquid Ratio)
C
ನಗದು ಮೀಸಲು ಅನುಪಾತ (Cash Reserve Ratio)
D
ಕೇಂದ್ರ ದ್ರವ್ಯತ್ವ ಮೀಸಲು (Central Liquid Reserve)
Question 3 Explanation: 
ಶಾಸನೀಯ ದ್ರವ್ಯತ್ವ ಅನುಪಾತ (Statutory Liquid Ratio)
Question 4

4. ಮನುಷ್ಯನ ಮೂತ್ರಪಿಂಡದಲ್ಲಿ ಉಂಟಾಗುವ ಹರಳುಗಳು (ಕಿಡ್ನಿ ಕಲ್ಲು) ಮುಖ್ಯವಾಗಿ ಈ ಕೆಳಗಿನ ಯಾವ ರಾಸಾಯನಿಕದ ಸಂಯುಕ್ತವಾಗಿದೆ

A
ಕ್ಯಾಲ್ಸಿಯಂ ಕಾರ್ಬೋನೆಟ್
B
ಯೂರಿಕ್ ಆಮ್ಲ
C
ಕ್ಯಾಲ್ಸಿಯಂ
D
ಕ್ಯಾಲ್ಸಿಯಂ ಅಕ್ಸಲೇಟ್
Question 4 Explanation: 
ಕ್ಯಾಲ್ಸಿಯಂ ಅಕ್ಸಲೇಟ್
Question 5

5. ಈ ಕೆಳಗೆ ಕೊಟ್ಟಿರುವ ಭಾಷೆಗಳಲ್ಲಿ ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳು ಯಾವುವು

1. ಇಂಗ್ಲೀಷ್

2. ಜಪಾನಿ

3. ಜರ್ಮನಿ

4. ಚೀನಿ

5. ಅರೇಬಿಕ್

A
1, 3 ಮತ್ತು 5
B
1, 2 ಮತ್ತು 4
C
1, 4 ಮತ್ತು 5
D
3, 4 ಮತ್ತು 5
Question 5 Explanation: 
1, 4 ಮತ್ತು 5: (ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳಾಗಿ ಇಂಗ್ಲೀಷ್, ಫ್ರೆಂಚ್, ಚೀನಿ, ರಷ್ಯನ್, ಅರೇಬಿಕ್ ಮತ್ತು ಸ್ಪ್ಯಾನಿಷ್ ಭಾಷೆಗಳನ್ನು ಅಂಗೀಕರಿಸಲಾಗಿದೆ)
Question 6

6. ಭಾರತದ ಆರ್ಥಿಕ ಸಮೀಕ್ಷೆಯನ್ನು ಪ್ರತಿವರ್ಷವು ಅಧಿಕೃತವಾಗಿ ಪ್ರಕಟಿಸುವ ಸಂಸ್ಥೆ ಯಾವುದು?

A
ಭಾರತ ಸರ್ಕಾರದ ಹಣಕಾಸು ಮಂತ್ರಾಲಯ
B
ಭಾರತೀಯ ರಿಸರ್ವ್ ಬ್ಯಾಂಕ್
C
ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ
D
ಭಾರತದ ಯೋಜನಾ ಆಯೋಗ
Question 6 Explanation: 
ಭಾರತ ಸರ್ಕಾರದ ಹಣಕಾಸು ಮಂತ್ರಾಲಯ
Question 7

7. ಸಾಮಾನ್ಯವಾಗಿ ಅಂತರಿಕ್ಷದಲ್ಲಿನ ಆಕಾಶಕಾಯಗಳ ನಡುವಿನ ದೂರವನ್ನು ಖಗೋಳ ಏಕಮಾನದ ಮೂಲಕ ಅಳೆಯುತ್ತೇವೆ. ಒಂದು ಖಗೋಳ ಏಕಮಾನವು (Astronomical Unit) ಇವುಗಳ ನಡುವಣ ಸರಾಸರಿ ದೂರವಾಗಿರುತ್ತದೆ

A
ಭೂಮಿ ಮತ್ತು ಚಂದ್ರ
B
ಸೂರ್ಯ ಮತ್ತು ಚಂದ್ರ
C
ಭೂಮಿ ಮತ್ತು ಆಕಾಶ
D
ಭೂಮಿ ಮತ್ತು ಸೂರ್ಯ
Question 7 Explanation: 
ಭೂಮಿ ಮತ್ತು ಸೂರ್ಯ
Question 8

8. ಇತ್ತೀಚಿನ ದಿನಗಳಲ್ಲಿ ಭಾರತದ ರೂಪಾಯಿ ಮೌಲ್ಯ ಅಮೆರಿಕಾದ ಡಾಲರ್ ಎದುರು ಅಪಮೌಲ್ಯಗೊಳ್ಳುತ್ತಿದೆ, ಇದಕ್ಕೆ ಸಂಬಂಧಿಸಿದಂತೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹಣದ ಮೌಲ್ಯವನ್ನು (ಬೆಲೆಯನ್ನು) ಯಾರು ನಿರ್ಧರಿಸುತ್ತಾರೆ.

1. ವಿಶ್ವ ಬ್ಯಾಂಕ್

2. ಸರಕು/ಸೇವೆಗಳ ಬೇಡಿಕೆಯನ್ನು ಒದಗಿಸುವ ಸಂಬಂಧಿತ ದೇಶ

3. ಅಮೆರಿಕಾದ ಫೆಡರಲ್ ಬ್ಯಾಂಕ್ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್

4. ಸಂಬಂಧಿತ ದೇಶದ ಸರ್ಕಾರದ ಸ್ಥಿರತೆ

ಈ ಹೇಳಿಕೆಗಳಲ್ಲಿ ಯಾವುದು ಸರಿ

A
1 ಮತ್ತು 3
B
2 ಮತ್ತು 4
C
1 ಮತ್ತು 4
D
ಮೇಲಿನ ಎಲ್ಲವೂ
Question 8 Explanation: 
2 ಮತ್ತು 4
Question 9

9. ವಿದ್ಯುತ್ ಒದಗಿಸುವ ವ್ಯವಸ್ಥೆಯಲ್ಲಿ ಒಂದು ಫ್ಯೂಸ್ ಅನ್ನು ರಕ್ಷಣಾಯುಕ್ತಿಯಾಗಿ ಉಪಯೋಗಿಸುತ್ತಾರೆ. ಫ್ಯೂಸ್ ನ ಬಗ್ಗೆ ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ

A
ಅದಕ್ಕೆ ಅಲ್ಪ ದ್ರವೀಕರಣ ಬಿಂದು ಇರಬೇಕು
B
ಅದನ್ನು ಮುಖ್ಯವಾಗಿ ಬೆಳ್ಳಿಯ ಮಿಶ್ರ ಲೋಹಗಳಿಂದ ಮಾಡಿರುತ್ತಾರೆ
C
ಅದಕ್ಕೆ ಅತೀ ಹೆಚ್ಚಿನ ರೋಧತೆ ಇರಬೇಕು
D
ಅದಕ್ಕೆ ಅತೀ ಹೆಚ್ಚಿನ ವಿದ್ಯುತ್ ಹೀರುವ ಶಕ್ತಿ ಇರಬೇಕು
Question 9 Explanation: 
ಅದಕ್ಕೆ ಅಲ್ಪ ದ್ರವೀಕರಣ ಬಿಂದು ಇರಬೇಕು
Question 10

10. ಒಬ್ಬ ಗಗನಯಾತ್ರಿ ಭೂಮಿಯಿಂದ ಆಕಾಶಕ್ಕೆ ಯಾತ್ರೆ ಕೈಗೊಂಡಾಗ ಈ ಕೆಳಗೆ ಕೊಟ್ಟಿರುವ ಯಾವ ವಾಯುಮಂಡಲದ ಪದರಗಳ ಮೂಲಕ ಅನುಕ್ರಮವಾಗಿ ಸಂಚಾರಿಸುತ್ತಾನೆ

A
ಹವಾಗೋಳ, ಸ್ತರಗೋಳ, ಮಧ್ಯಗೋಳ, ಅಯಾನುಗೋಳ
B
ಹವಾಗೋಳ, ಮಧ್ಯಗೋಳ, ಸ್ತರಗೋಳ, ಅಯಾನುಗೋಳ
C
ಸ್ತರಗೋಳ, ಮಧ್ಯಗೋಳ, ಹವಾಗೋಳ, ಅಯಾನುಗೋಳ
D
ಸ್ತರಗೋಳ, ಹವಾಗೋಳ, ಅಯಾನುಗೋಳ, ಮಧ್ಯಗೋಳ
Question 10 Explanation: 
ಹವಾಗೋಳ, ಸ್ತರಗೋಳ, ಮಧ್ಯಗೋಳ, ಅಯಾನುಗೋಳ
There are 10 questions to complete.

6 Thoughts to “ಸಾಮಾನ್ಯ ಜ್ಞಾನ ಕ್ವೀಜ್ 21”

  1. b s nadaf

    Sir new questions add madi plz

  2. Sanjeevkumar pujari

    Comment

  3. Ravi

    Sir economics mele concentrate Madi pls

Leave a Comment

This site uses Akismet to reduce spam. Learn how your comment data is processed.