ಪಿಡಿಓ ಮತ್ತು ಕಾರ್ಯದರ್ಶಿ ಸೇರಿ ಸುಮಾರು 1400ಕ್ಕೂ ಹೆಚ್ಚು ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವುದೆಂದು ತಿಳಿದು ಬಂದಿದೆ. ಕನ್ನಡದ ಮೊದಲ ಅಂತರ್ಜಾಲ ಆಧಾರಿತ ಸ್ಪರ್ಧಾತ್ಮಕ ಪರೀಕ್ಷ ತಾಣವಾಗಿರುವ ಕರುನಾಡು ಎಗ್ಸಾಂ ತಂಡ ಪಿಡಿಓ ಆಕಾಂಕ್ಷಿಗಳಿಗೆ ಅತ್ಯುತ್ತಮ ಗುಣಮಟ್ಟದ ಹಾಗೂ ಪರೀಕ್ಷೆಯಲ್ಲಿ ನಿರೀಕ್ಷಿಸಬಹುದಾದ ಪ್ರಶ್ನೋತ್ತರಗಳನ್ನು ಇಂದಿನಿಂದ ವೆಬ್ ಸೈಟ್ ನಲ್ಲಿ ಪ್ರಕಟಗೊಳ್ಳುಸುತ್ತಿದೆ.
ಗ್ರಾ ಪಂ ಅ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಕ್ವಿಜ್-11
Question 1 |
1.ಗ್ರಾಮ ಪಂಚಾಯತಿಯ ವಿವಿಧ ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಯು ಯೋಜನೆಯಡಿ ರೂ _____ ಸಾಲವನ್ನು ಡಿ.ಆರ್.ಐ ಬಡ್ಡಿದರದಲ್ಲಿ ಸ್ಥಳೀಯ ಬ್ಯಾಂಕುಗಳಲ್ಲಿ ಸಾಲದ ರೂಪದಲ್ಲಿ ಪಡೆಯಬಹುದು?
ರೂ 10,000 | |
ರೂ 20,000 | |
ರೂ 25,000 | |
ರೂ 30,000 |
ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಯು ಯೋಜನೆಯಡಿ ರೂ 20,000 ಸಾಲವನ್ನು ಡಿ.ಆರ್.ಐ ಬಡ್ಡಿದರದಲ್ಲಿ ಸ್ಥಳೀಯ ಬ್ಯಾಂಕುಗಳಲ್ಲಿ ಸಾಲದ ರೂಪದಲ್ಲಿ ಪಡೆಯಬಹುದಾಗಿದೆ.
Question 2 |
2. ಈ ಕೆಳಗಿನ ಯಾರ ಅಧ್ಯಕ್ಷತೆಯಲ್ಲಿ “ಕರ್ನಾಟಕ ಪಂಚಾಯತ್ ರಾಜ್ ಕಾಯಿದೆ ತಿದ್ದುಪಡಿ” ಸಮಿತಿಯನ್ನು ರಚಿಸಲಾಗಿತ್ತು?
ನಂಜಯ್ಯನ ಮಠ | |
ಕೆ. ಆರ್.ರಮೇಶ್ ಕುಮಾರ್ | |
ಹೆಚ್.ಕೆ.ಪಾಟೀಲ್ | |
ವಿಜಯ ಭಾಸ್ಕರ್ |
ಅಂದಿನ ವಿಧಾನಸಭಾ ಸದಸ್ಯರಾದ ಹಾಗೂ ಪ್ರಸ್ತುತ ರಾಜ್ಯ ಆರೋಗ್ಯ ಸಚಿವರಾಗಿರುವ ಶ್ರೀ ಕೆ. ಆರ್.ರಮೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ಕರ್ನಾಟಕ ಪಂಚಾಯತ್ ರಾಜ್ ಕಾಯಿದೆ ತಿದ್ದುಪಡಿ” ಸಮಿತಿಯನ್ನು ರಚಿಸಿಲಾಗಿತ್ತು. ಈ ಸಮಿತಿ ನೀಡಿದ ಬಹುತೇಕ ಶಿಫಾರಸ್ಸುಗಳನ್ನು ಪರಿಗಣಿಸಿ ಕರ್ನಾಟಕ ಸರ್ಕಾರ “ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯಿದೆ” 1993 ಎಂದು ತಿದ್ದುಪಡಿ ತಂದಿದೆ.
Question 3 |
3. ಈ ಕೆಳಗಿನ ಯಾವ ರಾಜ್ಯಗಳಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಅಸ್ಥಿತ್ವದಲ್ಲಿ ಇಲ್ಲ?
ನಾಗಲ್ಯಾಂಡ್, ಅಸ್ಸಾಂ, ಮಿಜೋರಾಂ | |
ಅರುಣಾಚಲ ಪ್ರದೇಶ, ತ್ರಿಪುರ, ಅಸ್ಸಾಂ | |
ನಾಗಲ್ಯಾಂಡ್, ಮೇಘಾಲಯ, ಮಿಜೋರಾಂ | |
ಸಿಕ್ಕಿಂ, ಮಣಿಪುರ, ಮೇಘಾಲಯ |
ನಾಗಲ್ಯಾಂಡ್, ಮೇಘಾಲಯ, ಮಿಜೋರಾಂ ಈ ಮೂರು ರಾಜ್ಯಗಳಲ್ಲಿ ಪಂಚಾಯತ್ ರಾಜ್ ವ್ಯವಸ್ಥೆ ಅಳವಡಿಸಿಕೊಂಡಿಲ್ಲ. ಕೇಂದ್ರಾಡಳಿತ ಪ್ರದೇಶಗಳ ಪೈಕಿ ದೆಹಲಿಯನ್ನು ಹೊರತುಪಡಿಸಿ ಬೇರೆಲ್ಲ ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಯಲ್ಲಿದೆ.
Question 4 |
4. ಬಸವ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ವೆಚ್ಚವನ್ನು ಗರಿಷ್ಠ ರೂ______ ಲಕ್ಷಗಳವರೆಗೆ ಮಾತ್ರ ಅವಕಾಶ ನೀಡಲಾಗಿದೆ?
ರೂ 2,00,000 ಲಕ್ಷ | |
ರೂ 3,00,000 ಲಕ್ಷ | |
ರೂ 4,00,000 ಲಕ್ಷ | |
ರೂ 5,00,000 ಲಕ್ಷ |
ಬಸವ ವಸತಿ ಯೋಜನೆಯಡಿ ಮನೆಯನ್ನು ಗರಿಷ್ಠ ರೂ 5 ಲಕ್ಷಗಳವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಇಂದಿರಾ ಆವಾಸ್ ಯೋಜನೆಯಡಿ ಮನೆಯನ್ನು ಗರಿಷ್ಠ ರೂ 4.8 ಲಕ್ಷಗಳವರೆಗೆ ಮಾತ್ರ ಅವಕಾಶ ನೀಡಲಾಗಿದೆ. [ಗಮನಿಸಿ: ಮನೆಯನ್ನು ಕನಿಷ್ಠ 250 ಚದರಡಿ ಗರಿಷ್ಠ 700 ಚದರಡಿಯೊಳಗೆ ನಿರ್ಮಿಸಬೇಕು].
Question 5 |
5. ಕರ್ನಾಟಕದಲ್ಲಿ ಗ್ರಾಮ ಪಂಚಾಯತಿವಾರು ಮಾನವ ಅಭಿವೃದ್ದಿ ಸೂಚ್ಯಂಕ ವರದಿಯನ್ನು ಹೊರ ತಂದ ಸಂಸ್ಥೆ ______?
ಗ್ರಾಮೀಣಾಭಿವೃದ್ದಿ ಮಂತ್ರಾಲಯ | |
ಎಸ್ಐಆರ್ ಡಿ | |
ಅಂಕಿ-ಅಂಶ ಇಲಾಖೆ | |
ಕೇಂದ್ರ ಗೃಹ ಸಚಿವಾಲಯ |
ಮೈಸೂರಿನಲ್ಲಿರುವ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಂಸ್ಥೆ (ಎಸ್ಐಆರ್ ಡಿ) ಹೊರತಂದಿದೆ. ಈ ವರದಿಯನ್ನು ಆಧರಿಸಿ ಗ್ರಾಮ ಪಂಚಾಯತಿ ಮಟ್ಟದಲ್ಲಿ ಅಭಿವೃದ್ದಿ ಕಾರ್ಯಕ್ರಮಗಳನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಳ್ಳಲು ಸಾಧ್ಯವಾಗಲಿದೆ.
Question 6 |
6. ಅಂದಿನ ಮೈಸೂರು ಸರ್ಕಾರ ಜಾರಿಗೆ ತಂದ “ದಿ ಮೈಸೂರು ಲೋಕಲ್ ಬೋರ್ಡ್ ರೆಗ್ಯುಲೇಷನ್” ಕಾಯಿದೆಯಡಿ ಎಷ್ಟು ಹಂತದ ಸ್ಥಳೀಯಾಡಳಿತ ವ್ಯವಸ್ಥೆ ಜಾರಿಗೆ ಬಂದಿತು?
ಒಂದು ಹಂತ | |
ಎರಡು ಹಂತ | |
ಮೂರು ಹಂತ | |
ಐದು ಹಂತ |
ಅಂದಿನ ಮೈಸೂರು ಸರ್ಕಾರ ಜಾರಿಗೆ ತಂದ “ದಿ ಮೈಸೂರು ಲೋಕಲ್ ಬೋರ್ಡ್ ರೆಗ್ಯುಲೇಷನ್” ಕಾಯಿದೆಯಡಿ ಎಷ್ಟು ಹಂತದ ಸ್ಥಳೀಯಾಡಳಿತ ವ್ಯವಸ್ಥೆ ಜಾರಿಗೆ ತರಲಾಗಿತ್ತು. ಅವುಗಳೆಂದರೆ ಜಿಲ್ಲಾ ಮಂಡಳಿ, ತಾಲ್ಲೂಕ್ ಬೋರ್ಡ್ ಮತ್ತು ಪಂಚಾಯತಿ ಸಂಘಟನೆ.
Question 7 |
7. ಮೈಸೂರು ರಾಜ್ಯದಲ್ಲಿ ಸ್ಥಳೀಯಾಡಳಿತ ವ್ಯವಸ್ಥೆಯ ಕೊರತೆಯ ಅಧ್ಯಯನ ನಡೆಸಲು “ವೆಂಕಟಪ್ಪ ಸಮಿತಿ”ಯನ್ನ ಯಾವ ವರ್ಷದಲ್ಲಿ ನಡೆಸಲಾಯಿತು?
1948 | |
1949 | |
1953 | |
1962 |
ಸ್ವಾಂತಂತ್ರ್ಯ ಭಾರತದಲ್ಲಿ ಮೈಸೂರು ರಾಜ್ಯದಲ್ಲಿ ಸ್ಥಳೀಯಾಡಳಿತ ವ್ಯವಸ್ಥೆಯ ಕೊರತೆಯ ಅಧ್ಯಯನ ನಡೆಸಲು “ವೆಂಕಟಪ್ಪ ಸಮಿತಿ”ಯನ್ನ 1949ರ ಸೆಪ್ಟೆಂಬರ್ ತಿಂಗಳಲ್ಲಿ ರಚಿಸಲಾಯಿತು. ಈ ಸಮಿತಿಯು 1950ರ ಜೂನ್ ತಿಂಗಳಲ್ಲಿ ತನ್ನ ವರದಿಯನ್ನು ಸಲ್ಲಿಸಿತು. ಗ್ರಾಮ ಮಟ್ಟದಲ್ಲಿ ಗ್ರೂಪ್ ಪಂಚಾಯತಿ, ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಮಂಡಳಿ ಇರುವ ಎರಡು ಹಂತದ ಸ್ಥಳೀಯಾಡಳಿತ ವ್ಯವಸ್ಥೆ ಜೊತೆಗೆ ತಾಲ್ಲೂಕು ಮಟ್ಟದ ಎಲ್ಲಾ ಗ್ರೂಪ್ ಪಂಚಾಯತಿ ಅಧ್ಯಕ್ಷರನ್ನು ಒಳಗೊಂಡ ಸಮನ್ವಯ ಸಮಿತಿ ರಚನೆಗೆ ವೆಂಕಟಪ್ಪ ಸಮಿತಿ ಶಿಫಾರಸ್ಸು ಮಾಡಿತ್ತು.
Question 8 |
8. ಅಶೋಕ್ ಮೆಹ್ತಾ ಸಮಿತಿಯನ್ನು ರಚಿಸಿದ ವೇಳೆ ಭಾರತದ ಪ್ರಧಾನಿಯಾಗಿದ್ದವರು ಯಾರು?
ಇಂದಿರಾ ಗಾಂಧಿ | |
ರಾಜೀವ್ ಗಾಂಧಿ | |
ಮೊರಾರ್ಜಿ ದೇಸಾಯಿ | |
ಪಿ ವಿ ನರಸಿಂಹರಾವ್ |
1977 ರಲ್ಲಿ ಅಶೋಕ್ ಮೆಹ್ತಾ ಸಮಿತಿಯನ್ನು ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿ ನೇತೃತ್ವ ಜನತಾ ಸರ್ಕಾರ ನೇಮಕ ಮಾಡಿತು. ಅದು ಪಂಚಾಯತ್ ರಾಜ್ಯ ಸಂಸ್ಥೆಗಳು ಅಸಮರ್ಪಕ ನಿರ್ವಹಣೆಗೆ ಕಾರಣಗಳನ್ನು ಹುಡುಕುವ ಕೆಲಸವನ್ನು ವಹಿಸಲಾಗಿತ್ತು. ಪಂಚಾಯತಿ ರಾಜ್ ಸಂಸ್ಥೆಗಳನ್ನು ಬಲಪಡಿಸಲು ಅವರು ಸಲಹೆಗಳನ್ನು ಪ್ರಸ್ತುತಪಡಿಸಲು ಕೇಳಲಾಯಿತು. ಬಲವಂತರಾವ್’ ಮೆಹ್ತಾ ಸಮಿತಿಯ ಮೂರು ಶ್ರೇಣಿ ವ್ಯವಸ್ಥೆಯ ಸಲಹೆ ವಿರುದ್ಧ ಈ ಸಮಿತಿಯು ಪಂಚಾಯತಿ ರಾಜ್‍ದಲ್ಲಿ ಕೇವಲ ಎರಡು ಸಮಿತಿಯ ವ್ಯವಸ್ಥೆಯನ್ನು ಸೂಚಿಸಿತು. ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯತ್ ಮತ್ತು ಗ್ರಾಮ ಮಟ್ಟದಲ್ಲಿ ಮಂಡಲ್ ಪಂಚಾಯತ್ ಒಳಗೊಂಡಿರವ ವ್ಯವಸ್ಥೆಗೆ ಸಲಹೆ ಮಾಡಿತು. ಸಮಿತಿಯು ಎಲ್ಲಾ ಹಂತಗಳಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಸಾಂವಿಧಾನಿಕ ರಕ್ಷಣೆ ಮತ್ತು ಅಧಿಕಾರದ ಮತ್ತಷ್ಟು ವಿಕೇಂದ್ರೀಕರಣ ಶಿಫಾರಸುಮಾಡಿತು. ಜನತಾ ಸರ್ಕಾರದ ಕುಸಿತದ ಕಾರಣ ಅಶೋಕ್ ಮೆಹ್ತಾ ಸಮಿತಿಯ ಶಿಫಾರಸುಗಳು ಅಳವಡಿಸಿಕೊಳ್ಳಲು ಆಗಲಿಲ್ಲ. ಕರ್ನಾನಾಟಕವೂ ಸೇರಿ ಕೆಲವು ರಾಜ್ಯಗಳಲ್ಲಿ ಈ ಸಮಿತಿಯ ಶಿಫಾರಸುಗಳನ್ನು ರಾಜ್ಯ ಶಾಸನದ ಆಧಾರದ ಮೇಲೆ ರೂಪಿಸಲಾಗಿತ್ತು.
Question 9 |
9. ಈ ಕೆಳಗಿನ ಯಾವ ಸಮಿತಿಯ ಶಿಫಾರಸ್ಸಿನ ಆಧಾರದ ಮೇಲೆ ಸಂವಿಧಾನದ 73ನೇ ತಿದ್ದುಪಡಿಯನ್ನು ಜಾರಿಗೆ ತರಲಾಗಿದೆ?
ಜಿ ವಿ ಕೆ ರಾವ್ ಸಮಿತಿ | |
ಎಲ್ ಎಂ ಸಿಂಘ್ವಿ ಸಮಿತಿ | |
ಬಲವಂತ್ ರಾಯ್ ಸಮಿತಿ | |
ಅಶೋಕ್ ಮೆಹ್ತ ಸಮಿತಿ |
1986 ರಲ್ಲಿ ರಚಿಸಲಾದ ಡಾ ಎಲ್.ಎಂ. ಸಿಂಘ್ವಿ ಸಮಿತಿಯ ಶಿಫಾರಸ್ಸಿನ ಮೇರೆಗೆ ಸಂವಿಧಾನದ 73ನೇ ತಿದ್ದುಪಡಿಯನ್ನು ತರಲಾಗಿದೆ. ಸಿಂಘ್ವಿ ಸಮಿತಿಯು ಪಂಚಾಯತಿ ರಾಜ್'ಗೆ ಸಾಂವಿಧಾನಿಕವಾಗಿ ರಕ್ಷಣೆ ಕೊಡಲು ಶಿಫಾರಸು ಮಾಡಿತು. ಸಂವಿಧಾನದಲ್ಲಿ ಹೊಸ ಅಧ್ಯಾಯವನ್ನು ನಿಯಮವನ್ನು ರೂಪಿಸಲು ತಿದ್ದುಪಡಿ ಮಾಡಬೇಕು. ಅಧಿಕಾರ ಮತ್ತು ಕ್ರಿಯೆಗಳನ್ನು ರೂಪಿಸಬೆಕು. ಚುನಾವಣಾ ಆಯೋಗದ ಮೂಲಕ ಸಮಿತಿ ರಚಿಸಲು ನ್ಯಾಯಯುತ ಚುನಾವಣೆ ನಡೆಸಬೇಕು ಎಂಬ ಪ್ರಮುಖ ಶಿಫಾರಸ್ಸುಗಳನ್ನು ಸಮಿತಿ ನೀಡಿದೆ.
Question 10 |
10. ಗ್ರಾಮ ಸಭೆಯ ಉಪಸಮಿತಿಗಳಲ್ಲಿ ಕನಿಷ್ಠ ಎಷ್ಟು ಜನ ಸದಸ್ಯರಿರಬೇಕು?
ಐದು | |
ಏಳು | |
ಹತ್ತು | |
ಹದಿನೈದು |
ನಿರ್ದಿಷ್ಟ ಉದ್ದೇಶಗಳಿಗಾಗಿ ಗ್ರಾಮ ಸಭೆಯು ಉಪಸಮಿತಿಗಳನ್ನು ರಚಿಸಬಹುದು. ಹೀಗೆ ರಚಿಸಲಾದ ಉಪಸಮಿತಿಗಳಲ್ಲಿ ಕನಿಷ್ಠ 10 ಸದಸ್ಯರಿರಬೇಕು. ಅವರಲ್ಲಿ ಕನಿಷ್ಠ ಅರ್ಧದಷ್ಟು ಮಹಿಳೆಯರು ಇರಬೇಕು. ಗ್ರಾಮ ಸಭೆಯಲ್ಲಿ ಕೈಗೊಂಡ ತೀರ್ಮಾನಗಳ ಅನುಷ್ಟಾನ ಮತ್ತು ಮೇಲ್ವಿಚಾರಣೆ ಮಾಡುವಲ್ಲಿ ಈ ಸಮಿತಿಗಳು ಗ್ರಾಮ ಪಂಚಾಯತಿಗೆ ಪೂರಕವಾಗಿ ಕೆಲಸ ನಿರ್ವಹಿಸಬೇಕು.
[button link=”http://www.karunaduexams.com/wp-content/uploads/2016/09/ಗ್ರಾ-ಪಂ-ಅ-ಅಧಿಕಾರಿ-ಮತ್ತು-ಕಾರ್ಯದರ್ಶಿ-ಗ್ರೇಡ್-1-ಕ್ವಿಜ್-11.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Nice questions sir 90% bandidke Kusi aithu sir
Super ..
Good questions sir thank you