ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು.

ಕ್ವಿಜ್-24

Question 1

1.ಈ ಕೆಳಗಿನ ಯಾರು ರಾಷ್ಟಪತಿಗಳ ಚುನಾವಣೆಯಲ್ಲಿ ಮಾತ್ರ ಭಾಗವಹಿಸುತ್ತಾರೆ, ಆದರೆ ರಾಷ್ಟ್ರಪತಿಗಳ ಮಹಾಭಿಯೋಗ (Impeachment) ದಲ್ಲಿ ಭಾಗವಹಿಸುವ ಅಧಿಕಾರ ಹೊಂದಿರುವುದಿಲ್ಲ

A
ರಾಜ್ಯ ವಿಧಾನ ಪರಿಷತ್ತುಗಳು
B
ರಾಜ್ಯ ವಿಧಾನ ಸಭೆಗಳು
C
ಲೋಕ ಸಭೆ
D
ರಾಜ್ಯ ಸಭೆ
Question 1 Explanation: 
ರಾಜ್ಯ ವಿಧಾನ ಸಭೆಗಳು
Question 2

2.ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ, ಸರಿಯಾದ ಉತ್ತರವನ್ನು ಆಯ್ಕೆ ಮಾಡಿ

ಹೇಳಿಕೆ:-

A. ರಾಜ್ಯ ಲೋಕ ಸೇವಾ ಆಯೋಗದ ಸದಸ್ಯರನ್ನು ರಾಜ್ಯಪಾಲರು ನೇಮಕ ಮಾಡುತ್ತಾರೆ

B. ರಾಜ್ಯ ಲೋಕ ಸೇವಾ ಆಯೋಗದ ಸದಸ್ಯರನ್ನು ರಾಜ್ಯಪಾಲರು ಸೇವೆಯಿಂದ ವಜಾಗೊಳಿಸಬಹುದು

C. ರಾಜ್ಯ ಲೋಕ ಸೇವಾ ಆಯೋಗದ ಸದಸ್ಯರ ಅವಧಿ 6 ವರ್ಷಗಳು

D. ರಾಜ್ಯ ಲೋಕ ಸೇವಾ ಆಯೋಗದ ಸದಸ್ಯರನ್ನು ರಾಷ್ಟ್ರಪತಿಗಳು ಸೇವೆಯಿಂದ ವಜಾಗೊಳಿಸಬಹುದು

A
A, C ಮತ್ತು D ಸರಿಯಾಗಿವೆ
B
A, B ಮತ್ತು D ಸರಿಯಾಗಿವೆ
C
A, B ಮತ್ತು C ಸರಿಯಾಗಿವೆ
D
A ಮತ್ತು D ಸರಿಯಾಗಿವೆ
Question 2 Explanation: 

(ರಾಜ್ಯ ಲೋಕ ಸೇವಾ ಆಯೋಗದ ಸದಸ್ಯರನ್ನು ರಾಜ್ಯಪಾಲರನ್ನು ನೇಮಕ ಮಾಡುತ್ತಾರೆ ಮತ್ತು ರಾಷ್ಟ್ರಪತಿಗಳು ಸರ್ವೋಚ್ಛ ನ್ಯಾಯಾಲಯದ ವರದಿಯ ಮೇರೆಗೆ ವಜಾಗೊಳಿಸಬಹುದು)

Question 3

3. ಈ ಹೇಳಿಕೆಗಳಲ್ಲಿ ತಪ್ಪಾದ ಹೇಳಿಕೆಯನ್ನು ಗುರುತಿಸಿ

A

ವಿಧಾನ ಪರಿಷತ್ತು ಶಾಶ್ವತ ಸಭೆಯಾಗಿದ್ದು, ಪ್ರತಿ 2 ವರ್ಷಗಳಿಗೊಮ್ಮೆ ಪರಿಷತ್ತಿನ 1/3 ರಷ್ಟು ಸದಸ್ಯರು ನಿವೃತ್ತಿ ಹೊಂದುತ್ತಾರೆ

B

ವಿಧಾನ ಪರಿಷತ್ತನ್ನು ವಿಸರ್ಜಿಸಲು ಸಂವಿಧಾನದಲ್ಲಿ ಅವಕಾಶವಿಲ್ಲ

C

ಭಾರತದ 6 ರಾಜ್ಯಗಳಲ್ಲಿ ದ್ವಿಸದನವನ್ನು ಹೊಂದಿದೆ

D

ವಿಧಾನ ಪರಿಷತ್ತನ್ನು ಮೇಲ್ಮನೆ ಎಂದು ಕರೆಯುತ್ತಾರೆ

Question 3 Explanation: 

ವಿಧಾನ ಪರಿಷತ್ತನ್ನು ವಿಸರ್ಜಿಸಲು ಸಂವಿಧಾನದಲ್ಲಿ ಅವಕಾಶವಿಲ್ಲ

Question 4

4.ದೆಹಲಿಯನ್ನು ಭಾರತದ ರಾಜಧಾನಿ ಎಂದು ಸಂವಿಧಾನದ ತಿದ್ದುಪಡಿ ಮೂಲಕ ಘೋಷಿಸಲಾಯಿತು, ಸಂವಿಧಾನದ ಎಷ್ಟನೇ ತಿದ್ದುಪಡಿ ಇದಕ್ಕೆ ಅವಕಾಶ ಮಾಡಿಕೊಟ್ಟಿದೆ

A
70 ನೇ ತಿದ್ದುಪಡಿ
B
68 ನೇ ತಿದ್ದುಪಡಿ
C
69 ನೇ ತಿದ್ದುಪಡಿ
D
71 ನೇ ತಿದ್ದುಪಡಿ
Question 4 Explanation: 
69 ನೇ ತಿದ್ದುಪಡಿ
Question 5

5.ಸರ್ವೋಚ್ಛ ನ್ಯಾಯಾಲಯದ ನ್ಯಾಯಧೀಶರ ಸಂಖ್ಯೆಯನ್ನು ಕಡಿತಗೊಳಿಸುವ ಅಥವಾ ಹೆಚ್ಚಿಸುವ ಅಧಿಕಾರಿ ಯಾರಿಗಿದೆ?

A
ರಾಷ್ಟ್ರಪತಿ
B
ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು
C
ಸಂಸತ್ತು
D
ಕೇಂದ್ರ ಸಚಿವ ಸಂಪುಟ
Question 5 Explanation: 

(ಸಂಸತ್ತಿನ ಎರಡೂ ಸದನಗಳಲ್ಲಿ ಒಪ್ಪಿಗೆ ಪಡೆದು ಕಾಯ್ದೆಯ ಮೂಲಕ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರ ಸಂಖ್ಯೆಯನ್ನು ಬದಲಿಸಬಹುದಾಗಿದೆ. ಮೂಲ ಸಂವಿಧಾನದಲ್ಲಿ ಮುಖ್ಯ ನ್ಯಾಯಾಧೀಶರು ಒಳಗೊಂಡಂತೆ ಒಟ್ಟು 7 ನ್ಯಾಯಾಧೀಶರಿಗೆ ಅವಕಾಶ ಮಾಡಿಕೊಡಲಾಗಿತ್ತು, ತದನಂತರ 1956 ರಲ್ಲಿ ಈ ಸಂಖ್ಯೆಯನ್ನು 10ಕ್ಕೂ, 1960 ರಲ್ಲಿ 13 ಕ್ಕೂ, 1977 ರಲ್ಲಿ 17 ಕ್ಕೂ, 1985 ರಲ್ಲಿ 25 ಕ್ಕೂ ಹೆಚ್ಚಿಸಲಾಯಿತು. ಸದ್ಯ ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರ ಗರಿಷ್ಟ ಮಿತಿ 31 ಆಗಿದೆ.)

Question 6

6. ಭಾರತದಲ್ಲಿ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳನ್ನು ರೂಪಿಸುವ ಜವಾಬ್ದಾರಿ/ಅಧಿಕಾರ ಸಂಸತ್ತಿಗಿದೆ. ಇದನ್ನು ಹೊರತುಪಡಿಸಿ ಈ ಕಾರ್ಯವನ್ನು ನಿರ್ವಹಿಸುವ ಮತ್ತೊಂದು ಸಂಸ್ಥೆ ಯಾವುದು.

A
ಹಣಕಾಸು ಇಲಾಖೆ
B
ರಾಷ್ಟ್ರೀಯ ಅಭಿವೃದ್ಧಿ ಮಂಡಲಿ
C
ಯೋಜನಾ ಇಲಾಖೆ
D
ರಾಷ್ಟ್ರೀಯ ಸಲಹಾ ಸಮಿತಿ
Question 6 Explanation: 
ರಾಷ್ಟ್ರೀಯ ಅಭಿವೃದ್ಧಿ ಮಂಡಲಿ
Question 7

7. ಈ ಕೆಳಗೆ ಕೊಟ್ಟಿರುವ ಧರ್ಮಗಳನ್ನು ಗಮನಿಸಿ, ಮತ್ತು ಭಾರತ ಸಂವಿಧಾನದಲ್ಲಿ ಈ ಕೆಳಗಿನವುಗಳಲ್ಲಿ ಯಾರಿಗೆ “ಅಲ್ಪಸಂಖ್ಯಾತರು” ಎಂಬ ವ್ಯಾಖ್ಯಾನ ನೀಡಲಾಗಿದೆ.

ಅ. ಮುಸ್ಲಿಮರು

ಬ. ಬೌದ್ಧರು

ಕ. ಜೈನರು

ಡ. ಸಿಖ್ಖರು

A
ಅ, ಬ ಮತ್ತು ಕ
B
ಅ, ಕ ಮತ್ತು ಡ
C
ಬ, ಕ ಮತ್ತು ಡ
D
ಅ, ಬ ಮತ್ತು ಡ
Question 7 Explanation: 
ಅ, ಬ ಮತ್ತು ಡ
Question 8

8. ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ

ಅ. ದಿ 38 ಪ್ಯಾರಲಲ್ (The 38th Parallel) ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾವನ್ನು ಬೇರ್ಪಡಿಸುತ್ತದೆ

ಬ. ದಿ ಜೋಹರ್ ಸ್ಟ್ರೈಟ್ (The Johor Strait) ಮಲೇಷಿಯಾ ಮತ್ತು ಸಿಂಗಾಪುರವನ್ನು ಬೇರ್ಪಡಿಸುತ್ತದೆ

ಈ ಮೇಲಿನ ಎರಡು ಹೇಳಿಕೆಗಳಲ್ಲಿ ಸರಿಯಾದುದನ್ನು ಗುರುತಿಸಿ

A
ಅ ಮಾತ್ರ ಸರಿ
B
ಬ ಮಾತ್ರ ಸರಿ
C
ಅ ಮತ್ತು ಬ ಎರಡೂ ಸರಿ
D
ಅ ಮತ್ತು ಬ ಎರಡೂ ತಪ್ಪು
Question 8 Explanation: 
ಅ ಮತ್ತು ಬ ಎರಡೂ ಸರಿ
Question 9

9. ಆಹಾರ ಮತ್ತು ನಾಗರಿಕ ಸರಬರಾಜು ವ್ಯವಸ್ಥೆಯ ಜವಾಬ್ದಾರಿಯನ್ನು ಯಾರು ನಿರ್ವಹಿಸುತ್ತಾರೆ

ಅ. ರಾಜ್ಯ ಸರ್ಕಾರ

ಬ. ಕೇಂದ್ರ ಸರ್ಕಾರ

ಕ. ಭಾರತೀಯ ಆಹಾರ ನಿಗಮ

A
ಅ ಮಾತ್ರ
B
ಬ ಮಾತ್ರ
C
ಕ ಮಾತ್ರ
D
ಅ ಮತ್ತು ಬ
Question 9 Explanation: 

(ಆಹಾರ ಮತ್ತು ನಾಗರಿಕ ಸರಬರಾಜು ವ್ಯವಸ್ಥೆಯ ಜವಾಬ್ದಾರಿಯನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಭಾರತೀಯ ಆಹಾರ ನಿಗಮದ ಮೂಲಕ ನಿರ್ವಹಿಸುತ್ತವೆ. ಕೇಂದ್ರ ಸರ್ಕಾರವು ಆಹಾರ ಸಂಗ್ರಹಣೆ, ಶೇಖರಣೆ ಮತ್ತು ರಾಜ್ಯಗಳಿಗೆ ಬೇಕಾಗುವಷ್ಟು ಸಾಮಗ್ರಿಗಳ ಸಾಗಣಿಕಾ ಜವಾಬ್ದಾರಿಯನ್ನು ಹೊಂದಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಸಮೀಕ್ಷೆ, ಪಡಿತರ ಚೀಟಿ ವಿತರಣೆ ಮತ್ತು ನ್ಯಾಯಬೆಲೆ ಅಂಗಡಿಗಳ ಕಾರ್ಯನಿರ್ವಹಣೆ ಜವಾಬ್ದಾರಿಯನ್ನು ರಾಜ್ಯ ಸರ್ಕಾರ ನೋಡಿಕೊಳ್ಳುತ್ತದೆ.)

Question 10

10. ಭಾರತ ಸಂವಿಧಾನದಲ್ಲಿ ಜಮ್ಮು-ಕಾಶ್ಮೀರ ರಾಜ್ಯಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:

ಅ. ಸಂವಿಧಾನದ 370 ನೇ ವಿಧಿಯು ಜಮ್ಮು-ಕಾಶ್ಮೀರಕ್ಕೆ ವಿಶಿಷ್ಟ ಸ್ಥಾನ ಮಾನ ನೀಡಿದೆ

ಬ. ಜಮ್ಮು-ಕಾಶ್ಮೀರ ರಾಜ್ಯವು ತನ್ನದೇ ಆದ ಪ್ರತ್ಯೇಕ ಸಂವಿಧಾನವನ್ನು ಹೊಂದಿದೆ

ಕ. ಸಂಸತ್ತು ಜಮ್ಮು-ಕಾಶ್ಮೀರ ರಾಜ್ಯದ ಹೆಸರನ್ನಾಗಲಿ ಅಥವಾ ರಾಜ್ಯದ ಗಡಿಯನ್ನಾಗಲಿ ಆ ರಾಜ್ಯದ ಅನುಮತಿ ಇಲ್ಲದೆ ಬದಲಾಯಿಸುವಂತಿಲ್ಲ

ಡ. ರಾಷ್ಟ್ರಪತಿಗಳು ಸಂವಿಧಾನದ 352 ನೇ ವಿಧಿಯನ್ವಯ ‘ಆಂತರಿಕ ಗಲಭೆ’ ಕಾರಣಕ್ಕಾಗಿ ಜಮ್ಮು-ಕಾಶ್ಮೀರದಲ್ಲಿ ತುರ್ತು ಪರಿಸ್ಥಿತಿ ಘೋಷಿಸುವಂತಿಲ್ಲ ಈ ಹೇಳಿಕೆಗಳಲ್ಲಿ ಸರಿಯಾದುದನ್ನು ಗುರುತಿಸಿ.

A
ಅ, ಬ ಮತ್ತು ಡ ಸರಿ
B
ಅ, ಬ ಮತ್ತು ಕ ಸರಿ
C
ಅ, ಕ ಮತ್ತು ಡ ಸರಿ
D
ಮೇಲಿನ ಎಲ್ಲವೂ ಸರಿ
Question 10 Explanation: 
ಮೇಲಿನ ಎಲ್ಲವೂ ಸರಿ
There are 10 questions to complete.

3 Thoughts to “ಸಾಮಾನ್ಯ ಜ್ಞಾನ ಕ್ವೀಜ್ 23”

  1. Praveen

    Question 3 n 7 pls check it sir

    1. Karunaduexams

      Question 7 avellavu minorities.. question 3 answer is correct but now in 7 states adopted vidhana Parishad these are Bihar, Karnataka,ap,up,telangana,bihar, j&k nd Maharashtra

Leave a Comment

This site uses Akismet to reduce spam. Learn how your comment data is processed.