ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು.

ಕ್ವಿಜ್-25

Question 1

1. ಸಂಸತ್ತಿನ ಕೋರಂ (ಸಭೆ ನಡೆಸಲು ಹಾಜರಿರಬೇಕಾದ ಕನಿಷ್ಟ ಸದಸ್ಯರು) ಕುರಿತಾದ ಹೇಳಿಕೆಗಳನ್ನು ಗಮನಿಸಿ:

ಅ. ಕೋರಂ ಎಂದರೆ ಸಂಸತ್ತಿನ ಸಭೆಯ ಒಟ್ಟಾರೆ ಸದಸ್ಯ ಬಲದ 1/10 ರಷ್ಟು ಸದಸ್ಯರು, ಸಭಾಧ್ಯಕ್ಷರನ್ನು ಹೊರತುಪಡಿಸಿ ಹಾಜರಿರಬೇಕು

ಬ. ಕೋರಂ ಇಲ್ಲದೆಯೂ ಮಸೂದೆಗಳನ್ನು ಅನುಮೋದಿಸು ಮತ್ತು ಅಂಗೀಕರಿಸುವ ಅಧಿಕಾರ ಸಭಾಧ್ಯಕ್ಷರಿಗಿದೆ

ಮೇಲಿನ ಹೇಳಿಕೆಗಳಲ್ಲಿ ಸರಿಯಾದುದನ್ನು ಗುರುತಿಸಿ:

A
ಅ ಸರಿಯಾಗಿದೆ
B
ಬ ಸರಿಯಾಗಿದೆ
C
ಎರಡೂ ತಪ್ಪಾಗಿದೆ
D
ಎರಡೂ ಸರಿಯಾಗಿದೆ
Question 1 Explanation: 
ಎರಡೂ ತಪ್ಪಾಗಿದೆ
Question 2

2. ವಿಶ್ವ ಪ್ರಸಿದ್ಧ ಅಂಗಾರ್ ವಾಟ್ (Angkor Vat) ದೇವಾಲಯವು ಯಾವ ದೇಶದಲ್ಲಿದೆ

A
ಮಲೇಷಿಯ
B
ಸಿಂಗಾಪುರ
C
ಕಾಂಬೋಡಿಯ
D
ಕೊಲಂಬಿಯಾ
Question 2 Explanation: 
ಕಾಂಬೋಡಿಯ
Question 3

3. ಕೇಂದ್ರ ಆರ್ಥಿಕ ಸಲಹಾ ಸಮಿತಿ ಕಾರ್ಯಾಲಯದ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ

ಅ. ಕೇಂದ್ರ ಆರ್ಥಿಕ ಸಲಹಾ ಸಮಿತಿಯು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಒಂದು ಭಾಗವಾಗಿದೆ

ಆ. ಈ ಸಮಿತಿಯು ಪ್ರತಿ ವಾರ ಸಗಟು ಮಾರಾಟದ ಬೆಲೆ ಸೂಚಿಯನ್ನು (Wholesale Price Indices) ಸಂಗ್ರಹಿಸುವ ಮತ್ತು ಪ್ರಕಟಿಸುವ ಜವಾಬ್ದಾರಿ ಹೊಂದಿದೆ

ಈ ಹೇಳಿಕೆಗಳಲ್ಲಿ ಸರಿಯಾದುದನ್ನು ಗುರುತಿಸಿ

A
ಹೇಳಿಕೆ ಅ ಸರಿ, ಹೇಳಿಕೆ ಆ ತಪ್ಪಾಗಿದೆ
B
ಹೇಳಿಕೆ ಆ ಸರಿ, ಹೇಳಿಕೆ ಅ ತಪ್ಪಾಗಿದೆ
C
ಹೇಳಿಕೆ ಅ ಮತ್ತು ಆ ಸರಿಯಾಗಿದೆ
D
ಹೇಳಿಕೆ ಅ ಮತ್ತು ಆ ತಪ್ಪಾಗಿದೆ
Question 3 Explanation: 
ಹೇಳಿಕೆ ಅ ಮತ್ತು ಆ ಸರಿಯಾಗಿದೆ
Question 4

4. ಭಾರತದ ಬ್ಯಾಂಕಿಂಗ್ ಉದ್ಯಮಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳಲ್ಲಿ ತಪ್ಪಾದುದನ್ನು ಗುರುತಿಸಿ

A

ನರಸಿಂಹನ್ ಸಮಿತಿ ವರದಿಯು ಬ್ಯಾಂಕಿಂಗ್ ವ್ಯವಸ್ಥೆಯ ಸುಧಾರಣೆಗೆ ಸಂಬಂಧಿಸಿದೆ

B

ಉಳಿತಾಯ ಖಾತೆ ಠೇವಣಿಯ ಬಡ್ಡಿ ದರವನ್ನು ಆಯಾ ಬ್ಯಾಂಕ್ ನಿರ್ಧರಿಸುತ್ತದೆ

C

ವಿದೇಶಿ ಬ್ಯಾಂಕ್ ಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳು ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್ ವ್ಯಾಪ್ತಿಗೆ ಒಳಪಡುವುದಿಲ್ಲ

D

ಪ್ರಸ್ತುತ ಭಾರತದಲ್ಲಿ 26 ರಾಷ್ಟ್ರೀಕೃತ ಬ್ಯಾಂಕ್ ಗಳು ಅಸ್ತಿತ್ವದಲ್ಲಿದೆ

Question 4 Explanation: 

(ವಿದೇಶಿ ಬ್ಯಾಂಕ್ ಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕ್ ಗಳು ಶೆಡ್ಯೂಲ್ಡ್ ಕಮರ್ಷಿಯಲ್ ಬ್ಯಾಂಕ್ ವ್ಯಾಪ್ತಿಗೆ ಒಳಪಡುತ್ತವೆ)

Question 5

5. ಈ ಕೆಳಗಿನ ಯಾವ ಸಂಸ್ಥೆಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಪೂರ್ಣವಾಗಿ/ಭಾಗಶಃ ಸಹಭಾಗಿತ್ವವನ್ನು ಹೊಂದಿದೆ

ಅ. Deposit Insurance and Credit Guarantee Corporation (DICGC)

ಆ. National Housing Bank (NHB)

ಇ. National Bank for Agriculture and Rural Development (NABARD)

ಈ. Bharatiya Reserve Bank Note Mudran Private Limited (BRBNMPL)

A
ಅ, ಆ ಮತ್ತು ಈ
B
ಅ, ಇ ಮತ್ತು ಈ
C
ಇ ಮತ್ತು ಈ
D
ಮೇಲಿನ ಎಲ್ಲವೂ
Question 5 Explanation: 
ಮೇಲಿನ ಎಲ್ಲವೂ
Question 6

6. ಪ್ರತಿಪಾದನೆ: ಉಷ್ಣವಲಯದ ಕಾಡುಗಳಲ್ಲಿ ಮರಮಟ್ಟುಗಳ ಸಂಪನ್ಮೂಲ ಅಗಾಧವಾಗಿದ್ದರೂ ಸಹ ವಾಣಿಜ್ಯ ಉದ್ದೇಶಕ್ಕಾಗಿ ಅವುಗಳ ಬಳಕೆ ತ್ರಾಸದಾಯಕ

ಕಾರಣ: ಉಷ್ಣವಲಯದ ಕಾಡುಗಳಲ್ಲಿ ಸಜಾತಿಯ ಮರಗಳು ಒಂದೇ ವಲಯದಲ್ಲಿ ಕಾಣಸಿಗುವುದಿಲ್ಲ

A
ಪ್ರತಿಪಾದನೆ ಮತ್ತು ಕಾರಣ ಎರಡೂ ಸರಿಯಾಗಿದೆ ಮತ್ತು ಕಾರಣವು ಪ್ರತಿಪಾದನೆಗೆ ಸರಿಯಾದ ವಿವರಣೆಯಾಗಿದೆ
B
ಪ್ರತಿಪಾದನೆ ಮತ್ತು ಕಾರಣ ಎರಡೂ ಸರಿಯಾಗಿದೆ ಮತ್ತು ಕಾರಣವು ಪ್ರತಿಪಾದನೆಗೆ ಸರಿಯಾದ ವಿವರಣೆಯಲ್ಲ
C
ಪ್ರತಿಪಾದನೆ ಸರಿಯಾಗಿದೆ ಮತ್ತು ಕಾರಣವು ತಪ್ಪಾಗಿದೆ
D
ಪ್ರತಿಪಾದನೆ ತಪ್ಪಾಗಿದೆ ಮತ್ತು ಕಾರಣವು ಸರಿಯಾಗಿದೆ
Question 6 Explanation: 

ಪ್ರತಿಪಾದನೆ ಮತ್ತು ಕಾರಣ ಎರಡೂ ಸರಿಯಾಗಿದೆ ಮತ್ತು ಕಾರಣವು ಪ್ರತಿಪಾದನೆಗೆ ಸರಿಯಾದ ವಿವರಣೆಯಾಗಿದೆ

Question 7

7. ಭಾರತದ ಈ ಕೆಳಗಿನ ಯಾವ ರಾಜ್ಯಗಳಲ್ಲಿ ದ್ವಿಸದನವನ್ನು (ವಿಧಾನಸಭೆ ಮತ್ತು ವಿಧಾನ ಪರಿಷತ್ತು) ಹೊಂದಿವೆ

ಅ. ಕರ್ನಾಟಕ

ಆ. ಜಮ್ಮು-ಕಾಶ್ಮೀರ

ಇ. ತಮಿಳುನಾಡು

ಈ. ಉತ್ತರ ಪ್ರದೇಶ

ಉ. ಮಹಾರಾಷ್ಟ್ರ

A
ಅ, ಇ ಮತ್ತು ಉ
B
ಅ, ಇ, ಈ ಮತ್ತು ಉ
C
ಅ, ಆ, ಮತ್ತು ಈ
D
ಅ, ಆ, ಈ ಮತ್ತು ಉ
Question 7 Explanation: 

(ಸದ್ಯ ಭಾರತದ ಆರು ರಾಜ್ಯಗಳಲ್ಲಿ ದ್ವಿಸದನ ವ್ಯವಸ್ಥೆಯನ್ನು ಹೊಂದಿವೆ ಅವುಗಳೆಂದರೆ: ಕರ್ನಾಟಕ, ಮಹಾರಾಷ್ಟ್ರ, ಉತ್ತರಪ್ರದೇಶ, ಜಮ್ಮು-ಕಾಶ್ಮೀರ, ಆಂಧ್ರಪ್ರದೇಶ ಮತ್ತು ಬಿಹಾರ)

Question 8

8. ಭಾರತದ ಈ ಕೆಳಗಿನ ಯಾವ ರಾಜ್ಯದಲ್ಲಿ ಪರಿಶಿಷ್ಟ ಪಂಗಡಕ್ಕೆ ಅತಿ ಹೆಚ್ಚು ಲೋಕಸಭಾ ಸ್ಥಾನಗಳನ್ನು ಮೀಸಲಿರಿಸಿದೆ

A
ತಮಿಳುನಾಡು
B
ಉತ್ತರ ಪ್ರದೇಶ
C
ಮಧ್ಯ ಪ್ರದೇಶ
D
ರಾಜಸ್ಥಾನ
Question 8 Explanation: 
ಮಧ್ಯ ಪ್ರದೇಶ
Question 9

9. ಸ್ವರಣ್ ಸಿಂಗ್ ಸಮಿತಿಯು ಯಾವುದರ ಬಗ್ಗೆ ಶಿಫಾರಸ್ಸು ಮಾಡಿತು

A
ದಖ್ಖನ್ ಮತ್ತು ಹಿಮಾಲಯದ ನದಿಗಳ ಜೋಡಣೆ ಬಗ್ಗೆ
B
ಪಂಚಾಯತ್ ರಾಜ್ ವ್ಯವಸ್ಥೆಯ ಸುಧಾರಣೆ ಬಗ್ಗೆ
C
ಸಂವಿಧಾನದಲ್ಲಿ ಮೂಲಭೂತ ಕರ್ತವ್ಯದ ಸೇರ್ಪಡೆ ಬಗ್ಗೆ
D
ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಂಬಂಧದ ಬಗ್ಗೆ
Question 9 Explanation: 

(1976 ರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರ ಸ್ವರಣ್ ಸಿಂಗ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ, ಮೂಲಭೂತ ಕರ್ತವ್ಯದ ಬಗ್ಗೆ ಶಿಫಾರಸ್ಸು ನೀಡುವಂತೆ ಆದೇಶಿಸಿತು. ಸಮಿತಿಯು ಪ್ರಜೆಗಳಿಗೆ ಮೂಲಭೂತ ಹಕ್ಕುಗಳ ಜೊತೆಯಲ್ಲಿ ಮೂಲಭೂತ ಕರ್ತವ್ಯಗಳ ಹೊಸ ಅಧ್ಯಾಯವನ್ನು ಸೇರ್ಪಡೆಗೊಳಿಸಲು ಶಿಫಾರಸ್ಸು ನೀಡಿತು. 1976 ರಲ್ಲಿ 42 ನೇ ಸಂವಿಧಾನದ ತಿದ್ದುಪಡಿ ಮೂಲಕ ಮೂಲಭೂತ ಕರ್ತವ್ಯವನ್ನು ಸೇರ್ಪಡೆಗೊಳಿಸಿತು.)

Question 10

10. ಸಾರ್ವಜನಿಕ ಹಿತಾಸಕ್ತಿ ಅರ್ಜಿ (Public Interest Litigation) ಬಗ್ಗೆ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ

ಅ. ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲ ಕಲ್ಪನೆ ಅಮೆರಿಕಾದಿಂದ ಪಡೆಯಲಾಗಿದೆ

ಆ. ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಪರಿಕಲ್ಪನೆಯನ್ನು ಪರಿಚಯಿಸಿದಾಗ ಪಿ.ಎನ್.ಭಗವತಿಯವರು ಮುಖ್ಯ ನ್ಯಾಯಮೂರ್ತಿಗಳಾಗಿದ್ದರು

ಮೇಲಿನ ಹೇಳಿಕೆಗಳಲ್ಲಿ ಸರಿಯಾದುದನ್ನು ಗುರುತಿಸಿ

A
ಹೇಳಿಕೆ 1 ಮಾತ್ರ ಸರಿಯಾಗಿದೆ
B
ಹೇಳಿಕೆ 2 ಮಾತ್ರ ಸರಿಯಾಗಿದೆ
C
ಹೇಳಿಕೆ 1 ಮತ್ತು 2 ಸರಿಯಾಗಿದೆ
D
ಹೇಳಿಕೆ 1 ಮತ್ತು 2 ತಪ್ಪಾಗಿದೆ
Question 10 Explanation: 
ಹೇಳಿಕೆ 1 ಮತ್ತು 2 ಸರಿಯಾಗಿದೆ
There are 10 questions to complete.

14 Thoughts to “ಸಾಮಾನ್ಯ ಜ್ಞಾನ ಕ್ವೀಜ್ 24”

  1. interesting questions….. Thank u very much sir

  2. laxmanakabbertsl54@gmail.com

    Namagu e karunadu.com rachaneyindha olle anukoolvagide thumb thumb dhanyavadgalu

  3. laxmanakabbertsl54@gmail.com

    Comment

  4. dhananjauamurthy s s

    Supper sir..

  5. shankar patil

    Test exam very good helpful to exam

  6. shekhar

    Super sir tnks sir

Leave a Comment

This site uses Akismet to reduce spam. Learn how your comment data is processed.