ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 21, 2016

Question 1

1.ನ್ಯಾಯಾಮೂರ್ತಿ ಮೋಹನ್ ಎಂ ಶಾಂತನಗೌಡರ್ ಅವರು ಯಾವ ರಾಜ್ಯ ಮುಖ್ಯನ್ಯಾಯಾಮೂರ್ತಿಯಾಗಿ ನೇಮಕಗೊಂಡರು?

A
ಕೇರಳ
B
ಪಂಜಾಬ್
C
ಗುಜರಾತ್
D
ಮಧ್ಯ ಪ್ರದೇಶ
Question 1 Explanation: 

ನ್ಯಾಯಾಮೂರ್ತಿ ಮೋಹನ್ ಎಂ ಶಾಂತನಗೌಡರ್ ರವರು ಕೇರಳ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಕೇರಳದ ರಾಜ್ಯಪಾಲರಾದ ಪಿ ಸಾಥಸಿವಂ ಅವರು ನೂತನ ನ್ಯಾಯಾಮೂರ್ತಿಗೆ ಪ್ರಮಾಣ ವಚನ ಭೋದಿಸಿದರು.

Question 2

2. ದೇಶದ ಮೊದಲ ಅಂತರ್ ರಾಜ್ಯ ನದಿ ಜೋಡಣೆ ಯೋಜನೆಯಾದ “ಕೆನ್-ಬೇತ್ವಾ”ದಡಿ ಯಾವ ಎರಡು ರಾಜ್ಯಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು?

A
ಮಧ್ಯಪ್ರದೇಶ ಮತ್ತು ಗುಜರಾತ್
B
ಉತ್ತರ ಪ್ರದೇಶ ಮತ್ತು ಉತ್ತರಖಂಡ್
C
ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ
D
ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ
Question 2 Explanation: 
ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶ:

“ಕೆನ್-ಬೇತ್ವಾ (Ken-Betwa)” ನದಿ ಜೋಡಣೆ ದೇಶದ ಮೊದಲ ಅಂತರ್ ರಾಜ್ಯ ನದಿ ಜೋಡಣೆ ಯೋಜನೆಯಾಗಿದೆ. ಇತ್ತೀಚೆಗೆ ರಾಷ್ಟ್ರೀಯ ವನ್ಯಜೀವಿ ಮಂಡಳಿ ಯೋಜನೆಯ ಮೊದಲ ಹಂತದ ಅನುಷ್ಟಾನಕ್ಕೆ ಹಸಿರು ನಿಶಾನೆ ತೋರಿದೆ. ದೇಶದ ಅತ್ಯಂತ ಬರಪೀಡಿತ ಪ್ರದೇಶವೆನಿಸಿರುವ ಬುಂದೇಲಖಂಡ್ ಪ್ರದೇಶಕ್ಕೆ ನೀರಾವರಿ ವ್ಯವಸ್ಥೆ ಕಲ್ಪಿಸುವುದು ಈ ಯೋಜನೆಯ ಪ್ರಮುಖ ಉದ್ದೇಶ. ಈ ಯೋಜನೆಯು ಮಧ್ಯಪ್ರದೇಶದ 3.5 ಲಕ್ಷ ಹೇಕ್ಟೆರ್ ಪ್ರದೇಶ ಹಾಗೂ ಉತ್ತರ ಪ್ರದೇಶದ 14,000 ಹೇಕ್ಟೆರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಲಿದೆ.

Question 3

3. ಈ ಕೆಳಗಿನ ಯಾವ ಚಿತ್ರ “2017 ಆಸ್ಕರ್”ನ ವಿದೇಶಿ ಭಾಷಾ ಚಿತ್ರಗಳ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದೆ?

A
ತಿಥಿ
B
ಉಡ್ತಾ ಪಂಜಾಬ್
C
ವಿಸಾರಣೈ
D
ಸೈರತ್
Question 3 Explanation: 
ವಿಸಾರಣೈ:

ರಾಷ್ಟ್ರಪ್ರಶಸ್ತಿ ಮನ್ನಣೆಗಳಿಸಿರುವ ತಮಿಳಿನ “ವಿಸಾರಣೈ” ಸಿನಿಮಾ 2017 ಆಸ್ಕರ್ ನ ವಿದೇಶಿ ಭಾಷಾ ಚಿತ್ರಗಳ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಲು ಅಧಿಕೃತವಾಗಿ ಆಯ್ಕೆಯಾಗಿದೆ. ವೆಟ್ರಿಮಾರನ್ ಈ ಚಿತ್ರವನ್ನು ನಿರ್ದೇಶಿಸಿದ್ದು, ಈಗಾಗಲೇ ಮೂರು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ವಿಚಾರಣೆ ನೆಪದಲ್ಲಿ ಕೈದಿ ಅನುಭವಿಸುವ ಯಾತನೆ, ಪೊಲೀಸ್ ಇಲಾಖೆಯಲ್ಲಿನ ಲೋಪ, ಭ್ರಷ್ಟಾಚಾರದಂತಹ ವಿಷಯವನ್ನು ಪ್ರತಿಬಿಂಬಿಸುತ್ತದೆ. ಕನ್ನಡದ ‘ತಿಥಿ’ ಸಿನಿಮಾ, ಉಡ್ತಾ ಪಂಜಾಬ್, ನೀರ್ಜಾ, ಸೈರತ್, ಧಾನಕ್ ಸೇರಿದಂತೆ ದೇಶದ 29 ಅತ್ಯುತ್ತಮ ಸಿನಿಮಾಗಳ ಪೈಕಿ ಆಸ್ಕರ್ಗೆ ವಿಸಾರಣೈ ಸಿನಿಮಾ ಅಧಿಕೃತ ಪ್ರವೇಶ ಪಡೆದಿದೆ. ಕೇತನ್ ಮೆಹ್ತಾ ನೇತೃತ್ವದ ಭಾರತೀಯ ಚಲನಚಿತ್ರ ಒಕ್ಕೂಟ(ಎಫ್ಎಫ್ಐ)ದ ಸಮಿತಿಯು ಗುರುವಾರ ಆಯ್ಕೆ ಪ್ರಕಟಿಸಿದೆ. 2017ರ ಫೆಬ್ರವರಿ 27ರಂದು ಲಾಸ್ ಏಂಜಲೀಸ್ನಲ್ಲಿ 89ನೇ ಅಕಾಡೆಮಿ ಅವಾರ್ಡ್ಸ್(ಆಸ್ಕರ್) ಸಮಾರಂಭ ನಡೆಯಲಿದೆ.

Question 4

4. ಯಾವ ರಾಜ್ಯದಲ್ಲಿ ಇತ್ತೀಚೆಗೆ ವಿಶ್ವದ ಅತಿ ದೊಡ್ಡ ಸೌರ ವಿದ್ಯುತ್ ಘಟಕಕ್ಕೆ ಚಾಲನೆ ನೀಡಲಾಯಿತು?

A
ತಮಿಳುನಾಡು
B
ಗುಜರಾತ್
C
ಜಾರ್ಖಂಡ್
D
ಹರಿಯಾಣ
Question 4 Explanation: 
ತಮಿಳುನಾಡು:

ಜಗತ್ತಿನ ದೊಡ್ಡ ಸೌರ ವಿದ್ಯುತ್ ಸ್ಥಾವರ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಕಮುಥಿಯಲ್ಲಿ ಆರಂಭಗೊಂಡಿದೆ. 648 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಘಟಕವನ್ನ ಅದಾನಿ ಗ್ರೂಪ್ ನ ಭಾಗವಾಗಿರುವ ಅದಾನಿ ಗ್ರೀನ್ ಎನರ್ಜಿ(ತಮಿಳುನಾಡು) ಲಿಮಿಟೆಡ್ ರೂ. 4,550 ಕೋಟಿ ವೆಚ್ಚದಲ್ಲಿ ಘಟಕ ಸ್ಥಾಪಿಸಿದೆ. 8 ತಿಂಗಳುಗಳ ದಾಖಲೆಯ ಅವಧಿಯಲ್ಲಿ ಘಟಕ ಸ್ಥಾಪಿಸಲಾಗಿದ್ದು, ಇದಕ್ಕಾಗಿ ಒಟ್ಟು 8500 ಜನರು ಶ್ರಮಿಸಿದ್ದಾರೆ.

Question 5

5. “ಇನ್ಕ್ರೆಡಿಬಲ್ ಇಂಡಿಯಾ ಪ್ರವಾಸೋದ್ಯಮ ಹೂಡಿಕೆದಾರರ ಶೃಂಗಸಭೆ (Incredible India Tourism Investors Summit)” ಯಾವ ನಗರದಲ್ಲಿ ಆರಂಭಗೊಂಡಿತು?

A
ಮುಂಬೈ
B
ಬೆಂಗಳೂರು
C
ನವ ದೆಹಲಿ
D
ಕೊಚ್ಚಿ
Question 5 Explanation: 
ನವ ದೆಹಲಿ:

ಇನ್ಕ್ರೆಡಿಬಲ್ ಇಂಡಿಯಾ ಪ್ರವಾಸೋದ್ಯಮ ಹೂಡಿಕೆದಾರರ ಶೃಂಗಸಭೆ ನವದೆಹಲಿಯಲ್ಲಿ ಆರಂಭಗೊಂಡಿದೆ. ಇದೇ ಮೊದಲ ಬಾರಿಗೆ ಇಂತಹ ಶೃಂಗಸಭೆಯನ್ನು ಭಾರತ ಹಮ್ಮಿಕೊಂಡಿದೆ. ಮೂರು ದಿನದ ಸಮ್ಮೇಳನವನ್ನ ಕೇಂದ್ರ ಪ್ರವಾಸೋದ್ಯಮ ಸಚಿವಾಲಯವೂ ಟೂರಿಸಂ ಕಾರ್ಪೋರೇಷನ್ ಆಫ್ ಇಂಡಿಯಾ ಮತ್ತು ಭಾರತೀಯ ಕೈಗಾರಿಕ ಒಕ್ಕೂಟ (CII) ಸಹಯೋಗದಡಿ ಆರಂಭಿಸಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆ ಮಾಡಿ ದೇಶವನ್ನು ವಿಶ್ವದ ಪ್ರಮುಖ ಪ್ರವಾಸೋದ್ಯಮ ತಾಣವನ್ನಾಗಿ ಮಾಡುವ ಮಹಾದಾಸೆಯೊಂದಿಗೆ ಶೃಂಗಸಭೆಯನ್ನು ಆಯೋಜಿಸಲಾಗಿದೆ.

Question 6

6. ಅಂತಾರಾಷ್ಟ್ರೀಯ ಶಾಂತಿ ದಿನ (International Day of Peace)ವನ್ನು ಯಾವ ದಿನದಂದು ಆಚರಿಸಲಾಗುತ್ತದೆ?

A
ಸೆಪ್ಟೆಂಬರ್ 20
B
ಸೆಪ್ಟೆಂಬರ್ 21
C
ಸೆಪ್ಟೆಂಬರ್ 22
D
ಸೆಪ್ಟೆಂಬರ್ 23
Question 6 Explanation: 
ಸೆಪ್ಟೆಂಬರ್ 21:

ಅಂತಾರಾಷ್ಟ್ರೀಯ ಶಾಂತಿ ದಿನವನ್ನು ಪ್ರತಿ ವರ್ಷ ಸೆಪ್ಟೆಂಬರ್ 21 ರಂದು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಕರೆಯಂತೆ 1981ರಿಂದ ಸೆಪ್ಟಂಬರ್ 21ರಂದು "ಅಂತಾರಾಷ್ಟ್ರೀಯ ಶಾಂತಿ ದಿನ" ಆಚರಿಸಲಾಗುತ್ತಿದೆ. The Sustainable Development Goals: Building Blocks for Peace” ಇದು ಈ ವರ್ಷದ ಶಾಂತಿ ದಿನದ ಧ್ಯೇಯವಾಕ್ಯ. [ನೆನಪಿಡಿ: 2016 ಜಾಗತಿಕ ಶಾಂತಿ ಸೂಚ್ಯಂಕದಲ್ಲಿ ಭಾರತ 163 ದೇಶಗಳ ಪೈಕಿ 141ನೇ ಸ್ಥಾನಗಳಿಸಿದೆ. ಐಸ್ ಲ್ಯಾಂಡ್, ಡೆನ್ಮಾರ್ಕ್, ಮತ್ತು ಆಸ್ಟ್ರೀಯಾ ಮೊದಲ ಮೂರು ಸ್ಥಾನದಲ್ಲಿವೆ.

Question 7

7. ಈ ಕೆಳಗಿನ ಯಾವ ಆನ್ಲೈನ್ ಮಾರುಕಟ್ಟೆ ಸಂಸ್ಥೆ (ಇ-ಕಾಮರ್ಸ್) 10 ಕೋಟಿ ನೊಂದಾಯಿತ ಬಳಕೆದಾರರನ್ನು ತಲುಪಿದ ಮೊದಲ ಭಾರತೀಯ ಸಂಸ್ಥೆಯಾಗಿದೆ?

A
ಸ್ನಾಪ್ ಡೀಲ್
B
ಫ್ಲಿಪ್ಕಾರ್ಟ್
C
ಶಾಪ್ ಕ್ಲೂ
D
ಇ-ಬೇ
Question 7 Explanation: 
ಫ್ಲಿಪ್ಕಾರ್ಟ್:

ಬೆಂಗಳೂರು ಮೂಲದ ಇ–ಕಾಮರ್ಸ್ ಕಂಪೆನಿಯ ಗ್ರಾಹಕರ ಸಂಖ್ಯೆಯು 10 ಕೋಟಿ ಮೀರಿದ್ದು , ಈ ಸಾಧನೆ ಮಾಡಿದ ದೇಶದ ಮೊದಲ ಇ–ಕಾಮರ್ಸ್ ಕಂಪೆನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ ವರ್ಷ ಬಳಕೆದಾರರ ಸಂಖ್ಯೆ ದುಪ್ಪಟ್ಟಾಗಿತ್ತು. ಈ ವರ್ಷದ ಕಳೆದ ಆರು ತಿಂಗಳಿನಲ್ಲಿ 2.5 ಕೋಟಿ ಗ್ರಾಹಕರು ನೋಂದಾಯಿಸಿಕೊಂಡಿದ್ದಾರೆ.‘ ಅಮೆರಿಕಾ ಮತ್ತು ಚೀನಾವನ್ನು ಹೊರತುಪಡಿಸಿದರೆ ಒಂದು ದೇಶದಲ್ಲಿ ಈ ಮೈಲಿಗಲ್ಲನ್ನು ತಲುಪಿದ ಮೊದಲ ಸಂಸ್ಥೆ ಫ್ಲಿಪ್ಕಾರ್ಟ್ ಎಂದು ಕಂಪನಿ ಹೇಳಿದೆ.

Question 8

8. ಪ್ರತಿಷ್ಠಿತ ಕ್ರಿಕೆಟ್ ನಿಯತಕಾಲಿಕೆ “ವಿಸ್ಡನ್ ಸಾರ್ವಕಾಲಿಕ” ಇತ್ತೀಚೆಗೆ ಪ್ರಕಟಿಸಿರುವ ಬಾರತ ಟೆಸ್ಟ್ ಶ್ರೇಷ್ಠ ಇಲೆವೆನ್ ತಂಡದ ನಾಯಕರಾಗಿ ಯಾರು ಆಯ್ಕೆಯಾಗಿದ್ದಾರೆ?

A
ರಾಹುಲ್ ದ್ರಾವಿಡ್
B
ಮಹೇಂದ್ರ ಸಿಂಗ್ ಧೋನಿ
C
ಸಚಿನ್ ತೆಂಡೂಲ್ಕರ್
D
ವಿವಿಎಸ್ ಲಕ್ಷಣ್
Question 8 Explanation: 
ಮಹೇಂದ್ರ ಸಿಂಗ್ ಧೋನಿ:

ಭಾರತ ಕ್ರಿಕೆಟ್ ತಂಡ 500ನೇ ಟೆಸ್ಟ್ ಸಂಭ್ರಮದಲ್ಲಿರುವ ಹಿನ್ನಲೆಯಲ್ಲಿ ಪ್ರತಿಷ್ಠಿತ ಕ್ರಿಕೆಟ್ ನಿಯತಕಾಲಿಕೆ ವಿಸ್ಡನ್ ಸಾರ್ವಕಾಲಿಕ ಬಾರತ ಟೆಸ್ಟ್ ಶ್ರೇಷ್ಠ ಇಲೆವೆನ್ ತಂಡವನ್ನು ಪ್ರಕಟಿಸಿದೆ. ಈ ಶ್ರೇಷ್ಠ ಇಲೆವೆನ್ ತಂಡಕ್ಕೆ ಕೂಲ್ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ನಾಯಕರಾಗಿ ಆಯ್ಕೆಯಾಗಿದ್ದಾರೆ. ತಂಡದಲ್ಲಿ ಟೀಂ ಇಂಡಿಯಾದ ಮಾಜಿ ಟೆಸ್ಟ್ ನಾಯಕ ಸುನಿಲ್ ಗವಾಸ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಜೋಡಿ ಆರಂಭಿಕ ಆಟಗಾರರಾಗಿ ಆಯ್ಕೆಗೊಂಡಿದ್ದಾರೆ. ಭಾರತದ ಕ್ರಿಕೆಟ್ ದಂತಕಥೆಗಳಾದ ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿವಿಎಸ್ ಲಕ್ಷ್ಮಣ್ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮನ್ ಗಳಾಗಿ ಸ್ಥಾನ ಪಡೆದಿದ್ದಾರೆ. ಭಾರತ ಏಕದಿನ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಈ ವಿಶೇಷ ತಂಡದ ವಿಕೆಟ್ ಕೀಪರ್ ಆಗಿದ್ದಾರೆ.

Question 9

9. “ತೆಲುಗು ಗಂಗಾ ಯೋಜನೆ”ಯು ಈ ಕೆಳಗಿನ ಯಾವ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆಯಾಗಿದೆ?

A
ವಿಶಾಖಪಟ್ಟಣ
B
ವಿಜಯವಾಡ
C
ಚೆನ್ನೈ
D
ನಾಸಿಕ್
Question 9 Explanation: 
ಚೆನ್ನೈ:

ತೆಲುಗು ಗಂಗಾ ಯೋಜನೆಯನ್ನು ಆಂಧ್ರಪ್ರದೇಶ ಅನುಷ್ಟಾನಗೊಳಿಸಿದ್ದು, ಇದರ ತಮಿಳುನಾಡಿನ ರಾಜಧಾನಿ ಚೆನ್ನೈಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಯೋಜನೆಯಡಿ ಶ್ರೀಶೈಲಂ ಅಣೆಕಟ್ಟಿನಿಂದ ನೀರನ್ನು ಕೊಳವೆ ಮಾರ್ಗದ ಮೂಲಕ ಸುಮಾರು 406 ಕಿ.ಮೀ ಸಾಗಿಸಿ ಚೆನ್ನೈಗೆ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಕೃಷ್ಣಾ ನದಿ ಹರಿಯುವ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶ, ಕರ್ನಾಟಕ ರಾಜ್ಯಗಳೊಂದಿಗೆ ತಮಿಳುನಾಡು ರಾಜ್ಯ ಒಪ್ಪಂದ ಮಾಡಿಕೊಂಡು ಈ ಯೋಜನೆಯನ್ನು ಜಾರಿಗೆ ತರಲಾಗಿದೆ.

Question 10

10. ನಾಸಾದ “ಕ್ಯಾಸಿನಿ” ನೌಕೆ ಯಾವ ಗ್ರಹದ ಅಧ್ಯಯನಕ್ಕೆ ಸಂಬಂಧಿಸಿದೆ?

A
ಗುರು
B
ಶನಿ
C
ಶುಕ್ರ
D
ನೆಪ್ಚೂನ್
Question 10 Explanation: 
ಶನಿ:

ಕ್ಯಾಸಿನಿ ನೌಕೆಯನ್ನು ನಾಸಾ ಅಕ್ಟೋಬರ್ 15, 1997 ರಂದು ಶನಿ ಗ್ರಹದ ಅಧ್ಯಯನಕ್ಕಾಗಿ ಹಾರಿಬಿಡಲಾಗಿತ್ತು. 1 ಜುಲೈ 2004 ರಲ್ಲಿ ನೌಕೆ ಶನಿಯ ಕಕ್ಷೆಯನ್ನು ಸೇರ್ಪಡೆಗೊಂಡಿತ್ತು. ಸದ್ಯ ಕ್ಯಾಸಿನಿ ನೌಕೆ ತನ್ನ ಅಂತಿಮ ಹಂತಕ್ಕೆ ತಲುಪಿದೆ. 1997 ರಲ್ಲಿ ಹಾರಿಸಿ ಬಿಟ್ಟ ಕ್ಯಾಸಿನಿ ನೌಕೆ ಹನ್ನೆರಡು ವರ್ಷಗಳಿಂದ ಶನಿಗ್ರಹ, ಅದರ ಸುತ್ತಲಿನ ಉಂಗುರಗಳು ಮತ್ತು ಉಪಗ್ರಹಗಳ ಬಗ್ಗೆ ಅಧ್ಯಯನ ನಡೆಸುತ್ತಿದೆ. 2017ರ ಸೆಪ್ಟೆಂಬರ್‌ ತಿಂಗಳಲ್ಲಿ ನೌಕೆಯು ತನ್ನ ಐತಿಹಾಸಿಕ ಯಾತ್ರೆಗೆ ಮಂಗಳಹಾಡುವ ಸಾಧ್ಯತೆ ಇದೆ. ಅದಕ್ಕೂ ಮೊದಲಿನ ಒಂದು ವರ್ಷದ ಅವಧಿಯಲ್ಲಿ ನೌಕೆಯು ಶನಿಗ್ರಹದ ಇನ್ನಷ್ಟು ಸನಿಹಕ್ಕೆ ತೆರಳಿ ಮತ್ತಷ್ಟು ಮಾಹಿತಿಗಳನ್ನು ಕಲೆ ಹಾಕಲಿದೆ.

There are 10 questions to complete.

[button link=”http://www.karunaduexams.com/wp-content/uploads/2016/09/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಸೆಪ್ಟೆಂಬರ್-ಕ್ವಿಜ್-21.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

2 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 21, 2016”

Leave a Comment

This site uses Akismet to reduce spam. Learn how your comment data is processed.