ಮುಂಬೈ: ಜಾಗತಿಕ ಸಿನಿಮಾ ರಂಗದಲ್ಲಿ ಪ್ರತಿಷ್ಠಿತ ವೇದಿಕೆಯಾಗಿರುವ ಆಸ್ಕರ್‌ ಅಂಗಳಕ್ಕೆ ದಕ್ಷಿಣ ಭಾರತದ ‘ವಿಸಾರಣೈ’ ಚಿತ್ರ ಪ್ರವೇಶ ಪಡೆದಿದೆ. ಕನ್ನಡದ ‘ತಿಥಿ’ ಸಿನಿಮಾ ಪೈಪೋಟಿಯಲ್ಲಿತ್ತು.

ವೆಟ್ರಿಮಾರನ್ ನಿರ್ದೇಶನದ ತಮಿಳು ಚಿತ್ರ ‘ವಿಸಾರಣೈ(ವಿಚಾರಣೆ)’ ವಿದೇಶಿ ಭಾಷಾ ಚಿತ್ರಗಳ ವಿಭಾಗದಲ್ಲಿ ಭಾರತೀಯ ಚಿತ್ರರಂಗವನ್ನು ಪ್ರತಿನಿಧಿಸುತ್ತಿದೆ. ಇದು ವೆಟ್ರಿಮಾರನ್ ನಿರ್ದೇಶನದ ಮೂರನೇ ಚಿತ್ರವಾಗಿದ್ದು, ವಿಚಾರಣೆ ನೆಪದಲ್ಲಿ ಕೈದಿ ಅನುಭವಿಸುವ ಯಾತನೆ, ಪೊಲೀಸ್ ಇಲಾಖೆಯಲ್ಲಿನ ಲೋಪ, ಭ್ರಷ್ಟಾಚಾರದಂತಹ ವಿಷಯವನ್ನು ಪ್ರತಿಬಿಂಬಿಸುತ್ತದೆ.

ಕನ್ನಡದ ‘ತಿಥಿ’ ಸಿನಿಮಾ, ಉಡ್ತಾ ಪಂಜಾಬ್, ನೀರ್ಜಾ, ಸೈರತ್‌, ಧಾನಕ್ ಸೇರಿದಂತೆ ದೇಶದ 29 ಅತ್ಯುತ್ತಮ ಸಿನಿಮಾಗಳ ಪೈಕಿ ಆಸ್ಕರ್‌ಗೆ ವಿಸಾರಣೈ ಸಿನಿಮಾ ಅಧಿಕೃತ ಪ್ರವೇಶ ಪಡೆದಿದೆ. ಕೇತನ್ ಮೆಹ್ತಾ ನೇತೃತ್ವದ ಭಾರತೀಯ ಚಲನಚಿತ್ರ ಒಕ್ಕೂಟ(ಎಫ್‌ಎಫ್ಐ)ದ ಸಮಿತಿಯು ಗುರುವಾರ ಆಯ್ಕೆ ಪ್ರಕಟಿಸಿದೆ.

2017ರ ಫೆಬ್ರವರಿ 27ರಂದು ಲಾಸ್ ಏಂಜಲೀಸ್‌ನಲ್ಲಿ 89ನೇ ಅಕಾಡೆಮಿ ಅವಾರ್ಡ್ಸ್‌(ಆಸ್ಕರ್) ಸಮಾರಂಭ ನಡೆಯಲಿದೆ.

ವಿದೇಶಿ ಚಿತ್ರ ವಿಭಾಗದಲ್ಲಿ ಪ್ರತಿ ವರ್ಷ 5 ಸಿನಿಮಾಗಳು ನಾಮನಿರ್ದೇಶನಗೊಳ್ಳುತ್ತವೆ. ಈವರೆಗೆ ಈ ವಿಭಾಗದಲ್ಲಿ ಭಾರತದ ಮೂರು ಸಿನಿಮಾಗಳು ನಾಮನಿರ್ದೇಶನಗೊಂಡಿದ್ದವು.
* ಮದರ್ ಇಂಡಿಯಾ (1957)
*
ಸಲಾಂ ಬಾಂಬೆ (1988)
*
ಲಗಾನ್(2001)

ಚಿತ್ರ: ವಿಸಾರಣೈ
ನಿರ್ದೇಶನ: ವೆಟ್ರಿಮಾರನ್
ನಿರ್ಮಾಣ: ಧನುಷ್
ತಾರಾಗಣ: ದಿನೇಶ್‌, ಆನಂದಿ, ಸಮುತಿರಕಣಿ
ಸಂಗೀತ: ಜಿ.ವಿ.ಪ್ರಕಾಶ್‌ ಕುಮಾರ್
ಛಾಯಾಗ್ರಹಣ: ಎಸ್‌.ರಾಮಲಿಂಗಮ್

2 Thoughts to “ಪ್ರಚಲಿತ ವಿದ್ಯಮಾನಗಳು- ಸೆಪ್ಟೆಂಬರ್ 20, 2016”

  1. Sir January to August current affairs upload madi sir plz

  2. siddu sajjan

    Sir please upload January to July monthly current affairs

Leave a Comment

This site uses Akismet to reduce spam. Learn how your comment data is processed.