ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 26, 2016
Question 1 |
1.ಪ್ರಪ್ರಥಮ “ಫಿಫಾ ವೈವಿದ್ಯತೆ ಪ್ರಶಸ್ತಿ (FIFA Diversity Award)” ಪಡೆದುಕೊಂಡ ಭಾರತದ NGO ಯಾವುದು?
ಎಫ್ಇಎಸ್ | |
ಸ್ಲಂ ಸಾಕರ್ | |
ಪ್ರಥಮ್ | |
ಪ್ಲಾನ್ ಇಂಡಿಯಾ |
ಭಾರತದ ಸ್ಲಂ ಸಾಕರ್ (Slum Soccer) NGO ಚೊಚ್ಚಲ ಫಿಫಾ ವೈವಿದ್ಯತೆ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಯುಕೆ ಯ ಮ್ಯಾಂಚೇಸ್ಟರ್ ನಲ್ಲಿ ನಡೆದ ಸಾಕರೆಕ್ಸ್ ಜಾಗತಿಕ ಸಮ್ಮೇಳನದಲ್ಲಿ ಪ್ರಶಸ್ತಿಯನ್ನು ನೀಡಲಾಗಿದೆ. ಫಿಫಾ ವೈವಿದ್ಯತೆ ಪ್ರಶಸ್ತಿಯನ್ನು ಫಿಫಾ ಸಂಸ್ಥೆ ಸ್ಥಾಪಿಸಿದ್ದು ಜನರಲ್ಲಿ ಏಕತೆ, ಒಗ್ಗಟ್ಟು ಮತ್ತು ಸಮಾನತೆಯನ್ನು ತುಂಬಲು ಶ್ರಮಿಸುವವರಿಗೆ ನೀಡಲಾಗುವುದು. ಸ್ಲಂ ಸಾಕರ್ ಸಂಸ್ಥೆಯು ಭಾರತದಲ್ಲಿ ಪುಟ್ಬಾಲ್ ಕ್ರೀಡೆಯನ್ನು ಬಳಸಿಕೊಂಡು ಜನರ ನಡುವೆ ಸಂಪರ್ಕ ಬೆಸೆಯಲು, ಜೀವನ ಕೌಶಲ್ಯ ಕಲಿಸಲು, ಮಹಿಳೆಯರ ಹಾಗೂ ದುರ್ಬಲ ವರ್ಗದ ಜನರ ಜೀವನ ಮಟ್ಟ ಸುಧಾರಿಸಲು ಶ್ರಮಿಸುತ್ತಿದೆ.
Question 2 |
2.ಗೋಕುಲ ಅಭಿಯಾನದಡಿ ದೇಶದ ಮೊದಲ “ಗೋಕುಲ ಗ್ರಾಮ”ವನ್ನು ಯಾವ ನಗರದಲ್ಲಿ ಸ್ಥಾಪಿಸಲಾಗುತ್ತಿದೆ?
ಮಥುರಾ | |
ವಾರಣಾಸಿ | |
ಲಕ್ನೋ | |
ಕುರುಕ್ಷೇತ್ರ |
ದೇಶದ ಮೊದಲ ಗೋಕುಲ ಗ್ರಾಮ ಸ್ಥಾಪನೆಗೆ ಪಂಡಿತ ದೀನದಯಾಳ ಉಪಾಧ್ಯಾಯರ ಜನ್ಮಸ್ಥಳ ಮಥುರಾದಲ್ಲಿ ಕೇಂದ್ರ ಕೃಷಿ ಸಚಿವ ರಾಧೇಮೋಹನ ಸಿಂಗ್ ಅವರು ಶಿಲಾನ್ಯಾಸ ನೆರವೇರಿಸಿದರು. ದೇಶೀಯ ಜಾನುವಾರು ತಳಿಗಳ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ರಾಷ್ಟ್ರೀಯ ಗೋಕುಲ ಅಭಿಯಾನದಡಿ ದೇಶಾದ್ಯಂತ 14 'ಗೋಕುಲ ಗ್ರಾಮ'ಗಳನ್ನು ಸ್ಥಾಪಿಸಲಾಗುವುದು.
Question 3 |
3.2016 ಟೊರೆ ಪಾನ್ ಫೆಸಿಫಿಕ್ ಓಪನ್ ಟೂರ್ನಿಯ ಮಹಿಳೆಯರ ಡಬ್ಬಲ್ಸ್ ನಲ್ಲಿ ಪ್ರಶಸ್ತಿ ಗೆದ್ದ ಜೋಡಿ ಯಾವುದು?
ಚೆನ್ ಲಿಯಾಂಗ್ ಮತ್ತು ಝಾವೊಕ್ಸುಯಾನ್ ಯಾಂಗ್ರ | |
ಸಾನಿಯಾ ಮಿರ್ಜಾ ಮತ್ತು ಚೆನ್ ಲಿಯಾಂಗ್ | |
ಬಾರ್ಬೊರ ಸ್ಟ್ರಿಕೋವಾ ಮತ್ತು ಝಾವೊಕ್ಸುಯಾನ್ ಯಾಂಗ್ರ | |
ಸಾನಿಯಾ ಮಿರ್ಜಾ ಮತ್ತು ಬಾರ್ಬೊರ ಸ್ಟ್ರಿಕೋವಾ |
2016 ಪಾನ್ ಫೆಸಿಫಿಕ್ ಓಪನ್ ಟೂರ್ನಿಯ ಮಹಿಳೆಯರ ಡಬ್ಬಲ್ಸ್ ನಲ್ಲಿ ಸಾನಿಯಾ ಮಿರ್ಜಾ ಮತ್ತು ಬಾರ್ಬೊರ ಸ್ಟ್ರಿಕೋವಾ ಜೋಡಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಚೀನಾದ ಜೋಡಿ ಚೆನ್ ಲಿಯಾಂಗ್ ಹಾಗೂ ಝಾವೊಕ್ಸುಯಾನ್ ಯಾಂಗ್ರನ್ನು 6-1, 6-1 ನೇರ ಸೆಟ್ಗಳಿಂದ ಮಣಿಸಿ ಭಾರತದ ಸಾನಿಯಾ ಮಿರ್ಝಾ ಹಾಗೂ ಝೆಕ್ ಗಣರಾಜ್ಯದ ಬಾರ್ಬೊರ ಸ್ಟ್ರಿಕೋವಾ ಟೊರೆ ಪಾನ್ ಪೆಸಿಫಿಕ್ ಓಪನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಸಾನಿಯಾ ಹಾಗೂ ಸ್ಟ್ರಿಕೋವಾ ಒಟ್ಟಿಗೆ ಮಹಿಳೆಯರ ಡಬಲ್ಸ್ ಪಂದ್ಯವನ್ನು ಆಡಲು ನಿರ್ಧರಿಸಿದ ಬಳಿಕ ಮೂರು ಟೂರ್ನಮೆಂಟ್ಗಳನ್ನು ಆಡಿದ್ದು, ಎರಡನೆ ಬಾರಿ ಪ್ರಶಸ್ತಿಯನ್ನು ಎತ್ತಿ ಹಿಡಿದಿದ್ದಾರೆ. ಕಳೆದ ತಿಂಗಳು ಸಾನಿಯಾ ಅವರು ಸ್ಟ್ರಿಕೋವಾ ಜೊತೆಗೂಡಿ ತನ್ನ ಹಳೆಯ ಜೊತೆಗಾರ್ತಿ ಸ್ವಿಸ್ನ ಮಾರ್ಟಿನಾ ಹಿಂಗಿಸ್ ಹಾಗೂ ಕೊಕೊ ವ್ಯಾಂಡೆವೆಘ್ರನ್ನು 7-5, 6-4 ಸೆಟ್ಗಳ ಅಂತರದಿಂದ ಮಣಿಸಿ ಸಿನ್ಸಿನಾಟಿ ಓಪನ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರು.
Question 4 |
4. ಇತ್ತೀಚೆಗೆ ನಿಧನರಾದ ಕೆ. ಮಾಧವನ್ ಅವರು ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ?
ಸ್ವಾಂತಂತ್ರ್ಯ ಹೋರಾಟ | |
ಕ್ರೀಡೆ | |
ಮಾನವ ಹಕ್ಕು ಹೋರಾಟ | |
ಪತ್ರಿಕೋದ್ಯಮ |
ಹಿರಿಯ ಸ್ವಾತಂತ್ರ ಹೋರಾಟಗಾರ ಹಾಗೂ ಗಾಂಧಿವಾದಿ ಪಿ.ಕೆ. ಮಾಧವನ್ ನಂಬಿಯಾರ್ (88) ನಿಧನರಾಗಿದ್ದಾರೆ. ಪಯ್ಯನ್ನೂರಿನಲ್ಲಿ ಜನಿಸಿದ್ದ ನಂಬಿಯಾರ್ ಅವರು ಸಹೋದರ ಪಿ.ಕೆ. ಗೋಪಾಲಕೃಷ್ಣನ್‌ರ ಜೊತೆ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡಿದ್ದರು. 1942 ರಲ್ಲಿ ಜೈಲು ವಾಸ ಅನುಭವಿಸಿದ್ದರು. ಸ್ವಾತಂತ್ರ್ಯ ಹೋರಾಟದ ಅಂಗವಾಗಿ ನಡೆಸಲಾದ ಪಯ್ಯನ್ನೂರು ಉಪ್ಪು ಸತ್ಯಾಗ್ರಹ, ಗುರುವಾಯೂರು ದೇವಾಲಯ ಪ್ರವೇಶ ಸತ್ಯಾಗ್ರಹ ಸಹಿತ ಸ್ವಾತಂತ್ರ್ಯ ಹೋರಾಟದ ನಾನಾ ಚಳವಳಿಗಳಲ್ಲಿ ಮಾಧವನ್ ಪಾಲ್ಗೊಂಡಿದ್ದರು.
Question 5 |
5. ಇವರಲ್ಲಿ “ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (CSIR)”ನ ಅಧ್ಯಕ್ಷರು _____?
ರಾಷ್ಟ್ರಪತಿ | |
ಉಪರಾಷ್ಟ್ರಪತಿ | |
ಪ್ರಧಾನ ಮಂತ್ರಿ | |
ವಿಜ್ಞಾನ & ತಂತ್ರಜ್ಞಾನ ಸಚಿವರು |
ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಒಂದು ಸ್ವಾಯುತತೆ ಸಂಸ್ಥೆಯಾಗಿದ್ದು, 1942ರಲ್ಲಿ ಸ್ಥಾಪಿಸಲಾಗಿದೆ. ಸಿಎಸ್ಐಆರ್ ದೇಶದ ಅತಿದೊಡ್ಡ ಸಂಶೋಧನಾ ಮತ್ತು ಅಭಿವೃದ್ದಿ ಸಂಸ್ಥೆಯಾಗಿದೆ. ಭಾರತದ ಪ್ರಧಾನ ಮಂತ್ರಿಗಳು ಇದರ ಅಧ್ಯಕ್ಷರಾಗಿರುತ್ತಾರೆ. ಪ್ರಸ್ತುತ ಡಾ.ಗಿರೀಶ್ ಸಹ್ನಿ ಅವರು ಸಿಎಸ್ಐಆರ್ ನ ಡೈರೆಕ್ಟರ್ ಜನರಲ್ ಆಗಿದ್ದಾರೆ.
Question 6 |
6. ಈ ಕೆಳಗಿನ ಯಾರು ಸರಕು ಮತ್ತು ಸೇವಾ ತೆರಿಗೆ (GST) ಮಂಡಳಿಯ ಹೆಚ್ಚುವರಿ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ?
ಅಜಯ್ ಭೂಷಣ್ ಸಿಂಗ್ | |
ಅರುಣ್ ಗೋಯಲ್ | |
ಪ್ರತಾಪ್ ಚೌಧರಿ | |
ಕಿರಣ್ ಚಂದ್ರ ಶೌರಿ |
ಹಿರಿಯ ಐಎಎಸ್ ಅಧಿಕಾರಿ ಅರುಣ್ ಗೋಯಲ್ ಅವರನ್ನು ಸರಕು ಮತ್ತು ಸೇವಾ ಮಂಡಳಿಯ (GST) ಹೆಚ್ಚುವರಿ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. ಗೋಯಲ್ ಅವರು ಈ ಮಂಡಳಿಯ ಮೊದಲ ಹೆಚ್ಚುವರಿ ಕಾರ್ಯದರ್ಶಿಯಾಗಿದ್ದಾರೆ. ಗೋಯಲ್ ರವರು 1985 ನೇ ತಂಡದ ಕೇಂದ್ರಾಡಳಿತ ಪ್ರದೇಶ ಕ್ಯಾಡ್ರೆಯ ಐಎಎಸ್ ಅಧಿಕಾರಿಯಾಗಿದ್ದಾರೆ. ನೇಮಕಾತಿಗೆ ಮುಂಚೆ ಇವರು ಕೇಂದ್ರ ಸಂಪುಟ ಸಚಿವಾಲಯದ ಪ್ರಾಜೆಕ್ಟ್ ಮಾನಿಟರಿಂಗ್ ಗ್ರೂಪ್ ನ ಹೆಚ್ಚುವರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಕೇಂದ್ರ ಹಣಕಾಸು ಸಚಿವರಾದ ಅರುಣ್ ಜೇಟ್ಲಿ ಅವರು ಸರಕು ಮತ್ತು ಸೇವಾ ತೆರಿಗೆ ಮಂಡಳಿಯ ಅಧ್ಯಕ್ಷರಾಗಿದ್ದಾರೆ.
Question 7 |
7. ಮೊದಲ ಭಾರತ-ಚೀನಾ ಉನ್ನತ ಮಟ್ಟದ ಭಯೋತ್ಪಾದಕ ವಿರೋಧಿ ಮತ್ತು ಭದ್ರತೆ (India-China High Level Dialogue on Counter-terrorism and Security) ಸಭೆ ಯಾವ ನಗರದಲ್ಲಿ ನಡೆಯಿತು?
ಶಾಂಘೈ | |
ಬೀಜಿಂಗ್ | |
ಹೈದ್ರಾಬಾದ್ | |
ನವದೆಹಲಿ |
ಭಾರತ-ಚೀನಾ ಉನ್ನತ ಮಟ್ಟದ ಭಯೋತ್ಪಾದಕ ವಿರೋಧಿ ಮತ್ತು ಭದ್ರತೆ ಕುರಿತಾದ ಮೊದಲ ಸಭೆ ಚೀನಾದ ಬೀಜಿಂಗ್ ನಲ್ಲಿ ನಡೆಯಿತು. ಜಂಟಿ ಗುಪ್ತಚರ ಸಮಿತಿಯ ಮುಖ್ಯಸ್ಥರಾದ ಆರ್ ಎನ್ ರವಿ ಅವರು ಭಾರತದ ಪ್ರತಿನಿಧಿಯಾಗಿ ಸಭೆಯಲ್ಲಿ ಭಾಗವಹಿಸಿದ್ದರು.
Question 8 |
8. ರಾಷ್ಟ್ರೀಯ ಭದ್ರತಾ ಪಡೆ(National Security Guard)ಯ ನೂತನ ಡೈರೆಕ್ಟರ್ ಜನರಲ್ ಆಗಿ ಯಾರು ನೇಮಕಗೊಂಡಿದ್ದಾರೆ?
ಚಂದ್ರಕಾತ್ ಠಾಗೋರ್ | |
ಸುಧೀರ್ ಪ್ರತಾಪ್ ಸಿಂಗ್ | |
ಗಣಪತಿ ನಾಯಕ್ | |
ಸಮೀರ್ ಭೂಷಣ್ |
ರಾಷ್ಟ್ರೀಯ ಭದ್ರತಾ ಪಡೆಯ ನೂತನ ಡೈರೆಕ್ಟರ್ ನೂತನ ಡೈರೆಕ್ಟರ್ ಜನರಲ್ ಆಗಿ ಸುಧೀರ್ ಪ್ರತಾಪ್ ಸಿಂಗ್ ನೇಮಕಗೊಂಡಿದ್ಧಾರೆ. ಎನ್.ಎಸ್.ಜಿ. (ರಾಷ್ಟ್ರೀಯ ಭದ್ರತಾ ಪಡೆ ಅಥವಾ ನ್ಯಾಷನಲ್ ಸೆಕುರಿಟಿ ಗಾರ್ಡ್ಸ್ ಅಥವಾ ಬ್ಲ್ಯಾಕ್ ಕ್ಯಾಟ್ ಕಮಾಂಡೋಸ್) ಇದು ವಿಶೇಷ ಸಂದರ್ಭಗಳಲ್ಲಿ ಬಳಸಲಾಗುವ ಉಗ್ರವಾದ-ನಿಗ್ರಹಣ ದಳ ಇದನ್ನು 1958ರಲ್ಲಿ ಸಂಸತ್ತಿನಲ್ಲಿ 'ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ಸ್' ಆಕ್ಟ್ ಮೂಲಕ ರಚಿಸಲಾಯಿತು. ಇದು ಭಾರತದ ಗೃಹ ಸಚಿವಾಲಯದ ಸುಪರ್ದಿಗೆ ಒಳಪಟ್ಟಿರುತ್ತದೆ.
Question 9 |
9. “Driven: The Virat Kohli Story” ಪುಸ್ತಕದ ಲೇಖಕರು _____?
ಅರುಣ್ ಶೌರಿ | |
ವಿಜಯ್ ಲೊಕಪಲ್ಲಿ | |
ಸುನೀಲ್ ಚೆತ್ರಿ | |
ರಾಹುಲ್ ಗುಪ್ತಾ |
ಕ್ರೀಡಾ ಪತ್ರಕರ್ತ ವಿಜಯ್ ಲೊಕಪಲ್ಲಿ ಅವರು “Driven: The Virat Kohli Story” ಪುಸ್ತಕದ ಲೇಖಕರು. ಪುಸ್ತಕದಲ್ಲಿ ವಿರಾಟ್ ಕೊಹ್ಲಿ ಅತಿ ಕಡಿಮೆ ಅವಧಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದು ಸೇರಿದಂತೆ ಕೊಹ್ಲಿ ಸಹಚರರು, ತರಬೇತುದಾರರು ಬಗ್ಗೆ ಬರೆಯಲಾಗಿದೆ.
Question 10 |
10. ಪಾಕಿಸ್ತಾನದೊಂದಿಗೆ ಅತಿ ಹೆಚ್ಚು ಉದ್ದವಾದ ಗಡಿ ಭಾಗದಿಂದ ಕಡಿಮೆ ಗಡಿ ಭಾಗ ಹೊಂದಿರುವ ರಾಜ್ಯಗಳು ಕ್ರಮವಾಗಿ ______?
ಜಮ್ಮು& ಕಾಶ್ಮೀರ, ಪಂಜಾಬ್, ಗುಜರಾತ್, ರಾಜಸ್ತಾನ | |
ಜಮ್ಮು& ಕಾಶ್ಮೀರ, ಗುಜರಾತ್, ಪಂಜಾಬ್, ರಾಜಸ್ತಾನ | |
ಜಮ್ಮು & ಕಾಶ್ಮೀರ, ರಾಜಸ್ತಾನ, ಪಂಜಾಬ್, ಗುಜರಾತ್ | |
ಜಮ್ಮು & ಕಾಶ್ಮೀರ, ರಾಜಸ್ತಾನ, ಗುಜರಾತ್, ಪಂಜಾಬ್ |
ಪಾಕಿಸ್ತಾನವು ಭಾರತದೊಂದಿಗೆ 3,323 ಕಿ.ಮೀ ಉದ್ದದ ಗಡಿ ಭಾಗವನ್ನು ಹೊಂದಿಗೆ. ಭಾರತದ ನಾಲ್ಕು ರಾಜ್ಯಗಳಾದ ಜಮ್ಮು & ಕಾಶ್ಮೀರ (1,225 ಕಿ.ಮೀ ಅತಿ ಹೆಚ್ಚು), ರಾಜಸ್ತಾನ (1,037 ಕಿ.ಮೀ), ಪಂಜಾಬ್ (553 ಕಿ.ಮೀ) ಮತ್ತು ಗುಜರಾತ್ (508 ಕಿ.ಮೀ) ಗಡಿ ಭಾಗವನ್ನು ಹೊಂದಿಕೊಂಡಿವೆ.
[button link=”http://www.karunaduexams.com/wp-content/uploads/2016/09/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಸೆಪ್ಟೆಂಬರ್-ಕ್ವಿಜ್-26.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Thanks sir
Comment
Super
Pdo
Super