ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 28, 2016
Question 1 |
1.ವಿಶ್ವ ಆರೋಗ್ಯ ಸಂಸ್ಥೆ (WHO) ಇತ್ತೀಚೆಗೆ ಈ ಕೆಳಗಿನ ಯಾವ ಪ್ರದೇಶವನ್ನು ವಿಶ್ವದ ಮೊದಲ ದಡಾರ (Measles) ಮುಕ್ತ ಪ್ರದೇಶವೆಂದು ಘೋಷಿಸಿದೆ?
ಅಮೆರಿಕ | |
ಯುರೋಪ್ | |
ಏಷ್ಯಾ | |
ಆಸ್ಟ್ರೇಲಿಯಾ |
ವಿಶ್ವ ಆರೋಗ್ಯ ಸಂಸ್ಥೆ ಅಮೆರಿಕ ಪ್ರದೇಶವನ್ನು ದಡಾರ ಮುಕ್ತ ಪ್ರದೇಶವೆಂದು ಘೋಷಿಸಿದೆ. ಆ ಮೂಲಕ ವಿಶ್ವದ ಮೊದಲ ದಡಾರ ಮುಕ್ತ ಪ್ರದೇಶವಾಗಿ ಅಮೆರಿಕಾ ಪ್ರದೇಶ ಪಾತ್ರವಾಗಿದೆ. ದಡಾರ ವೈರಸ್ ನಿಂದ ಹರಡುವ ಮಾರಣಾಂತಿಕ ಕಾಯಿಲೆ. ಈ ಕಾಯಿಲೆಯಿಂದ ಜಗತ್ತಿನಾದ್ಯಂತ 2.6 ಮಿಲಿಯನ್ ಮಕ್ಕಳು ಸಾವನ್ನಪ್ಪುತ್ತಿದ್ದಾರೆ. [ಸೂಚನೆ: ಅಮೆರಿಕ ಪ್ರದೇಶವೆಂದರೆ ದಕ್ಷಿಣ ಅಮೆರಿಕ ಮತ್ತು ಉತ್ತರ ಅಮೆರಿಕ ಖಂಡಗಳ ಒಟ್ಟಾರೆ ಭಾಗ]
Question 2 |
2.ವಿಶ್ವ ರೇಬಿಸ್ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
ಸೆಪ್ಟೆಂಬರ್ 27 | |
ಸೆಪ್ಟೆಂಬರ್ 28 | |
ಸೆಪ್ಟೆಂಬರ್ 29 | |
ಸೆಪ್ಟೆಂಬರ್ 30 |
ವಿಶ್ವರೇಬಿಸ್ ದಿನವನ್ನು ಸೆಪ್ಟೆಂಬರ್ 28 ರಂದು ಪ್ರತಿವರ್ಷ ಆಚರಿಸಲಾಗುತ್ತದೆ. 2007ರಿಂದ ಈ ದಿನವನ್ನು ಆಚರಣೆ ಮಾಡಲಾಗುತ್ತಿದೆ. ರೇಬಿಸ್ ಕಾಯಿಲೆ ಬಗ್ಗೆ ಅರಿವು ಮೂಡಿಸುವುದು ಈ ದಿನದ ಪ್ರಮುಖ ಉದ್ದೇಶ. ರೇಬಿಸ್ ಬಗ್ಗೆ ಮಾಹಿತಿ ಒದಗಿಸಿ, ಲಸಿಕೆ ಹಾಕಿಸಿ ಮತ್ತು ಕಾಯಿಲೆ ತೊಲಗಿಸಿ ಇದು ಈ ವರ್ಷದ ಥೀಮ್ ಆಗಿದೆ. ಸೆಪ್ಟೆಂಬರ್ 28 ರೇಬಿಸ್ ಲಸಿಕೆಯನ್ನು ಅಭಿವೃದ್ದಿಪಡಿಸಿದ ಲೂಯಿಸ್ ಪ್ಯಾಶ್ಚರ್ ಅವರು ನಿಧನರಾದ ದಿನ ಆಗಾಗಿ ಅವರ ನೆನಪಿಗಾಗಿ ಈ ದಿನವನ್ನು ವಿಶ್ವ ರೇಬಿಸ್ ದಿನವೆಂದು ಆಚರಿಸಲಾಗುತ್ತದೆ.
Question 3 |
3.ಇತ್ತೀಚೆಗೆ ನಿಧನರಾದ “ಮ್ಯಾಕ್ಸ್ ವಾಕರ್” ಅವರು ಯಾವ ದೇಶದ ಮಾಜಿ ಟೆಸ್ಟ್ ಕ್ರಿಕೆಟ್ ಆಟಗಾರ?
ನ್ಯೂಜಿಲ್ಯಾಂಡ್ | |
ಆಸ್ಟ್ರೇಲಿಯಾ | |
ಇಂಗ್ಲೆಂಡ್ | |
ದಕ್ಷಿಣ ಆಫ್ರಿಕಾ |
ಆಸ್ಟ್ರೇಲಿಯದ ಮಾಜಿ ಟೆಸ್ಟ್ ಕ್ರಿಕೆಟಿಗ ಹಾಗೂ ಖ್ಯಾತ ವೀಕ್ಷಕವಿವರಣೆಗಾರ ಮ್ಯಾಕ್ಸ್ ವಾಕರ್(68 ವರ್ಷ) ನಿಧನರಾಗಿದ್ದಾರೆ. 1973ರಲ್ಲಿ ಟೆಸ್ಟ್ ಕ್ರಿಕೆಟಿಗೆ ಕಾಲಿಟ್ಟಿದ್ದ ವಾಕರ್ ಮಧ್ಯಮ ವೇಗದ ಬೌಲಿಂಗ್ನ ಮೂಲಕ 34 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 138 ವಿಕೆಟ್ಗಳನ್ನು ಉರುಳಿಸಿದ್ದರು. ಆಸ್ಟ್ರೇಲಿಯ ತಂಡ 1972-73ರಲ್ಲಿ ವೆಸ್ಟ್‌ಇಂಡೀಸ್ ಪ್ರವಾಸ ಕೈಗೊಂಡಿದ್ದಾಗ 26 ವಿಕೆಟ್ಗಳನ್ನು ಕಬಳಿಸಿದ್ದ ವಾಕರ್ ತಂಡ 2-0 ಅಂತರದಿಂದ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. 1974-75ರಲ್ಲಿ ಮೆಲ್ಬೋರ್ನ್ನಲ್ಲಿ ನಡೆದ ಆಯಶಸ್ ಟೆಸ್ಟ್ ಸರಣಿಯಲ್ಲಿ 143 ರನ್ಗೆ 8 ವಿಕೆಟ್ ಪಡೆದಿದ್ದರು. ಇದು ಅವರ ವೃತ್ತಿಜೀವನದ ಶ್ರೇಷ್ಠ ಪ್ರದರ್ಶನವಾಗಿತ್ತು. ವಾಕರ್ ನಿವೃತ್ತಿಯ ಬಳಿಕ ಕ್ರಿಕೆಟ್ ವೀಕ್ಷಕವಿವರಣೆಗಾರರಾಗಿದ್ದರು. 1986 ಹಾಗೂ 1991ರ ನಡುವೆ ನೈನ್ ನೆಟ್ವರ್ಕ್ ವೀಕ್ಷಕವಿವರಣೆಗಾರರ ತಂಡದ ಸದಸ್ಯರಾಗಿದ್ದರು. 1999ರ ತನಕ ನೆಟ್ವರ್ಕ್ನಲ್ಲಿ ಕೆಲಸ ಮಾಡಿದ್ದರು.
Question 4 |
4.ಐದು ದಶಕಗಳ ನಂತರ ಕ್ಯೂಬಕ್ಕೆ ಅಮೆರಿಕದ ಮೊದಲ ರಾಯಭಾರಿಯಾಗಿ ಈ ಕೆಳಗಿನ ಯಾರು ನೇಮಕಗೊಂಡಿದ್ದಾರೆ?
ಜೆಫ್ರಿ ಡೆಲಾರೆಂಟಿಸ್ | |
ರಾಬರ್ಟ್ ಹ್ಯೂಜೆಲಿಕ್ | |
ಸ್ಟೀಪನ್ ವೆಗನ್ | |
ಜೇಮ್ಸ್ ಮೊಜೊಬಿಕ್ |
ಹವಾನದಲ್ಲಿ ಅಮೆರಿಕದ ಉನ್ನತ ರಾಜತಾಂತ್ರಿಕರಾಗಿರುವ ಜೆಫ್ರಿ ಡೆಲಾರೆಂಟಿಸ್ರನ್ನು ಕ್ಯೂಬಕ್ಕೆ ತನ್ನ ಅಧಿಕೃತ ರಾಯಭಾರಿಯನ್ನಾಗಿ ಅಮೆರಿಕ ನೇಮಿಸಿದೆ. ಅವರು ಐದು ದಶಕಗಳಲ್ಲೇ ಕ್ಯೂಬಕ್ಕೆ ಅಮೆರಿಕದ ಮೊದಲ ರಾಯಭಾರಿಯಾಗಿದ್ದಾರೆ.
Question 5 |
5.ಯಾವ ದೇಶದಲ್ಲಿ “2017 ಫಿಫಾ 17 ವರ್ಷ ಒಳಗಿನ ವಿಶ್ವ ಕಪ್” ನಡೆಯಲಿದೆ?
ಬ್ರೆಜಿಲ್ | |
ಭಾರತ | |
ಜಪಾನ್ | |
ರಷ್ಯಾ |
ಭಾರತದಲ್ಲಿ 2017 ಫಿಫಾ 17 ವರ್ಷ ಒಳಗಿನ ವಿಶ್ವ ಕಪ್ ಅಕ್ಟೋಬರ್, 2017ರಲ್ಲಿ ನಡೆಯಲಿದೆ. ಇದೇ ಮೊದಲ ಬಾರಿಗೆ ಭಾರತ ಈ ವಿಶ್ವಕಪ್ ಅನ್ನು ಆಯೋಜಿಸುತ್ತಿದೆ. ಇತ್ತೀಚೆಗೆ ಗೋವಾದ ಮಾರ್ಗೋವಾದಲ್ಲಿ ಈ ವಿಶ್ವಕಪ್ ನ ಅಧಿಕೃತ ಚಿಹ್ನೆಯನ್ನು ಬಿಡುಗಡೆಗೊಳಿಸಲಾಗಿದೆ.
Question 6 |
6.“2015ನೇ ಸಾಲಿನ ಮೂರ್ತಿದೇವಿ ಪ್ರಶಸ್ತಿ”ಯನ್ನು ಪಡೆದ “ಫ್ರೋ.ಕಲಕಲುರಿ ಎನೋಚ್ (Kalakaluri Enoch)” ಯಾವ ಭಾಷೆಯ ಪ್ರಸಿದ್ದ ಸಾಹಿತಿ?
ಮರಾಠಿ | |
ತೆಲುಗು | |
ಹಿಂದಿ | |
ಗುಜರಾತಿ |
ಭಾರತೀಯ ಜ್ಞಾನಪೀಠ ಪ್ರತಿಷ್ಠಾನ ನೀಡುವ ಪ್ರತಿಷ್ಠಿತ ಮೂರ್ತಿದೇವಿ ಪ್ರಶಸ್ತಿಯನ್ನು 2015ನೇ ಸಾಲಿಗೆ ತೆಲುಗಿನ ಖ್ಯಾತ ಸಾಹಿತಿ ಫ್ರೋ.ಕಲಕಲುರಿ ಎನೋಚ್ ರವರಿಗೆ ನೀಡಲಾಯಿತು. ಎನೋಚ್ ಅವರ “ಅನಂತಜೀವನಂ” ಕಾದಂಬರಿಗೆ ಈ ಪ್ರಶಸ್ತಿ ಸಂದಿದೆ. ಅನಂತಜೀವನಂ ಕಾದಂಬರಿಯು ವಿನಾಶಕಾರಿ ಚಂಡಮಾರುತ ಸಮಯದಲ್ಲಿ ರಾಯಲಸೀಮ ಪ್ರದೇಶದಲ್ಲಿ ಐತಿಹಾಸಿಕ ಮತ್ತು ಸಾಂಸ್ಕೃತಿಕ ಆಸ್ತಿಪಾಸ್ತಿ ಸಂರಕ್ಷಿಸಲು ದೀನ ದಲಿತರು, ದುರ್ಬಲರು ಮತ್ತು ಸಾಮಾನ್ಯ ಮನುಷ್ಯರು ಕಷ್ಟಪಟ್ಟ ರೀತಿಯನ್ನು ಚಿತ್ರಿಸುತ್ತಿದೆ.
Question 7 |
7.“ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (PTI)”ದ ನೂತನ ಅಧ್ಯಕ್ಷರಾಗಿ ಯಾರು ಇತ್ತೀಚೆಗೆ ನೇಮಕಗೊಂಡರು?
ವಿವೇಕ್ ಗೊಯೆಂಕಾ | |
ರಿಯಾದ್ ಮ್ಯಾಥ್ಯು | |
ಹೊರ್ಸಮುಸ್ಜಿ ಎನ್ ಕೆಮ | |
ವಿನೀತ್ ಜೈನ್ |
ಮಲಯಾಳಂ ಮನೋರಮಾದ ನಿರ್ದೇಶಕ ರಿಯಾದ್ ಮ್ಯಾಥ್ಯು ರವರು ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾದ ನೂತನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಇಂಡಿಯನ್ ಎಕ್ಸಪ್ರೆಸ್ ಚೇರಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ವಿವೇಕ್ ಗೊಯೆಂಕಾ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ರಿಯಾದ್ ಅವರು 2009 ರಿಂದ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ ಮಂಡಳಿಯ ನಿರ್ದೇಶಕರಾಗಿದ್ದಾರೆ.
Question 8 |
8.ವಿಶ್ವದ ಮೊದಲ “ಥ್ರೀ-ಪೇರೆಂಟ್” (Three Parent)ಮಗು ಈ ಕೆಳಗಿನ ಯಾವ ದೇಶದಲ್ಲಿ ಜನಿಸಿತು?
ಚೀನಾ | |
ಅಮೆರಿಕಾ | |
ಮೆಕ್ಸಿಕೊ | |
ಸ್ವೀಡನ್ |
ಮೆಕ್ಸಿಕೊದಲ್ಲಿ ವಿಶ್ವದ ಮೊದಲ ಥ್ರೀ-ಪೇರೆಂಟ್ ಮಗುವಿಗೆ ಜನ್ಮ ನೀಡಲಾಗಿದೆ. ಮೂವರು ಜನ್ಮದಾತರ ಡಿಎನ್ಎ ಬಳಸಿ ಮಗು ಪಡಡೆಯುವ ಈ ವಿವಾದತ್ಮಕ ತಂತ್ರಜ್ಞಾನದ ಮೂಲಕ ಜೋರ್ಡಾನ್ ಮೂಲದ ದಂಪತಿಗಳಿಗೆ ಮಗು ಜನಿಸಿದೆ. ಥ್ರೀ-ಪೇರೆಂಟ್ ತಂತ್ರಜ್ಞಾನವನ್ನು “ಮೈಟ್ರೋಕಾಂಡ್ರಿಯಲ್ ಡೊನೇಶನ್ (Mitochondrial Donation)” ಎಂತಲೂ ಕರೆಯುತ್ತಾರೆ. ಈ ವಿಧಾನದಿಂದ ಅಪರೂಪದ ತಳಿ ರೂಪಾಂತರಗೊಂಡಿರುವ ಪೋಷಕರು ಸಹ ಆರೋಗ್ಯವಂತ ಮಗುವನ್ನು ಪಡೆಯಬಹುದಾಗಿದೆ.
Question 9 |
9. ಯಾವ ರಾಜ್ಯ ಇತ್ತೀಚೆಗೆ “ಡಿಜಿಟಲ್ ತರಭೇತಿ (Digital Classes)” ನೀಡುವ ಸಲುವಾಗಿ ಇಸ್ರೋದೊಂದಿಗೆ ಒಡಂಬಡಿಕೆಗೆ ಸಹಿಹಾಕಿತು?
ಆಂಧ್ರ ಪ್ರದೇಶ | |
ತಮಿಳು ನಾಡು | |
ತೆಲಂಗಣ | |
ಗುಜರಾತ್ |
ಭಾರತೀಯ ಬಾಹ್ಯಕಾಶ ಸಂಶೋಧನ ಸಂಸ್ಥೆ (ಇಸ್ರೋ) ಮತ್ತು ತೆಲಂಗಣ ರಾಜ್ಯ ಡಿಜಿಟಲ್ ತರಭೇತಿ ನೀಡುವ ಸಲುವಾಗಿ ಒಡಂಬಡಿಕೆಗೆ ಸಹಿ ಹಾಕಿವೆ. ಈ ಒಡಂಬಡಿಕೆ ಅನ್ವಯ ತೆಲಂಗಣ ರಾಜ್ಯದಾದ್ಯಂತ ರಾಜ್ಯ ಚಾನೆಲ್ ಆದ ಮನ ಟಿವಿ ಮೂಲಕ ಡಿಜಿಟಲ್ ತರಭೇತಿಗಳನ್ನು ಇಸ್ರೋ ನೀಡಲಿದೆ. ಇಸ್ರೋದ ಡೆಮೆಲಪ್ಮೆಂಟ್ ಅಂಡ್ ಎಜುಕೇಷನಲ್ ಕಮ್ಯೂನಿಕೇಷನ್ ಯೂನಿಟ್ ತೆಲಂಗಣ ರಾಜ್ಯದ ಜೊತೆಗೂಡಿ ಶಿಕ್ಷಣ ಸಂಬಂಧಿತ ವಿಷಯಗಳನ್ನು ಉಪಗ್ರಹ ಮೂಲಕ ರವಾನಿಸಲಿದೆ. 14 ಅಕ್ಟೋಬರ್ 2016 ರಿಂದ ರಾಜ್ಯದ 6000 ಶಾಲೆಗಳಲ್ಲಿ ಡಿಜಿಟಲ್ ತರಭೇತಿಗಳು ಪ್ರಾರಂಭಗೊಳ್ಳಲಿವೆ.
Question 10 |
10. ಭಾರತ ಮತ್ತು ಪಾಕಿಸ್ತಾನ ನಡುವೆ “ಸಿಂಧೂನದಿ ಜಲ ಒಪ್ಪಂದಕ್ಕೆ” ಸಹಿ ಹಾಕಿದ ವೇಳೆ ಪಾಕಿಸ್ತಾನದ ಅಧ್ಯಕ್ಷರಾಗಿದ್ದವರು ಯಾರು?
ಅಯೂಬ್ ಖಾನ್ | |
ಯಾಹ್ಯ ಖಾನ್ | |
ಜುಲ್ಫೀಕರ್ ಅಲಿ ಭಟ್ | |
ಇಸ್ಕಂದರ್ ಮಿರ್ಜಾ |
ಸಿಂಧೂನದಿ ಜಲ ಒಪ್ಪಂದಕ್ಕೆ ಅಂದಿನ ಭಾರತದ ಪ್ರಧಾನ ಮಂತ್ರಿಗಳಾದ ಜವಹಾರ್ ಲಾಲ್ ನೆಹರೂ ಹಾಗೂ ಪಾಕಿಸ್ತಾನದ ಅಧ್ಯಕ್ಷರಾದ ಅಯೂಬ್ ಖಾನ್ ನಡುವೆ ಸೆಪ್ಟೆಂಬರ್ 19, 1960 ರಲ್ಲಿ ಸಹಿಹಾಕಲಾಯಿತು. ಒಪ್ಪಂದದ ಅನ್ವಯ ಪೂರ್ವಾಭಿಮುಖವಾಗಿ ಹರಿಯುವ ನದಿಗಳಾದ ರಾವಿ, ಬಿಯಾಸ್ ಮತ್ತು ಸಟ್ಲೇಜ್ ನದಿಗಳ ಮೇಲೆ ಭಾರತ ನಿಯಂತ್ರಣ ಹೊಂದಲಿದೆ. ಹಾಗೆಯೇ ಪಶ್ಚಿಮಭಿಮುಖವಾಗಿ ಹರಿಯುವ ನದಿಗಳಾದ ಸಿಂಧೂ, ಜೀಲಂ ಮತ್ತು ಚೀನಾಬ್ ನದಿಗಳ ಮೇಲೆ ಪಾಕಿಸ್ತಾನ ನಿಯಂತ್ರಣ ಹೊಂದಿದೆ.
[button link=”http://www.karunaduexams.com/wp-content/uploads/2016/09/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಸೆಪ್ಟೆಂಬರ್-ಕ್ವಿಜ್-28.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
ಧನ್ಯವಾದಗಳು ಸರ್
tthank u