ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಸೆಪ್ಟೆಂಬರ್ 29, 2016
Question 1 |
ಹರಿಯಾಣ | |
ರಾಜಸ್ತಾನ | |
ಕೇರಳ | |
ಮಧ್ಯ ಪ್ರದೇಶ |
ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರ ಸಚಿವ ಮುಖ್ತರ್ ಅಬ್ಬಾಸ್ ನಕ್ವಿ ರವರು “ಪ್ರಗತಿ ಪಂಚಾಯತ್” ಕಾರ್ಯಕ್ರಮಕ್ಕೆ ಹರಿಯಾಣದ ಮೇವಾತ್ ನಲ್ಲಿ ಚಾಲನೆ ನೀಡಿದರು. ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ NDA ಸರ್ಕಾರ ಜಾರಿಗೊಳಿಸಿರುವ ಯೋಜನೆಗಳ ಬಗ್ಗೆ ಅರಿವು ಮೂಡಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶ. ಪ್ರಗತಿ ಪಂಚಾಯತ್ ಕಾರ್ಯಕ್ರಮವನ್ನು ದೇಶದ 100 ಸ್ಥಳಗಳಲ್ಲಿ ಆಯೋಜಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರುಗಳು ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಜನರಿಗೆ ತಿಳಿಸಿ ಚರ್ಚಿಸಲಿದ್ದಾರೆ.
Question 2 |
2.ಯಾವ ನಗರದಲ್ಲಿ “ಭಾರತ ನೈರ್ಮಲ್ಯ ಸಮ್ಮೇಳನ (INDOSAN)” ಇತ್ತೀಚೆಗೆ ಆರಂಭಗೊಂಡಿತು?
ಮುಂಬೈ | |
ನವದೆಹಲಿ | |
ಬೆಂಗಳೂರು | |
ಹೈದ್ರಾಬಾದ್ |
ಭಾರತ ನೈಮರ್ಲ್ಯ ಸಮ್ಮೇಳನ (India Sanitation Conference (INDOSAN)) ನವದೆಹಲಿಯಲ್ಲಿ ಸೆಪ್ಟೆಂಬರ್ 30 ರಂದು ಆರಂಭಗೊಂಡಿತು. ಪ್ರಧಾನಿ ಮೋದಿರವರು ಈ ಸಮ್ಮೇಳನವನ್ನು ಉದ್ಘಾಟಿಸಿದರು. ಸ್ವಚ್ಚ ಭಾರತ ಅಭಿಯಾನದಡಿ ಸಾಧಿಸಲಾಗಿರುವ ಪ್ರಗತಿ, ಅಭಿಯಾನಕ್ಕೆ ಸಂಬಂಧಿತ ವಿಷಯಗಳ ಬಗ್ಗೆ ಚರ್ಚಿಸಲಾಗುವುದು.
Question 3 |
3.2016 ಏಷ್ಯನ್ ಬೀಚ್ ಗೇಮ್ಸ್ ನ ಮಹಿಳೆಯರ ಕಬಡ್ಡಿ ಕ್ರೀಡೆಯಲ್ಲಿ ಚಿನ್ನ ಗೆದ್ದ ತಂಡ ಯಾವುದು?
ಪಾಕಿಸ್ತಾನ | |
ಶ್ರೀಲಂಕಾ | |
ಭಾರತ | |
ಬಾಂಗ್ಲದೇಶ |
2016 ಏಷ್ಯನ್ ಬೀಚ್ ಗೇಮ್ಸ್ ಮಹಿಳೆಯರ ಕಬಡ್ಡಿಯಲ್ಲಿ ಭಾರತ ತಂಡ ವಿಜೇತರಾಗಿ ಹೊರಹೊಮ್ಮಿತು. ಫೈನಲ್ ಪಂದ್ಯದಲ್ಲಿ ಭಾರತ ತಂಡ ಥಾಯ್ಲೆಂಡ್ ತಂಡವನ್ನು ಮಣಿಸುವ ಮೂಲಕ ಚಿನ್ನದ ಪದಕವನ್ನು ಗೆದ್ದುಕೊಂಡಿತು. 2008 ರಲ್ಲಿ ಏಷ್ಯನ್ ಬೀಚ್ ಗೇಮ್ಸ್ ಆರಂಭವಾದಗಿಲಿಂದಲೂ ಭಾರತ ತಂಡ ಕಬಡ್ಡಿಯಲ್ಲಿ ಚಾಂಪಿಯನ್ ಆಗಿದೆ. ಸತತವಾಗಿ ಐದು ಬಾರಿ ಥಾಯ್ಲೆಂಡ್ ತಂಡ ಭಾರತದ ಎದುರು ಫೈನಲ್ ಪಂದ್ಯದಲ್ಲಿ ಸೋತಿದೆ.
Question 4 |
4.ಯಾವ ದಿನದಂದು “ವಿಶ್ವ ಹೃದಯ ದಿನವನ್ನು (World Heart Day)” ಆಚರಿಸಲಾಗುತ್ತದೆ?
ಸೆಪ್ಟೆಂಬರ್ 27 | |
ಸೆಪ್ಟೆಂಬರ್ 28 | |
ಸೆಪ್ಟೆಂಬರ್ 29 | |
ಸೆಪ್ಟೆಂಬರ್ 30 |
ವಿಶ್ವ ಹೃದಯ ದಿನವನ್ನು ಸೆಪ್ಟೆಂಬರ್ 30 ರಂದು ಆಚರಿಸಲಾಗುತ್ತದೆ. ತಂಬಾಕು ಬಳಕೆ, ಅನುಚಿತ ಆಹಾರ ಸೇವನೆ ಕ್ರಮ, ದೈಹಿಕ ವ್ಯಾಯಮ ಕೊರತೆ ಮತ್ತು ಅತಿಯಾದ ಅಲ್ಕೋಹಾಲ್ ಸೇವನೆಯಿಂದ ಮಾನವನ ಹೃದಯದ ಮೇಲೆ ಆಗುವ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಲಾಗುವುದು. Light Your Heart, Empower Your Life ಇದು ಈ ವರ್ಷದ ವಿಶ್ವ ಹೃದಯ ದಿನದ ಥೀಮ್ ಆಗಿದೆ
Question 5 |
5.“ಕರಾಚಿ ಯೂ ಆರ್ ಕಿಲ್ಲಿಂಗ್ ಮಿ (Karachi You Are Killing Me)” ಪುಸ್ತಕದ ಲೇಖಕರು _____?
ಸಬ ಇಮ್ತಿಯಾಜ್ | |
ಸಿರಹುದ್ದೀನ್ ಖಾನ್ | |
ಮಹಮ್ಮದ್ ಅಲಿ | |
ಚೇತನ್ ಭಗತ್ |
ಪಾಕಿಸ್ತಾನದ ಪತ್ರಕರ್ತ ಹಾಗೂ ಲೇಖಕ ಸಬ ಇಮ್ತಿಯಾಜ್ ಅವರು “ಕರಾಚಿ ಯೂ ಆರ್ ಕಿಲ್ಲಿಂಗ್ ಮಿ” ಪುಸ್ತಕದ ಲೇಖಕರು. ಇದೊಂದು ಹಾಸ್ಯ ಭರಿತ ಅಪರಾಧ ಸಂಬಂಧಿತ ರೋಮಾಂಚಕ ಕಾದಂಬರಿ. ಸೋನಾಕ್ಷಿ ಸಿನ್ಹಾ ಮುಖ್ಯ ಭೂಮಿಕೆಯಲ್ಲಿರುವ ನಿರ್ಮಾಣ ಹಂತದಲ್ಲಿರುವ “ನೂರ್” ಸಿನಿಮಾ ಈ ಪುಸ್ತಕ ಆಧರಿತವಾಗಿದೆ.
Question 6 |
6. 2018, 2022 ಮತ್ತು 2026ರ ಏಷ್ಯನ್ ಕ್ರೀಡಾಕೂಟ ಯಾವ ದೇಶಗಳಲ್ಲಿ ನಡೆಯಲಿವೆ?
ಇಂಡೋನೇಷ್ಯಾ, ಚೀನಾ ಮತ್ತು ಜಪಾನ್ | |
ಇಂಡೋನೇಷ್ಯಾ, ಭಾರತ ಮತ್ತು ಚೀನಾ | |
ಚೀನಾ, ಇಂಡೋನೇಷ್ಯಾ ಮತ್ತು ಜಪಾನ್ | |
ಚೀನಾ, ಜಪಾನ್ ಮತ್ತು ಇಂಡೋನೇಷ್ಯಾ |
2018, 2022 ಮತ್ತು 2026ರ ಏಷ್ಯನ್ ಕ್ರೀಡಾಕೂಟ ಕ್ರಮವಾಗಿ ಇಂಡೋನೇಷ್ಯಾ, ಚೀನಾ ಮತ್ತು ಜಪಾನ್ ನಲ್ಲಿ ನಡೆಯಲಿದೆ.
Question 7 |
7.ಯಾವ ನಗರದಲ್ಲಿ ಇತ್ತೀಚೆಗೆ “ರಾಷ್ಟ್ರೀಯ ಜೈವಿಕ ಆರ್ಥಿಕತೆ ಮಿಷನ್ (National Mission on Bioeconomy)” ಪ್ರಾರಂಭಿಸಲಾಯಿತು?
ಶಿಲ್ಲಾಂಗ್ | |
ಗುವಾಹಟಿ | |
ತ್ರಿಪುರ | |
ಗ್ಯಾಂಟಕ್ |
ರಾಷ್ಟ್ರೀಯ ಜೈವಿಕ ಆರ್ಥಿಕತೆ ಮಿಷನ್ ಅನ್ನು ಶಿಲ್ಲಾಂಗ್ ನಲ್ಲಿ ಪ್ರಾರಂಭಿಸಲಾಗಿದೆ. ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯದ “ಇನ್ಸ್ಟಿಟ್ಯೂಟ್ ಆಫ್ ಬಯೊ-ರಿಸೊರ್ಸ್ ಅಂಡ್ ಸಸ್ಟನೇಬಲ್ ಡೆವಲ್ಪ್ಮೆಂಟ್” ಈ ಮಿಷನ್ ಅನ್ನು ಪ್ರಾರಂಭಿಸಿದೆ. ಜೈವಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಗ್ರಾಮೀಣ ಆರ್ಥಿಕತೆಯನ್ನು ಉತ್ತಮಪಡಿಸುವುದು ಈ ಮಿಷನ್ ಉದ್ದೇಶವಾಗಿದೆ.
Question 8 |
8.ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI)ದ ಈಗಿನ ಅಧ್ಯಕ್ಷರು ಯಾರು?
ಸುದೀರ್ ಗುಪ್ತಾ | |
ಆರ್ ಎಸ್ ಶರ್ಮಾ | |
ಕೆ ಮಧುಕರ್ | |
ಸುರೇಂದ್ರ ಶರ್ಮಾ |
ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವನ್ನು 20ನೇ ಫೆಬ್ರವರಿ 1997 ರಲ್ಲಿ ದೂರಸಂಪರ್ಕ ಸೇವೆಗಳನ್ನು ಮತ್ತು ತೆರಿಗೆಗಳನ್ನು ನಿಯಂತ್ರಿಸುವ ಸಲುವಾಗಿ ಸ್ಥಾಪಿಸಲಾಗಿದೆ. ಆರ್ ಎಸ್ ಶರ್ಮಾ ಪ್ರಸ್ತುತ ಈ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ.
Question 9 |
9.“ಭಾರತೀಯ ಸುದ್ದಿಪತ್ರಿಕೆ ಸೊಸೈಟಿ (Indian Newspaper Society)” ಯ ನೂತನ ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?
ಕಮಲೇಶ್ ಶರ್ಮಾ | |
ಸೋಮೇಶ್ ಶರ್ಮಾ | |
ಚಂದ್ರಕಾಂತ್ ಸುಕಂದ | |
ರಿಚರ್ಡ್ ಮ್ಯಾಥು |
ರಾಷ್ಟ್ರದೂತ್ ಸಪ್ತಾಹಿಕ್ ನ ಸೋಮೇಶ್ ಶರ್ಮಾ ಅವರು ಭಾರತೀಯ ಸುದ್ದಿಪತ್ರಿಕೆ ಸೊಸೈಟಿಯ ಅಧ್ಯಕ್ಷರಾಗಿ 2016-17ನೇ ಸಾಲಿಗೆ ನೇಮಕಗೊಂಡಿದ್ದಾರೆ. ಮಾತೃಭೂಮಿ ಸಮೂಹದ ಗೃಹಲಕ್ಷಿ ಮುಖ್ಯ ಸಂಪಾದಕರಾದ ಪಿ ವಿ ಚಂದ್ರನ್ ಅವರ ಉತ್ತರಾಧಿಕಾರಿಯಾಗಿ ಇವರು ನೇಮಕಗೊಂಡಿದ್ದಾರೆ. ಸುದ್ದಿಪತ್ರಿಕೆ ಉದ್ಯಮದ ಹಿತ ಕಾಯುವಿಕೆಗಾಗಿ ಭಾರತೀಯ ಸುದ್ದಿಪತ್ರಿಕೆ ಸೊಸೈಟಿಯನ್ನು ಸ್ಥಾಪಿಸಲಾಗಿದ್ದು, ಇದರ ಕೇಂದ್ರ ಕಚೇರಿ ರಫಿ ಮಾರ್ಗ್, ನವದೆಹಲಿಯಲ್ಲಿದೆ.
Question 10 |
10. “ಬಿಹು” ಯಾವ ರಾಜ್ಯದ ಜನಪ್ರಿಯ ಜಾನಪದ ನೃತ್ಯ?
ಅಸ್ಸಾಂ | |
ಕೇರಳ | |
ಪಶ್ಚಿಮ ಬಂಗಾಳ | |
ಜಾರ್ಖಂಡ್ |
ಬಿಹು ಅಸ್ಸಾಂ ರಾಜ್ಯದ ಪ್ರಸಿದ್ದ ಜಾನಪದ ನೃತ್ಯ. ಬಿಹು ನೃತ್ಯ ಬಿಹು ಹಬ್ಬದ ಒಂದು ಭಾಗ. ಬಿಹು ಹಬ್ಬವನ್ನು ಏಪ್ರಿಲ್ ತಿಂಗಳಲ್ಲಿ ಆಚರಿಸಲಾಗುವುದು.
[button link=”http://www.karunaduexams.com/wp-content/uploads/2016/10/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಸೆಪ್ಟೆಂಬರ್-ಕ್ವಿಜ್-29.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
ಧನ್ಯವಾದಗಳು ಸರ್
ಧನ್ಯವಾದಗಳು ಸರ್.
Super collection question and ansr sir