ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.

ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -14

Question 1

1.ಬೂಸಾನ್ ಚಲನಚಿತ್ರೋತ್ಸವ (Bussan Film Festival)ಕ್ಕೆ ಆಯ್ಕೆಯಾದ ಕನ್ನಡ ಮೊಟ್ಟ ಮೊದಲ ಚಿತ್ರ ಯಾವುದು?

A
ಲಾಸ್ಟ್ ಬಸ್
B
ಹರಿಕಥಾ ಪ್ರಸಂಗ
C
ಕೆಂಪಮ್ಮನ ಕೋರ್ಟ್ ಕೇಸ್
D
ತಿಥಿ
Question 1 Explanation: 
ಹರಿಕಥಾ ಪ್ರಸಂಗ:

ಅನನ್ಯ ಕಾಸರವಳ್ಳಿ ನಿರ್ದೇಶನದ ಮೊಟ್ಟಮೊದಲ ಚಿತ್ರ 'ಹರಿಕಥಾ ಪ್ರಸಂಗ', ಬೂಸಾನ್ ಚಲನಚಿತ್ರೋತ್ಸವಕ್ಕೆ ಆಯ್ಕೆಯಾಗಿದೆ. ಈ ಚಿತ್ರೋತ್ಸವಕ್ಕೆ ಆಯ್ಕೆಯಾದ ಮೊಟ್ಟಮೊದಲ ಕನ್ನಡ ಚಿತ್ರ ಎಂಬ ಹಿರಿಮೆಗೆ ಈ ಚಿತ್ರ ಪಾತ್ರವಾಗಿದೆ. ಗಿರೀಶ್ ಕಾಸರವಳ್ಳಿ ಹಾಗೂ ಗೋಪಾಲಕೃಷ್ಣ ಪೈ ಚಿತ್ರಕಥೆ ನಿರ್ಮಿಸಿದ್ದು, ಗೋಪಾಲಕೃಷ್ಣ ಪೈ ಅವರ ಸಣ್ಣ ಕಥೆಯನ್ನಾಧರಿಸಿ ಈ ಚಿತ್ರ ನಿರ್ಮಾಣವಾಗಿದೆ. ಹರಿ ಎಂಬ ಯಕ್ಷಗಾನ ಕಲಾವಿದ, ಸ್ತ್ರೀಪಾತ್ರ ನಿರ್ವಹಿಸಿ, ಅತ್ಯಂತ ಜನಪ್ರಿಯತೆ ಗಳಿಸುವುದು ಇಲ್ಲಿನ ಕಥಾವಸ್ತು. ಆದರೆ ಕ್ರಮೇಣ, ವೇದಿಕೆಯಲ್ಲಿ ನಾನು ಸ್ತ್ರೀಪಾತ್ರ ನಿರ್ವಹಿಸಿ, ವೇದಿಕೆ ಹೊರಗೆ ಪುರುಷ ಪಾತ್ರ ನಿರ್ವಹಿಸುತ್ತಿದ್ದೇನೆಯೇ ಎಂಬ ಸಂದೇಹ ಅವರಲ್ಲಿ ಮೂಡುತ್ತದೆ. ಇದು ಅವರಲ್ಲಿ ಲಿಂಗಸಂಬಂಧಿ ಐಡೆಂಟಿಟಿ ಸಂದಿಗ್ಧತೆಗೆ ಕಾರಣವಾಗುತ್ತದೆ. ಇದು ಅವರ ಆತ್ಮಾವಲೋಕನ ಹಾಗೂ ವಿಶ್ವದ ಸಂಶೋಧನೆಗೆ ಕಾರಣವಾಗುತ್ತದೆ. ಬೂಸಾನ್ ಚಲನಚಿತ್ರೋತ್ಸವ ಕ್ಯಾನೆ ಆಫ್ ದಿ ಈಸ್ಟ್ ಎಂತಲೇ ಪ್ರಸಿದ್ದಿ ಹೊಂದಿದೆ.

Question 2

2.ಇತ್ತೀಚೆಗೆ ನಿಧನರಾದ ಡಾ. ಅಶೋಕ್ ಪೈ ರವರು ಪ್ರಸಿದ್ದ_____?

A
ಮನೋವೈದ್ಯ
B
ಕಲಾವಿದ
C
ಸಾಹಿತಿ
D
ಉದ್ಯಮಿ
Question 2 Explanation: 
ಮನೋವೈದ್ಯ:

ಖ್ಯಾತ ಮನೋವೈದ್ಯ ಡಾ.ಅಶೋಕ್ ಪೈ ಹೃದಯಾಘಾತದಿಂದ ನಿಧನರಾಗಿದ್ದಾರೆ. ಪೈ ಅವರು ಶಿವಮೊಗ್ಗದಲ್ಲಿ ಮಾನಸ ನರ್ಸಿಂಗ್ ಹೋಮ್ ಆಸ್ಪತ್ರೆ ನಡೆಸುತ್ತಿದ್ದರು. ವೈದ್ಯರಲ್ಲದೇ ಸಿನಿಮಾ ನಿರ್ಮಾಪಕರಾಗಿದ್ದ ಅವರು ಕಾಡಿನ ಬೆಂಕಿ, ಉಷಾಕಿರಣ, ಆಘಾತ ಮೊದಲಾದ ಸಿನಿಮಾಗಳನ್ನು ನಿರ್ಮಿಸಿದ್ದರು. ಈ ಎಲ್ಲಾ ಸಿನಿಮಾಗಳು ಪ್ರಶಸ್ತಿಯನ್ನು ಪಡೆದುಕೊಂಡಿವೆ. ಪೈ ಅವರು ಕರ್ನಾಟಕ ಮಾನಸಿಕ ಆರೋಗ್ಯ ಕಾರ್ಯಪಡೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಬಹಳಷ್ಟು ಪುಸ್ತಕಗಳನ್ನು ಬರೆದಿದ್ದ ಅವರಿಗೆ ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಹಲವು ಗೌರವ ಸಂದಿದೆ.

Question 3

3.ಅಕ್ಟೋಬರ್ 2, 2016 ರಂದು ಈ ಕೆಳಗಿನ ಯಾವ ಜಿಲ್ಲೆಗಳನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಗಳೆಂದು ಘೋಷಿಸಲಾಗಿದೆ?

I) ಬೆಂಗಳೂರು

II) ಬೆಂಗಳೂರು ಗ್ರಾಮಾಂತರ

III) ಕೊಡಗು

IV) ದಕ್ಷಿಣ ಕನ್ನಡ

ಸರಿಯಾದ ಉತ್ತರವನ್ನು ಈ ಕೆಳಗೆ ನೀಡಿರುವ ಕೋಡ್ ಮೂಲಕ ಉತ್ತರಿಸಿ:

A
I, II & III
B
I, III & IV
C
I, II & IV
D
I, II, III & IV
Question 3 Explanation: 
I, II, III & IV:

ರಾಜ್ಯದ ಐದು ಜಿಲ್ಲೆಗಳು, 20 ತಾಲ್ಲೂಕ ಪಂಚಾಯತಿಗಳು ಮತ್ತು 1000 ಸಾವಿರ ಗ್ರಾಮ ಪಂಚಾಯತಿಗಳನ್ನು ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲಾಗಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಂತರ, ಕೊಡಗು, ಉಡುಪಿ ಮತ್ತು ದಕ್ಷಿಣ ಕನ್ನಡ ಬಯಲು ಬಹಿರ್ಸೆದೆಸೆ ಮುಕ್ತವೆಂದು ಘೋಷಿಸಲಾದ ಜಿಲ್ಲೆಗಳಾಗಿವೆ.

Question 4

4.ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ನೀಡುವ ವಯೋಶ್ರೇಷ್ಠ ಪ್ರಶಸ್ತಿ ಪಡೆದ ಕರ್ನಾಟಕದ ಶತಾಯುಷಿ ಯಾರು?

A
ಡಾ. ಹೊ.ಶ್ರೀನಿವಾಸಯ್ಯ
B
ಎಚ್ ಎಂ ರೇಣುಕ ಮಾತೆ
C
ಕೆ. ನಂಜುಂಡಯ್ಯ
D
ಕೃಷ್ಣ ಮಾಥುರ್
Question 4 Explanation: 
ಡಾ. ಹೊ.ಶ್ರೀನಿವಾಸಯ್ಯ:

ಶತಾಯುಷಿ ಹಾಗೂ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ.ಹೊ.ಶ್ರೀನಿವಾಸಯ್ಯ ರವರಿಗೆ ವಯೋಶ್ರೇಷ್ಠ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ನೀಡುವ ಪ್ರಶಸ್ತಿಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ರವರು ನವದೆಹಲಿಯಲ್ಲಿ ಪ್ರದಾನ ಮಾಡಿದರು.

Question 5

5.ಇವರಲ್ಲಿ ಯಾರು ಕರ್ನಾಟಕ ರಾಜ್ಯದ ಅಡ್ವೊಕೇಟ್ ಜನರಲ್ ಕಚೇರಿಗೆ ಸಂಬಂಧಿಸಿಲ್ಲ?

A
ಮಧುಸೂಧನ್ ಆರ್ ನಾಯಕ್
B
ಎ ಜಿ ಶಿವಣ್ಣ
C
ಎ ಎಸ್ ಪೊನ್ನಣ್ಣ
D
ಆತ್ಮಾರಾವ್ ನಾಡಕರ್ಣಿ
Question 5 Explanation: 
ಆತ್ಮಾರಾವ್ ನಾಡಕರ್ಣಿ:

ಮಧುಸೂಧನ್ ಆರ್ ನಾಯಕ್ ರವರು ರಾಜ್ಯದ ಈಗಿನ ಅಡ್ವೊಕೇಟ್ ಜನರಲ್. ಎ ಜಿ ಶಿವಣ್ಣ ಮತ್ತು ಎ ಎಸ್ ಪೊನ್ನಣ್ಣ ಅವರು ರಾಜ್ಯದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿದ್ದಾರೆ. ಆತ್ಮಾರಾವ್ ನಾಡಕರ್ಣಿ ಗೋವಾ ರಾಜ್ಯದ ಅಡ್ವೊಕೇಟ್ ಜನರಲ್.

Question 6

6.ಪ್ರಸ್ತಕ ಸಾಲಿನ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿಗೆ ಈ ಕೆಳಗಿನ ಯಾರನ್ನು ಆಯ್ಕೆಮಾಡಲಾಗಿದೆ?

A
ಪಂಡಿತ್ ವೆಂಕಟೇಶ್ ಕುಮಾರ್
B
ಪಂಡಿತ್ ಸೋಮನಾಥ ಮರಡೂರ
C
ಪಂಡಿತ್ ಚಂದ್ರಶೇಖರ್ ಗುರೂಜಿ
D
ಪಂಡಿತ್ ನಾರಯಣ್ ಸೊಮಾಜಿ
Question 6 Explanation: 
ಪಂಡಿತ್ ಸೋಮನಾಥ ಮರಡೂರ:

ಧಾರಾವಾಡದ ಪಂಡಿತ್ ಸೋಮನಾಥ್ ಮರಡೂರ ಅವರನ್ನು ಪ್ರಸ್ತಕ ಸಾಲಿನ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಪ್ರಶಸ್ತಿಯನ್ನು ಮೈಸೂರು ದಸರಾ ಸಂದರ್ಭದಲ್ಲಿ ನೀಡಲಾಗುವುದೆಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ತಿಳಿಸಿದ್ದಾರೆ. ಪಂಡಿತ್ ವೆಂಕಟೇಶ ಕುಮಾರ್ ನೇತೃತ್ವದ ಸಮಿತಿಯು ಪಂಡಿತ್ ಮರಡೂರ ಅವರ ಹೆಸರನ್ನು ಪ್ರಶಸ್ತಿಗೆ ಶಿಫಾರಸ್ಸು ಮಾಡಿತ್ತು. ಪ್ರಶಸ್ತಿಯು ರೂ 3 ಲಕ್ಷ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.

Question 7

7.ರಾಜ್ಯ ಸರ್ಕಾರದ ನೂತನ ಮುಖ್ಯ ಕಾರ್ಯದರ್ಶಿ ______?

A
ಉಪೇಂದ್ರ ತ್ರಿಪಾಠಿ
B
ಸುಭಾಷ್ ಚಂದ್ರ ಕುಂಟಿಯಾ
C
ಕೆ ಎಸ್ ರತ್ನಪ್ರಭ
D
ವಿಜಯ ಭಾಸ್ಕರ್
Question 7 Explanation: 
ಸುಭಾಷ್ ಚಂದ್ರ ಕುಂಟಿಯಾ:

ಹಿರಿಯ ಐಎಎಸ್ ಅಧಿಕಾರಿ ಸುಭಾಷ್ ಚಂದ್ರ ಕುಂಟಿಯಾ ಅವರು ರಾಜ್ಯದ ನೂತನ ಮುಖ್ಯಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ. ಕುಂಟಿಯಾ ಅವರು ನವೆಂಬರ್ 2017ರಲ್ಲಿ ನಿವೃತ್ತಿಯಾಗಲಿದ್ದು, ಒಟ್ಟು 13 ತಿಂಗಳ ಅವಧಿಗೆ ರಾಜ್ಯದ ಮುಖ್ಯಕಾರ್ಯದರ್ಶಿ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಹಾಲಿ ಮುಖ್ಯಕಾರ್ಯದರ್ಶಿ ಅರವಿಂದ್ ಜಾಧವ್ ಅವರು ಸೆಪ್ಟೆಂಬರ್ 30ರಂದು ನಿವೃತ್ತಿ ಹೊಂದಲಿದ್ದಾರೆ.

Question 8

8.ಕರ್ನಾಟಕದಲ್ಲಿ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವೇತನವನ್ನು ಪರಿಷ್ಕರಿಸಲು ರಚಿಸಿದ್ದ ಸಮಿತಿಯ ಅಧ್ಯಕ್ಷರು ಯಾರು?

A
ಕಮಲ್ ಪಂಥ್
B
ರಾಘವೇಂದ್ರ ಔರಾದಕರ
C
ಶಂಕರ್ ಬಿದರಿ
D
ಕೆಂಪಯ್ಯ
Question 8 Explanation: 
ರಾಘವೇಂದ್ರ ಔರಾದಕರ:

ರಾಜ್ಯದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವೇತನವನ್ನು ಪರಿಷ್ಕರಿಸಲು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರಾಘವೇಂದ್ರ ಔರಾದಕರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿಲಾಗಿತ್ತು. ಸಮಿತಿಯು ರಾಜ್ಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ವೇತನವನ್ನು ಶೇ 30 ರಿಂದ 35ರಷ್ಟು ಹೆಚ್ಚಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಮಿತಿಯ ಶಿಫಾರಸು ಆಧರಿಸಿ ವೇತನ ಪರಿಷ್ಕರಿಸಿದರೆ ಅಧಿಕಾರಿ ಮತ್ತು ಸಿಬ್ಬಂದಿಗೆ ರೂ 6,500 ರಿಂದ ರೂ 8,500 ರವರೆಗೆ ಹೆಚ್ಚಳವಾಗಲಿದೆ.

Question 9

9.ಇತ್ತೀಚೆಗೆ ನಿಧನರಾದ ಡಾ.ವಾಮನದತ್ತಾತ್ರೇಯ ಬೇಂದ್ರೆ ರವರ ಮೊದಲ ಕವನ ಸಂಕಲನ ಯಾವುದು?

A
ಅನಂತಧಾರೆ
B
ಸ್ಪಂದನ
C
ತೊದಲು
D
ಮುಗಿಲ ಮಲ್ಲಿಗೆ
Question 9 Explanation: 
ತೊದಲು:

ವರಕವಿ ದ. ರಾ. ಬೇಂದ್ರೆ ಅವರ ಪುತ್ರ ಡಾ. ವಾಮನದತ್ತಾತ್ರೇಯ ಬೇಂದ್ರೆ ನಿಧನರಾದರು. ಅವರಿಗೆ 81 ವರ್ಷ ವಯಸ್ಸಾಗಿತ್ತು. ವಾಮನದತ್ತಾತ್ರೇಯ ಬೇಂದ್ರೆ ಅವರು ಅತ್ಯುತ್ತಮ ಪ್ರಾಧ್ಯಾಪಕರೂ ಮತ್ತು ಸಾಹಿತಿಗಳಾಗಿದ್ದರು. ತೊದಲು” ಇದು ಇವರ ಮೊದಲ ಕವನ ಸಂಕಲನ, ನಂತರ ಅನಂತಧಾರೆ, ಸ್ಪಂದನ ಮೊದಲಾದವುಗಳನ್ನು ರಚಿಸಿದರು.

Question 10

10. ಈ ಕೆಳಗಿನ ಯಾರನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೀಡುವ ಮಹಾತ್ಮಾಗಾಂಧಿ ಸೇವಾ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ?

A
ಚನ್ನಮ್ಮ ಹಳ್ಳಿಕೇರಿ
B
ಸಾಲುಮರದ ತಿಮ್ಮಕ್ಕ
C
ಶನಿ ಮಹದೇವಪ್ಪ
D
ದೇವನೂರ ಮಹಾದೇವಾ
Question 10 Explanation: 
ಚನ್ನಮ್ಮ ಹಳ್ಳಿಕೇರಿ:

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೀಡುವ ಮಹಾತ್ಮಾಗಾಂಧಿ ಸೇವಾ ಪ್ರಶಸ್ತಿಗೆ ಚನ್ನಮ್ಮ ಹಳ್ಳಿಕೇರಿ ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿ ₹ 5 ಲಕ್ಷ ಮೊತ್ತವನ್ನು ಒಳಗೊಂಡಿದೆ. ಅ. 2 ರಂದು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಹಾವೇರಿ ಜಿಲ್ಲೆ ಹೊಸರಿತ್ತಿಯಲ್ಲಿ 1931ರಲ್ಲಿ ಜನಿಸಿದ ಚನ್ನಮ್ಮ ಅವರು, ಮಹಾತ್ಮಗಾಂಧಿಯವರ ಆದರ್ಶವನ್ನು ಅನುಸರಿಸುತ್ತಾ ಬಂದಿದ್ದಾರೆ. ಸ್ವಾತಂತ್ರ್ಯ ಹೋರಾಟದ ಕೇಂದ್ರವಾಗಿದ್ದ ಹೊಸರಿತ್ತಿಯಲ್ಲಿ ತಮ್ಮ ತಾತ ಗುದ್ಲಪ್ಪ ಹಳ್ಳಿಕೇರಿ ಸ್ಥಾಪಿಸಿದ್ದ ಗಾಂಧಿ ಆಶ್ರಮದೊಂದಿಗೆ ಒಡನಾಟ ಇಟ್ಟುಕೊಂಡು ಬೆಳೆದವರು.

There are 10 questions to complete.

6 Thoughts to “ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -14”

  1. ಸಂತೋಷ್ ಗೌಡರ

    ಧನ್ಯವಾದಗಳು ಸರ್

  2. CHANDRASHEKAR KA

    SUPER

  3. kiran vkiru

    its a very very useful to me

Leave a Comment

This site uses Akismet to reduce spam. Learn how your comment data is processed.