ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-2, 2016

Question 1

1.ಅಮೆರಿಕನ್ ಅಕಾಡೆಮಿ ಆಫ್ ಆಡಿಯಾಲಜಿ ನೀಡುವ “2016 ಕ್ಲಾಸ್ ಆಫ್ ದಿ ಜೆರ್ಗರ್ ಪ್ಯೂಚರ್ ಲೀಡರ್ ಆಫ್ ಆಡಿಯೋಲಾಜಿ” ಗೌರವಕ್ಕೆ ಪಾತ್ರರಾದ ಭಾರತೀಯ-ಅಮೆರಿಕನ್ ಪ್ರಾಧ್ಯಪಕ ಯಾರು?

A
ವಿನಯ ಮಂಚಯ್ಯ
B
ಪ್ರೀತಂ ಕುಲಕರ್ಣಿ
C
ರಾಜೀವ್ ಶೇಖರನ್
D
ಚಂದನ್ ಮಿಶ್ರ
Question 1 Explanation: 
ವಿನಯ ಮಂಚಯ್ಯ:

ಟೆಕ್ಸಾಸ್ ನ ಲಾಮರ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಪಕರಾಗಿರುವ ಭಾರತೀಯ ಅಮೆರಿಕನ್ ಪ್ರಾಧ್ಯಪಕ ಡಾ. ವಿನಯ ಮಂಚಯ್ಯ ರವರನ್ನು ಅಮೆರಿಕನ್ ಅಕಾಡೆಮಿ ಆಫ್ ಆಡಿಯಾಲಜಿ ನೀಡುವ “2016 ಕ್ಲಾಸ್ ಆಫ್ ದಿ ಜೆರ್ಗರ್ ಪ್ಯೂಚರ್ ಲೀಡರ್ ಆಫ್ ಆಡಿಯೋಲಾಜಿ” ಗೌರವಕ್ಕೆ ಆಯ್ಕೆಮಾಡಲಾಗಿದೆ (2016 class of the Jerger Future Leaders of Audiology). ಆಡಿಯಾಲಜಿ ಶ್ರವಣ, ಸಮತೋಲನ ಮತ್ತು ಸಂಬಂಧಿತ ಕಾಯಿಲೆಗಳನ್ನು ಅಧ್ಯಯನ ಮಾಡುವ ವಿಜ್ಞಾನದ ಒಂದು ಭಾಗವಾಗಿದೆ.

Question 2

2.ವಿಶ್ವಬ್ಯಾಂಕ್ ಮುನ್ನೋಟದ ಪ್ರಕಾರ 2017ರಲ್ಲಿ ಭಾರತದ ಒಟ್ಟು ಆಂತರಿಕ ಉತ್ಪಾದನೆ (ಜಿಡಿಪಿ) ಎಷ್ಟಿರಲಿದೆ?

A
ಶೇ 6.6%
B
ಶೇ 7.1%
C
ಶೇ 7.7%
D
ಶೇ 8.0%
Question 2 Explanation: 
ಶೇ 7.7%:

ಚೀನಾದ ಮಂದ ಆರ್ಥಿಕ ಪ್ರಗತಿ, ಅಭಿವೃದ್ಧಿ ಹೊಂದಿದ ದೇಶಗಳ ಆರ್ಥಿಕ ಉತ್ತೇಜನ ನೀತಿಯ ಬಗೆಗಿನ ಅನಿಶ್ಚಿತತೆ ಹಾಗೂ ಹಣ ರವಾನೆ ತಗ್ಗಿರುವುದು ಸೇರಿದಂತೆ ಇನ್ನೂ ಹಲವು ಬಾಹ್ಯ ಅಡೆತಡೆಗಳ ಹೊರತಾಗಿಯೂ ಭಾರತದ ಒಟ್ಟು ಆಂತರಿಕ ಉತ್ಪಾದನೆ (ಜಿಡಿಪಿ) 2016ರಲ್ಲಿ ಶೇ 7.6ರಷ್ಟು ಮತ್ತು 2017ರಲ್ಲಿ ಶೇ 7.7ರಷ್ಟು ಇರುವ ನಿರೀಕ್ಷೆ ಇದೆ ಎಂದು ವಿಶ್ವಬ್ಯಾಂಕ್ ತಿಳಿಸಿದೆ. ಕೃಷಿ ವಲಯದ ಚೇತರಿಕೆ, ಏಳನೇ ವೇತನ ಆಗೋಗ ಜಾರಿಯಿಂದ ಖರೀದಿ ಸಾಮರ್ಥ್ಯ ಹೆಚ್ಚಾಗಿರುವುದು, ಅಲ್ಪಾವಧಿಗೆ ಖಾಸಗಿ ಹೂಡಿಕೆ ಪ್ರಮಾಣದಲ್ಲಿ ಏರಿಕೆಯಾಗಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಜಾಗತಿಕ ಆರ್ಥಿಕ ಪ್ರಗತಿಯಲ್ಲಿ ದಕ್ಷಿಣ ಏಷ್ಯಾ ಪ್ರದೇಶವು ಪ್ರಮುಖ ಸ್ಥಾನ ಪಡೆದುಕೊಂಡಿದೆ. ಬಡತನ ನಿರ್ಮೂಲನೆ, ಆರೋಗ್ಯ, ಪೌಷ್ಟಿಕ ಆಹಾರ, ಶಿಕ್ಷಣ ಮತ್ತು ಲಿಂಗ ತಾರತಮ್ಯಗಳು ಭಾರತದ ಬೆಳವಣಿಗೆಗೆ ಎದುರಾಗಿರುವ ಸವಾಲುಗಳಾಗಿವೆ ಎಂದು ‘ಸೌತ್‌ ಏಷ್ಯಾ ಇಕನಾಮಿಕ್‌ ಫೋಕಸ್‌’ ವರದಿಯಲ್ಲಿ ತಿಳಿಸಲಾಗಿದೆ.

Question 3

3.ಭಾರತ ಕಾನೂನು ಆಯೋಗದ ಪೂರ್ಣವಾಧಿ ಸದಸ್ಯರಾಗಿ ಇತ್ತೀಚೆಗೆ ಯಾರು ನೇಮಕಗೊಂಡರು?

A
ಬಾಲಾಜಿ ಶರವಣನ್
B
ಎಸ್ ಸಿವಕುಮಾರ್
C
ಗೌರವ್ ಕುಮಾರ್
D
ಪ್ರಶಾಂತ್ ಭೂಷಣ್
Question 3 Explanation: 
ಎಸ್ ಸಿವಕುಮಾರ್:

21ನೇ ಭಾರತ ಕಾನೂನು ಆಯೋಗದ ಪೂರ್ಣಾವಧಿ ಸದಸ್ಯರಾಗಿ ಎಸ್ ಶಿವಕುಮಾರ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಕೇರಳ ಮೂಲದವರಾದ ಎಸ್ ಸಿವಕುಮಾರ್ ಅವರು ಇಂಡಿಯನ್ ಲಾ ಇನ್ಸ್ ಟಿಟ್ಯೂಟ್, ದೆಹಲಿಯಲ್ಲಿ ಪ್ರಾಧ್ಯಪಕರಾಗಿದ್ದಾರೆ. ಕಾನೂನು ಕುರಿತಾದ ಹಲವಾರು ಪುಸ್ತಕಗಳನ್ನು ಇವರು ಬರೆದಿರುವರು. ಆಡಳಿತಾತ್ಮಕ ಕಾನೂನು ಮತ್ತು ಮಾಧ್ಯಮ ಕಾನೂನಿನಲ್ಲಿ ಪರಿಣಿತಿ ಹೊಂದಿರುವ ಇವರಿಗೆ 2008ರಲ್ಲಿ ರಾಷ್ಟ್ರೀಯ ಕಾನೂನು ಪ್ರಶಸ್ತಿ ಸಂದಿದೆ. ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಾಧೀಶರಾದ ಬಲ್ಬೀರ್ ಸಿಂಗ್ ಚೌಹಣ್ ರವರು 21ನೇ ಕಾನೂನು ಆಯೋಗದ ಅಧ್ಯಕ್ಷರಾಗಿದ್ದಾರೆ.

Question 4

4.ಈ ಕೆಳಗಿನ ರಾಷ್ಟ್ರಗಳನ್ನು ಗಮನಿಸಿ:

I) ಭಾರತ

II) ಜರ್ಮನಿ

III) ಜಪಾನ್

IV) ಬ್ರೆಜಿಲ್

ಮೇಲಿನ ಯಾವ ರಾಷ್ಟ್ರಗಳು ಜಿ-4 ಸದಸ್ಯ ರಾಷ್ಟ್ರಗಳಾಗಿವೆ?

A
I, II & III
B
II, III & IV
C
I, III & IV
D
I, II, III & IV
Question 4 Explanation: 
I, II, III & IV:

ಭಾರತ, ಜರ್ಮನಿ, ಜಪಾನ್ ಮತ್ತು ಬ್ರೆಜಿಲ್ ಜಿ-4 ಸದಸ್ಯ ರಾಷ್ಟ್ರಗಳಾಗಿವೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಖಾಯಂ ಸದಸ್ಯ ಸ್ಥಾನವನ್ನು ಪಡೆದುಕೊಳ್ಳಲು ಪರಸ್ಪರ ಸಹಕರಿಸುವುದು ಜಿ-4 ರಾಷ್ಟ್ರಗಳ ಗುರಿಯಾಗಿದೆ.

Question 5

5.68ನೇ ಗಣರಾಜ್ಯೋತ್ಸವ ದಿನದ ಮುಖ್ಯ ಅತಿಥಿಯಾಗಿ ಯಾರು ಭಾಗವಹಿಸಲಿದ್ದಾರೆ?

A
ವ್ಲಾದಿಮಿರ್ ಪುಟಿನ್
B
ಶೇಕ್ ಮೊಹಮದ್ ಬಿನ್ ಜಾಯೆದ್ ಅಲ್ ನಹ್ಯಾನ್
C
ಶೇಕ್ ಅಬ್ದುಲ್ಲಾ ಹುಸೇಲ್ ಖಾನ್
D
ಮ್ಯಾಕ್ಲಂ ಟರ್ನ್ ಬುಲ್
Question 5 Explanation: 
ಶೇಕ್ ಮೊಹಮದ್ ಬಿನ್ ಜಾಯೆದ್ ಅಲ್ ನಹ್ಯಾನ್:

ಅಬುಧಾಬಿಯ ಯುವರಾಜ ಶೇಕ್ ಮೊಹಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಜನವರಿ 26, 2017 ರಂದು ನಡೆಯಲಿರುವ 68ನೇ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಭಾರತದ ಆಹ್ವಾನವನ್ನು ಅಬುಧಾನಿ ಯುವರಾಜ ಒಪ್ಪಿರುವುದಾಗಿ ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ರವರು ತಿಳಿಸಿದ್ದಾರೆ.

Question 6

6.ಇತ್ತೀಚೆಗೆ ನಿಧನರಾದ “ಯೂಸಫ್ ಅರಕ್ಕಲ್” ರವರು ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ?

A
ಚಿತ್ರಕಲೆ
B
ಸಾಹಿತ್ಯ
C
ಸಿನಿಮಾ
D
ಪರಿಸರ ಸಂರಕ್ಷಣೆ
Question 6 Explanation: 
ಚಿತ್ರಕಲೆ:

ಹಿರಿಯ ಚಿತ್ರ ಕಲಾವಿದ ಯೂಸುಫ್ ಅರಕ್ಕಲ್ ಬೆಂಗಳೂರಿನ ತಮ್ಮ ನಿವಾಸದಲ್ಲಿ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಕೇರಳದ ಚವಕ್ಕಾಡ್ ಮೂಲದವರಾದರೂ ಯೂಸುಫ್ ಅವರು ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ವಿದ್ಯಾಭ್ಯಾಸ ಮಾಡಿ, ಬೆಂಗಳೂರಿನಲ್ಲೇ ತಮ್ಮ ವೃತ್ತಿ ಬದುಕು ಕಂಡುಕೊಂಡು ಅಂತಾರಾಷ್ಟ್ರೀಯ ಮಟ್ಟಕ್ಕೇರಿದರು. ದೇಶದ ನವ್ಯ ಕಲಾವಿದರ ಸಾಲಿನಲ್ಲಿ ಅಗ್ರಪಂಕ್ತಿಯ ಕಲಾವಿದರಾಗಿದ್ದರು. ಫ್ಲಾರೆನ್ಸ್ ಬಿಯನ್ನಾಲೆಯ ಪ್ರತಿಷ್ಠಿತ ಲಾರೆನ್ಜೋ ಡೆ ಮೆಡಿಸಿ ಸ್ವರ್ಣ ಪದಕ ಗೌರವ ಪಡೆದರು. ರೇಖಾಚಿತ್ರ, ವರ್ಣಚಿತ್ರ, ಶಿಲ್ಪ, ಮ್ಯೂರಲ್, ಮುದ್ರಣ ಕಲೆ ಮತ್ತು ತಮ್ಮದೇ ಶೈಲಿಯ ಛಾಪು ಮೂಡಿಸಿದ್ದರು. ಯೂಸುಫ್ ಅವರಿಗೆ ಎರಡು ಬಾರಿ ಕರ್ನಾಟಕ ಲಲಿತಕಲಾ ಅಕಾಡೆಮಿ ಪ್ರಶಸ್ತಿ, 1983ರಲ್ಲಿ ರಾಷ್ಟ್ರೀಯ ಪ್ರಶಸ್ತಿ, 1986ರಲ್ಲಿ ಢಾಕಾದಲ್ಲಿ ನಡೆದ ಬಿಯೆನ್ನಾಲೆ ಪ್ರದರ್ಶನದಲ್ಲಿ ವಿಶೇಷ ಪ್ರಶಸ್ತಿ ಲಭಿಸಿತ್ತು.

Question 7

7.ಅಂತಾರಾಷ್ಟ್ರೀಯ ಹಿರಿಯ ನಾಗರೀಕರ ದಿನವನ್ನು ____ ರಂದು ಆಚರಿಸಲಾಗುತ್ತದೆ. ಬಿಟ್ಟ ಜಾಗವನ್ನು ಕೆಳಗೆ ನೀಡಿರುವ ಸರಿಯಾದ ಉತ್ತರದಿಂದ ತುಂಬಿ.

A
ಸೆಪ್ಟೆಂಬರ್ 30
B
ಅಕ್ಟೋಬರ್ 1
C
ಅಕ್ಟೋಬರ್ 2
D
ಅಕ್ಟೋಬರ್ 3
Question 7 Explanation: 
ಅಕ್ಟೋಬರ್ 1:

ವಿಶ್ವ ಹಿರಿಯ ನಾಗರೀಕರ ದಿನವನ್ನು ಪ್ರತಿ ವರ್ಷ ಅಕ್ಟೋಬರ್ 1 ರಂದು ಆಚರಿಸಲಾಗುತ್ತದೆ. ಡಿಸೆಂಬರ್ 14, 1990 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 1ನೇ ಅಕ್ಟೋಬರ್ ಅನ್ನು ಅಂತಾರಾಷ್ಟ್ರೀಯ ಹಿರಿಯ ನಾಗರೀಕರ ದಿನವನ್ನಾಗಿ ಆಚರಲಿಸಲು ನಿರ್ಣಯ ಕೈಗೊಳ್ಳಲಾಯಿತು. 60 ವರ್ಷ ದಾಟಿದ ವ್ಯಕ್ತಿಗಳನ್ನು ಹಿರಿಯ ನಾಗರಿಕರೆಂದು ಪರಿಗಣಿಸಲಾಗುತ್ತಿದೆ. ಇತ್ತೀಚಿನ ಜನಗಣತಿ ವರದಿ ಪ್ರಕಾರ ಭಾರತದ ಒಟ್ಟು ಜನಸಂಖ್ಯೆಯಲ್ಲಿ 63 ಕೋಟಿ ಪುರುಷರು, ಹಾಗೂ 58 ಕೋಟಿ ಮಹಿಳೆಯರಿದ್ದಾರೆ. ಅವರಲ್ಲಿ 15 ಕೋಟಿ ಹಿರಿಯ ನಾಗರಿಕರು. Take A Stand Against Ageism ಈ ವರ್ಷದ ಹಿರಿಯರ ದಿನದ ಧ್ಯೇಯವಾಕ್ಯ.

Question 8

8.ಈ ಕೆಳಗಿನ ಯಾವುದು ದಕ್ಷಿಣ ಅಮೆರಿಕಾ ಖಂಡದಲ್ಲಿ ಅತ್ಯಂತ ಚಿಕ್ಕ ದೇಶ ಎನಿಸಿದೆ?

A
ಸುರಿನಾಮ್
B
ಪೆರು
C
ಕೊಲಂಬಿಯ
D
ಅರ್ಜೀಂಟಿನಾ
Question 8 Explanation: 
ಸುರಿನಾಮ್ :

ದಕ್ಷಿಣ ಅಮೆರಿಕ ಖಂಡದ ಅತಿ ಚಿಕ್ಕ ದೇಶ. ದಕ್ಷಿಣ ಅಮೆರಿಕಾ ಖಂಡದ ಉತ್ತರ ಭಾಗದಲ್ಲಿರುವ ಸುರಿನಾಮ್ ವೀಸ್ತೀರ್ಣ 63,000 ಚದರ ಕಿ.ಮೀಗಳಷ್ಟಿದ್ದು, ಅಮೆರಿಕಾದ ಜಿರ್ಜಾಯ ರಾಜ್ಯಕ್ಕಿಂತ ಸ್ವಲ್ಪ ದೊಡ್ಡದಿದೆ.

Question 9

9.ಇತ್ತೀಚೆಗೆ ಯಾವ ದೇಶದ ಕರೆನ್ಸಿ ಅಂತಾರಾಷ್ಟ್ರೀಯ ಹಣಕಾಸು ನಿಧಿಯ (IMF) ಮೀಸಲು ಕರೆನ್ಸಿ ಗುಂಪಿಗೆ ಸೇರ್ಪಡೆಗೊಂಡಿದೆ?

A
ಭಾರತದ ರೂಪಾಯಿ
B
ಚೀನಾದ ಯುವಾನ್
C
ಕುವೈತಿ ದಿನಾರ್
D
ರಷ್ಯಾದ ರುಬಲ್
Question 9 Explanation: 
ಚೀನಾದ ಯುವಾನ್:

ಅಂತಾರಾಷ್ಟ್ರೀಯ ಹಣಕಾಸು ನಿಧಿಯ ಮೀಸಲು ಕರೆನ್ಸಿ ಗುಂಪಿಗೆ ಚೀನಾದ ಯುವಾನ್ ಕರೆನ್ಸಿ ಅಧಿಕೃತವಾಗಿ ಸೇರ್ಪಡೆಗೊಂಡಿತು. ಅಮೆರಿಕದ ಡಾಲರ್, ಯುರೋಪಿಯನ್ ಒಕ್ಕೂಟದ ಯುರೋ, ಬ್ರಿಟನ್ನ ಪೌಂಡ್, ಜಪಾನ್ನ ಯೆನ್ ನಂತರ ಈಗ ಚೀನಾದ ಯುವಾನ್ ಅಂತಾರಾಷ್ಟ್ರೀಯ ಕರೆನ್ಸಿ ಸ್ಥಾನ ಪಡೆದಂತಾಗಿದೆ. ಸ್ಥಿರ ಹಣಕಾಸು ಪರಿಸ್ಥಿತಿ ಹೊಂದಿರುವ ಹಾಗೂ ವ್ಯಾಪಕ ವಿದೇಶಿ ವಹಿವಾಟು ನಡೆಸುವ ದೇಶಗಳ ಕರೆನ್ಸಿಯನ್ನು ಐಎಂಎಫ್ ಮೀಸಲು ಕರೆನ್ಸಿಯಾಗಿ ಪರಿಗಣಿಸುತ್ತದೆ. ಈ ಸ್ಥಾನಮಾನ ಪಡೆದ ದೇಶದ ಕೇಂದ್ರ ಬ್ಯಾಂಕ್, ಪ್ರಮುಖ ಹಣಕಾಸು ಸಂಸ್ಥೆಗಳು ನಿಗದಿತ ಮೊತ್ತದ ಅಂತಾರಾಷ್ಟ್ರೀಯ ಕರೆನ್ಸಿಯನ್ನು ಮೀಸಲಾಗಿ ಇಡಬೇಕಾಗುತ್ತದೆ. ಇದರ ಆಧಾರದ ಮೇಲೆ ಮೀಸಲು ಕರೆನ್ಸಿಯ ಮೌಲ್ಯ ನಿಗದಿಯಾಗುತ್ತದೆ. ಪ್ರಮುಖವಾಗಿ ಚಿನ್ನ, ತೈಲೋತ್ಪನ್ನಗಳ ಬೆಲೆ ನಿಗದಿಪಡಿಸುವಾಗ, ಮೀಸಲಿಟ್ಟ ಅಂತಾರಾಷ್ಟ್ರೀಯ ಕರೆನ್ಸಿಯ ಪ್ರಮಾಣವನ್ನು ಪರಿಗಣಿಸಲಾಗುವುದು.

Question 10

10.ಈ ಕೆಳಗಿನ ಯಾರು ಇತ್ತೀಚೆಗೆ ರಚಿಸಲಾದ “ಹಣಕಾಸು ನೀತಿ ಸಮಿತಿ (ಎಂಪಿಸಿ)”ಯ ಅಧ್ಯಕ್ಷರಾಗಿರುತ್ತಾರೆ?

A
ಹಣಕಾಸು ಸಚಿವರು
B
ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್
C
ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರರು
D
ಪ್ರಧಾನ ಮಂತ್ರಿ
Question 10 Explanation: 
ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್:

ಆರು ಜನ ಸದಸ್ಯರನ್ನು ಒಳಗೊಂಡಿರುವ ಹಣಕಾಸು ನೀತಿ ಸಮಿತಿಯನ್ನು ರಚಿಸಿ ಕೇಂದ್ರ ಸರ್ಕಾರ ಅಧಿಕೃತ ಸೂಚನೆಯನ್ನು ಹೊರಡಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಕಾಯಿದೆ-1934ರ 45ZB ಪ್ರಕರಣದಡಿ ಗೊತ್ತುಪಡಿಸಲಾದ ಅಧಿಕಾರವನ್ನು ಬಳಸಿ ಕೇಂದ್ರ ಹಣಕಾಸು ಸಚಿವರು ಈ ಅಧಿಸೂಚನೆಯನ್ನು ಹೊರಡಿಸಿದ್ದಾರೆ. ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಈ ಸಮಿತಿಯ ಅಧ್ಯಕ್ಷರಾಗಿದ್ದಾರೆ.

There are 10 questions to complete.

[button link=”http://www.karunaduexams.com/wp-content/uploads/2016/10/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಅಕ್ಟೋಬರ್-2.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

Leave a Comment

This site uses Akismet to reduce spam. Learn how your comment data is processed.