ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-5, 2016

Question 1

1.2016 ವಿಶ್ವ ಸುಸ್ಥಿರ ಅಭಿವೃದ್ದಿ ಶೃಂಗಸಭೆ (World Sustainable Development Summit) ಯಾವ ದೇಶದಲ್ಲಿ ಇತ್ತೀಚೆಗೆ ಆರಂಭಗೊಂಡಿತು?

A
ಭಾರತ
B
ಚೀನಾ
C
ಜಪಾನ್
D
ದಕ್ಷಿಣ ಕೊರಿಯ
Question 1 Explanation: 
ಭಾರತ:

ವಿಶ್ವ ಸುಸ್ಥಿರ ಅಭಿವೃದ್ದಿ ಶೃಂಗಸಭೆ ನವದೆಹಲಿಯಲ್ಲಿ ಅಕ್ಟೋಬರ್ 5 ರಂದು ಆರಂಭಗೊಂಡಿದೆ. ರಾಷ್ಟ್ರಪತಿ ಪ್ರಣಭ್ ಮುಖರ್ಜಿ ಅವರು ಈ ಶೃಂಗಸಭೆಗೆ ಚಾಲನೆ ನೀಡಿದರು. ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಶೃಂಗಸಭೆಯನ್ನು “ದಿ ಎನರ್ಜಿ ಅಂಡ್ ರಿಸೋರ್ಸ್ ಇನ್ಸ್ಟಿಟ್ಯೂಟ್ (TERI) ಆಯೋಜಿಸುತ್ತಿದೆ. ಸುಸ್ಥಿರ ಅಭಿವೃದ್ದಿ ಗುರಿಗಳನ್ನು ಅಳವಡಿಸಿಕೊಳ್ಳಲು ಮತ್ತು ಪ್ಯಾರಿಸ್ ಹವಾಮಾನ ಒಪ್ಪಂದಕ್ಕೆ ಸಹಿ ಹಾಕಲು ಈ ಶೃಂಗಸಭೆ ಜಾಗತಿಕ ಮಟ್ಟದಲ್ಲಿ ವೇದಿಕೆಯಾಗಲಿದೆ. Beyond 2015: People, Planet and Progress” ಈ ಶೃಂಗಸಭೆಯ ಥೀಮ್ ಆಗಿದೆ.

Question 2

2. ಈ ಕೆಳಗಿನ ಯಾವ ರಾಷ್ಟ್ರಗಳೊಂದಿಗೆ ಭಾರತ ನಾಗರೀಕ ಪರಮಾಣು ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದೆ?

I) ಅಮೆರಿಕ

II) ಕೆನಡ

III) ದಕ್ಷಿಣ ಕೊರಿಯ

IV) ಜಪಾನ್

ಕೆಳಗೆ ನೀಡಿರುವ ಕೋಡ್ ಮೂಲಕ ಸರಿಯಾದ ಉತ್ತರವನ್ನು ಗುರುತಿಸಿ:

A
I, II & III
B
II, III & IV
C
I, III & IV
D
I, II, III & IV
Question 2 Explanation: 
I, II & III:

ಭಾರತ ಇದುವರೆಗೆ ಒಟ್ಟು 11 ರಾಷ್ಟ್ರಗಳೊಂದಿಗೆ ನಾಗರೀಕ ಪರಮಾಣು ಸಹಕಾರ ಒಪ್ಪಂದಕ್ಕೆ ಸಹಿಹಾಕಿದೆ. ವಿಶ್ವದ ಪ್ರಮುಖ ರಾಷ್ಟ್ರಗಳಾದ ಅಮೆರಿಕ, ರಷ್ಯಾ, ಕೆನಡ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಕೊರಿಯಾ ಜೊತೆ ಭಾರತ ಈ ಒಪ್ಪಂದಕ್ಕೆ ಸಹಿ ಹಾಕಿದೆ. ಸದ್ಯ ಜಪಾನ್ ಜೊತೆ ನಾಗರೀಕ ಪರಮಾಣು ಒಪ್ಪಂದಕ್ಕೆ ಸಹಿ ಹಾಕುವ ಕುರಿತ ಮಾತುಕತೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಜಪಾನ್ ಜೊತೆ ಈ ಒಪ್ಪಂದಕ್ಕೆ ಸಹಿ ಹಾಕುವ ವಿಶ್ವಾಸವನ್ನು ಭಾರತ ಹೊಂದಿದೆ.

Question 3

3.ಆನೆಗಳ ಸಂಶೋಧನೆಗಾಗಿ ಫ್ರಾನ್ಸ್ ಸರ್ಕಾರದಿಂದ “ನೈಟ್ ಇನ್ ದಿ ನ್ಯಾಷನಲ್ ಆರ್ಡರ್ ಆಫ್ ಮೆರಿಟ್” ಗೌರವ ಪಡೆದಿಕೊಂಡಿರುವ ಭಾರತೀಯ ಮಹಿಳೆ ಯಾರು?

A
ಶರ್ಮಿಳ ಠಾಗೋರ್
B
ಪ್ರಜ್ಞಾ ಚೌತ
C
ರಾಧ ಬಿನು
D
ರೂಪ ಐಯಂಗರ್
Question 3 Explanation: 
ಪ್ರಜ್ಞಾ ಚೌತ:

ಸಿನಿಮಾ ನಿರ್ಮಾಪಕಿ ಮತ್ತು ಆನೆಗಳ ಸಂಶೋಧಕಿ ಪ್ರಜ್ಞಾ ಚೌತಗೆ ಫ್ರಾನ್ಸ್ ಸರ್ಕಾರದ ಅತ್ಯುತ್ತಮ ನಾಗರೀಕ ಪ್ರಶಸ್ತಿಗಳಲ್ಲಿ ಒಂದಾದ “ನೈಟ್ ಇನ್ ದಿ ನ್ಯಾಷನಲ್ ಆರ್ಡರ್ ಆಫ್ ಮೆರಿಟ್” ಗೌರವ ಸಂದಿದೆ. ಏಷ್ಯಾ ಆನೆಗಳ ಕುರಿತಾಗಿ ಇವರು ನಡೆಸುತ್ತಿರುವ ಸಂಶೋಧನೆಗಾಗಿ ಈ ಗೌರವಕ್ಕೆ ಆಯ್ಕೆಮಾಡಲಾಗಿದೆ. ಇತ್ತೀಚೆಗಷ್ಟೇ ಫ್ರಾನ್ಸ್ ಸರ್ಕಾರ ನೈಟ್ ಹುಡ್ ಗೌರವವನ್ನು ಕಿರಣ್ ಮಜುಂಧರ್ ಷಾ ಮತ್ತು ತಮಿಳು ನಟ ಕಮಲ್ ಹಾಸನ್ ಅವರಿಗೆ ನೀಡಿತ್ತು. ಈ ಸಾಲಿಗೆ ಈಗ ಚೌತ ರವರು ಸೇರ್ಪಡೆಗೊಂಡಿದ್ದಾರೆ. ಪ್ರಜ್ಞಾ ಅವರು ಆನೆ ಮನೆ ಫೌಂಡೇಷನ್ ಸಂಸ್ಥಾಪಕಿ. ಸುಮಾರು 16 ವರ್ಷಗಳಿಂದ ಈ ಫೌಂಡೇಷನ್ ಆನೆಗಳ ಕುರಿತಾಗಿ ಸಂರಕ್ಷಣೆ ಮತ್ತು ಸಂಶೋಧನೆ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದೆ.

Question 4

4.ಈ ಕೆಳಗಿನ ಯಾವ ದೇಶ 2016-ವಿಪತ್ತು ಅಪಾಯ ತಗ್ಗಿಸುವ ಕುರಿತಾದ ಏಷ್ಯಾ ಸಚಿವರುಗಳ ಸಮ್ಮೇಳನ (Asian Ministerial Conference on Disaster Risk Reduction (AMCDRR)ದ ಅತಿಥ್ಯವಹಿಸಲಿದೆ?

A
ಭಾರತ
B
ಪಾಕಿಸ್ತಾನ
C
ಶ್ರೀಲಂಕಾ
D
ಬಾಂಗ್ಲದೇಶ
Question 4 Explanation: 
ಭಾರತ:

2016-ವಿಪತ್ತು ಅಪಾಯ ತಗ್ಗಿಸುವ ಕುರಿತಾದ ಏಷ್ಯಾ ಸಚಿವರುಗಳ ಸಮ್ಮೇಳನವನ್ನು ಭಾರತ ಸರ್ಕಾರ ಆಯೋಜಿಸುತ್ತಿದ್ದು, ನವದೆಹಲಿಯಲ್ಲಿ ನವೆಂಬರ್ 2-3 ರಂದು ನಡೆಯಲಿದೆ. ಪ್ರಧಾನಿ ಮೋದಿ ಅವರು ಈ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ವಿಪತ್ತು ಅಪಾಯ ತಗ್ಗಿಸುವ ವಿಶ್ವಸಂಸ್ಥೆ ಕಚೇರಿಯ ಸಹಯೋಜನೆಯೊಂದಿಗೆ ಕೇಂದ್ರ ಸರ್ಕಾರ ಈ ಸಮ್ಮೇಳನವನ್ನು ಹಮ್ಮಿಕೊಳ್ಳುತ್ತಿದೆ.

Question 5

5.ಈ ಕೆಳಗಿನ ಯಾವ ಮರುಭೂಮಿ “ನೈಟ್ರೈಟ್ (Nitrate)” ಲಭ್ಯತೆಗೆ ಹೆಸರು ವಾಸಿಯಾಗಿದೆ?

A
ಅಟಕಾಮಾ
B
ಗೋಬಿ
C
ಸಹರ
D
ಥಾರ್
Question 5 Explanation: 
ಅಟಕಾಮಾ ಮರುಭೂಮಿ :

1940ರ ಅವಧಿಯ ವರೆಗೆ ವಿಶ್ವದ ಅತಿದೊಡ್ಡ ಸೋಡಿಯಂ ನೈಟ್ರೈಟ್ ಅಗರವೆಂದು ಪ್ರಸಿದ್ದಿ ಹೊಂದಿತ್ತು. ನೈಟ್ರೈಟ್ ಅಲ್ಲದೇ ತಾಮ್ರ ಮತ್ತು ಇತರೆ ಖನಿಜಗಳು ಸಹ ಅಟಕಾಮಾದಲ್ಲಿ ಹೇರಳವಾಗಿ ದೊರೆಯುತ್ತವೆ. ಅಟಕಾಮಾ ಮರಭೂಮಿ ದಕ್ಷಿಣ ಅಮೆರಿಕಾದಲ್ಲಿದೆ. ಇದು ವಿಶ್ವದ ಅತ್ಯಂತ ಒಣ ಮರುಭೂಮಿಯಾಗಿದೆ.

Question 6

6.ಸೀಮೆಎಣ್ಣೆ ವಿತರಣೆಯಡಿ ನೇರ ನಗದು ವರ್ಗಾವಣೆ ಯೋಜನೆ ಜಾರಿಗೆ ತಂದ ಮೊದಲ ರಾಜ್ಯ ಯಾವುದು?

A
ಗುಜರಾತ್
B
ರಾಜಸ್ತಾನ
C
ಜಾರ್ಖಂಡ್
D
ಕೇರಳ
Question 6 Explanation: 
ಜಾರ್ಖಂಡ್:

ಸೀಮೆಎಣ್ಣೆ ವಿತರಣೆಯಡಿ ನೇರ ನಗದು ವರ್ಗಾವಣೆಯನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯವೆಂಬ ಖ್ಯಾತಿಗೆ ಜಾರ್ಖಂಡ್ ಪಾತ್ರವಾಗಿದೆ. ಜಾರ್ಖಂಡ್ ನ ಛತ್ರ, ಹಜಾರಿಬಾಗ್, ಖುಂತಿ ಮತ್ತು ಜಮ್ತರ ನಾಲ್ಕು ಜಿಲ್ಲೆಗಳಲ್ಲಿ ನೇರ ನಗದು ವರ್ಗಾವಣೆ ಯೋಜನೆಯನ್ನು ಅಕ್ಟೋಬರ್1, 2017 ರಿಂದ ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಸೀಮೆಎಣ್ಣೆಯನ್ನು ಸಬ್ಸಿಡಿ ರಹಿತ ದರದಲ್ಲಿ ಮಾರಲಾಗುವುದು. ಸಬ್ಸಿಡಿ ಹಣವನ್ನು ನೇರವಾಗಿ ಗ್ರಾಹಕರ ಬ್ಯಾಂಕ್ ಖಾತೆಗೆ ಜಮೆ

Question 7

7.2016 ಗೂಗಲ್ ಸೈನ್ಸ್ ಫೇರ್ ನಲ್ಲಿ ಪ್ರಶಸ್ತಿ ಗೆದ್ದ ಭಾರತೀಯ ಮೂಲದ ವಿದ್ಯಾರ್ಥಿ ಯಾರು?

A
ಸ್ಮಿತ ಚಂದ್ರನ್
B
ಕೈರಾ ನಿರ್ಗಿನ್
C
ಮಧುರ ಕಮರ್ಕರ್
D
ಸ್ವರ್ಣ ಮಧುಕರ್
Question 7 Explanation: 
ಕೈರಾ ನಿರ್ಗಿನ್:

ಭಾರತೀಯ ಮೂಲದ ದಕ್ಷಿಣ ಆಫ್ರಿಕಾದ ಕೈರಾ ನಿರ್ಗಿನ್ ಅವರು ಅಮೆರಿಕಾದಲ್ಲಿ ನಡೆದ ಗೂಗಲ್ ಸೈನ್ಸ್ ಫೇರ್ ನಲ್ಲಿ $50,000 ವಿದ್ಯಾರ್ಥಿ ವೇತನವನ್ನು ಗೆದ್ದಿದ್ದಾರೆ. ಕಿತ್ತಳೆ ಸಿಪ್ಪೆಯನ್ನು ಬಳಸಿ ಮಣ್ಣಿನ ತೇವಾಂಶವನ್ನು ಹಿಡಿದಿಡುವ ಅಗ್ಗದ ಪದಾರ್ಥವನ್ನು ಅನ್ವೇಷಣೆ ಮಾಡಿರುವುದಕ್ಕಾಗಿ ಕೈರಾ ಅವರಿಗೆ ಪ್ರಶಸ್ತಿಯನ್ನು ನೀಡಲಾಗಿದೆ. ಕೈರಾ ಅವರು ಸೇಂಟ್ ಮಾರ್ಟಿನ್ ಖಾಸಗಿ ಶಾಲೆಯಲ್ಲಿ 11ನೇ ತರಗತಿಯ ವಿದ್ಯಾರ್ಥಿ.

Question 8

8.ಆಲ್ಫ್ಸ್ ಪರ್ವತವು ಈ ರಾಷ್ಟ್ರಗಳಲ್ಲಿ ಹರಡಿಕೊಂಡಿದೆ ________?

A
ಫ್ರಾನ್ಸ್, ಸ್ವಿಟ್ಜರ್ಲ್ಯಾಂಡ್, ಇಟಲಿ, ರೊಮನಿಯ
B
ಫ್ರಾನ್ಸ್, ಸ್ವಿಟ್ಜರ್ಲ್ಯಾಂಡ್, ಇಟಲಿ, ಆಸ್ಟ್ರೀಯಾ
C
ಫ್ರಾನ್ಸ್, ಸ್ವಿಟ್ಜರ್ಲ್ಯಾಂಡ್, ಇಟಲಿ, ಸ್ಪೇನ್
D
ಫ್ರಾನ್ಸ್, ಸ್ವಿಟ್ಜರ್ಲ್ಯಾಂಡ್, ಇಟಲಿ, ಬೆಲ್ಜಿಯಂ
Question 8 Explanation: 
ಫ್ರಾನ್ಸ್, ಸ್ವಿಟ್ಜರ್ಲ್ಯಾಂಡ್, ಇಟಲಿ, ಆಸ್ಟ್ರೀಯಾ:

ಆಲ್ಫ್ಸ್ ಪರ್ವತ ಯುರೋಪ್ ನ ಅತಿ ಎತ್ತರದ ಮತ್ತು ವ್ಯಾಪಕವಾಗಿ ಹರಡಿಕೊಂಡಿರುವ ಪರ್ವತ ಶ್ರೇಣಿ. ಸರಿಸುಮಾರು 1200 ಕಿ.ಮೀ ಉದ್ದವಿರುವ ಈ ಪರ್ವತ ಶ್ರೇಣಿಯು ಯುರೋಪ್ನ ಎಂಟು ರಾಷ್ಟ್ರಗಳಾದ ಫ್ರಾನ್ಸ್, ಸ್ವಿಟ್ಜರ್ಲ್ಯಾಂಡ್, ಇಟಲಿ, ಆಸ್ಟ್ರೀಯಾ, ಜರ್ಮನಿ, ಇಟಲಿ, ಮೊನಕೊ ಮತ್ತು ಸ್ಲೊವೆನಿಯ ಹರಡಿಕೊಂಡಿದೆ.

Question 9

9.ರಸಾಯನಶಾಸ್ತ್ರ ವಿಭಾಗದಲ್ಲಿ 2016 ನೊಬೆಲ್ ಪ್ರಶಸ್ತಿಯನ್ನು ಮೂವರು ವಿಜ್ಞಾನಿಗಳಿಗೆ ನೀಡಲಾಗಿದೆ. ಈ ಕೆಳಗಿನವರುಗಳಲ್ಲಿ ಪ್ರಶಸ್ತಿ ಪಡೆದಿಲ್ಲದವರನ್ನು ಗುರುತಿಸಿ?

A
ಜೀನ್ –ಪಿಯರ್ರೆ ಸೌವಾಜ್
B
ಜೆ. ಫ್ರೇಸರ್ ಸೊಡ್ಡಾರ್ಟ್
C
ಮ್ಯಾಥ್ಯು ಮೇವಿಸ್
D
ಬರ್ನಾಡ್ ಫೆರಿಂಗ
Question 9 Explanation: 
ಮ್ಯಾಥ್ಯು ಮೇವಿಸ್:

ರಸಾಯನಶಾಸ್ತ್ರಕ್ಕೆ ನೀಡಲಾಗುವ 2016ರ ನೊಬೆಲ್ ಪ್ರಶಸ್ತಿ ಜೀನ್ -ಪಿಯರ್ರೆ ಸೌವಾಜ್, ಜೆ. ಫ್ರೇಸರ್ ಸೊಡ್ಡಾರ್ಟ್ ಮತ್ತು ಬರ್ನಾಡ್ ಫೆರಿಂಗ ಅವರಿಗೆ ಲಭಿಸಿದೆ. ಮೊಲ್ಯಾಕ್ಯುಲರ್(ಅಣುಗಳ) ಮೆಶಿನ್ ಗಳನ್ನು ಅಭಿವೃದ್ಧಿ ಪಡಿಸಿದಕ್ಕಾಗಿ ಈ ಮೂವರನ್ನು ರಸಾಯನಶಾಸ್ತ್ರಕ್ಕೆ ನೀಡಲಾಗುವ 2016ರ ನೊಬೆಲ್ ಪುರಸ್ಕಾರಕ್ಕೆ ಪರಿಗಣಿಸಲಾಗಿದೆ. ಎಂಟು ದಶಲಕ್ಷ ಸ್ವೀಡಿಶ್ ಕ್ರೌನ್ (9,31,000 ಡಾಲರ್) ಪ್ರಶಸ್ತಿಯನ್ನು ಈ ಮೂವರು ವಿಜ್ಞಾನಿಗಳು ಹಂಚಿಕೊಂಡಿದ್ದಾರೆ.

Question 10

10.2016 ಸುಸ್ಥಿರ ಅಭಿವೃದ್ದಿ ನಾಯಕತ್ವ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?

A
ಮಮತಾ ಬ್ಯಾನರ್ಜಿ
B
ಚಂದ್ರಬಾಬು ನಾಯ್ಡು
C
ಪವನ್ ಚಾಮ್ಲಿಂಗ್
D
ವಿಜಯ್ ರೂಪಾಣಿ
Question 10 Explanation: 
ಪವನ್ ಚಾಮ್ಲಿಂಗ್:

ಪ್ರತಿಷ್ಠಿತ ಸುಸ್ಥಿರ ಅಭಿವೃದ್ದಿ ನಾಯಕತ್ವ ಪ್ರಶಸ್ತಿಯನ್ನು ಸಿಕ್ಕಿಂ ಮುಖ್ಯಮಂತ್ರಿ ಪವನ್ ಚಾಮ್ಲಿಂಗ್ ಅವರಿಗೆ ನೀಡಿ ಗೌರವಿಸಲಾಗಿದೆ. ದಿ ಎನರ್ಜಿ ಅಂಡ್ ರಿಸೋರ್ಸ್ ಇನ್ಸ್ಟಿಟ್ಯೂಟ್ ಈ ಪ್ರಶಸ್ತಿಯನ್ನು ನೀಡುತ್ತಿದೆ. ವಿಶ್ವ ಸುಸ್ಥಿರ ಅಭಿವೃದ್ದಿ ಶೃಂಗಸಭೆಯಲ್ಲಿ ರಾಷ್ಟ್ರಪತಿ ಪ್ರಣಭ್ ಮುಖರ್ಜಿ ಅವರು ಚಾಮ್ಲಿಂಗ್ ಅವರಿಗೆ ಪ್ರಶಸ್ತಿಯನ್ನು ನೀಡಿದರು. ಪರಿಸರ ಮತ್ತು ಸುಸ್ಥಿರ ಅಭಿವೃದ್ದಿಗೆ ಚಾಮ್ಲಿಂಗ್ ಅವರು ನೀಡಿರುವ ಕೊಡುಗೆ ಗುರುತಿಸಿ ಪ್ರಶಸ್ತಿಯನ್ನು ನೀಡಲಾಗಿದೆ. ಚಾಮ್ಲಿಂಗ್ ಅವರ ದೂರದೃಷ್ಟಿಯಿಂದ ಸಿಕ್ಕಿಂ ದೇಶದ ಮೊದಲ ಸಾವಯವ ರಾಜ್ಯ

There are 10 questions to complete.

[button link=”http://www.karunaduexams.com/wp-content/uploads/2016/10/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ಚಿಜ್-ಅಕ್ಟೋಬರ್-5.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

2 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-5, 2016”

  1. ಸಂತೋಷ್ ಗೌಡರ

    ಧನ್ಯವಾದಗಳು ಸರ್

  2. Chandru

    Chandru s/o yallappa pagadalabande post challakere.chitradurga

Leave a Comment

This site uses Akismet to reduce spam. Learn how your comment data is processed.