ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-8, 2016
Question 1 |
1.ಜೈವಿಕ ಔಷಧೀಯ ಸ್ಪರ್ಧಾತ್ಮಕತೆ ಮತ್ತು ಬಂಡವಾಳ ಸಮೀಕ್ಷೆ (Biopharmaceutical Competitiveness & Investment (BCI) ಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?
28 | |
33 | |
19 | |
20 |
ಜೈವಿಕ ಔಷಧೀಯ ಸ್ಪರ್ಧಾತ್ಮಕತೆ ಮತ್ತು ಬಂಡವಾಳ ಸಮೀಕ್ಷೆಯಲ್ಲಿ 28 ರಾಷ್ಟ್ರಗಳ ಪೈಕಿ ಭಾರತ 19ನೇ ಸ್ಥಾನವನ್ನು ಪಡೆದುಕೊಂಡಿದೆ. ಸಮೀಕ್ಷೆಯಲ್ಲಿ 100 ಅಂಕಗಳಿಗೆ ಭಾರತ 59 ಅಂಕಗಳನ್ನು ಪಡೆದುಕೊಂಡಿದೆ. ವೈಜ್ಞಾನಿಕ ಸಾಮರ್ಥ್ಯಗಳು ಮತ್ತು ಮೂಲಭೂತ ಸೌಕರ್ಯಗಳು ಹಾಗೂ ವೈದ್ಯಕೀಯ ಸಂಶೋಧನಾ ಪರಿಸ್ಥಿತಿಗಳು ಮತ್ತು ಚೌಕಟ್ಟು ಹೊರತುಪಡಿಸಿ ಉಳಿದ ಎಲ್ಲಾ ಅಂಶಗಳಲ್ಲಿ ಭಾರತ ಕಳಪೆ ಸಾಧನೆ ಮಾಡಿದೆ. ಸಮೀಕ್ಷೆಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, ಯು.ಕೆ ಮತ್ತು ಸ್ವಿಟ್ಜರ್ಲ್ಯಾಂಡ್ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ.
Question 2 |
2.ಭಾರತ ಮತ್ತು ಬಾಂಗ್ಲದೇಶ ನಡುವೆ ಗಡಿ ನಿರ್ವಹಣೆಯಲ್ಲಿ ನ್ಯೂನತೆ ಬಗ್ಗೆ ಅಧ್ಯಯನ ನಡೆಸಲು ಕೇಂದ್ರ ಗ್ರಹ ಸಚಿವಾಲಯ ಯಾವ ಸಮಿತಿಯನ್ನು ಇತ್ತೀಚಗೆ ನೇಮಿಸಿದೆ?
ಮಧುಕರ್ ಗುಪ್ತ ಸಮಿತಿ | |
ಸುರೇಶ್ ಬನ್ಸಾಲ್ ಸಮಿತಿ | |
ರಾಜೀವ್ ಘೋರ್ಪಡೆ ಸಮಿತಿ | |
ರಮೇಶ್ ಮುಖರ್ಜಿ ಸಮಿತಿ |
ಭಾರತ ಮತ್ತು ಬಾಂಗ್ಲದೇಶದ ನಡುವೆ ಗಡಿ ನಿರ್ವಹಣೆಯಲ್ಲಿನ ಲೋಪಗಳನ್ನು ಗುರುತಿಸಿ, ಈ ಲೋಪಗಳನ್ನು ಸರಿಪಡಿಸಲು ಶಿಫಾರಸ್ಸು ಮಾಡುವ ಸಲುವಾಗಿ ಮಾಜಿ ಗೃಹ ಕಾರ್ಯದರ್ಶಿ ಮಧುಕರ್ ಗುಪ್ತ ರವರ ನೇತೃತ್ವದ ಸಮಿತಿಯನ್ನು ಕೇಂದ್ರ ಗೃಹ ಸಚಿವಾಲಯ ರಚಿಸಿದೆ. ಸಮಿತಿಯು ಮುಂದಿನ ಮೂರು ಅಥವಾ ನಾಲ್ಕು ತಿಂಗಳೊಳಗೆ ವರದಿಯನ್ನು ಸಲ್ಲಿಸಲಿದೆ. ಗಡಿ ಬೇಲಿ ನಿರ್ಮಾಣ ಪ್ರಗತಿ, ಸಮಸ್ಯತ್ಮಾಕ ಪ್ರದೇಶಗಳನ್ನು ಗುರುತಿಸುವುದು, ಸುಧಾರಿತ ಕಣ್ಗಾವಲು ವ್ಯವಸ್ಥೆ ನಿರ್ಮಾಣ ಸೇರಿದಂತೆ ವಿವಿಧ ಆಯಾಮಗಳನ್ನು ಸಮಿತಿ ಅಧ್ಯಯನ ನಡೆಸಲಿದೆ. ಭಾರತ ಮತ್ತು ಪಾಕಿಸ್ತಾನ ನಡುವೆ ಗಡಿ ಭದ್ರತೆಯನ್ನು ಹೆಚ್ಚಿಸಲು ಇದೇ ಸಮಿತಿ ಈ ಹಿಂದೆ ಶಿಫಾರಸ್ಸು ಮಾಡಿತ್ತು.
Question 3 |
3.ಈ ಕೆಳಗಿನ ಯಾವ ದೇಶಗಳು “ಗಲ್ಫ್ ಸಹಕಾರ ಮಂಡಳಿ (Gulf Cooperation Council)” ಸದಸ್ಯ ರಾಷ್ಟ್ರಗಳಾಗಿವೆ?
I) ಸೌದಿ ಅರೇಬಿಯಾ
II) ಕುವೈತ್
III) ಬಹ್ರೇನ್
IV) ಒಮನ್
ಕೆಳಗೆ ನೀಡಿರುವ ಕೋಡ್ ಮೂಲಕ ಸರಿಯಾದ ಉತ್ತರವನ್ನು ಗುರುತಿಸಿ:
I, II & III | |
II, III & IV | |
I, III & IV | |
I, II, III & IV |
ಗಲ್ಫ್ ಸಹಕಾರ ಮಂಡಳಿಯು ಆರು ಮಧ್ಯಪ್ರಾಚ್ಯ ರಾಷ್ಟ್ರಗಳ ರಾಜಕೀಯ ಮತ್ತು ಆರ್ಥಿಕ ಮೈತ್ರಿಕೂಟವಾಗಿದೆ. ಸೌದಿ ಅರೇಬಿಯಾ, ಕುವೈತ್, ಬಹ್ರೇನ್, ಒಮನ್, ಖತರ್ ಮತ್ತು ಯುಎಇ ಇದರ ಸದಸ್ಯ ರಾಷ್ಟ್ರಗಳು. ಈ ಮಂಡಳಿಯ ಕೇಂದ್ರಕಚೇರಿಯು ಸೌದಿ ಅರೇಬಿಯಾದ ರಿಯದ್ ನಲ್ಲಿದೆ. ಜೊರ್ಡನ್, ಯೆಮನ್ ಮತ್ತು ಮೊರೊಕ್ಕೊ ರಾಷ್ಟ್ರಗಳಿಗೆ ಸದಸ್ಯ ಸ್ಥಾನಮಾನ ನೀಡುವ ಸಲುವಾಗಿ ಮಾತುಕತೆ ನಡೆಯುತ್ತಿದೆ.
Question 4 |
4.“ಭಾರತೀಯ ವಾಯುಪಡೆ ದಿನ (Indian Air Force Day)” ವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
ಅಕ್ಟೋಬರ್ 6 | |
ಅಕ್ಟೋಬರ್ 7 | |
ಅಕ್ಟೋಬರ್ 8 | |
ಅಕ್ಟೋಬರ್ 9 |
ಭಾರತೀಯ ವಾಯುಪಡೆ ದಿನವನ್ನು ಅಕ್ಟೋಬರ್ 8 ರಂದು ಆಚರಿಸಲಾಗುತ್ತದೆ. ಈ ವರ್ಷ ವಾಯುಪಡೆಯ 84ನೇ ದಿನವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಭಾರತೀಯ ವಾಯುಪಡೆಯನ್ನು ಅಕ್ಟೋಬರ್ 8, 1932 ರಲ್ಲಿ ಸ್ಥಾಪಿಸಲಾಗಿದೆ. ಪ್ರಸ್ತುತ ಭಾರತೀಯ ವಾಯುಪಡೆ ವಿಶ್ವದ ನಾಲ್ಕನೇ ಅತಿ ದೊಡ್ಡ ವಾಯು ಪಡೆ ಆಗಿದೆ.
Question 5 |
5. “2016 ಚೀನಾ ಓಪನ್ ಪುರುಷರ ಸಿಂಗಲ್ಸ್” ವಿಭಾಗದಲ್ಲಿ ಪ್ರಶಸ್ತಿ ಗೆದ್ದ ಆಟಗಾರ ಯಾರು?
ಆಯಂಡಿ ಮರ್ರೆ | |
ಗ್ರಿಗೊರ್ ಡಿಮಿಟ್ರಿ | |
ರಫೆಲ್ ನಾಡಲ್ | |
ರೋಜರ್ ಫೆಡರರ್ |
ಬ್ರಿಟನ್ನ ಆಯಂಡಿ ಮರ್ರೆ ಚೀನಾ ಓಪನ್ ಪುರುಷರ ಸಿಂಗಲ್ಸ್ ಪ್ರಶಸ್ತಿ ಜಯಿಸಿದರು. ಫೈನಲ್ನಲ್ಲಿ ಅವರು ಗ್ರಿಗೊರ್ ಡಿಮಿಟ್ರಿ ಅವರನ್ನು 6-4, 7-6(7-2) ನೇರ ಸೆಟ್ಗಳ ಅಂತರದಿಂದ ಮಣಿಸಿದರು.
Question 6 |
6. ಇತ್ತೀಚೆಗೆ “ಹೈಟಿ ಮತ್ತು ಪ್ಲೋರಿಡ” ಭಾಗಗಳಲ್ಲಿ ಅಪಾರ ಸಾವುನೋವಿಗೆ ಕಾರಣವಾದ ಚಂಡಮಾರುತದ ಹೆಸರು ______?
ಸಿರಸ್ | |
ಮ್ಯಾಥ್ಯು | |
ಚಾದ್ | |
ಮೆಗಿ |
ಮ್ಯಾಥ್ಯು ಚಂಡಮಾರುತ ಹೈಟಿ ಮತ್ತು ಪ್ಲೋರಿಡಾದ ಕರಾವಳಿ ಭಾಗದಲ್ಲಿ ಭೀಕರ ಮಳೆ ಸೃಷ್ಟಿಸಿದ್ದು ಅಪಾರ ನಷ್ಟ ಉಂಟುಮಾಡಿದೆ. ಅಟ್ಲಾಂಟಿಕ್ ಕರಾವಳಿಯಲ್ಲಿ ಈ ದಶಕದಲ್ಲಿ ಬಂದ ಅತ್ಯಂತ ಶಕ್ತಿಶಾಲಿ, ಅಪಾಯಕಾರಿ ಚಂಡಮಾರುತ ಇದಾಗಿದ್ದು, ಇದುವರೆಗೆ ಹೈಟಿಯಲ್ಲಿ ಮೃತಪಟ್ಟವರ ಸಂಖ್ಯೆ 842ಕ್ಕೆ ಏರಿದೆ. ಸುಮಾರು 3 ದಶಲಕ್ಷ ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಈ ಚಂಡಮಾರುತವನ್ನು 2ನೇ ಶ್ರೇಣಿಯ ಚಂಡಮಾರುತ ಎಂದು ಗುರುತಿಸಲಾಗಿದ್ದು, ಗಂಟೆಗೆ 110 ಮೈಲಿ ವೇಗವಾಗಿ ಗಾಳಿ
Question 7 |
7.ದೇಶದ ನದಿಗಳನ್ನು ಸ್ವಚ್ಚಗೊಳಿಸುವುದಕ್ಕಾಗಿ ಭಾರತ ಇತ್ತೀಚೆಗೆ ಈ ಕೆಳಗಿನ ಯಾವುದರ ಜೊತೆ ಒಪ್ಪಂದಕ್ಕೆ ಸಹಿ ಹಾಕಿದೆ?
ವಿಶ್ವ ಬ್ಯಾಂಕ್ | |
ಯುರೋಪ್ ಒಕ್ಕೂಟ | |
ಅಂತಾರಾಷ್ಟ್ರೀಯ ಹಣಕಾಸು ನಿಧಿ | |
ಅಸಿಯಾನ್ |
ಭಾರತ ಮತ್ತು ಯುರೋಪ್ ಒಕ್ಕೂಟ ಜಲ ಸಹಭಾಗಿತ್ವ ಒಪ್ಪಂದಕ್ಕೆ ಸಹಿ ಹಾಕಿದ್ದು, ಆ ಮೂಲಕ ಯುರೋಪ್ ನೆರವಿನೊಂದಿಗೆ ಭಾರತದ ನದಿಗಳನ್ನು ಸ್ವಚ್ಚಗೊಳಿಸಲಾಗುವುದು. ಕೇಂದ್ರ ಸಚಿವೆ ಉಮಾ ಭಾರತಿ ಮತ್ತು ಯುರೋಪಿಯನ್ ಕಮೀಷನ್ ನ ಪರಿಸರ, ಸಾಗರೋತ್ತರ ವ್ಯವಹಾರ ಮತ್ತು ಮೀನುಗಾರಿಕೆ ಕಮೀಷನರ್ ಕರ್ಮೆನು ವೆಲ್ಲ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಯಿತು.
Question 8 |
8.ಭಾಸ್ಕರಚಾರ್ಯರ “ಲೀಲಾವತಿ” ಪುಸ್ತಕವನ್ನು ಪರ್ಷಿಯನ್ ಭಾಷೆಗೆ ಭಾಷಾಂತರಗೊಳಿಸಿದವರು ____?
ಅಲ್ಬೆರುನಿ | |
ದಾರ್ ಷಿಕೋಹ್ | |
ಅಬ್ದುಲ್ ಫಜಲ್ | |
ಅಬ್ದುಲ್ ಫೈಜಿ |
ಅಬುಲ್ ಫೈಜಿ ಅಕ್ಬರನ ಆಸ್ಥಾನದಲ್ಲಿದ್ದ ಪ್ರಸಿದ್ಧ ಪರ್ಷಿಯನ್ ಕವಿ. ಫೈಜಿಗೆ ಕವಿಚಕ್ರವರ್ತಿ ಎಂಬ ಬಿರುದು ಇತ್ತು. ಅರಬ್ಬೀ ಸಾಹಿತ್ಯದಲ್ಲೂ ಈತನಿಗೆ ಆಳವಾದ ಅಭ್ಯಾಸವಿತ್ತು. ಭಾಸ್ಕರಾಚಾರ್ಯ ಬರೆದ ಲೀಲಾವತಿ ಎಂಬ ಸಂಸ್ಕøತ ಗಣಿತಗ್ರಂಥವನ್ನೂ ಭಗವದ್ ಗೀತೆಯನ್ನೂ ಪರ್ಷಿಯನ್ ಭಾಷೆಗೆ ಈತ ಪರಿವರ್ತಿಸಿದ.
Question 9 |
9.ಚೀನಾ ಮತ್ತು ಭಾರತ ನಡುವೆ “ಹ್ಯಾಂಡ್-ಇನ್-ಹ್ಯಾಂಡ್ (Hand-in-Hand)” ಸಮರಭ್ಯಾಸವು ನವೆಂಬರ್-2016 ರಲ್ಲಿ ಎಲ್ಲಿ ನಡೆಯಲಿದೆ?
ಪುಣೆ | |
ಜೈಪುರ | |
ಬೆಳಗಾವಿ | |
ಡಾರ್ಜಲಿಂಗ್ |
ಚೀನಾ ಮತ್ತು ಭಾರತ ನಡುವೆ ಪ್ರತಿ ವರ್ಷ ನಡೆಯುವ “ಹ್ಯಾಂಡ್-ಇನ್-ಹ್ಯಾಂಡ್” ಸಮರಭ್ಯಾಸವು ನವೆಂಬರ್ 15-27ರವರೆಗೆ ಮಹಾರಾಷ್ಟ್ರದ ಪುಣೆ ಬಳಿ ಇರುವ ಔಂದ್ ನಲ್ಲಿ ನಡೆಯಲಿದೆ. “ಹ್ಯಾಂಡ್-ಇನ್-ಹ್ಯಾಂಡ್ ಸಮರಭ್ಯಾಸವನ್ನು ಮೊದಲ ಬಾರಿ 2007 ರಲ್ಲಿ ಚೀನಾದ ಕುನ್ಮಿಂಗ್ ನಲ್ಲಿ ಆಯೋಜಿಸಲಾಗಿತ್ತು. ಆನಂತರ 2008 ರಲ್ಲಿ ಬೆಳಗಾವಿಯಲ್ಲಿ ಈ ಸಮರಭ್ಯಾಸ ನಡೆದಿತ್ತು. 2013 ರಿಂದ ಪ್ರತಿ ವರ್ಷ ಈ ಯುದ್ದಭ್ಯಾಸವನ್ನು ಉಭಯ ದೇಶಗಳ ನಡುವೆ ಹಮ್ಮಿಕೊಳ್ಳಲಾಗುತ್ತಿದೆ.
Question 10 |
10. ಪ್ರಸ್ತುತ ವಿಶ್ವದ ಅತಿ ಹೆಚ್ಚು ರಬ್ಬರ್ ಉತ್ಪಾದಿಸುವ ದೇಶಗಳ ಪೈಕಿ ಭಾರತ ಎಷ್ಟನೇ ಸ್ಥಾನದಲ್ಲಿದೆ?
ಎರಡು | |
ಮೂರು | |
ನಾಲ್ಕು | |
ಐದು |
ಭಾರತ ವಿಶ್ವದ ನಾಲ್ಕನೇ ಅತಿ ಹೆಚ್ಚು ರಬ್ಬರ್ ಉತ್ಪಾದಿಸುವ ರಾಷ್ಟ್ರವಾಗಿದೆ. ಥಾಯ್ಲೆಂಡ್, ಇಂಡೋನೇಷಿಯಾ ಮತ್ತು ಮಲೇಷಿಯಾ ಮೊದಲ ಮೂರು ಸ್ಥಾನದಲ್ಲಿವೆ. ಭಾರತದ ನಂತರ ಅತಿ ಹೆಚ್ಚು ರಬ್ಬರ್ ಉತ್ಪಾದಿಸುವ ರಾಷ್ಟ್ರಗಳೆಂದರೆ ವಿಯೆಟ್ನಾಂ, ಚೀನಾ, ಶ್ರೀಲಂಕಾ, ಫಿಲಿಫೈನ್ಸ್ ಮತ್ತು ಕಾಂಬೋಡಿಯ.
[button link=”http://www.karunaduexams.com/wp-content/uploads/2016/10/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಅಕ್ಟೋಬರ್-8.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Useful….