ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-9, 2016

Question 1

1.ಯಾವ ದೇಶ ಇತ್ತೀಚೆಗೆ ಜನವರಿ ತಿಂಗಳನ್ನು “ತಮಿಳು ಪಾರಂಪರಿಕ ತಿಂಗಳೆಂದು (Tamil Heritage Month)” ಘೋಷಿಸಿದೆ?

A
ಶ್ರೀಲಂಕಾ
B
ಕೆನಡಾ
C
ಸಿಂಗಾಪುರ
D
ಮಲೇಷಿಯಾ
Question 1 Explanation: 
ಕೆನಡಾ:

ಕೆನಡಾ ರಾಷ್ಟ್ರ ಜನವರಿ ತಿಂಗಳನ್ನು ಪಾರಂಪರಿಕ ತಿಂಗಳನ್ನಾಗಿ ಆಚರಿಸಲು ಆದೇಶ ನೀಡಿದೆ. ವಾರದ ಹಿಂದೆ ಈ ಕುರಿತಂತೆ ಕೆನಡಾದ ಹೌಸ್ ಆಫ್ ಕಾಮನ್ಸ್ ತಮಿಳು ಪಾರಂಪರಿಕ ತಿಂಗಳನ್ನು ಆಚರಿಸಲು ಒಮ್ಮತದ ನಿರ್ಣಯ ಗೊಂಡಿದೆ. ಅದರಂತೆ 2017 ರಿಂದ ಜನವರಿಯನ್ನ ತಮಿಳು ಪಾರಂಪರಿಕ ತಿಂಗಳನ್ನಾಗಿ ಆಚರಿಸಲಾಗುವುದು. ಕೆನಡಾದ 150 ನೇ ವರ್ಷಾಚರಣೆಯ ಜೊತೆ ಜೊತೆಗೆ ತಮಿಳು ಪಾರಂಪರಿಕ ತಿಂಗಳನ್ನು ಆಚರಿಸಲಾಗುತ್ತದೆ. ತಮಿಳುನಾಡಿನ ಮೂಲದ ಕೆನಡಾದ ಸಂಸದ ಗ್ಯಾರಿ ಆನಂದಾಸನಗರೀ ಹೌಸ್ ಆಫ್ ಕಾಮನ್ಸ್ ನಲ್ಲಿ ನಿರ್ಣಯ ಮಂಡಿಸಿದ್ದರು. ಈ ಬಗ್ಗೆ ಸೆಪ್ಟೆಂಬರ್ ನಲ್ಲಿ ಚರ್ಚೆ ನಡೆಸಲಾಗಿತ್ತು. ಕೆನಡಾದ ಅಭಿವೃದ್ಧಿಗೆ ತಮಿಳುನಾಡಿನ ಮೂಲದವರು ನೀಡಿರುವ ಕೊಡುಗೆಯನ್ನು ಸ್ಮರಿಸಲು ಜನವರಿ ತಿಂಗಳನ್ನು ತಮಿಳು ಪಾರಂಪರಿಕ ತಿಂಗಳನ್ನಾಗಿ ಘೋಷಿಸಲಾಗಿದೆ. ಕೆನಡಾದಲ್ಲಿ ಸುಮಾರು 3 ಲಕ್ಷಕ್ಕೂ ಹೆಚ್ಚು ತಮಿಳರು ನೆಲಸಿದ್ದಾರೆ.

Question 2

2.“2016 ಜಾನ್ ಎಫ್ ರಿಚರ್ಡ್ ಪ್ರಶಸ್ತಿ (John F. Richards Prize)” ಪಡೆದ ಭಾರತದ ಲೇಖಕಿ ಯಾರು?

A
ನಿರ್ಮಲ ಗೋಪಿನಾಥ್
B
ಚೈತ್ರ ಸುಬ್ರಮಣ್ಯಂ
C
ನಯನ್ ಜೋತ್ ಲಹಿರಿ
D
ಕಿರಣ್ ದೇಸಾಯಿ
Question 2 Explanation: 
ನಯನ್ ಜೋತ್ ಲಹಿರಿ:

ಅಶೋಕ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಪ್ರಾಧ್ಯಪಕಿ ಆಗಿರುವ ನಯನ್ ಜೋತ್ ಲಹಿರಿ ಅವರಿಗೆ 2016 ಜಾನ್ ಎಫ್ ರಿಚರ್ಡ್ ಪ್ರಶಸ್ತಿಯನ್ನು ನೀಡಲಾಗಿದೆ. ಲಹಿರಿ ಅವರ ಪುಸ್ತಕ “ಅಶೋಕ ಇನ್ ಎನಿಸಿಯೆಂಟ್ ಇಂಡಿಯಾ (Ashoka in Ancient India) ಪುಸ್ತಕಕ್ಕೆ ಈ ಪ್ರಶಸ್ತಿ ಲಭಿಸಿದೆ. ಶಾಸನಗಳ ಮೂಲಕ ತನ್ನ ಸಾಮಾಜ್ರ್ಯದ ಬಗ್ಗೆ ಜನರಿಗೆ ತಿಳಿಸಿಕೊಟ್ಟ ಅಶೋಕ ಮಹಾರಾಜನ ಕುರಿತಾಗಿ ಈ ಪುಸ್ತಕ ಬರೆಯಲಾಗಿದ್ದು, ವಿಮರ್ಶಕರಿಂದ ಪ್ರಶಂಸೆಗೆ ಒಳಗಾಗಿದೆ. ಅಮೆರಿಕನ್ ಹಿಸ್ಟರಿಕಲ್ ಅಸೋಸಿಯೇಷನ್ ಈ ಪ್ರಶಸ್ತಿಯನ್ನು ದಕ್ಷಿಣ ಏಷ್ಯಾ ಇತಿಹಾಸ ಕುರಿತಾದ ಪುಸ್ತಕಗಳಿಗೆ ಪ್ರತಿ ವರ್ಷ ನೀಡುತ್ತಿದೆ. ಪ್ರಶಸ್ತಿಯನ್ನು ಜನವರಿ 2017ರಲ್ಲಿ ನೀಡಲಾಗುವುದು.

Question 3

3.ಉದ್ದೇಶಿತ “ಗಂಗಾ ಬ್ಯಾರೇಜ್ ಯೋಜನೆ (Ganges Barrage (dam) project)” ಯಾವ ದೇಶಕ್ಕೆ ಸಂಬಂಧಿಸಿದೆ?

A
ಬಾಂಗ್ಲದೇಶ
B
ಚೀನಾ
C
ಭಾರತ
D
ನೇಪಾಳ
Question 3 Explanation: 
ಬಾಂಗ್ಲದೇಶ:

ಗಂಗಾ ಬ್ಯಾರೇಜ್ ಯೋಜನೆ ಬಾಂಗ್ಲದೇಶದ ಉದ್ದೇಶಿತ ಅಣೆಕಟ್ಟು ಯೋಜನೆಯಾಗಿದೆ. ಭಾರತ ಈ ಯೋಜನೆಯನ್ನು ನಿರ್ಮಿಸಲು ಮುಂದಾಗಿದ್ದು, ಬಾಂಗ್ಲದೇಶ ಸಹ ಸಹಮತ ತೋರಿದೆ. ಈ ಯೋಜನೆ ಮೂಲಕ ಪದ್ಮ ನದಿಯ ನೀರನ್ನು ಬಾಂಗ್ಲದ 26 ಜಿಲ್ಲೆಗಳಿಗೆ 123 ಸ್ಥಳೀಯ ನದಿಗಳ ಮೂಲಕ ಹರಿಸುವ ಗುರಿಯನ್ನು ಬಾಂಗ್ಲ ಹೊಂದಿದೆ.

Question 4

4.2016ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದ “ಜುವಾನ್ ಮ್ಯಾನ್ಯುಯೆಲ್ ಸ್ಯಾಂಟೋಸ್” ಯಾವ ದೇಶದ ಅಧ್ಯಕ್ಷರು?

A
ಕೊಲಂಬಿಯಾ
B
ಮಾಲ್ಡೀವ್ಸ್
C
ನೈಜೀರಿಯಾ
D
ಘಾನ
Question 4 Explanation: 
ಕೊಲಂಬಿಯಾ:

2016ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಕೊಲಂಬಿಯಾ ಅಧ್ಯಕ್ಷ ಜುವಾನ್ ಮ್ಯಾನ್ಯುಯೆಲ್ ಸ್ಯಾಂಟೋಸ್ ಅವರಿಗೆ ನೀಡಲಾಗಿದೆ. ಅರ್ಧ ಶತಮಾನದ ಯುದ್ಧವನ್ನು ಕೊನೆಗೊಳಿಸಿದ ಕೊಲಂಬಿಯಾ ಶಾಂತಿ ಒಪ್ಪಂದದ ಸಾಧನೆಗಾಗಿ ಸ್ಯಾಂಟೋಸ್ ಅವರಿಗೆ ಈ ಪ್ರಶಸ್ತಿ ಲಭಿಸಿದೆ. ಸುಮಾರು ಎರಡೂವರೆ ಲಕ್ಷ ಜನರನ್ನು ಬಲಿ ತೆಗೆದುಕೊಂಡ ಐದು ದಶಕಗಳ ಸಮರಕ್ಕೆ ಮಂಗಳ ಹಾಡುವ ಕೊಲಂಬಿಯಾ ಶಾಂತಿ ಒಪ್ಪಂದಕ್ಕೆ ಸೆಪ್ಟೆಂಬರ್ 26ರಂದು ಅಧ್ಯಕ್ಷ ಸ್ಯಾಂಟೋಸ್ ಮತ್ತು ಮಾರ್ಕ್ಸ್ವಾದಿ ಫಾರ್ಕ್ ಬಂಡಾಯ ನಾಯಕ ಟಿಮೊಚೆಂಕೊ ಸಹಿ ಮಾಡಿದ್ದರು. 1992ರಲ್ಲಿ ಗ್ವಾಟೆಮಾಲಾದ ಮಾನವ ಹಕ್ಕುಗಳ ಹೋರಾಟಗಾರ ರಿಗೊಬೆರ್ಟ ಮೆಂಚು ಅವರು ಪ್ರಶಸ್ತಿ ಗೆದ್ದ ಬಳಿಕ ಲ್ಯಾಟಿನ್ ಅಮೆರಿಕಕ್ಕೆ ಲಭಿಸಿರುವ ಮೊತ್ತ ಮೊದಲ ಪ್ರಶಸ್ತಿ ಇದು.

Question 5

5.2016 ಫಾರ್ಮೂಲಾ ಓನ್ ಜಪಾನ್ ಗ್ರಾಂಡ್ ಪ್ರಿಕ್ಸ್ ಗೆದ್ದವರು ______?

A
ನಿಕೊ ರೋಸ್ಬರ್ಗ್
B
ಮ್ಯಾಕ್ಸ್ ವರ್ಸಟಪೆನ್
C
ಲೇವಿಸ್ ಹ್ಯಾಮಿಲ್ಟನ್
D
ಸೆಬಾಸ್ಟಿಯನ್ ವೆಟಲ್
Question 5 Explanation: 
ನಿಕೊ ರೋಸ್ಬರ್ಗ್:

ಮರ್ಸಿಡೆಸ್ ಚಾಲಕ ನಿಕೊ ರೋಸ್ಬರ್ಗ್ ಅವರು 2016 ಫಾರ್ಮೂಲಾ ಓನ್ ಜಪಾನ್ ಗ್ರಾಂಡ್ ಪ್ರಿಕ್ಸ್ ಗೆದ್ದುಕೊಂಡರು

Question 6

6.ಈ ಕೆಳಗಿನವುಗಳಲ್ಲಿ ಯಾವುದು ಖಾರೀಫ್ ಬೆಳೆ (Kharif Crop) ಆಗಿಲ್ಲ?

A
ರಾಗಿ
B
ಭತ್ತ
C
ಜೋಳ
D
ಸಾಸಿವೆ
Question 6 Explanation: 
ಸಾಸಿವೆ:

ಭಾರತದಲ್ಲಿ ಕೃಷಿ ವರ್ಷವನ್ನು ಎರಡು ವಿಧಗಳನ್ನಾಗಿ ವರ್ಗೀಕರಿಸಲಾಗಿದೆ. ಅವುಗಳೆಂದರೆ ಖಾರೀಫ್ ಮತ್ತು ರಾಬಿ. ಖಾರೀಫ್ ಬೆಳೆಗಳ ಅವಧಿ ಏಪ್ರಿಲ್-ಅಕ್ಟೋಬರ್. ರಾಗಿ, ಜೋಳ, ಭತ್ತ, ದ್ವಿದಳ ಧಾನ್ಯಗಳು ಪ್ರಮುಖ ಖಾರೀಫ್ ಬೆಳೆಗಳಾಗಿವೆ.

Question 7

7.2016 ಜಪಾನ್ ಓಪನ್ ಪುರುಷರ ಸಿಂಗಲ್ಸ್ ಫೈನಲ್ ನಲ್ಲಿ ಪ್ರಶಸ್ತಿ ಗೆದ್ದವರು ಯಾರು?

A
ಡೇವಿಡ್ ಗೊಫಿ
B
ನಿಕ್ ಕಿರ್ಗಿಯೊಸ್
C
ನೊವಾಕ್ ಜೊಕೊವಿಕ್
D
ಆಯಂಡಿ ಮರೆ
Question 7 Explanation: 
ನಿಕ್ ಕಿರ್ಗಿಯೊಸ್:

ಆಸ್ಟ್ರೇಲಿಯದ ಪವರ್-ಹಿಟ್ಟರ್ ನಿಕ್ ಕಿರ್ಗಿಯೊಸ್ ಬೆಲ್ಜಿಯಂನ ಡೇವಿಡ್ ಗೊಫಿನ್ರನ್ನು ನೇರ ಸೆಟ್ಗಳಿಂದ ಮಣಿಸಿ ಜಪಾನ್ ಓಪನ್ ಪ್ರಶಸ್ತಿಯನ್ನು ಗೆದ್ದುಕೊಂಡರು. ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಕಿರ್ಗಿಯೊಸ್ ಅವರು ಗೊಫಿನ್ರನ್ನು 4-6, 6-3, 7-5 ಸೆಟ್ಗಳ ಅಂತರದಿಂದ ಸೋಲಿಸಿ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.

Question 8

8.24ನೇ ಏಕಲವ್ಯ ವರ್ಷದ ಪ್ರಶಸ್ತಿ-2016 ಪಡೆದುಕೊಂಡ ಕ್ರೀಡಾಪಟು ಯಾರು?

A
ಸ್ರಬಣಿ ನಂದ
B
ಸಾಕ್ಷಿ ಮಲಿಕ್
C
ಪಿ ವಿ ಸಿಂಧು
D
ದೀಪ್ ಗ್ರೆಸ್ ಎಕ್ಕ
Question 8 Explanation: 
ಸ್ರಬಣಿ ನಂದ:

ಅಂತಾರಾಷ್ಟ್ರೀಯ ಅಥ್ಲೆಟಿಕ್ ಸ್ರಬಣಿ ನಂದ 24ನೇ ಏಕಲವ್ಯ ವರ್ಷದ ಪ್ರಶಸ್ತಿ-2016 ಭಾಜನರಾಗಿದ್ದಾರೆ. ವಿವಿಧ ಕ್ಷೇತ್ರಗಳಿಂದ ಆಯ್ಕೆಮಾಡಲಾಗಿದ್ದ ತೀರ್ಪುಗಾರರನ್ನು ಒಳಗೊಂಡಿದ್ದ ಏಕಲವ್ಯ ಪ್ರಶಸ್ತಿ ಸಮಿತಿಯು ಸಬ್ರಣಿ ನಂದ ಅವರನ್ನು ಪ್ರಶಸ್ತಿಗೆ ಆಯ್ಕೆಮಾಡಿದೆ. ಪ್ರಶಸ್ತಿಯು ರೂ 5 ಲಕ್ಷ ನಗದು ಮತ್ತು ಫಲಕವನ್ನು ಒಳಗೊಂಡಿದೆ.

Question 9

9.______ ರಂದು “ವಿಶ್ವ ಅಂಚೆ ದಿನ (World Post Day)” ಆಚರಿಸಲಾಗುತ್ತದೆ?

A
ಅಕ್ಟೋಬರ್ 8
B
ಅಕ್ಟೋಬರ್ 9
C
ಅಕ್ಟೋಬರ್ 10
D
ಅಕ್ಟೋಬರ್ 11
Question 9 Explanation: 
ಅಕ್ಟೋಬರ್ 9:

ವಿಶ್ವ ಅಂಚೆ ದಿನವನ್ನು ಅಕ್ಟೋಬರ್ 9ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. 1874 ರಲ್ಲಿ ಈ ದಿನದಂದು ಯೂನಿವರ್ಸಲ್ ಪೋಸ್ಟಲ್ ಯೂನಿಯನ್ ಅನ್ನು ಸ್ಥಾಪಿಸಿದರ ಅಂಗವಾಗಿ ವಿಶ್ವ ಅಂಚೆ ದಿನವನ್ನು ಆಚರಿಸಲಾಗುತ್ತದೆ. 1969 ರಿಂದ ಜಗತ್ತಿನ ಎಲ್ಲೆಡೆ ವಿಶ್ವ ಅಂಚೆ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ. Innovation, Integration and Inclusion ಇದು ಈ ವರ್ಷದ ಅಂಚೆ ದಿನದ ತಿರುಳಾಗಿದೆ.

Question 10

10. ಶಿಕ್ಷಣ ಸಂಬಂಧಿಸಿದ ಮಾಹಿತಿಗಳನ್ನು ನೀಡುವ “ಜ್ಞಾನ ದರ್ಶನ” ಪ್ರಸಾರಕ್ಕಾಗಿ ದೂರದರ್ಶನವು ಈ ಕೆಳಗಿನ ಯಾವ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?

A
ಇಸ್ರೋ
B
ಐಐಟಿ ದೆಹಲಿ
C
ಇಗ್ನೋ
D
ಐಐಟಿ ಬಾಂಬೆ
Question 10 Explanation: 
ಇಗ್ನೋ:

ಶಿಕ್ಷಣ ಸಂಬಂಧಿತ ಮಾಹಿತಿಗಳನ್ನು ನೀಡುವ ಜ್ಞಾನ ದರ್ಶನ (ಗ್ಯಾನ್ ದರ್ಶನ್) ವಾಹಿನಿಗಳ ಪ್ರಸಾರಕ್ಕಾಗಿ ದೂರದರ್ಶನ ಮತ್ತು ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯ(ಇಗ್ನೋ) ಒಪ್ಪಂದಕ್ಕೆ ಸಹಿ ಹಾಕಿವೆ. ಕಾರ್ಯಕ್ರಮ ಪ್ರಸಾರಕ್ಕಾಗಿ ಇಗ್ನೋ ಹೊಸದಾಗಿ ಪರವಾನಗಿ ಪಡೆಯುವುದು ಅಗತ್ಯ. ಆದರೆ, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ನಿಯಮಗಳ ಪ್ರಕಾರ ಪರವಾನಗಿ ನೀಡಲು ಸಾಧ್ಯವಿಲ್ಲ. ಹಾಗಾಗಿ, ಇಗ್ನೋ ದೂರದರ್ಶನದ ಮೂಲಕ ಗ್ಯಾನ್ ದರ್ಶನ್ನ ನಾಲ್ಕು ವಾಹಿನಿಗಳ ಪರವಾನಗಿ ಮತ್ತು ಪ್ರಸಾರದ ಅನುಮತಿ ಪಡೆಯಲಿದೆ.

There are 10 questions to complete.

[button link=”http://www.karunaduexams.com/wp-content/uploads/2016/10/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಅಕ್ಟೋಬರ್-9.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

One Thought to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-9, 2016”

  1. krishna

    Useful information…

Leave a Comment

This site uses Akismet to reduce spam. Learn how your comment data is processed.