ರಾಜ್ಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ವಿಜ್ಞಾನ-ತಂತ್ರಜ್ಞಾನ, ಪರಿಸರ, ವ್ಯವಹಾರ, ಕ್ರೀಡೆ, ಪ್ರಶಸ್ತಿಗಳು, ಸುದ್ದಿಯಲ್ಲಿರುವ ವ್ಯಕ್ತಿಗಳ ಕುರಿತಾದ ಪ್ರಚಲಿತ ಘಟನೆಗಳ ಮತ್ತು ಸಾಮಾನ್ಯ ಜ್ಞಾನದ ವಸ್ತುನಿಷ್ಟ ಪ್ರಶ್ನೋತ್ತರಗಳು.
ಕ್ವಿಜ್-28
Question 1 |
1.ಭಾರತದಲ್ಲಿ ಒಂದು ಹೊಸ ರಾಜ್ಯ ರಚನೆ ಮಾಡಲು ಸಂವಿಧಾನದ ಈ ಕೆಳಗಿನ ಯಾವ ಪರಿಚ್ಛೇಧಕ್ಕೆ ತಿದ್ದುಪಡಿ ಮಾಡಬೇಕಾಗುತ್ತದೆ?
ಒಂದನೇ ಪರಿಚ್ಛೇಧ | |
ಮೂರನೇ ಪರಿಚ್ಛೇಧ | |
ಎಂಟನೇ ಪರಿಚ್ಛೇಧ | |
ಒಂಬತ್ತನೇ ಪರಿಚ್ಛೇಧ |
Question 2 |
2.ಅತ್ಯವಶ್ಯಕ ವಸ್ತುಗಳ ಕಾಯ್ದೆ 1955 (Essential Commodities Act) ರ ಪ್ರಕಾರ ಈ ಕೆಳಗಿನವುಗಳಲ್ಲಿ ಯಾವುದು/ವು ಅತ್ಯವಶ್ಯಕ ವಸ್ತುಗಳ ಪಟ್ಟಿಯಲ್ಲಿಲ್ಲ
1.ಪುಸ್ತಕಗಳು
2.ಅಡುಗೆ ಎಣ್ಣೆ
3.ರಸಗೊಬ್ಬರಗಳು
4.ಎಲೆಕ್ಟ್ರಾನಿಕ್ ವಸ್ತುಗಳು
5.ಔಷಧಿಗಳು
1 ಮತ್ತು 4 | |
2 ಮತ್ತು 4 | |
4 ಮತ್ತು 5 | |
1 ಮತ್ತು 3 |
Question 3 |
3.ಭಾರತ ಸಂವಿಧಾನದ 7 ನೇ ಪರಿಚ್ಛೇಧದಲ್ಲಿ ನಮೂದಿಸಿರುವಂತೆ ಕೇಂದ್ರ ಪಟ್ಟಿಯಲ್ಲಿರುವ ಈ ಕೆಳಗೆ ಕೊಟ್ಟಿರುವ ಯಾವ ತೆರಿಗೆಗಳು ಕೇಂದ್ರ ಸರ್ಕಾರ ಮಾತ್ರವೇ ವಿಧಿಸುವ ಅಧಿಕಾರವನ್ನು ಹೊಂದಿದೆ
1.ಕಾರ್ಪೊರೆಟ್ ತೆರಿಗೆ
2.ದಿನಪತ್ರಿಕೆಗಳಲ್ಲಿನ ಜಾಹಿರಾತುಗಳ ಮೇಲಿನ ತೆರಿಗೆ
3.ವಿದ್ಯುತ್ ಮಾರಾಟ ಅಥವಾ ಉಪಯೋಗದ ಮೇಲಿನ ತೆರಿಗೆ
4.ಕೃಷಿ ಆದಾಯದ ಮೇಲಿನ ತೆರಿಗೆ
1 ಮತ್ತು 3 | |
1 ಮತ್ತು 2 | |
3 ಮತ್ತು 4 | |
2 ಮತ್ತು 3 |
Question 4 |
4.ಭಾರತದಲ್ಲಿ ನೋಟು ಮುದ್ರಣ ಸಂಸ್ಥೆಗಳು ಈ ಕೆಳಗಿನ ಯಾವ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿವೆ
1.ಹೈದರಾಬಾದ್
2.ದೇವಾಸ್
3.ನಾಸಿಕ್
4.ನಾಗಪುರ
5.ಹೋಶಂಗಾಬಾದ್
1, 4 ಮತ್ತು 5 | |
2, 3 ಮತ್ತು 4 | |
1, 2, 3 ಮತ್ತು 5 | |
ಮೇಲಿನ ಎಲ್ಲವೂ |
Question 5 |
5.ವಿಪತ್ತು ನಿರ್ವಹಣಾ ಕಾಯ್ದೆ 2005 ರನ್ವಯ “ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ”ಯನ್ನು ಯಾರು ನಿರ್ವಹಣೆ ಮಾಡುತ್ತಾರೆ
ಪ್ರಧಾನ ಮಂತ್ರಿ | |
ಗೃಹ ಮಂತ್ರಿ | |
ಪರಿಸರ ಮತ್ತು ಅರಣ್ಯ ಮಂತ್ರಿ | |
ಹಣಕಾಸು ಮಂತ್ರಿ |
Question 6 |
6.ಕರ್ಕಾಟಕ ಸಂಕ್ರಾಂತಿ ವೃತ್ತವು ಭಾರತದ ಈ ಕೆಳಗಿನ ಯಾವ ರಾಜ್ಯಗಳ ಮೂಲಕ ಹಾದು ಹೋಗುತ್ತದೆ
1.ಮಹಾರಾಷ್ಟ್ರ
2.ಪಶ್ಚಿಮ ಬಂಗಾಳ
3.ಮಣಿಪುರ
4.ತ್ರಿಪುರ
5.ಜಾರ್ಖಂಡ್
1, 3, 4 ಮತ್ತು 5 | |
2, 3 ಮತ್ತು 5 | |
1, 2, 3 ಮತ್ತು 4 | |
2, 4 ಮತ್ತು 5 |
Question 7 |
7.ರಾಜ್ಯ ಸಭೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳಲ್ಲಿ ತಪ್ಪಾದುದನ್ನು ಗುರುತಿಸಿ
ಉಪ ರಾಷ್ಟ್ರಪತಿಯು ಪದನಿಮಿತ್ತ ರಾಜ್ಯಸಭೆಯ ಅಧ್ಯಕ್ಷರಾಗಿರುತ್ತಾರೆ | |
ರಾಜ್ಯಸಭೆಯು ಪ್ರಧಾನ ಮಂತ್ರಿಗಳಿಂದ ನಾಮನಿರ್ದೇಶನಗೊಂಡ 12 ಸದಸ್ಯರನ್ನೊಳಗೊಂಡಿದೆ | |
ಪ್ರತಿ ಎರಡು ವರ್ಷಗಳಿಗೊಮ್ಮೆ ರಾಜ್ಯಸಭೆಯ 1/3 ರಷ್ಟು ಸದಸ್ಯರು ನಿವೃತ್ತಿ ಹೊಂದುತ್ತಾರೆ | |
ರಾಜ್ಯಸಭೆಯನ್ನು ವಿಸರ್ಜಿಸಲು ಅವಕಾಶವಿಲ್ಲ |
ರಾಜ್ಯಸಭೆಯು ಪ್ರಧಾನ ಮಂತ್ರಿಗಳಿಂದ ನಾಮನಿರ್ದೇಶನಗೊಂಡ 12 ಸದಸ್ಯರನ್ನೊಳಗೊಂಡಿದೆ:
(ರಾಜ್ಯಸಭೆಗೆ ರಾಷ್ಟ್ರಪತಿಗಳು ವಿವಿಧ ಕ್ಷೇತ್ರಗಳಲ್ಲಿ ಅನುಭವವಿರುವ 12 ಜನ ಸದಸ್ಯರನ್ನು ನಾಮ ನಿರ್ದೇಶನ ಮಾಡುತ್ತಾರೆ)
Question 8 |
8.ಭಾರತದಲ್ಲಿ ಸಂವಿಧಾನ ತಿದ್ದುಪಡಿಗೆ ಒಂದು ನಿರ್ದಿಷ್ಟ ಕಾರ್ಯವಿಧಾನವನ್ನು ಅನುಸರಿಸಲಾಗುತ್ತಿದೆ, ಈ ಕಾರ್ಯವಿಧಾನವನ್ನು ಸಂವಿಧಾನದ ನಿರ್ಮಾತೃಗಳು ಯಾವ ದೇಶದಿಂದ ಎರವಲು ಪಡೆಯಲಾಗಿದೆ
ಐರ್ಲ್ಯಾಂಡ್ | |
ಬ್ರಿಟನ್ | |
ಆಸ್ಟ್ರೇಲಿಯ | |
ದಕ್ಷಿಣ ಆಫ್ರಿಕಾ |
Question 9 |
9.ಭಾರತ ಸಂವಿಧಾನದ ಯಾವ ಭಾಗ/ವಿಧಿಯನ್ನು ಸಂವಿಧಾನದ ತಿದ್ದುಪಡಿ ಮೂಲಕ ಬದಲಾವಣೆ ಮಾಡುವ ಅವಕಾಶವನ್ನು ಹೊಂದಿಲ್ಲ
ಸಂವಿಧಾನದ ಪ್ರಸ್ತಾವನೆ | |
ರಾಜ್ಯನೀತಿ ನಿರ್ದೇಶಕ ತತ್ವಗಳು | |
ಮೂಲಭೂತ ಹಕ್ಕುಗಳು | |
ನ್ಯಾಯಿಕ ಪರಾಮರ್ಶೆ |
Question 10 |
10. ಕೆಳಗಿನ ವಿವರಣೆಗಳನ್ನು ಪರಿಶೀಲಿಸಿ
1.ಎಸ್.ನಿಜಲಿಂಗಪ್ಪರವರು ಕರ್ನಾಟಕ ರಾಜ್ಯದ ಪ್ರಥಮ ಮುಖ್ಯಮಂತ್ರಿಯಾಗಿದ್ದರು
2.ತುಂಗಭದ್ರಾ ನದಿಯು ಕೃಷ್ಣಾ ನದಿಯ ಉಪನದಿಯಾಗಿದೆ
3.ಮ್ಯಾಗ್ಸಸೆ ಪ್ರಶಸ್ತಿಯನ್ನು ಗಳಿಸಿದ ಏಕೈಕ ಕನ್ನಡಿಗ ಕೆ.ವಿ.ಸುಬ್ಬಣ್ಣ
4.ಡಾ.ರಾಜಾರಾಮಣ್ಣ ರವರು ಭಾರತ ಸರ್ಕಾರದ ರಕ್ಷಣಾ ಶಾಖೆಯ ರಾಜ್ಯ ಮಂತ್ರಿಗಳಾಗಿ ಸೇವೆ ಸಲ್ಲಿಸಿದರು
ಇದರಲ್ಲಿ ಸರಿಯಾಗ ವಿವರಣೆಗಳು ಯಾವುವು?
1, 2 ಮತ್ತು 3 | |
1, 2 ಮತ್ತು 4 | |
2, 3 ಮತ್ತು 4 | |
ಮೇಲಿನ ಎಲ್ಲವೂ |
Awesome…
Nice
Giv downloading option sir
please be update 20,21,
nice
thanku
Giv download options