ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-11, 2016

Question 1

1.ಇತ್ತೀಚೆಗೆ ಗಿನ್ನಿಸ್ ದಾಖಲೆ ಸೇರ್ಪಡೆಗೊಂಡ “ಬತುಕಮ್ಮ(Bathukamma)” ಹಬ್ಬವನ್ನು ಯಾವ ರಾಜ್ಯದಲ್ಲಿ ಆಚರಿಸಲಾಗುತ್ತದೆ?

A
ಕೇರಳ
B
ಆಂಧ್ರ ಪ್ರದೇಶ
C
ಕರ್ನಾಟಕ
D
ತೆಲಂಗಣ
Question 1 Explanation: 
ತೆಲಂಗಣ:

ಬತುಕಮ್ಮ ಹಬ್ಬ ತೆಲಂಗಣದ ಪ್ರಮುಖ ಹಬ್ಬವಾಗಿದೆ. ಸಾವಿರಾರು ವರ್ಷಗಳ ಇತಿಹಾಸವನ್ನು ಈ ಹಬ್ಬ ಹೊಂದಿದೆ. ಇತ್ತೀಚೆಗೆ ಹೈದಾರಾಬಾದಿನ ಲಾಲ್ ಬಹಾದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ 9,292 ಮಹಿಳೆಯರು ಈ ಹಬ್ಬದಲ್ಲಿ ಭಾಗವಹಿಸಿ ಹೊಸ ದಾಖಲೆ ಬರೆದಿದ್ದಾರೆ. ಕಳೆದ ವರ್ಷ ಅಂದರೆ 2015ರಲ್ಲಿ ಕೇರಳದಲ್ಲಿ ಏರ್ಪಡಿಸಲಾಗಿದ್ದ ಓಣಂ ನೃತ್ಯ ಕಾರ್ಯಕ್ರಮದಲ್ಲಿ ಐದು ಸಾವಿರಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು. ಈಗ ಬತುಕಮ್ಮ ಹಬ್ಬ ಈ ದಾಖಲೆಯನ್ನು ಮುರಿದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡಿಗೆ ಸೇರ್ಪಡೆಯಾಗಿದೆ.

Question 2

2.2016ನೇ ಸಾಲಿನ ನೊಬೆಲ್ ಅರ್ಥಶಾಸ್ತ್ರ ಪ್ರಶಸ್ತಿಯನ್ನು ಈ ಕೆಳಗಿನ ಯಾರು ಪಡೆದುಕೊಂಡಿದ್ದಾರೆ?

A
ಆಲಿವರ್ ಹಾರ್ಟ್ ಮತ್ತು ಬೆಂಗ್ಟ್ ಹೋಲ್ಮಸ್ಟ್ರಾಮ್
B
ಡೇವಿಡ್ ಕ್ರೆಬ್ ಮತ್ತು ಲೀನಿಯೆಸ್ ಮ್ಯಾಥ್ಯೂ
C
ಜಾರ್ಜ್ ಎಫ್ ಪೊರ್ಡ್ ಮತ್ತು ಯೂನಸ್ ಖಾನ್
D
ಆಲಿವರ್ ಹಾರ್ಟ್ ಮತ್ತು ಡೇವಿಡ್ ಕ್ರೆಬ್
Question 2 Explanation: 
ಆಲಿವರ್ ಹಾರ್ಟ್ ಮತ್ತು ಬೆಂಗ್ಟ್ ಹೋಲ್ಮಸ್ಟ್ರಾಮ್

ಬ್ರಿಟನ್‌ - ಅಮೆರಿಕದ ಅರ್ಥಶಾಸ್ತ್ರಜ್ಞ ಆಲಿವರ್‌ ಹಾರ್ಟ್‌ ಮತ್ತು ಫಿನ್ಲೆಂಡ್‌ನ ಬೆಂಗ್ಟ್‌ ಹೋಲ್ಮಸ್ಟ್ರಾಮ್‌ ಅವರು ಅಭಿವೃದ್ಧಿಪಡಿಸಿರುವ ‘ಗುತ್ತಿಗೆ ಸಿದ್ಧಾಂತ’ಕ್ಕೆ ನೊಬೆಲ್ ಅರ್ಥಶಾಸ್ತ್ರ ಪ್ರಶಸ್ತಿಯನ್ನು ಜಂಟಿಯಾಗಿ ಘೋಷಿಸಲಾಗಿದೆ. ಉನ್ನತ ಹುದ್ದೆಗಳಲ್ಲಿ ಇರುವವರ ಕಾರ್ಯದಕ್ಷತೆ ಆಧರಿಸಿದ ವೇತನ, ವಿಮೆ ಹಣ ಪಾವತಿ, ಕಡಿತ ಮತ್ತು ಸರ್ಕಾರಿ ವಲಯದ ಉತ್ಪಾದನಾ ಚಟುವಟಿಕೆಗಳ ಖಾಸಗೀಕರಣ ಸೇರಿದಂತೆ ವೈವಿಧ್ಯಮಯ ವಿಷಯಗಳನ್ನು ವಿಶ್ಲೇಷಿಸುವ ಸಮಗ್ರ ವಿಧಾನವನ್ನು ಈ ಇಬ್ಬರೂ ಅರ್ಥಶಾಸ್ತ್ರಜ್ಞರು ಈ ಗುತ್ತಿಗೆ ಸಿದ್ಧಾಂತದಲ್ಲಿ ಅಭಿವೃದ್ಧಿಪಡಿಸಿದ್ದಾರೆ ಎಂದು ಪ್ರಶಸ್ತಿ ಆಯ್ಕೆ ಸಮಿತಿಯು ತಿಳಿಸಿದೆ. ಅರ್ಥಶಾಸ್ತ್ರಕ್ಕೆ ನೀಡಲಾಗುವ ನೊಬೆಲ್‌ ಪ್ರಶಸ್ತಿಯನ್ನು ಸ್ವೀಡನ್ನಿನ ಕೇಂದ್ರೀಯ ಬ್ಯಾಂಕ್‌ 1968ರಲ್ಲಿ ಸ್ಥಾಪಿಸಿದೆ.

Question 3

3.ಅಂತಾರಾಷ್ಟ್ರೀಯ ಹೆಣ್ಣು ಮಗು ದಿನ (International Day of Girl Child)ವನ್ನು ಯಾವ ದಿನದಂದು ಆಚರಿಸಲಾಗುತ್ತದೆ?

A
ಅಕ್ಟೋಬರ್ 10
B
ಅಕ್ಟೋಬರ್ 11
C
ಅಕ್ಟೋಬರ್ 12
D
ಜನವರಿ 25
Question 3 Explanation: 
ಅಕ್ಟೋಬರ್ 11:

ಅಂತಾರಾಷ್ಟ್ರೀಯ ಹೆಣ್ಣು ಮಗು ದಿನ ಅಕ್ಟೋಬರ್ 11 ರಂದು ಆಚರಿಸಲಾಗುತ್ತದೆ. ವಿಶ್ವಸಂಸ್ಥೆಯ ಘೋಷಣೆಯಂತೆ 2012 ರಂದು ಮೊದಲ ಬಾರಿಗೆ ಅಂತಾರಾಷ್ಟ್ರೀಯ ಹೆಣ್ಣು ಮಗು ದಿನವನ್ನು ಆಚರಿಸಲಾಗಿತ್ತು. ಹೆಣ್ಣು ಮಕ್ಕಳ ವಿರುದ್ದ ಧೋರಣೆ, ತಾರತಮ್ಯವನ್ನು ಹೋಗಲಾಡಿಸಲು ಹಾಗೂ ಸಮಾನ ಹಕ್ಕನ್ನು ನೀಡಲು ವಿಶ್ವ ಮಟ್ಟದಲ್ಲಿ ಒತ್ತಾಯಿಸಲು ಈ ದಿನವನ್ನು ಆಚರಿಲಾಗುತ್ತದೆ. Girls' Progress = Goals' Progress: What Counts for Girls ಈ ವರ್ಷದ ಆಚರಣೆಯ ಥೀಮ್.

Question 4

4.2016ನೇ ಸಾಲಿನ ಐಎಸ್ಎಸ್ಎಫ್ 'ಚಾಂಪಿಯನ್ಸ್ ಆಫ್ ಚಾಂಪಿಯನ್ಸ್' ಪ್ರಶಸ್ತಿಯನ್ನು ಗೆದ್ದುಕೊಂಡ ಶೂಟರ್ ಯಾರು?

A
ಗಗನ್ ನಾರಂಗ್
B
ಜಿತು ರಾಯ್
C
ಡಾಮಿರ್ ಮಿಕೆಕ್
D
ಅಶೋಕ್ ಕಶ್ಯಪ್
Question 4 Explanation: 
ಜಿತು ರಾಯ್:

ಭಾರತದ ಖ್ಯಾತ ಶೂಟರ್ ಜಿತು ರಾಯ್ ಅವರು ಚಾಂಪಿಯನ್ಸ್ ಟ್ರೋಫಿ 10 ಮೀ. ಏರ್ ಪಿಸ್ತೂಲ್ ಫೈನಲ್ನಲ್ಲಿ ಪ್ರಶಸ್ತಿ ಗೆಲ್ಲುವ ಮೂಲಕ 2016ನೆ ಸಾಲಿನ ಐಎಸ್ಎಸ್ಎಫ್ನ 'ಚಾಂಪಿಯನ್ಸ್ ಆಫ್ ಚಾಂಪಿಯನ್ಸ್' ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಇಟಲಿಯ ಬೊಲೊಗ್ನಾದಲ್ಲಿ ನಡೆದ 10 ಮೀಟರ್ ಏರ್ ಪಿಸ್ತೂಲ್ ಫೈನಲ್ನಲ್ಲಿ ಜಿತು ರಾಯ್ ಅವರು ಸರ್ಬಿಯಾದ ಡಾಮಿರ್ ಮಿಕೆಕ್ ಅವರನ್ನು ಹಿಂದಿಕ್ಕಿ 5,587 ಡಾಲರ್(5,000 ಯುರೋಸ್) ಮೊತ್ತದ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ.

Question 5

5. ಈ ಕೆಳಗಿನ ಯಾರು ಚೀನಾದ ಭಾರತ ರಾಯಭಾರಿಯಾಗಿ ಇತ್ತೀಚೆಗೆ ನೇಮಕಗೊಂಡರು?

A
ಲೀ ಯೆಂಗ್ಚುಕ್
B
ಲುವೋ ಝಾವೋ ಹುಯಿ
C
ಲೀ ಚಾಂಗ್ಲಿ
D
ಲುವೋ ಪೋಸೆಕಾ ಹುಯಿ
Question 5 Explanation: 
ಲುವೋ ಝಾವೋ ಹುಯಿ:

ಚೀನಾದ ಅಧ್ಯಕ್ಷ ಕ್ಸಿ ಜಿನ್ಪಿಂಗ್ ರವರು ಲುವೋ ಝಾವೋ ಹುಯಿ (Luo Zhaohui) ರವರನ್ನು ಚೀನಾದ ಭಾರತ ರಾಯಭಾರಿಯನ್ನಾಗಿ ನೇಮಕ ಮಾಡಿದ್ದಾರೆ. ಈ ಮುಂಚೆ ಇವರು ಚೀನಾದ ಕೆನಡಾ ರಾಯಭಾರಿಯಾಗಿ 2014 ರಿಂದ 2016 ರವರೆಗೆ ಕಾರ್ಯನಿರ್ವಹಿಸಿದ್ದರು.

Question 6

6.ಇತ್ತೀಚೆಗೆ ನಿಧನರಾದ “ಪರಮೇಶ್ವರ್ ಗೋದ್ರೆಜ್” ರವರು ಪ್ರಸಿದ್ದ _______?

A
ಲೇಖಕಿ
B
ಲೋಕೋಪಕಾರಿ
C
ಉದ್ಯಮಿ
D
ಗಾಯಕಿ
Question 6 Explanation: 
ಲೋಕೋಪಕಾರಿ:

ಉದ್ಯಮಿ ಆದಿ ಗೊದ್ರೇಜ್‌ ಅವರ ಪತ್ನಿ ಪರಮೇಶ್ವರ್‌ ಗೋದ್ರೆಜ್‌ ನಿಧನರಾದರು. ಲೋಕೋಪಕಾರಿ, ಸಮಾಜವಾದಿ ಹೀಗೆ ಬಹುಮುಖ ಪ್ರತಿಭೆಯ ಪರಮೇ ಶ್ವರ್‌ ಅವರು ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದರು. ಏಡ್ಸ್‌ ವಿರುದ್ಧದ ಹೋರಾಟಕ್ಕೆ ದಿ ಬಿಲ್‌ ಮತ್ತು ಮಿಲಿಂದಾ ಗೇಟ್ಸ್‌ ಫೌಂಡೇಶನ್‌ ಹಾಗೂ ಕ್ಲಿಂಟನ್‌ ಗ್ಲೋಬಲ್‌ ಕೈಗೊಂಡಿರುವ ‘ಹೀರೋಸ್‌’ ಯೋಜನೆಗೆ ಪರಮೇಶ್ವರ್‌ ಗೋದ್ರೆಜ್‌ ಅವರೂ ಕೈಜೋಡಿಸಿದ್ದರು.

Question 7

7. ಯಾವ ರಾಜ್ಯ ಸರ್ಕಾರ ರಾಜ್ಯದಲ್ಲಿ ಅನೀಮಿಯಾವನ್ನು ಮುಕ್ತಗೊಳಿಸುವ ಸಲುವಾಗಿ ‘ಲಲಿಮಾ ಅಭಿಯಾನ (Lalima Abhiyan)ವನ್ನು ಜಾರಿಗೊಳಿಸಲಿದೆ?

A
ರಾಜಸ್ತಾನ
B
ಮಧ್ಯಪ್ರದೇಶ
C
ಗುಜರಾತ್
D
ಮಹಾರಾಷ್ಟ್ರ
Question 7 Explanation: 
ಮಧ್ಯಪ್ರದೇಶ:

ಮಧ್ಯಪ್ರದೇಶ ರಾಜ್ಯವನ್ನು ಅನೀಮಿಯಾ ಮುಕ್ತ ರಾಜ್ಯವನ್ನಾಗಿ ಮಾಡಲು “ಲಲಿಮಾ ಅಭಿಯಾನ”ವನ್ನು ಜಾರಿಗೊಳಿಸಲು ಮಧ್ಯಪ್ರದೇಶ ಸರ್ಕಾರ ತೀರ್ಮಾನಿಸಿದೆ. ನವೆಂಬರ್ 1 ರಿಂದ ಈ ಅಭಿಯಾನ ಅನುಷ್ಟಾನಗೊಳ್ಳಲಿದೆ. ಈ ಅಭಿಯಾನದಡಿ ಉಚಿಯವಾಗಿ ಐರನ್ ಫೊಲಿಕ್ ಮಾತ್ರೆಗಳನ್ನು ಅಂಗನವಾಡಿ, ಆರೋಗ್ಯ ಕೇಂದ್ರ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ವಿತರಿಸಲಾಗುವುದು.

Question 8

8.ಮಧುಮೇಹ ರೋಗಿಯ ಮೂತ್ರದ ಮಾದರಿಯು ಇವುಗಳನ್ನು ಒಳಗೊಂಡಿರುತ್ತದೆ___?

A
ಸುಕ್ರೋಸ್
B
ಫ್ರಕ್ಟೋಸ್
C
ಗ್ಲೂಕೋಸ್
D
ಮೇಲಿನ ಎಲ್ಲವೂ
Question 8 Explanation: 
ಮೇಲಿನ ಎಲ್ಲವೂ
Question 9

9.“Half Lion: How P V Narasimha Rao Transformed India” ಪುಸ್ತಕದ ಲೇಖಕರು ಯಾರು?

A
ವಿನಯ್ ಸಿತಪತಿ
B
ಜಗದೀಶ್ ಕುಲಕರ್ಣಿ
C
ಭಾಸ್ಕರ್ ರಾಜ್
D
ಅಶೋಕ್ ಸಿಂಗ್
Question 9 Explanation: 
ವಿನಯ್ ಸಿತಪತಿ:

“Half Lion: How P V Narasimha Rao Transformed India” ಪುಸ್ತಕವನ್ನು ವಿನಯ್ ಸಿತಪರಿ ರವರು ಬರೆದಿದ್ದಾರೆ. ಭಾರತದ ಮಾಜಿ ಪ್ರಧಾನಿ ಪಿ ವಿ ನರಸಿಂಹ ರಾವ್ ರವರ ಜೀವನವನ್ನು ಆಳವಾಗಿ ಸಂಶೋಧನೆ ನಡೆಸಿ ಈ ಪುಸ್ತಕವನ್ನು ಬರೆಯಲಾಗಿದೆ.

Question 10

10. ಪೂರ್ವ ಘಟ್ಟಗಳ ಭಾಗವಾಗಿರುವ “ವೆಲಿಕೊಂಡ ಬೆಟ್ಟಗಳು (Veliconda Hills)” ಯಾವ ರಾಜ್ಯದಲ್ಲಿ ಕಂಡು ಬರುತ್ತವೆ?

A
ಒಡಿಶಾ
B
ತಮಿಳು ನಾಡು
C
ಕೇರಳ
D
ಆಂಧ್ರ ಪ್ರದೇಶ
Question 10 Explanation: 
ಆಂಧ್ರ ಪ್ರದೇಶ:

ವೆಲಿಕೊಂಡ ಬೆಟ್ಟಗಳು ಆಂಧ್ರ ಪ್ರದೇಶದ ದಕ್ಷಿಣ ಭಾಗದಲ್ಲಿದ್ದು, ಪೂರ್ವ ಘಟ್ಟಗಳ ಭಾಗವಾಗಿವೆ.

There are 10 questions to complete.

[button link=”http://www.karunaduexams.com/wp-content/uploads/2016/10/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ಚಿಜ್-ಅಕ್ಟೋಬರ್-11.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

2 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-11, 2016”

  1. krishna

    Nice collection…

  2. Laxmikant

    I traying to give ans

Leave a Comment

This site uses Akismet to reduce spam. Learn how your comment data is processed.