ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.
ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -16
Question 1 |
1.ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಹೆಸರಿನಲ್ಲಿ ಸ್ಥಾಪಿಸಲಾಗಿರುವ “ವಿಶಿಷ್ಟ ಪ್ರಾಧ್ಯಪಕ ಪೀಠ”ದ ಪ್ರಥಮ ಮುಖ್ಯಸ್ಥರಾಗಿ ಯಾರು ನೇಮಕಗೊಂಡಿದ್ಧಾರೆ?
ಡಾ. ಚಂದ್ರಶೇಖರ ಪಾಟೀಲ | |
ಪ್ರೋ. ವಸಂತ್ ಹೊನ್ನಾವರ | |
ಕ್ರಿಸ್ ಗೋಪಾಲಕೃಷ್ಣನ್ | |
ಪ್ರೋ ಅನುರಾಗ್ ಕುಮಾರ್ |
ಪೆನ್ವೆಲ್ವೇನಿಯಾ ಮುಖ್ಯಸ್ಥರಾದ ಪ್ರೋ. ವಸಂತ್ ಹೊನ್ನಾವರ ಅವರನ್ನು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಹೆಸರಿನಲ್ಲಿ ಸ್ಥಾಪಿಸಲಾಗಿರುವ “ವಿಶಿಷ್ಟ ಪ್ರಾಧ್ಯಪಕ ಪೀಠ”ದ ಪ್ರಥಮ ಮುಖ್ಯಸ್ಥರಾಗಿ ನೇಮಕಮಾಡಲಾಗಿದೆ. ವಸಂತ್ ಅವರು ಕೃತಕ ಬುದ್ಧಿಮತ್ತೆ (ಆರ್ಟಿಫಿಷಿಯಲ್ ಇಂಟೆಲಿಜೆನ್ಸ್) ಪ್ರಯೋಗಾಲಯದ ನಿರ್ದೇಶಕರಾಗಿದ್ದಾರೆ. ಬಯೋ ಇನ್ಫರ್ಮೆಟಿಕ್ಸ್, ಜಿನೋಮಿಕ್ಸ್ ಮತ್ತು ನರವಿಜ್ಞಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ.
Question 2 |
2.ರಾಷ್ಟ್ರೀಯ ಯಕ್ಷಗಾನ ತರಭೇತಿ ಕೇಂದ್ರ ಯಾವ ಜಿಲ್ಲೆಯಲಿದೆ?
ದಕ್ಷಿಣ ಕನ್ನಡ | |
ಉಡುಪಿ | |
ಉತ್ತರ ಕನ್ನಡ | |
ಶಿವಮೊಗ್ಗ |
ರಾಷ್ಟ್ರೀಯ ಯಕ್ಷಗಾನ ತರಭೇತಿ ಕೇಂದ್ರ ಮಣಿಪಾಲ, ಉಡುಪಿಯಲ್ಲಿದೆ. ಭಾರತ ಸರ್ಕಾರದ ಸಂಸ್ಕೃತ ಇಲಾಖೆಯ ಗುರು ಕಾರ್ಯಕ್ರಮದಡಿ ಈ ತರಭೇತಿ ಕೇಂದ್ರವನ್ನು 1971 ರಲ್ಲಿ ಸ್ಥಾಪಿಸಲಾಯಿತು. ಡಾ.ಕೆ ಶಿವರಾಮ ಕಾರಂತ ಮತ್ತು ಪ್ರೋ. ಕೆ. ಎಸ್. ಹರಿದಾಸ್ ಭಟ್ ಅವರ ಶ್ರಮದ ಫಲವಾಗಿ ಈ ಕೇಂದ್ರ ಸ್ಥಾಪನೆಗೊಂಡಿತು. ಪ್ರಸ್ತುತ ಪ್ರೋ ಹೆಚ್ ಕೃಷ್ಣ ಭಟ್ ಈ ತರಭೇತಿ ಕೇಂದ್ರದ ನಿರ್ದೇಶಕರಾಗಿದ್ದಾರೆ.
Question 3 |
3.ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿಷ್ಣು ಸೇನಾ ಸಮಿತಿಯ ಸಹಯೋಗದಲ್ಲಿ ಪ್ರತಿ ವರ್ಷ ನೀಡುವ ಡಾ. ವಿಷ್ಣುವರ್ಧನ್ ಪ್ರಶಸ್ತಿಯನ್ನು ಪ್ರಸ್ತಕ ಸಾಲಿನಲ್ಲಿ ಯಾರಿಗೆ ನೀಡಲಾಗಿದೆ?
ಸರೋಜಿನಿ ದೇವಿ | |
ಲೀಲಾವತಿ | |
ಸುಮಲತಾ | |
ದೊರೈ ಭಗವಾನ್ |
ಕನ್ನಡದ ಹಿರಿಯ ನಟಿ ಲೀಲಾವತಿ ಅವರಿಗೆ ಡಾ.ವಿಷ್ಣುವರ್ಧನ್ ಅವರ ಪ್ರಶಸ್ತಿ ನೀಡಲಾಗುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ವಿಷ್ಣು ಸೇನಾ ಸಮಿತಿಯ ಸಹಯೋಗದಲ್ಲಿ ಪ್ರತಿ ವರ್ಷ ನೀಡುವ ಅಭಿನವ ಬಾರ್ಗವ ಡಾ. ವಿಷ್ಣುವರ್ಧನ್ ಪ್ರಶಸ್ತಿಯನ್ನ ಈ ಬಾರಿ ಲೀಲಾವತಿ ಅವರಿಗೆ ನೀಡಲು ನಿರ್ಧರಿಸಿದೆ. ನಿನ್ನೆ (ಅಕ್ಟೋಬರ್.13) ನಡೆದ ಕನ್ನಡ ಸಾಹಿತ್ಯ ಪರಿಷತ್ತು ಆಯ್ಕೆ ಸಮಿತಿ ಸಭೆಯಲ್ಲಿ ಈ ನಿರ್ಣಯವನ್ನ ಕೈಗೊಳ್ಳಲಾಗಿದೆ. ಕಳೆದ ಮೂರು ವರ್ಷಗಳಿಂದ ಕನ್ನಡ ಸಾಹಿತ್ಯ ಪರಿಷತ್ ಡಾ. ವಿಷ್ಣುವರ್ಧನ್ ಅವರ ಹೆಸರಿನಲ್ಲಿ ಪ್ರಶಸ್ತಿಯನ್ನ ನೀಡುತ್ತಿದ್ದು, ಮೊದಲ ವರ್ಷ ಎಸ್.ಪಿ ಬಾಲಸುಬ್ರಮಣ್ಯಂರವರಿಗೆ ಹಾಗೂ ಎರಡನೇ ವರ್ಷ ರೆಬಲ್ ಸ್ಟಾರ್ ಡಾ.ಅಂಬರೀಶ್ ರವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈಗ ಮೂರನೆ ವರ್ಷದ ಪ್ರಶಸ್ತಿಗೆ ಲೀಲಾವತಿಯವರನ್ನ ಆಯ್ಕೆ
Question 4 |
4.ಶ್ರೀರಂಗಪಟ್ಟಣದ ಚಂದನವನ ಆಶ್ರಮ ನೀಡುವ “ಕಾವೇರಿ” ಪ್ರಶಸ್ತಿಯನ್ನು ಪಡೆದುಕೊಂಡವರು _____?
ಹಂಸಲೇಖ | |
ಕಿರಣ್ ಕುಮಾರ್ | |
ಅಂಬರೀಷ್ | |
ಹೆಚ್ ಡಿ ಕುಮಾರಸ್ವಾಮಿ |
ಖ್ಯಾತ ವಿಜ್ಞಾನಿ ಹಾಗೂ ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್ ಅವರಿಗೆ ರಾಷ್ಟ್ರಮಟ್ಟದ ಕಾವೇರಿ ಪ್ರಶಸ್ತಿ ಲಭಿಸಿದೆ. ಇಲ್ಲಿಯ ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದಲ್ಲಿ ನವರಾತ್ರಿಯ ಅಂಗವಾಗಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿವ ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಚಿತ್ರ ಸಾಹಿತಿ, ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಕಲಾಯೋಗಿ ಪ್ರಶಸ್ತಿ ನೀಡಲಾಗಿದೆ.
Question 5 |
5.2016-17ನೇ ಸಾಲಿನ ಮಹರ್ಷಿ ವಾಲ್ಮೀಕಿ ಪ್ರಶಸ್ತಿಯನ್ನು ಈ ಕೆಳಗಿನ ಯಾರಿಗೆ ನೀಡಲಾಗಿದೆ?
ಸಿ. ವೀರಣ್ಣ | |
ಕೆ. ಎಚ್. ಮುನಿಯಪ್ಪ | |
ವಿ ಮುನಿಯಪ್ಪ | |
ಸೋಮಣ್ಣ |
2016-17ನೇ ಸಾಲಿನ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಮಾಜಿ ಉಪ ಸಭಾಧ್ಯಕ್ಷರು ಹಾಗೂ ಮಾಜಿ ಸಚಿವ ಸಿ. ವೀರಣ್ಣ ಅವರು ಆಯ್ಕೆಯಾಗಿದ್ದಾರೆ. ಪರಿಶಿಷ್ಟ ಪಂಗಡಗಳ ಜನರ ಏಳ್ಗೆಗಾಗಿ ಗಣನೀಯ ಸೇವೆ ಸಲ್ಲಿಸಿರುವ ಕಾರಣ ಈ ಪ್ರಶಸ್ತಿಗೆ 2016–17ನೇ ಸಾಲಿಗೆ ಸಿ. ವೀರಣ್ಣ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ₹ 5 ಲಕ್ಷ ನಗದು ಒಳಗೊಂಡಿದೆ. 2016–17ನೇ ಸಾಲಿನ ಮಹರ್ಷಿ ವಾಲ್ಮೀಕಿ ಪ್ರಶಸ್ತಿಗೆ ಅರ್ಹ ವ್ಯಕ್ತಿಗಳ ಆಯ್ಕೆ ಸಂಬಂಧ ಕಲಬುರ್ಗಿಯ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ.ನಿರಂಜನ್ ಅವರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚಿಸಲಾಗಿತ್ತು.
Question 6 |
6.ಈ ಕೆಳಗಿನ ಯಾರಿಗೆ 2015ನೇ ಸಾಲಿನ ಕ್ರೀಡಾ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆಗಾಗಿ ನೀಡುವ ಜೀವಮಾನ ಸಾಧನೆ ಪ್ರಶಸ್ತಿ ನೀಡಲಾಗಿದೆ?
ಡಿ ಎನ್ ರುದ್ರಸ್ವಾಮಿ ಮತ್ತು ಬೋಶಪ್ಪ ವಿಠ್ಠಪ್ಪ ಗುಳಬಾಳ | |
ಜಾನ್ ಕ್ರಿಸ್ಟೋಫರ್ ನಿರ್ಮಲ್ ಕುಮಾರ್ ಮತ್ತು ಶಿವಾನಂದ ಆರ್ | |
ಉಮೇಶ್ ಆರ್ ಕವಡೆ ಮತ್ತು ಕಂಚನ್ ಮುನ್ನರಕರ್ | |
ಡಿ ಎನ್ ರುದ್ರಸ್ವಾಮಿ ಮತ್ತು ಶಿವಾನಂದ ಆರ್ |
ಜಾನ್ ಕ್ರಿಸ್ಟೋಫರ್ ನಿರ್ಮಲ್ ಕುಮಾರ್ ಮತ್ತು ಶಿವಾನಂದ ಆರ್ ಬೆಂಗಳೂರಿನ ಈಜು ತರಬೇತುದಾರ ಜಾನ್ ಕ್ರಿಸ್ಟೋಫರ್ ನಿರ್ಮಲ್ ಕುಮಾರ್ ಮತ್ತು ದಾವಣಗೆರೆಯ ಕುಸ್ತಿ ತರಬೇತುದಾರ ಶಿವಾನಂದ ಆರ್ ಅವರು ಜೀವಮಾನದ ಸಾಧನೆ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇದು 1.50 ಲಕ್ಷ ರು. ನಗದು ಹೊಂದಿದೆ.
Question 7 |
7.ಇತ್ತೀಚೆಗೆ ಮಂಗಳೂರಿನ ಪೆರ್ಮುದೆಯಲ್ಲಿ ನಿರ್ಮಿಸಲಾಗಿರುವ ಅಂತರ್ಗತ ತೈಲ ಸಂಗ್ರಹಾಗಾರದಲ್ಲಿ ಯಾವ ದೇಶದಿಂದ 2.6 ಲಕ್ಷ ಟನ್ ಕಚ್ಚಾ ತೈಲವನ್ನು ಆಮದು ಮಾಡಿ ಶೇಖರಣೆ ಮಾಡಲಾಯಿತು?
ಇರಾನ್ | |
ಇರಾಕ್ | |
ಯುಎಇ | |
ನೈಜೀರಿಯಾ |
ಮಂಗಳೂರಿನ ಪೆರ್ಮುದೆಯಲ್ಲಿ ನಿರ್ಮಿಸಲಾಗಿರುವ ಭೂಗತ ತೈಲ ಸಂಗ್ರಹಾಗಾರದಲ್ಲಿ ಕಚ್ಚಾತೈಲ ಸಂಗ್ರಹಣೆಯನ್ನು ಆರಂಭಿಸಲಾಯಿತು. ಇರಾನ್ನಿಂದ ಬಂದ 2.6 ಲಕ್ಷ ಟನ್ ಕಚ್ಚಾ ತೈಲವನ್ನು ಈ ಸಂಗ್ರಹಾಗಾರದಲ್ಲಿ ಶೇಖರಣೆ ಮಾಡಲಾಯಿತು. ಇದೇ ಮೊದಲ ಬಾರಿಗೆ ಮಂಗಳೂರಿನ ತೈಲ ಸಂಗ್ರಹಾಗಾರದಲ್ಲಿ ಈ ಕಚ್ಚಾತೈಲ ಸಂಗ್ರಹ ಮಾಡಲಾಗುತ್ತಿದೆ. ಕಂಪೆನಿಯ ವಿಶಾಖಪಟ್ಟಣ, ಮಂಗಳೂರು ಹಾಗೂ ಉಡುಪಿ ಜಿಲ್ಲೆಯ ಪಾದೂರುಗಳಲ್ಲಿ ಭೂಗತ ತೈಲ ಸಂಗ್ರಹಾಗಾರಗಳನ್ನು ನಿರ್ಮಿಸುತ್ತಿದೆ. ಈಗಾಗಲೇ ವಿಶಾಖಪಟ್ಟಣಂ ಹಾಗೂ ಮಂಗಳೂರಿನ ಸಂಗ್ರಹಾಗಾರಗಳ ನಿರ್ಮಾಣ ಪೂರ್ಣಗೊಂಡಿದೆ.
Question 8 |
8.ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2015-16 ಪ್ರಕಾರ ರಾಜ್ಯದ ಒಟ್ಟಾರೆ ಲಿಂಗಾನುಪಾರ 2015-16ರಲ್ಲಿ ಎಷ್ಟಿದೆ?
970 | |
979 | |
982 | |
973 |
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ 2015-16 ಅಂಕಿ ಅಂಶಗಳ ಪ್ರಕಾರ ರಾಜ್ಯದಲ್ಲಿ ಲಿಂಗಾನುಪಾತ ತೀವ್ರವಾಗಿ ಕುಸಿದಿದೆ ಎಂಬ ಅಂಶ ಬಹಿರಂಗಗೊಂಡಿದೆ. ಸಮೀಕ್ಷೆಯ ಅಂಕಿ ಅಂಶಗಳ ಪ್ರಕಾರ 2005-06 ರಲ್ಲಿ ಹುಟ್ಟಿನ ಸಮಯದಲ್ಲಿ ಶಿಶು ಲಿಂಗಾನುಪಾತ 922 ಇದ್ದು, 2015-16ರಲ್ಲಿ 910ಕ್ಕೆ ಕುಸಿದಿದೆ. ಅದೇ ರೀತಿ ಒಟ್ಟಾರೆ ಲಿಂಗಾನುಪಾತ 1,028 ರಿಂದ 979ಕ್ಕೆ ಇಳಿದಿದೆ.
Question 9 |
9.ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆ/ಹೇಳಿಕೆಗಳನ್ನು ಗುರುತಿಸಿ:
I) ರಾಜ್ಯ ಸರ್ಕಾರವು ರಾಜ್ಯದ ಕ್ರೀಡಾ ಸಾಧಕರಿಗೆ ಏಕಲವ್ಯ ಪ್ರಶಸ್ತಿಯನ್ನು 1992ರಿಂದ ನೀಡುತ್ತಿದೆ
II) ಏಕಲವ್ಯ ಪ್ರಶಸ್ತಿಯು ರೂ 3 ಲಕ್ಷ ನಗದು ಮತ್ತು ಏಕಲವ್ಯನ ಕಂಚಿನ ಮೂರ್ತಿ ಒಳಗೊಂಡಿದೆ
ಈ ಕೆಳಗೆ ನೀಡಿರುವ ಕೋಡ್ ಮೂಲಕ ಸರಿಯಾದ ಉತ್ತರವನ್ನು ಆರಿಸಿ:
ಹೇಳಿಕೆ I ಮಾತ್ರ ಸರಿ | |
ಹೇಳಿಕೆ II ಮಾತ್ರ ಸರಿ | |
ಎರಡು ಹೇಳಿಕೆ ಸರಿ | |
ಎರಡು ಹೇಳಿಕೆ ತಪ್ಪು |
ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿಯನ್ನು 1992ರಿಂದ ರಾಜ್ಯದ ಕ್ರೀಡಾಸಾಧಕರಿಗೆ ನೀಡಿ ಗೌರವಿಸಲಾಗುತ್ತಿದೆ. ಈ ಪ್ರಶಸ್ತಿ 2 ಲಕ್ಷ ರು. ನಗದು ಹಾಗೂ ಏಕಲವ್ಯನ ಕಂಚಿನ ಮೂರ್ತಿಯನ್ನು ಒಳಗೊಂಡಿದೆ.
Question 10 |
10.ಮೂರನೇ ಮೈಸೂರು ಯುದ್ದವು ಈ ಕೆಳಗಿನ ಯಾವ ಒಪ್ಪಂದದೊಂದಿಗೆ ಮುಕ್ತಾಯಗೊಂಡಿತು?
ಮಂಗಳೂರು ಶಾಂತಿ ಒಪ್ಪಂದ | |
ಶ್ರೀರಂಗಪಟ್ಟಣ ಒಪ್ಪಂದ | |
ಮದ್ರಾಸ್ ಒಪ್ಪಂದ | |
ಮೈಸೂರು ಒಪ್ಪಂದ |
ಮೂರನೇ ಮೈಸೂರು ಯುದ್ದವು 1790 ರಲ್ಲಿ ಆರಂಭಗೊಂಡಿತು. ಯುದ್ದ ಆರಂಭವಾಗಿ ಎರಡು ವರ್ಷಗಳ ನಂತರ ಶ್ರೀರಂಗಪಟ್ಟಣ ಒಪ್ಪಂದದಂತೆ 1792ರಲ್ಲಿ ಮುಕ್ತಾಯಗೊಂಡಿತು.
Thanks karunaduexams
this is very good to face all comparative exams thank you
Super
nothing simple
Comment
ಧನ್ಯವಾದಗಳು ಸರ್
THANK YOU SIR THANK YOU VERY MUCH
THANK YOU SIR THANK YOU VERY MUCH
Thank u sir
Comment
Very nice