ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-14, 2016

Question 1

1.ಈ ಕೆಳಗಿನ ಯಾವ ರಾಜ್ಯದಲ್ಲಿ “ಹಿಮಾಂಶು” ಹಿಮನದಿ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಲಾಗಿದೆ?

A
ಉತ್ತರಖಂಡ್
B
ಹಿಮಾಚಲ ಪ್ರದೇಶ
C
ಉತ್ತರ ಪ್ರದೇಶ
D
ಜಮ್ಮು ಮತ್ತು ಕಾಶ್ಮೀರ
Question 1 Explanation: 
ಹಿಮಾಚಲ ಪ್ರದೇಶ:

ಹಿಮಾಲಯದಲ್ಲಿ ಸ್ಥಾಪಿಸಲಾಗಿರುವ ದೇಶದ ಅತಿ ಎತ್ತರದ ಹಿಮನದಿ ಸಂಶೋಧನಾ ಕೇಂದ್ರ ಹಿಮಾಂಶು (Himamshu) ತನ್ನ ಕೆಲಸವನ್ನು ಆರಂಭಿಸಿತು. 13,500 ಮೀಟರ್ ಎತ್ತರವಿರುವ ಹಿಮಾಚಲ ಪ್ರದೇಶದ ಸ್ಪಿತಿ ಕಣಿವೆಯಲ್ಲಿ ಈ ಕೇಂದ್ರವನ್ನು ಸ್ಥಾಪಿಸಲಾಗಿದೆ. ಹಿಮನದಿ ಚಲನೆ ಮತ್ತು ಹಿಮ ಹೊದಿಕೆ ವ್ಯತ್ಯಾಸವನ್ನು ಸೂಕ್ಷ್ಮವಾಗಿ ಅಧ್ಯಯನ ನಡೆಸಲು ಈ ಕೇಂದ್ರ ಸಹಕಾರಿಯಾಗಲಿದೆ. ಈ ಸಂಶೋಧನಾ ಕೇಂದ್ರವನ್ನು ನ್ಯಾಷನಲ್ ಸೆಂಟರ್ ಫಾರ್ ಅಂಟಾರ್ಟಿಕ್ ಅಂಡ್ ಓಷನ್ ರೀಸರ್ಚ್ (ಎನ್ಸಿಎಓಆರ್) ಸ್ಪಿತಿ ಕಣಿವೆಯಲ್ಲಿ ಸ್ಥಾಪಿಸಿದೆ. ಸ್ಪಿತಿ ಕಣಿವೆ ದೇಶದ ಅತ್ಯಂತ ನಿರ್ಜನ ಪ್ರದೇಶಗಳಲ್ಲಿ ಒಂದಾಗಿದೆ.

Question 2

2.ಎರಡನೇ ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವವನ್ನು ಯಾವ ನಗರದಲ್ಲಿ ಆಯೋಜಿಸಲಾಗಿದೆ?

A
ಮುಂಬೈ
B
ನವ ದೆಹಲಿ
C
ಲಕ್ನೊ
D
ಇಟಾನಗರ
Question 2 Explanation: 
ನವ ದೆಹಲಿ:

ಎರಡನೇ ರಾಷ್ಟ್ರೀಯ ಸಂಸ್ಕೃತಿ ಮಹೋತ್ಸವವನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ರವರು ನವದೆಹಲಿಯ ಇಂದಿರಾ ಗಾಂಧಿ ರಾಷ್ಟ್ರೀಯ ಕಲಾ ಕೇಂದ್ರದಲ್ಲಿ ಉದ್ಘಾಟಿಸಿದರು. ಹತ್ತು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ದೇಶದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಲಾಗುವುದು.

Question 3

3.ಪೋರ್ಚುಗಲ್ ಮಾಜಿ ಪ್ರಧಾನಿ ಅಂಟೊನಿಯೊ ಗುಟೆರಸ್ ಅವರು ವಿಶ್ವಸಂಸ್ಥೆಯ ಎಷ್ಟನೇ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ?

A
ಏಳು
B
ಎಂಟು
C
ಒಂಬತ್ತು
D
ಹತ್ತು
Question 3 Explanation: 
ಒಂಬತ್ತು:

ಪೋರ್ಚುಗಲ್ ಮಾಜಿ ಪ್ರಧಾನಿ ಅಂಟೊನಿಯೊ ಗುಟೆರಸ್ ಅವರನ್ನು ವಿಶ್ವಸಂಸ್ಥೆಯ ನೂತನ ಮಹಾಪ್ರಧಾನ ಕಾರ್ಯದರ್ಶಿಯನ್ನಾಗಿ ಸಾಮಾನ್ಯ ಸಭೆಯು ಅಧಿಕೃತವಾಗಿ ಆಯ್ಕೆ ಮಾಡಿದೆ. 15 ರಾಷ್ಟ್ರಗಳ ಸದಸ್ಯರನ್ನು ಒಳಗೊಂಡ ಭದ್ರತಾ ಮಂಡಳಿಯು ಕಳೆದ ವಾರ ನಡೆಸಿದ ರಹಸ್ಯ ಸಭೆಯಲ್ಲಿ ಗುಟೆರಸ್ ಆಯ್ಕೆಗೆ ತೀರ್ಮಾನ ತೆಗೆದುಕೊಂಡಿದ್ದು, ಅನುಮೋದನೆಗಾಗಿ ಅವರ ಹೆಸರನ್ನು 193 ದೇಶಗಳ ಸಾಮಾನ್ಯ ಸಭೆಗೆ ಕಳುಹಿಸಿತ್ತು. ಬಾನ್ ಕಿ ಮೂನ್ ಅವರ ಉತ್ತರಾಧಿಕಾರಿಯಾಗಿ, ಮಹಾಪ್ರಧಾನ ಕಾರ್ಯದರ್ಶಿ ಹುದ್ದೆಗೆ ಗುಟೆರಸ್ ಅವರ ಹೆಸರು ಈ ಹಿಂದೆ ಅನೇಕ ಬಾರಿ ಕೇಳಿಬಂದಿತ್ತು. ವಿಶ್ವಸಂಸ್ಥೆಯ ಈಗಿನ ಮಹಾಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಅವರ ಅವಧಿ ಡಿಸೆಂಬರ್ 31ಕ್ಕೆ ಮುಕ್ತಾಯವಾಗಲಿದೆ. 67 ವರ್ಷದ ಗುಟೆರಸ್ ಅವರು ವಿಶ್ವಸಂಸ್ಥೆಯ 9ನೇ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಕವಾಗಿದ್ದು, 2017ರ ಜನವರಿ 1ರಿಂದ 2022ರ ಡಿಸೆಂಬರ್ 31ರವರೆಗೆ ಅವರ ಅಧಿಕಾರ ಅವಧಿ ಇರಲಿದೆ.

Question 4

4.ಇತ್ತೀಚೆಗೆ ನಿಧನರಾದ “ಭೂಮಿಬೋಲ್ ಅದುಲ್ಯದೇಜ್” ರವರು ಯಾವ ದೇಶದ ದೊರೆ ಆಗಿದ್ದರು?

A
ಫಿಲಿಫೈನ್ಸ್
B
ಥಾಯ್ಲೆಂಡ್
C
ಮಾರಿಷಸ್
D
ಈಜಿಪ್ಟ್
Question 4 Explanation: 

ಥಾಯ್ಲೆಂಡ್ ಸತತ 70 ವರ್ಷಗಳ ಆಡಳಿತ ನಡೆಸಿದ್ದ ಥಾಯ್ಲೆಂಡ್ನ ದೊರೆ ಭೂಮಿಬೋಲ್ ಅದುಲ್ಯದೇಜ್ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು. ಭೂಮಿಬೋಲ್ ಜಗತ್ತಿನಲ್ಲಿ ಸುದೀರ್ಘ ಆಡಳಿತ ನಡೆಸಿದ ರಾಜನೆಂಬ ಖ್ಯಾತಿ ಹೊಂದಿದ್ದರು. ಕಳೆದ 2 ವರ್ಷಗಳಿಂದ ಅವರು ಬಹು ಸಮಯ ಆಸ್ಪತ್ರೆಯಲ್ಲಿಯೇ ಕಳೆದಿದ್ದರು. ಥಾಯ್ಲೆಂಡ್ ಜನತೆಯಿಂದ ದೇವಮಾನವ ಎಂದೇ ಕರೆಯಲ್ಪಡುತ್ತಿದ್ದ ಅವರು ಚಕ್ರಿ ಸಾಮ್ರಾಜ್ಯದ 9ನೇ ಸಾಮ್ರಾಟರಾಗಿದ್ದರು. ಅಣ್ಣನ ಸಾವಿನ ನಂತರ 1946ರಲ್ಲಿ ಪಟ್ಟಕ್ಕೇರಿದ್ದ ಅವರಿಗೆ ‘ರಾಮ 9’ ಎಂದೂ ಕರೆಯಲಾಗುತ್ತಿತ್ತು.

Question 5

5.ಪ್ರಧಾನಿ ಮೋದಿ ರವರು ಯಾವ ರಾಜ್ಯದಲ್ಲಿ ಇತ್ತೀಚೆಗೆ “ಶೌರ್ಯ ಸ್ಮಾರಕ”ವನ್ನು ಲೋಕಾರ್ಪಣೆ ಮಾಡಿದರು?

A
ಮಧ್ಯ ಪ್ರದೇಶ
B
ಮಹಾರಾಷ್ಟ್ರ
C
ತೆಲಂಗಣ
D
ಆಂಧ್ರ ಪ್ರದೇಶ
Question 5 Explanation: 
ಮಧ್ಯ ಪ್ರದೇಶ:

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಧ್ಯಪ್ರದೇಶದ ಭೂಪಾಲ್ ನಲ್ಲಿ ನಿರ್ಮಿಸಿರುವ “ಶೌರ್ಯ ಸ್ಮಾರಕ”ವನ್ನು ಲೋಕಾರ್ಪಣೆ ಮಾಡಿದರು. ಈ ಸ್ಮಾರಕವನ್ನು ಮಧ್ಯಪ್ರದೇಶ ಸರ್ಕಾರ ದೇಶಕ್ಕಾಗಿ ಹುತ್ಮಾತರಾದ ಯೋಧರನ್ನು ಸ್ಮರಿಸಲು ನಿರ್ಮಿಸಿದೆ. ಸುಮಾರು 12,.67 ಎಕರೆ ಪ್ರದೇಶದಲ್ಲಿ ರೂ 41 ಕೋಟಿ ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ. ದೇಶಕ್ಕಾಗಿ ವೀರಾವೇಶದಿಂದ ಪ್ರಾಣತೆತ್ತ ಸೈನಿಕರ ಬಗ್ಗೆ ಬೆಳಕು ಮತ್ತು ಧ್ವನಿ ಮಾಧ್ಯಮದ ಮೂಲಕ ಹೇಳುವ ವ್ಯವಸ್ಥೆಯನ್ನು ಈ ಸ್ಮಾರಕ ಹೊಂದಿದೆ.

Question 6

6.ದೇಶದಲ್ಲಿ ಕೃಷಿ ಪ್ರದೀಪನ ಕೇಂದ್ರಗಳನ್ನು (Agro Irradiation Centre) ಸ್ಥಾಪಿಸುವ ಸಲುವಾಗಿ ಯಾವ ದೇಶದೊಂದಿಗೆ ಭಾರತ ಇತ್ತೀಚೆಗೆ ಸಹಿ ಹಾಕಿದೆ?

A
ಜರ್ಮನಿ
B
ರಷ್ಯಾ
C
ಬ್ರೆಜಿಲ್
D
ಇಸ್ರೇಲ್
Question 6 Explanation: 
ರಷ್ಯಾ:

ಬೇಗ ಹಾಳಾಗುವ ಕೃಷಿ ಉತ್ಪನ್ನಗಳನ್ನು ವಿಕಿರಿಣ ಚಿಕಿತ್ಸೆಗೆ ಒಳಪಡಿಸಿ ದೀರ್ಘಕಾಲ ಶೇಖರಿಸಿಡಲು “ಕೃಷಿ ಪ್ರದೀಪನ ಕೇಂದ್ರ”ಗಳನ್ನು ಸ್ಥಾಪಿಸಲು ಭಾರತ ಸರ್ಕಾರ ರಷ್ಯಾದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಈ ಸಂಬಂಧ ರಷ್ಯಾದ ಯುನೈಟೆಡ್ ಇನೋವೇಷನ್ ಕಾರ್ಪೋರೇಷನ್ ಸಂಸ್ಥೆ ಹಾಗೂ ಹಿಂದೂಸ್ತಾನ್ ಆಗ್ರೋ ಸಹಕಾರ ಲಿ., ನಡುವೆ ಒಪ್ಪಂದ ಏರ್ಪಟ್ಟಿದೆ. ಒಪ್ಪಂದದಂತೆ 25 ಕೃಷಿ ಪ್ರದೀಪನ ಕೇಂದ್ರಗಳನ್ನು ದೇಶದಲ್ಲಿ ಸ್ಥಾಪಿಸಲಾಗುವುದು.

Question 7

7.ಜಗತ್ತಿನ ಅತಿ ದೊಡ್ಡ ಉಡುಪು ರಫ್ತು ಮಾಡುವ ದೇಶ ______?

A
ಭಾರತ
B
ಚೀನಾ
C
ಅಮೆರಿಕ
D
ರಷ್ಯಾ
Question 7 Explanation: 
ಚೀನಾ:

ಚೀನಾ ವಿಶ್ವದ ಅತಿದೊಡ್ಡ ಉಡುಪು ರಫ್ತು ಮಾಡುವ ದೇಶವಾಗಿದೆ. ಜಗತ್ತಿನ ಒಟ್ಟು ಉಡುಪು ರಫ್ತು ಮಾರುಕಟ್ಟೆಯಲ್ಲಿ ಚೀನಾ ಶೇ 35-39 ಪಾಲನ್ನು ಹೊಂದಿದೆ. ಐರೋಪ್ಯ ಒಕ್ಕೂಟ ವಿಶ್ವದ ಅತಿ ದೊಡ್ಡ ಉಡುಪು ಆಮದು ಶಕ್ತಿಯಾಗಿದೆ.

Question 8

8.ಮೊಟ್ಟ ಮೊದಲ “ಬ್ರಿಕ್ಸ್-ಬಿಮ್ಸ್ ಟೆಕ್ (BRICS-BIMSTEC)” ಶೃಂಗಸಭೆ ಇತ್ತೀಚೆಗೆ ಯಾವ ರಾಜ್ಯದಲ್ಲಿ ನಡೆಯಿತು?

A
ಗೋವಾ
B
ಕೇರಳ
C
ಹರಿಯಾಣ
D
ರಾಜಸ್ತಾನ
Question 8 Explanation: 
ಗೋವಾ:

ಗೋವಾದಲ್ಲಿ ನಡೆದ 8ನೇ ಬ್ರಿಕ್ಸ್ ಶೃಂಗಸಭೆಯ ಜತೆಗೆ ಬ್ರಿಕ್ಸ್-ಬಿಮ್ಸ್ ಟೆಕ್ ಶೃಂಗಸಭೆ ಅಕ್ಟೋಬರ್ 15 ರಂದು ನಡೆಯಿತು. ಈ ಶೃಂಗಸಭೆಯಲ್ಲಿ ಬಿಮ್ಸ್ ಟೆಕ್ ರಾಷ್ಟ್ರಗಳ ಜೊತೆ ಆರ್ಥಿಕ ಮತ್ತು ತಾಂತ್ರಿಕ ಸಹಕಾರದ ಬಗ್ಗೆ ಚರ್ಚಿಸಲಾಯಿತು. ಬಿಮ್ಸ್ ಟೆಕ್ ರಾಷ್ಟ್ರಗಳು ಬಾಂಗ್ಲಾದೇಶ, ಭಾರತ, ಮ್ಯಾನ್ಮಾರ್, ಶ್ರೀಲಂಕಾ, ಥಾಯ್ಲೆಂಡ್, ಭೂತಾನ್ ಮತ್ತು ನೇಪಾಳ.

Question 9

9.“ಡೈರೆಕ್ಟರ್ ಜನರಲ್ ಆಫ್ ಫಾರೀನ್ ಟ್ರೇಡ್” ನ ನೂತನ ಡೈರೆಕ್ಟರ್ ಜನರಲ್ ಆಗಿ ಯಾರು ನೇಮಕಗೊಂಡಿದ್ದಾರೆ?

A
ಅನೂಪ್ ವಾಧ್ವನ್
B
ಅಜಯ್ ಕುಮಾರ್ ಭಲ್ಲ
C
ಸುಪ್ರೀತ್ ಸಿಂಗ್
D
ಶಿವ ನಾರಾಯಣ್
Question 9 Explanation: 
ಅಜಯ್ ಕುಮಾರ್ ಭಲ್ಲ:

ಹಿರಿಯ ಐಎಎಸ್ ಅಧಿಕಾರಿ ಅಜಯ್ ಕುಮಾರ್ ಭಲ್ಲ ಅವರನ್ನು ಡೈರೆಕ್ಟರ್ ಜನರಲ್ ಆಫ್ ಫಾರೀನ್ ಟ್ರೇಡ್ (Directorate General of Foreign Trade)ನ ನೂತನ ಡೈರೆಕ್ಟರ್ ಜನರಲ್ ಆಗಿ ನೇಮಕಮಾಡಲಾಗಿದೆ. ಅನೂಪ್ ವಾಧ್ವನ್ ಅವರಿಂದ ತೆರವಾಗಿದ್ದ ಸ್ಥಾನವನ್ನು ಭಲ್ಲ ರವರು ತುಂಬಲಿದ್ದಾರೆ. ಅನೂಪ್ ಅವರು ಕೇಂದ್ರ ವಾಣಿಜ್ಯ ಸಚಿವಾಲಯದ ಹೆಚ್ಚುವರಿ ನಿರ್ದೇಶಕರಾಗಿ ನೇಮಕಗೊಂಡ ಕಾರಣ ಈ ಹುದ್ದೆ ಖಾಲಿಯಾಗಿತ್ತು.

Question 10

10.ಭಾರತದಲ್ಲಿ ಈ ಕೆಳಗಿನ ಯಾರ ಸಂಬಳವನ್ನು ಆದಾಯ ತೆರಿಗೆಯಿಂದ ಹೊರಗಿಡಲಾಗಿದೆ?

A
ಪ್ರಧಾನ ಮಂತ್ರಿ
B
ರಾಷ್ಟ್ರಪತಿ
C
ಲೋಕಸಭಾ ಸ್ಪೀಕರ್
D
ಎಲ್ಲಾ ಸಚಿವರುಗಳು
Question 10 Explanation: 
ರಾಷ್ಟ್ರಪತಿ
There are 10 questions to complete.

[button link=”http://www.karunaduexams.com/wp-content/uploads/2016/10/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಅಕ್ಟೋಬರ್-14.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

5 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-14, 2016”

  1. Hasan K

    Super knowledge dears thank you

  2. Avinash

    Plz recheck the question no.5

Leave a Comment

This site uses Akismet to reduce spam. Learn how your comment data is processed.