ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-18, 2016

Question 1

1.9ನೇ ಬ್ರಿಕ್ಸ್ ಶೃಂಗಸಭೆಯು ಸೆಪ್ಟೆಂಬರ್, 2017 ರಲ್ಲಿ ಯಾವ ದೇಶದಲ್ಲಿ ನಡೆಯಲಿದೆ?

A
ಮಾಸ್ಕೊ, ರಷ್ಯಾ
B
ಕ್ಸಿಯಾಮೆನ್, ಚೀನಾ
C
ಜೋಹನ್ಸ್ ಬರ್ಗ್, ದಕ್ಷಿಣ ಆಫ್ರಿಕ
D
ಬ್ರಸಿಲಿಯ, ಬ್ರೆಜಿಲ್
Question 1 Explanation: 
ಕ್ಸಿಯಾಮೆನ್, ಚೀನಾ:

ಬ್ರಿಕ್ಸ್ ರಾಷ್ಟ್ರಗಳ 9ನೇ ಶೃಂಗಸಭೆಯು ಸೆಪ್ಟೆಂಬರ್, 2017 ರಲ್ಲಿ ಚೀನಾದ ಕ್ಸಿಯಾಮೆನ್ ನಲ್ಲಿ ನಡೆಯಲಿದೆ. ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು ಈ ವಿಷಯವನ್ನು ಖಚಿತಪಡಿಸಿದ್ದಾರೆ. 8ನೇ ಬ್ರಿಕ್ಸ್ ಶೃಂಗಸಭೆಯು ಗೋವಾದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡಿತು.

Question 2

2.ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಅಥ್ಲೀಟ್ಗಳ ಆಯೋಗದ ಸದಸ್ಯೆಯಾಗಿ ಯಾರು ನೇಮಕಗೊಂಡಿದ್ದಾರೆ?

A
ಪಿ ವಿ ಸಿಂಧು
B
ಮೇರಿ ಕೋಮ್
C
ಸೈನಾ ನೆಹ್ವಾಲ್
D
ಸಾನಿಯಾ ಮಿರ್ಜಾ
Question 2 Explanation: 
ಸೈನಾ ನೆಹ್ವಾಲ್:

ಖ್ಯಾತ ಬ್ಯಾಡ್ಮಿಂಟನ್ ತಾರೆ ಹಾಗೂ ಒಲಿಂಪಿಕ್ಸ್ನಲ್ಲಿ ಕಂಚು ಗೆದ್ದ ಸಾಧನೆ ಮಾಡಿರುವ ಸೈನಾ ನೆಹ್ವಾಲ್ ಅವರು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಅಥ್ಲೀಟ್ಗಳ ಆಯೋಗದ ಸದಸ್ಯೆಯಾಗಿ ನೇಮಕವಾಗಿದ್ದಾರೆ. ಐಒಸಿ ಅಧ್ಯಕ್ಷ ಥಾಮಸ್ ಬಾಕ್ ಅವರು ಸೈನಾಗೆ ಪತ್ರ ಬರೆದು ಈ ವಿಷಯವನ್ನು ತಿಳಿಸಿದ್ದಾರೆ. ‘ಏಂಜೆಲಾ ರುಗೆಯಿರೊ ಅವರು ಆಯೋಗದ ಅಧ್ಯಕ್ಷರಾಗಿದ್ದು, ಒಂಬತ್ತು ಮಂದಿ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಯೋಗದಲ್ಲಿ ಒಟ್ಟು ಹತ್ತು ಮಂದಿ ಸದಸ್ಯರಿದ್ದಾರೆ.

Question 3

3.ಪ್ರಧಾನಿ ಮೋದಿ ರವರು ರಾಷ್ಟ್ರೀಯ ಎಸ್.ಸಿ/ಎಸ್.ಟಿ ಹಬ್ ಗೆ ಯಾವ ನಗರದಲ್ಲಿ ಚಾಲನೆ ನೀಡಿದರು?

A
ಲೂಧಿಯಾನ
B
ಗುರುಗ್ರಾಮ
C
ಸಾಂಗ್ಲಿ
D
ಜಲಂಧರ್
Question 3 Explanation: 
ಲೂಧಿಯಾನ:

ಪರಿಶಿಷ್ಠ ಪಂಗಡ ಹಾಗೂ ಪರಿಶಿಷ್ಠ ಜಾತಿ ಉದ್ಯಮಿಗಳಿಗೆ ನೆರವು ನೀಡುವ ಉದ್ದೇಶದಿಂದ ಪ್ರಾರಂಭಿಸಲಾಗಿರುವ ರಾಷ್ಟ್ರೀಯ ಎಸ್ ಸಿ/ ಎಸ್ ಟಿ ಹಬ್ ಗೆ ಪ್ರಧಾನಿ ನರೇಂದ್ರ ಮೋದಿ ಲೂದಿಯಾನ, ಪಂಜಾಬ್ ನಲ್ಲಿ ಚಾಲನೆ ನೀಡಿದ್ದಾರೆ. ಪ್ರಾರಂಭದಲ್ಲಿ 490 ಕೋಟಿ ರೂ ವೆಚ್ಚದಲ್ಲಿ ಪ್ರಾರಂಭವಾಗಿರುವ ರಾಷ್ಟ್ರೀಯ ಎಸ್ ಸಿ/ ಎಸ್ ಟಿ ಹಬ್, ಎಸ್ ಸಿ/ ಎಸ್ ಟಿ ಸಮುದಾಯಕ್ಕೆ ನೆರವಾಗುವ ನಿಟ್ಟಿನಲ್ಲಿ ಮಾರುಕಟ್ಟೆ ಪ್ರವೇಶ ಬಲಪಡಿಸುವ, ಆರ್ಥಿಕ ನೆರವಿನ ಯೋಜನೆಗಳು, ಸಮುದಾಯದ ಸಾಮರ್ಥ್ಯ ಹೆಚ್ಚಿಸುವುದಕ್ಕೆ ಉಪಯೋಗವಾಗಲಿದೆ.

Question 4

4.ಈ ಕೆಳಗಿನ ರಾಜ್ಯಗಳನ್ನು ಗಮನಿಸಿ:

I) ಮಹಾರಾಷ್ಟ್ರ

II) ಹರಿಯಾಣ

III) ಗುಜರಾತ್

IV) ರಾಜಸ್ತಾನ್

ಸರ್ದಾರ್ ಸರೋವರ ಯೋಜನೆಯ ಫಲಾನುಭವಿ ರಾಜ್ಯಗಳು ಯಾವುವು?

A
I & II
B
II & III
C
I, II & III
D
I, III & IV
Question 4 Explanation: 
I, III & IV:

ಸರ್ದಾರ್ ಸರೋವರ ಯೋಜನೆಯನ್ನು ನರ್ಮದಿ ನದಿ ಮೇಲೆ ನಿರ್ಮಿಸಲಾಗಿದೆ. ಈ ಯೋಜನೆ ಮೂಲಕ ಗುಜರಾತ್, ರಾಜಸ್ತಾನ ಮತ್ತು ಮಹಾರಾಷ್ಟ್ರದ ಆಯ್ದ ಭಾಗಗಳಿಗೆ ನೀರಾವರಿ ಕಲ್ಪಿಸಲಾಗಿದೆ.

Question 5

5.ಮಾನವ ಹಕ್ಕು ಹೋರಾಟಗಾರ್ತಿ ಇರೋಮ್ ಶರ್ಮಿಳಾ ಅವರು ಆರಂಭಿಸಿದ ಹೊಸ ರಾಜಕೀಯ ಪಕ್ಷ _____?

A
ಪೀಪಲ್ಸ್ ರಿಸರ್ಜನ್ಸ್ ಮತ್ತು ಜಸ್ಟಿಸ್ ಅಲಯನ್ಸ್
B
ಪೀಪಲ್ಸ್ ಡಿಸರ್ವ್ಸ್ ಮತ್ತು ಜಸ್ಟಿಸ್ ಅಲಯನ್ಸ್
C
ಫಾರ್ ಪೀಪಲ್ಸ್ ಮತ್ತು ಜಸ್ಟಿಸ್ ಅಲಯನ್ಸ್
D
ಪೀಪಲ್ಸ್ ಜಸ್ಟಿಸ್ ಮತ್ತು ರಿಸರ್ಜನ್ಸ್ ಅಲಯನ್ಸ್
Question 5 Explanation: 
ಪೀಪಲ್ಸ್ ರಿಸರ್ಜನ್ಸ್ ಮತ್ತು ಜಸ್ಟಿಸ್ ಅಲಯನ್ಸ್:

ಮಾನವ ಹಕ್ಕುಗಳ ಹೋರಾಟಗಾರ್ತಿ ಇರೋಮ್ ಶರ್ಮಿಳಾ ಅವರು “ಪೀಪಲ್ಸ್ ರಿಸರ್ಜನ್ಸ್ ಮತ್ತು ಜಸ್ಟಿಸ್ ಅಲಯನ್ಸ್’ ಎಂಬ ಪಕ್ಷವನ್ನು ಆರಂಭಿಸಿದ್ದಾರೆ. ಮುಂದಿನ ವರ್ಷ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ಒಕ್ರಮ್ ಇಬೋಬಿ ಸಿಂಗ್ ವಿರುದ್ಧ ಥೌಬುಲ್ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಇರೋಮ್ ಘೋಷಿಸಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಥೌಬುಲ್ ಮತ್ತು ಖುರೈ ಕ್ಷೇತ್ರಗಳಿಂದ ಸ್ಪರ್ಧಿಸಲು ನಿರ್ಧರಿಸಿದ್ದೇನೆ’ ಎಂದು ಇರೋಮ್ ತಿಳಿಸಿದ್ದಾರೆ.

Question 6

6.ಇತ್ತೀಚೆಗೆ ಫ್ರಾನ್ಸ್ ಉಭಯ ಸದನಗಳನ್ನು ಉದ್ದೇಶಿಸಿ ಮಾತನಾಡಿದ ಮೊದಲ ಭಾರತೀಯ ಯಾರು?

A
ಶ್ರೀ ರವಿಶಂಕರ್ ಗುರೂಜಿ
B
ಹಮೀದ್ ಅನ್ಸಾರಿ
C
ನಿರ್ಮಲನಂದ ಸ್ವಾಮೀಜಿ
D
ಅರುಣ್ ಜೇಟ್ಲಿ
Question 6 Explanation: 
ಶ್ರೀ ರವಿಶಂಕರ್ ಗುರೂಜಿ:

ಆಧ್ಯಾತ್ಮಿಕ ಗುರು ಮತ್ತು ಆರ್ಟ್ ಆಫ್ ಲಿವಿಂಗ್ನ ಸ್ಥಾಪಕ ಶ್ರೀ ಶ್ರೀ ರವಿಶಂಕರ್ ಅವರು ಪ್ಯಾರಿಸ್ನಲ್ಲಿರುವ ಫ್ರೆಂಚ್ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದರು. ಆ ಮೂಲಕ ಫ್ರಾನ್ಸ್ನ ಸಂಸದರನ್ನುದ್ದೇಶಿಸಿ ಮಾತನಾಡಿದ ಮೊದಲ ಭಾರತೀಯ ಎಂಬ ಗೌರವಕ್ಕೆ ಅವರು ಪಾತ್ರರಾಗಿದ್ದಾರೆ. ಅಕ್ಟೋಬರ್ 18ರಂದು ಸಂಸತ್ತಿನ ಕೆಳಮನೆಯಾದ ‘ನ್ಯಾಷನಲ್ ಅಸೆಂಬ್ಲಿ’ಯಲ್ಲಿ ಮಾತನಾಡಿದ ಅವರು, ಅಕ್ಟೋಬರ್ 19 ರಂದು ಮೇಲ್ಮನೆಯಾದ ‘ಸೆನೆಟ್ ಆಫ್ ಫ್ರಾನ್ಸ್’ ಉದ್ದೇಶಿಸಿ ಮಾತನಾಡಲಿದ್ದಾರೆ. ಭಾರತ–ಫ್ರಾನ್ಸ್ ಪಾರ್ಲಿಮೆಂಟರಿ ಸಮಿತಿ ಅಧ್ಯಕ್ಷ ಪೌಲ್ ಗಿಯಾಕೊಬಿ ಮತ್ತು ಭಾರತ–ಫ್ರಾನ್ಸ್ ಸೆನೆಟರ್ಗಳ ಸಮಿತಿ ಅಧ್ಯಕ್ಷರಾದ ಫ್ರಾಂಕೊಯಿಸ್ ಮಾರ್ಕ್ ಅವರ ಕೋರಿಕೆ ಮೇರೆಗೆ ಶ್ರೀ ಶ್ರೀ ರವಿಶಂಕರ್ ಫ್ರಾನ್ಸ್ ಸಂಸತ್ ಉದ್ದೇಶಿಸಿ ಮಾತನಾಡಿದ್ದಾರೆ.

Question 7

7.ಕಾಶ್ಮೀರದ “ದಚಿಗಮ್ ರಾಷ್ಟ್ರೀಯ ಉದ್ಯಾನವನ” ಈ ಕೆಳಗಿನ ಯಾವುದರ ಸಂರಕ್ಷಣೆಗೆ ಪ್ರಸಿದ್ದಿಯಾಗಿದೆ?

A
ತೋಳ
B
ಹಿಮ ಕರಡಿ
C
ಕಾಶ್ಮೀರದ ಜಿಂಕೆ
D
ಇಂಡಿಯನ್ ಬಸ್ಟರ್ಡ್
Question 7 Explanation: 
ಕಾಶ್ಮೀರದ ಜಿಂಕೆ:

ದಚಿಗಮ್ ವನ್ಯಜೀವಿ ಅಭಯಾರಣ್ಯ ಕಾಶ್ಮೀರದ ಪ್ರಮುಖ ಆಕರ್ಷಣೆಗಳಲ್ಲಿ ಒಂದು. ಇದು ಸುಮಾರು 141 ಚದರ ಕಿಲೋಮೀಟರ್ ವಿಸ್ತಾರದಲ್ಲಿ ವ್ಯಾಪಿಸಿದೆ. ಇದನ್ನು 1951ರಲ್ಲಿ ರಾಷ್ಟ್ರೀಯ ಉದ್ಯಾನ ಎಂದು ಘೋಷಿಸಲಾಗಿದೆ. ಇದು ಅಳಿವಿನ ಅಂಚಿನಲ್ಲಿರುವ ಕಾಶ್ಮೀರದ ಜಿಂಕೆ ಅಥವಾ ಹಂಗುಲ್ ಸಂರಕ್ಷಣೆಗೆ ಪ್ರಸಿದ್ದಿ ಹೊಂದಿದೆ. ಇದರ ಜೊತೆಗೆ ಇಲ್ಲಿ ಚಿರತೆ, ಕಪ್ಪು ಮತ್ತು ಕಂದು ಕರಡಿಗಳು, ಕಸ್ತೂರಿ ಮೃಗ ಮತ್ತು ಹಲವಾರು ವಲಸೆ ಬರುವ ಹಕ್ಕಿಗಳನ್ನು ಕಾಣಬಹುದಾಗಿದೆ.

Question 8

8.ಯಾವ ಸಂಸ್ಥೆ ಇತ್ತೀಚೆಗೆ ಸ್ವದೇಶಿ ತಂತ್ರಜ್ಞಾನ ಬಳಸಿ ದೇಶದ ಮೊದಲ ವಿದ್ಯುತ್ ಚಾಲಿತ ಬಸ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ?

A
ಮಹೀಂದ್ರ ಅಂಡ್ ಮಹೀಂದ್ರ
B
ಅಶೋಕ್ ಲೇಲ್ಯಾಂಡ್
C
ಟಾಟಾ ಮೋಟಾರ್ಸ್
D
ವೊಲ್ವೊ
Question 8 Explanation: 
ಅಶೋಕ್ ಲೇಲ್ಯಾಂಡ್ :

ಹಿಂದುಜಾ ಸಮೂಹದ ಅಶೋಕ್ ಲೇಲ್ಯಾಂಡ್, ಸ್ವದೇಶಿ ತಂತ್ರಜ್ಞಾನದಲ್ಲಿ ತಯಾರಿಸಲಾಗಿರುವ ದೇಶದ ಮೊದಲ ವಿದ್ಯುತ್ಚಾಲಿತ ಬಸ್ ಮಾರುಕಟ್ಟೆಗೆ ಪರಿಚಯಿಸಿದೆ.‘ಭಾರತದ ವಾತಾವರಣ, ಭೌಗೋಳಿಕ ಸ್ಥಿತಿಗೆ ಪೂರಕವಾಗಿ ಸ್ವದೇಶಿ ತಂತ್ರಜ್ಞಾನದಲ್ಲಿ ಈ ಬಸ್ ರೂಪಿಸಲಾಗಿದೆ. ಪರಿಸರ ಸ್ನೇಹಿ ಇಂಧನ ಬಳಸುವ ವಾಹನಗಳ ಬಗ್ಗೆ ಕೇಂದ್ರ ಸರ್ಕಾರ ತೋರುತ್ತಿರುವ ಕಾಳಜಿ, ಖಾಸಗಿ ಮತ್ತು ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತಿರುವ ಮಾತುಗಳಿಂದ ಉತ್ತೇಜಿತವಾಗಿ ಕಂಪೆನಿಯು ಎಲೆಕ್ಟ್ರಿಕ್ ಬಸ್ ತಯಾರಿಸಿದೆ.

Question 9

9.ಬಾಲ್ಟಿಕ್ ಮತ್ತು ಉತ್ತರ ಸಮುದ್ರವನ್ನು (North Sea) ಸಂಪರ್ಕಿಸುವ ಕಾಲುವೆ ______?

A
ಕೀಲ್ ಕಾಲುವೆ
B
ಪನಾಮ ಕಾಲುವೆ
C
ಸೂಯೆಜ್ ಕಾಲುವೆ
D
ಮೇಲಿನ ಯಾವುದು ಅಲ್ಲ
Question 9 Explanation: 
ಕೀಲ್ ಕಾಲುವೆ:

ಕೀಲ್ ಕಾಲುವೆ ಉತ್ತರ ಸಮುದ್ರ ಮತ್ತು ಬಾಲ್ಟಿಕ್ ಕಡಲುಗಳನ್ನು ಕೂಡಿಸುವ ಕಾಲುವೆ. 1887-95ರಲ್ಲಿ ನಿರ್ಮಿತವಾದ ಇದನ್ನು 1907-14ರಲ್ಲಿ ವಿಸ್ತರಿಸಲಾಯಿತು. ಹೋಲ್ಟೆನೌ ಮತ್ತು ಬ್ರನ್ಸ್ಬುಟೆಲ್ಕೂಗ್ ಗಳೆಡೆಗಳಲ್ಲಿರುವ ತೂಬುಗಳು 1082.6' ಉದ್ದ, 147' ಅಗಲ ಮತ್ತು 45.9' ಎತ್ತರವಾಗಿವೆ. ಹೋಲ್ಟೆನೌ ಎಂಬುದು ಕೀಲ್ನ ಬಂದರು. ಬ್ರನ್ಸ್ಬುಟೆಲ್ಕೂಗ್ ಎಂಬುದು ಎಲ್ಬ್ ನದಿಯ ಮುಖ. ಕಾಲುವೆಯ ಉದ್ದ 53.3 ನಾವಿಕ ಮೈ., ಅಗಲ 338', ಆಳ 37.07'. ಪ್ರಾರಂಭದಲ್ಲಿ ಈ ಕಾಲುವೆಯನ್ನು ಸೈನಿಕರ ಸಾಗಾಣಿಕೆಗೆ ಮಾತ್ರ ಉಪಯೋಗಿಸಲಾಗುತ್ತಿತ್ತು. ಕಾಲಕ್ರಮೇಣ ಸರಕು ಸಾರಿಗೆಯೂ ಆರಂಭವಾಯಿತು.

Question 10

10.ಯಾವ ವರ್ಷದ ಅಂತ್ಯಕ್ಕೆ ಭಾರತ ಪ್ರಬಲ ಹಸಿರು ಮನೆ ಅನಿಲ ಹೈಡ್ರೋಪ್ಲೋರೊಕಾರ್ಬನ್ (HFC-23) ಬಳಕೆಯನ್ನು ತೊಡೆದುಹಾಕಲು ನಿರ್ಧರಿಸಿದೆ?

A
2045
B
2030
C
2034
D
2040
Question 10 Explanation: 
2030:

2030 ರ ಒಳಗೆ ಪ್ರಬಲ ಹಸಿರು ಮನೆ ಅನಿಲ ಹೈಡ್ರೋಪ್ಲೋರೊಕಾರ್ಬನ್ (HFC-23) ಬಳಕೆಯನ್ನು ಸಂಪೂರ್ಣವಾಗಿ ತೊಡೆದುಹಾಕಲು ಭಾರತ ನಿರ್ಧರಿಸಿದೆ. ಹೆಚ್ಎಫ್ಸಿಯನ್ನು ರೆಫ್ರಿಜರೇಟರ್, ಹವಾನಿಯಂತ್ರಕ ಮತ್ತು ಏರ್ ಸ್ಪ್ರೇ ನಲ್ಲಿ ಬಳಸಲಾಗುತ್ತಿದೆ.

There are 10 questions to complete.

[button link=”http://www.karunaduexams.com/wp-content/uploads/2016/10/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಅಕ್ಟೋಬರ್-18.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

8 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-18, 2016”

  1. Mallikarjunmarol

    Nice updates

  2. kiran vkiru

    this is really useful to me

  3. ಸಂತೋಷ್ ಗೌಡರ

    ಧನ್ಯವಾದಗಳು ಸರ್

  4. lalhusen

    ದನ್ಯವಾದಗಳು

Leave a Comment

This site uses Akismet to reduce spam. Learn how your comment data is processed.