ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-19, 2016
Question 1 |
1.ರಿಯೋ ಒಲಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಅವರು ಯಾವ ಬ್ಯಾಂಕ್ ನ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ?
ಭಾರತೀಯ ಸ್ಟೇಟ್ ಬ್ಯಾಂಕ್ | |
ಬ್ಯಾಂಕ್ ಆಫ್ ಬರೋಡ | |
ಐಸಿಐಸಿಐ ಬ್ಯಾಂಕ್ | |
ಪಂಜಾಬ್ ನ್ಯಾಷನಲ್ ಬ್ಯಾಂಕ್ |
ರಿಯೋ ಒಲಿಂಪಿಕ್ಸ್ ರಜತ ಪದಕ ವಿಜೇತೆ ಪಿವಿ ಸಿಂಧು ಅವರು ಬ್ಯಾಂಕ್ ಆಫ್ ಬರೋಡದ ಪ್ರಚಾರ ರಾಯಭಾರಿಯಾಗಿ ಸುಮಾರು 8 ಕೋಟಿ ರೂ.ಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ನಂತರ ಬರೋಡ ಬ್ಯಾಂಕ್ ಜತೆ ಒಪ್ಪಂದ ಮಾಡಿಕೊಂಡ ಕೇವಲ 2ನೇ ಕ್ರೀಡಾಪಟು ಆಗಿದ್ದಾರೆ. ಸಿಂಧು ಮುಂದಿನ ಟೂರ್ನಿಗಳಲ್ಲಿ ಬ್ಯಾಂಕ್ ಆಫ್ ಬರೋಡ ಲಾಂಛನ ಗುರುತಿನ ಜೆರ್ಸಿಯನ್ನು ಧರಿಸಿ ಕಣಕ್ಕಿಳಿಯಲಿದ್ದಾರೆ. ಇವರೊಂದಿಗೆ ಬ್ಯಾಂಕ್, ಮತ್ತೋರ್ವ ಷಟ್ಲರ್ ಕಡಂಬಿ ಶ್ರೀಕಾಂತ್ ಜತೆಗೂ ಒಪ್ಪಂದ ಮಾಡಿಕೊಂಡಿದೆ.
Question 2 |
2.“2016 ಸೆವೆನ್ ಸ್ಟಾರ್ ಲಕ್ಸುರಿ ಹಾಸ್ಪಿಟಲಿಟಿ ಅಂಡ್ ಲೈಫ್ ಸ್ಟೈಲ್ (Seven Star Luxury Hospitality and Lifestyle Awards)” ಪ್ರಶಸ್ತಿಗೆ ಪಡೆದ ಭಾರತೀಯ ರೈಲು ಯಾವುದು?
ಮಹಾರಾಜ ಎಕ್ಸ್ ಪ್ರೆಸ್ | |
ರಾಜಧಾನಿ ಎಕ್ಸ್ ಪ್ರೆಸ್ | |
ಶತಾಬ್ದಿ ಎಕ್ಸ್ ಪ್ರೆಸ್ | |
ಡುರಾಂಡ್ ಎಕ್ಸ್ ಪ್ರೆಸ್ |
ಭಾರತೀಯ ರೈಲ್ವೆಯ ಮಹಾರಾಜ ಎಕ್ಸ್ ಪ್ರೆಸ್ ರೈಲು ವಿಶ್ವದ ವಿಲಾಸಿ (ಲಕ್ಸುರಿ) ರೈಲು ಎಂಬ ಖ್ಯಾತಿಗೆ ಪಾತ್ರವಾಗಿದೆ. ಸ್ಪೇನ್ ನ ಮರ್ಬೆಲ್ಲದಲ್ಲಿ ಈ ರೈಲಿಗೆ 2016 ಸೆವೆನ್ ಸ್ಟಾರ್ ಲಕ್ಸುರಿ ಹಾಸ್ಪಿಟಲಿಟಿ ಅಂಡ್ ಲೈಫ್ ಸ್ಟೈಲ್ ಪ್ರಶಸ್ತಿಯನ್ನು ನೀಡಲಾಗಿದೆ.
Question 3 |
3.“2016 ವಿಶ್ವ ರೈಲ್ವೆ ಶೂಟಿಂಗ್ ಚಾಂಪಿಯನ್ ಷಿಪ್” ಪ್ರಶಸ್ತಿಯನ್ನು ಪಡೆದುಕೊಂಡ ತಂಡ _____?
ಭಾರತೀಯ ರೈಲ್ವೆ | |
ಚೀನಾ ರೈಲ್ವೆ ಕಾರ್ಪೋರೇಷನ್ | |
ಕೆನಡಿಯನ್ ಫೆಸಿಫಿಕ್ ರೈಲ್ವೆ | |
ಜಪಾನ್ ರೈಲ್ವೆ |
ಫ್ರಾನ್ಸ್ ನಲ್ಲಿ ನಡೆದ “2016 ವಿಶ್ವ ರೈಲ್ವೆ ಶೂಟಿಂಗ್ ಚಾಂಪಿಯನ್ ಷಿಪ್ ಕಪ್” ಅನ್ನು ಭಾರತೀಯ ರೈಲ್ವೆ ಗೆದ್ದುಕೊಂಡಿದೆ. ಇದೇ ಮೊದಲ ಬಾರಿಗೆ ಭಾರತೀಯ ರೈಲ್ವೆ ಈ ಚಾಂಪಿಯನ್ ಷಿಪ್ ನಲ್ಲಿ ವಿಜಯಿಶಾಲಿಯಾಗಿದೆ. ಕಳೆದ ವರ್ಷ ರನ್ನರ್ ಆಪ್ ಆಗಿತ್ತು. ಐದು ಚಿನ್ನ, ಮೂರು ಬೆಳ್ಳಿ ಮತ್ತು ಎರಡು ಕಂಚಿನ ಪದಕ ಗೆಲ್ಲುವ ಮೂಲಕ ಒಟ್ಟು 10 ಪದಕಗಳೊಂದಿಗೆ 15ನೇ ವಿಶ್ವ ರೈಲ್ವೆ ಶೂಟಿಂಗ್ ಚಾಂಪಿಯನ್ ಷಿಪ್ ನಲ್ಲಿ ಅಗ್ರಸ್ಥಾನ ಪಡೆದುಕೊಂಡಿದೆ.
Question 4 |
4.ಲ್ಯಾಟಿನ್ ಅಮೆರಿಕಾದ ಮೊದಲ “ಆನೆ ಅಭಯಾರಣ್ಯ”ವನ್ನು ಇತ್ತೀಚೆಗೆ ಯಾವ ದೇಶದಲ್ಲಿ ಆರಂಭಿಸಲಾಯಿತು?
ಬ್ರೆಜಿಲ್ | |
ಮೆಕ್ಸಿಕೊ | |
ಚಿಲಿ | |
ಅರ್ಜೆಂಟೀನಾ |
ಲ್ಯಾಟಿನ್ ಅಮೆರಿಕಾದಲ್ಲೇ ಮೊದಲ ಆನೆ ಅಭಯಾರಣ್ಯವನ್ನು ಬ್ರೆಜಿಲ್ ನಲ್ಲಿ ಆರಂಭಿಸಲಾಗಿದೆ. ಸರ್ಕಸ್ ನಲ್ಲಿ ಬಳಸಲಾದ ಸುಮಾರು 50ಕ್ಕೂ ಹೆಚ್ಚು ಆನೆಗಳನ್ನು ಇಲ್ಲಿ ಸಂರಕ್ಷಿಸಲಾಗುವುದು. ಅಮೆರಿಕ ಮೂಲದ ಲಾಭದಾಯಕಲ್ಲದ ಸಂಸ್ಥೆ “ಗ್ಲೋಬಲ್ ಸ್ಯಾಂಚುರಿ ಫಾರ್ ಎಲಿಫಂಟ್” ಈ ಅಭಯಾರಣ್ಯವನ್ನು ಆರಂಭಿಸಿದೆ.
Question 5 |
5.“ಡ್ರಿವನ್-ದಿ ವಿರಾಟ್ ಕೊಹ್ಲಿ ಸ್ಟೋರಿ (Driven - The Virat Kohli Story) ಪುಸ್ತಕದ ಲೇಖಕರು ____?
ಅಮೃತರಾಜ್ ಸಿಂಗ್ | |
ವಿಜಯ್ ಲೋಕಪಲ್ಲಿ | |
ಸುದೀಂದ್ರ ಜಾಧವ್ | |
ತರುಣ್ ವಿಜಯ್ |
ಹಿಂದೂ ಪತ್ರಿಕೆ ಬಳಗದವರಾದ ವಿಜಯ್ ಲೋಕಪಲ್ಲಿ “ಡ್ರಿವನ್-ದಿ ವಿರಾಟ್ ಕೊಹ್ಲಿ ಸ್ಟೋರಿ” ಪುಸ್ತಕದ ಲೇಖಕರು. ಜೂನಿಯರ್ ಕ್ರಿಕೆಟ್ ಆಟಗಾರನಿಂದ ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕರಾಗುವ ವಿರಾಟ್ ಕೊಹ್ಲಿ ಅವರ ಯಶಸ್ಸಿನ ಪ್ರಯಾಣವನ್ನು ಪುಸ್ತಕದಲ್ಲಿ ವಿವರಿಸಲಾಗಿದೆ. 221 ಪುಟಗಳನ್ನು ಒಳಗೊಂಡಿರುವ ಈ ಪುಸ್ತಕವನ್ನು ಬ್ಲೂಮ್ಸ್ ಬರಿ ಹೊರತಂದಿದೆ. ಇತ್ತೀಚೆಗೆ ಈ ಪುಸ್ತಕವನ್ನು ಭಾರತ ಕ್ರಿಕೆಟ್ ದಿಗ್ಗಜರುಗಳಾದ ಅನಿಲ್ ಕುಂಬ್ಳೆ, ವಿರೇಂದ್ರ ಸೆಹ್ವಾಗ್, ಕಪಿಲ್ ದೇವ್, ರವಿ ಶಾಸ್ತ್ರಿ ಮತ್ತು ಕೊಹ್ಲಿ ರವರ ತರಭೇತುದಾರ ರಾಜಕುಮಾರ್ ಶರ್ಮಾ ಬಿಡುಗಡೆಗೊಳಿಸಿದರು.
Question 6 |
6.U-17 ವಿಶ್ವ ಪುಟ್ಬಾಲ್ ಟೂರ್ನಿಯನ್ನು ಆಯೋಜಿಸಲು ಫಿಫಾದಿಂದ ಅಧಿಕೃತ ಅನುಮತಿ ಪಡೆದ ಮೊದಲ ನಗರ ಯಾವುದು?
ನವ ದೆಹಲಿ | |
ಕೊಚ್ಚಿ | |
ಬೆಂಗಳೂರು | |
ಮುಂಬೈ |
2017 ರಲ್ಲಿ ಭಾರತದಲ್ಲಿ ನಡೆಯಲಿರುವ 17 ವರ್ಷದೊಳಗಿನವರು ವಿಶ್ವ ಫುಟ್ಬಾಲ್ ಕಪ್ ಆಯೋಜಿಸಲು ಕೊಚ್ಚಿ ಜವಹರ್ ಲಾಲ್ ನೆಹರೂ ಕ್ರೀಡಾಂಗಣಕ್ಕೆ ಫಿಫಾ ಅಧಿಕೃತ ಅನುಮತಿ ನೀಡಿದೆ. ಆ ಮೂಲಕ ವಿಶ್ವ ಫುಟ್ಬಾಲ್ ಕಪ್ ಆಯೋಜಿಸಲು ಅನುಮತಿ ಪಡೆದ ದೇಶದ ಮೊದಲ ನಗರವೆಂಬ ಖ್ಯಾತಿಗೆ ಕೊಚ್ಚಿ ಪಾತ್ರವಾಗಿದೆ. ಇದೇ ಮೊದಲ ಬಾರಿಗೆ ಭಾರತ ವಿಶ್ವಕಪ್ ಫುಟ್ಬಾಲ್ನ ಅತಿಥ್ಯವಹಿಸಿದ್ದು, ವಿವಿಧ ನಗರಗಳಲ್ಲಿ ಪಂದ್ಯಗಳು ನಡೆಯಲಿವೆ.
Question 7 |
7.ಈ ಕೆಳಗಿನ ಯಾರು “ಅಂತಾರಾಜ್ಯ ಮಂಡಳಿ (Interstate Council)”ಯ ಅಧ್ಯಕ್ಷರಾಗಿರುತ್ತಾರೆ?
ಪ್ರಧಾನ ಮಂತ್ರಿ | |
ರಾಷ್ಟ್ರಪತಿ | |
ಕೇಂದ್ರ ಗೃಹ ಸಚಿವರು | |
ಉಪ ರಾಷ್ಟ್ರಪತಿ |
ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಸಮನ್ವಯ ಸ್ಥಾಪಿಸುವ ನಿಟ್ಟಿನಲ್ಲಿ 1990ರಲ್ಲಿ ಅಂತಾರಾಜ್ಯ ಮಂಡಳಿ ಸ್ಥಾಪಿಸಲಾಗಿದೆ. ಪ್ರಧಾನಿ ನೇತೃತ್ವದ ಈ ಮಂಡಳಿಯಲ್ಲಿ 6 ಸಚಿವರು, ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಸದಸ್ಯರಾಗಿರುತ್ತಾರೆ. ಜೊತೆಗೆ ಕೇಂದ್ರ ಸಂಪುಟದ 10 ಸಚಿವರು ಇದಕ್ಕೆ ಕಾಯಂ ಆಹ್ವಾನಿತರಾಗಿರುತ್ತಾರೆ. ಮಂಡಳಿಯು, ರಾಜ್ಯ- ರಾಜ್ಯಗಳ ನಡುವೆ, ರಾಜ್ಯ ಮತ್ತು ಕೇಂದ್ರದ ನಡುವೆ ಉದ್ಭವಿಸುವ ಬಿಕ್ಕಟ್ಟಿನ ಸಂದರ್ಭದಲ್ಲಿ ಪರಿಹಾರ ಕೈಗೊಳ್ಳಲು ಸಲಹೆ ನೀಡುತ್ತದೆ. 2006ರ ನಂತರ ಈ ಮಂಡಳಿ ಸಭೆ ಸೇರಿಯೇ ಇರಲಿಲ್ಲ. ಕಳೆದ ಜುಲೈನಲ್ಲಷ್ಟೇ ಪ್ರಧಾನಿ ಮೋದಿ ಈ ಮಂಡಳಿಯ ಸಭೆ ನಡೆಸಿದ್ದರು.
Question 8 |
8.ಏಪ್ಯಾ ಫುಟ್ಬಾಲ್ ಕಪ್ (ಎಎಫ್ಸಿ) ನಲ್ಲಿ ಫೈನಲ್ ತಲುಪಿದ ಭಾರತದ ಮೊಟ್ಟಮೊದಲ ಫುಟ್ಬಾಲ್ ಕ್ಲಬ್ ಯಾವುದು?
ಪುಣೆ ಪುಟ್ಬಾಲ್ ಕ್ಲಬ್ | |
ಬೆಂಗಳೂರು ಫುಟ್ಬಾಲ್ ಕ್ಲಬ್ | |
ಮೊಹುನ್ ಬಾಗನ್ ಫುಟ್ಬಾಲ್ ಕ್ಲಬ್ | |
ಈಸ್ಟ್ ಬೆಂಗಾಲ್ ಫುಟ್ಬಾಲ್ ಕ್ಲಬ್ |
ಏಷ್ಯನ್ ಫುಟ್ ಬಾಲ್(ಎಎಫ್ಸಿ) ಕಪ್ ನಲ್ಲಿ ಫೈನಲ್ ತಲುಪಿದ ಭಾರತದ ಮೊಟ್ಟಮೊದಲ ಕ್ಲಬ್ ಎಂಬ ಹಿರಿಮೆಗೆ ಬೆಂಗಳೂರು ಫುಟ್ ಬಾಲ್ ಕ್ಲಬ್(ಬಿಎಫ್ಸಿ) ಪಾತ್ರವಾಗಿದೆ. ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ನಡೆದ ಎಎಫ್ಸಿ ಕಪ್ ಸೆಮಿಫೈನಲ್ ನ 2ನೇ ಪಂದ್ಯದಲ್ಲಿ ಬಿಎಫ್ಸಿ 3-1 ಗೋಲುಗಳಿಂದ ಹಾಲಿ ಚಾಂಪಿಯನ್ ಮಲೇಷ್ಯಾದ ಜೋಹರ್ ದಾರುಲ್ ತಜೀಮ್(ಜೆಡಿಟಿ) ತಂಡವನ್ನು ಸೋಲಿಸಿದೆ. ಎಎಫ್ಸಿ ಕಪ್ ಫೈನಲ್ ಪಂದ್ಯ ನವೆಂಬರ್ 5 ರಂದು ನಡೆಯಲಿದ್ದು ಬಿಎಫ್ಸಿ ತಂಡ ಇರಾಕ್ ನ ಅಲ್ ಕ್ಯುವಾ ಅಲ್ ಜಾವಿಯಾ ತಂಡವನ್ನು ಎದುರಿಸಲಿದೆ.
Question 9 |
9.ಇತ್ತೀಚೆಗೆ ಈ ಕೆಳಗಿನ ಯಾವ ದೇಶ “ಸೂರ್ಯ ಬಲ ಸಂಗ್ರಮಯ (Surya Bala Sangramaya)” ಹೆಸರಿನ ಸಾರ್ವಜನಿಕ ವಿದ್ಯುತ್ ಉತ್ಪಾದನ ಕಾರ್ಯಕ್ರಮವನ್ನು ಆರಂಭಿಸಿತು?
ಶ್ರೀಲಂಕಾ | |
ನೇಪಾಳ | |
ಮಾರಿಷಸ್ | |
ಭೂತಾನ್ |
ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ರವರು “ಸೂರ್ಯ ಬಲ ಸಂಗ್ರಮಯ” ಸಾರ್ವಜನಿಕ ವಿದ್ಯುತ್ ಉತ್ಪಾದನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಯೋಜನೆಯಡಿ ಸುಮಾರು 10 ಲಕ್ಷ ಕುಟುಂಬಗಳಿಗೆ ಸೌರ ವಿದ್ಯುತ್ ಸೌಲಭ್ಯವನ್ನು ನೀಡಲಾಗುವುದು.
Question 10 |
10.ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳ ಸಂಖ್ಯೆಯನ್ನು ಈ ಮೂಲಕ ಬದಲಿಸಬಹುದು ____?
ರಾಷ್ಟ್ರಪತಿಗಳ ಆದೇಶ | |
ಸಂಸತ್ತಿನ ಕಾನೂನು | |
ಸರ್ವೋಚ್ಚ ನ್ಯಾಯಾಲದ ಅಧಿಸೂಚನೆ | |
ಕೇಂದ್ರ ಸರ್ಕಾರದ ಅಧಿಸೂಚನೆ |
ಸರ್ವೋಚ್ಚ ನ್ಯಾಯಾಲದ ನ್ಯಾಯಾಧೀಶರುಗಳ ಸಂಖ್ಯೆಯನ್ನು ಹೆಚ್ಚಿಸುವ ಅಥವಾ ಕಡಿಮೆ ಮಾಡುವ ಪ್ರಕ್ರಿಯೆಯನ್ನು ಸಂಸತ್ತಿನಲ್ಲಿ ಕಾನೂನು ಜಾರಿಗೆ ತರುವ ಮೂಲಕ ಮಾಡಬಹುದು. ಪ್ರಸ್ತುತ ಸರ್ವೋಚ್ಚ ನ್ಯಾಯಾಲದ ನ್ಯಾಯಾಧೀಶರುಗಳ ಸಂಖ್ಯೆ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡು 31 ಇದೆ.
[button link=”http://www.karunaduexams.com/wp-content/uploads/2016/10/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ಚಿಜ್-ಅಕ್ಟೋಬರ್-19.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
please update 20,21 days quiz