ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.
ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -17
Question 1 |
1.ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ:
I) ಇನ್ಪೋಸಿಸ್ ಪ್ರತಿಷ್ಠಾನವು ಬಂಡೀಪುರ ಉದ್ಯಾನವನದಲ್ಲಿ ಜೀಬ್ರಾ ಎನ್ ಕ್ಲೋಸರ್ ಸ್ಥಾಪಿಸಿದೆ
II) ಈ ಜೀಬ್ರಾಗಳನ್ನು ಇಸ್ರೇಲ್ ನಿಂದ ಪ್ರಾಣಿ ವಿನಿಮಯ ಯೋಜನೆಯಡಿ ತರಲಾಗಿದೆ
ಮೇಲಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆ ಯಾವುವು?
ಹೇಳಿಕೆ ಒಂದು ಮಾತ್ರ ಸರಿ | |
ಹೇಳಿಕೆ ಎರಡು ಮಾತ್ರ ಸರಿ | |
ಎರಡು ಹೇಳಿಕೆ ಸರಿ | |
ಎರಡು ಹೇಳಿಕೆ ತಪ್ಪು |
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಇನ್ಪೋಸಿಸ್ ಪ್ರತಿಷ್ಠಾನದ ವತಿಯಿಂದ ರೂ 63 ಲಕ್ಷ ವೆಚ್ಚದಲ್ಲಿ ಜೀಬ್ರಾ ಎನ್ಕ್ಲೋಸರ್ ಅನ್ನು ಇತ್ತೀಚೆಗೆ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಅವರು ಉದ್ಘಾಟಿಸಿದರು. ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಸ್ಥಾಪಿಸಿರುವ ಜೀಬ್ರಾ ಆವರಣದಲ್ಲಿ ಎರಡು ಗಂಡು ಹಾಗೂ ಎರಡು ಹೆಣ್ಣು ಜೀಬ್ರಾಗಳಿವೆ. ಇವುಗಳನ್ನು ಇಸ್ರೇಲ್ನ ಟೆಲ್ಅವಿವ್ ರಾಮತ್ಜನ್ ಸಫಾರಿಯಿಂದ ಪ್ರಾಣಿ ವಿನಿಮಯ ಯೋಜನೆಯಡಿ ಬನ್ನೇರುಘಟ್ಟಕ್ಕೆ ತರಲಾಗಿದೆ. ನೂತನ ಅತಿಥಿಗಳಾದ ಜೀಬ್ರಾಗಳಿಗೆ ಸುಧಾ.ಎನ್.ಮೂರ್ತಿ ಅವರು ಭರತ್, ಪೃಥ್ವಿ, ಕಾವೇರಿ ಹಾಗೂ ಹೇಮಾವತಿ ಎಂದು ನಾಮಕರಣ ಮಾಡಿದ್ದು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿವೆ.
Question 2 |
2.ಕರ್ನಾಟಕ ಇತಿಹಾಸ ಅಕಾಡೆಮಿ ನೀಡುವ ‘ಇತಿಹಾಸ ಸಂಸ್ಕೃತಿ ಶ್ರೀ’ ಪ್ರಶಸ್ತಿಗೆ ಯಾರನ್ನು ಆಯ್ಕೆಮಾಡಲಾಗಿದೆ?
ಡಾ.ಎಚ್.ಜಯಮ್ಮ | |
ಡಾ.ದೇವರ ಕೊಂಡಾರಡ್ಡಿ | |
ಡಾ.ಸಿಂದಗಿ ರಾಜಶೇಖರ | |
ಡಾ.ಎಸ್.ವಿ.ಪಾಡಿಗಾರ್ |
ಕರ್ನಾಟಕ ಇತಿಹಾಸ ಅಕಾಡೆಮಿಯ ಇತಿಹಾಸ ಸಂಸ್ಕೃತಿ ಶ್ರೀ’ ಪ್ರಶಸ್ತಿಗೆ ಡಾ.ಸಿಂದಗಿ ರಾಜಶೇಖರ ಅವರನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರಿನ ಬೈಸಾನಿ ರುಕ್ಮಿಣಮ್ಮ ರತ್ನಂಶೆಟ್ಟಿ ನೆನಪಿನಲ್ಲಿ ‘ಇತಿಹಾಸ ಸಂಸ್ಕೃತಿ ಶ್ರೀ’ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ‘ಪ್ರಶಸ್ತಿಯು ರೂ 1 ಲಕ್ಷ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. ಇದೇ 22ರಿಂದ ಮೂರು ದಿನಗಳ ಕಾಲ ಇಲ್ಲಿ ನಡೆಯುವ ಕರ್ನಾಟಕ ಇತಿಹಾಸ ಅಕಾಡೆಮಿಯ 30ನೇ ವಾರ್ಷಿಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು’ ಎಂದು ಅಕಾಡೆಮಿ ಅಧ್ಯಕ್ಷ ಡಾ.ದೇವರ ಕೊಂಡಾರಡ್ಡಿ ತಿಳಿಸಿದ್ದಾರೆ.
Question 3 |
3.2015ನೇ ಸಾಲಿನ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಗೆ ಆಯ್ಕೆಯಾದ “ಚೌಕಬಾರ” ಕಿರುಚಿತ್ರದ ನಿರ್ದೇಶಕರು ಯಾರು?
ರಘು ಶಿವಮೊಗ್ಗ | |
ಉದಯ ಮರಕಿಣಿ | |
ಬಿ ಎಂ ಗಿರಿರಾಜ್ | |
ಬರಗೂರು ರಾಮಚಂದ್ರಪ್ಪ |
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನೀಡುವ 2015ನೇ ಸಾಲಿನ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಗೆ ರಘು ಶಿವಮೊಗ್ಗ ನಿರ್ದೇಶಿಸಿರುವ ‘ಚೌಕಾಬಾರ’ ಕಿರುಚಿತ್ರವು ಆಯ್ಕೆಯಾಗಿದೆ. ಪ್ರಶಸ್ತಿ ರೂ 50 ಸಾವಿರ ಬಹುಮಾನವಿದೆ.
Question 4 |
4.ಉತ್ತಮ ಗುಣಮಟ್ಟದ ಕಾಮಗಾರಿ ನಿರ್ವಹಣೆಗಾಗಿ ಯಾವ ಜಲಾಶಯಕ್ಕೆ ವಿಶ್ವಬ್ಯಾಂಕ್ “ಎಕ್ಸಲೆನ್ಸ್ ಅವಾರ್ಡ್” ಪ್ರಶಸ್ತಿ ಲಭಿಸಿದೆ?
ಆಲಮಟ್ಟಿ ಜಲಾಶಯ | |
ಕೃಷ್ಣರಾಜ ಸಾಗರ ಜಲಾಶಯ | |
ತುಂಗಭದ್ರ ಜಲಾಶಯ | |
ಕಬಿನಿ ಜಲಾಶಯ |
ಕಳೆದ ವರ್ಷ ಮೇನಲ್ಲಿ ಕೈಗೊಂಡ ಆಲಮಟ್ಟಿ ಜಲಾಶಯ ಪುನಶ್ಚೇತನ ಕಾರ್ಯವನ್ನು ಪ್ರಶಂಸಿಸಿರುವ ವಿಶ್ವಬ್ಯಾಂಕ್, ಉತ್ತಮ ಗುಣಮಟ್ಟದ ಕಾಮಗಾರಿ ನಿರ್ವಹಣೆಗಾಗಿ ಪ್ರಶಸ್ತಿ (ಎಕ್ಸಲೆನ್ಸ್ ಅವಾರ್ಡ್) ನೀಡಿದೆ. ವಿಶ್ವಬ್ಯಾಂಕ್ ನೆರವಿನಿಂದ ರೂ 72 ಕೋಟಿ ವೆಚ್ಚದಲ್ಲಿ ಜಲಾಶಯದ ಪುನಶ್ಚೇತನ ಕಾರ್ಯ ನಡೆದಿತ್ತು. ವಿಶ್ವಬ್ಯಾಂಕಿನ ಅಣೆಕಟ್ಟೆ ತಜ್ಞರಾದ ಈ.ಡಿ. ಫ್ಲಿಂಟ್, ಅಂತರರಾಷ್ಟ್ರೀಯ ಕಟ್ಟಡ ನಿರ್ಮಾಣ ಹಾಗೂ ಗುಣ ನಿಯಂತ್ರಣ ತಜ್ಞ ಮಾರ್ಕೋ ಕ್ಯಾಪಿಬಿ ಇಲ್ಲಿಗೆ ಭೇಟಿ ನೀಡಿ, ಕಾಮಗಾರಿಯನ್ನು ಪರಿಶೀಲಿಸಿದ್ದರು. ‘ಜಲಾಶಯದ ಪುನಶ್ಚೇತನಕ್ಕೆ ಬಳಸಿಕೊಂಡ ನೂತನ ಎಂಜಿನಿಯರಿಂಗ್ ತಂತ್ರಜ್ಞಾನ, ಅಚ್ಚುಕಟ್ಟಾದ ಕಾಮಗಾರಿ, ಎಂಜಿನಿಯರ್ಗಳ ಸೇವೆ ಮೊದಲಾದವನ್ನು ಪರಿಗಣಿಸಿ, ಈ ಪ್ರಶಸ್ತಿಯನ್ನು ನೀಡಲಾಗಿದೆ.ದೇಶದ 10 ರಾಜ್ಯಗಳ ಸುಮಾರು 250ಕ್ಕೂ ಅಧಿಕ ಜಲಾಶಯಗಳ ಪುನಶ್ಚೇತನ ಯೋಜನೆ ಅಡಿ ನವೀಕರಣ ಕಾರ್ಯ ನಡೆದಿತ್ತು. ದೇಶದಲ್ಲಿ ಆಲಮಟ್ಟಿ ಜಲಾಶಯಕ್ಕೆ ಮಾತ್ರ ಈ ಪ್ರಶಸ್ತಿ ಲಭಿಸಿದೆ’
Question 5 |
5.ರಾಜ್ಯದಲ್ಲಿರುವ ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿಗಳ ಸಂಖ್ಯೆ ಕ್ರಮವಾಗಿ ಎಷ್ಟಿದೆ?
4, 29 | |
5, 30 | |
5, 29 | |
6, 31 |
ಕರ್ನಾಟಕ ರಾಜ್ಯವು 9526.03 ಚದರ ಕಿ.ಮೀ ಅನ್ನು ಆವರಿಸಿರುವ 5 ರಾಷ್ಟ್ರೀಯ ಉದ್ಯಾನವನಗಳನ್ನು ಮತ್ತು 29 ವನ್ಯಜೀವಿ ಅಭಯಾರಣ್ಯಗಳನ್ನು ಹೊಂದಿದೆ.
Question 6 |
6.ರಾಜ್ಯದಲ್ಲಿ “ರಾಷ್ಟ್ರೀಯ ವಾಯುಗುಣಮಟ್ಟ ಪರಿವೇಷ್ಟಕ ಕಾರ್ಯಕ್ರಮದಡಿ (NAMP)” ಈ ಕೆಳಕಂಡ ಯಾವ ಅಂಶಗಳನ್ನು ಮಾಪನ ಮಾಡುಲಾಗುತ್ತಿದೆ?
I) ಉಸಿರಾಡುವಾಗ ಸೇವಿಸುವಂತಹ ತೇಲಾಡುವ ಕಣಗಳು
II) ಗಂಧಕದ ಡೈ ಆಕ್ಸೈಡ್
III) ಸಾರಜನಕದ ಡೈ ಆಕ್ಸೈಡ್
ಈ ಕೆಳಗೆ ನೀಡಿರುವ ಕೋಡ್ ಮೂಲಕ ಸರಿಯಾದ ಉತ್ತರವನ್ನು ಗುರುತಿಸಿ:
I & II | |
II & III | |
I & III | |
I, II & III |
ರಾಷ್ಟ್ರೀಯ ವಾಯುಗುಣಮಟ್ಟ ಪರಿವೇಷ್ಟಕ ಕಾರ್ಯಕ್ರಮದಡಿ ಮೂರು ಅಂಶಗಳಾದ ಉಸಿರಾಡುವಾಗ ಸೇವಿಸುವಂತಹ ತೇಲಾಡುವ ಕಣಗಳು, ಗಂಧಕದ ಡೈ ಆಕ್ಸೈಡ್ ಮತ್ತು ಸಾರಜನಕದ ಡೈ ಆಕ್ಸೈಡ್ ಮಾಪಕ ಮಾಡಲಾಗುತ್ತಿದೆ.
Question 7 |
7.ಇತ್ತೀಚೆಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಸಾರವರ್ಧಿತ ಅಕ್ಕಿ ಬಳಕೆ ಮಾಡಲು ರಾಜ್ಯ ಸರ್ಕಾರ ಯಾವ ಪ್ರತಿಷ್ಠಾನ ಜೊತೆ ಒಪ್ಪಂದ ಮಾಡಿಕೊಂಡಿದೆ?
ಇನ್ಪೋಸಿಸ್ ಪ್ರತಿಷ್ಠಾನ | |
ಅಕ್ಷಯ ಪಾತ್ರ ಪ್ರತಿಷ್ಠಾನ | |
ವಿಪ್ರೋ ಪ್ರತಿಷ್ಠಾನ | |
ಶ್ರೀಧರ್ಮಸ್ಥಳ ಪ್ರತಿಷ್ಠಾನ |
ಅಪೌಷ್ಠಿಕತೆ ನಿವಾರಿಸಲು ರಾಜ್ಯ ಸರ್ಕಾರ ಮುಂದಡಿ ಇಟ್ಟಿದ್ದು, ಬೆಂಗಳೂರು ಗ್ರಾಮಾಂತರ, ಬಳ್ಳಾರಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಇನ್ನು ಮುಂದೆ ಸಾರವರ್ಧಿತ ಅಕ್ಕಿ ಬಳಕೆ ಮಾಡಲು ನಿರ್ಧರಿಸಿದೆ.ಈ ಸಂಬಂಧ ಶಿಕ್ಷಣ ಇಲಾಖೆ ಮತ್ತು ಅಕ್ಷಯ ಪಾತ್ರ ಪ್ರತಿಷ್ಠಾನದ ಮಧ್ಯೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಬಿಸಿಯೂಟದಲ್ಲಿ ಬಳಸುವ 99 ಕೆ.ಜಿ. ಅಕ್ಕಿ ಜೊತೆ 1 ಕೆ.ಜಿ. ಸಾರವರ್ಧಿತ ಅಕ್ಕಿ ಮಿಶ್ರಣ ಮಾಡಲಾಗುವುದು. ಒಂದು ವರ್ಷದ ನಂತರ ಮಕ್ಕಳ ದೈಹಿಕ ಬೆಳವಣಿಗೆ, ತೂಕ ಹಾಗೂ ಎತ್ತರ ಮಾಪನ ಮಾಡಲಾಗುವುದು. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ವಿಸ್ತರಿಸಲಾಗುವುದು.
Question 8 |
8.82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?
ಬರಗೂರು ರಾಮಚಂದ್ರಪ್ಪ | |
ನಾಗತೀಹಳ್ಳಿ ಚಂದ್ರಶೇಖರ್ | |
ಚಂದ್ರಶೇಖರ ಕಂಬಾರ | |
ದೇವನೂರ ಮಹಾದೇವ |
ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರನ್ನು ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಮಾಡಲಾಗಿದೆ.
Question 9 |
9.ಇತ್ತೀಚೆಗೆ ರಾಜ್ಯ ಸರ್ಕಾರ ಯಾವ ಜಿಲ್ಲೆಯಲ್ಲಿರುವ ಗೌಡಲು ಮತ್ತು ಹಲಸಲು ಬುಡಕಟ್ಟು ಜನಾಂಗದ ಕುಟುಂಬಗಳಿಗೆ ಪೌಷ್ಠಿಕ ಆಹಾರ ಯೋಜನೆ ಜಾರಿಗೆ ತರಲು ನಿರ್ಧರಿಸಿದೆ?
ಚಿಕ್ಕಮಗಳೂರು | |
ಹಾಸನ | |
ಕೊಡಗು | |
ಚಿತ್ರದುರ್ಗ |
ಚಿಕ್ಕಮಗಳೂರು ಜಿಲ್ಲೆಯ ಗೌಡಲು ಮತ್ತು ಹಲಸಲು ಬುಡಕಟ್ಟು ಜನಾಂಗದ ಕುಟುಂಬಗಳಿಗೆ ಪೌಷ್ಠಿಕ ಆಹಾರ ಯೋಜನೆ ಜಾರಿಗೆ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಯೋಜನೆಯಡಿ ತಲಾ 15 ಕೆಜಿ ಅಕ್ಕಿ, 5 ಕೆಜಿ ತೊಗರಿಬೇಳೆ, 5 ಕೆಜಿ ಹೆಸರುಬೇಳೆ, 4 ಕೆಜಿ ಸಕ್ಕರೆ, 2 ಲೀಟರ್ ಅಡುಗೆ ಎಣ್ಣೆ, 45 ಮೊಟ್ಟೆ ಮತ್ತು 500 ಗ್ರಾಂ ತುಪ್ಪ ನೀಡಲಾಗುವುದು.
Question 10 |
10.ಕಾರಂಜ ಜಲಾಶಯ ಯಾವ ಜಿಲ್ಲೆಯಲಿದೆ?
ಕಲ್ಬುರ್ಗಿ | |
ಬೀದರ್ | |
ಬಿಜಾಪುರ | |
ರಾಯಚೂರು |
Super
10
Nic sir
for 4th which is the correct answer its allmatti dam or krishnasagar dam
Alamatti dam.
Nice job sir
Thank