ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-21, 2016
Question 1 |
1.ಈ ಕೆಳಗಿನ ಯಾವ ಒಕ್ಕೂಟ ಇತ್ತೀಚೆಗೆ ಸ್ವತಂತ್ರ “ಕ್ರೆಡಿಟ್ ರೇಟಿಂಗ್ ಏಜೆನ್ಸಿ” ಸ್ಥಾಪಿಸಲು ನಿರ್ಧರಿಸಿದೆ?
ಅಸಿಯಾನ್ | |
ಬ್ರಿಕ್ಸ್ | |
ಸಾರ್ಕ್ | |
ಬಿಮ್ಸ್ ಸ್ಟೆಕ್ |
ಬ್ರಿಕ್ಸ್ ದೇಶಗಳು ಸ್ವತಂತ್ರ ಕ್ರೆಡಿಟ್ ರೇಟಿಂಗ್ ಏಜೆನ್ಸಿ ರೂಪಿಸಲು ನಿರ್ಧರಿಸಿವೆ. ಗೋವಾದಲ್ಲಿ ನಡೆದ 8ನೇ ಬ್ರಿಕ್ಸ್ ಸಮ್ಮೇಳನದಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಮಾರುಕಟ್ಟೆ ಆಧರಿತ ಸಿದ್ಧಾಂತಗಳ ಮೇಲೆ ಈ ಏಜೆನ್ಸಿ ರೂಪಿಸಲಾಗುತ್ತಿದ್ದು, ಜಾಗತಿಕ ಆರ್ಥಿಕ ಸ್ಥಿತಿಗತಿಗಳಿಗೆ ಇದು ಪೂರಕವಾಗಿರಲಿದೆ. ಸದ್ಯ ಪಾರದರ್ಶಕತೆ ಮತ್ತು ಪಾಲುದಾರಿಕೆ ಆಧರಿಸಿ ಕ್ರೆಡಿಟ್ ರೇಟಿಂಗ್ ಏಜೆನ್ಸಿಗಳು ಕಾರ್ಯನಿರ್ವಹಿಸುತ್ತಿವೆ. ಹೀಗಾಗಿವಿಭಿನ್ನ ಮಾದರಿಯ ಸಂಸ್ಥೆ ಇದಾಗಿರಲಿದೆ. ಈ ಕಲ್ಪನೆಯನ್ನು ಮೊದಲು ಎಕ್ಸಿಮ ಬ್ಯಾಂಕ್ ರೂಪಿಸಿತ್ತು. ನಂತರದಲ್ಲಿ ಕ್ರಿಸಿಲ್ ಭಾರತದಲ್ಲಿ ಅಧ್ಯಯನ ನಡೆಸಿ ಈ ಬಗ್ಗೆ ಸಮಗ್ರ ವರದಿ ರೂಪಿಸಿತ್ತು. ಇದನ್ನು ಇತರ ದೇಶಗಳೊಂದಿಗೆ ಹಂಚಿಕೊಳ್ಳಲಾಗಿತ್ತಾದರೂ, ಚೀನಾ ಇದಕ್ಕೆ ವಿರೋಧಿಸಿತ್ತು.
Question 2 |
2.ಅಂತಾರಾಷ್ಟ್ರೀಯ ಪರಿಸರ ಸಂರಕ್ಷಣೆ ಒಕ್ಕೂಟ (ಐಯುಸಿಎನ್)ವು ಈ ಕೆಳಗಿನ ಯಾವ ಪ್ರಾಣಿಯನ್ನು ಗಂಭೀರವಾಗಿ ಅಳಿವಿನಂಚಿನಲ್ಲಿರುವ ಪ್ರಾಣಿ ಎಂದು ಘೋಷಿಸಲು ನಿರ್ಧರಿಸಿದೆ?
ಕಾಶ್ಮೀರ ಜಿಂಕೆ | |
ಬ್ಲಾಕ್ ಬಕ್ | |
ನಿಲ್ಗೊಯ್ | |
ಮೇಲಿನ ಎಲ್ಲವು |
ಕಾಶ್ಮೀರ ಜಿಂಕೆ (Kashmiri Red Stag) ಅಥವಾ ಹಂಗುಲ್ ಅನ್ನು ಗಂಭೀರವಾಗಿ ಅಳಿವಂಚಿನಲ್ಲಿರುವ ಪ್ರಾಣಿಯೆಂದು ಘೋಷಿಸಲು ಅಂತಾರಾಷ್ಟ್ರೀಯ ಪರಿಸರ ಸಂರಕ್ಷಣೆ ಒಕ್ಕೂಟ ನಿರ್ಧರಿಸಿದೆ. ಈ ನಿರ್ಣಯದಿಂದ ತೀವ್ರವಾಗಿ ಕುಸಿಯುತ್ತಿರುವ ಕಾಶ್ಮೀರ ಜಿಂಕೆಗಳ ಸಂಕುಲವನ್ನು ರಕ್ಷಿಸಲು ಮತ್ತು ಸಂರಕ್ಷಣಾ ಪ್ರಯತ್ನವನ್ನು ಮತ್ತಷ್ಟು ಬಲಪಡಿಸಲು ಸಹಾಯವಾಗಲಿದೆ. ಪ್ರಸ್ತುತ ಇವುಗಳ ಸಂಖ್ಯೆ ಕೇವಲ 150 ಇದೆ ಎಂದು ಅಂದಾಜಿಸಲಾಗಿದ್ದು, ಕಾಶ್ಮೀರದಲ್ಲಿರುವ ದಚಿಗಾಮ್ ರಾಷ್ಟ್ರೀಯ ಉದ್ಯಾನವನ ಇವುಗಳ ಸಂರಕ್ಷಣೆಗೆ ಮೀಸಲಾಗಿದೆ.
Question 3 |
3.ಶಿಶು ಮತ್ತು ಚಿಕ್ಕ ಮಕ್ಕಳಲ್ಲಿ ಡಯೋರಿಯಾ ಕಾಯಿಲೆಗೆ ಕಾರಣವಾಗುವ ವೈರಸ್ _____?
ರೊಟೊ ವೈರಸ್ | |
ಪರ್ವೊ ವೈರಸ್ | |
ಮೆಗ ವೈರಸ್ | |
ನೊರ್ವಾಕ್ ವೈರಸ್ |
ರೊಟೊ ವೈರಸ್ ಶಿಶು ಮತ್ತು ಚಿಕ್ಕ ಮಕ್ಕಳಿಗೆ ಮಾರಣಾಂತಿಕ ಕಾಯಿಲೆ ಆಗಿರುವ ಡಯೋರಿಯಾ ಬರಲು ಕಾರಣವಾಗಿದೆ. ಡಯೋರಿಯಾ ಕಾಯಿಲೆಯು ಭಾರತದಲ್ಲಿ ಐದು ವರ್ಷದೊಳಗಿನ ಮಕ್ಕಳ ಸಾವಿಗೆ ಪ್ರಮುಖ ಕಾರಣವಾಗಿದೆ.
Question 4 |
4.“13ನೇ ಕೃಷಿ ಸೈನ್ಸ್ ಕಾಂಗ್ರೆಸ್ (Agricultural Science Congress)” ಫೆಬ್ರವರಿ 2017ರಲ್ಲಿ ಯಾವ ನಗರದಲ್ಲಿ ನಡೆಯಲಿದೆ?
ಹೈದ್ರಾಬಾದ್ | |
ಬೆಂಗಳೂರು | |
ನವ ದೆಹಲಿ | |
ಮುಂಬೈ |
13ನೇ ಕೃಷಿ ಸೈನ್ಸ್ ಕಾಂಗ್ರೆಸ್ ಫೆಬ್ರವರಿ 2017 ರಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ. ಎರಡು ವರ್ಷಕ್ಕೊಮ್ಮೆ ನಡೆಯುವ ಈ ಕಾಂಗ್ರೆಸ್ ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿ ಆಯೋಜಿಸಲಾಗುತ್ತಿದೆ. ಬೆಂಗಳೂರಿನ ಕೃಷಿ ವಿಶ್ವ ವಿದ್ಯಾಲಯವು ನ್ಯಾಷನಲ್ ಅಕಾಡೆಮಿ ಆಫ್ ಅಗ್ರಿಕಲ್ಚರ್ ಸೈನ್ಸ್ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಅಗ್ರಿಕಲ್ಚರ್ ರಿಸರ್ಚ್ ಸಹಯೋಗದೊಂದಿಗೆ ಆಯೋಜಿಸುತ್ತಿದೆ.
Question 5 |
5.ಇತ್ತೀಚೆಗೆ ಬಿಡುಗಡೆಗೊಂಡ ಗ್ಲೋಬಲ್ ಪವರ್ ಸಿಟಿ ಇಂಡೆಕ್ಸ್ (GPCI)ನಲ್ಲಿ ಸ್ಥಾನ ಪಡೆದ ಭಾರತದ ಏಕೈಕ ನಗರ ಯಾವುದು?
ಮುಂಬೈ | |
ಬೆಂಗಳೂರು | |
ಕೊಲ್ಕತ್ತ | |
ಪುಣೆ |
ಗ್ಲೋಬಲ್ ಪವರ್ ಸಿಟಿ ಇಂಡೆಕ್ಸ್ ನಲ್ಲಿ ಮುಂಬೈ 39ನೇ ಸ್ಥಾನ ಪಡೆದಿದ್ದು, ಈ ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ನಗರವಾಗಿದೆ. ಮೋರಿ ಮೆಮೊರಿಯಲ್ ಫೌಂಡೇಶನ್ ಸಂಸ್ಥೆ ಈ ಪಟ್ಟಿಯನ್ನು ಹೊರತಂದಿದ್ದು, ವಿಶ್ವದ ಪ್ರಮುಖ 42 ನಗರಗಳಲ್ಲಿ ಸಮೀಕ್ಷೆ ನಡೆಸಲಾಗಿದೆ. ನಗರಗಳಲ್ಲಿ ಹಣಕಾಸು, ಸಂಶೋಧನೆ-ಅಭಿವೃದ್ದಿ, ಸಂಸ್ಕೃತಿ, ಪರಿಸರ ಲಭ್ಯತೆ ಆಧಾರಗಳ ಮೇಲೆ ಸಮೀಕ್ಷೆಯನ್ನು ನಡೆಸಲಾಗಿದೆ. ಲಂಡನ್ ನಗರ ಪಟ್ಟಿಯಲ್ಲಿ ಪ್ರಥಮ ಸ್ಥಾನ ಗಳಿಸಿದೆ.
Question 6 |
6.“ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ಸ್ ಇಂಜನಿಯರಿಂಗ್ ಅಂಡ್ ಟೆಕ್ನಾಲಜಿ (CIPET)” ಯಾವ ನಗರದಲ್ಲಿದೆ?
ಬೆಂಗಳೂರು | |
ಚೆನ್ನೈ | |
ಭೂಪಾಲ್ | |
ನೊಯ್ಡಾ |
ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ಸ್ ಇಂಜನಿಯರಿಂಗ್ ಅಂಡ್ ಟೆಕ್ನಾಲಜಿ ತಮಿಳುನಾಡಿನ ಚೆನ್ನೈನಲ್ಲಿದೆ. ಸೊಸೈಟಿ ನೋಂದಣೆ ಕಾಯಿದೆಯಡಿ 1968 ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ದೇಶದ ವಿವಿದೆಡೆ 27 ಕೇಂದ್ರಗಳು ಇದರಡಿ ಕಾರ್ಯನಿರ್ವಹಿಸುತ್ತಿವೆ. ಇತ್ತೀಚೆಗೆ ಕೇಂದ್ರ ಸರ್ಕಾರ ಈ ಸಂಸ್ಥೆಯ ಕೇಂದ್ರ ಕಚೇರಿಯನ್ನು ನವ ದೆಹಲಿಗೆ ವರ್ಗಾಯಿಸಲು ಚಿಂತಿಸಿದ್ದು, ಇದನ್ನು ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಿದೆ.
Question 7 |
7.ಇಟಲಿಯ ಯಾವ ನಗರ ಭೌದ್ದ ಗುರು “ದಲೈ ಲಾಮ” ಅವರಿಗೆ ಗೌರವ ಪೌರತ್ವನ್ನು ಇತ್ತೀಚೆಗೆ ನೀಡಿದೆ?
ಮಿಲನ್ | |
ರೋಮ್ | |
ಪ್ಲೊರೆನ್ಸ್ | |
ಟುರಿನ್ |
ಇಟಲಿಯ ಮಿಲನ್ ನಗರವು ಭೌದ್ದ ಗುರು “ದಲೈ ಲಾಮ” ಅವರಿಗೆ ಗೌರವ ಪೌರತ್ವವನ್ನು ನೀಡಿ ಗೌರವಿಸಿದೆ.
Question 8 |
8.ಈ ಕೆಳಗಿನ ಯಾವುದು “2016 ವಿಶ್ವದ ಅತ್ಯುತ್ತಮ ವಿಮಾನ ನಿಲ್ದಾಣ” ಗೌರವ ಪಡೆದಿದೆ?
ಇನ್ ಚಿಯಾನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಸಿಯೋಲ್ | |
ಹನೆಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ , ಟೊಕಿಯೋ | |
ಸಿಂಗಾಪುರ ಚಾಂಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ , ಸಿಂಗಾಪುರ | |
ಮುನಿಚ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ , ಜರ್ಮನಿ |
ಸಿಂಗಾಪುರ ಚಾಂಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಸಿಂಗಾಪುರ 2016 ವಿಶ್ವದ ಟಾಪ್ ಹತ್ತು ಅತ್ಯುತ್ತಮ ವಿಮಾನ ನಿಲ್ದಾಣಗಳ ಪೈಕಿ ಪ್ರಥಮ ಸ್ಥಾನಗಳಿಸಿದೆ. ಮುಂಬೈನ ಛತ್ರಪತಿ ವಿಮಾನ ನಿಲ್ದಾಣ ಮತ್ತು ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣ ಕ್ರಮವಾಗಿ 9 ಮತ್ತು 10ನೇ ಸ್ಥಾನ ಪಡೆದಿವೆ.
Question 9 |
9.ಇತ್ತೀಚೆಗೆ “ಹೈಮಾ ಚಂಡಮಾರುತ”ಕ್ಕೆ ತುತ್ತಾದ ಎರಡು ರಾಷ್ಟ್ರಗಳು ____?
ಚೀನಾ ಮತ್ತು ಫಿಲಿಫೈನ್ಸ್ | |
ಫಿಲಿಫೈನ್ಸ್ ಮತ್ತು ಇಂಡೋನೇಷಿಯ | |
ಚೀನಾ ಮತ್ತು ಇಂಡೋನೇಷಿಯ | |
ನ್ಯೂಜಿಲ್ಯಾಂಡ್ ಮತ್ತು ಆಸ್ಟ್ರೇಲಿಯ |
ದ್ವೀಪರಾಷ್ಟ್ರ ಫಿಲಿಫೈನ್ಸ್ ಮತ್ತು ಚೀನಾಗೆ ಹೈಮಾ ಚಂಡಮಾರುತ ಅಪ್ಪಳಿಸಿ ಅಪಾರ ಸಾವುನೋವಿಗೆ ಕಾರಣವಾಗಿದೆ. ಫಿಲಿಫೈನ್ಸ್ ನಲ್ಲಿ 16ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾದ ಹೈಮಾ ಚಂಡಮಾರುತದಿಂದ ದಕ್ಷಿಣ ಚೀನಾ ಕೂಡ ಹೈರಾಣಾಗಿದ್ದು, ಪೂರ್ವ ಗೌಂಗ್ಡಾಂಗ್ ಪ್ರಾಂತ್ಯದಿಂದ ಏಳು ಲಕ್ಷಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ. ಹೈಮಾ ಚಂಡಮಾರುತದ ಆರ್ಭಟಕ್ಕೆ ಶಾನ್ವೀ ನಗರ ತತ್ತರಿಸಿದ್ದು, 7,20,000 ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಗಿದೆ.
Question 10 |
10.ಈ ಕೆಳಗಿನ ಯಾವ ದೇಶ ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ ನಿಂದ ಹಿಂದೆ ಸರಿಯಲು ನಿರ್ಧರಿಸಿದೆ?
ದಕ್ಷಿಣ ಆಫ್ರಿಕಾ | |
ಈಜಿಪ್ಟ್ | |
ನೈಜೀರಿಯಾ | |
ಇಸ್ರೇಲ್ |
ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟಿನಿಂದ ಹಿಂದೆಸರಿಯುತ್ತಿರುವುದಾಗಿ ದಕ್ಷಿಣಾಫ್ರಿಕ ವಿಶ್ವಸಂಸ್ಥೆಯ ಪ್ರಧಾನಕಾರ್ಯದರ್ಶಿ ಬಾನ್ಕಿಮೂನ್ಅವರಿಗೆ ಅಧಿಕೃತವಾಗಿ ತಿಳಿಸಿದೆ ಎನ್ನಲಾಗಿದೆ. ವಿಶ್ವಸಂಸ್ಥೆಯ ಕೋರ್ಟಿನಿಂದ ಹಿಂದೆ ಸರಿಯುವುದಕ್ಕಾಗಿ ಪೂರ್ವ ಆಫ್ರಿಕನ್ ದೇಶವಾದ ಬುರಾಂಡಿಯು ಕಳೆದವಾರ ಕಾನೂನು ಜಾರಿ ಮಾಡಿತ್ತು. ದಕ್ಷಿಣ ಆಫ್ರಿಕಾದ ವಿದೇಶ ಸಚಿವ ಮಯಿತೆ ಎಂಕೋನ ಮಸಬೆನ್ ವಿಶ್ವಸಂಸ್ಥೆಗೆ ಪತ್ರದ ಮೂಲಕ ಕ್ರಿಮಿನಲ್ ಕೋರ್ಟಿನಿಂದ ಹಿಂದೆ ಸರಿಯುವ ನಿರ್ಧಾರವನ್ನು ಪತ್ರದ ಮೂಲಕ ತಿಳಿಸಿದ್ದಾರೆಂದು ರಾಯಿಟರ್ಸ್ ಬಹಿರಂಗಪಡಿಸಿದೆ. ಸಂಘರ್ಷಗಳಿಗೆ ಸಂಬಂಧಿಸಿದ ದಕ್ಷಿಣ ಆಫ್ರಿಕಾದ ನಿಲುವುಗಳು ಅಂತಾರಾಷ್ಟ್ರೀಯ ಕ್ರಿಮಿನಲ್ ಕೋರ್ಟಿನ ವ್ಯಾಖ್ಯಾನಗಳಿಗೆ ಸರಿಹೊಂದುವುದಿಲ್ಲ ಎಂದು ಪತ್ರದಲ್ಲಿ ಸೂಚಿಸಲಾಗಿದೆ.
[button link=”http://www.karunaduexams.com/wp-content/uploads/2016/10/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಅಕ್ಟೋಬರ್-20.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ