ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-21, 2016
Question 1 |
1.ಪ್ರಪ್ರಥಮ ಅಂತಾರಾಷ್ಟ್ರೀಯ ಸಂಖ್ಯಾಶಾಸ್ತ್ರ (International Prize in Statistics) ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?
ಸರ್ ಡೇವಿಡ್ ಕಾಕ್ಸ್ | |
ಪೀಟರ್ ಹೆನ್ರಿಸನ್ | |
ಸುರೇಶ್ ಶಾಸ್ತ್ರಿ | |
ಸರ್ ಹೆಮ್ಲಸ್ ಬೆಥ್ಲೆಮ್ |
ಖ್ಯಾತ ಬ್ರಿಟಿಷ್ ಸಂಖ್ಯಾಶಾಸ್ತ್ರಜ್ಞ ಸರ್ ಡೇವಿಡ್ ಕಾಕ್ಸ್ ಅವರಿಗೆ ಪ್ರಪ್ರಥಮ ಅಂತಾರಾಷ್ಟ್ರೀಯ ಸಂಖ್ಯಾಶಾಸ್ತ್ರ ಪ್ರಶಸ್ತಿಯನ್ನು ನೀಡಲಾಗಿದೆ. ಸರ್ ಡೇವಿಡ್ ಕಾಕ್ಸ್ ಅಭಿವೃದ್ದಿಪಡಿಸಿರುವ ಸರ್ವೇವಲ್ ಅನಾಲಿಸಿಸ್ ಮಾಡೆಲ್ ಅಥವಾ ಕಾಕ್ಸ್ ಮಾಡೆಲ್ ಗಾಗಿ ಪ್ರಶಸ್ತಿಯನ್ನು ನೀಡಲಾಗಿದೆ. ಕಾಕ್ಸ್ ಮಾಡೆಲ್ ವೈದ್ಯಕೀಯ, ವಿಜ್ಞಾನ ಮತ್ತು ಇಂಜನಿಯರಿಂಗ್ ಕ್ಷೇತ್ರದಲ್ಲಿ ಬಳಕೆಯಾಗುತ್ತಿದೆ.
Question 2 |
2.ಇತ್ತೀಚೆಗೆ ನಿಧನರಾದ “ಮೆಹರ್ ಮಿತ್ತಲ್” ಯಾವ ಭಾಷೆ ಸಿನಿಮಾದ ಪ್ರಸಿದ್ದ ಹಾಸ್ಯನಟ?
ಮಲೆಯಾಳಂ | |
ತಮಿಳು | |
ಪಂಜಾಬಿ | |
ಮರಾಠಿ |
ಪಂಜಾಬ್ ಸಿನಿಮಾದ ಖ್ಯಾತ ಹಾಸ್ಯನಟ ಮೆಹರ್ ಮಿತ್ತಲ್ ನಿಧನರಾಗಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು. ಮಿತ್ತಲ್ ಸುಮಾರು ನಾಲ್ಕು ದಶಕಗಳ ಕಾಲ ಜನರನ್ನು ರಂಜಿಸಿದ್ದರು. 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದ ಅವರು ಕಿರುತೆರೆಯಲ್ಲೂ ಅಭಿನಯಿಸಿ ಜನಮನ ಗೆದ್ದಿದ್ದರು.
Question 3 |
3.“ವಿಶ್ವ ವೈದ್ಯಕೀಯ ಸಂಘಟನೆ (World Medical Association)” ಅಧ್ಯಕ್ಷರಾಗಿ ಯಾರು ನೇಮಕಗೊಂಡರು?
ಕೇತನ್ ದೇಸಾಯಿ | |
ಕುಣಾಲ್ ಷಾಹ | |
ಸುಧೀಂದ್ರ ಚಟರ್ಜಿ | |
ಪರಮೇಶ್ ಕನ್ಹ |
ಭಾರತೀಯ ವೈದ್ಯಕೀಯ ಮಂಡಳಿಯ ಮಾಜಿ ಅಧ್ಯಕ್ಷರಾದ ಕೇತನ್ ದೇಸಾಯಿರವರು ವಿಶ್ವ ವೈದ್ಯಕೀಯ ಸಂಘಟನೆಯ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ದೇಸಾಯಿ ಅವರು 2016-17 ಅವಧಿ ವರೆಗೆ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸಲಿದ್ದಾರೆ. ಆದರೆ ಇವರನ್ನು ಅಧ್ಯಕ್ಷರನ್ನಾಗಿ ಆಯ್ಕೆಮಾಡಿರುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಭ್ರಷ್ಟಾಚಾರ ನಡೆಸಿದ ಆರೋಪ ಇವರ ಮೇಲಿದೆ.
Question 4 |
4.ಮುಂಬೈ ಪತ್ರಕರ್ತರ ಸಂಘದ ಜೀವಮಾನ ಸಾಧನೆ ಪ್ರಶಸ್ತಿಗೆ ಯಾರನ್ನು ಆಯ್ಕೆಮಾಡಲಾಗಿದೆ?
ಸೌರವ್ ಗಂಗೂಲಿ | |
ಸುನೀಲ್ ಗವಾಸ್ಕರ್ | |
ಸಚಿನ್ ತೆಂಡುಲ್ಕರ್ | |
ರಾಹುಲ್ ದ್ರಾವಿಡ್ |
ಮಾಜಿ ಕ್ರಿಕೆಟ್ ಆಟಗಾರ ಸುನೀಲ್ ಗವಾಸ್ಕರ್ ಅವರನ್ನು ಮುಂಬೈ ಪತ್ರಕರ್ತರ ಸಂಘದ ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಡಿಸೆಂಬರ್ 11 ರಂದು ಪ್ರಶಸ್ತಿಯನ್ನು ಗವಾಸ್ಕರ್ ಅವರಿಗೆ ನೀಡಲಾಗುವುದು. ಮುಂಬೈ ಪತ್ರಕರ್ತರ ಸಂಘದ ಮೊದಲ ಪ್ರಶಸ್ತಿಯನ್ನು 2013ರಲ್ಲಿ ಬ್ಯಾಡ್ಮಿಂಟನ್ ದಂತಕತೆ ನಂದು ನಟೇಕರ್ ಅವರಿಗೆ ನೀಡಲಾಗಿತ್ತು.
Question 5 |
5.ಈ ಕೆಳಗಿನ ಯಾವ ರಾಜ್ಯ ಐಟಿ@ಸ್ಕೂಲ್ ಯೋಜನೆಯಡಿ 10 ಸಾವಿರ ಸರ್ಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲೆಗಳಿಗೆ ಅಂತರ್ಜಾಲ ಸೌಲಭ್ಯ ಒದಗಿಸಲಿದೆ?
ಕೇರಳ | |
ತೆಲಂಗಣ | |
ಗೋವಾ | |
ಮಹಾರಾಷ್ಟ್ರ |
ಕೇರಳದ 10 ಸಾವಿರ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ ಶಾಲೆಗಳು ಹೈಟೆಕ್ ಆಗಲಿದ್ದು, ನವೆಂಬರ್ 1ರಿಂದ ಅಂತರ್ಜಾಲ ಸೌಲಭ್ಯ ಪಡೆಯಲಿವೆ. ಇಂಥ ಯೋಜನೆ ಇದೇ ಮೊದಲು. ‘ಐಟಿ@ಸ್ಕೂಲ್’ ಯೋಜನೆ ಅಂಗವಾಗಿ ಬಿಎಸ್ಎನ್ಎಲ್ ಬ್ರಾಡ್ಬ್ಯಾಂಡ್ ಸಂಪರ್ಕವನ್ನು ನೀಡುತ್ತಿದ್ದು, 2 ಎಂಬಿಪಿಎಸ್ ವೇಗದಲ್ಲಿ ಅನಿಯಮಿತ ಡೇಟಾ ಬಳಸಬಹುದು.
Question 6 |
6.ದೇಶದ ಮೊದಲ ರೈಲ್ವೆ ವಿಶ್ವವಿದ್ಯಾಲಯ ಎಲ್ಲಿ ಸ್ಥಾಪನೆಯಾಗಲಿದೆ?
ವಡೋದರ, ಗುಜರಾತ್ | |
ಜೈಪುರ, ರಾಜಸ್ತಾನ | |
ಪುಣೆ, ಮಹಾರಾಷ್ಟ್ರ | |
ಗುಂಟೂರು, ಆಂಧ್ರಪ್ರದೇಶ |
ಗುಜಾರಾತ್ನ ವಡೋದರದಲ್ಲಿ ದೇಶದ ಮೊದಲ ರೈಲ್ವೆ ವಿಶ್ವವಿದ್ಯಾಲಯ ಸ್ಥಾಪನೆಯಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. ರೈಲ್ವೆ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ದಿಪಡಿಸಲು ಇದು ಸಹಾಯವಾಗಲಿದೆ.
Question 7 |
7.ಇತ್ತೀಚೆಗೆ “ಐರೋಪ್ಯ ಒಕ್ಕೂಟ-ಭಾರತ ನವೋದ್ಯಮ ಶೃಂಗಸಭೆ”ಯನ್ನು ಯಾವ ನಗರದಲ್ಲಿ ಆಯೋಜಿಸಲಾಗಿತ್ತು?
ಹೈದ್ರಾಬಾದ್ | |
ಬೆಂಗಳೂರು | |
ಮುಂಬೈ | |
ನವ ದೆಹಲಿ |
ಮೊದಲ ಐರೋಪ್ಯ ಒಕ್ಕೂಟ-ಭಾರತ ನವೋದ್ಯಮ ಶೃಂಗಸಭೆಯನ್ನು ಬೆಂಗಳೂರಿನಲ್ಲಿ ಅಕ್ಟೋಬರ್ 20 ರಂದು ಆಯೋಜಿಸಲಾಗಿತ್ತು. ಯುರೋಪ್ ಮತ್ತು ಭಾರತದ ನಮೋದ್ಯಮಗಳನ್ನು ಒಂದೇ ವೇದಿಕೆಗೆ ತರುವುದು ಈ ಶೃಂಗಸಭೆಯ ಉದ್ದೇಶವಾಗಿದೆ. ಈ ಶೃಂಗಸಭೆಯಲ್ಲಿ ಅನೇಕ ಉದ್ಯಮಿಗಳು, ತಜ್ಞರು ಭಾಗವಹಿಸಿದ್ದು, ಭಾರತದ ನವೋದ್ಯಮಗಳ ಗುಣಮಟ್ಟದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
Question 8 |
8.ರಷ್ಯಾದಲ್ಲಿ ನಡೆಯಲಿರುವ 2018 ಪುಟ್ಬಾಲ್ ವಿಶ್ವಕಪ್ ಟೂರ್ನಿಯ ಲಾಂಛನವಾಗಿ (Mascot) ಯಾವುದನ್ನು ಆಯ್ಕೆಮಾಡಲಾಗಿದೆ?
ಬೆಕ್ಕು | |
ತೋಳ | |
ಸಿಂಹ | |
ಇಲಿ |
2018ರಲ್ಲಿ ರಷ್ಯಾದಲ್ಲಿ ನಡೆಯಲಿರುವ ಫುಟ್ಬಾಲ್ ವಿಶ್ವಕಪ್ ಟೂರ್ನಿಯ ಲಾಂಛನವಾಗಿ ಬಾಹ್ಯಾಕಾಶದ ವಸ್ತ್ರ ತೊಟ್ಟಿರುವ ರೂಪದಲ್ಲಿರುವ ತೋಳವನ್ನು ಆಯ್ಕೆ ಮಾಡಲಾಗಿದೆ. ಈ ತೋಳವನ್ನು ಜಬಿವಕ (Zabivaka) ಎಂದು ಕರೆಯಲಾಗಿದೆ. ಕೊನೆಯ ಸುತ್ತಿನಲ್ಲಿ ತೋಳ, ಹುಲಿ ಮತ್ತು ಬೆಕ್ಕಿನ ಪ್ರತಿಮೆಯ ಚಿತ್ರದ ಲಾಂಛನದಲ್ಲಿ ಒಂದು ಲಾಂಛನವನ್ನು ಅಂತಿಮಗೊಳಿಸುವ ಉದ್ದೇಶದಿಂದ ಸಾರ್ವಜನಿಕರಿಗೆ ಮತದಾನ ಅವಕಾಶ ನೀಡಲಾಗಿತ್ತು. ತೋಳದ ಲಾಂಛನಕ್ಕೆ ಶೇ.53 ಮತ ಚಲಾವಣೆಯಾದರೆ, ಹುಲಿ ಪ್ರತಿಮೆಯ ಲಾಂಛನ ಶೇ.27 ಮತ್ತು ಬೆಕ್ಕಿನ ಪ್ರತಿಮೆಯ ಲಾಂಛನ ಶೇ.20 ರಷ್ಟು ಮತ ಪಡೆದಿದೆ. ಸುಮಾರು 10 ಲಕ್ಷ ಜನರು ಮತಚಲಾವಣೆ ಮಾಡಿದ್ದಾರೆ. ಫಿಫಾ ಫುಟ್ಬಾಲ್ ವಿಶ್ವಕಪ್ ಟೂರ್ನಿ 2018ರಲ್ಲಿ ಜೂನ್ ಮತ್ತು ಜುಲೈನಲ್ಲಿ ನಡೆಯಲಿದೆ. ರಷ್ಯಾದ ಮಾಸ್ಕೋ, ಸೇಂಟ್ ಪೀಟರ್ಬರ್ಗ್, ಸೋಚಿ ಸೇರಿದಂತೆ ಒಟ್ಟು 11 ಸ್ಥಳಗಳಲ್ಲಿ ಪಂದ್ಯಗಳು ನಡೆಯಲಿವೆ.
Question 9 |
9.ಇತ್ತೀಚೆಗೆ ನಿಧನರಾದ ವೌಂಟ್ ಎವರೆಸ್ಟ್ ಶಿಖರವನ್ನು ಏರಿದ ಮೊದಲ ಮಹಿಳೆ “ಜಂಕೊ ತಾಬಿ” ಯಾವ ದೇಶದವರು?
ರಷ್ಯಾ | |
ಜಪಾನ್ | |
ನೇಪಾಳ | |
ಚೀನಾ |
ಮೌಂಟ್ ಎವರೆಸ್ಟ್ ಶಿಖರವನ್ನು ಏರಿದ ಮೊದಲ ಮಹಿಳೆ ಜಪಾನ್ನ ಜಂಕೊ ತಾಬಿ ನಿಧನರಾಗಿದ್ದಾರೆ. ಅವರು 1975ರಲ್ಲಿ ವೌಂಟ್ ಎವರೆಸ್ಟ್ ಶಿಖರವನ್ನು ಆಗ್ನೇಯ ದಿಕ್ಕಿನಿಂದ ಏರಿದರು ಹಾಗೂ ಈ ಸಾಧನೆಗೈದ ಜಗತ್ತಿನ ಮೊದಲ ಮಹಿಳೆಯಾಗಿ ದಾಖಲಾದರು. ಬಳಿಕ ಅವರು ಜಗತ್ತಿನ ಇತರ ಎತ್ತರದ ಶಿಖರಗಳನ್ನೂ ಏರಿದರು. ತಾಂಝಾನಿಯದ ಕಿಲಿಮಾಂಜರೊ, ಅಮೆರಿಕದ ವೌಂಟ್ ಮೆಕಿನ್ಲೆ ಮತ್ತು ಅಂಟಾರ್ಕ್ಟಿಕದ ವಿನ್ಸನ್ ಮಾಸಿಫ್- ಅವರು ಏರಿದ ಇತರ ಪ್ರಮುಖ ಶಿಖರಗಳು.
Question 10 |
10.ಜಗತ್ತಿನ ಅತಿ ಹೆಚ್ಚು ಅಲ್ಯೂಮಿನಿಯಂ ಉತ್ಪಾದಿಸುವ ರಾಷ್ಟ್ರ ಯಾವುದು?
ಭಾರತ | |
ಚೀನಾ | |
ಅಮೆರಿಕ | |
ರಷ್ಯಾ |
ಚೀನಾ ವಿಶ್ವದ ಅತಿದೊಡ್ಡ ಅಲ್ಯೂಮಿನಿಯಂ ಉತ್ಪಾದಿಸುವ ರಾಷ್ಟ್ರವಾಗಿದೆ. ಚೀನಾದಲ್ಲಿ ವಾರ್ಷಿಕ 23,000 ಟನ್ ಅಲ್ಯೂಮಿನಿಯಂ ಉತ್ಪಾದಿಸಲಾಗುತ್ತಿದೆ. ಚೀನಾ ನಂತರ ರಷ್ಯಾ ಮತ್ತು ಕೆನಡಾ ವಿಶ್ವದ ಅತಿ ಹೆಚ್ಚು ಅಲ್ಯೂಮಿನಿಯಂ ಉತ್ಪಾದಿಸುವ ದೇಶಗಳು.
[button link=”http://www.karunaduexams.com/wp-content/uploads/2016/10/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಅಕ್ಟೋಬರ್-21.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ