ಕನ್ನಡದ ಮೊದಲ ಅಂತರ್ಜಾಲ ಆಧಾರಿತ ಸ್ಪರ್ಧಾತ್ಮಕ ಪರೀಕ್ಷ ತಾಣವಾಗಿರುವ ಕರುನಾಡು ಎಗ್ಸಾಂ ತಂಡ ಪಿಡಿಓ ಆಕಾಂಕ್ಷಿಗಳಿಗೆ ಅತ್ಯುತ್ತಮ ಗುಣಮಟ್ಟದ ಹಾಗೂ ಪರೀಕ್ಷೆಯಲ್ಲಿ ನಿರೀಕ್ಷಿಸಬಹುದಾದ ಪ್ರಶ್ನೋತ್ತರಗಳನ್ನು ಇಂದಿನಿಂದ ವೆಬ್ ಸೈಟ್ ನಲ್ಲಿ ಪ್ರಕಟಗೊಳ್ಳುಸುತ್ತಿದೆ.
ಗ್ರಾ ಪಂ ಅ ಅಧಿಕಾರಿ ಮತ್ತು ಕಾರ್ಯದರ್ಶಿ ಗ್ರೇಡ್-1 ಕ್ವಿಜ್-13
Question 1 |
1.ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿ ನಡೆಯುವ ಸ್ಥಳದಲ್ಲಿ ಕಾರ್ಮಿಕರು ಶಾಶ್ವತವಾಗಿ ಅಂಗವಿಕಲರಾದರೆ ಅಥವಾ ಮೃತಪಟ್ಟರೆ, ಅವರಿಗೆ ಅಥವಾ ಅವರ ವಾರಸುದಾರರಿಗೆ ದೊರಕುವ ಪರಿಹಾರ ಮೊತ್ತವೆಷ್ಟು?
ರೂ. 50000 | |
ರೂ. 25000 | |
ರೂ. 50000 ಅಥವಾ ಕೇಂದ್ರ ಸರ್ಕಾರ ನಿಗದಿಪಡಿಸಬಹುದಾದ ಪರಿಹಾರ ಮೊತ್ತ | |
ರೂ. 25000 ಅಥವಾ ಕೇಂದ್ರ ಸರ್ಕಾರ ನಿಗದಿಪಡಿಸಬಹುದಾದ ಪರಿಹಾರ ಮೊತ್ತ |
( 6 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳಿಗೆ ಕೆಲಸದ ಸ್ಥಳದಲ್ಲಿ ಅನಾಹುತ ಸಂಭವಿಸಿದರೂ ಗುಣಮುಖರಾಗುವವರೆಗೆ ಉಚಿತ ವೈದ್ಯಕೀಯ ನೆರವು ದೊರೆಯುವುದು ಮತ್ತು ಅಂಗವಿಕಲತೆ ಅಥವಾ ಮರಣ ಸಂಭವಿಸಿದರೆ ಮೇಲ್ಕಾಣಿಸಿದ ಪರಿಹಾರ ಮೊತ್ತ ಪಡೆಯಲು ಅವಕಾಶವಿದೆ)
Question 2 |
2.ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕಾಮಗಾರಿ ನಡೆಯುವ ಸ್ಥಳದಲ್ಲಿ ಕಾರ್ಮಿಕರಿಗೆ ಈ ಕೆಳಕಂಡ ಯಾವ ಸೌಲಭ್ಯವನ್ನು ಒದಗಿಸಲಾಗುತ್ತದೆ?
1.ಕುಡಿಯುವ ನೀರು
2.ಲಘು ಉಪಾಹಾರ
3.ಪ್ರಥಮ ಚಿಕಿತ್ಸೆ ಪೆಟ್ಟಿಗೆ
4.6 ವರ್ಷಕ್ಕಿಂತ ಕಡಿಮೆ ವಯೋಮಾನದ ಮಕ್ಕಳನ್ನು ನೋಡಿಕೊಳ್ಳಲು ಅಂಗನವಾಡಿ ಕಾರ್ಯಕರ್ತೆ
5.ವಿಶ್ರಾಂತಿ ಸಮಯಕ್ಕೆ ನರಳಿನ ವ್ಯವಸ್ಥೆ
1, 2, 4 | |
1, 3, 5 | |
2, 3, 4 | |
ಮೇಲಿನ ಎಲ್ಲವೂ |
Question 3 |
3.ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅರಣ್ಯೀಕರಣ ಮತ್ತು ಗ್ರಾಮೀಣ ರಸ್ತೆ ಕಾಮಗಾರಿಗಳಿಗೆ ಕ್ರಮವಾಗಿ ನಿಗದಿಪಡಿಸಿರುವ ಶೇಕಡಾವಾರು ಮೊತ್ತ ಎಷ್ಟು?
ಗರಿಷ್ಟ ಶೇ.20 ಮತ್ತು ಗರಿಷ್ಟ ಶೇ.10 | |
ಕನಿಷ್ಟ ಶೇ.10 ಮತ್ತು ಗರಿಷ್ಟ ಶೇ.20 | |
ಕನಿಷ್ಟ ಶೇ.20 ಮತ್ತು ಕನಿಷ್ಟ ಶೇ.20 | |
ಕನಿಷ್ಟ ಶೇ. 20 ಮತ್ತು ಗರಿಷ್ಟ ಶೇ.10 |
Question 4 |
4.ಗ್ರಾಮ ಪಂಚಾಯಿತಿಯ ಅನುದಾನದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ.ಜಾತಿ ಮತ್ತು ಪ. ಪಂಗಡಕ್ಕೆ ಸೇರಿದ ಸಮುದಾಯದ ಅಭ್ಯುದಯಕ್ಕೆ, ವಿಕಲಚೇತನರಿಗೆ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲು ಕ್ರಮವಾಗಿ ಎಷ್ಟು ಶೇಕಡವಾರು ಮೊತ್ತವನ್ನು ಮೀಸಲಿಡಬೇಕು?
ಶೇ. 18, 5 ಮತ್ತು 1 | |
ಶೇ. 20, 5 ಮತ್ತು 1 | |
ಶೇ. 50, 3 ಮತ್ತು 1 | |
ಶೇ. 25, 3 ಮತ್ತು 1 |
Question 5 |
5.ಗ್ರಾಮ ಪಂಚಾಯಿತಿಗಳಲ್ಲಿ ಸದ್ಯ ( 2016-17 ನೇ ಸಾಲಿನಲ್ಲಿ) ಚಾಲ್ತಿಯಲ್ಲಿರದ ಯೋಜನೆಗಳು ಯಾವುವು?
1.ಬಸವ ವಸತಿ ಯೋಜನೆ
2.ಆಶ್ರಯ ವಸತಿ ಯೋಜನೆ
3.ಇಂದಿರಾ ಆವಾಸ್ ಯೋಜನೆ
4.ಪ್ರಧಾನ ಮಂತ್ರಿ ಆವಾಸ್ ಯೋಜನೆ
5.ಸಂಜೀವಿನಿ ಯೋಜನೆ
4 ಮತ್ತು 5 | |
1 ಮತ್ತು 5 | |
2 ಮತ್ತು 3 | |
2 ಮತ್ತು 4 |
Question 6 |
6.ಗ್ರಾಮ ಪಂಚಾಯಿತಿಗಳಲ್ಲಿ ಜಮಾಬಂದಿ ಕುರಿತಾದ ಕೆಳಕಂಡ ಹೇಳಿಕೆಗಳನ್ನು ಗಮನಿಸಿ:
1.ಎಲ್ಲಾ ಗ್ರಾಮ ಪಂಚಾಯಿತಿಗೆ ಜಮಾಬಂದಿಯನ್ನು ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ಕೈಗೊಳ್ಳುವರು
2.ಜಮಾಬಂದಿ ಕೈಗೊಳ್ಳಲು ಸಭೆಯ 2/3 ರಷ್ಟು ಕೋರಂ ಅಗತ್ಯ
3.ಗ್ರಾಮ ಪಂಚಾಯಿತಿಗಳಿಗಿರುವಂತೆ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಿಗೂ ಜಮಾಬಂದಿ ಇದೆ
1 ಮತ್ತು 3 ಸರಿಯಾಗಿದೆ | |
1 ಮತ್ತು 2 ಸರಿಯಾಗಿದೆ | |
ಮೇಲಿನ ಎಲ್ಲವೂ ಸರಿಯಾಗಿದೆ | |
ಮೇಲಿನ ಎಲ್ಲವೂ ತಪ್ಪಾಗಿದೆ |
Question 7 |
7.ಗ್ರಾಮ ಪಂಚಾಯಿತಿಯಲ್ಲಿ ಪ್ರತಿ ವರ್ಷ ಆಯವ್ಯಯವನ್ನು ಯಾವ ಅವಧಿಯಲ್ಲಿ ತಯಾರಿಸಲಾಗುತ್ತದೆ?
ಫೆಬ್ರವರಿ 1 ರಿಂದ ಮಾರ್ಚ್ 10 ರೊಳಗಿನ ಅವಧಿಯಲ್ಲಿ ನಡೆಯುವ ಸಭೆಯಲ್ಲಿ | |
ಜನವರಿ 1 ರಿಂದ ಫೆಬ್ರವರಿ 10 ರೊಳಗಿನ ಅವಧಿಯಲ್ಲಿ ನಡೆಯುವ ಸಭೆಯಲ್ಲಿ | |
ಮಾರ್ಚ್ 1 ರಿಂದ ಮಾರ್ಚ್ 10 ರೊಳಗಿನ ಅವಧಿಯಲ್ಲಿ ನಡೆಯುವ ಸಭೆಯಲ್ಲಿ | |
ಅಕ್ಟೋಬರ್ 2 ರಿಂದ ನವೆಂಬರ್ 14 ರೊಳಗಿನ ಅವಧಿಯಲ್ಲಿ ನಡೆಯುವ ಸಭೆಯಲ್ಲಿ |
Question 8 |
8. ಗ್ರಾಮ ಪಂಚಾಯಿತಿ ಕೆಳಕಂಡ ಯಾವ ಆಸ್ತಿಗಳಿಗೆ ತೆರಿಗೆ ವಿಧಿಸಿ- ಸಂಗ್ರಹಿಸುವ ಅಧಿಕಾರ ಇಲ್ಲ?
ಸರ್ಕಾರಿ ನೌಕರರ ವಸತಿ ಗೃಹ | |
ಪೂಜಾ ಸ್ಥಳಗಳಿಗೆ ಸೇರಿದ ವಾಣಿಜ್ಯ ಉದ್ದೇಶದ ಕಟ್ಟಡ | |
ಮುಜರಾಯಿ ಇಲಾಖೆಯ ಅಧೀನದಲ್ಲಿರುವ ಪೂಜಾಸ್ಥಳದ ಕಟ್ಟಡ | |
ಮದ್ಯ ಮಾರಾಟ ಅಂಗಡಿಯ ಕಟ್ಟಡ ತೆರಿಗೆ |
( ಮುಜರಾಯಿ ಇಲಾಖೆಯ ಅಧೀನದಲ್ಲಿರುವ ಪೂಜಾಸ್ಥಳದ ಕಟ್ಟಡಗಳ ಮೇಲೆ ಗ್ರಾಮ ಪಂಚಾಯಿತಿ ನೇರವಾಗಿ ತೆರಿಗೆ ವಿಧಿಸುವಂತಿಲ್ಲ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಪೂಜಾ ಸ್ಥಳಗಳು ಆದಾಯ ಗಳಿಸುತ್ತಿದ್ದರೆ ಈ ಆದಾಯದ ಒಂದು ಭಾಗವನ್ನು ತೆರಿಗೆಯಾಗಿ ತನಗೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ/ಧಾರ್ಮಿಕ ಸಂಸ್ಥೆಗಳಿಗೆ ಅರ್ಜಿ ಸಲ್ಲಿಸಿ ತೆರಿಗೆ ಪಡೆಯಬಹುದಾಗಿದೆ)
Question 9 |
9.ಪಂಚಾಯತ್ ರಾಜ್ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಕೆಳಕಂಡ ಅಧಿಕಾರಿಗಳ ಸರಿಯಾದ ಏರಿಕೆ ಕ್ರಮ ಯಾವುದು?
ಪಂ.ಅ.ಅ., ಕಾರ್ಯನಿರ್ವಾಹಕ ಅಧಿಕಾರಿ, ಕಾರ್ಯದರ್ಶಿ, ಉಪಕಾರ್ಯದರ್ಶಿ | |
ಕಾರ್ಯದರ್ಶಿ, ಕಾರ್ಯನಿರ್ವಾಹಕ ಅಧಿಕಾರಿ, ಸಹಾಯಕ ಕಾರ್ಯಪಾಲಕ ಅಧಿಕಾರಿ, ಮುಖ್ಯಕಾರ್ಯನಿರ್ವಾಹಕ ಅಧಿಕಾರಿ | |
ಕಾರ್ಯದರ್ಶಿ, ಪಂ.ಅ.ಅ., ಸಹಾಯಕ ಕಾರ್ಯದರ್ಶಿ, ಉಪ ಕಾರ್ಯದರ್ಶಿ | |
ಪಂ.ಅ.ಅ., ಉಪ ಕಾರ್ಯದರ್ಶಿ, ಸಹಾಯಕ ಕಾರ್ಯದರ್ಶಿ, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ |
Question 10 |
10. ಗ್ರಾಮ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಯಾರು ಪಾಲ್ಗೊಳ್ಳಬಹುದು?
ಕಾರ್ಯದರ್ಶಿ, ಪಂ.ಅ.ಅ., ಗ್ರಾಮ ಪಂಚಾಯಿತಿ ಅಧ್ಯಕ್ಷರು, ಗ್ರಾಮ ಪಂಚಾಯಿತಿ ಸದಸ್ಯರು | |
ಕಾರ್ಯದರ್ಶಿ, ಪಂ.ಅ.ಅ., ಗ್ರಾಮ ಪಂಚಾಯಿತಿ ಅಧ್ಯಕ್ಷರು, ತಾಲೂಕು ಪಂಚಾಯಿತಿ ಅಧ್ಯಕ್ಷರು | |
ಗ್ರಾಮ ಪಂಚಾಯಿತಿ ಅಧ್ಯಕ್ಷರು, ತಾಲೂಕು ಪಂಚಾಯಿತಿ ಸದಸ್ಯರು, ಜಿಲ್ಲಾ ಪಂಚಾಯಿತಿ ಸದಸ್ಯರು | |
ಪಂ.ಅ.ಅ., ಗ್ರಾಮ ಪಂಚಾಯಿತಿ ಸದಸ್ಯರು, ಜಿಲ್ಲಾ ಪಂಚಾಯಿತಿ ಸದಸ್ಯರು |
[button link=”http://www.karunaduexams.com/wp-content/uploads/2016/10/ಗ್ರಾ-ಪಂ-ಅ-ಅಧಿಕಾರಿ-ಮತ್ತು-ಕಾರ್ಯದರ್ಶಿ-ಗ್ರೇಡ್-1-ಕ್ವಿಜ್-13.pdf”] ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
ಧನ್ಯವಾದಗಳು ಸರ್
Supper
Its Helpfull for Job Seekers
Thank you……….
Good sir thank u
Very nice and usefull for all kannada medium sudents
It’s very helpfull for getting the job
It’s very helpfull for getting the job and it’a new and new think
It’s very helpfull for getting the job and it’s a new and good think
Good
Super
Nice sir
Vrp.muniyappa@gmail.com
Thank u sooo much sir