ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-24, 2016

Question 1

1.2016 ಹೂಗೇವೀನ್ ಇಂಟರ್ನ್ಯಾಶನಲ್ ಚೆಸ್ ಟೂರ್ನಮೆಂಟ್ನಲ್ಲಿ ಸತತ ಎರಡನೆ ಬಾರಿ ಪ್ರಶಸ್ತಿ ಗೆದ್ದು ಈ ಸಾಧನೆ ಮಾಡಿದ ಭಾರತದ ಮೊದಲ ಚೆಸ್ ಆಟಗಾರ ಯಾರು?

A
ವಿಶ್ವನಾಥನ್ ಆನಂದ್
B
ಅಭಿಜಿತ್ ಗುಪ್ತಾ
C
ಹರಿಕಾ ದ್ರೋಣವಳ್ಳಿ
D
ಎಂ ಆರ್ ಲಲಿತ್ ಬಾಬು
Question 1 Explanation: 
ಅಭಿಜಿತ್ ಗುಪ್ತಾ:

ಗ್ರಾಂಡ್ಮಾಸ್ಟರ್ ಹಾಗೂ ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಅಭಿಜಿತ್ ಗುಪ್ತಾ ಹೂಗೇವೀನ್ ಇಂಟರ್ನ್ಯಾಶನಲ್ ಚೆಸ್ ಟೂರ್ನಮೆಂಟ್ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಹಾಲೆಂಡ್ನ ಹೂಗೇವೀನ್ನಲ್ಲಿ ನಡೆದ ಫಿಡೆ ಓಪನ್ನಲ್ಲಿ ಸತತ ಎರಡನೆ ಬಾರಿ ಪ್ರಶಸ್ತಿ ಎತ್ತಿ ಹಿಡಿದ ಅಭಿಜಿತ್ ಈ ಸಾಧನೆ ಮಾಡಿದ ಮೊದಲ ಚೆಸ್ ಪಟು ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಭಾರತೀಯರ ಪ್ರಾಬಲ್ಯಕ್ಕೆ ಸಾಕ್ಷಿಯಾದ ಪ್ರಸ್ತುತ ಚೆಸ್ ಟೂರ್ನಿಯಲ್ಲಿ ಗ್ರಾಂಡ್ಮಾಸ್ಟರ್ ಸಂದೀಪನ್ ಚಂದ್ ಎರಡನೆ ಸ್ಥಾನ ಪಡೆದರು. ಮೂರನೆ ಹಾಗೂ ನಾಲ್ಕನೆ ಸ್ಥಾನವನ್ನು ಕ್ರಮವಾಗಿ ಜಿಎಂ ಎಂ.ಆರ್. ಲಲಿತ್ ಬಾಬು ಹಾಗೂ ಜಿಎಂ ಎಂ.ಶ್ಯಾಮ್ ಸುಂದರ್ ಪಡೆದಿದ್ದಾರೆ.

Question 2

2.ಈ ಕೆಳಗಿನ ಯಾರು “2016 ಮಿಸ್ಟರ್. ಏಷ್ಯಾ ಪ್ರಶಸ್ತಿ”ಯನ್ನು ಮುಡಿಗೇರಿಸಿಕೊಂಡರು?

A
ಸುಧೀಂದ್ರ ಕೃಷ್ಣನ್
B
ಅರ್ಮಿಂದರ್ ಸಿಂಗ್
C
ಜಿ ಬಾಲಕೃಷ್ಣ
D
ರಮೇಶ್ ಕುಮಾರ್
Question 2 Explanation: 
ಜಿ ಬಾಲಕೃಷ್ಣ:

ಬೆಂಗಳೂರಿನ ವೈಟ್ ಫೀಲ್ಡ್ ಮೂಲದ ಜಿ.ಬಾಲಕೃಷ್ಣ (25) ಅವರು ಇತ್ತೀಚೆಗೆ ಫಿಲಿಪ್ಪೈನ್ಸ್ ನಲ್ಲಿ ನಡೆದ ಫಿಲಿ-ಏಷ್ಯಾ ಚಾಂಪಿಯನ್ ಷಿಪ್ ನಲ್ಲಿ ಮಿಸ್ಟರ್ ಏಷ್ಯಾ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬೆಂಗಳೂರಿನ ಆರ್ನಾಲ್ಡ್ ಎಂದೇ ಕರೆಯಪ್ಪಡುವ ಬಾಲಕೃಷ್ಣ ಅವರು ಇತ್ತೀಚೆಗೆ ಜರ್ಮನಿಯಲ್ಲಿ ನಡೆದ ಅಂಡರ್-24 ಕೆಟಗಿರಿಯಲ್ಲಿ ಮಿಸ್ಟರ್ ಯುನಿವರ್ಸ್ ಆಗಿ ಆಯ್ಕೆಯಾಗಿದ್ದರು.

Question 3

3. “2016 ವಿಶ್ವಸಂಸ್ಥೆ ದಿನ (United Nations Day)”ದ ಧ್ಯೇಯವಾಕ್ಯ ______?

A
Freedom First
B
For Better World
C
Together Towards Peace
D
On UN and One World
Question 3 Explanation: 
Freedom First:

ವಿಶ್ವಸಂಸ್ಥೆ ದಿನವನ್ನು ಅಕ್ಟೋಬರ್ 24ರಂದು ಪ್ರತಿವರ್ಷ ಆಚರಿಸಲಾಗುವುದು. 1945 ಅಕ್ಟೋಬರ್ 24ರಂದು ವಿಶ್ವಸಂಸ್ಥೆ ಉದಯವಾಯಿತು. ಅದರ ಸ್ಮರಣಾರ್ಥ ಅಕ್ಟೋಬರ್ 24ರಂದು ವಿಶ್ವಸಂಸ್ಥೆ ದಿನವನ್ನಾಗಿ ಆಚರಿಸಲಾಗುತ್ತಿದೆ. “ಸ್ವಾತಂತ್ರ ಮೊದಲು (Freedom First)” ಇದು ಈ ವರ್ಷದ ಧ್ಯೇಯವಾಕ್ಯ.

Question 4

4. ಪ್ರಪ್ರಥಮ “ರಾಷ್ಟ್ರೀಯ ಬುಡಕಟ್ಟು ಉತ್ಸವಕ್ಕೆ (National Tribal Carnival)” ಯಾವ ನಗರದಲ್ಲಿ ಚಾಲನೆ ನೀಡಲಾಯಿತು?

A
ನವದೆಹಲಿ
B
ವಡೋದರ
C
ನಾಸಿಕ್
D
ಪಾಟ್ನಾ
Question 4 Explanation: 
ನವದೆಹಲಿ:

ಮೊಟ್ಟಮೊದಲ ರಾಷ್ಟ್ರೀಯ ಬುಡಕಟ್ಟು ಉತ್ಸವಕ್ಕೆ ನವದೆಹಲಿಯಲ್ಲಿ ಪ್ರಧಾನಿ ಮೋದಿ ಅವರು ಚಾಲನೆ ನೀಡಿದರು. ನಾಲ್ಕು ದಿನಗಳ ಕಾಲ ನಡೆಯುವ ಈ ಉತ್ಸವದಲ್ಲಿ ಬುಡಕಟ್ಟು ಜನರ ನಡುವೆ ಒಳಗೊಳ್ಳುವಿಕೆಯನ್ನು ಉತ್ತೇಜಿಸುವುದು ಹಾಗೂ ಬುಡಕಟ್ಟು ಸಂಸ್ಕೃತಿಯ ವಿವಿಧ ಆಯಾಮಗಳನ್ನು ದೊಡ್ಡಮಟ್ಟದಲ್ಲಿ ಪ್ರದರ್ಶಿಸಲಾಗುವುದು. ಸುಮಾರು 1600 ಬುಡಕಟ್ಟು ಕಲಾವಿದರು ಮತ್ತು 8000 ಕ್ಕೂ ಅಧಿಕ ಬುಡಕಟ್ಟು ಪ್ರತಿನಿಧಿಗಳು ಈ ಉತ್ಸವದಲ್ಲಿ ಭಾಗವಹಿಸಲಿದ್ದಾರೆ.

Question 5

5. “ಇಂಡೋ-ಟಿಬೆಟ್ ಗಡಿ ಪೊಲೀಸ್ (ITBP)” ಸಂಸ್ಥಾಪನ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?

A
ಅಕ್ಟೋಬರ್ 22
B
ಅಕ್ಟೋಬರ್ 23
C
ಅಕ್ಟೋಬರ್ 24
D
ಅಕ್ಟೋಬರ್ 25
Question 5 Explanation: 
ಅಕ್ಟೋಬರ್ 24:

ಇಂಡೋ-ಟಿಬೆಟ್ ಗಡಿ ಪೊಲೀಸ್ (ITBP)” ಸಂಸ್ಥಾಪನ ದಿನವನ್ನು ಅಕ್ಟೋಬರ್ 24 ರಂದು ಆಚರಿಸಲಾಗುತ್ತದೆ. ಐಟಿಬಿಪಿ ಯನ್ನು 1962, ಅಕ್ಟೋಬರ್ 24ರಂದು ಭಾರತ-ಚೀನಾ ಯುದ್ದದ ನಂತರ ಸ್ಥಾಪಿಸಲಾಯಿತು. ಐಟಿಬಿಪಿಯನ್ನು ಲಡಾಕ್ ನ ಕಾರಕೋರಂ ಪಾಸ್ ನಿಂದ ಅರುಣಚಲ ಪ್ರದೇಶದ ಜಚೆಪ್ ಲಾ ವರೆಗೆ 3488 ಕಿ.ಮೀ ಉದ್ದದ ಗಡಿಭಾಗವನ್ನು ಕಾಯಲು ನಿಯೋಜಿಸಲಾಗಿದೆ.

Question 6

6. “ಇಂಟರ್ನಾಶನಲ್ ಕಮೀಷನ್ ಆನ್ ಫೈನಾನ್ಸಿಂಗ್ ಗ್ಲೋಬಲ್ ಎಜುಕೇಷನ್ ಅಪರ್ಚುನಿಟಿ” ಪ್ರಕಾರ ಮಹಿಳಾ ಸಾಕ್ಷರತೆಯಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?

A
25
B
38
C
43
D
46
Question 6 Explanation: 
38:

ನ್ಯೂಯಾರ್ಕ್ ಮೂಲದ ಇಂಟರ್ನಾಶನಲ್ ಕಮೀಷನ್ ಆನ್ ಫೈನಾನ್ಸಿಂಗ್ ಗ್ಲೋಬಲ್ ಎಜುಕೇಷನ್ ಅಪರ್ಚುನಿಟಿ ಪ್ರಕಾರ ಮಹಿಳಾ ಸಾಕ್ಷರತೆಯಲ್ಲಿ ಭಾರತ 38ನೇ ಸ್ಥಾನದಲ್ಲಿದೆ. ವರದಿಯ ಪ್ರಕಾರ ಭಾರತದ ಶೈಕ್ಷಕಣಿಕ ವ್ಯವಸ್ಥೆಯು ಗುಣಮಟ್ಟದಲ್ಲಿ ನೆರೆಹೊರೆ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಬಾಂಗ್ಲದೇಶಕ್ಕಿಂತ ಕಡಿಮೆ ಇದೆ ಎನ್ನಲಾಗಿದೆ.

Question 7

7. ಇತ್ತೀಚೆಗೆ ನಿಧನರಾದ ವಿಯಟ್ನಾಂ ಯುದ್ದ ವಿರೋಧಿ ಕಾರ್ಯಕರ್ತ “ಟಾಮ್ ಹೇಡನ್” ಅವರು ಯಾವ ದೇಶದವರು?

A
ಅಮೆರಿಕ
B
ವಿಯೆಟ್ನಾಂ
C
ಸಿಂಗಾಪುರ
D
ಸಿರಿಯಾ
Question 7 Explanation: 
ಅಮೆರಿಕ:

ಪ್ರಮುಖ ಯುದ್ಧ ವಿರೋಧಿ ಹೋರಾಟಗಾರ ಟಾಂ ಹೇಡನ್ ಅಮೆರಿಕದಲ್ಲಿ ನಿಧನರಾಗಿದರು. ಅವರಿಗೆ 76 ವರ್ಷ ವಯಸ್ಸಾಗಿತ್ತು. ವಿಯಟ್ನಾಂ ಯುದ್ಧದ ವಿರುದ್ಧ ಧ್ವನಿಯೆತ್ತುವ ಮೂಲಕ ಹೇಡನ್ ಜಗತ್ತಿನ ಗಮನ ಸೆಳೆದಿದ್ದರು. ಯುದ್ಧ ವಿರುದ್ಧದ ಸಂಚಿನಲ್ಲಿ ಭಾಗವಹಿಸಿದ್ದಾರೆ ಎಂದು ಆರೋಪವನ್ನು ಹೊರಿಸಲಾಗಿದ್ದ ಶಿಕಾಗೊ ಸೆವೆನ್ನ ಸದಸ್ಯರಾಗಿದ್ದ ಅವರು ಕ್ಯಾಲಿಪೋರ್ನಿಯ ಸ್ಟೇಟ್ ಅಸೆಂಬ್ಲಿ ಮತ್ತು ಸೆನೆಟ್ನ್ನು ಎರಡು ದಶಕಗಳ ಕಾಲ ಪ್ರತಿನಿಧಿಸಿದ್ದರು.

Question 8

8. ಈ ಕೆಳಗಿನ ಯಾವ ರಾಜ್ಯ ಬಾಲ್ಯವಿವಾಹ ಪದ್ದತಿ ಮುಕ್ತಗೊಳಿಸಲು “ಸಾಝ್ ಅಭಿಯಾನ”ಕ್ಕೆ ಚಾಲನೆ ನೀಡಿದೆ?

A
ಮಧ್ಯ ಪ್ರದೇಶ
B
ರಾಜಸ್ತಾನ
C
ಗುಜರಾತ್
D
ಹರಿಯಾಣ
Question 8 Explanation: 
ರಾಜಸ್ತಾನ:

ಬಾಲ್ಯವಿವಾಹ ಮುಕ್ತ ರಾಜಸ್ತಾನದ ಉದ್ದೇಶದಿಂದ ದೌಸಾದಲ್ಲಿ ಜಿಲ್ಲಾ ಮಟ್ಟದ ಸಾಝ್' ಅಭಿಯಾನ ಯಾತ್ರೆಗೆ ಚಾಲನೆ ನೀಡಲಾಯಿತು. 'ಸಾಝ್' ಅಭಿಯಾನವನ್ನು ರಾಜಸ್ತಾನ ಸರ್ಕಾರ, ವಿಶ್ವಸಂಸ್ಥೆ ಜನಸಂಖ್ಯಾನಿಧಿ (ಯುಎನ್ಎಫ್ಪಿಎ) ಮತ್ತು ವಿಶ್ವಸಂಸ್ಥೆ ಮಕ್ಕಳ ನಿಧಿ (ಯುನಿಸೆಫ್) ಜಂಟಿಯಾಗಿ ಕೈಗೊಂಡಿವೆ. ರಾಜಸ್ತಾನದಲ್ಲಿ ಬಾಲ್ಯ ವಿವಾಹವು ರಾಷ್ಟ್ರೀಯ ಸರಾಸರಿ ಮಟ್ಟಕ್ಕಿಂತ ಹೆಚ್ಚಿದೆ. 2011ರ ವಾರ್ಷಿಕ ಆರೋಗ್ಯ ಸಮೀಕ್ಷೆ ಪ್ರಕಾರ ರಾಜಸ್ತಾನದ ನಾಲ್ಕು ಬಾಲಕಿಯರ ಪೈಕಿ ಒಬ್ಬ ಹುಡುಗಿ ಬಾಲ್ಯ ವಿವಾಹಕ್ಕೆ ಒಳಗಾಗುತ್ತಿದ್ದಾಳೆ. 20ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಶೇ 32ರಷ್ಟು ಬಾಲ್ಯ ವಿವಾಹಗಳು ದಾಖಲಾಗುತ್ತಿವೆ. ಈ ಅಭಿಯಾನವು ಜಿಲ್ಲೆಯ 50 ಗ್ರಾಮ ಪಂಚಾಯಿತಿಗಳಲ್ಲಿ ಮುಂದಿನ 25 ದಿನಗಳಲ್ಲಿ ಸಂಚರಿಸಿ ಬಾಲ್ಯ ವಿವಾಹದ ಅಪಾಯದ ಬಗ್ಗೆ ಜನರಲ್ಲಿ ಜಾಗೃತಿ ಮೂಡಸಲಿದೆ. ಬಾಲ್ಯವಿವಾಹದಿಂದ ದೂರವುಳಿಯುವ ನಿರ್ಣಯ ಪತ್ರಕ್ಕೆ ಸಹಿ ಸಂಗ್ರಹಿಸುವುದು, ಅಭಿಯಾನದ ಗೀತೆ ಹಾಡುವುದು, ಕಿರುಚಿತ್ರವನ್ನು ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸುವುದು ಅಭಿಯಾನದ ಇತರೆ ಕಾರ್ಯಕ್ರಮಗಳು.

Question 9

9. ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ ನ ಮುಖ್ಯಕಾರ್ಯನಿರ್ವಾಹಣಾಧಿಕಾರಿಯಾಗಿ ಯಾರು ನೇಮಕಗೊಂಡರು?

A
ಕೆಲ್ಲಿ ಫೆರ್ವೆದರ್
B
ಜೇಸನ್ ಮ್ಯಾಕ್ಕ್ರ್ಯಾನ್
C
ಡೇವಿಡ್ ಕೊಲ್ಲಿ
D
ಕೇವಿನ್ ಹಡಸನ್
Question 9 Explanation: 
ಜೇಸನ್ ಮ್ಯಾಕ್ಕ್ರ್ಯಾನ್ :

ಜೇಸನ್ ಮ್ಯಾಕ್ಕ್ರ್ಯಾನ್ ಅವರನ್ನು ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ.

Question 10

10. ಆಫ್ರಿಕಾ ಖಂಡದ ಉತ್ತರದ ತುದಿ ಪ್ರದೇಶ “ರಸ್ ಬೆನ್ ಸಕ್ಕ (Ras Ben Sakka)” ಯಾವ ದೇಶದಲ್ಲಿದೆ?

A
ಟುನಿಷಿಯಾ
B
ಈಜಿಪ್ಟ್
C
ಅಲ್ಜೀರಿಯಾ
D
ಮೊರಾಕೊ
Question 10 Explanation: 
ಟುನಿಷಿಯಾ
There are 10 questions to complete.

[button link=”http://www.karunaduexams.com/wp-content/uploads/2016/10/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಅಕ್ಟೋಬರ್-24.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

7 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-24, 2016”

  1. ಸಂತೋಷ್ ಗೌಡರ

    ಧನ್ಯವಾದಗಳು ಸರ್

  2. thimmaraja k p

    Subject history economic geography science indian construction
    Object type qns madii upload madi sir thumba help agutee

  3. prashanth

    its one of the best knowledge source

Leave a Comment

This site uses Akismet to reduce spam. Learn how your comment data is processed.