ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-25, 2016
Question 1 |
1.ಈ ಕೆಳಗಿನ ಯಾವ ರಾಜ್ಯ 2017ನೇ ವರ್ಷವನ್ನು “ಗರೀಬ್ ಕಲ್ಯಾಣ ವರ್ಷ(Garib Kalyan Varsh)”ವೆಂದು ಆಚರಿಸಲಿದೆ?
ರಾಜಸ್ತಾನ | |
ಹರಿಯಾಣ | |
ಅಸ್ಸಾಂ | |
ಬಿಹಾರ |
ಹರಿಯಾಣ ಸರ್ಕಾರ 2017ನೇ ವರ್ಷವನ್ನು ಗರೀಬ್ ಕಲ್ಯಾಣ ವರ್ಷ (ಬಡವರ ಕಲ್ಯಾಣ ವರ್ಷ)ವೆಂದು ಆಚರಿಸಲು ನಿರ್ಧರಿಸಿದೆ. ಇದಕ್ಕಾಗಿ ಅನೇಕ ಬಡವರ ಪರ ಯೋಜನೆಗಳನ್ನು ಮುಂದಿನ ವರ್ಷ ಘೋಷಿಸುವುದಾಗಿ ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖತ್ತರ್ ಹೇಳಿದ್ದಾರೆ. 1966 ರಲ್ಲಿ ಪಂಜಾಬ್ ನಿಂದ ಬೇರ್ಪಡಿಸಿ ಹರಿಯಾಣ ರಾಜ್ಯವನ್ನು ಸ್ಥಾಪಿಸಲಾಗಿದ್ದು, ಈ ವರ್ಷ ಹರಿಯಾಣ ಸರ್ಕಾರ ಸುವರ್ಣ ಮಹೋತ್ಸವವನ್ನು ಆಚರಿಸುತ್ತಿದೆ.
Question 2 |
2.“ಕುರಿಲ್ ದ್ವೀಪ (Kuril Island)” ಪ್ರದೇಶ ಯಾವ ಎರಡು ರಾಷ್ಟ್ರಗಳ ನಡುವಿನ ವಿವಾದತ್ಮಾಕ ಪ್ರದೇಶ?
ಜಪಾನ್ ಮತ್ತು ಚೀನಾ | |
ರಷ್ಯಾ ಮತ್ತು ಜಪಾನ್ | |
ರಷ್ಯಾ ಮತ್ತು ಚೀನಾ | |
ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾ
|
Question 3 |
3.“ಮಿತ್ರ ಶಕ್ತಿ 2016” ಜಂಟಿ ಮಿಲಿಟರಿ ಅಭ್ಯಾಸ ಭಾರತ ಮತ್ತು ಯಾವ ರಾಷ್ಟ್ರದ ನಡುವೆ ಆರಂಭಗೊಂಡಿದೆ?
ಶ್ರೀಲಂಕಾ | |
ಬಾಂಗ್ಲದೇಶ | |
ಮಲೇಷಿಯಾ | |
ರಷ್ಯಾ |
ಭಾರತ ಮತ್ತು ಶ್ರೀಲಂಕಾ ನಡುವಿನ ಜಂಟಿ ಮಿಲಿಟರಿ ಅಭ್ಯಾಸ “ಮಿತ್ರ ಶಕ್ತಿ” ಶ್ರೀಲಂಕಾದ ಅಂಬೆಪುಸ್ಸದಲ್ಲಿ ಅಕ್ಟೋಬರ್ 24ರಂದು ಆರಂಭಗೊಂಡಿದ್ದು, ನವೆಂಬರ್ 6 ರವರೆಗೆ ನಡೆಯಲಿದೆ. ಉಭಯ ದೇಶಗಳ ನಡುವೆ ನಡೆಯುತ್ತಿರುವ ನಾಲ್ಕನೇ ಆವೃತ್ತಿಯ ಸಮರಭ್ಯಾಸ ಇದಾಗಿದೆ.
Question 4 |
4.2015-16ನೇ ಸಾಲಿನ ಲಾ ಲಿಗಾ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಯಾರಿಗೆ ನೀಡಲಾಗಿದೆ?
ನೇಮರ್ | |
ಆಯಂಟೊಯಿನ್ ಗ್ರೀಜ್ಮನ್ | |
ಲಿಯೊನೆಲ್ ಮೆಸ್ಸಿ | |
ಕ್ರಿಸ್ಟಿಯಾನೊ ರೊನಾಲ್ಡೊ |
ಅಟ್ಲೆಟಿಕೊ ಮ್ಯಾಡ್ರಿಡ್ ತಂಡದ ಮುಂಚೂಣಿ ಆಟಗಾರ ಆಯಂಟೊಯಿನ್ ಗ್ರೀಜ್ಮನ್ ಅವರು 2015-16ನೇ ಸಾಲಿನ ಲಾ ಲಿಗಾ ಶ್ರೇಷ್ಠ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆಯಂಟೊಯಿನ್ ಅವರು ಬಾರ್ಸಿಲೋನಾದ ಲಿಯೊನೆಲ್ ಮೆಸ್ಸಿ ಮತ್ತು ರಿಯಲ್ ಮ್ಯಾಡ್ರಿಡ್ ತಂಡದ ಕ್ರಿಸ್ಟಿಯಾನೊ ರೊನಾಲ್ಡೊ ಅವರನ್ನು ಹಿಂದಿಕ್ಕಿ ಈ ಪ್ರಶಸ್ತಿ ಗೆದ್ದಿದ್ದಾರೆ. ಅಟ್ಲೆಟಿಕೊ ತಂಡದ ಕೋಚ್ ಡಿಯೆಗೊ ಸಿಮೊಯೆನ್ ಅವರು ಶ್ರೇಷ್ಠ ಕೋಚ್ ಗೌರವಕ್ಕೆ ಭಾಜನವಾಗಿದ್ದು, ಬಾರ್ಸಿಲೋನಾ ಪರ ಆಡುವ ಉರುಗ್ವೆಯ ಸ್ಟ್ರೈಕರ್ ಲೂಯಿಸ್ ಸ್ವಾರೆಜ್ ಅವರು ಯುರೋಪ್ಖಂಡಕ್ಕೆ ಸೇರದಿರುವ ದೇಶದ ಆಟಗಾರನಿಗೆ ನೀಡುವ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಲಿಯೊನೆಲ್ ಮೆಸ್ಸಿ ಅವರು ವರ್ಷದ ಶ್ರೇಷ್ಠ ಫಾರ್ವರ್ಡ್ ಆಟಗಾರ ಗೌರವ ಗಳಿಸಿದ್ದಾರೆ.
Question 5 |
5.ವಿಶ್ವ ಪೊಲೀಯೊ ದಿನ (World Polio Day) _________?
ಅಕ್ಟೋಬರ್ 23 | |
ಅಕ್ಟೋಬರ್ 24 | |
ಅಕ್ಟೋಬರ್ 25 | |
ಅಕ್ಟೋಬರ್ 26 |
ವಿಶ್ವ ಪೊಲೀಯೊ ದಿನವನ್ನು ಅಕ್ಟೋಬರ್ 24 ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಇದರ ಅಂಗ ಸಂಸ್ಥೆಗಳು ಪೊಲೀಯೊ ರೋಗದ ವಿರುದ್ದ ಹೋರಾಡಲು ಈ ದಿನವನ್ನು ಹಮ್ಮಿಕೊಳ್ಳುತ್ತವೆ. ಜಗತ್ತನ್ನು ಪೊಲೀಯೊ ಮುಕ್ತವನ್ನಾಗಿಸುವುದು ಈ ದಿನದ ಪ್ರಮುಖ ಉದ್ದೇಶ.
Question 6 |
6.ಇತ್ತೀಚೆಗೆ ಯಾವ ನಗರದ ಭಾರತದ ಮೊದಲ ಆಸ್ಟ್ರೋಬಯಾಲಾಜಿ ಸಮ್ಮೇಳನ- ಲೈಫ್ ಇನ್ ಸ್ಪೇಸ್ (India's Astrobiology Conference - Life in Space) ಆಯೋಜಿಸಿತ್ತು?
ಬೆಂಗಳೂರು | |
ಮುಂಬೈ | |
ಹೈದ್ರಾಬಾದ್ | |
ತಿರುವನಂತಪುರ |
ಭಾರತದ ಮೊದಲ ಆಸ್ಟ್ರೋಬಯಾಲಾಜಿ ಸಮ್ಮೇಳನ- ಲೈಫ್ ಇನ್ ಸ್ಪೇಸ್ ಮುಂಬೈನಲ್ಲಿ ಹಮ್ಮಿಕೊಳ್ಳಲಾಗಿತ್ತು. ಮುಂಬೈ ಮೂಲದ ಇಂಡಿಯನ್ ಅಸ್ಟ್ರೋಬಯಾಲಾಜಿ ರಿಸರ್ಚ್ ಸೆಂಟರ್ ಮತ್ತು ನೆಹರು ಸೈನ್ಸ್ ಸೆಂಟರ್ ಈ ಸಮ್ಮೇಳನವನ್ನು ಜಂಟಿಯಾಗಿ ಆಯೋಜಿಸಿದ್ದವು. ವಿಶ್ವದ ಮೂಲ, ವಿಕಾಸ ಮತ್ತು ಜೀವಿಗಳ ಉಗಮದ ಬಗ್ಗೆ ಅಧ್ಯಾಯನ ನಡೆಸುವುದೇ ಅಸ್ಟ್ರೋಬಯಾಲಾಜಿ.
Question 7 |
7.ಇತ್ತೀಚೆಗೆ ನಿಧನರಾದ “ರಾಜ್ ಬೇಗಂ” ಯಾವ ಭಾಷೆಯ ಪ್ರಸಿದ್ದ ಗಾಯಕಿ?
ಹಿಂದಿ | |
ಉರ್ದು | |
ಕಾಶ್ಮೀರಿ | |
ಮರಾಠಿ |
ಜಮ್ಮು- ಕಾಶ್ಮೀರದ ಖ್ಯಾತ ಗಾಯಕಿ ರಾಜ್ ಬೇಗಂ ನಿಧನರಾಗಿದ್ದಾರೆ. ರಾಜ್ ಬೇಗಂ ಅವರು ತಮ್ಮ ಮಧುರ ಸ್ವರದಿಂದ ಕಾಶ್ಮೀರದ ಸಂಗೀತ ಪ್ರೇಮಿಗಳನ್ನು ದಶಕಗಳ ಕಾಲ ರಂಜಿಸಿದ್ದರು. ಮದುವೆ ಸಮಾರಂಭಗಳಲ್ಲಿ ಹಾಡುವುದರೊಂದಿಗೆ ತಮ್ಮ ವೃತ್ತಿ ಆರಂಭಿಸಿದ ರಾಜ್ ಬೇಗಂ ಕ್ರಮೇಣ ಕಾಶ್ಮೀರದ ಪ್ರಭಾವಿ ಗಾಯಕರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ರಾಜ್ ಬೇಗಂ ಅವರಿಗೆ 2002ರಲ್ಲಿ ಪದ್ಮಶ್ರೀ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಗಿತ್ತು. 2013ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗೆ ಪಾತ್ರರಾಗಿದ್ದರು. ಜಮ್ಮು- ಕಾಶ್ಮೀರ ಸರ್ಕಾರ 2009ರಲ್ಲಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿತ್ತು.
Question 8 |
8.ಸರ್ಕಾರಿ ಶಾಲೆಗಳ ಪಠ್ಯಕ್ರಮದಲ್ಲಿ ಸಿಖ್ಖರ ಇತಿಹಾಸ ಮತ್ತು ಸಂಸ್ಕೃತಿಯನ್ನು ಭೋದಿಸಲು ನಿರ್ಣಯಿಸಿರುವ ಅಮೆರಿಕಾದ ಎರಡನೇ ರಾಜ್ಯ ಯಾವುದು?
ಇಂಡಿಯಾನ | |
ಫ್ಲೊರಿಡ | |
ಟೆಕ್ಸಾಸ್ | |
ಜಾರ್ಜಿಯ |
ಅಮೆರಿಕಾದ ಇಂಡಿಯಾನ ರಾಜ್ಯದ ಸರ್ಕಾರಿ ಶಾಲೆಗಳ ಪಠ್ಯಕ್ರಮದಲ್ಲಿ ಸಿಖ್ಖರ ಇತಿಹಾಸ ಮತ್ತು ಸಂಸ್ಕೃತಿಯನ್ನು ಪರಿಚಯಿಸಲು ನಿರ್ಧರಿಸಲಾಗಿದೆ. ಆ ಮೂಲಕ ಸಿಖ್ಖರ ಇತಿಹಾಸ ಮತ್ತು ಸಂಸ್ಕೃತಿಯನ್ನು ಭೋದಿಸಲು ನಿರ್ಣಯಿಸಿರುವ ಅಮೆರಿಕಾದ ಎರಡನೇ ರಾಜ್ಯ ಇಂಡಿಯಾನ.
Question 9 |
9.2016 ಯುರೋಪಿಯನ್ ಗೋಲ್ಡನ್ ಬಾಯ್ (European Golden Boy) ಪ್ರಶಸ್ತಿ ಪಡೆದವರು _____?
ರೆನಾಟೊ ಸಂಚೆಸ್ | |
ಅಂಥೋನಿ ಮಾರ್ಟಿಯಲ್ | |
ರಹೀಮ್ ಸ್ಟೆರ್ಲಿಂಗ್ | |
ಮರ್ಕಸ್ ಸ್ಟಾನ್ ಫೋರ್ಡ್ |
ಪೋರ್ಚಗಲ್ ನ ಉದಯೋನ್ಮಖ ಪುಟ್ಬಾಲ್ ಆಟಗಾರ ರೆನಾಟೊ ಸಂಚೆಸ್ ಅವರಿಗೆ 2016 ಯುರೋಪಿಯನ್ ಗೋಲ್ಡನ್ ಬಾಯ್ ಪ್ರಶಸ್ತಿಯನ್ನು ನೀಡಲಾಗಿದೆ. ಸಂಚೆಸ್ ಅವರು ಜರ್ಮನ್ ಕ್ಲಬ್ ಬಯೆರ್ನ್ ಮುನಿಚ್ ಮತ್ತು ಪೋರ್ಚಗಲ್ ರಾಷ್ಟ್ರೀಯ ತಂಡಗಳಲ್ಲಿ ಮಿಡ್ ಫೀಲ್ಡರ್ ಆಟಗಾರರಾಗಿ ಪ್ರಸಿದ್ದರಾಗಿದ್ದಾರೆ. ಯುರೋಪಿಯನ್ ಗೋಲ್ಡನ್ ಬಾಯ್ ಪ್ರಶಸ್ತಿಯನ್ನು ಸ್ಪೋರ್ಟ್ ಜರ್ನಲಿಸ್ಟ್ ನೀಡುತ್ತಿದ್ದು, ಯುರೋಪ್ನ ಯುವ ಪುಟ್ಬಾಲ್ ಆಟಗಾರನಿಗೆ ನೀಡಲಾಗುತ್ತದೆ.
Question 10 |
10.ಈ ಕೆಳಗಿನ ಗ್ರಹಗಳನ್ನು ಗಮನಿಸಿ:
I) ಶನಿ
II) ಗುರು
III) ಯುರೇನಸ್
IV) ನೆಪ್ಚೂನ್
ಈ ಮೇಲಿನ ಯಾವ ಗ್ರಹ/ಗ್ರಹಗಳು ತಮ್ಮದೇ ಆದ ಉಂಗುರ ವ್ಯವಸ್ಥೆಯನ್ನು ಹೊಂದಿವೆ?
I & II | |
II & III | |
I, II & III | |
I, II, III & IV |
[button link=”http://www.karunaduexams.com/wp-content/uploads/2016/10/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಅಕ್ಟೋಬರ್-25.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ