ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-27, 2016
Question 1 |
1.ಭಾರತದಲ್ಲಿ ಪಾರ್ಶ್ವವಾಯು ತಡೆ ಮತ್ತು ಜಾಗೃತಿ ಮೂಡಿಸಲು ಈ ಕೆಳಗಿನ ಯಾರನ್ನು ರಾಯಭಾರಿಯನ್ನಾಗಿ ನೇಮಿಸಲಾಗಿದೆ?
ಸಚಿನ್ ತೆಂಡುಲ್ಕರ್ | |
ಸುನೀಲ್ ಗವಾಸ್ಕರ್ | |
ಮೇರಿ ಕೋಮ್ | |
ಸುನೀಲ್ ಚೆತ್ರಿ |
ಭಾರತದ ಮಾಜಿ ಕ್ರಿಕೆಟ್ ಆಟಗಾರ ಸುನಿಲ್ ಗಾವಸ್ಕರ್ ಅವರನ್ನು ಪಾರ್ಶ್ವವಾಯು ತಡೆಗೆ ಮತ್ತು ಆ ಬಗ್ಗೆ ಜಾಗೃತಿ ಮೂಡಿಸಲು ಭಾರತದಲ್ಲಿ ನಡೆಯುತ್ತಿರುವ ಕಾರ್ಯಕ್ರಮಗಳಿಗೆ ರಾಯಭಾರಿಯನ್ನಾಗಿ ನೇಮಿಸಲಾಗಿದೆ.
Question 2 |
2.1957 ರಲ್ಲಿ ಸ್ಥಾಪಿಸಲಾದ “ಇಂಡಿಯನ್ ಸೊಸೈಟಿ ಆಫ್ ಲೇಬರ್ ಎಕಾನಮಿಕ್ಸ್”ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಭಾರತದ ರಾಷ್ಟ್ರಪತಿ ಯಾರು?
ವಿ ವಿ ಗಿರಿ | |
ಝಾಕೀರ್ ಹುಸೇನ್ | |
ಬಿ ಡಿ ಜತ್ತಿ | |
ನೀಲಂ ಸಂಜೀವ ರೆಡ್ಡಿ |
Question 3 |
3.2016 ಅಂತಾರಾಷ್ಟ್ರೀಯ ಡಬ್ಲಿನ್ ಸಾಹಿತ್ಯ ಪ್ರಶಸ್ತಿ ಪಡೆದ “ಫ್ಯಾಮಿಲಿ ಲೈಫ್ (Family Life)” ಪುಸ್ತಕದ ಲೇಖಕರು ____?
ನಿರುಪಮ್ ಸೇನ್ | |
ಅಖಿಲ್ ಶರ್ಮಾ | |
ಶರತ್ ಚಟರ್ಜಿ | |
ರವೀಂದ್ರ ಜೈನ್ |
ಭಾರತೀಯ ಮೂಲದ ಅಮೆರಿಕ ಪ್ರಜೆ ಅಖಿಲ್ ಶರ್ಮಾ ಅವರು “ಫ್ಯಾಮಿಲಿ ಲೈಫ್” ಪುಸ್ತಕದ ಲೇಖಕರು. ಈ ಪುಸ್ತಕ ಲೇಖಕರ ಆತ್ಮಚರಿತ್ರೆಯಾಗಿದ್ದು, ತಮ್ಮ ಬಾಲ್ಯದಲ್ಲೇ ಭಾರತದಿಂದ ಅಮೆರಿಕಾಗೆ ಹೋದಾಗ ಆದ ಅನುಭವವನ್ನು ಪ್ರತಿಬಿಂಬಿಸಲಾಗಿದೆ. ಈ ಪುಸ್ತಕಕ್ಕೆ ಜೂನ್ 2016 ರಲ್ಲಿ ಅಂತಾರಾಷ್ಟ್ರೀಯ ಡಬ್ಲಿನ್ ಸಾಹಿತ್ಯ ಪ್ರಶಸ್ತಿ ನೀಡಲಾಗಿದೆ.
Question 4 |
4. ಕೇಂದ್ರ ಸರ್ಕಾರ ಇತ್ತೀಚೆಗೆ ಸಣ್ಣ ಮತ್ತು ರೈತ ಮಹಿಳಾಯರನ್ನು ಪ್ರೋತ್ಸಾಹಿಸಲು “Biotech-KISAN” ಯೋಜನೆ ಜಾರಿಗೊಳಿಸಿದೆ. ಅಂದಹಾಗೆ KISAN ವಿಸ್ತ್ರತ ರೂಪ ____?
Krishi Innovation Significant Application Network | |
Krishi Innovation Scientific Application Network | |
Krishi Innovation Structural Application Network | |
Krishi Innovation Science Application Network |
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ. ಹರ್ಷ ವರ್ಧನ್ ಅವರು ಸಣ್ಣ ಮತ್ತು ರೈತ ಮಹಿಳೆಯರಿಗೆ ನೆರವಾಗುವ ಸಲುವಾಗಿ “Biotech-KISAN (Krishi Innovation Scientific Application Network)” ಯೋಜನೆಗೆ ನವದೆಹಲಿಯಲ್ಲಿ ಚಾಲನೆ ನೀಡಿದರು. ಈ ಯೋಜನೆಯಡಿ ಬೇಸಾಯ ಪದ್ದತಿಯಲ್ಲಿ ತರಭೇತಿ ಮತ್ತು ಶಿಕ್ಷಣ ಪಡೆಯುವ ರೈತ ಮಹಿಳೆಯರಿಗೆ ಫೆಲೋಶಿಪ್ ನೀಡಲಾಗುವುದು. ರೈತರು, ವಿಜ್ಞಾನಿಗಳು ಮತ್ತು ಕೃಷಿ ವಿಜ್ಞಾನ ಸಂಸ್ಥೆಗಳನ್ನು ಒಗ್ಗೂಡಿಸುವುದು ಈ ಯೋಜನೆಯ ಮುಖ್ಯ ಉದ್ದೇಶ. ಜೊತೆಗೆ ಸಣ್ಣ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ವೈಯುಕ್ತಿಕವಾಗಿ ಪರಿಹಾರವನ್ನು ನೀಡಲಾಗುವುದು.
Question 5 |
5. “2016 ವಿಶ್ವ ಪಾರ್ಶ್ವವಾಯು ಸಮಾವೇಶ (World Stroke Congress)” ಇದೇ ಮೊದಲ ಬಾರಿಗೆ ಭಾರತದ ಯಾವ ನಗರ ಆತಿಥ್ಯವಹಿಸಿತ್ತು?
ಹೈದ್ರಾಬಾದ್ | |
ಚೆನ್ನೈ | |
ಧಾರಾವಾಡ | |
ಮುಂಬೈ |
ಪ್ರತಿವರ್ಷ ಅಕ್ಟೋಬರ್ 29 ರಂದು ‘ವಿಶ್ವ ಪಾರ್ಶ್ವವಾಯು ದಿನಾಚರಣೆ’ ಆಚರಿಸಲಾಗುತ್ತದೆ. ವಿಶ್ವ ಪಾರ್ಶ್ವವಾಯು ಸಮಾವೇಶ (ಡಬ್ಲ್ಯುಎಸ್ಸಿ) ಎರಡು ವರ್ಷಗಳಿಗೊಮ್ಮೆ ಆಯೋಜಿಸಲಾಗುತ್ತದೆ. ಈ ವರ್ಷ ಹೈದ್ರಾಬಾದ್ ನಲ್ಲಿ ಸಮಾವೇಶವನ್ನು ಆಯೋಜಿಸಲಾಗಿತ್ತು. ಈ ಸಮಾವೇಶಕ್ಕೆ ಭಾರತದ ನಗರವೊಂದು ಆತಿಥ್ಯ ವಹಿಸಿದ್ದು ಇದೇ ಮೊದಲು.
Question 6 |
6.ಕೈರೋದಲ್ಲಿ ನಡೆದ 6ನೇ ಕ್ಯಾಮ್ (ಕಲ್ಚರ್, ಮೀಡಿಯಾ ಅಂಡ್ ಆರ್ಟ್ಸ್- ಸಿಎಎಂ) ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಸಾಕ್ಷ್ಯಚಿತ್ರ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ ಚಿತ್ರ ಯಾವುದು?
ಇಂಡಿಯಾಸ್ ಡಾಟರ್ | |
ಡಾಟರ್ಸ್ ಆಫ್ ಮದರ್ ಇಂಡಿಯಾ | |
ದಿ ಕೋರ್ಟ್ | |
ತಿಥಿ |
ಕೈರೋ, ಈಜಿಪ್ಟ್ ನಲ್ಲಿ ನಡೆದ 6ನೇ ಕ್ಯಾಮ್ (ಕಲ್ಚರ್, ಮೀಡಿಯಾ ಅಂಡ್ ಆರ್ಟ್ಸ್- ಸಿಎಎಂ) ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ 'ಡಾಟರ್ಸ್ ಆಫ್ ಮದರ್ ಇಂಡಿಯಾ' ಸಾಕ್ಷ್ಯಚಿತ್ರವು ಸಾಕ್ಷ್ಯಚಿತ್ರ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಸಾಕ್ಷ್ಯಚಿತ್ರ ವಿಭಾಗದಲ್ಲಿ 33 ದೇಶಗಳ ಒಟ್ಟು 92 ಚಿತ್ರಗಳು ಸ್ಪರ್ಧೆಯಲ್ಲಿದ್ದವು. 'ಡಾಟರ್ಸ್ ಆಫ್ ಮದರ್ ಇಂಡಿಯಾ' ಭಾರತದ ಲಿಂಗ ಅಸಮಾನತೆ ವಸ್ತುವುಳ್ಳ ಸಾಕ್ಷ್ಯಚಿತ್ರ. ವಿಭಾ ಬಕ್ಷಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ನಿರ್ಲಕ್ಷ್ಯ, ಬಡತನ ಮತ್ತು ಭಯೋತ್ಪಾದನೆ ವಿರುದ್ಧದ ಹೋರಾಟದ ಭಾಗವಾಗಿ ಸಿನಿಮಾಗಳನ್ನು ಉತ್ತೇಜಿಸುವುದಕ್ಕಾಗಿ ಈಜಿಪ್ಟ್ ಸರ್ಕಾರ ಈ ಚಿತ್ರೋತ್ಸವವನ್ನು ಆಯೋಜಿಸುತ್ತದೆ.
Question 7 |
7.ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ವ್ಯಕ್ತಿಯೊಬ್ಬರು ಪ್ರತಿದಿನ ಸೇವಿಸಬಹುದಾದ ಗರಿಷ್ಠ ಉಪ್ಪಿನ ಮಟ್ಟ ___?
5 ಗ್ರಾಂ | |
10 ಗ್ರಾಂ | |
12 ಗ್ರಾಂ | |
15 ಗ್ರಾಂ |
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ವ್ಯಕ್ತಿಯೊಬ್ಬರು ದಿನವೊಂದಕ್ಕೆ ಗರಿಷ್ಠ 5 ಗ್ರಾಂ ಉಪ್ಪನ್ನು ಸೇವಿಸಬಹುದು. ಆದರೆ ಇತ್ತೀಚಿನ ಸಂಶೋಧನೆ ಪ್ರಕಾರ ಭಾರತದಲ್ಲಿ 19 ವರ್ಷ ಮೇಲ್ಪಟ್ಟವರು ಪ್ರತಿದಿನ 10.98 ಗ್ರಾಂ ಉಪ್ಪು ಸೇವಿಸುತ್ತಿರುವುದಾಗಿ ಹೇಳಲಾಗಿದೆ. ಉಪ್ಪನ್ನು ಹೆಚ್ಚಾಗಿ ಸೇವಿಸುವುದರಿಂದ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಲಿದೆ. ತ್ರಿಪುರದಲ್ಲಿ ಪ್ರತಿ ದಿನ 14 ಗ್ರಾಂ ಉಪ್ಪನ್ನು ಸೇವಿಸುತ್ತಿದ್ದು, ರಾಜ್ಯಗಳ ಪೈಕಿ ಮೊದಲ ಸ್ಥಾನದಲ್ಲಿದೆ.
Question 8 |
8. ಹಕ್ಕಿ ಜ್ವರ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಈ ಕೆಳಗಿನ ಯಾವ ಸಮಿತಿಯನ್ನು ಇತ್ತೀಚೆಗೆ ರಚಿಸಿದೆ?
ಮುನಿಯಲ್ಲಪ್ಪ ಸಮಿತಿ | |
ಕೆ.ವಿ.ಕಾಮತ್ ಸಮಿತಿ | |
ರಾಜೇಂದ್ರ ಬಕ್ಷಿ ಸಮಿತಿ | |
ಮಂಜುಳಾ ಶಂಕರ್ ಸಮಿತಿ |
ನವದೆಹಲಿ, ಮಧ್ಯಪ್ರದೇಶದ ಗ್ವಾಲಿಯರ್ ಮತ್ತು ಕೇರಳದ ಆಲಪ್ಪುಳ ಸೇರಿ ಹಲವೆಡೆ ಹಕ್ಕಿ ಜ್ವರ ಪತ್ತೆಯಾಗಿರುವುದರಿಂದ ಪರಿಸ್ಥಿತಿ ನಿಭಾಯಿಸಲು ಕೇಂದ್ರ ಕೃಷಿ ಸಚಿವಾಲಯ ಉನ್ನತಮಟ್ಟದ ಸಮಿತಿ ರಚಿಸಿದೆ. ಪಶುಸಂಗೋಪನೆ, ಡೈರಿ ಮತ್ತು ಮೀನಿಗಾರಿಕೆ ಇಲಾಖೆಯ ಜಂಟಿ ಕಮೀಷನರ್ ಮುನಿಯಲ್ಲಪ್ಪ ರವರು ಸಮಿತಿಯ ನೇತೃತ್ವವಹಿಸಿದ್ದಾರೆ. ಪರಿಸರ ಸಚಿವಾಲಯ, ಆರೋಗ್ಯ ಸಚಿವಾಲಯ ಮತ್ತು ದೆಹಲಿ ಸರ್ಕಾರದ ಪ್ರತಿನಿಧಿಗಳ ಸಮಿತಿಯ ಸದಸ್ಯರಾಗಿದ್ದಾರೆ. ಹಕ್ಕಿ ಜ್ವರ ನಿಯಂತ್ರಣಾ ಕೊಠಡಿ ಮತ್ತು ಸಹಾಯವಾಣಿಯನ್ನೂ ಆರಂಭಿಸಲಾಗಿದೆ. ಹಕ್ಕಿ ಜ್ವರ ಕಂಡುಬಂದಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಕೇಂದ್ರ ಸರ್ಕಾರವು ಈಗಾಗಲೇ ರಾಜ್ಯಗಳಿಗೆ ಸೂಚಿಸಿದೆ.
Question 9 |
9. ಇತ್ತೀಚೆಗೆ ಯಾವ ಸಮಿತಿ “ಒಂದು ಶ್ರೇಣಿ ಒಂದು ಪಿಂಚಣಿ (One Rank One Pensio)” ವರದಿಯನ್ನು ರಕ್ಷಣಾ ಸಚಿವಾಲಯಕ್ಕೆ ಸಲ್ಲಿಸಿತು?
ಜಿ.ಕೆ.ಮಾಧವನ್ ಸಮಿತಿ | |
ಎಲ್ ನರಸಿಂಹರೆಡ್ಡಿ ಸಮಿತಿ | |
ಕೇಶವ್ ಯಾದವ್ ಸಮಿತಿ | |
ವಿ.ಕೆ. ಸಿಂಗ್ ಸಮಿತಿ |
ಒಂದು ಶ್ರೇಣಿ ಒಂದು ಪಿಂಚಣಿ ಮೇಲಿನ ಎಲ್ ನರಸಿಂಹರೆಡ್ಡಿ ಸಮಿತಿ ತನ್ನ ವರದಿಯನ್ನು ರಕ್ಷಣಾ ಸಚಿವ ಮನೋಹರ್ ಪಣಿಕ್ಕರ್ ಅವರಿಗೆ ಸಲ್ಲಿಸಿದೆ. ಒಂದು ಶ್ರೇಣಿ ಒಂದು ಪಿಂಚಣಿ ಅನುಷ್ಟಾನದ ಸಾಧಕ ಬಾಧಕಗಳನ್ನು ಅಧ್ಯಯನ ನಡೆಸಿ ವರದಿ ಸಲ್ಲಿಸುವಂತೆ ಕೇಂದ್ರ ಸರ್ಕಾರ ಈ ಸಮಿತಿಯನ್ನು ರಚಿಸಿತ್ತು. ಪಾಟ್ನಾ ಹೈಕೋರ್ಟ್ ನಿವೃತ್ತ ಮುಖ್ಯನ್ಯಾಯಾಧೀಶ ಎಲ್ ನರಸಿಂಹರೆಡ್ಡಿ ಅವರು ಸಮಿತಿಯ ಅಧ್ಯಕ್ಷರಾಗಿದ್ದರು.
Question 10 |
10. ಈ ಕೆಳಗಿನ ಏಷ್ಯಾ ರಾಷ್ಟ್ರ ಮತ್ತು ಅದರ ರಾಜಧಾನಿ ತಪ್ಪಾಗಿ ಹೊಂದಾಣಿಕೆ ಆಗಿರುವುದನ್ನು ಗುರುತಿಸಿ:
ಕಝಕಸ್ತಾನ - ಅಸ್ತಾನಾ | |
ಮ್ಯಾನ್ಮಾರ್ - ಯಾಂಗೂನ್ | |
ಲಾವೊಸ್ - ವಿಯೆಂಟಿಯಾನ್ | |
ಜಾರ್ಜಿಯಾ – ತ್ಬಿಲಿಸಿ |
ಮ್ಯಾನ್ಮಾರ್ ರಾಜಧಾನಿ ನಾಯ್`ಪಿಯದಾವ್ (Naypyidaw).
[button link=”http://www.karunaduexams.com/wp-content/uploads/2016/10/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ಚಿಜ್-ಅಕ್ಟೋಬರ್-27.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Best solutions