ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-28, 2016
Question 1 |
1.“2016 ಜಾಗತಿಕ ಯುವಜನತೆ ಅಭಿವೃದ್ದಿ ಸೂಚ್ಯಂಕ (Global Youth Development Index)”ದಲ್ಲಿ ಪ್ರಥಮ ಸ್ಥಾನ ಪಡೆದುಕೊಂಡ ದೇಶ ಯಾವುದು?
ಜರ್ಮನಿ | |
ಸ್ವಿಟ್ಜರ್ಲ್ಯಾಂಡ್ | |
ಡೆನ್ಮಾರ್ಕ್ | |
ಸ್ವೀಡನ್ |
ಕಾಮನ್ವೆಲ್ತ್ ಸೆಕ್ರಟಿರಿಯೆಟ್ ಹೊರತಂದಿರುವ 2016 ಜಾಗತಿಕ ಯುವಜನತೆ ಅಭಿವೃದ್ದಿ ಸೂಚ್ಯಂಕದಲ್ಲಿ ಭಾರತ 133ನೇ ಸ್ಥಾನದಲ್ಲಿದೆ. 183 ದೇಶಗಳ ಪೈಕಿ ಭಾರತ 133 ಸ್ಥಾನಗಳಿಸಿದೆ. ಯುವಜನತೆಗೆ ಶಿಕ್ಷಣ, ಉದ್ಯೋಗ, ಆರೋಗ್ಯ, ನಾಗರಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ಭವಿಷ್ಯದ ಆಧಾರದ ಮೇಲೆ ಸೂಚ್ಯಂಕವನ್ನು ತಯಾರಿಸಲಾಗಿದೆ. ಸೂಚ್ಯಂಕದಲ್ಲಿ ಜರ್ಮನಿ ಮೊದಲ ಸ್ಥಾನದಲ್ಲಿದೆ. ಡೆನ್ಮಾರ್ಕ್, ಸ್ವಿಟ್ಜರ್ಲ್ಯಾಂಡ್, ಯುಕೆ ಮತ್ತು ನೆದರ್ಲ್ಯಾಂಡ್ ಮೊದಲ ಐದು ಸ್ಥಾನದಲ್ಲಿವೆ. ವಿಶೇಷವೆಂದರೆ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಆರು ರಾಷ್ಟ್ರಗಳು ಯುರೋಪ್ ಖಂಡದವೆ ಆಗಿವೆ.
Question 2 |
2. ಐರೋಪ್ಯ ಸಂಸತ್ತು ನೀಡುವ ಪ್ರತಿಷ್ಠಿತ ಸಖರೋವ್ ಮಾನವ ಹಕ್ಕು ಪ್ರಶಸ್ತಿಯನ್ನು ಯಾರಿಗೆ ನೀಡಲಾಗುತ್ತಿದೆ?
ಕ್ಯಾನ್ ದುಂಡರ್ ಮತ್ತು ಕ್ರೆಮಿಯನ್ ತತರ್ | |
ನಾಡಿಯ ಮುರದ್ ಮತ್ತು ಲಾಮಿಯ ಹಾಜಿ ಬಶರ್ | |
ರೈಫ್ ಬದಾಯಿ ಮತ್ತು ಮಲಾಲ್ ಯೂಸಫ್ ಝೈ | |
ಹೂ ಜಿಯಾ ಮತ್ತು ಸಲೀಂ ಮಹಮ್ಮದ್ ಬಿನ್ |
ನಾಡಿಯ ಮುರದ್ ಮತ್ತು ಲಾಮಿಯ ಹಾಜಿ ಬಶರ್ ಅವರನ್ನು ಐರೋಪ್ಯ ಸಂಸತ್ತು ನೀಡುವ ಪ್ರತಿಷ್ಠಿತ ಸಖರೋವ್ ಮಾನವ ಹಕ್ಕು ಪ್ರಶಸ್ತಿಗೆ (ಸಖರೋವ್ ಫ್ರೀಡಂ ಆಫ್ ಥಾಟ್) ಆಯ್ಕೆಮಾಡಲಾಗಿದೆ. ಯಜಿದಿ ಮಹಿಳಾ ಕಾರ್ಯಕರ್ತರಾದ ಈ ಇಬ್ಬರು ಇಸ್ಲಾಮಿಕ್ ಸ್ಟೇಟ್ಸ್ನ ಲೈಂಗಿಕ ಗುಲಾಮತನದಿಂದ ತಪ್ಪಿಸಿಕೊಂಡು ನಂತರ ಮಹಿಳೆಯರನ್ನು ಲೈಂಗಿಕ ಗುಲಾಮಗಿರಿಗೆ ಬಳಸಿಕೊಳ್ಳುವುದರ ವಿರುದ್ದ ಹೋರಾಟ ನಡೆಸುತ್ತಿದ್ದಾರೆ. ಡಿಸೆಂಬರ್ 14, 2016ರಂದು ಫ್ರಾನ್ಸ್ ನ ಸ್ಟ್ರಾನ್ಸ್ಬೋರ್ಗ್ ನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನು ವಿತರಿಸಲಾಗುವುದು.
Question 3 |
3.ಸಿಕ್ಕಿಂ ನಂತರ ಬಯಲು ಮಲ ವಿಸರ್ಜನೆ ಮುಕ್ತ ರಾಜ್ಯ ಖ್ಯಾತಿಗೆ ಪಾತ್ರವಾದ ದೇಶದ ಎರಡನೇ ರಾಜ್ಯ ಯಾವುದು?
ಕೇರಳ | |
ಹಿಮಾಚಲ ಪ್ರದೇಶ | |
ಅಸ್ಸಾಂ | |
ಗೋವಾ |
ಹಿಮಾಚಲ ಪ್ರದೇಶವನ್ನು ಇತ್ತೀಚೆಗೆ ಬಯಲು ಮಲ ಮುಕ್ತ ರಾಜ್ಯವೆಂದು ಘೋಷಿಸಲಾಗಿದೆ. ಸಿಕ್ಕಿಂ ನಂತರ ಈ ಗೌರವಕ್ಕೆ ಪಾತ್ರವಾದ ಎರಡನೇ ರಾಜ್ಯ ಹಿಮಾಚಲ ಪ್ರದೇಶ. ಹಿಮಾಚಲ ಪ್ರದೇಶದ 12 ಜಿಲ್ಲೆಗಳು ಬಯಲು ಬಹಿರ್ದೆಸೆ ಮುಕ್ತವಾಗಿದ್ದು, ಶೇ 100% ಶೌಚಾಲಯಗಳನ್ನು ರಾಜ್ಯ ಹೊಂದಿದೆ.
Question 4 |
4.ವಿಶ್ವ ಆರ್ಥಿಕ ವೇದಿಕೆ ಇತ್ತೀಚೆಗೆ ಬಿಡುಗಡೆಗೊಳಿಸಿದ ಲಿಂಗ ಸಮಾನತೆ ಪಟ್ಟಿಯಲ್ಲಿ ಭಾರತದ ಸ್ಥಾನ ______?
87 | |
110 | |
96 | |
101 |
ವಿಶ್ವ ಆರ್ಥಿಕ ವೇದಿಕೆ ಬಿಡುಗಡೆಗೊಳಿಸಿದ ಲಿಂಗ ಸಮಾನತೆಯ ಪಟ್ಟಿಯಲ್ಲಿ ಭಾರತಕ್ಕೆ ಈ ವರ್ಷ 87ನೆಯ ಸ್ಥಾನ ಲಭಿಸಿದೆ. ಐಸ್ಲ್ಯಾಂಡ್ ಮೊದಲ ಸ್ಥಾನದಲ್ಲಿದೆ. ಕಳೆದ ವರ್ಷ ಭಾರತವು ಲಿಂಗ ಸಮಾನತೆಯ ಪಟ್ಟಿಯಲ್ಲಿ 108ನೇ ಸ್ಥಾನ ಪಡೆದಿತ್ತು. ಅರ್ಥ ವ್ಯವಸ್ಥೆ, ಶಿಕ್ಷಣ, ಆರೋಗ್ಯ ಹಾಗೂ ರಾಜಕೀಯ ಪ್ರಾತಿನಿಧ್ಯ ಕ್ಷೇತ್ರಗಳನ್ನು ಪರಿಶೀಲಿಸಿ ಲಿಂಗ ಸಮಾನತೆಯ ಪ್ರಮಾಣ ಎಷ್ಟಿದೆ ಎಂಬುದನ್ನು ವರದಿ ಹೇಳುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಭಾರತ ಬಹುದೊಡ್ಡ ಪ್ರಮಾಣದಲ್ಲಿ ಸುಧಾರಣೆ ಕಂಡುಕೊಂಡಿದೆ. 'ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಿಕ್ಷಣದಲ್ಲಿ ಭಾರತ ಲಿಂಗ ಸಮಾನತೆಯ ಅಂತರವನ್ನು ಸಂಪೂರ್ಣವಾಗಿ ನಿವಾರಿಸಿದೆ' ಎಂದು ವರದಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಲಾಗಿದೆ.
Question 5 |
5. 2016 ಮ್ಯಾನ್ ಬುಕರ್ ಪ್ರಶಸ್ತಿಯನ್ನು ಅಮೆರಿಕದ ಸಾಹಿತಿ “ಪಾಲ್ ಬೇಟ್ಟಿ” ಅವರ ಯಾವ ಕಾದಂಬರಿಗೆ ನೀಡಲಾಗಿದೆ?
ದಿ ವೈಟ್ ಬಾಯ್ ಶಫಲ್ | |
ದಿ ಸೆಲ್ ಔಟ್ | |
ಟಫ್ | |
ಸ್ಲಂಬರ್ಲ್ಯಾಂಡ್ |
ಅಮೆರಿಕದ ಖ್ಯಾತ ಸಾಹಿತಿ ಪಾಲ್ ಬೇಟ್ಟಿ ಅವರು ಮ್ಯಾನ್ ಬೂಕರ್ ಪ್ರಶಸ್ತಿ ಪಡೆದ ಮೊಟ್ಟಮೊದಲ ಅಮೆರಿಕನ್ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಬೇಟ್ಟಿ ಅವರ "ದ ಸೆಲ್ ಔಟ್" ಕಾದಂಬರಿಗೆ ಈ ಪ್ರಶಸ್ತಿ ಲಭಿಸಿದೆ. "ಈ ಕಾದಂಬರಿಯು ಆಘಾತಕಾರಿ ಹಾಗೂ ಅನಿರೀಕ್ಷಿತವಾಗಿ ಹಾಸ್ಯಮಯ" ಎಂದು ತೀರ್ಪುಗಾರರು ಬಣ್ಣಿಸಿದ್ದಾರೆ. ಹುಟ್ಟೂರು ಲಾಸ್ ಏಂಜಲೀಸ್ನ ಚಿತ್ರಣವನ್ನು ಕಾದಂಬರಿಗಾರ ಇದರಲ್ಲಿ ಕಟ್ಟಿಕೊಟ್ಟಿದ್ದು, ಜನಾಂಗೀಯ ಸಮಾನತೆಯ ವಿಡಂಬನೆಗೆ ಕಾದಂಬರಿಯ ರೂಪ ನೀಡಿದ್ದಾರೆ ಎಂದು ತೀರ್ಪುಗಾರರು ಹೇಳಿದ್ದಾರೆ.
Question 6 |
6. ಮೊಟ್ಟ ಮೊದಲ ರಾಷ್ಟ್ರೀಯ ಆಯುರ್ವೇದ ದಿನವನ್ನು ಯಾವ ದಿನದಂದ ಆಚರಿಸಲಾಗುತ್ತದೆ?
ಅಕ್ಟೋಬರ್ 25 | |
ಅಕ್ಟೋಬರ್ 26 | |
ಅಕ್ಟೋಬರ್ 28 | |
ಅಕ್ಟೋಬರ್ 29 |
ಪ್ರಪ್ರಥಮ ರಾಷ್ಟ್ರೀಯ ಆಯುರ್ವೇದ ದಿನವನ್ನು ಅಕ್ಟೋಬರ್ 28 ರಂದು ದೇಶದಾದ್ಯಂತ ಆಚರಿಸಲಾಯಿತು. ರಾಷ್ಟ್ರೀಯ ಆಯುರ್ವೇದ ದಿನವನ್ನು ಆಯುಷ್ ಇಲಾಖೆ ಧನ್ವಂತರಿ ಜಯಂತಿ ಅಥವಾ ದಂಥೆರಸ್ ಪ್ರಯುಕ್ತ ಆಚರಿಸುತ್ತಿದೆ. ಮಧುಮೇಹವನ್ನು ತಡೆಯಲು ಮತ್ತು ನಿಯಂತ್ರಿಸಲು ಆಯುರ್ವೇದ (Ayurveda for Prevention and Control of Diabetes) ಇದು ಈ ವರ್ಷದ ಧ್ಯೇಯವಾಕ್ಯ.
Question 7 |
7. ಯಾವ ರಾಜ್ಯ ಸಮಾಜದ ದುರ್ಬಲ ವರ್ಗಗಳಿಗೆ ಕಾನೂನು ನೆರವು ಒದಗಿಸಲು ಹೊಸ ಯೋಜನೆಯನ್ನು ಜಾರಿಗೆ ತಂದಿದೆ?
ರಾಜಸ್ತಾನ | |
ಒಡಿಶಾ | |
ಪಶ್ಚಿಮ ಬಂಗಾಳ | |
ಜಾರ್ಖಂಡ್ |
ಒಡಿಶಾ ರಾಜ್ಯ ಸಮಾಜದ ದುರ್ಬಲ ವರ್ಗಗಳಿಗೆ 6812 ಗ್ರಾಮಪಂಚಾಯತ್ ಮಟ್ಟದಲ್ಲಿ ಕಾನೂನು ನೆರವು ಒದಗಿಸಲು ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಈ ಹೊಸ ಯೋಜನೆಗೆ “ಮಧುಬಾಬು ಅಯ್ಯನ್ ಸಹಾಯತ ಶಿಬಿರ್” ಎಂದು ಹೆಸರಿಡಲಾಗಿದೆ. ವಾರಕ್ಕೊಮ್ಮೆ ಕಾನೂನು ನೆರವನ್ನು ಯೋಜನೆಯಡಿ ನೀಡಲಾಗುವುದು. ಜನರಿಗೆ ಉಚಿತ ಕಾನೂನು ನೆರವು ನೀಡುವ ವಕೀಲರಿಗೆ ಪ್ರತಿ ವಿಚಾರಣಗೆ ರೂ 500 ನೀಡಲಾಗುವುದು. ಇದರಿಂದ ನ್ಯಾಯಾಲಯದಲ್ಲಿ ಹೂಡಲಾಗಿರುವ ದಾವೆಗಳ ಸಂಖ್ಯೆ ಕಡಿಮೆಯಾಗಲಿದೆ ಎಂದು ನಂಬಲಾಗಿದೆ.
Question 8 |
8. ಯಾವ ದೇಶ ಇತ್ತೀಚೆಗೆ “ಹಿಲ್ಸ ಮೀನು (Hilsa Fish)” ಹಿಡಿಯುವುದರ ಮೇಲೆ ತಾತ್ಕಲಿಕ ನಿಷೇಧ ಹೇರಿದೆ?
ಚೀನಾ | |
ಬಾಂಗ್ಲದೇಶ | |
ಶ್ರೀಲಂಕಾ | |
ಭಾರತ |
ಬಾಂಗ್ಲದೇಶ “ಹಿಲ್ಸ ಮೀನು” ಹಿಡಿಯುವುದರ ಮೇಲೆ ತಾತ್ಕಲಿಕ ನಿಷೇಧ ಹೇರಿದೆ. ಪ್ರಪಂಚದ ಒಟ್ಟು ಹಿಲ್ಸ ಮೀನು ಉತ್ಪಾದನೆಯಲ್ಲಿ ಬಾಂಗ್ಲದೇಶದ ಪಾಲು ಶೇ60ರಷ್ಟಿದೆ. ಅತಿಯಾದ ಮೀನುಗಾರಿಕೆಯಿಂದ ಹಿಲ್ಸ ಮೀನುಗಳು ಗಣನೀಯವಾಗಿ ಕಡಿಮೆಯಾಗಿರುವುದರಿಂದ ಈ ಕ್ರಮಕೈಗೊಳ್ಳಲಾಗಿದೆ.
Question 9 |
9. ಭಾರತ ಸಂವಿಧಾನದ ಯಾವ ವಿಧಿಯು ರಾಷ್ಟ್ರಪತಿಯವರ ಪದಚ್ಯುತಿಗೆ ಸಂಬಂಧಿಸಿದೆ?
58 | |
60 | |
61 | |
62 |
ಸಂವಿಧಾನದ 61ನೇ ವಿಧಿಯು ರಾಷ್ಟ್ರಪತಿಯವರ ಪದಚ್ಯುತಿಗೆ ಸಂಬಂಧಿಸಿದೆ. ಈ ವಿಧಿಯಡಿ ರಾಷ್ಟ್ರಪತಿಯವರನ್ನ ಸಂವಿಧಾನದ ಉಲ್ಲಂಘನೆಯ ಆರೋಪದ ಮೇಲೆ ಮಹಾಭಿಯೋಗ ಪ್ರಕ್ರಿಯೆಯ ಮೂಲಕ ಅಧಿಕಾರಾವಧಿಗಿಂತ ಮುಂಚಿತವಾಗಿ ಪದಚ್ಯುತಿಗೊಳಿಸಬಹುದು. ಸಂವಿಧಾನವು ಸಂಸತ್ತಿಗೆ ಈ ಅಧಿಕಾರ ನೀಡಿದೆ.
Question 10 |
10. ಇದು ಭಾರತದ ಅತಿ ಚಿಕ್ಕ ಜಿಲ್ಲೆಯಾಗಿದೆ ____?
ಮಾಹೆ | |
ಅಲಫುಝ | |
ತಿರಪ್ | |
ದೌಸ |
ಪುದುಚೇರಿಯ ಮಾಹೆ ದೇಶದ ಅತಿ ಚಿಕ್ಕ ಜಿಲ್ಲೆಯಾಗಿದೆ. ಇತರ ವಿಸ್ತೀರ್ಣ 9 ಚದರ ಕಿ.ಮೀ. ಗುಜರಾತ್ನ ಕಚ್ ಜಿಲ್ಲೆ ದೇಶದ ಅತಿದೊಡ್ಡ ಜಿಲ್ಲೆಯಾಗಿದೆ. ಇದರ ವಿಸ್ತೀರ್ಣ 45,652 ಚದರ ಕಿ.ಮೀ.
[button link=”http://www.karunaduexams.com/wp-content/uploads/2016/10/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಅಕ್ಟೋಬರ್-28.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Comment