ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-30,31, 2016

Question 1

1.ಭಾರತ-ನೇಪಾಳ ನಡುವಿನ “ಸೂರ್ಯ ಕಿರಣ್-10” ಸಮರಾಭ್ಯಾಸ ಯಾವ ನಗರದಲ್ಲಿ ಆರಂಭಗೊಂಡಿದೆ?

A
ಕಚ್, ಗುಜರಾತ್
B
ಸಲ್ ಝಾಂಡಿಯ, ನೇಪಾಳ
C
ಜೈಸಲ್ಮೇರ್, ರಾಜಸ್ತಾನ
D
ಕಠ್ಮಂಡು, ನೇಪಾಳ
Question 1 Explanation: 
ಸಲ್ ಝಾಂಡಿಯ, ನೇಪಾಳ:

ಭಾರತ-ನೇಪಾಳ ನಡುವಿನ ಸೂರ್ಯ ಕಿರಣ್-10 ಸಮರಾಭ್ಯಾಸ ನೇಪಾಳದ ಸಲ್ಝಾಂಡಿಯ ಸೇನಾ ಸಮರ ಶಾಲೆಯಲ್ಲಿ (ಎನ್ಎಬಿಎಸ್) ಆರಂಭಗೊಂಡಿದೆ. ದ್ವೈವಾರ್ಷಿಕವಾಗಿ ನಡೆಯುವ ಈ ಯುದ್ಧಭ್ಯಾಸದಲ್ಲಿ ಎರಡು ದೇಶಗಳ ಸೇನಾಪಡೆಗಳು ಕಸರತ್ತು ಆರಂಭಿಸಿವೆ. ಆರಂಭವಾಗಿರುವ ಜಂಟಿ ಸಮರಾಭ್ಯಾಸವು ನವೆಂಬರ್ 13ರವರೆಗೆ ನಡೆಯಲಿದೆ. ಸೂರ್ಯ ಕಿರಣ ಸರಣಿಯನ್ನು ವಿಶ್ವದ ಬೃಹತ್ ಭೂಸೇನಾ ಸಮರಾಭ್ಯಾಸ ಎಂದು ಬಣ್ಣಿಸಲಾಗಿದೆ. ಕುಮಾವ್ ರೆಜಿಮೆಂಟ್ನ ತುಕಡಿಯು ಭಾರತ ಸೇನೆಯನ್ನು ಪ್ರತಿನಿಧಿಸಿದ್ದರೆ, ನೇಪಾಳ ಜಬರ್ ಜಂಗ್ ಬೆಟಾಲಿಯನ್ ಕಳುಹಿಸಿದೆ.

Question 2

2.ಯಾವ ರಾಜ್ಯ ಪ್ರವಾಸೋದ್ಯಮ ಉತ್ತೇಜಿಸುವ ಸಲುವಾಗಿ ದೇಶದಲ್ಲೆ ಮೊದಲ ಬಾರಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜೊತೆಗೆ ಒಪ್ಪಂದಕ್ಕೆ ಮುಂದಾಗಿದೆ?

A
ಕರ್ನಾಟಕ
B
ಕೇರಳ
C
ಮಹಾರಾಷ್ಟ್ರ
D
ಮಧ್ಯ ಪ್ರದೇಶ
Question 2 Explanation: 
ಕರ್ನಾಟಕ:

ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಉತ್ತೇಜಿಸುವ ಸಲುವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಜೊತೆ ಒಪ್ಪಂದಕ್ಕೆ ಸಹಿ ಹಾಕಲು ಮುಂದಾಗಿದೆ. ಇಂತಹ ವಿಶಿಷ್ಠ ಪ್ರಯತ್ನ ದೇಶದಲ್ಲೆ ಮೊದಲು ಎನಿಸಿದೆ. ಈ ಸಂಬಂಧ ಕೆಲವೇ ದಿನಗಳಲ್ಲಿ ಒಪ್ಪಂದಕ್ಕೆ ಸಹಿಹಾಕುವುದಾಗಿ ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ.

Question 3

3. 2016 ಏಷ್ಯಾ ಕಪ್ ಪುರುಷರ ಹಾಕಿ ಪ್ರಶಸ್ತಿ ಗೆದ್ದ ರಾಷ್ಟ್ರ ತಂಡ ಯಾವುದು?

A
ಪಾಕಿಸ್ತಾನ
B
ಭಾರತ
C
ಮಲೇಷಿಯಾ
D
ಜಪಾನ್
Question 3 Explanation: 
ಭಾರತ:

ಭಾರತ ಹಾಕಿ ತಂಡವು ಮಲೇಷಿಯಾದಲ್ಲಿ ನಡೆದ 2016 ಏಷ್ಯಾ ಕಪ್ ಹಾಕಿಯಲ್ಲಿ ಪಾಕಿಸ್ತಾನವನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಟೂರ್ನಿಯ ಫೈನಲ್ನಲ್ಲಿ ಭಾರತ ತಂಡ 3–2 ಗೋಲುಗಳಿಂದ ಪಾಕಿಸ್ತಾನ ವಿರುದ್ಧ ಗೆದ್ದಿತು.2014ರಲ್ಲಿ ಇಂಚನ್ನಲ್ಲಿ ನಡೆದಿದ್ದ ಟೂರ್ನಿಯ ಫೈನಲ್ನಲ್ಲಿಯೂ ಭಾರತ ತಂಡವು ಪಾಕ್ ವಿರುದ್ಧ ಗೆದ್ದಿತ್ತು. 2011ರಲ್ಲಿ ಮೊದಲ ಬಾರಿಗೆ ನಡೆದಿದ್ದ ಏಷ್ಯಾ ಕಪ್ ಟೂರ್ನಿಯ ಫೈನಲ್ನಲ್ಲಿಯೂ ಭಾರತ ತಂಡವು ಪಾಕ್ ವಿರುದ್ಧ ಗೆದ್ದಿತ್ತು.

Question 4

4. ಯಾವ ರಾಜ್ಯ ನವೆಂಬರ್ 1 ರಂದು“ತಂಬಾಕು ರಹಿತ ದಿನ (No Tobacco Day)”ವನ್ನಾಗಿ ಆಚರಿಸಲು ನಿರ್ಧರಿಸಿದೆ?

A
ಕೇರಳ
B
ಪಂಜಾಬ್
C
ಆಂಧ್ರ ಪ್ರದೇಶ
D
ಹರಿಯಾಣ
Question 4 Explanation: 
ಪಂಜಾಬ್:

ಪಂಜಾಬ್ ರಾಜ್ಯ ಸರ್ಕಾರ ನವೆಂಬರ್ 1 ರಂದು ತಂಬಾಕು ರಹಿತ ದಿನವನ್ನಾಗಿ ಆಚರಿಸಲು ತೀರ್ಮಾನಿಸಿದೆ. ರಾಜ್ಯದಲ್ಲಿ ವ್ಯಾಪಕವಾಗಿ ಬೆಳೆದಿರುವ ತಂಬಾಕು ಬಳಕೆಯನ್ನು ಪ್ರೋತ್ಸಾಹಿಸದಿರುಲು ಈ ಕ್ರಮಕ್ಕೆ ಮುಂದಾಗಿದೆ. ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಈ ನಿಟ್ಟಿನಲ್ಲಿ ಎಲ್ಲಾ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

Question 5

5. 2016 ಮೆಕ್ಸಿಕನ್ ಗ್ರಾನ್ ಪ್ರಿಕ್ಸ್ ರೇಸ್ ಗೆದ್ದವರು ಯಾರು?

A
ಲೇವಿಸ್ ಹ್ಯಾಮಿಲ್ಟನ್
B
ನಿಕೊ ರೋಸ್ಬರ್ಗ್
C
ಮ್ಯಾಕ್ಸ್ ವರ್ಸಟಪನ್
D
ಸೆಬಾಸ್ಟಿಯನ್ ವೆಟಲ್
Question 5 Explanation: 
ಲೇವಿಸ್ ಹ್ಯಾಮಿಲ್ಟನ್:

ಮರ್ಸಿಡೆಸ್ ಚಾಲಕ ಲೇವಿಸ್ ಹ್ಯಾಮಿಲ್ಟನ್ ರವರು 2016 ಮೆಕ್ಸಿಕನ್ ಗ್ರಾನ್ ಪ್ರಿಕ್ಸ್ ರೇಸ್ ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ನಿಕೊ ರೊಸ್ಬರ್ಗ್ ಎರಡನೇ ಸ್ಥಾನ ಹಾಗೂ ಫೆರಾರಿ ಚಾಲಕ ಸೆಬಾಸ್ಟಿಯನ್ ವೆಟಲ್ ಮೂರನೇ ಸ್ಥಾನ ಪಡೆದುಕೊಂಡರು.

Question 6

6. ಯಾವ ನಗರದಲ್ಲಿ “ಪ್ಯಾಲೆಸ್ತಾನ-ಭಾರತ ಟೆಕ್ನೋ ಪಾರ್ಕ್”ಸ್ಥಾಪಿಸುವ ಸಲುವಾಗಿ ಭಾರತ ಮತ್ತು ಪ್ಯಾಲೆಸ್ತಾನ ಇತ್ತೀಚೆಗೆ ಒಡಂಬಡಿಕೆಗೆ ಸಹಿ ಹಾಕಿವೆ?

A
ನವ ದೆಹಲಿ
B
ರಮಲ್ಲಹ್
C
ಹೆಬ್ರಾನ್
D
ಮುಂಬೈ
Question 6 Explanation: 
ರಮಲ್ಲಹ್:

ಪ್ಯಾಲೆಸ್ತಾನದ ರಮಲ್ಲಹ್ ನಗರದಲ್ಲಿ “ಪ್ಯಾಲೆಸ್ತಾನ-ಭಾರತ ಟೆಕ್ನೋ ಪಾರ್ಕ್”ಸ್ಥಾಪಿಸುವ ಸಲುವಾಗಿ ಭಾರತ-ಪ್ಯಾಲೆಸ್ತಾನ ನಡುವೆ ಒಡಂಬಡಿಕೆ ಒಪ್ಪಂದಕ್ಕೆ ಸಹಿಹಾಕಲಾಯಿತು. ಕಳೆದ ವರ್ಷ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಪ್ಯಾಲೆಸ್ತಾನಕ್ಕೆ ಭೇಟಿ ನೀಡಿದ ವೇಳೆ ಟೆಕ್ನೋ ಪಾರ್ಕ್ ಸ್ಥಾಪಿಸುವ ವಿಷಯವನ್ನು ಪ್ರಕಟಿಸಿದ್ದರು. ಒಪ್ಪಂದದ ಪ್ರಕಾರ ಟೆಕ್ನೋ ಪಾರ್ಕ್ ಸ್ಥಾಪನೆಗೆ ಬೇಕಾಗುವ ಸ್ಥಳವನ್ನು ಪ್ಯಾಲೆಸ್ತಾನ ಒದಗಿಸಲಿದೆ. ಭಾರತ 12 ಮಿಲಿಯನ್ ಡಾಲರ್ ಅನುದಾನವನ್ನು ಇದರ ಸ್ಥಾಪನೆಗೆ ನೀಡಲಿದೆ.

Question 7

7. ಕೂಚ್ ಬಿಹಾರ್ ಟ್ರೋಫಿ ಯಾವ ಕ್ರೀಡೆಗೆ ಸಂಬಂಧಿಸಿದೆ?

A
ಪುಟ್ಬಾಲ್
B
ಕ್ರಿಕೆಟ್
C
ಹಾಕಿ
D
ಗಾಲ್ಫ್
Question 7 Explanation: 
ಕ್ರಿಕೆಟ್:

ಕೂಚ್ ಬಿಹಾರ್ 17 ವರ್ಷದೊಳಗಿನವರ ಕ್ರಿಕೆಟ್ ಟೂರ್ನಮೆಂಟ್.

Question 8

8. ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದ ವ್ಯವಹಾರ ನಡೆಸಲು ಉತ್ತಮ ರಾಜ್ಯಗಳ ಪೈಕಿ ಮೊದಲ ಸ್ಥಾನ ಹಂಚಿಕೊಂಡ ರಾಜ್ಯಗಳು ಯಾವುವು?

A
ಗುಜರಾತ್, ಕೇರಳ
B
ಆಂಧ್ರಪ್ರದೇಶ, ತೆಲಂಗಣ
C
ತೆಲಂಗಣ, ಮಹಾರಾಷ್ಟ್ರ
D
ಒಡಿಶಾ, ಮಹಾರಾಷ್ಟ್ರ
Question 8 Explanation: 
ಆಂಧ್ರಪ್ರದೇಶ, ತೆಲಂಗಣ:

ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದ ವ್ಯವಹಾರ ನಡೆಸಲು(ಉದ್ಯಮ ಸ್ನೇಹಿ) ರಾಜ್ಯಗಳ ಪಟ್ಟಿಯಲ್ಲಿ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಮೊದಲ ಸ್ಥಾನವನ್ನು ಪಡೆದುಕೊಂಡಿವೆ. 2015ರಲ್ಲಿ 9ನೇ ಸ್ಥಾನದಲ್ಲಿದ್ದ ಕರ್ನಾಟಕ 13ನೇ ಸ್ಥಾನಕ್ಕೆ ಕುಸಿದಿದೆ. ಗುಜರಾತ್ ಮೂರು, ಛತ್ತೀಸ್ ಗಢ್ ನಾಲ್ಕನೇ ಸ್ಥಾನ ಉಳಿಸಿಕೊಂಡಿದ್ದರೆ, ನಂತರದಲ್ಲಿ ಮಧ್ಯಪ್ರದೇಶ, ಹರ್ಯಾಣ, ಜಾರ್ಖಂಡ್, ರಾಜಸ್ಥಾನ್, ಉತ್ತರಾಖಂಡ್ ಮತ್ತು ಮಹಾರಾಷ್ಟ್ರ ರಾಜ್ಯಗಳು ಸ್ಥಾನ ಪಡೆದಿದೆ.

Question 9

9.ವಿಶ್ವಬ್ಯಾಂಕ್ನ ಮುಖ್ಯಕಾರ್ಯನಿರ್ವಾಹಕರಾಗಿ ನೇಮಕಗೊಂಡ “ಕ್ರಿಸ್ಟಾಲಿನಾ ಜಾರ್ಜಿಯೆವಾ” ಯಾವ ದೇಶದವರು?

A
ಬಲ್ಗೇರಿಯಾ
B
ಇಸ್ರೇಲ್
C
ಜಾರ್ಜಿಯಾ
D
ಇಥೋಪಿಯಾ
Question 9 Explanation: 
ಬಲ್ಗೇರಿಯಾ:

ಐರೋಪ್ಯ ಒಕ್ಕೂಟದ ಮಾನವೀಯ ವ್ಯವಹಾರಗಳ ಮಾಜಿ ಅಧ್ಯಕ್ಷೆ ಬಲ್ಗೇರಿಯಾದ ಕ್ರಿಸ್ಟಾಲಿನ್ ಜಾರ್ಜಿಯೆವಾ ಅವರು ವಿಶ್ವಬ್ಯಾಂಕ್ನ ಮುಖ್ಯಕಾರ್ಯನಿರ್ವಾಹಕರಾಗಿ ನೇಮಕಗೊಂಡಿದ್ದಾರೆ. ಮುಲ್ಯಾನಿ ಇಂದ್ರವತಿ ಅವರ ಉತ್ತಾರಧಿಕಾರಿಯಾಗಿ ಜನವರಿ 2017 ರಿಂದ ಕಾರ್ಯನಿರ್ವಹಿಸಲಿದ್ದಾರೆ. ಜಾರ್ಜಿಯೆವಾ ಅವರು ಬಲ್ಗೇರಿಯಾದ ಅರ್ಥಶಾಸ್ತ್ರಜ್ಞೆ. ಪ್ರಸ್ತುತ ಇವರು ಐರೋಪ್ಯ ಕಮೀಷನ್ ಬಜೆಟ್ ಮತ್ತು ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷೆ.

Question 10

10. ಬಯಲು ಮಲ ಮುಕ್ತ ರಾಜ್ಯವೆಂಬ ಗೌರವಕ್ಕೆ ಪಾತ್ರವಾದ ದಕ್ಷಿಣ ಭಾರತದ ಮೊದಲ ರಾಜ್ಯ ಯಾವುದು?

A
ತಮಿಳುನಾಡು
B
ಕೇರಳ
C
ಮಹಾರಾಷ್ಟ್ರ
D
ತೆಲಂಗಣ
Question 10 Explanation: 
ಕೇರಳ:

ಕೇರಳವನ್ನು ಬಯಲುಶೌಚ ಮುಕ್ತ ರಾಜ್ಯ ಎಂದು ಕೇಂದ್ರ ಸರ್ಕಾರ ಮಂಗಳವಾರ ಘೋಷಿಸಿದೆ. ರಾಜ್ಯ ಸಂಸ್ಥಾಪನಾ ದಿನದಂದೇ ಈ ಘೋಷಣೆ ಮಾಡಲಾಗಿದೆ. ಹಿಮಾಚಲ ಪ್ರದೇಶ ಮತ್ತು ಸಿಕ್ಕಿಂ ಗಳನ್ನು ಈಗಾಗಲೇ ಬಯಲು ಶೌಚಮುಕ್ತ ರಾಜ್ಯಗಳು ಎಂದು ಘೋಷಿಸಲಾಗಿದೆ. ಅತಿ ಹೆಚ್ಚು ಜನಸಾಂದ್ರತೆ ಹೊಂದಿರುವ ರಾಜ್ಯಗಳ ಪೈಕಿ ಈ ಸಾಧನೆ ಮಾಡಿದ ಮೊದಲ ರಾಜ್ಯ ಕೇರಳ.

There are 10 questions to complete.

[button link=”http://www.karunaduexams.com/wp-content/uploads/2016/11/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ಅಕ್ಟೋಬರ್-3031.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

4 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ಅಕ್ಟೋಬರ್-30,31, 2016”

  1. Bagura Raghava

    thank u

Leave a Comment

This site uses Akismet to reduce spam. Learn how your comment data is processed.