ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ನವೆಂಬರ್-4, 2016

Question 1
1.ಇತ್ತೀಚೆಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಂತಾರಾಷ್ಟ್ರೀಯ ಕಾನೂನು ಆಯೋಗಕ್ಕೆ ಆಯ್ಕೆಯಾದ ಮೊದಲ ಭಾರತೀಯ ಯಾರು?
A
ನೀರಜ್ ಗೌರವ್
B
ಅನಿರುದ್ದ ರಜಪೂತ್
C
ಕೇಶವ್ ಜಿಂದಾಲೆ
D
ರಾಮ್ ನಾರಾಯಣ್
Question 1 Explanation: 
ಅನಿರುದ್ದ ರಜಪೂತ್:

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಂತಾರಾಷ್ಟ್ರೀಯ ಕಾನೂನು ಆಯೋಗಕ್ಕೆ ನಡೆದ ತೀವ್ರ ಹಣಾಹಣಿಯ ಚುನಾವಣೆಯಲ್ಲಿ ಭಾರತೀಯ ವಕೀಲ ಅನಿರುದ್ಧ ರಜಪೂತ್(33) ಭರ್ಜರಿ ಜಯ ಗಳಿಸಿದ್ದಾರೆ. ಏಶ್ಯಾ-ಪೆಸಿಫಿಕ್ ಗುಂಪಿನಲ್ಲಿ ಅನಿರುದ್ಧ ಅವರಿಗೆ ಅತೀ ಹೆಚ್ಚು ಮತಗಳು ಲಭಿಸಿವೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಆಯ್ಕೆಯಾದ 34 ಸದಸ್ಯರ ಪೈಕಿ ಇವರು ಅತೀ ಕಿರಿಯ ಕಾನೂನು ತಜ್ಞ ಹಾಗೂ ಮೊದಲ ಭಾರತೀಯ ಅಭ್ಯರ್ಥಿಯಾಗಿದ್ದಾರೆ. ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಕಾನೂನು ಆಯೋಗವು ಅಂತಾರಾಷ್ಟ್ರೀಯ ಕಾನೂನು ಮತ್ತು ಅದರ ಸಂಕೇತಿಕರಣದ ಪ್ರಗತಿಪರ ಬೆಳವಣಿಗೆಯ ಗುರುತರ ಜವಾಬ್ದಾರಿ ಹೊಂದಿದೆ. ನೂತನವಾಗಿ ಆಯ್ಕೆಯಾಗಿರುವ 34 ಸದಸ್ಯರು ಐರು ವರ್ಷಗಳ ಕಾಲ ಸೇವೆಯಲ್ಲಿರುವರು. ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಕಾನೂನು ಆಯೋಗದ ಕೇಂದ್ರ ಕಾರ್ಯಾಲಯವು ಜಿನೇವಾದಲ್ಲಿದೆ.

Question 2

2. ಇತ್ತೀಚೆಗೆ ನಿಧನರಾದ ಪಂಡಿತ್ ಅಮರದೇವ ರವರು ಯಾವ ದೇಶದ ಪ್ರಸಿದ್ದ ಗಾಯಕ ಮತ್ತು ಸಂಗೀತ ನಿರ್ದೇಶಕರು?

A
ಶ್ರೀಲಂಕಾ
B
ನೇಪಾಳ
C
ಮಾರಿಷಸ್
D
ಸಿಂಗಾಪುರ
Question 2 Explanation: 
ಶ್ರೀಲಂಕಾ:

ಶ್ರೀಲಂಕಾದ ಖ್ಯಾತ ಗಾಯಕ ಹಾಗೂ ಸಂಗೀತ ನಿರ್ದೇಶಕ ಪಂಡಿತ್ ಅಮರದೇವ ಹೃದಯಾಘಾತದಿಂದ ನಿಧನರಾದರು ಅವರು ಭಾರತೀಯ ಶಾಸ್ತ್ರೀಯ ರಾಗಗಳು ಹಾಗೂ ಶ್ರೀಲಂಕಾದ ಶ್ರೀಮಂತ ಜನಪದ ಸಂಗೀತ ಪರಂಪರೆಗಳಿಂದ ಸ್ಫೂರ್ತಿ ಪಡೆದಿದ್ದರು. ಸಿಂಹಳ ಸಂಗೀತಕ್ಕೆ ಅವರು ನೀಡಿರುವ ದೇಣಿಗೆ ಅಪ್ರತಿಮ ಎಂಬುದಾಗಿ ಪರಿಗಣಿಸಲಾಗಿದೆ. ಫಿಲಿಪ್ಪೀನ್ಸ್ನ ರಾಮೊನ್ ಮ್ಯಾಗ್ಸೇಸೆ ಪ್ರಶಸ್ತಿ (2001), ಪದ್ಮಶ್ರೀ ಪ್ರಶಸ್ತಿ (2002), ಶ್ರೀಲಂಕಾದ ಅಧ್ಯಕ್ಷರ ಕಲಾ ಕೀರ್ತಿ ಪ್ರಶಸ್ತಿ (1986) ಮತ್ತು ದೇಶಮಾನ್ಯ ಪ್ರಶಸ್ತಿ (1998)ಗಳು ಅವರಿಗೆ ಲಭಿಸಿದ್ದವು.

Question 3

3. ಟ್ರಸ್ಟ್ ರಿಸರ್ಚ್ ಅಡ್ವೈಸರಿ (TRA) ಸಮೀಕ್ಷೆ ಪ್ರಕಾರ ಭಾರತದ ಅತ್ಯಂತ ಆಕರ್ಷಕ ಇಂಟರ್ನೆಟ್ ಬ್ರಾಂಡ್ ಯಾವುದು?

A
ಫೆಸ್ ಬುಕ್
B
ಗೂಗಲ್
C
ಅಮೆಜಾನ್
D
ಫ್ಲಿಪ್ ಕಾರ್ಟ್
Question 3 Explanation: 
ಅಮೆಜಾನ್:

ಅಮೆರಿಕ ಮೂಲದ ಆನ್ಲೈನ್ ಮಾರಾಟ ಮಳಿಗೆ ಅಮೆಝಾನ್ ಭಾರತದ ಅತ್ಯಂತ ಆಕರ್ಷಕ ಇಂಟರ್ನೆಟ್ ಬ್ರಾಂಡ್ ಆಗಿ ಹೊರಹೊಮ್ಮಿದೆ. ತನ್ನ ಪ್ರತಿಸ್ಪರ್ಧಿಗಳಾದ ಫ್ಲಿಪ್ಕಾರ್ಟ್ ಮತ್ತು ಸ್ನಾಪ್ಡೀಲ್ ಹಾಗೂ ಸರ್ಚ್ ಇಂಜಿನ್ ಗೂಗಲ್ ಅನ್ನು ಹಿಂದಿಕ್ಕಿ ಭಾರತದ ಅತ್ಯಂತ ಆಕರ್ಷಕ ಇಂಟರ್ನೆಟ್ ಬ್ರಾಂಡ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಗೂಗಲ್ ಭಾರತದ ಎರಡನೇ ಅತ್ಯಂತ ಆಕರ್ಷಕ ಇಂಟರ್ನೆಟ್ ಬ್ರಾಂಡ್ ಆಗಿ ಹೊರಹೊಮ್ಮಿದ್ದರೆ ನಂತರದ ಸ್ಥಾನಗಳಲ್ಲಿ ಫ್ಲಿಪ್ಕಾರ್ಟ್, ಸ್ನಾಪ್ಡೀಲ್ ಮತ್ತು ಫೇಸ್ಬುಕ್ ಇವೆ. ದೇಶಾದ್ಯಂತ 16 ನಗರಗಳ ಸುಮಾರು 3,000 ಬಳಕೆದಾರರನ್ನು ಸಮೀಕ್ಷೆಗೊಳಪಡಿಸಲಾಗಿತ್ತು.

Question 4

4.ಈ ಕೆಳಗಿನ ಯಾವ ಸಂಸ್ಥೆ ದೇಶದಾದ್ಯಂತ ಸ್ಮಾರಕಗಳ ವಾಸ್ತವ ಪ್ರವಾಸ (Virtual Tour) ಕ್ಕಾಗಿ ಭಾರತದ ಪುರಾತತ್ವ ಸಮೀಕ್ಷೆ ಇಲಾಖೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?

A
ಗೂಗಲ್
B
ಮೈಕ್ರೊಸಾಫ್ಟ್
C
ಫೆಸ್ ಬುಕ್
D
ಯಾಹೂ
Question 4 Explanation: 
ಗೂಗಲ್:

ಟೆಕ್ ದಿಗ್ಗಜ್ ಗೂಗಲ್ ಸಂಸ್ಥೆ ದೇಶದ 280 ಸ್ಮಾರಕಗಳ 360 ಡಿಗ್ರಿ ವಾಸ್ತವ ಪ್ರವಾಸಕ್ಕಾಗಿ ಭಾರತೀಯ ಪುರಾತತ್ವ ಸಮೀಕ್ಷೆ ಇಲಾಖೆಯೊಂದಿಗೆ ಸಹಿ ಹಾಕಿದೆ. 280 ಸ್ಮಾರಕಗಳ ಪೈಕಿ 30 ಸ್ಮಾರಕಗಳು ಪಶ್ಚಿಮ ಬಂಗಾಳದಲ್ಲಿವೆ. ತಾಜ್ ಮಹಲ್, ವಿಕ್ಟೋರಿಯಾ ಮೆಮೊರಿಯಲ್, ಹಂಪಿ ಮುಂತಾದ ಪ್ರಮುಖ ಸ್ಮಾರಕಗಳು ಈ ಪಟ್ಟಿಯಲ್ಲಿವೆ.

Question 5

5. ಸೇನಾ ನೆಲೆಯ ಸೂಕ್ಷ್ಮ ಮಾಹಿತಿಯನ್ನು ಪ್ರಸಾರ ಮಾಡಿದ ಹಿನ್ನಲೆಯಲ್ಲಿ ಯಾವ ವಾರ್ತಾವಾಹಿನಿಯ ಮೇಲೆ ಒಂದು ದಿನದ ನಿರ್ಬಂಧವನ್ನು ಹೇರಲಾಗಿದೆ?

A
ಆಜ್ ತಕ್
B
ಎನ್ಟಿಟಿವಿ ಇಂಡಿಯಾ
C
ಜೀ ನ್ಯೂಸ್
D
ಟೈಮ್ಸ್ ನೌ
Question 5 Explanation: 
ಎನ್ಟಿಟಿವಿ ಇಂಡಿಯಾ:

ಪಠಾಣ್ಕೋಟ್ ವಾಯುನೆಲೆ ಮೇಲೆ ನಡೆದ ಉಗ್ರರ ದಾಳಿ ಸುದ್ದಿ ಪ್ರಸಾರ ಮಾಡುವಾಗ ಸೇನಾ ನೆಲೆಯ ಕೆಲವು ಸೂಕ್ಷ್ಮ ಮಾಹಿತಿಯನ್ನು ಬಿತ್ತರಿಸಿದ ಕಾರಣಕ್ಕೆ ಹಿಂದಿ ವಾರ್ತಾವಾಹಿನಿ 'ಎನ್ಡಿಟಿವಿ ಇಂಡಿಯಾ' ಪ್ರಸಾರದ ಮೇಲೆ ಒಂದು ದಿನ ನಿರ್ಬಂಧ ಹೇರಲು ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಅಂತರ್ ಸಚಿವಾಲಯ ಸಮಿತಿ ಶಿಫಾರಸು ಮಾಡಿದೆ. ವಾಯುನೆಲೆ ಮಹತ್ವದ ಮಾಹಿತಿಯನ್ನು ವಾಹಿನಿ ಪ್ರಸಾರ ಮಾಡಿದೆ. ಇದನ್ನು ಪಡೆದ ಉಗ್ರರು ಇನ್ನಷ್ಟು ದಾಳಿ ನಡೆಸುವ ಸಾಧ್ಯತೆ ಇತ್ತು. ರಾಷ್ಟ್ರದ ಭದ್ರತೆ ಅಲ್ಲದೆ ನಾಗರಿಕ ಹಿತದೃಷ್ಟಿ ಹಾಗೂ ಸೇನಾ ಯೋಧರಿಗೆ ಅಪಾಯವಾಗುವ ಸಾಧ್ಯತೆ ಇತ್ತು' ಎಂದು ಸಚಿವಾಲಯ ಹೇಳಿದೆ.

Question 6

6. “ಕ್ಲಿಫ್ಟನ್ ಕ್ರೋನಿಕಲ್ಸ್ (Clifton Chronicles)” ಸರಣಿ ಪುಸ್ತಕಗಳ ಲೇಖಕರು _____?

A
ಜೆ.ಕೆ.ರೌಲಿಂಗ್
B
ಜೆಫ್ರೆ ಆರ್ಚರ್
C
ಸ್ಟೀವನ್ ಸ್ಮಿತ್
D
ಅರ್ನಾಲ್ಡ್ ಬೂಕರ್
Question 6 Explanation: 
ಜೆಫ್ರೆ ಆರ್ಚರ್:

ಜೆಫ್ರೆ ಆರ್ಚರ್ ಅವರು ಪ್ರಸಿದ್ದ ಪುಸ್ತಕ ಸರಣಿ “ಕ್ರಿಫ್ಟನ್ ಕ್ರೋನಿಕಲ್ಸ್” ನ ಲೇಖಕರು. ಈ ಪುಸಕ್ತ ಸರಣಿಯ ಏಳನೇ ಹಾಗೂ ಅಂತಿಮ ಪುಸ್ತಕ ಇತ್ತೀಚೆಗೆ ಬಿಡುಗಡೆಗೊಂಡಿದೆ. ಕ್ರಿಫ್ಟನ್ ಕ್ರೋನಿಕಲ್ಸ್, ದಿಸ್ ವಾಸ್ ಎ ಮ್ಯಾನ್ ಇದು ಏಳನೇ ಪುಸ್ತಕದ ಹೆಸರು. “ಒನ್ಲಿ ಟೈಮ್ ವಿಲ್ ಟೆಲ್ ಯು” ಸರಣಿಯ ಮೊದಲ ಪುಸ್ತಕವಾಗಿದೆ.

Question 7

7. “ಜಪಾನೀಸ್ ಎನ್ಸೆಪಾಲಿಟಿಸ್ (Japanese Encephalitis)” ಸೋಂಕು ಯಾವುದರ ಮೂಲಕ ಹರಡುತ್ತದೆ?

A
ಸೊಳ್ಳೆ
B
ಕಲುಷಿತ ನೀರು
C
ಜಾನುವಾರುಗಳು
D
ಮಂಗ
Question 7 Explanation: 
ಸೊಳ್ಳೆ:

ಜಪಾನೀಸ್ ಎನ್ಸೆಪಾಲಿಟಿಸ್ ಕಾಯಿಲೆ ಜಪಾನೀಸ್ ಎನ್ಸೆಪಾಲಿಟಿಸ್ ವೈರಸ್ ನಿಂದ ಸೊಳ್ಳೆಗಳ ಮೂಲಕ ಹರಡುತ್ತದೆ. ಡೆಂಗ್ಯೂ, ಚಿಕನ್ ಗೂನ್ಯ ಮತ್ತು ಹಳದಿ ಜ್ವರ ಹರಡುವ ಕ್ಯೂಲೆಕ್ಸ್ ಜಾತಿ ಸೊಳ್ಳೆ ಈ ಕಾಯಿಲೆಯ ಹರಡುವಿಕೆಗೆ ಪ್ರಮುಖ ಕಾರಣವಾಗಿದೆ. ಒಡಿಶಾದ ಬುಡಕಟ್ಟು ಜನಾಂಗ ಪ್ರಬಲ ಜಿಲ್ಲೆ ಮಲ್ಕನ್ಗರಿಯ 505 ಹಳ್ಳಿಗಳಲ್ಲಿ ಈ ಕಾಯಿಲೆಯಿಂದ 75 ಜನರು ಮರಣಹೊಂದಿದ್ದಾರೆ. ದೇಶದ ಅತಿ ಹೆಚ್ಚು ಜಪಾನೀಸ್ ಎನ್ಸೆಪಾಲಿಟಿಸ್ ಪ್ರಕರಣ ಈ ಜಿಲ್ಲೆಯಲ್ಲಿ ವರದಿಯಾಗಿದೆ.

Question 8

8. ಯಾವ ದೇಶದಲ್ಲಿ ತಂಬಾಕು ನಿಯಂತ್ರಣ ಸದಸ್ಯ ರಾಷ್ಟ್ರಗಳ 7ನೇ ಅಧಿವೇಶನ (Conference of Parties on Tobacco Control) ಜರುಗಲಿದೆ?

A
ಭಾರತ
B
ಶ್ರೀಲಂಕಾ
C
ಪಾಕಿಸ್ತಾನ
D
ಚೀನಾ
Question 8 Explanation: 
ಭಾರತ:

ತಂಬಾಕು ನಿಯಂತ್ರಣ ಸದಸ್ಯ ರಾಷ್ಟ್ರಗಳ 7ನೇ ಅಧಿವೇಶನದ ಆತಿಥ್ಯವನ್ನು ಈ ಬಾರಿ ಭಾರತ ವಹಿಸಿಕೊಂಡಿದ್ದು, ಉತ್ತರ ಪ್ರದೇಶದ ಗೇಟರ್ ನೊಯ್ಡಾದಲ್ಲಿ ನವೆಂಬರ್ 7-12 ರವರೆಗೆ ನಡೆಯಲಿದೆ. 180 ರಾಷ್ಟ್ರಗಳಿಂದ 1500 ಕ್ಕೂ ಹೆಚ್ಚು ಪ್ರತಿನಿಧಿಗಳು ಅಧಿವೇಶನದಲ್ಲಿ ಭಾಗವಹಿಸಲಿದ್ದಾರೆ. ತಂಬಾಕು ಬಳಕೆ ನಿಯಂತ್ರಣಕ್ಕೆ ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲಾಗುವುದು.

Question 9

9. ನವೆಂಬರ್ 5 ರಂದು ಆಚರಿಸಲಾಗುತ್ತಿರುವ ಮೊದಲ ವಿಶ್ವ ಸುನಾಮಿ ಜಾಗೃತಿ ದಿನದ ಧ್ಯೇಯವಾಕ್ಯ ____?

A
Awareness and Alert
B
Education and Evacuation Drills
C
A Step to Rescue
D
Tsunami No more Causalities
Question 9 Explanation: 
Education and Evacuation Drills:

ವಿಶ್ವ ಸುನಾಮಿ ಜಾಗೃತಿ ದಿನವನ್ನು ಇದೇ ಮೊದಲ ಬಾರಿಗೆ ನವೆಂಬರ್ 5 ರಂದು ಆಚರಿಸಲಾಗುತ್ತಿದೆ. ಡಿಸೆಂಬರ್ 2015 ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನವೆಂಬರ್ 5 ರಂದು ವಿಶ್ವ ಸುನಾಮಿ ಜಾಗೃತಿ ದಿನವೆಂದು ಆಚರಿಸಲು ನಿರ್ಣಯ ಕೈಗೊಂಡಿತ್ತು. ವಿಶ್ವ ಸುನಾಮಿ ಜಾಗೃತಿ ದಿನ ಜಪಾನಿನ ಕನಸಿನ ಕೂಸು ಎನ್ನಲಾಗಿದೆ. Education and Evacuation Drills ಈ ವರ್ಷದ

Question 10

10. ಏಷ್ಯಾದ ಅತಿ ದೊಡ್ಡ ಮಾನವ ನಿರ್ಮಿತ “ಜಂಗಲ್ ಸಫಾರಿ” ಭಾರತದ ಯಾವ ರಾಜ್ಯದಲ್ಲಿದೆ?

A
ಕೇರಳ
B
ಮಧ್ಯ ಪ್ರದೇಶ
C
ಚತ್ತೀಸಘರ್
D
ಜಾರ್ಖಂಡ್
Question 10 Explanation: 
ಚತ್ತೀಸಘರ್:

ಏಷ್ಯಾದ ಅತಿ ದೊಡ್ಡ ಮಾನವ ನಿರ್ಮಿತ ಜಂಗಲ್ ಸಫಾರಿಯನ್ನು ಪ್ರಧಾನಿ ಮೋದಿ ಅವರು ಚತ್ತೀಸಘರ್ ದ ನಯಾ ರಾಯ್ಪುರದಲ್ಲಿ ಉದ್ಘಾಟಿಸಿದರು. ಇದರ ವಿಸ್ತೀರ್ಣ ಸರಿಸುಮಾರು 800 ಎಕರೆಯಷ್ಟಿದೆ. 8 ವಿಭಾಗಗಳಲ್ಲಿ ವಿಂಗಡಿಸಲಾಗಿದ್ದು, ವನ್ಯಮೃಗಗಳು ಸಲೀಸಾಗಿ ಒಡಾಡಬಹುದಾಗಿದೆ. ಪರಿಸರ ಸ್ನೇಹಿ ವಾಹನಗಳ ಮೂಲಕ ಪ್ರವಾಸಿಗರು ವನ್ಯಜೀವಿಗಳನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಹುಲಿ, ಚಿರತೆ, ಸಿಂಹ, ಕರಡಿ ಮುಂತಾದ ವನ್ಯಜೀವಿಗಳನ್ನು ಇಲ್ಲಿ ಕಾಣಬಹುದು.

There are 10 questions to complete.

[button link=”http://www.karunaduexams.com/wp-content/uploads/2016/11/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ನವೆಂಬರ್-4.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

4 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ನವೆಂಬರ್-4, 2016”

  1. Nagaraj R

    This is good experience

  2. Very helpfull to general knowledge

  3. this is very good and super

  4. nagesh kodla

    useful information for aspirants keep it up guys

Leave a Comment

This site uses Akismet to reduce spam. Learn how your comment data is processed.