ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ನವೆಂಬರ್-5, 2016
Question 1 |
1.ಭಾರತದ ಮೊಟ್ಟ ಮೊದಲ ಟೈಟಾನೀಯಂ ಯೋಜನೆಯ ಪ್ರಯೋಗಾರ್ಥ ಉತ್ಪಾದನೆ ಯಾವ ರಾಜ್ಯದಲ್ಲಿ ಆರಂಭಗೊಂಡಿತು?
ಒಡಿಶಾ | |
ಬಿಹಾರ | |
ಜಾರ್ಖಂಡ್ | |
ಪಶ್ಚಿಮ ಬಂಗಾಳ |
ಭಾರತದ ಮೊದಲ ಟೈಟಾನೀಯಂ ಯೋಜನೆಯ ಪ್ರಯೋಗಾರ್ಥ ಉತ್ಪಾದನೆ ಒಡಿಶಾದ ಗಂಜಂನಲ್ಲಿ ಆರಂಭಗೊಂಡಿತು. ಸರಫ್ ಗ್ರೂಫ್ ಈ ಯೋಜನೆಯನ್ನು ಪ್ರಾರಂಭಿಸಿದೆ. ಇದು ದೇಶದ ಮೊದಲ ಹಾಗೂ ಏಕೈಕ ಟೈಟಾನೀಯಂ ಉತ್ಪಾದನೆ ಘಟಕವಾಗಿದೆ.
Question 2 |
2.ಸ್ವಿಟ್ಜರ್ಲ್ಯಾಂಡ್ ಪ್ರವಾಸೋದ್ಯಮಕ್ಕೆ ಭಾರತದ ರಾಯಭಾರಿಯಾಗಿ ಆಯ್ಕೆಯಾಗಿರುವ ಬಾಲಿವುಡ್ ನಟ ಯಾರು?
ಶಾರೂಖ್ ಖಾನ್ | |
ಅಮಿತಾಬ್ ಬಚ್ಚನ್ | |
ರಣವೀರ್ ಸಿಂಗ್ | |
ಸಲ್ಮಾನ್ ಖಾನ್ |
ಭೂಲೋಕದ ಸ್ವರ್ಗ ಸೀಮೆ ಸ್ವಿಟ್ಜರ್ಲ್ಯಾಂಡ್ ಪ್ರವಾಸೋದ್ಯಮಕ್ಕೆ ಬಾಲಿವುಡ್ ನಟ ರಣವೀರ್ ಭಾರತದ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. 2017ರ ಸ್ವಿಟ್ಜರ್ಲ್ಯಾಂಡ್ ಪ್ರವಾಸೋದ್ಯಮ ಆಂದೋಲನ ಪ್ರರ್ವತನೆಗಾಗಿ ರಣವೀರ್ನನ್ನು ಇಂಡಿಯನ್ ಅಂಬಾಸಿಡರ್ ಆಗಿ ನೇಮಕ ಮಾಡಲಾಗಿದೆ. `ನೇಚರ್ ವಾಂಟ್ಸ್ ಯು ಬ್ಯಾಕ್' ಎಂಬುದು ಪ್ರವಾಸೋದ್ಯಮ ಪ್ರಚಾರಾಂದೋಲನದ ಧ್ಯೇಯವಾಕ್ಯವಾಗಿದೆ.
Question 3 |
3.4ನೇ ಏಷ್ಯನ್ ಚಾಂಪಿಯನ್ಷಿಪ್ ಟೂರ್ನಿಯಲ್ಲಿ ಭಾರತ ವನಿತೆಯರ ತಂಡ ಯಾವ ದೇಶವನ್ನು ಮಣಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದುಕೊಂಡಿತು?
ಪಾಕಿಸ್ತಾನ | |
ಚೀನಾ | |
ಜಪಾನ್ | |
ಮಲೇಷಿಯಾ |
ಭಾರತದ ವನಿತೆಯರ ತಂಡವು 2–1 ಗೋಲುಗಳಿಂದ ಚೀನಾ ತಂಡವನ್ನು ಮಣಿಸುವ ಮೂಲಕ ಇದೇ ಮೊದಲ ಬಾರಿ. 4ನೇ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಗೆದ್ದುಕೊಂಡಿದೆ. ವನಿತೆಯರ ತಂಡವು 2013ರಲ್ಲಿ ಫೈನಲ್ ತಲುಪಿತ್ತು. ಆದರೆ, ಜಪಾನ್ ಎದುರು ಸೋತಿತ್ತು. 2010ರಲ್ಲಿ ನಡೆದಿದ್ದ ಮೊಟ್ಟಮೊದಲ ಟೂರ್ನಿಯಲ್ಲಿ ಭಾರತ ತಂಡವು ಮೂರನೇ ಸ್ಥಾನ ಪಡೆದಿತ್ತು.
Question 4 |
4.ವಿಶ್ವ ಷೇರು ವಿನಿಮಯ ಕೇಂದ್ರಗಳ ಒಕ್ಕೂಟದ (WFE) ಅಧ್ಯಕ್ಷರಾಗಿ ಯಾರು ನೇಮಕಗೊಂಡಿದ್ದಾರೆ?
ಚಿತ್ರಾ ರಾಮಕೃಷ್ಣ | |
ಜೋಸೆಫ್ ಸೈಮನ್ | |
ಸುಮನ ಚಂದ್ರಭಾಗ್ | |
ಕಾರ್ತಿಕ್ ಶೆಣೈ |
ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್ಎಸ್ಇ) ವ್ಯವಸ್ಥಾಪಕ ನಿರ್ದೇಶಕಿ ಚಿತ್ರಾ ರಾಮಕೃಷ್ಣ ಅವರನ್ನು ವಿಶ್ವ ಷೇರು ವಿನಿಮಯ ಕೇಂದ್ರಗಳ ಒಕ್ಕೂಟದ (ಡಬ್ಲ್ಯುಎಫ್ಇ) ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಕೊಲಂಬಿಯದ ಕಾರ್ಟಜೆನಾದಲ್ಲಿ ನಡೆದ 'ಡಬ್ಲ್ಯುಎಫ್ಇ'ಯ 56ನೇ ವಾರ್ಷಿಕ ಮಹಾಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವಿವಿಧ ದೇಶಗಳ 200ಕ್ಕೂ ಹೆಚ್ಚು ಷೇರು ವಿನಿಮಯ ಕೇಂದ್ರಗಳು 'ಡಬ್ಲ್ಯುಎಫ್ಇ' ಒಕ್ಕೂಟದ ಸದಸ್ಯತ್ವ ಹೊಂದಿವೆ. ಪ್ರತಿ ಎರಡು ವರ್ಷಗಳಿಗೆ ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುತ್ತದೆ.
Question 5 |
5.“ಸಂಪ್ರಿತಿ-2016” ಮಿಲಿಟರಿ ಅಭ್ಯಾಸ ಭಾರತ ಮತ್ತು ಯಾವ ದೇಶದ ನಡುವೆ ಇತ್ತೀಚೆಗೆ ಆರಂಭಗೊಂಡಿತು?
ಮಲೇಷಿಯಾ | |
ಮ್ಯಾನ್ಮಾರ್ | |
ಬಾಂಗ್ಲದೇಶ | |
ಭೂತಾನ್ |
ಭಾರತ ಮತ್ತು ಬಾಂಗ್ಲದೇಶ ನಡುವಿನ ಸಂಪ್ರಿತಿ-2016 ಜಂಟಿ ಮಿಲಿಟರಿ ಅಭ್ಯಾಸ ತಂಗಿಲ್, ಡಾಕಾ, ಬಾಂಗ್ಲದೇಶದಲ್ಲಿ ನವೆಂಬರ್ 5 ರಿಂದ ಆರಂಭಗೊಂಡಿದ್ದು, 18 ವರೆಗೆ ನಡೆಯಲಿದೆ. ಸಂಪ್ರಿತಿ ಮಿಲಿಟರಿ ಅಭ್ಯಾಸ ಭಾರತ ಮತ್ತು ಬಾಂಗ್ಲದೇಶ ನಡುವಿನ ಮಹತ್ವದ ದ್ವಿಪಕ್ಷೀಯ ರಕ್ಷಣಾ ಸಹಕಾರವಾಗಿದೆ. ಉಭಯ ದೇಶಗಳು ಪರ್ಯಾಯವಾಗಿ ಈ ಸಮರಾಭ್ಯಾಸವನ್ನು ಆಯೋಜಿಸುತ್ತಿದ್ದು, ಇದು ಆರನೇ ಆವೃತ್ತಿಯದಾಗಿದೆ.
Question 6 |
6. ಏಷ್ಯನ್ ಪುಟ್ಬಾಲ್ ಕಾನ್ಫೆಡರೇಶನ್ ಕಪ್ (ಎಎಫ್ಸಿ) ಟೂರ್ನಿಯಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡ ತಂಡ ಯಾವುದು?
ಬೆಂಗಳೂರು ಪುಟ್ಬಾಲ್ ಕ್ಲಬ್ | |
ಇರಾಕ್ ಏರ್ ಫೋರ್ಸ್ ಕ್ಲಬ್ |
ಇರಾಕ್ನ ಏರ್ಫೋರ್ಸ್ ಕ್ಲಬ್ ತಂಡ (ಅಲ್ ಕ್ಯುವಾ ಅಲ್ ಜವಿಯಾ) ಬೆಂಗಳೂರು ಫುಟ್ಬಾಕ್ ಕ್ಲಬ್ ತಂಡವನ್ನು 0–1 ಗೋಲಿನಿಂದ ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಏಷ್ಯಾದ ಪ್ರಮುಖ ಫುಟ್ಬಾಲ್ ಟೂರ್ನಿಯಾಗಿರುವ ಎಎಫ್ಸಿ ಕಪ್ನಲ್ಲಿ ಫೈನಲ್ ತಲುಪಿದ ಮೊದಲ ಭಾರತೀಯ ಕ್ಲಬ್ ಎಂಬ ಹೆಗ್ಗಳಿಕೆ ‘ಐ ಲೀಗ್ ಚಾಂಪಿಯನ್ಸ್’ ಬಿಎಫ್ಸಿ ತಂಡ ಪಾತ್ರವಾಗಿತ್ತು.
Question 7 |
7. “ಯಾನ್ ಎರ ಆಫ್ ಡಾರ್ಕನೆಸ್: ದಿ ಬ್ರಿಟಿಷ್ ಎಂಪೈರ್ ಇನ್ ಇಂಡಿಯಾ (An Era of Darkness: The British Empire in India)” ಪುಸ್ತಕದ ಲೇಖಕರು ಯಾರು?
ಜೈರಾಮ್ ರಮೇಶ್ | |
ಶಶಿ ಥರೂರ್ | |
ಪಿ ಚಿದಂಬರಂ | |
ರೊಮೆಶ್ ದತ್ತ್ |
ಲೋಕಸಭಾ ಸದಸ್ಯ ಶಶಿ ಥರೂರ್ ಅವರು “ಯಾನ್ ಎರ ಆಫ್ ಡಾರ್ಕನೆಸ್: ದಿ ಬ್ರಿಟಿಷ್ ಎಂಪೈರ್ ಇನ್ ಇಂಡಿಯಾ” ಪುಸ್ತಕರದ ಲೇಖಕರು. ಬ್ರಿಟಿಷ್ ಆಳ್ವಿಕೆಯಲ್ಲಿ ಭಾರತದ ಲೂಟಿ, ಹಿಂಸೆ, ಸಾವುಗಳ ಬಗ್ಗೆ ವಿವರಿಸಲಾಗಿದೆ.
Question 8 |
8. ಪ್ರಪ್ರಥಮ ಅಂತಾರಾಷ್ಟ್ರೀಯ ಕೃಷಿ-ಜೀವ ವೈವಿಧ್ಯತೆ ಕಾಂಗ್ರೆಸ್ (International Agro-Biodiversity Congress) ಯಾವ ನಗರದಲ್ಲಿ ಆರಂಭಗೊಂಡಿದೆ?
ನವದೆಹಲಿ | |
ನ್ಯೂ ಯಾರ್ಕ್ | |
ಬರ್ಲಿನ್ | |
ಬೀಜಿಂಗ್ |
ಪ್ರಪ್ರಥಮ ಅಂತಾರಾಷ್ಟ್ರೀಯ ಕೃಷಿ-ಜೀವ ವೈವಿಧ್ಯತೆ ಕಾಂಗ್ರೆಸ್ ಭಾರತದ ನವದೆಹಲಿಯಲ್ಲಿ ನವೆಂಬರ್ 6 ರಂದು ಆರಂಭಗೊಂಡಿತು. ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಕಾಂಗ್ರೆಸ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. 60 ದೇಶಗಳ 900 ಪ್ರತಿನಿಧಿಗಳು ಈ ಕಾಂಗ್ರೆಸ್ ನಲ್ಲಿ ಭಾಗವಹಿಸಲಿದ್ದಾರೆ.
Question 9 |
9. ವಿಶ್ವ ಪುರುಷರ ಸಿಂಗಲ್ಸ್ ಟೆನ್ನಿಸ್ ಶ್ರೇಯಾಂಕದಲ್ಲಿ ನಂ.1 ಸ್ಥಾನವನ್ನು ಪಡೆದುಕೊಂಡ ಆಟಗಾರ ಯಾರು?
ಆಯಂಡಿ ಮರೆ | |
ನೊವಾಕ್ ಜೊಕೊವಿಕ್ | |
ಮಿಲೊಸ್ ರೊಮೊನಿಕ್ | |
ರೋಜರ್ ಫೆಡರರ್ |
ಸ್ಕಾಟ್ ಟೆನಿಸ್ ತಾರೆ ಆಂಡಿ ಮರ್ರೆ ವಿಶ್ವ ಪುರುಷರ ಸಿಂಗಲ್ಸ್ ಟೆನಿಸ್ ಶ್ರೇಯಾಂಕ ಪಟ್ಟಿಯಲ್ಲಿ ನಂ.1 ಆಗಿ ಹೊರ ಹೊಮ್ಮಿದ್ದಾರೆ. ಪ್ಯಾರಿಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಮರ್ರೆ ಈ ಸಾಧನೆ ಮಾಡಿದರು. ಪ್ಯಾರಿಸ್ ಮಾಸ್ಟರ್ಸ್ ಫೈನಲ್ ಪ್ರವೇಶಿಸುವ ಮೂಲಕ ಅಗ್ರಸ್ಥಾನದಲ್ಲಿದ್ದ ನೊವಾಕ್ ಜೊಕೊವಿಚ್ ಅವರನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ ಮೊದಲ ಬ್ರಿಟಿಷ್ ಆಟಗಾರ ಮರ್ರೆ ಎನಿಸಿಕೊಂಡರು. ಮೂರು ಗ್ಯ್ರಾನ್ ಸ್ಲಾಮ್ ಹಾಗೂ ಎರಡು ಬಾರಿ ಒಲಿಂಪಿಕ್ಸ್ ಚಾಂಪಿಯನ್ ಆಗಿರುವ 29 ವರ್ಷದ ಮರ್ರೆ 43 ವರ್ಷಗಳ ಬಳಿಕ ವರ್ಲ್ಡ್ ನಂ.1 ಸ್ಥಾನಕ್ಕೇರಿದ್ದಾರೆ.
Question 10 |
10. ವಿಶ್ವಸಂಸ್ಥೆಯ ಬಜೆಟ್ ಹಾಗೂ ಆಡಳಿತ ಸಲಹಾ ಸಮಿತಿಗೆ ಆಯ್ಕೆಯಾದ ಭಾರತೀಯ ಯಾರು?
ಅನಿರುದ್ದ್ ರಜಪೂತ್ | |
ಮಹೇಶ್ ಕುಮಾರ್ | |
ಸೃಜನ್ ಸಿಂಗ್ | |
ರಮೇಶ್ ಬಾದೊಲ್ |
ವಿಶ್ವಸಂಸ್ಥೆಯ ಬಜೆಟ್ ಹಾಗೂ ಆಡಳಿತ ಸಲಹಾ ಸಮಿತಿಗೆ ಭಾರತೀಯರಾದ ಮಹೇಶ್ ಕುಮಾರ್ ಆಯ್ಕೆಯಾಗಿದ್ದಾರೆ. ವಿಶ್ವಸಂಸ್ಥೆಗೆ ಭಾರತದ ಖಾಯಂ ನಿಯೋಗದ ಮುಖ್ಯ ಕಾರ್ಯದರ್ಶಿಯಾದ ಮಹೇಶ್ ಕುಮಾರ್ ಶುಕ್ರವಾರ ವಿಶ್ವಸಂಸ್ಥೆಯ ಆಡಳಿತಾತ್ಮಕ ಹಾಗೂ ಆಯವ್ಯಯ ಪ್ರಶ್ನೆಗಳ (ಎಸಿಎಬಿಕ್ಯೂ) ಕುರಿತ ಸಲಹಾ ಸಮಿತಿಗೆ ಆಯ್ಕೆಯಾಗಿದ್ದಾರೆ.ಈ ಸಮಿತಿಯು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಐದನೆ ಸಮಿತಿಗೆ ನೆರವಾಗುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ವಿಶ್ವಸಂಸ್ಥೆಯ ಬಜೆಟ್ ಮತ್ತಿತರ ಆಡಳಿತಾತ್ಮಕ ಉಪಕ್ರಮಗಳನ್ನು ಆದು ಪರಿಶೀಲಿಸುತ್ತದೆ. ಸಮಿತಿಯ ಸದಸ್ಯರಾಗಿ ಮಹೇಶ್ ಕುಮಾರ್ ಜೊತೆಗೆ ಜಪಾನ್ನ ತಾಕೇಶಿ ಅಕಮಾತ್ಸು ಹಾಗೂ ಚೀನಾದ ಯೆ ಕ್ಸಿನಾಂಗ್ ಆಯ್ಕೆಯಾಗಿದ್ದಾರೆ. ಇವರ ಸೇವಾವಧಿಯು ಮೂರು ವರ್ಷಗಳಾಗಿದ್ದು, 2017ರ ಜನವರಿಯಿಂದ ಆರಂಭಗೊಳ್ಳಲಿದೆ.
[button link=”http://www.karunaduexams.com/wp-content/uploads/2016/11/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ನವೆಂಬರ್-5.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
so good
ನಿಮ್ಮ ಈ ಕಾರ್ಯಕ್ಕೆ ಶುಭವಾಗಲಿ….ನಿರಂತರ ಅಭ್ಯಾಸ ಮಾಡುವ ವಿದ್ಯಾರ್ಥಿಗಳಿಗೆ ಬಹಳ ಉಪಯೋಗವಾಗಿದೆ. ಧನ್ಯವಾದಗಳು..