ಅಕ್ಟೋಬರ್ 31: ವಿಶ್ವ ನಗರಗಳ ದಿನ (World Cities Day)

ವಿಶ್ವ ನಗರಗಳ ದಿನವನ್ನು ವಿಶ್ವದಾದ್ಯಂತ ಅಕ್ಟೋಬರ್ 31 ರಂದು ಆಚರಿಸಲಾಗುತ್ತದೆ. ಕ್ಷಿಪ್ರವಾಗಿ ಬೆಳೆಯುತ್ತಿರುವ ಜನಸಂಖ್ಯೆ ಮತ್ತು ಸಮಸ್ಯೆಗಳ ಹಿನ್ನಲೆಯಲ್ಲಿ ಯೋಜಿತ ಮತ್ತು ಸುಸ್ಥಿರವಾದ ನಗರ ಜೀವನವನ್ನು ರೂಪಿಸುವುದು ಈ ದಿನದ ಧ್ಯೇಯ. ಈ ದಿನದಂದು ವ್ಯಾಪಕವಾಗಿ ಬೆಳೆಯುತ್ತಿರುವ ನಗರೀಕರಣದಿಂದ ಉದ್ಬವಿಸುತ್ತಿರುವ ಸಮಸ್ಯೆಗಳನ್ನು ಎದುರಿಸಲು ವಿಶ್ವದ ರಾಷ್ಟ್ರಗಳಿಗೆ ಕರೆ ನೀಡಲಾಗುವುದು.

2016 ಥೀಮ್: Inclusive Cities, Shared Documents

ಹಿನ್ನಲೆ:

  • ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಅಕ್ಟೋಬರ್ 31 ರಂದು ವಿಶ್ವ ನಗರಗಳ ದಿನವನ್ನು ಆಚರಿಸಲು ಡಿಸೆಂಬರ್ 2013ರಲ್ಲಿ ನಿರ್ಣಯ ಕೈಗೊಂಡಿತು.
  • ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ದಿಗೆ ನಗರಗಳ ಕೊಡುಗೆಯ ಮಹತ್ವವನ್ನು ಸ್ಮರಿಸುವುದು ಆಚರಣೆಯ ಉದ್ದೇಶದಲ್ಲಿ ಒಂದಾಗಿದೆ.

 ಅಕ್ಟೋಬರ್ 31: ರಾಷ್ಟ್ರೀಯ ಏಕತಾ ದಿವಸ

ರಾಷ್ಟ್ರೀ ಏಕತಾ ದಿವಸ (National Unity Day)ವನ್ನು ದೇಶದಾದ್ಯಂತ ಅಕ್ಟೋಬರ್ 31 ರಂದು ಆಚರಿಸಲಾಯಿತು. ಭಾರತದ ಮೊದಲ ಉಪ ಪ್ರಧಾನಿ ಸರ್ದಾರ್ ವಲ್ಲಭ್ ಭಾಯ್ ಪಟೇಲ್ ಅವರ ಜನ್ಮದಿನವನ್ನು ರಾಷ್ಟ್ರೀಯ ಏಕತಾ ದಿವಸವೆಂದು ಆಚರಿಸಲಾಗುತ್ತದೆ. ದೃಢವಾದ ಏಕತೆ, ಸಮಗ್ರತೆ ಮತ್ತು ದೇಶದ ಭದ್ರತೆಗೆ ನಿಜವಾದ ಮತ್ತು ಸಂಭವನೀಯ ಬೆದರಿಕೆಗಳನ್ನು ತಡೆಯುವ ಅಂತರ್ಗತ ಶಕ್ತಿ ತೋರುವ ಅವಕಾಶಕ್ಕೆ ಈ ದಿನ ವೇದಿಕೆ ಒದಗಿಸಲಿದೆ. ಈ ದಿನದ ಸಂಭ್ರವನ್ನು ಆಚರಿಸುವ ಸಲುವಾಗಿ ದೇಶದ ವಿವಿಧಡೆ ಅನೇಕ ಕಾರ್ಯಕ್ರಮಗಳನ್ನು ಆಚರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. ನವದೆಹಲಿಯಲ್ಲಿ ರನ್ ಫಾರ್ ಯೂನಿಟಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

2016 ಧ್ಯೇಯವಾಕ್ಯ: ಇಂಟಿಗ್ರೇಷನ್ ಆಫ್ ಇಂಡಿಯಾ (Integration of India).

ಸರ್ದಾರ್ ವಲ್ಲಭ್ ಭಾಯ್ ಪಟೇಲ್:

  • ಸರ್ದಾರ್ ವಲ್ಲಬ್ ಭಾಯ್ ಪಟೇಲ್ ಅವರು 31ನೇ ಅಕ್ಟೋಬರ್ 1875 ರಲ್ಲಿ ಗುಜರಾತ್ನ ಕರಂಸಾಡ್ ಹೆಸರಿನ ಹಳ್ಳಿಯಲ್ಲಿ ಜನಿಸಿದರು. ಇವರನ್ನು ಭಾರತದ ಉಕ್ಕಿನ ಮನುಷ್ಯ ಅಥವಾ ಬಿಸ್ಮಾರ್ಕ್ ಎಂದು ಕರೆಯಲಾಗುತ್ತಿದೆ.
  • ವೃತ್ತಿಯಲ್ಲಿ ವಕೀಲರಾಗಿದ್ದ ಪಟೇಲ್ ಅವರು ನಂತರದ ದಿನಗಳಲ್ಲಿ ವೃತ್ತಿಯನ್ನು ತ್ಯಜಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದರು. ಮಹಾತ್ಮ ಗಾಂಧಿ ನೇತೃತ್ವದ ಇಂಡಿಯನ್ ನ್ಯಾಷನಲ್ ಮೂವ್ ವೆಂಟ್ ಗೆ ಸೇರ್ಪಡೆಯಾದರು.
  • ಪಟೇಲ್ ಅವರು ಭಾರತ ಸ್ವಾತಂತ್ರ ಹೋರಾಟದಲ್ಲಿ ಅಪಾರ ಕೊಡುಗೆ ನೀಡಿದ್ದರು. ಖೇಡಾ, ಬರ್ಸಾಡ್ ಮತ್ತು ಬರ್ದೋಲಿ ಸತ್ಯಾಗ್ರಹಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.
  • ಸ್ವಾತಂತ್ರ ಭಾರತದ ನಂತರ 500 ಸಂಸ್ಥಾನಗಳನ್ನು ಒಗ್ಗೂಡಿಸುವ ಮೂಲಕ ಭಾರತ ಏಕೀಕರಣಕ್ಕೆ ಪಟೇಲ್ ಅವರು ಅಪಾರ ಶ್ರಮವಹಿಸಿದ್ದರು. ಆಧುನಿಕ ಅಖಿಲ ಭಾರತ ಸೇವೆ ಸ್ಥಾಪನೆಯಲ್ಲಿ ಪಟೇಲ್ ಅವರ ಸೇವೆ ಅವಿಸ್ಮರಣೀಯ.

ಕೇರಳ ರಾಜ್ಯ ದೇಶದ ಮೂರನೇ ಬಯಲು ಮಲ ವಿಸರ್ಜನೆ ಮುಕ್ತ ರಾಜ್ಯ

ಕೇರಳ ರಾಜ್ಯ ದೇಶದ ಮೂರನೇ ಬಯಲು ಮಲ ವಿಸರ್ಜನೆ ಮುಕ್ತ ರಾಜ್ಯವೆಂಬ ಗೌರವಕ್ಕೆ ಪಾತ್ರವಾಗಿದೆ. ಸಿಕ್ಕಿಂ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳು ಈಗಾಗಲೇ ಬಯಲು ಮಲ ವಿಸರ್ಜನೆ ಮುಕ್ತ ರಾಜ್ಯವೆಂದು ಘೋಷಿಸಲಾಗಿದ್ದು, ಈ ಸಾಲಿಗೆ ಕೇರಳ ಸೇರ್ಪಡೆಯಾಗಿದೆ.

  • ಕೇರಳ ರಾಜ್ಯ ಸಂಸ್ಥಾಪನ ದಿನವಾದ ನವೆಂಬರ್ 1ರಂದು ಕುಡಿಯುವ ನೀರು ಮತ್ತು ನೈಮರ್ಲ್ಯ ಕಾಯದರ್ಶಿ ಪರಮೇಶ್ವರನ್ ಅಯ್ಯರ್ ಘೋಷಣೆ ಮಾಡಿದರು.
  • ಅತಿ ಹೆಚ್ಚು ಜನಸಾಂದ್ರತೆ ಹೊಂದಿರುವ ರಾಜ್ಯಗಳ ಪೈಕಿ ಈ ಸಾಧನೆ ಮಾಡಿದ ಮೊದಲ ರಾಜ್ಯ ಕೇರಳ.
  • ಕೇರಳ ರಾಜ್ಯದ 14 ಜಿಲ್ಲೆ, 152 ಬ್ಲಾಕ್ ಮತ್ತು 940 ಗ್ರಾಮ ಪಂಚಾಯತಿಗಳನ್ನು ಬಯಲು ಶೌಚಮುಕ್ತವಾಗಿವೆ.
  • ಗುಜರಾತ್‌, ಹರಿಯಾಣ ಮತ್ತು ಉತ್ತರಾಖಂಡ ರಾಜ್ಯಗಳೂ ಬಯಲು ಶೌಚ ಮುಕ್ತ ರಾಜ್ಯಗಳಾಗಿ ಸದ್ಯದಲ್ಲೇ ಘೋಷಣೆ ಮಾಡಲಾಗುತ್ತದೆ.

ಜಾಗತಿಕ ಯುವಜನ ಅಭಿವೃದ್ದಿ ಸೂಚ್ಯಂಕ: ಭಾರತಕ್ಕೆ 133ನೇ ಸ್ಥಾನ

ಜಾಗತಿಕ ಯುವಜನ ಅಭಿವೃದ್ದಿ ಸೂಚ್ಯಂಕ-2016 ರಲ್ಲಿ 183 ರಾಷ್ಟ್ರಗಳ ಪೈಕಿ ಭಾರತ 133ನೇ ಸ್ಥಾನ ಪಡೆದುಕೊಂಡಿದೆ. ಕಾಮನ್ ವೆಲ್ತ್ ಸಚಿವಾಲಯ ಈ ಸೂಚ್ಯಂಕವನ್ನು ಅಭಿವೃದ್ದಿಪಡಿಸಿ ಹೊರ ತಂದಿದೆ. ಉದ್ಯೋಗ, ಶಿಕ್ಷಣ, ಆರೋಗ್ಯ ಮತ್ತು ರಾಜಕೀಯ ಕ್ಷೇತ್ರದಲ್ಲಿ ಯುವಕರ ಭವಿಷ್ಯವನ್ನು ಮಾನದಂಡವಾಗಿಟ್ಟುಕೊಂಡು ಸೂಚ್ಯಂಕವನ್ನು ತಯಾರಿಸಲಾಗಿದೆ.

ಪ್ರಮುಖಾಂಶಗಳು:

  • ಟಾಪ್ ಹತ್ತು ರಾಷ್ಟ್ರಗಳು: ಜರ್ಮನಿ, ಡೆನ್ಮಾರ್ಕ್, ಆಸ್ಟ್ರೇಲಿಯಾ, ಸ್ವಿಟ್ಜರ್ಲ್ಯಾಂಡ್, ಯುಕೆ, ನೆದರ್ಲ್ಯಾಂಡ್, ಆಸ್ಟ್ರಿಯಾ, ಲಕ್ಸಂಬರ್ಗ್, ಪೋರ್ಚುಗಲ್ ಮತ್ತು ಜಪಾನ್
  • ಭಾರತದ ನೆರೆ ರಾಷ್ಟ್ರಗಳು: ಶ್ರೀಲಂಕಾ (31), ಭೂತಾನ್ (69) ಮತ್ತು ನೇಪಾಳ (77).

ಭಾರತಕ್ಕೆ ಸಂಬಂಧಿಸಿದಂತೆ:

  • ವಿಶ್ವದ ಯುವಜನ ಜನಸಂಖ್ಯೆ ಪೈಕಿ ಭಾರತ ಶೇ 20ರಷ್ಟು ಹೊಂದಿದೆ. ದೇಶದಲ್ಲಿ 15 ರಿಂದ 30 ವರ್ಷದೊಳಗಿನ ಯುವಜನತೆ ಸಂಖ್ಯೆ 345 ಮಿಲಿಯನ್.
  • ಭಾರತದ ಒಟ್ಟಾರೆ ಜನಸಂಖ್ಯೆಯಲ್ಲಿ ಯುವಜನತೆ ಪಾಲು ಶೇ 27% ರಷ್ಟಿದೆ.
  • 2016 ಯುವಜನ ಅಭಿವೃದ್ದಿ ಸೂಚ್ಯಂಕದಲ್ಲಿ ಭಾರತ ಕಳಪೆ ಸಾಧನೆ ಮಾಡಿದೆ ಯಾದರು ಕಳೆದ ಐದು ವರ್ಷಗಳಿಗೆ ಹೋಲಿಸಿದರೆ ಶೇ 11% ಏರಿಕೆಯಾಗಿದೆ.
  • ದೇಶದ ಯುವಜನತೆ ಅಭಿವೃದ್ದಿಯು ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಹಿಂದಿ ಉಳಿದಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

Leave a Comment

This site uses Akismet to reduce spam. Learn how your comment data is processed.