ಬೇನಾಮಿ ವಹಿವಾಟು (ತಡೆ) ತಿದ್ದುಪಡಿ ಕಾಯಿದೆ-2016 ಜಾರಿ
ಕಪ್ಪುಹಣ ನಿಗ್ರಹಿಸಲು ಸಂಸತ್ತಿನಿಂದ ಅಂಗೀಕಾರಗೊಂಡ “ಬೇನಾಮಿ ವಹಿವಾಟು (ತಡೆ) ತಿದ್ದುಪಡಿ ಕಾಯಿದೆ-2016” ಜಾರಿಗೆ ಬಂದಿದೆ. ಈ ಹೊಸ ಕಾಯಿದೆಯು ಬೇನಾಮಿ ವಹಿವಾಟು ಕಾಯಿದೆ-1988ಕ್ಕೆ ತಿದ್ದುಪಡಿ ತರಲಾಗಿದೆ ಮತ್ತು ಬೇನಾಮಿ ಆಸ್ತಿ ವಹಿವಾಟು ತಡೆ ಕಾಯಿದೆ-1988 ಎಂದು ಮರುನಾಮಕರಣ ಮಾಡಲಾಗಿದೆ. ತಿದ್ದುಪಡಿ ಮೂಲಕ ಮೂಲ ಕಾಯಿದೆಗೆ ಕಾನೂನತ್ಮಕವಾಗಿ ಮತ್ತು ಆಡಳಿತಾತ್ಮಕವಾಗಿ ಮತ್ತಷ್ಟು ಕಠಿಣಗೊಳಿಸಲಾಗಿದೆ.
ಬೇನಾಮಿ ಆಸ್ತಿ ಎಂದರೇನು?
ಬ್ಬ ವ್ಯಕ್ತಿಯ ಹೆಸರಿಗೆ ನೋಂದಣಿಯಾಗುವ ಅಥವಾ ವರ್ಗಾವಣೆಯಾಗುವ ಆಸ್ತಿಗೆ ಬೇರೊಬ್ಬರು ಹಣ ಪಾವತಿಸುವುದನ್ನು ಬೇನಾಮಿ ಆಸ್ತಿ ಎಂದು ಕಾಯ್ದೆಯಲ್ಲಿ ವಿವರಿಸಲಾಗಿದೆ.
ಕಾಯಿದೆಯ ಪ್ರಮುಖಾಂಶಗಳು:
- ಬೇನಾಮಿ ವಹಿವಾಟಿನಲ್ಲಿ ಭಾಗವಹಿಸಿ ಸಾಬೀತಾದರೆ 7 ವರ್ಷ ಜೈಲು ಮತ್ತು ದಂಡವನ್ನು ತೆರಬೇಕಾಗುತ್ತದೆ.
- ತಪ್ಪು ಮಾಹಿತಿಯನ್ನು ನೀಡಿದರೆ ಐದು ವರ್ಷ ಜೈಲು ಮತ್ತು ದಂಡ ವಿಧಿಸುವ ಅವಕಾಶವನ್ನು ಕಾಯಿದೆಯಡಿ ನೀಡಲಾಗಿದೆ.
- ಬೇನಾಮಿ ವಹಿವಾಟಿನಲ್ಲಿ ನಡೆಸಲಾದ ಆಸ್ತಿಯನ್ನು ಸರ್ಕಾರ ಯಾವುದೇ ಪರಿಹಾರ ನೀಡದೆ ವಶಪಡಿಸಿಕೊಳ್ಳಬಹುದು.
ಚತ್ತೀಸಘರ್ ನಲ್ಲಿ ಸೌರ ಸುಲಭ ಯೋಜನೆಗೆ ಪ್ರಧಾನಿ ಚಾಲನೆ
ಪ್ರಧಾನಿ ನರೇಂದ್ರ ಮೋದಿ ರವರು ಚತ್ತೀಸಘರ್ ದಲ್ಲಿ ಸೌರ ಸುಲಭ್ ಯೋಜನೆಗೆ ಚಾಲನೆ ನೀಡಿದರು. ಈ ಯೋಜನೆಯಡಿ ರೈತರಿಗೆ ಸಬ್ಸಿಡಿ ದರದಲ್ಲಿ ಸೌರ ವಿದ್ಯುತ್ ಚಾಲಿಯ ಪಂಪ್ ಸೆಟ್ ನೀಡಲಾಗುವುದು. ಚತ್ತೀಸಘರ್ ದ 16ನೇ ಸಂಸ್ಥಾಪನ ದಿನದ ಅಂಗವಾಗಿ ಈ ಯೋಜನೆಗೆ ಚಾಲನೆ ನೀಡಲಾಯಿತು. ಆ ಮೂಲಕ ಈ ಯೋಜನೆಯನ್ನು ಜಾರಿಗೆ ತಂದ ಮೊದಲ ರಾಜ್ಯ ಚತ್ತೀಸಘರ್ ಎನಿಸಿದೆ.
ಪ್ರಮುಖಾಂಶಗಳು:
- ಈ ಯೋಜನೆಯಡಿ ಸೌರ ವಿದ್ಯುತ್ ಚಾಲಿತ 3 ಹೆಚ್.ಪಿ ಮತ್ತು 5 ಹೆಚ್.ಪಿ ಸಾಮರ್ಥ್ಯದ ಪಂಪ್ ಸೆಟ್ ಗಳನ್ನ ರೈತರಿಗೆ ನೀಡಲಾಗುವುದು. ಫಲಾನುಭವಿ ರೈತರಿಗೆ ಸಬ್ಸಿಡಿ ದರದಲ್ಲಿ ಪಂಪ್ ಸೆಟ್ ಗಳನ್ನು ವಿತರಿಸಲಾಗುವುದು.
- ಯೋಜನೆಯಡಿ ವಿದ್ಯುತ್ ಅಭಾವ ಪ್ರದೇಶಗಳ ರೈತರಿಗೆ ಪ್ರಾಮುಖ್ಯತೆ ನೀಡಲಾಗಿದೆ.
- 2018ರ ವೇಳೆಗೆ ಸುಮಾರು 51,000 ರೈತರು ಈ ಯೋಜನೆ ಉಪಯೋಗವನ್ನು ಪಡೆದುಕೊಳ್ಳಲಿದ್ದಾರೆ.
ಇದಕ್ಕೂ ಮುಂಚೆ ಪ್ರಧಾನಿ ಮೋದಿ ಅವರು ಏಷ್ಯಾದ ಅತಿ ದೊಡ್ಡ ಮಾನವ ನಿರ್ಮಿತ ಜಂಗಲ್ ಸಫಾರಿಯನ್ನು ನಯ ರಾಯ್ಪುರ, ಚತ್ತೀಸಘರದಲ್ಲಿ ಉದ್ಘಾಟಸಿದರು. ಈ ಸಫಾರಿ 320 ಹೆಕ್ಟೇರ್ ವಿಸ್ತೀರ್ಣವನ್ನು ಹೊಂದಿದೆ.
ಅಂತರರಾಷ್ಟ್ರೀಯ ಚಾಲೆಂಜ್ ಬ್ಯಾಡ್ಮಿಂಟನ್ ಪ್ರತುಲ್ ಜೋಶಿಗೆ ಪ್ರಶಸ್ತಿ
ಉದಯೋನ್ಮುಖ ಆಟಗಾರ ಪ್ರತುಲ್ ಜೋಶಿ ಅವರು ಬಹರೇನ್ ಅಂತರರಾಷ್ಟ್ರೀಯ ಚಾಲೆಂಜ್ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ಗೆದ್ದು ಕೊಂಡರು. ಅಂತರರಾಷ್ಟ್ರೀಯ ಮಟ್ಟದಲ್ಲಿ ಇದು ಅವರ ಚೊಚ್ಚಲ ಪ್ರಶಸ್ತಿಯಾಗಿದೆ. ಸೆಗಯ್ಯಾದಲ್ಲಿ ನಡೆದ ಫೈನಲ್‌ನಲ್ಲಿ 22 ವರ್ಷದ ಜೋಶಿ ಅವರು 21–17, 12–21, 21–15ರಿಂದ ಆದಿತ್ಯ ಅವರ ವಿರುದ್ಧ ಗೆದ್ದರು.
ಮಹಿಳೆಯರ ಸಿಂಗಲ್ಸ್:
- ಇಂಡೋನೇಷಿಯಾದ ಶ್ರೀ ಫತ್ಮವಟಿ (Sri Fatmawati) ರವರು ತಮ್ಮದೇ ದೇಶದ ಅಸ್ಟಿ ದ್ವಿ ವಿಯನಿಂಗ್ರು ರವರನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡರು.
ಪುರುಷರ ಡಬ್ಬಲ್ಸ್:
- ರಷ್ಯಾದ ಎರಡನೇ ಶ್ರೇಯಾಂಕದ ಎವಗೆನಿಜ್ ಡ್ರೆಮಿನ್ ಮತ್ತು ಡೆನಿಸ್ ಗ್ರೆಚೆವ್ ರವರು ಭಾರತ ವಿಘ್ನೇಶ್ ದೇವಳಕರ್ ಮತ್ತು ರೋಹನ್ ಕಪೂರ್ ಜೋಡಿಯನ್ನು 18–21, 17–21ರಿಂದ ಪರಾಭವಗೊಳಿಸಿ ಪುರುಷರ ಡಬಲ್ಸ್‌ನಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡರು.
Comment