ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ನವೆಂಬರ್-6, 2016
Question 1 |
1.ಟಾಟಾ ಲಿಟರೇಚರ್ ಲೈವ್ ಜೀವಮಾನ ಸಾಧನೆ ಪ್ರಶಸ್ತಿ-2016 (Tata Literature Live! Lifetime Achievement Award) ಗೆ ಯಾರನ್ನು ಆಯ್ಕೆಮಾಡಲಾಗಿದೆ?
ಚೇತನ್ ಭಗತ್ | |
ಅಮಿತವ್ ಘೋಷ್ | |
ಕಿರಣ್ ನಗರ್ಕರ್ | |
ವಿ ಎಸ್ ನೈಪಾಲ್ |
ಪ್ರಖ್ಯಾತ ಭಾರತ ಅಮೆರಿಕ ಕಾದಂಬರಿಕಾರ ಅಮಿತವ್ ಘೋಷ್ ಅವರನ್ನು ಪ್ರತಿಷ್ಠಿತ ಟಾಟಾ ಲಿಟರೇಚರ್ ಲೈವ್ ಜೀವಮಾನ ಸಾಧನೆ ಪ್ರಶಸ್ತಿ-2016 ಗೆ ಆಯ್ಕೆಮಾಡಲಾಗಿದೆ. ಭಾರತೀಯ ಸಾಹಿತ್ಯ ಕ್ಷೇತ್ರಕ್ಕೆ ಘೋಷ್ ನೀಡಿರುವ ಅಪರಿಮಿತ ಕೊಡುಗೆಯನ್ನು ಗಮನಿಸಿ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ನವೆಂಬರ್ 20 ರಂದು ಮುಂಬೈನಲ್ಲಿ ನಡೆಯಲಿರುವ ಟಾಟಾ ಲಿಟರೇಚರ್ ಲೈವ್ ಸಮಾರಂಭದಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಘೋಷ್ ಅವರ “ಇಬಿಸ್ ಟ್ರಿಲಾಜಿ-ಸೀ ಆಫ್ ಪಾಪ್ಪಿಸ್”, “ರೀವರ್ ಆಫ್ ಸ್ಮೋಕ್”, “ಪ್ಲಡ್ ಆಫ್ ಫೈರ್”, “ದಿ ಸರ್ಕಲ್ ಆಫ್ ರೀಸನ್”, “ದಿ ಶಾಡೋ ಲೈನ್ಸ್” ಸಾಹಿತ್ಯ ಪ್ರಶಸ್ತಿ ಲಭಿಸಿದೆ.
Question 2 |
2.ಭಾರತೀಯ ರಿಸರ್ವ್ ಬ್ಯಾಂಕ್ ನ ಕಾರ್ಯನಿರ್ವಾಹಕ ನಿರ್ದೇಶಕರಾಗಿ (Executive Director) ಯಾರು ನೇಮಕಗೊಂಡಿದ್ದಾರೆ?
ಸತೀಶ್ ಚಂದ್ರ | |
ರಾಜೇಶ್ವರ್ ರಾವ್ | |
ಸುದೀಪ್ ಕುಲಕರ್ಣಿ | |
ಪ್ರಮೋದ್ ರಂಜನ್ |
ಎಂ ರಾಜೇಶ್ವರ್ ರಾವ್ ಅವರನ್ನು ಭಾರತೀಯ ರಿಸರ್ವ್ ಬ್ಯಾಂಕ್ ನ ಕಾರ್ಉನಿರ್ವಾಹಕ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ. ಈ ಮುಂಚೆ ಈ ಹುದ್ದೆಯಲ್ಲಿದ್ದ ಜಿ ಮಹಾಲಿಂಗಂ ರವರು ಸ್ವಯಂ ನಿವೃತ್ತಿ ಪಡೆದುಕೊಂಡ ಕಾರಣ ಈ ಹುದ್ದೆ ತೆರವಾಗಿತ್ತು. ರಾವ್ ರವರು ಸಂಖ್ಯಾಶಾಸ್ತ್ರ ಮತ್ತು ಮಾಹಿತಿ ಆಡಳಿತ ವಿಭಾಗದ ಮೇಲುಸ್ತುವಾರಿ ನೋಡಿಕೊಳ್ಳಲಿದ್ದಾರೆ.
Question 3 |
3.“ಆಸ್ಟ್ರೇಲಿಯಾದ ವರ್ಷದ ವ್ಯಕ್ತಿ” ಪ್ರಶಸ್ತಿಗೆ ಪಾತ್ರರಾದ ಭಾರತ ಮೂಲದ ವ್ಯಕ್ತಿ ಯಾರು?
ತೇಜಿಂದರ್ ಪಾಲ್ ಸಿಂಗ್ | |
ಶುಭಾ ಮುದ್ಗಲ್ | |
ಗುರ್ಜಿತ್ ಸಿಂಗ್ ಬಾದಲ್ | |
ಪ್ರಣೀತ್ ಕುಮಾರ್ |
ಭಾರತೀಯ ಮೂಲದ ಸಿಖ್ ವ್ಯಕ್ತಿ ತೇಜಿಂದರ್ ಪಾಲ್ ಸಿಂಗ್ ಅವರು ವರ್ಷದ ಆಸ್ಟ್ರೇಲಿಯನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಆಸ್ಟ್ರೇಲಿಯದಲ್ಲಿ ಸಿಖ್ ಸಮುದಾಯಕ್ಕೆ ಸಲ್ಲಿಸಿದ ಸೇವೆ ಹಾಗೂ ಎಲ್ಲ ಬಣ್ಣಗಳ ಜನರ ಬದುಕನ್ನು ಧನಾತ್ಮಕವಾಗಿ ಪ್ರಭಾವಿತಗೊಳಿಸಿರುವುದಕ್ಕಾಗಿ ತೇಜಿಂದರ್ ಪಾಲ್ ಸಿಂಗ್ರಿಗೆ 'ವರ್ಷದ ಆಸ್ಟ್ರೇಲಿಯನ್' ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಜನವರಿ 25ರಂದು ನಡೆಯಲಿರುವುದು. 'ವರ್ಷದ ಆಸ್ಟ್ರೇಲಿಯನ್' ಪ್ರಶಸ್ತಿಯುಲ್ಲಿ ನಾಲ್ಕು ವಿಭಾಗಗಳಿವೆ. ಅವುಗಳ ಪೈಕಿ ಒಂದು 'ಆಸ್ಟ್ರೇಲಿಯದ ಲೋಕಲ್ ಹೀರೊ'. ಈ ಪ್ರಶಸ್ತಿಯನ್ನು ತೇಜಿಂದರ್ ಪಡೆದುಕೊಂಡಿದ್ದಾರೆ.
Question 4 |
4. “ಗೇಮ್ಸ್ ಗೋಸ್ ಆನ್ (Games Goes On) ಪುಸ್ತಕದ ಲೇಖಕರು _____?
ಗ್ಯಾರಿ ಕ್ರಿಸ್ಟನ್ | |
ಅಲನ್ ಮ್ಯಾಗಿಲ್ ರೇ | |
ಸ್ಟುವರ್ಟ್ ಬರ್ಡನ್ | |
ಅನಿಲ್ ಕುಂಬ್ಳೆ |
ಗೇಮ್ಸ್ ಗೋಸ್ ಆನ್ ಪುಸ್ತಕವನ್ನ ಆಸ್ಟ್ರೇಲಿಯಾದ ನಿರೂಪಕ ಅಲನ್ ಮ್ಯಾಗಿಲ್ ರೇ ಬರೆದಿದ್ದಾರೆ. ಕ್ರಿಕಟ್ ಆಟದೊಂದಿಗೆ ಸರಿಸುಮಾರು ಐವತ್ತು ವರ್ಷಗಳಿಂದ ಒಡನಾಟ ಹೊಂದಿರುವ ಅನುಭವವನ್ನು ಅಲನ್ ಅವರು ಪುಸ್ತಕದಲ್ಲಿ
Question 5 |
5.39ನೇ ಜಮ್ನಲಾಲ್ ಬಜಾಜ್ ಫೌಂಡೇಷನ್ ಪ್ರಶಸ್ತಿಗೆ ಆಯ್ಕೆಯಾಗಿರುವ “ಶೇಕ್ ರಚೆದ್ ಘನೌಚಿ” ರವರು ಯಾವ ದೇಶದವರು?
ಟುನೇಷಿಯಾ | |
ಅಲ್ಜೀರಿಯಾ | |
ಮ್ಯಾನ್ಮಾರ್ | |
ಮಲೇಷಿಯಾ |
ಪ್ರಸಿದ್ದ ಗಾಂಧೀವಾದಿ ಮತ್ತು ಟುನೇಷಿಯಾದ ಎನ್ನಹದ ಪಕ್ಷದ ಅಧ್ಯಕ್ಷ ಶೇಕ್ ರಚೆದ್ ಘನೌಚಿ ಅವರನ್ನು 2016 ಜಮ್ನಲಾಲ್ ಬಜಾಜ್ ಫೌಂಡೇಷನ್ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ಈ ಬಾರಿಯ ಪ್ರಶಸ್ತಿಗೆ ಒಟ್ಟು ನಾಲ್ಕು ಜನರನ್ನು ಆಯ್ಕೆಮಾಡಲಾಗಿದ್ದು, ಘನೌಚಿ ಸಹ ಒಬ್ಬರು.
Question 6 |
6.ಗರ್ಭೀಣಿ ಸ್ತ್ರೀಯರಿಗೆ ಉಚಿತ ಆರೋಗ್ಯ ತಪಾಸಣೆ ಸೌಲಭ್ಯ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಯಾವ ಯೋಜನೆಯನ್ನು ಇತ್ತೀಚೆಗೆ ಜಾರಿಗೊಳಿಸಿದೆ?
ಮಾತೃತ್ವ ಸಹಭಾಗಿತ್ವ ಯೋಜನೆ | |
ಸುರಕ್ಷಿತ ಮಾತೃತ್ವ ಅಭಿಯಾನ | |
ಸುರಕ್ಷಿತ ಮಹಿಳಾ ಅಭಿಯಾನ | |
ಮಾತೃತ್ವ ಆರೋಗ್ಯ ಅಭಿಯಾನ |
ಗರ್ಭೀಣಿ ಸ್ರೀಯರಿಗೆ ಉಚಿತ ಆರೋಗ್ಯ ತಪಾಸಣೆ ಸೌಲಭ್ಯ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಸುರಕ್ಷಿತ ಮಾತೃತ್ವ ಅಭಿಯಾನ ಜಾರಿಗೊಳಿಸಿದೆ. ಕೇಂದ್ರ ಆರೋಗ್ಯ ಸಚಿವ ಜೆ ಪಿ ನಡ್ಡಾ ಅವರು ಈ ಯೋಜನೆಗೆ ನವದೆಹಲಿಯಲ್ಲಿ ಚಾಲನೆ ನೀಡಿದರು. ಇದರಡಿ ಸರ್ಕಾರಿ ಆರೋಗ್ಯ ಕೇಂದ್ರ ಮತ್ತು ಆಸ್ಪತ್ರೆಗಳಲ್ಲಿ ಗರ್ಭೀಣಿ ಸ್ರೀಯರಿಗೆ ಉಚಿತ ಆರೋಗ್ಯ ತಪಾಸಣೆ ಮಾಡಲಾಗುವುದು.
Question 7 |
7.2016 ಬಿಎನ್ ಪಿ ಪರಿಬಾಸ್ ಮಾಸ್ಟರ್ಸ್ ಪುರುಷರ ಡಬ್ಬಲ್ಸ್ ನಲ್ಲಿ ಪ್ರಶಸ್ತಿ ಗೆದ್ದ ಜೋಡಿ ಯಾವುದು?
ಹೆನ್ರಿ ಕೊಂಟಿನೇನ್ ಮತ್ತು ಜಾನ್ ಪೀರ್ಸ್ | |
ಪೈರಿ ಹ್ಯೂಗೆಸ್ ಹರ್ಬಟ್ ಮತ್ತು ನಿಕೋಲಸ್ ಮಹುತ್ | |
ಹೆನ್ರಿ ಕೊಂಟಿನೇನ್ ಮತ್ತು ನಿಕೋಲಸ್ ಮಹುತ್ | |
ಜಾನ್ ಪೀರ್ಸ್ ಮತ್ತು ಪೈರಿ ಹ್ಯೂಗೆಸ್ ಹರ್ಬಟ್ |
ಹೆನ್ರಿ ಕೊಂಟಿನೇನ್ ಮತ್ತು ಜಾನ್ ಪೀರ್ಸ್ ಜೋಡಿ 2016 ಬಿ ಎನ್ ಪಿ ಪರಿಬಾಸ್ ಮಾಸ್ಟರ್ಸ್ ಟೂರ್ನಿಯ ಪುರುಷರ ಡಬ್ಬಲ್ಸ್ ವಿಭಾಗದಲ್ಲಿ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಅಗ್ರ ಶ್ರೇಯಾಂಕಿತ ಜೋಡಿ ಪೈರಿ ಹ್ಯೂಗೆಸ್ ಹರ್ಬಟ್ ಮತ್ತು ನಿಕೋಲಸ್ ಮಹುತ್ ಸೋಲಿಸುವ ಮೂಲಕ ಪ್ರಶಸ್ತಿ ಪಡೆದುಕೊಂಡಿತು.
Question 8 |
8.ಇತ್ತೀಚೆಗೆ “ಐಐಟಿ ಖರಗ್ ಪುರ” ವಿಜ್ಞಾನಿಗಳು ಪುರಾಣದಲ್ಲಿ ಉಲ್ಲೇಖವಾಗಿರುವ “ಚಂದ್ರಭಾಗ” ನದಿ ಯಾವ ರಾಜ್ಯದಲ್ಲಿ ಅಸ್ತಿತ್ವದಲ್ಲಿತ್ತು ಎಂದು ಪತ್ತೆಹಚ್ಚಿದ್ದಾರೆ?
ಕೇರಳ | |
ಬಿಹಾರ | |
ಒಡಿಶಾ | |
ಪಶ್ಚಿಮ ಬಂಗಾಳ |
ಐಐಟಿ ಖರಗ್ ಪುರ” ವಿಜ್ಞಾನಿಗಳು ಪುರಾಣದಲ್ಲಿ ಉಲ್ಲೇಖವಾಗಿರುವ “ಚಂದ್ರಭಾಗ” ನದಿಯು ಅಸ್ತಿತ್ವದಲ್ಲಿತ್ತು ಎಂದು ಹೇಳಿದ್ದಾರೆ. ಒಡಿಶಾದ ಪ್ರಸಿದ್ದ ಸೂರ್ಯ ದೇವಸ್ಥಾನದಿಂದ ಎರಡು ಕಿ.ಮೀ ದೂರದಲ್ಲಿ ಈ ನದಿ ಹರಿಯುತ್ತಿತ್ತು ಎನ್ನಲಾಗಿದೆ. ಉಪಗ್ರಹ ಆಧರಿತ ಚಿತ್ರಗಳನ್ನು ವಿಶ್ಲೇಷಿಸಿ ನದಿ ಕುರುಹನ್ನು ಪತ್ತೆಹಚ್ಚಲಾಗಿದೆ.
Question 9 |
9.2016 ಬಿಟ್ಬರ್ಗರ್ ಓಪನ್ ಬ್ಯಾಡ್ಮಿಂಟನ್ ಪ್ರಶಸ್ತಿಯನ್ನು ಗೆದ್ದವರು ಯಾರು?
ಆದಿತ್ಯಾ ಮೆಹ್ತಾ | |
ಶಿ ಯೂಕಿ | |
ಸೌರಭ್ ವರ್ಮಾ | |
ಯೂ ಥಾಂಟ್ |
ಚೀನಾದ ಶಿ ಯೂಕಿ ರವರು ಭಾರತದ ಸೌರಭ್ ವರ್ಮಾ ರವರನ್ನು ಮಣಿಸುವ ಮೂಲಕ ಬಿಟ್ಬರ್ಗರ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಫ್ರೆಂಚ್ ಓಪನ್ ಸೂಪರ್ ಸರಣಿ ಗೆದ್ದುಕೊಂಡಿದ್ದ ಚೀನಾದ ಆಟಗಾರನಿಗೆ ಇದು ಎರಡನೇ ಪ್ರಶಸ್ತಿಯಾಗಿದೆ. ವಿಶ್ವ ರ್ಯಾಂಕಿಂಗ್ನಲ್ಲಿ 57ನೇ ಸ್ಥಾನದಲ್ಲಿರುವ ಸೌರಭ್ ಮೂರನೇ ಟೂರ್ನಿಯಲ್ಲಿ ರನ್ನರ್ ಅಪ್ ಆಗಿದ್ದಾರೆ. ಬೆಲ್ಜಿಯಂ, ಪೋಲೆಂಡ್ ಬ್ಯಾಡ್ಮಿಂಟನ್ ಚಾಂಪಿ ಯನ್ಷಿಪ್ ಗಳಲ್ಲಿ ಅವರು ಎರಡನೇ ಸ್ಥಾನ ಪಡೆದಿದ್ದರು.
Question 10 |
10. ಆಫ್ರಿಕಾದ “ಪೆಂಬಾ” ಮತ್ತು “ಜಂಜೀಬರ್” ದ್ವೀಪ್ರ ಪ್ರದೇಶಗಳು ಈ ಕೆಳಗಿನ ಯಾವುದರ ಬೇಸಾಯಕ್ಕೆ ಪ್ರಸಿದ್ದಿ ಹೊಂದಿವೆ?
ಕಬ್ಬು | |
ತಂಬಾಕು | |
ಲವಂಗ | |
ಕಾಫಿ |
[button link=”http://www.karunaduexams.com/wp-content/uploads/2016/11/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ನವೆಂಬರ್-6.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ