ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ನವೆಂಬರ್-7, 2016
Question 1 |
1. ದೇಶದ ಮೊದಲ “ದ್ರವೀಕೃತ ನೈಸರ್ಗಿಕ ಅನಿಲ (CNG)” ಚಾಲಿತ ಬಸ್ ಸೇವೆಗೆ ಯಾವ ರಾಜ್ಯದಲ್ಲಿ ಚಾಲನೆ ನೀಡಲಾಯಿತು?
ಕೇರಳ | |
ಮಧ್ಯ ಪ್ರದೇಶ | |
ಮಹಾರಾಷ್ಟ್ರ | |
ಗುಜರಾತ್ |
ದೇಶದ ಮೊದಲ “ದೃವೀಕೃತ ನೈಸರ್ಗಿಕ ಅನಿಲ” ಚಾಲಿತ ಬಸ್ ಸೇವೆ ಕೇರಳದ ತಿರುವಂತಪುರಂನಲ್ಲಿ ಚಾಲನೆ ನೀಡಲಾಯಿತು. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಈ ಬಸ್ಸುಗಳ ಪ್ರಯೋಗಾರ್ಥ ಚಾಲನೆಯನ್ನು ಉದ್ಘಾಟಿಸಿದರು. ಪೆಟ್ರೋನೆಟ್ ಎಲ್ಎನ್ ಜಿ, ಇಂಡಿಯನ್ ಆಯಿಲ್ ಕಾರ್ಪೋರೇಶನ್ ಮತ್ತು ಟಾಟಾ ಮೋಟಾರ್ಸ್ ಲಿಮಿಟೆಡ್ ಈ ಬಸ್ಸ್ ಸೇವೆಯನ್ನು ಆರಂಭಿಸಿವೆ.
Question 2 |
2.2016ನೇ ಸಾಲಿನ ದೇಶದ ಸಾವಿರ ಆಕರ್ಷಕ ಬ್ರ್ಯಾಂಡ್ಗಳ ಪಟ್ಟಿಯಲ್ಲಿ ಅತ್ಯಂತ ಆಕರ್ಷಕ ಬ್ರಾಂಡ್ ಸ್ಥಾನ ಯಾವ ಸಂಸ್ಥೆಗೆ ಲಭಿಸಿದೆ?
ಎಲ್ ಜಿ | |
ಟೈಟಾನ್ | |
ಸ್ಯಾಮ್ ಸಂಗ್ | |
ಡೆಲ್ |
2016ನೇ ಸಾಲಿನ ದೇಶದ ಸಾವಿರ ಆಕರ್ಷಕ ಬ್ರ್ಯಾಂಡ್ಗಳ ಪಟ್ಟಿಯಲ್ಲಿ ದಕ್ಷಿಣ ಕೊರಿಯಾದ ಎಲ್ಜಿ, ಭಾರತದ ಅತ್ಯಂತ ಆಕರ್ಷಕ ಬ್ರ್ಯಾಂಡ್ ಎಂಬ ಹೆಗ್ಗಳಿಕೆ ಸಂಪಾದಿಸಿದೆ. ಕಳೆದ ವರ್ಷ ಎರಡನೇ ಸ್ಥಾನದಲ್ಲಿದ್ದ ಎಲ್ಜಿ ಪ್ರಸಕ್ತ ವರ್ಷ ಅಗ್ರ ಸ್ಥಾನಕ್ಕೇರಿದೆ. ಡೆಲ್, ಸೋನಾಟಾ, ಟೈಟಾನ್, ವಿಪ್ರೊ, ಕಿಂಗ್ಫಿಷರ್ ಸೇರಿದಂತೆ ಬೆಂಗಳೂರು ಮೂಲದ 10 ಬ್ರ್ಯಾಂಡ್ಗಳು ಸ್ಥಾನಗಳಿಸಿವೆ. ದೇಶದ 16 ಪ್ರಮುಖ ನಗರಗಳಲ್ಲಿ ಮುಂಬೈ ಮೂಲದ ಟಿಆರ್ಎ ಖಾಸಗಿ ಸಂಶೋಧನಾ ಸಂಸ್ಥೆ ನಡೆಸಿದ ಸಮೀಕ್ಷಾ ವರದಿ ಈ ವಿಷಯವನ್ನು ಬಹಿರಂಗಪಡಿಸಿದೆ. 'ಸ್ವತಂತ್ರ ಮತ್ತು ವೈಜ್ಞಾನಿಕವಾಗಿ ಸಂಸ್ಥೆ ನಡೆಸಿದ ಮೂರನೇ ಸಮೀಕ್ಷೆಯಲ್ಲಿ ವಿವಿಧ ಸ್ತರದ 2,338 ಜನರನ್ನು ಸಂಪರ್ಕಿಸಿ ಪಟ್ಟಿಯನ್ನು ಸಿದ್ದಪಡಿಸಲಾಗಿದೆ.
Question 3 |
3.ಇತ್ತೀಚೆಗೆ ನಿಧನರಾದ “ಕನು ಭಾಯ್” ರವರು _____?
ವಿಜ್ಞಾನಿ | |
ಪತ್ರಕರ್ತ | |
ಕ್ರೀಡಾಪಟು | |
ಲೇಖಕ |
ಖ್ಯಾತ ವಿಜ್ಞಾನಿ ಮತ್ತು ಮಹಾತ್ಮ ಗಾಂಧಿ ಅವರ ಮೊಮ್ಮಗ ಕನುಭಾಯ್ ಗಾಂಧಿ (87) ಅವರು ನಿಧನರಾದರು. ಕನುಭಾಯ್ ಅವರು ಗಾಂಧೀಜಿ ಅವರ ಮೂರನೇ ಮಗ ರಾಮದಾಸ್ ಗಾಂಧಿ ಅವರ ಮಗ.ನಾಸಾದಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ್ದ ಕಾನುಭಾಯ್ ಅವರು, ಬಾಲಕನಾಗಿದ್ದಾಗ ಗುಜರಾತ್ನ ದಂಡಿಯಲ್ಲಿ ಉಪ್ಪಿನ ಸತ್ಯಾಗ್ರಹದ ನೇತೃತ್ವ ವಹಿಸಿದ್ದ ಮಹಾತ್ಮ ಗಾಂಧಿ ಅವರ ಊರುಗೋಲನ್ನು ಎಳೆಯುತ್ತಿರುವ ಪ್ರಸಿದ್ಧ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.
Question 4 |
4. ಈ ಕೆಳಗಿನ ಯಾವ ದೇಶಗಳು “ಗಿಬ್ರಾಲ್ಟರ್ ಜಲಸಂಧಿ” ಯಿಂದ ಬೇರ್ಪಟ್ಟಿವೆ?
ಮೊರಾಕೊ ಮತ್ತು ಸ್ಪೇನ್ | |
ಪೋರ್ಚುಗಲ್ ಮತ್ತು ಸ್ಪೇನ್ | |
ಅಲ್ಜೀರಿಯಾ ಮತ್ತು ಸ್ಪೇನ್ | |
ಪೋರ್ಚುಗಲ್ ಮತ್ತು ಅಲ್ಜೀರಿಯಾ |
ಗಿಬ್ರಾಲ್ಟರ್ ಜಲಸಂಧಿ ಅಟ್ಲಾಂಟಿಕ್ ಮತ್ತು ಮೆಡಿಟೇರಿಯನ್ ಸಮುದ್ರವನ್ನು ಸಂಪರ್ಕಿಸುತ್ತದೆ ಹಾಗೂ ಮೊರಾಕೊ ಮತ್ತು ಸ್ಪೇನ್ ಅನ್ನು ಬೇರ್ಪಡಿಸುವ ಜಲಸಂಧಿಯಾಗಿದೆ.
Question 5 |
5. ಯಾವ ರಾಜ್ಯದಲ್ಲಿ ಭಾರತೀಯ ಸೇನೆ “ಆಪರೇಷನ್ ಸ್ಕೂಲ್ ಚಲೋ” ಕಾರ್ಯಾಚರಣೆ ಆರಂಭಿಸಿದೆ?
ರಾಜಸ್ತಾನ | |
ಜಮ್ಮು ಮತ್ತು ಕಾಶ್ಮೀರ | |
ಗುಜರಾತ್ | |
ಹರಿಯಾಣ |
ಭಾರತೀಯ ಸೇನೆ ದಕ್ಷಿಣ ಕಾಶ್ಮೀರದಲ್ಲಿ ಆಪರೇಷನ್ ಸ್ಕೂಲ್ ಚಲೋ ಎಂಬ ವಿಶಿಷ್ಠ ಕಾರ್ಯಾಚರಣೆಯನ್ನು ಆರಂಭಿಸಿದೆ. ಆಯ್ದ ಪ್ರದೇಶಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ನೀಡುವುದು ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವುದು ಈ ಕಾರ್ಯಾಚರಣೆಯ ಉದ್ದೇಶ.
Question 6 |
6. 2016 WTA ಎಲೈಟ್ ಸಿಂಗಲ್ಸ್ ಟ್ರೋಫಿಯಲ್ಲಿ ಪ್ರಶಸ್ತಿ ಗೆದ್ದವರು ಯಾರು?
ಎಲಿನಾ ಸ್ವಿಟೊಲಿನ | |
ವಿಕ್ಟೋರಿಯ ಅಜೆರೆಂಕಾ | |
ಪೆಟ್ರಾ ಕ್ವಿಟೊವಾ | |
ಮಾರ್ಟಿನಾ ಹಿಂಗೀಸ್ |
ಚೆಝ್ ರಿಪಬ್ಲಿಕ್ ನ ಪೆಟ್ರಾ ಕ್ವಿಟೊವಾ ರವರು 2016 ಡ್ಬ್ಲೂಟಿಎ ಎಲೈಟ್ ಸಿಂಗಲ್ಸ್ ಟ್ರೋಫಿಯಲ್ಲಿ ಪ್ರಶಸ್ತಿ ಗೆದ್ದುಕೊಂಡರು. ಉಕ್ರೇನ್ ನ ಎಲಿನಾ ಸ್ವಿಟೊಲಿನ ಅವರನ್ನು 6-4, 6-2 ಸೆಟ್ ಗಳಿಂದ ಸೋಲಿಸಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.
Question 7 |
7. ಕೃತಕ ಮಳೆ ಅಥವಾ ಮೋಡ ಬಿತ್ತನೆಯಲ್ಲಿ ಬಳಸುವ ರಾಸಾಯನಿಕ ______?
ಸಿಲ್ವರ್ ಐಯೋಡೈಡ್ | |
ಪೋಟಾಷಿಯಂ ಬ್ರೊಮೈಟ್ | |
ಸಿಲ್ವರ್ ಆಕ್ಸೈಡ್ | |
ಪೊಟಾಷಿಯಂ ಪರ್ಮ್ಯಾಗ್ನೆಟ್ |
ಸಿಲ್ವರ್ ಐಯೋಡೈಡ್ ಅಥವಾ ಸಾಲಿಡ್ ಕಾರ್ಬನ್ ಡೈಆಕ್ಸೈಡ್ ಅನ್ನು ಕೃತಕ ಮಳೆ ಸೃಷ್ಟಿಗೆ ಬಳಸಲಾಗುತ್ತದೆ.
Question 8 |
8. ದೇಶದಲ್ಲೆ ಮೊದಲ ಬಾರಿಗೆ ಪೌರ ಕಾರ್ಮಿಕರಿಗೆ ಬಿಸಿಯೂಟ ನೀಡುವ ಯೋಜನೆಯನ್ನು ಜಾರಿಗೆ ತಂದ ರಾಜ್ಯ ಯಾವುದು?
ಮಹಾರಾಷ್ಟ್ರ | |
ಪಂಜಾಬ್ | |
ಕರ್ನಾಟಕ | |
ತಮಿಳುನಾಡು |
ಪೌರ ಕಾರ್ಮಿಕರಿಗೆ ಮಧ್ಯಾಹ್ನದ ಬಿಸಿಯೂಟ ನೀಡುವ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾಲನೆ ನೀಡಿದರು. ದೇಶದಲ್ಲೇ ಮೊದಲ ಬಾರಿಗೆ ಇಂತಹ ಯೋಜನೆಗೆ ಬಿಬಿಎಂಪಿಯಲ್ಲಿ ಚಾಲನೆ ನೀಡಲಾಗಿದೆ. 32 ಸಾವಿರ ಪೌರ ಕಾರ್ಮಿಕರಿಗೆ ಬಿಸಿಯೂಟ ಒದಗಿಸುವ ಯೋಜನೆ ಇದಾಗಿದೆ.
Question 9 |
9.ಮಧ್ಯಪ್ರದೇಶ ಸರ್ಕಾರ ನೀಡುವ ಪ್ರತಿಷ್ಠಿತ ರಾಷ್ಟ್ರೀಯ ಕಾಳಿದಾಸ ಸಮ್ಮಾನ್ ಪ್ರಶಸ್ತಿ 2016-17 ಯಾರಿಗೆ ನೀಡಲಾಗುತ್ತಿದೆ?
ಬನ್ಷಿ ಕೌಲ್ | |
ಅನುಪಮ ಖೇರ್ | |
ಸಬಿತಾ ಸಿಂಗ್ | |
ಗುರ್ಬಿನ್ ಕಾಂತ್ |
ರಾಷ್ಟ್ರೀಯ ಕಾಳಿದಾಸ ಸಮ್ಮಾನ್ 2016-17ನೇ ಸಾಲಿನ ಪ್ರಶಸ್ತಿಯನ್ನು ಬನ್ಷಿ ಕೌಲ್ ರವರಿಗೆ ನೀಡಲಾಗುತ್ತಿದೆ. 2015-16ನೇ ಸಾಲಿನ ಪ್ರಶಸ್ತಿಯನ್ನು ರಾಜ್ ಬಿಸರಿಯ ರವರಿಗೆ ನೀಡಲಾಗುತ್ತಿದೆ. ಕಾಳಿದಾಸ ಸಮ್ಮಾನ್ ಪ್ರಶಸ್ತಿ ಮಧ್ಯಪ್ರದೇಶದ ಪ್ರತಿಷ್ಠಿತ ಪ್ರಶಸ್ತಿಯಾಗಿದ್ದು ವಾರ್ಷಿಕವಾಗಿ ನೀಡಲಾಗುತ್ತದೆ. ಪ್ರಶಸ್ತಿಯು ರೂ 2 ಲಕ್ಷ ನಗದು ಮತ್ತು ಫಲಕವನ್ನು ಒಳಗೊಂಡಿದೆ.
Question 10 |
10. ವಿಶ್ವ ಆರೋಗ್ಯ ಸಂಸ್ಥೆಯ ತಂಬಾಕು ನಿಯಂತ್ರಣ ಚೌಕಟ್ಟು ಒಪ್ಪಂದ ಪಾಲುದಾರ ದೇಶಗಳ ಸಮಾವೇಶ ಯಾವ ದೇಶದಲ್ಲಿ ಆರಂಭಗೊಂಡಿದೆ?
ಚೀನಾ | |
ಅಮೆರಿಕ | |
ಭಾರತ | |
ರಷ್ಯಾ |
ವಿಶ್ವ ಆರೋಗ್ಯಸಂಸ್ಥೆಯ ತಂಬಾಕು ನಿಯಂತ್ರಣ ಚೌಕಟ್ಟು ಒಪ್ಪಂದದ ಪಾಲುದಾರ ದೇಶಗಳ ಸಮಾವೇಶದ (WHO Framework Convention on Tobacco Control (WHO FCTC)) ಏಳನೇ ಅಧಿವೇಶನವನ್ನು ಭಾರತ ಆಯೋಜಿಸಿದೆ. ಈ ಸಮಾವೇಶ ಆರಂಭವಾಗಿದ್ದು, ಎಫ್ಸಿಟಿಸಿ ಒಪ್ಪಂದಕ್ಕೆ ಸಹಿ ಮಾಡುವ ಎಲ್ಲ ದೇಶಗಳ ಪ್ರತಿನಿಧಿಗಳು ಈ ಸಮಾವೇಶದಲ್ಲಿ ಭಾಗವಹಿಸಿದ್ದಾರೆ. ಎಫ್ಸಿಟಿಸಿ ಎನ್ನುವುದು ಒಂದು ಸ್ವಯಂಸೇವಾ ಸಂಸ್ಥೆಯಾಗಿದ್ದು, ಇದು ತಂಬಾಕು ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿದೆ. ಈ ಸಂಸ್ಥೆಯು ತಂಬಾಕು ನಿಯಂತ್ರಣ ನೀತಿಗಳಿಗೆ ಪ್ರತಿಪಾದಿಸುತ್ತಿರುವುದು ಮಾತ್ರವಲ್ಲದೇ ವಿವಿಧ ದೇಶಗಳು ಅನುಸರಿಸಬೇಕಾದ ನಿರ್ಬಂಧನ ವಿಧಾನಗಳ ಬಗ್ಗೆಯೂ ಸಲಹೆ ನೀಡುತ್ತದೆ.
[button link=”http://www.karunaduexams.com/wp-content/uploads/2016/11/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ನವೆಂಬರ್-7.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
You done great job