ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ನವೆಂಬರ್-10, 2016

Question 1

1.ವಿಶ್ವ ಅಂಧರ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪ್ರಚಾರ ರಾಯಭಾರಿಯಾಗಿ ಯಾರು ನೇಮಕಗೊಂಡಿದ್ದಾರೆ?

A
ಸಚಿನ್ ತೆಂಡೂಲ್ಕರ್
B
ರಾಹುಲ್ ದ್ರಾವಿಡ್
C
ಅನಿಲ್ ಕುಂಬ್ಳೆ
D
ಸೌರವ್ ಗಂಗೂಲಿ
Question 1 Explanation: 
ರಾಹುಲ್ ದ್ರಾವಿಡ್:

2017ರ ಜನವರಿ 28ರಿಂದ ಫೆಬ್ರುವರಿ 12ವರೆಗೆ ಭಾರತದಲ್ಲಿ ನಡೆಯಲಿರುವ ವಿಶ್ವ ಅಂಧರ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ ಪ್ರಚಾರ ರಾಯಭಾರಿಯಾಗಿ ಭಾರತದ ಮಾಜಿ ಕ್ರಿಕೆಟ್ ಆಟಗಾರ ರಾಹುಲ್ ದ್ರಾವಿಡ್ ಅವರು ನೇಮಕಗೊಂಡಿದ್ದಾರೆ.

Question 2

2.ಇತ್ತೀಚೆಗೆ ನಿಧನರಾದ ಖ್ಯಾತ ಸಂಗೀತಗಾರ, ಕವಿ ಲಿಯೋನಾರ್ಡ್ ಕೋಹೆನ್ ಯಾವ ದೇಶದವರು?

A
ಬ್ರಿಟನ್
B
ಕೆನಡಾ
C
ಜರ್ಮನಿ
D
ರಷ್ಯಾ
Question 2 Explanation: 
ಕೆನಡಾ :

ಖ್ಯಾತ ಸಂಗೀತಗಾರ, ಕವಿ ಲಿಯೋನಾರ್ಡ್ ಕೋಹೆನ್ ನಿಧನರಾದರು.. ಕೆನಡಾದ ಮಾಂಟ್ರಿಯಲ್ ಮೂಲದ ಕೋಹೆನ್ ಕ್ಯಾಲಿಫೋರ್ನಿಯಾದಲ್ಲಿ ವಾಸವಿದ್ದರು. ತಮ್ಮ ಕೊನೆಯ ಆಲ್ಬಂ ‘ಯು ವಾಂಟ್ ಇಟ್ ಡಾರ್ಕರ್’ ಅನ್ನು ಕಳೆದ ತಿಂಗಳು ಬಿಡುಗಡೆ ಮಾಡಿದ್ದರು. ಅದರಲ್ಲಿ ತಮ್ಮ ಸಾವಿನ ಕುರಿತು ಉಲ್ಲೇಖಿಸಿದ್ದರು.

Question 3

3.ಏಳನೇ ವಿಶ್ವ ಕೇರಂ ಚಾಂಪಿಯನ್ ಷಿಪ್ ಮಹಿಳೆಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡ ದೇಶ ಯಾವುದು?

A
ಭಾರತ
B
ಶ್ರೀಲಂಕಾ
C
ಚೀನಾ
D
ಬಾಂಗ್ಲದೇಶ
Question 3 Explanation: 

ಯುಕೆಯ ಬರ್ಮಿಂಗ್ ಹಾಮ್ ನಲ್ಲಿ ನಡೆದ ಏಳನೇ ವಿಶ್ವ ಕೇರಂ ಚಾಂಪಿಯನ್ ಷಿಪ್ನಲ್ಲಿ ಭಾರತ ಮಹಿಳೆಯರ ತಂಡ ಶ್ರೀಲಂಕಾ ತಂಡವನ್ನು ಸೋಲಿಸಿ ಚಿನ್ನದ ಪದಕವನ್ನು ಗೆದ್ದುಕೊಂಡಿತು. ಪುರುಷರ ವಿಭಾಗದಲ್ಲಿ ಭಾರತ ತಂಡ ಶ್ರೀಲಂಕಾ ತಂಡಕ್ಕೆ ಶರಣಾಗುವ ಮೂಲಕ ಬೆಳ್ಳಿ ಪದಕವನ್ನು ತನ್ನದಾಗಿಸಿಕೊಂಡಿತ್ತು.

Question 4

4.ಸ್ಟೀಫನ್ ಎಡ್ಬರ್ಗ್ ಸ್ಪೋರ್ಟ್ಸ್ಮಾನ್ಶಿಪ್ ಪ್ರಶಸ್ತಿ (Stefan Edberg Sportsmanship Award) ಯನ್ನು ಯಾರಿಗೆ ನೀಡಲಾಗಿದೆ?

A
ರಫೆಲ್ ನಾಡೆಲ್
B
ರೋಜರ್ ಫೆಡರರ್
C
ನಿಕೋ ರೋಸ್ಬರ್ಗ್
D
ಉಸೇನ್ ಬೋಲ್ಟ್
Question 4 Explanation: 
ರೋಜರ್ ಫೆಡರರ್:

ಮಾಜಿ ವಿಶ್ವ ನಂ.1 ಟೆನ್ನಿಸ್ ಆಟಗಾರ ರೋಜರ್ ಫೆಡರರ್ ಅವರಿಗೆ ಸ್ಟೀಫನ್ ಎಡ್ಬರ್ಗ್ ಸ್ಪೋರ್ಟ್ಸ್ಮಾನ್ಶಿಪ್ ಪ್ರಶಸ್ತಿಯನ್ನು ನೀಡಲಾಗಿದೆ. ಫೆಡರರ್ ಅವರಿಗೆ ಇದು 12ನೇ ಪ್ರಶಸ್ತಿಯಾಗಿದೆ.

Question 5

5.ಭಾರತೀಯ ಅಂತರರಾಷ್ಟ್ರೀಯ ಸಿನಿಮೋತ್ಸವದ ಐಸಿಎಫ್ಟಿ ಯುನೆಸ್ಕೊ ಗಾಂಧಿ ಪದಕ ವಿಭಾಗಕ್ಕೆ ನಾಮ ನಿರ್ದೇಶನಗೊಂಡಿರುವ ಕನ್ನಡ ಸಿನಿಮಾ ಯಾವುದು?

A
ತಿಥಿ
B
ಹರಿಕಥಾ ಪ್ರಸಂಗ
C
ಅಲ್ಲಮ
D
ರಾಮಾ ರಾಮಾ ರೇ
Question 5 Explanation: 
ಅಲ್ಲಮ:

ಭಾರತೀಯ ಅಂತರರಾಷ್ಟ್ರೀಯ ಸಿನಿಮೋತ್ಸವದ ಐಸಿಎಫ್ಟಿ ಯುನೆಸ್ಕೊ ಗಾಂಧಿ ಪದಕ ವಿಭಾಗಕ್ಕೆ ಭಾರತೀಯ ಸಿನಿಮಾದ ಪ್ರವೇಶವಾಗಿ ಟಿ.ಎಸ್. ನಾಗಾಭರಣ ನಿರ್ದೇಶನದ ಕನ್ನಡದ 'ಅಲ್ಲಮ' ಚಿತ್ರ ನಾಮನಿರ್ದೇಶನಗೊಂಡಿದೆ. 12ನೇ ಶತಮಾನದ ವಚನಕಾರ ಅಲ್ಲಮ ಪ್ರಭುವಿನ ಬದುಕು-ವಚನಗಳ ಕುರಿತಾದ ಈ ಚಿತ್ರದಲ್ಲಿ ಧನಂಜಯ್, ಮೇಘನಾ ರಾಜ್, 'ಸಂಚಾರಿ' ವಿಜಯ್ ಮುಂತಾದವರು ನಟಿಸಿದ್ದಾರೆ.ಮಹಾತ್ಮ ಗಾಂಧಿ ಅವರ ಶಾಂತಿ, ಸಹನೆ, ಅಹಿಂಸೆಯ ತತ್ವಗಳನ್ನು ಪ್ರತಿಬಿಂಬಿಸುವ ಚಿತ್ರಕ್ಕೆ ಪ್ಯಾರಿಸ್ ಅಂತರರಾಷ್ಟ್ರೀಯ ಸಿನಿಮಾ, ಟೆಲಿ ವಿಷನ್ ಮತ್ತು ಧ್ವನಿ-ದೃಶ್ಯ ಸಂವಹನ ಮಂಡಳಿಯು ಯುನೆ ಸ್ಕೊದ ಸಹ ಯೋಗದಲ್ಲಿ ಈ ಪ್ರತಿಷ್ಠಿತ ಗಾಂಧಿ ಪದಕ ಮತ್ತು ಪ್ರಮಾಣಪತ್ರ ನೀಡುತ್ತಿದೆ.

Question 6

6.“2016 ಗೋಲ್ಡ್ ಸ್ಮಿತ್ ಪ್ರಶಸ್ತಿ (Goldsmith Prize)” ಪಡೆದ ಮೈಕ್ ಮೆಕ್ಕಾರ್ಮ್ಯಾಕ್ ಯಾವ ದೇಶದವರು?

A
ಐಸ್ ಲ್ಯಾಂಡ್
B
ಬ್ರೆಜಿಲ್
C
ಪೆರು
D
ಪೋರ್ಚುಗಲ್
Question 6 Explanation: 
ಐಸ್ ಲ್ಯಾಂಡ್:

ಐಸ್ ಲ್ಯಾಂಡ್ನ ಮೈಕ್ ಮೆಕ್ಕಾರ್ಮ್ಯಾಕ್ ರವರು 2016 ಗೋಲ್ಡ್ ಸ್ಮಿತ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಮೈಕ್ ಅವರ ಕಾದಂಬರಿ “ಸೋಲಾರ್ ಬೋನ್ಸ್ (Solar Bones)”ಗೆ ಈ ಪ್ರಶಸ್ತಿ ಲಭಿಸಿದೆ. ಇದು ಬ್ರಿಟನ್ ನ ವಾರ್ಷಿಕ ಸಾಹಿತ್ಯ ಪ್ರಶಸ್ತಿಯಾಗಿದೆ.

Question 7

7. ಶಾಂತಿ ಮತ್ತು ಅಭಿವೃದ್ದಿ ವಿಶ್ವ ವಿಜ್ಞಾನ ದಿನ (World Science Day for Peace and Development) ಯಾವ ದಿನದಂದು ಆಚರಿಸಲಾಗುತ್ತದೆ?

A
ನವೆಂಬರ್ 9
B
ನವೆಂಬರ್ 10
C
ನವೆಂಬರ್ 11
D
ನವೆಂಬರ್ 12
Question 7 Explanation: 
ನವೆಂಬರ್ 11:

ಶಾಂತಿ ಮತ್ತು ಅಭಿವೃದ್ದಿ ವಿಶ್ವ ವಿಜ್ಞಾನ ದಿನವನ್ನು ಪ್ರತಿವರ್ಷ ನವೆಂಬರ್ 10 ರಂದು ಆಚರಿಸಲಾಗುತ್ತದೆ. ಸಮಾಜದಲ್ಲಿ ವಿಜ್ಞಾನದ ಪ್ರಾಮುಖ್ಯತೆಯನ್ನು ಜಗತ್ತಿಗೆ ತೋರುವುದು ಮತ್ತು ವೈಜ್ಞಾನಿಕ ಸಮಸ್ಯೆಗಳನ್ನು ಚರ್ಚಿಸಲು ಸಾರ್ವಜನಿಕರನ್ನು ತೊಡಗಿಸಿಕೊಳ್ಳುವುದು ಈ ದಿನದ ಮಹತ್ವ. ಸೆಲೆಬ್ರೆಟಿಂಗ್ ಸೈನ್ಸ್ ಸೆಂಟರ್ಸ್ ಅಂಡ್ ಸೈನ್ಸ್ ಮ್ಯೂಸಿಯಮ್ಸ್ ಈ ವರ್ಷದ ಥೀಮ್.

Question 8

8.“ಬಿಯಾಂಡ್ ದಿ ಲಾಸ್ಟ್ ಬ್ಲೂ ಮೌಂಟೇನ್: ಎ ಲೈಫ್ ಆಫ್ ಜೆ.ಆರ್.ಡಿ ಟಾಟಾ” ಪುಸ್ತಕದ ಲೇಖಕರು ಯಾರು?

A
ಸೈರಸ್ ಮಿಸ್ತ್ರಿ
B
ರತನ್ ಟಾಟಾ
C
ಆರ್ ಎಂ ಲಾಲ
D
ಕಿರಣ್ ಕಾರ್ತಿಕೇಯನ್
Question 8 Explanation: 
ಆರ್ ಎಂ ಲಾಲ:

“ಬಿಯಾಂಡ್ ದಿ ಲಾಸ್ಟ್ ಬ್ಲೂ ಮೌಂಟೇನ್: ಎ ಲೈಫ್ ಆಫ್ ಜೆ.ಆರ್.ಡಿ ಟಾಟಾ” ಪುಸ್ತಕದ ಲೇಖಕರು ಆರ್ ಎಂ ಲಾಲ. ಈ ಪುಸ್ತಕ ಜೆ.ಆರ್.ಡಿ ಟಾಟಾ ಅವರು ಜೀವನ ಚರಿತ್ರೆ.

Question 9

9. “2016 ಗೋಲ್ಡನ್ ಪೀಕಾಕ್ ಆವಾರ್ಡ್ ಫಾರ್ ಕಾರ್ಪೋರೇಟ್ ಗವರ್ನೆನ್ಸ್” ಪ್ರಶಸ್ತಿ ಪಡೆದ ಸಂಸ್ಥೆ ಯಾವುದು?

A
ಭಾರತ್ ಎಲೆಕ್ಟ್ರಿಕಲ್ಸ್ ಲಿಮಿಟೆಡ್
B
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್
C
ಭಾರತ್ ಹೆವಿ ಎಲೆಕ್ಟ್ರಿಕಲ್ ಲಿಮಿಟೆಡ್
D
ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್
Question 9 Explanation: 
ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್:

ಮಹಾರತ್ನ ಸ್ಥಾನಮಾನ ಸಂಸ್ಥೆ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್ ಗೆ 2016 ಗೋಲ್ಡನ್ ಪೀಕಾಕ್ ಆವಾರ್ಡ್ ಫಾರ್ ಕಾರ್ಪೋರೇಟ್ ಗವರ್ನೆನ್ಸ್ ಪ್ರಶಸ್ತಿ ಲಭಿಸಿದೆ.

Question 10

10. ಈ ಕೆಳಗಿನವುಗಳಲ್ಲಿ ಅನುವಂಶೀಯ ಕಾಯಿಲೆ (Heriditary) ಅಲ್ಲದು _____?

A
ಲುಕೇಮಿಯ
B
ಹಿಮೋಫಿಲಿಯಾ
C
ಥಾಲೆಸ್ಮಿಯ
D
ಕಲರ್ ಬ್ಲೈಂಡ್ನೆಸ್
Question 10 Explanation: 
ಲುಕೇಮಿಯ
There are 10 questions to complete.

[button link=”http://www.karunaduexams.com/wp-content/uploads/2016/11/ಪ್ರಚಲಿತ-ವಿದ್ಯಮಾನ-ಮತ್ತುಸಾಮಾನ್ಯ-ಜ್ಞಾನ-ಕ್ವಿಜ್-ನವೆಂಬರ್-10.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

2 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ನವೆಂಬರ್-10, 2016”

  1. BHARAT

    PEACE AND DEVELOPMENT SCIENCE DAY TELL ME EXACT DATE NOV 10 OR 11?

Leave a Comment

This site uses Akismet to reduce spam. Learn how your comment data is processed.