ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್, ಪಿಎಸ್ಐ, ಪಿಡಿಓ, ಎಫ್ ಡಿ ಎ, ಎಸ್ ಡಿ ಪರೀಕ್ಷೆಗಳಿಗೆ ಸಹಾಯವಾಗಲಿದೆ.

ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -18

Question 1
1.ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಕರೆಯಲಾಗುವ “ಕಪ್ಪತಗುಡ್ಡ” ಯಾವ ಜಿಲ್ಲೆಯಲ್ಲಿದೆ?
A
ಬಿಜಾಪುರ
B
ರಾಯಚೂರು
C
ಗದಗ
D
ಧಾರಾವಾಡ
Question 1 Explanation: 
ಗದಗ:

ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಕರೆಯಲಾಗುವ ಕಪ್ಪತಗುಡ್ಡ ಗದಗ ಜಿಲ್ಲೆಯಲಿದೆ. ಇತ್ತೀಚೆಗೆ ಕಪ್ಪತಗುಡ್ಡಕ್ಕೆ ನೀಡಿದ್ದ ‘ಸಂರಕ್ಷಿತ ಪ್ರದೇಶ’ ಸ್ಥಾನಮಾನವನ್ನು ರಾಜ್ಯ ಸರ್ಕಾರ ವಾಪಸ್ ಪಡೆದಿರುವುದರಿಂದ ಇದು ಸುದ್ದಿಯಲಿದೆ. ರಾಜ್ಯ ಸರ್ಕಾರ 2015ರ ಡಿಸೆಂಬರ್ 19ರಂದು ಕಪ್ಪತಗುಡ್ಡವನ್ನು ‘ಸಂರಕ್ಷಿತ ಅರಣ್ಯ ಪ್ರದೇಶ’ ಎಂದು ಘೋಷಿಸಿತ್ತು.

Question 2

2. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ನೀಡುವ ಪಾರ್ತಿಸುಬ್ಬ ಪ್ರಶಸ್ತಿಗೆ ಪ್ರಸ್ತಕ ಸಾಲಿನಲ್ಲಿ ಯಾರಿಗೆ ನೀಡಲಾಗುತ್ತಿದೆ?

A
ಗೋಪಾಲಕೃಷ್ಣ ಕುರೂಪ್
B
ಡಾ ಎಂ ಪ್ರಭಾಕರ ಜೋಶಿ
C
ಹೇರಂಜಾಲು ಸುಬ್ಬಣ್ಣ ಗಾಣಿಗ
D
ಸುಬ್ರಾಯ ವೆಂಕಟರಮಣ ಭಟ್ಟ
Question 2 Explanation: 
ಡಾ ಎಂ ಪ್ರಭಾಕರ ಜೋಶಿ:

ಯಕ್ಷಗಾನದ ಹಿರಿಯ ವಿದ್ವಾಂಸ, ಅರ್ಥಧಾರಿ ಡಾ.ಎಂ. ಪ್ರಭಾಕರ ಜೋಶಿರವರನ್ನು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ನೀಡುವ ಪಾರ್ತಿಸುಬ್ಬ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ. ‘ಪ್ರಶಸ್ತಿ ₹1 ಲಕ್ಷ ನಗದು ಹಾಗೂ ಫಲಕವನ್ನು ಒಳಗೊಂಡಿದೆ’. ‘ಉಪನ್ಯಾಸಕರಾಗಿ ಪ್ರಾಂಶುಪಾಲ ರಾಗಿ ನಿವೃತ್ತರಾಗಿರುವ ಜೋಶಿ ಅವರು ಯಕ್ಷಗಾನದ ಕೆಲವೇ ವಿಮರ್ಶಕರಲ್ಲಿ ಒಬ್ಬರು. ನಾಲ್ಕು ದಶಕಗಳಿಗೂ ಮೀರಿ ಅಗ್ರಪಂಕ್ತಿಯ ಅರ್ಥದಾರಿಯಾಗಿದ್ದಾರೆ. ಹಲವು ಯಕ್ಷಗಾನ ಕೃತಿಗಳನ್ನು ರಚಿಸಿದ್ದಾರೆ’.

Question 3

3. 2015ನೇ ಸಾಲಿನ ಟಿ. ಚೌಡಯ್ಯ ಪ್ರಶಸ್ತಿಗೆ ಆಯ್ಕೆಯಾಗಿರುವ ಸುರೇಶ್ ತಲ್ವಾಲಕರ್ ಪ್ರಸಿದ್ದ ____ ಕಲಾವಿದ?

A
ತಬಲಾ
B
ಸರೋದ್
C
ಪಿಟೀಲು
D
ಕೊಳಲು
Question 3 Explanation: 
ತಬಲಾ:

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡುವ 2015ನೇ ಸಾಲಿನ ಟಿ. ಚೌಡಯ್ಯ ಪ್ರಶಸ್ತಿಗೆ ಮುಂಬೈನ ಹಿರಿಯ ತಬಲಾ ಕಲಾವಿದ ಸುರೇಶ್ ತಲ್ವಾಲಕರ್ ರವರನ್ನು ಆಯ್ಕೆಮಾಡಲಾಗಿದೆ. ಚೌಡಯ್ಯ ಪ್ರಶಸ್ತಿ ₹ 5 ಲಕ್ಷ ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿದೆ. ಸಂತ ಶಿಶುನಾಳ ಷರೀಫ ಪ್ರಶಸ್ತಿಗೆ ಸುಗಮ ಸಂಗೀತ ಗಾಯಕಿ ರತ್ನಮಾಲಾ ಪ್ರಕಾಶ್ ಅವರು ಭಾಜನರಾಗಿದ್ದಾರೆ. ಶಿಶುನಾಳ ಷರೀಫ ಪ್ರಶಸ್ತಿ ₹ 3 ಲಕ್ಷ ನಗದು ಮತ್ತು ಸ್ಮರಣಿಕೆ ಒಳಗೊಂಡಿದೆ.

Question 4

4. ಕರ್ನಾಟಕ ಪರೋಪಕಾರಿ ಹಾಗೂ ವೈದ್ಯಕೀಯ ವೃತ್ತಿಪರರು (ತುರ್ತುಸ್ಥಿತಿಯಲ್ಲಿ ರಕ್ಷಣೆ ಮತ್ತು ನಿಯಂತ್ರಣ) ಮಸೂದೆ–2016 ಸಂಬಂಧಿಸಿದಂತೆ ಈ ಹೇಳಿಕೆಗಳನ್ನು ಗಮನಿಸಿ:

ಅ) ಇದರಡಿ ಅಪಘಾತದಲ್ಲಿ ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ಕೊಡಿಸಲು ಮುಂದಾಗುವ ಪರೋಪಕಾರಿಗೆ ₹1,500 ನಗದು ಪುರಸ್ಕಾರ ನೀಡಲಾಗುವುದು

ಆ) ಸುಪ್ರೀಂಕೋರ್ಟ್ನ ನಿರ್ದೇಶನದ ಅನುಸಾರ ಇಂತಹ ಕಾಯ್ದೆಯನ್ನು ದೇಶದಲ್ಲಿಯೆ ಮೊದಲ ಬಾರಿಗೆ ಕರ್ನಾಟಕ ಜಾರಿಗೊಳಿಸುತ್ತಿದೆ

ಈ ಮೇಲಿನ ಯಾವ ಹೇಳಿಕೆ/ಹೇಳಿಕೆಗಳು ಸರಿಯಾಗಿವೆ?

A
ಹೇಳಿಕೆ ಒಂದು ಮಾತ್ರ
B
ಹೇಳಿಕೆ ಎರಡು ಮಾತ್ರ
C
ಎರಡು ಹೇಳಿಕೆ ಸರಿ
D
ಎರಡು ಹೇಳಿಕೆ ತಪ್ಪ
Question 4 Explanation: 
ಎರಡು ಹೇಳಿಕೆ ಸರಿ:

ರಾಜ್ಯ ಸಚಿವ ಸಂಪುಟ ‘ಕರ್ನಾಟಕ ಪರೋಪಕಾರಿ ಹಾಗೂ ವೈದ್ಯಕೀಯ ವೃತ್ತಿಪರರು (ತುರ್ತುಸ್ಥಿತಿಯಲ್ಲಿ ರಕ್ಷಣೆ ಮತ್ತು ನಿಯಂತ್ರಣ) ಮಸೂದೆ–2016’ ಕ್ಕೆ ಅನುಮೋದನೆ ನೀಡಿದೆ. ಅಪಘಾತದಲ್ಲಿ ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ಕೊಡಿಸಲು ಮುಂದಾಗುವ ಪರೋಪಕಾರಿಗೆ ₹1,500 ನಗದು ಪುರಸ್ಕಾರ ನೀಡಲು ಹಾಗೂ ಪೊಲೀಸರಿಂದಾಗುವ ಕಿರುಕುಳ ತಪ್ಪಿಸುವುದು ಈ ಮಸೂದೆಯ ಉದ್ದೇಶ. .ಸುಪ್ರೀಂಕೋರ್ಟ್ನ ನಿರ್ದೇಶನದ ಅನುಸಾರ ಇಂತಹ ಕಾಯ್ದೆಯನ್ನು ದೇಶದಲ್ಲಿಯೆ ಮೊದಲ ಬಾರಿಗೆ ಕರ್ನಾಟಕ ಜಾರಿಗೊಳಿಸುತ್ತಿದೆ. ಇದೇ ತಿಂಗಳು ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಾಗುವುದು.

Question 5

5. ‘ಟಿಪ್ಪು ಸುಲ್ತಾನ್–ಎ ಕ್ರುಸೇಡರ್ ಫಾರ್ ಚೇಂಜ್’ ಪುಸ್ತಕದ ಲೇಖಕರು ________?

A
ನೀಲಾ ಮಂಜುನಾಥ್
B
ಎಸ್ ವೈ ಬೆಟ್ಟೇಗೌಡ
C
ಪ್ರೊ. ಬಿ ಷೇಕ್ ಅಲಿ
D
ಸಲ್ಮಾನ್ ಸುಲ್ತಾನ್
Question 5 Explanation: 
ಪ್ರೊ. ಬಿ ಷೇಕ್ ಅಲಿ:

ಪ್ರಸಿದ್ಧ ಇತಿಹಾಸಕಾರ ಹಾಗೂ ವಿಶ್ರಾಂತ ಕುಲಪತಿ ಪ್ರೊ.ಬಿ.ಷೇಕ್ ಅಲಿ “ಟಿಪ್ಪು ಸುಲ್ತಾನ್–ಎ ಕ್ರುಸೇಡರ್ ಫಾರ್ ಚೇಂಜ್’ ಪುಸ್ತಕದ ಲೇಖಕರು. 424 ಪುಟಗಳ ಈ ಕೃತಿಯಲ್ಲಿ ಟಿಪ್ಪು ಸಾಧನೆಯನ್ನು ಬಣ್ಣಿಸಲಾಗಿದೆ. ಅಭಿವೃದ್ಧಿ, ಜನರ ಕಲ್ಯಾಣ, ಹಿಂದೂ ದೇಗುಲಗಳ ಬಗ್ಗೆ ಆತನಿಗಿದ್ದ ಕಾಳಜಿ, ತನ್ನ ಮಂತ್ರಿ ಮಂಡಲದಲ್ಲಿ ಹಿಂದೂಗಳಿಗೆ ಆದ್ಯತೆ ನೀಡಿದ್ದ ವಿವರಗಳಿವೆ.

Question 6

6. ಇತ್ತೀಚೆಗೆ ಈ ಕೆಳಗಿನ ಯಾವ ದೇವಾಲಯಕ್ಕೆ ಐಎಸ್ಒ 9001:2008 ಪ್ರಮಾಣ ಪತ್ರ ನೀಡಲಾಗಿದೆ?

A
ಧರ್ಮಸ್ಥಳ ಮಂಜುನಾಥ
B
ಕುಕ್ಕೆ ಸುಬ್ರಮಣ್ಯ
C
ಗೋಕರ್ಣ ಮಹಾಬಲೇಶ್ವರ
D
ಹೊರನಾಡು ಅನ್ನಪೂರ್ಣೇಶ್ವರಿ
Question 6 Explanation: 
ಗೋಕರ್ಣ ಮಹಾಬಲೇಶ್ವರ:

ಗೋಕರ್ಣದ ಐತಿಹಾಸಿಕ ಮಹಾಬಲೇಶ್ವರ ದೇವಾಲಯಕ್ಕೆ ಐಎಸ್ ಒ 9001:2008 ಪ್ರಮಾಣ ಪತ್ರ ದೊರೆತಿದೆ. ಜರ್ಮನಿಯ ಗುಣಮಟ್ಟ ನಿರ್ವಹಣಾ ವ್ಯವಸ್ಥೆ ಪ್ರಮಾಣೀಕರಣ ಕಂಪನಿಯು ಗೋಕರ್ಣಕ್ಕೆ ಭೇಟಿ ನೀಡಿ, ಸ್ವಚ್ಛತೆ, ಪ್ರಸಾದ ಹಂಚಿಕೆ, ರಕ್ಷಣಾ ಹಾಗೂ ಭದ್ರತೆಗೆ ಸಂಬಂಧಪಟ್ಟಂತೆ ಪರಿಶೀಲನೆ ನಡೆಸಿ, ದೇವಾಲಯಕ್ಕೆ ಐಎಸ್ ಒ ಪ್ರಮಾಣ ಪತ್ರ ನೀಡಿತ್ತು.

Question 7

7. ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ನೂತನ ಅಧ್ಯಕ್ಷೆ ಯಾರು?

A
ಮಂಜುಳಾ ಶಂಕರ್
B
ನಳಿನ ಗೋವಿಂದಸ್ವಾಮಿ
C
ಭಾರತಿ ಶಂಕರ್
D
ಮಧು ಕುಮಾರಿ
Question 7 Explanation: 
ಭಾರತಿ ಶಂಕರ್:

ಭಾರತಿ ಶಂಕರ್ ಅವರು ರಾಜ್ಯ ಮಹಿಳಾ ಅಭಿವೃದ್ದಿ ನಿಗಮದ ನೂತನ ಅಧ್ಯಕ್ಷೆ

Question 8

8. ಇತ್ತೀಚೆಗೆ ಡಾ.ಕೆ. ಕಸ್ತೂರಿರಂಗನ್ ನೇತೃತ್ವದ 'ಕರ್ನಾಟಕ ಜ್ಞಾನ ಆಯೋಗ ಎಷ್ಟನೇ ತರಗತಿ ವರೆಗೆ ಕನ್ನಡ ಅಥವಾ ಮಾತೃಭಾಷೆಯಲ್ಲಿ ಶಿಕ್ಷಣ ನೀಡಬೇಕೆಂದು ಶಿಫಾರಸ್ಸು ಮಾಡಿದೆ?

A
1 ರಿಂದ 4
B
1 ರಿಂದ 5
C
1 ರಿಂದ 7
D
4 ರಿಂದ 10
Question 8 Explanation: 
1 ರಿಂದ 4:

1ರಿಂದ 4ನೇ ತರಗತಿವರೆಗೆ ಮಾತೃಭಾಷೆ ಇಲ್ಲವೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕು. ಈ ಹಂತದಲ್ಲಿ ಇಂಗ್ಲಿಷ್ ಅನ್ನು ದ್ವಿತೀಯ ಭಾಷೆಯಾಗಿ ಕಲಿಸಬೇಕು ಎಂದು ಡಾ.ಕೆ. ಕಸ್ತೂರಿರಂಗನ್ ನೇತೃತ್ವದ 'ಕರ್ನಾಟಕ ಜ್ಞಾನ ಆಯೋಗ'ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಕರ್ನಾಟಕ ಜ್ಞಾನ ಆಯೋಗ ಸಿದ್ಧಪಡಿಸಿರುವ ಶಿಕ್ಷಣ ನೀತಿ ಕರಡನ್ನು ಕಸ್ತೂರಿರಂಗನ್ ಅವರು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್ ಅವರಿಗೆ ಸಲ್ಲಿಸಿದರು. ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ಇರಬೇಕು. 5ನೇ ತರಗತಿಯಿಂದ ಶಿಕ್ಷಣ ಮಾಧ್ಯಮದ ಆಯ್ಕೆ ಸ್ವಾತಂತ್ರ್ಯ ವಿದ್ಯಾರ್ಥಿಗಳಿಗೆ ಇರಬೇಕು. ಅಲ್ಲದೆ, ಮಕ್ಕಳ ಆಯ್ಕೆಗೆ ಅನುಗುಣವಾಗಿ ಇನ್ನೆರಡು ಭಾಷೆಗಳನ್ನು ಹೆಚ್ಚುವರಿಯಾಗಿ ಕಲಿಯಲು ಅವಕಾಶ ಕೊಡಬೇಕು ಎಂದು ಶಿಫಾರಸು ಮಾಡಲಾಗಿದೆ.

Question 9

9. ರೈತರ ಬೆಳೆಯನ್ನು ಹಾಳುಮಾಡುವ ಈ ಕೆಳಗಿನ ಯಾವ ಪ್ರಾಣಿಯನ್ನು ಬೇಟೆಯಾಡಲು ರಾಜ್ಯ ಸರ್ಕಾರ ಇತ್ತೀಚೆಗೆ ಅನುಮತಿ ನೀಡಿದೆ?

A
ಕಾಡು ಹಂದಿ
B
ಮೊಲ
C
ನರಿ
D
ಜಿಂಕೆ
Question 9 Explanation: 
ಕಾಡುಹಂದಿ:

ಬೆಳೆಗಳನ್ನು ಹಾಳುಮಾಡುವ ಕಾಡುಹಂದಿಗಳನ್ನು ಬೇಟೆಯಾಡಲು ರೈತರಿಗೆ ರಾಜ್ಯ ಸರ್ಕಾರ ಅವಕಾಶ ಕಲ್ಪಿಸಿ ಆದೇಶ ಹೊರಡಿಸಿದ್ದು, ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ಕಾಡುಹಂದಿಗೆ ಬೇಟೆಗೆ ಅರಣ್ಯ ಇಲಾಖೆ ಸಮ್ಮತಿ ಸೂಚಿಸಿದೆ. ಗಳನ್ನು ಹಾಳುಮಾಡುವ ಪ್ರಾಣಿಗಳನ್ನು, ಮುಖ್ಯವಾಗಿ ಕಾಡುಹಂದಿಗಳನ್ನು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972, ಕಲಂ 62 ರ ಪ್ರಕಾರ ಕೆಲವೊಂದು ಪ್ರದೇಶಗಳಲ್ಲಿ ಬೇಟೆಯಾಡಬಹುದಾಗಿದೆ.

Question 10

10. ಇದು ಕರ್ನಾಟಕದ ಅತ್ಯಂತ ಉತ್ತರ ಭಾಗದ ನೀರಾವರಿ ಯೋಜನೆ _______?

A
ಮಲಪ್ರಭಾ ಯೋಜನೆ
B
ಘಟಪ್ರಭಾ ಯೋಜನೆ
C
ಕಾರಂಜ ಯೋಜನೆ
D
ಬೆಣ್ಣೆತೊರೆ ಯೋಜನೆ
Question 10 Explanation: 
ಕಾರಂಜ ಯೋಜನೆ
There are 10 questions to complete.

[button link=”http://www.karunaduexams.com/wp-content/uploads/2016/11/ಕರ್ನಾಟಕ-ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-18.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

 

4 Thoughts to “ರಾಜ್ಯ ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್ -18”

  1. Siddaram

    Useful knowledge

  2. shashi karunadu

    Competitative exam ge kannada da best website, very nice,national, international current affairs, science and tech, central government,state government skceams state ment type lli questions upload madi ,plz plz

    1. Karunaduexams

      Sure Shashi..thank u

  3. gireesha vaddanahal

    very impartent

Leave a Comment

This site uses Akismet to reduce spam. Learn how your comment data is processed.