ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ನವೆಂಬರ್-12, 2016
Question 1 |
1.ಫೋರ್ಬ್ಸ್ ನಿಯತಕಾಲಿಕೆಯ “2016 ವರ್ಷದ ಬ್ಯುಸಿನೆಸ್ ವ್ಯಕ್ತಿ” ಗೌರವಕ್ಕೆ ಯಾರು ಪಾತ್ರರಾಗಿದ್ದಾರೆ?
ವಿಶಾಲ್ ಸಿಕ್ಕ | |
ಮಾರ್ಕ್ ಜುಕರ್ಬರ್ಗ್ | |
ಸತ್ಯಂ ನಂದೇಲಾ | |
ಇಂದ್ರಾ ನೂಯಿ |
ಪ್ರಸಿದ್ದ ಸಾಮಾಜಿಕ ತಾಣ ಫೇಸ್ ಬುಕ್ ಸಿಇಓ ಮಾರ್ಕ್ ಜುಕರ್ಬರ್ಗ್ ಅವರನ್ನು ಫೋರ್ಬ್ಸ್ ನಿಯತಕಾಲಿಕೆಯ 2016 ವರ್ಷದ ಬ್ಯುಸಿನೆಸ್ ವ್ಯಕ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ. ವರ್ಷದಿಂದ ವರ್ಷಕ್ಕೆ ಕಂಪನಿಯ ಬೆಳವಣಿಗೆ ಹಾಗೂ ಇದನ್ನು ಸಾಧಿಸಲು ಜುಕರ್ಬರ್ಗ್ ಹೊಂದಿರುವ ದೂರದೃಷ್ಟಿ ಮತ್ತು ಸಾಮರ್ಥ್ಯವನ್ನು ಗಮನಿಸಿ ಅವರನ್ನು 2016 ವರ್ಷದ ಬ್ಯುಸಿನೆಸ್ ವ್ಯಕ್ತಿ ಎಂದು ಪರಿಗಣಿಸಲಾಗಿದೆ.
Question 2 |
2. ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ನ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ?
ಕೆನ್ ರಿಡ್ | |
ಡೇವಿಡ್ ಬಲ್ಬಿರ್ನಿ | |
ನರಿಂದರ್ ಬಾತ್ರಾ | |
ಲಿಯಾಂಡ್ರೊ ಜೆನ್ನರ್ |
ಭಾರತದ ನರಿಂದರ್ ಬಾತ್ರಾ ಅವರು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಹಾಕಿ ಇಂಡಿಯಾ'ದ ಅಧ್ಯಕ್ಷರೂ ಆಗಿರುವ ಬಾತ್ರಾ ಅವರು ಐಎಚ್ಎಫ್ನ ಅತ್ಯುನ್ನತ ಹುದ್ದೆಗೆ ನಡೆದ ಚುನಾವಣೆ ಯಲ್ಲಿ 68 ಮತಗಳನ್ನು ಗಳಿಸಿದರು. ಐರ್ಲೆಂಡ್ನ ಡೇವಿಡ್ ಬಲ್ಬಿರ್ನಿ ಮತ್ತು ಆಸ್ಟ್ರೇಲಿಯಾದ ಕೆನ್ ರೀಡ್ ಕ್ರಮವಾಗಿ 29 ಮತ್ತು 13 ಮತಗಳನ್ನು ಗಳಿಸಲಷ್ಟೇ ಶಕ್ತರಾದರು.ಈ ಹುದ್ದೆಗೆ ಏರಿದ ಏಷ್ಯಾ ಖಂಡದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ ಬಾತ್ರಾ ಅವರದಾಗಿದೆ.
Question 3 |
3. ಈ ಕೆಳಗಿನ ಯಾರು ಅಮೆರಿಕದ ಉಪಾಧ್ಯಕ್ಷರಿಗೆ ನೇಮಕಗೊಂಡಿದ್ದಾರೆ?
ರಾಬರ್ಟ್ ಗೊಡರ್ಡ್ | |
ಮೈಕ್ ಪೆನ್ಸ್ | |
ಕಮಲ ಹ್ಯಾರಿಸ್ | |
ಮೈಕಲ್ ಜೇಮ್ಸ್ |
ಅಮೆರಿಕಾದ ಉಪಾಧ್ಯಕ್ಷರಾಗಿ ಮೈಕ್ ಪೆನ್ಸ್ ಆಯ್ಕೆಯಾಗಿದ್ದಾರೆ. ಮೈಕ್ ಪೆನ್ಸ್ 2013 ರಿಂದ ಇಂಡಿಯಾನಾ ರಾಜ್ಯದ ಗವರ್ನರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಜಿಯೋ ಬಿಡನ್ ಉಪಾಧ್ಯಕ್ಷರಾಗಿದ್ದು, ಪೆನ್ಸ್ ಅಧಿಕಾರಾವಧಿ 2017 ಜನವರಿಯಿಂದ ಶುರುವಾಗಲಿದೆ. ನವೆಂಬರ್ 8 ರಂದು ನಡೆದ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅವರು ಡೆಮಾಕ್ರೆಟ್ ಪಕ್ಷದ ಹಿಲರಿ ಕ್ಲಿಂಟನ್ ಅವರನ್ನು ಮಣಿಸಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಟ್ರಂಪ್ ಅವರ ಅಧಿಕಾರಾವಧಿ ಕೂಡ ಜನವರಿ 20, 2017 ರಿಂದ ಆರಂಭವಾಗಲಿದೆ.
Question 4 |
4. ಖಾಸಗಿ ವಲಯದ ಫೆಡರಲ್ ಬ್ಯಾಂಕ್ ತನ್ನ ಮೊದಲ ಅಂತಾರಾಷ್ಟ್ರೀಯ ಶಾಖೆಯನ್ನು ಯಾವ ನಗರದಲ್ಲಿ ತೆರೆಯಲಿದೆ?
ನ್ಯೂಯಾರ್ಕ್ | |
ದುಬೈ | |
ಯಾಂಗೂನ್ | |
ಲಂಡನ್ |
ಖಾಸಗಿ ವಲಯದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾಗಿರುವ ಫೆಡರಲ್ ಬ್ಯಾಂಕ್ ದುಬೈನಲ್ಲಿ ತನ್ನ ಮೊದಲ ಅಂತಾರಾಷ್ಟ್ರೀಯ ಶಾಖೆಯನ್ನ ತೆರೆಯಲು ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿ ನೀಡಿದೆ.
Question 5 |
5. ದೇಶದ ಮೊದಲ ಚೆರ್ರಿ ಬ್ಲಾಸಮ್ ಉತ್ಸವ (Cherry Blossom Festival) ಯಾವ ರಾಜ್ಯದಲ್ಲಿ ನಡೆಯಲಿದೆ?
ಅಸ್ಸಾಂ | |
ಮೇಘಾಲಯ | |
ಸಿಕ್ಕಿಂ | |
ತ್ರಿಪುರ |
ಮೇಘಾಲಯದಲ್ಲಿ ನವೆಂಬರ್ 14 ರಂದು ಚೆರ್ರಿ ಬ್ಲಾಸಮ್ ಉತ್ಸವ ಆರಂಭಗೊಳ್ಳಲಿದೆ. ಇದೇ ಮೊದಲ ಬಾರಿಗೆ ಭಾರತದಲ್ಲಿ ಈ ಉತ್ಸವವನ್ನು ಆಯೋಜಿಸಲಾಗುತ್ತಿದೆ. ನಾಲ್ಕು ದಿನಗಳ ಕಾಲ ನಡೆಯಲಿರುವ ಉತ್ಸವದಲ್ಲಿ ಗುಲಾಬಿ ಮತ್ತು ಬಿಳಿ ಬಣ್ಣದ ಚೆರ್ರಿ ಮೊಗ್ಗು ಜೊತೆಗೆ ಮೇಘಾಲಯದ ಕಲೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರದರ್ಶಿಸಲಾಗುವುದು. ಚೆರ್ರಿ ಬ್ಲಾಸಮ್ ಉತ್ಸವ ಜಪಾನ್ ನಲ್ಲಿ ಅತ್ಯಂತ ಹೆಚ್ಚು ಪ್ರಸಿದ್ದಿ ಹೊಂದಿದೆ.
Question 6 |
6. 32ನೇ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ ಷಿಪ್ ನಲ್ಲಿ 12 ವರ್ಷಗಳ ರಾಷ್ಟ್ರೀಯ ದಾಖಲೆ ಮುರಿದು ಇತಿಹಾಸ ನಿರ್ಮಿಸಿದವರು ಯಾರು?
ಪ್ರದೀಪ್ ಜೋಗಿ | |
ತೇಜಸ್ವಿನ್ ಶಂಕರ್ | |
ಮನದೀಪ್ ರಾಯ್ | |
ರಂಜನ್ ಗುಪ್ತಾ |
32ನೇ ರಾಷ್ಟ್ರೀಯ ಜೂನಿಯರ್ ಅಥ್ಲೆಟಿಕ್ ಚಾಂಪಿಯನ್ ಷಿಪ್ ನ ಬಾಲಕರ ಹೈಜಂಪ್ ವಿಭಾಗದಲ್ಲಿ ದೆಹಲಿಯ ತೇಜಸ್ವಿನ್ ಶಂಕರ್ 12 ವರ್ಷಗಳ ರಾಷ್ಟ್ರೀಯ ಹಿರಿಯರ ದಾಖಲೆಯನ್ನು ಮುರಿದಿದ್ದಾನೆ. ಬಾಲಕರ ಹೈಜಂಪ್ ಸ್ಪರ್ಧೆಯಲ್ಲಿ ತೇಜಸ್ವಿನಿ ಶಂಕರ್ 2.26 ಮೀ. ಎತ್ತರ ಜಿಗಿಯುವ ಮೂಲಕ ಸ್ವರ್ಣ ಪದಕ ಗೆದ್ದುಕೊಂಡಿದ್ದಾರೆ. ಇದಕ್ಕೂ ಮುನ್ನ ಪಶ್ಚಿಮ ಬಂಗಾಳದ ಹರಿ ಶಂಕರ್ ರಾಯ್ 2.25ಮೀ. ಎತ್ತರ ಜಿಗಿದು ಹಿಂದಿನ ರಾಷ್ಟ್ರೀಯ ಹಿರಿಯರ ಮಟ್ಟದ ದಾಖಲೆ ಹೊಂದಿದ್ದರು.
Question 7 |
7. 2ನೇ ರಾಷ್ಟ್ರೀಯ ಮಕ್ಕಳ ಸಿನಿಮೋತ್ಸವ ಯಾವ ನಗರದಲ್ಲಿ ನಡೆಯಲಿದೆ?
ಜೈಪುರ | |
ಉದಯಪುರ | |
ಚೆನ್ನೈ | |
ಮೈಸೂರು |
ಎರಡನೇ ರಾಷ್ಟ್ರೀಯ ಮಕ್ಕಳ ಸಿನಿಮೋತ್ಸವ ಜೈಪುರದ ಬಿರ್ಲಾ ಆಡಿಟೋರಿಯಂನಲ್ಲಿ ನವೆಂಬರ್ 14 ರಂದು ಆರಂಭವಾಗಲಿದೆ. ಮೇಕ್ ಇನ್ ಇಂಡಿಯಾ ಇದು ಈ ಸಿನಿಮೋತ್ಸವದ ಥೀಮ್.
Question 8 |
8. ಇತ್ತೀಚಿನ ವರದಿ ಪ್ರಕಾರ ನ್ಯೂಮೋನಿಯಾ ಮತ್ತು ಡಯೋರಿಯಾ ಕಾಯಿಲೆಯಿಂದ ಅತಿ ಹೆಚ್ಚಿನ ಮಕ್ಕಳ ಸಾವು ಸಂಭವಿಸುವ ವಿಶ್ವದ ಮೊದಲ ಮೂರು ರಾಷ್ಟ್ರಗಳು ಯಾವುವು?
ಭಾರತ, ನೈಜೀರಿಯಾ ಮತ್ತು ಪಾಕಿಸ್ತಾನ | |
ಭಾರತ, ಪಾಕಿಸ್ತಾನ ಮತ್ತು ನೈಜೀರಿಯಾ | |
ಪಾಕಿಸ್ತಾನ, ಭಾರತ ಮತ್ತು ನೈಜೀರಿಯಾ | |
ಪಾಕಿಸ್ತಾನ, ನೈಜೀರಿಯಾ ಮತ್ತು ಭಾರತ |
ಭಾರತ ವಿಶ್ವದಲ್ಲೆ ಅತಿ ಹೆಚ್ಚು ನ್ಯೂಮೋನಿಯಾ ಮತ್ತು ಡಯೋರಿಯೊ ಕಾಯಿಲೆಯಿಂದ ಮಕ್ಕಳ ಸಾವು ಸಂಭವಿಸುತ್ತಿರುವ ರಾಷ್ಟ್ರಗಳ ಪೈಕಿ ಮೊದಲ ಸ್ಥಾನದಲ್ಲಿದೆ. ವಿಶ್ವ ನ್ಯೂಮೋನಿಯಾ ದಿನವಾದ ನವೆಂಬರ್ 12 ರಂದು ಬಿಡುಗಡೆಗೊಂಡ ವರದಿಯಲ್ಲಿ ಈ ವಿಷಯ ಬಹಿರಂಗಗೊಂಡಿದೆ. ಭಾರತ, ನೈಜೀರಿಯಾ, ಪಾಕಿಸ್ತಾನ, ಡೆಮಾಕ್ರೆಟಿಕ್ ರಿಪಬ್ಲಿಕ್ ಕಾಂಗೋ ಮತ್ತು ಅಂಗೋಲಾ ಮೊದಲ ಐದು ಸ್ಥಾನದಲ್ಲಿವೆ.
Question 9 |
9. 2016 ಭಾರತ ಅಂತಾರಾಷ್ಟ್ರೀಯ ವ್ಯಾಪಾರ ಮೇಳದ (ಐಐಟಿಎಫ್ ) ಪ್ರಾಮುಖ್ಯತೆ ದೇಶ (Focus Country) ಯಾವುದು?
ಬೆಲಾರಸ್ | |
ಜಪಾನ್ | |
ಚೀನಾ | |
ರಷ್ಯಾ |
36ನೇ ಭಾರತ ಅಂತಾರಾಷ್ಟ್ರೀಯ ವ್ಯಾಪಾರ ಮೇಳಕ್ಕೆ ನವದೆಹಲಿಯ ಪ್ರಗತಿ ಮೈದಾನದಲ್ಲಿ ರಾಷ್ಟ್ರಪತಿ ಪ್ರಣಭ್ ಮುಖ್ರಜಿ ವಿದ್ಯುಕ್ತ ಚಾಲನೆ ನೀಡಿದರು. ಡಿಜಿಟಲ್ ಇಂಡಿಯಾ ಈ ವರ್ಷ ವ್ಯಾಪಾರ ಮೇಳದ ಧ್ಯೇಯವಾಕ್ಯ. ಈ ಬಾರಿಯ ವ್ಯಾಪಾರ ಮೇಳದ ಪ್ರಾಮುಖ್ಯತೆ ರಾಷ್ಟ್ರ ಬೆಲಾರಸ್ ಹಾಗೂ ಪ್ರಾಮುಖ್ಯತೆ ರಾಜ್ಯ ಹರಿಯಾಣ.
Question 10 |
10. ಸಂವಿಧಾನದ ಯಾವ ವಿಧಿಯ ಪ್ರಕಾರ ರಾಷ್ಟ್ರಪತಿಗಳು ಪ್ರಧಾನ ಮಂತ್ರಿಗಳ ನೇತೃತ್ವದ ಮಂತ್ರಿಮಂಡಲದ ಸಲಹೆಯ ಮೇರೆಗೆ ಕಾರ್ಯನಿರ್ವಹಿಸಬೇಕಾಗುತ್ತದೆ?
73 | |
74 (1) | |
75 | |
76 (1) |
1976 ರಲ್ಲಿ 74 (1) ನೇ ವಿಧಿಗೆ 42ನೇ ತಿದ್ದುಪಡಿಯನ್ನು ತರಲಾಗುವ ಮೂಲಕ ಈ ಕಾಯ್ದೆಯ ಪ್ರಕಾರ ಮಂತ್ರಿಮಂಡಲದ ಸಲಹೆಗೆ ರಾಷ್ಟ್ರಪತಿಗಳು ಬದ್ದವಾಗಿರಬೇಕು.
[button link=”http://www.karunaduexams.com/wp-content/uploads/2016/11/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ನವೆಂಬರ್-12.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
Comment
Super