ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ನವೆಂಬರ್-13, 2016

Question 1

1.“ಆಕ್ಸಫರ್ಡ್ ನಿಘಂಟು ಯಾವ ಪದವನ್ನು “2016 ವರ್ಷದ ಪದ (Word of the Year)” ವೆಂದು ಘೋಷಿಸಿದೆ?

A
Ayyo
B
Post Truth
C
Dicci
D
Brexiteer
Question 1 Explanation: 
Post Truth:

ಆಕ್ಸಪರ್ಡ್ ನಿಘಂಟು “Post Truth” ಪದವನ್ನು 2016 ವರ್ಷದ ಪದವೆಂದು ಘೋಷಿಸಿದೆ. ಬ್ರೆಕ್ಸಿಟ್ ಮತ ಮತ್ತು ಅಮೆರಿಕದಲ್ಲಿ ಡೋನಾಲ್ಡ್ ಟ್ರಂಪ್ ಅಲೆಯನಂತರ ಈ ಪದದ ಬಳಕೆ ಗಣನೀಯವಾಗಿ ಏರಿಕೆಯಾಗಿದೆಯೆಂದು ಹೇಳಲಾಗಿದೆ. ಕಳೆದ ಒಂದು ವರ್ಷದಲ್ಲಿ ಈ ಪದ ಬಳಕೆ ಶೇ 2000% ಹೆಚ್ಚಳವಾಗಿದೆ.

Question 2

2.ಲೇಡಿಸ್ ಯುರೋಪಿಯನ್ ಟೂರ್ ಗೆದ್ದ ಮೊದಲ ಭಾರತೀಯ ಗಾಲ್ಫ್ ಆಟಗಾರ್ತಿ ಯಾರು?

A
ಅದಿತಿ ಅಶೋಕ್
B
ವಾಣಿ ಕಪೂರ್
C
ಶರ್ಮಿಳಾ ನಿಕೋಲೆಟ್
D
ಗೌರಿ ಮೊಂಗ
Question 2 Explanation: 
ಅದಿತಿ ಅಶೋಕ್:

ಬೆಂಗಳೂರು ಮೂಲದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಇಂಡಿಯನ್ ಓಪನ್ ಕಿರೀಟ ಗೆದ್ದುಕೊಂಡಿದ್ದಾರೆ. ಈ ಮೂಲಕ ಲೇಡೀಸ್ ಯುರೋಪಿಯನ್ ಟೂರ್ ಪಂದ್ಯವನ್ನು ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. 18ರ ಹರೆಯದ ಅದಿತಿ ರಿಯೊ ಒಲಿಂಪಿಕ್ಸ್ ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದರು.

Question 3

3. ವಿಶ್ವ ತತ್ವಶಾಸ್ತ್ರ ದಿನ (World Philosophy Day) ಯಾವ ದಿನದಂದು ಆಚರಿಸಲಾಗುತ್ತದೆ?

A
ನವೆಂಬರ್ ಮೊದಲ ಭಾನುವಾರ
B
ನವೆಂಬರ್ ಎರಡನೇ ವಾರ
C
ನವೆಂಬರ್ ಮೊದಲ ಸೋಮವಾರ
D
ನವೆಂಬರ್ ಮೂರನೇ ಗುರುವಾರ
Question 3 Explanation: 
ನವೆಂಬರ್ ಮೂರನೇ ಗುರುವಾರ:

ವಿಶ್ವ ತತ್ವಶಾಸ್ತ್ರ ದಿನವನ್ನು ಪ್ರತಿವರ್ಷ ನವೆಂಬರ್ ತಿಂಗಳ ಮೂರನೇ ಗುರುವಾರದಂದು ಆಚರಿಸಲಾಗುತ್ತದೆ. ವಿಶ್ವ ತತ್ವಶಾಸ್ತ್ರ ದಿನವನ್ನು ಮೊದಲ ಬಾರಿಗೆ 2005 ರಲ್ಲಿ ಆಚರಿಸಲಾಯಿತು. ಮಾನವನ ಯೋಚನೆ ನಿರಂತರ ಅಭಿವೃದ್ದಿಗೆ ತತ್ವಶಾಸ್ತ್ರದ ಮೌಲ್ಯವನ್ನು ಎತ್ತಿಹಿಡಿಯುವ ಸಲುವಾಗಿ ಯುನೆಸ್ಕೋ ಈ ದಿನವನ್ನು ಆಚರಣೆಗೆ ತಂದಿದೆ.

Question 4

4. ಟಾಟಾ ಗ್ಲೋಬಲ್ ಬೆವರೇಜಸ್ (Tata Global Beverages) ಅಧ್ಯಕ್ಷರಾಗಿ ಯಾರನ್ನು ನೇಮಕ ಮಾಡಲಾಗಿದೆ?

A
ಹರೀಶ್ ಭಟ್
B
ಸತೀಶ್ ಚಂದ್ರ
C
ಕಮಲೇಶ್ ಶರ್ಮಾ
D
ಮುಕುಂದ ರಾಥೋಡ್
Question 4 Explanation: 
ಹರೀಶ್ ಭಟ್
Question 5

5. ಭಾರತ ಅಥ್ಲೀಟ್ ಗಳ ಪ್ರದರ್ಶನ ಗುಣಮಟ್ಟವನ್ನು ಸುಧಾರಿಸುವ ಸಲುವಾಗಿ ಭಾರತ ಕ್ರೀಡಾ ಪ್ರಾಧಿಕಾರ ಯಾವ ವಿಶ್ವವಿದ್ಯಾಲಯದೊಂದಿಗೆ ಒಪ್ಪಂದ ಮಾಡಿಕೊಂಡಿದೆ?

A
ಟೊಕಿಯೋ ವಿಶ್ವವಿದ್ಯಾಲಯ
B
ಬರ್ಮಿಂಗ್ಹ್ಯಾಮ್ನ ವಿಶ್ವವಿದ್ಯಾಲ ಯ
C
ಶಾಂಘೈ ವಿಶ್ವವಿದ್ಯಾಲಯ
D
ಲಂಡನ್ ವಿಶ್ವವಿದ್ಯಾಲಯ
Question 5 Explanation: 
ಬರ್ಮಿಂಗ್ಹ್ಯಾಮ್ನ ವಿಶ್ವವಿದ್ಯಾಲಯ:

ಭಾರತದ ಅಥ್ಲೀಟ್ಗಳ ಪ್ರದರ್ಶನ ಗುಣಮಟ್ಟ ಸುಧಾರಿಸುವ ಉದ್ದೇಶದಿಂದಾಗಿ ಭಾರತ ಕ್ರೀಡಾ ಪ್ರಾಧಿಕಾರ ಬರ್ಮಿಂಗ್ಹ್ಯಾಮ್ನ ವಿಶ್ವವಿದ್ಯಾಲ ಯದ ಜೊತೆ ಒಪ್ಪಂದ ಮಾಡಿಕೊಂಡಿದೆ. ಭಾರತದ ಅಥ್ಲೀಟ್ಗಳ ಗುಣಮಟ್ಟ ಉತ್ತಮಗೊಳ್ಳಲು ಬರ್ಮಿಂಗ್ಹ್ಯಾಮ್ ವಿ.ವಿಯ ತರಬೇತುದಾರರು, ಕ್ರೀಡಾ ವಿಜ್ಞಾನಿಗಳು ಮತ್ತು ದೈಹಿಕ ಶಿಕ್ಷಣ ಶಿಕ್ಷಕರು ನೆರವಾಗಲಿದ್ದಾರೆ. ಈ ವಿಶ್ವ ವಿದ್ಯಾಲಯದಲ್ಲಿ ತರಬೇತಿ ಪಡೆದ ಇಂಗ್ಲೆಂಡ್ನ ಹಲವಾರು ಅಥ್ಲೀಟ್ಗಳು ರಿಯೊ ಒಲಿಂಪಿಕ್ಸ್ನಲ್ಲಿ ಗಮನಾರ್ಹ ಪ್ರದರ್ಶನ ನೀಡಿದ್ದರು. ಇತ್ತೀಚಿಗೆ ಭಾರ ತದ ಕ್ರೀಡಾ ಕೋಚ್ಗಳು ಮತ್ತು ಕ್ರೀಡಾ ವಿಜ್ಞಾನಿಗಳ ತಂಡ ಎರಡು ವಾರ ಬರ್ಮಿಂಗ್ಹ್ಯಾಮ್ ವಿ.ವಿಗೆ ಭೇಟಿ ಕೊಟ್ಟಿತ್ತು.

Question 6

6. ಸತತವಾಗಿ ಮೂರನೇ ಬಾರಿಗೆ ರಾಷ್ಟ್ರೀಯ ಮಹಿಳಾ ಪ್ರೀಮಿಯರ್ ಚೆಸ್ ಚಾಂಪಿಯನ್ಷಿಪ್ ಗೆದ್ದುಕೊಂಡವರು ಯಾರು?

A
ಪದ್ಮನಿ ರಾವತ್
B
ಹರಿಕ ದ್ರೋಣವಳ್ಳಿ
C
ಹಂಪಿ ಕೊನೆರು
D
ತಾನಿಯ ಸಚ್ದೇವ್
Question 6 Explanation: 
ಪದ್ಮನಿ ರಾವತ್:

ಇಂಟರ್ ನ್ಯಾಷನಲ್ ಮಾಸ್ಟರ್ ಪದ್ಮಿನಿ ರಾವತ್ ಸತತ ಮೂರನೇ ಬಾರಿಗೆ ರಾಷ್ಟ್ರೀಯ ಮಹಿಳಾ ಪ್ರೀಮಿಯರ್ ಚೆಸ್ ಚಾಂಪಿಯನ್ಷಿಪ್ ಗೆದ್ದುಕೊಂಡರು. ಈ ಗೆಲುವಿನಿಂದ ಪದ್ಮಿನಿ ವಿಶ್ವ ಚೆಸ್ ಚಾಂಪಿಯನ್ಷಿಪ್ನಲ್ಲಿ ಆಡುವ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

Question 7

7. ಭಾರತ ವಿಶಿಷ್ಟ ಗುರುತಿನ ಪ್ರಾಧಿಕಾರದ ಇತ್ತೀಚೆಗೆ ಆರಂಭಿಸಿದ ಪರಿಷ್ಕೃತ ಟೋಲ್ ಫ್ರೀ ಸಹಾಯವಾಣಿ ಸಂಖ್ಯೆ ಯಾವುದು?

A
1927
B
1947
C
1950
D
1943
Question 7 Explanation: 
1947:

ಭಾರತ ವಿಶಿಷ್ಟ ಗುರುತಿನ ಪ್ರಾಧಿಕಾರ ಇತ್ತೀಚೆಗೆ 1947 ನಂಬರಿನ ಪರಿಷ್ಕೃತ ಉಚಿತ ಟೋಲ್ ಫ್ರೀ ಸಹಾಯವಾಣಿ ಸಂಖ್ಯೆಯನ್ನು ಆರಂಭಿಸಿದೆ. ಆಧಾರ್ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಸಾರ್ವಜನಿಕರು ಈ ದೂರವಾಣಿಗೆ ಕರೆ ಮಾಡಿ ತಿಳಿದುಕೊಳ್ಳಬಹುದಾಗಿದೆ.

Question 8

8. ರಾಷ್ಟ್ರೀಯ ಮಾನವ ಹಕ್ಕು ಆಯೋಗ ನೀಡುವ ಪ್ರಶಸ್ತಿಯಲ್ಲಿ ಪ್ರಥಮ ಬಹುಮಾನ ಪಡೆದ ಚಿತ್ರ ಯಾವುದು?

A
ಟಮ್ಲಿಂಗ್ ಸ್ಟ್ರೀಟ್
B
ಅಂಬ್ರೋಸಿಯಾ
C
ಬ್ಯ್ಲಾಕ್ ಅಂಡ್ ವೈಟ್
D
ಮದರ್ ಆಫ್ ಇಂಡಿಯಾ
Question 8 Explanation: 
ಬ್ಯ್ಲಾಕ್ ಅಂಡ್ ವೈಟ್:

ಪೊಲೀಸ್ ದೌರ್ಜನ್ಯ, ಮಹಿಳೆಯರ ಮೇಲಿನ ಕಿರುಕುಳ ಮೊದಲಾದ ಮಾನವ ಹಕ್ಕುಗಳ ಉಲ್ಲಂಘನೆ ವಿಷಯಗಳ ಮೇಲೆ ಬೆಳಕು ಚೆಲ್ಲುವ ಮೂಕಿ ಕಿರುಚಿತ್ರ ‘ಬ್ಲ್ಯಾಕ್ ಅಂಡ್ ವೈಟ್’ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್ಎಚ್ಆರ್ಸಿ) ನೀಡುವ ಪ್ರಶಸ್ತಿಗೆ ಆಯ್ಕೆಯಾಗಿದೆ. ಕೇರಳದ ಅನುಜ್ ಎಸ್. ಆರ್. ಅವರು ಈ ಕಿರುಚಿತ್ರವನ್ನು ನಿರ್ಮಿಸಿದ್ದಾರೆ. ಮೊದಲ ಬಹುಮಾನ ₹1ಲಕ್ಷ ಮೊತ್ತವನ್ನೊಳಗೊಂಡಿದೆ. ಪಶ್ಚಿಮ ಬಂಗಾಳದ ರಿಂಬಿಕ್ ದಾಸ್ ಅವರ ‘ಟಮ್ಲಿಂಗ್ ಸ್ಟ್ರೀಟ್’ ದ್ವಿತೀಯ ಬಹುಮಾನಕ್ಕೆ ಹಾಗೂ ಸೋಮನಾಥ್ ಚಕ್ರವರ್ತಿ ಅವರ ‘ಅಂಬ್ರೋಸಿಯಾ’ ತೃತೀಯ ಬಹುಮಾನಕ್ಕೆ ಆಯ್ಕೆಯಾಗಿವೆ. ‘ದ್ವಿತೀಯ ಬಹುಮಾನ ₹75,000, ಹಾಗೂ ತೃತೀಯ ಬಹುಮಾನ ₹50,000 ಮೊತ್ತವನ್ನೊಳಗೊಂಡಿದೆ’.

Question 9

9. ವಿಶ್ವ ಮಧುಮೇಹ ದಿನವನ್ನು ____ ರಂದು ಆಚರಿಸಲಾಗುತ್ತದೆ?

A
ನವೆಂಬರ್ 12
B
ನವೆಂಬರ್ 13
C
ನವೆಂಬರ್ 14
D
ನವೆಂಬರ್ 15
Question 9 Explanation: 
ನವೆಂಬರ್ 14 :

ವಿಶ್ವ ಮಧುಮೇಹ ದಿನವನ್ನು ಪ್ರತಿ ವರ್ಷ ನವೆಂಬರ್ 14 ರಂದು ಆಚರಿಸಲಾಗುತ್ತದೆ. ಮಧುಮೇಹ ರೋಗದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯವನ್ನು ಈ ದಿನದಂದು ಮಾಡಲಾಗುವುದು. ಈ ವರ್ಷದ ಥೀಮ್ Eyes on Diabetes”.

Question 10

10. ಇತ್ತೀಚೆಗೆ ಬಿಡುಗಡೆಗೊಂಡ “ದಿ ಲೆಜೆಂಡ್ ಆಫ್ ಲಕ್ಷಿ ಪ್ರಸಾದ್ (The Legend of Lakshmi Prasad)” ಪುಸ್ತಕದ ಲೇಖಕರು ಯಾರು?

A
ಟ್ವಿಂಕಲ್ ಖನ್ನಾ
B
ರೇಖಾ
C
ಜಯಾ ಬಚ್ಚನ್
D
ವಿದ್ಯಾ ಬಾಲನ್
Question 10 Explanation: 
ಟ್ವಿಂಕಲ್ ಖನ್ನಾ:

ನಟಿ ಹಾಗೂ ಲೇಖಕಿ ಟ್ವಿಂಕಲ್ ಖನ್ನಾ ಅವರು ತಮ್ಮ ಎರಡನೇ ಪುಸ್ತಕ “ದಿ ಲೆಜೆಂಡ್ ಆಫ್ ಲಕ್ಷಿ ಪ್ರಸಾದ್” ಪುಸ್ತಕವನ್ನು ಬಿಡುಗಡೆಗೊಳಿಸಿದರು. ಅವರ ಮೊದಲ ಪುಸ್ತಕ “ಮಿಸ್ಟರ್ ಫನ್ನಿಬೋನ್ಸ್: ಶಿ ಈಸ್ ಜಸ್ಟ್ ಲೈಕ್ ಯು ಅಂಡ್ ಅ ಲಾಟ್ ಲೈಕ್ ಮಿ (Mrs Funnybones: She's Just Like You and a Lot Like Me)” 2015 ರಲ್ಲಿ ಪ್ರಕಟಣೆಗೊಂಡಿತ್ತು.

There are 10 questions to complete.

[button link=”http://www.karunaduexams.com/wp-content/uploads/2016/11/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ನವೆಂಬರ್-1314.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ

3 Thoughts to “ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ನವೆಂಬರ್-13,14, 2016”

  1. bheemaraya 9900701697

    good infrmaton.,..,.,l.,., sir

Leave a Comment

This site uses Akismet to reduce spam. Learn how your comment data is processed.