ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಕಾನೂನು ಆಯೋಗಕ್ಕೆ ಭಾರತೀಯ ಅನಿಲ ರಜಪೂತ್
ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಂತಾರಾಷ್ಟ್ರೀಯ ಕಾನೂನು ಆಯೋಗಕ್ಕೆ ಭಾರತೀಯ ವಕೀಲ ಅನಿರುದ್ದ ರಜಪೂತ್ ಆಯ್ಕೆಯಾಗಿದ್ದಾರೆ. ಅಂತಾರಾಷ್ಟ್ರೀಯ ಕಾನೂನು ಆಯೋಗ ಸದಸ್ಯತ್ವಕ್ಕೆ ನಡೆದ ಚುನಾವಣೆಯಲ್ಲಿ ಭಾರತೀಯ ವಕೀಲ ಅನಿರುದ್ಧ ರಜಪೂತ್ ಅವರಿಗೆ ಏಶ್ಯಾ-ಪೆಸಿಫಿಕ್ ಗುಂಪಿನಲ್ಲಿ ಅತೀ ಹೆಚ್ಚು ಮತಗಳು ಲಭಿಸಿವೆ ಭರ್ಜರಿ ಜಯ ಗಳಿಸಿದ್ದಾರೆ. ರಹಸ್ಯ ಮತದಾನದಲ್ಲಿ ಅನಿರುದ್ಧ ಅವರು ಏಶ್ಯ ಪೆಸಿಫಿಕ್ ಗುಂಪಿನಲ್ಲಿ 160 ಮತಗಳನ್ನು ಗಳಿಸಿದರೆ, ಅವರ ಪ್ರತಿಸ್ಪರ್ಧಿ ಜಪಾನ್ನ ಶಿನ್ಯಾ ಮುರಾಸೆ 148 ಮತಗಳನ್ನಷ್ಟೇ ಗಳಿಸಲು ಶಕ್ತರಾದರು.
- ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ಆಯ್ಕೆಯಾದ 34 ಸದಸ್ಯರ ಪೈಕಿ ಇವರು ಅತೀ ಕಿರಿಯ ಕಾನೂನು ತಜ್ಞ ಹಾಗೂ ಮೊದಲ ಭಾರತೀಯ ಅಭ್ಯರ್ಥಿಯಾಗಿದ್ದಾರೆ.
- ನೂತನವಾಗಿ ಆಯ್ಕೆಯಾಗಿರುವ 34 ಸದಸ್ಯರು ಐರು ವರ್ಷಗಳ ಕಾಲ ಸೇವೆಯಲ್ಲಿರುವರು.
- ಸುಪ್ರೀಂ ಕೋರ್ಟ್ನಲ್ಲಿ ವಕೀಲ ವೃತ್ತಿ ಮಾಡುತ್ತಿರುವ ಅನಿರುದ್ಧ ಅವರು ಲಂಡನ್ ಸ್ಕೂಲ್ ಆಫ್ ಎಕಾನಮಿಕ್ಸ್ ಆಯಂಡ್ ಪಾಲಿಟಿಕಲ್ ಸೈನ್ಸ್ ನ ಹಳೆ ವಿದ್ಯಾರ್ಥಿಯಾಗಿದ್ದಾರೆ.
ವಿಶ್ವಸಂಸ್ಥೆ ಅಂತಾರಾಷ್ಟ್ರೀಯ ಕಾನೂನು ಆಯೋಗ:
- ಅಂತಾರಾಷ್ಟ್ರೀಯ ಕಾನೂನು ಆಯೋಗವನ್ನು 1947ರಲ್ಲಿ ಸ್ಥಾಪಿಸಲಾಗಿದೆ.
- ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಕಾನೂನು ಆಯೋಗವು ಅಂತಾರಾಷ್ಟ್ರೀಯ ಕಾನೂನು ಮತ್ತು ಅದರ ಸಂಕೇತಿಕರಣದ ಪ್ರಗತಿಪರ ಬೆಳವಣಿಗೆಯ ಗುರುತರ ಜವಾಬ್ದಾರಿ ಹೊಂದಿದೆ. ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ಕಾನೂನು ಆಯೋಗದ ಕೇಂದ್ರ ಕಾರ್ಯಾಲಯವು ಜಿನೇವಾದಲ್ಲಿದೆ.
ಕನ್ನಡಪ್ರಭ ಪತ್ರಿಕೆಗೆ ವಿಶ್ವದರ್ಜೆಯ ಸೊಸೈಟಿ ಫಾರ್ ಡಿಸೈನ್ (ಎನ್ಎಸ್ಡಿ) ಮನ್ನಣೆ
ರಾಜ್ಯದ ಪ್ರಮುಖ ಸುದ್ದಿಪತ್ರಿಕೆಗಳಲ್ಲಿ ಒಂದಾದ ‘ಕನ್ನಡಪ್ರಭ’ ಪತ್ರಿಕೆಯು ಅತ್ಯುತ್ತಮ ಸುದ್ದಿ-ಚಿತ್ರ ವಿನ್ಯಾಸಕ್ಕಾಗಿ ವಿಶ್ವದರ್ಜೆಯ ಎನ್ಎಸ್ಡಿ ಮನ್ನಣೆಗೆ ಪಾತ್ರವಾಗಿದೆ. ಈ ಸಾಧನೆಗೈದ ಕನ್ನಡದ ಏಕೈಕ ಹಾಗೂ ದೇಶದ ಎರಡನೆ ಪ್ರಾಂತೀಯ ಪತ್ರಿಕೆಗ ಎಂಬ ಹಿರಿಮೆಗೆ ಪತ್ರಿಕೆ ಪಾತ್ರವಾಗಿದೆ.
- ಬ್ರೆಝಿಲ್ನಲ್ಲಿ ಜರಗಿದ 2016-ರಿಯೋ ಒಲಿಂಪಿಕ್ಸ್ ಕ್ರೀಡಾಕೂಟ ಹಾಗೂ ಈ ಕ್ರೀಡಾಕೂಟದ ಇತಿಹಾಸದ ಸುದ್ದಿ ಚಿತ್ರಣಗಳ ವಿನ್ಯಾಸಕ್ಕಾಗಿ ಪತ್ರಿಕೆಯು ಗೌರವಾನ್ವಿತ ಉಲ್ಲೇಖ (ಹಾನರೇಬಲ್ ಮೆನ್ಷನ್) ಗರಿ ಪ್ರಾಪ್ತವಾಗಿದೆ.
- ಒಲಿಂಪಿಕ್ಸ್ ಕೂಟದ ಹಾಗುಹೋಗುಗಳನ್ನು ಸುಂದರವಾಗಿ ಚಿತ್ರಿಸಿದ್ದ ಜಗತ್ತಿನ ಪತ್ರಿಕೆಗಳ ಸ್ಪರ್ಧೆಯಲ್ಲಿ ‘ಕನ್ನಡಪ್ರಭ’ದ ಪ್ರಧಾನ ವಿನ್ಯಾಸಕಾರ ಬಿ.ಜಿ.ಜನಾರ್ದನ್ ವಿನ್ಯಾಸಗೊಳಿಸಿದ್ದ ಜೂನ್ 26ರ ‘ಭಾವ ಬೆಸುಗೆಯ 27 ಕೊಂಡಿಗಳು’ ಮತ್ತು ಆಗಸ್ಟ್ 4ರ ’16 ದಿನಗಳ ಅಂತಾರಾಷ್ಟ್ರೀಯ ಮಟ್ಟದ ಏಕೈಕ ಸಂಘಟನೆ ಸೊಸೈಟಿ ಫಾರ್ ಡಿಸೈನ್(ಎಸ್ಎನ್ಡಿ)ನ ಮೆಚ್ಚುಗೆಯ ಪಟ್ಟಿಗೆ ಸೇರ್ಪಡೆಯಾಗಿದೆ.
- ಕೇರಳದ ‘ಮಲಯಾಳ ಮನೋರಮಾ’ಗೆ ಸ್ವರ್ಣ, ‘ಇಂಡಿಯನ್ ಎಕ್ಸ್ಪ್ರೆಸ್’ಗೆ ಬೆಳ್ಳಿ ಪದಕ ದೊರೆತರೆ, ‘ಹಿಂದೂಸ್ಥಾನ್ ಟೈಮ್ಸ್’ ‘ಕನ್ನಡಪ್ರಭ’ದಂತೆ ‘ಗೌರವಾನ್ವಿತ ಉಲ್ಲೇಖ’ಕ್ಕೆ ಪಾತ್ರವಾಗಿದೆ.
ಭಾರತ-ನೇಪಾಳ ಸಮರಾಭ್ಯಾಸ “ಸೂರ್ಯ ಕಿರಣ್-10”ಗೆ ಚಾಲನೆ
ಭಾರತ-ನೇಪಾಳ ನಡುವಿನ ಸಮರಾಭ್ಯಾಸ ಸೂರ್ಯ ಕಿರಣ್-10 ಆರಂಭಗೊಂಡಿದೆ. ಹಿಮಾಲಯ ರಾಷ್ಟ್ರ ನೇಪಾಳದ ಸಲ್ಝಾಂಡಿಯ ಸೇನಾ ಸಮರ ಶಾಲೆಯಲ್ಲಿ ಸೂರ್ಯ ಕಿರಣ್-10ಗೆ ಚಾಲನೆ ನೀಡಲಾಯಿತು. ಎರಡು ವಾರಗಳ ಕಾಲ ನಡೆಯಲಿರುವ ಈ ಸಮರಾಭ್ಯಾಸ ಭಾರತ ಮತ್ತು ನೇಪಾಳ ನಡುವಿನ ರಕ್ಷಣಾ ಸಂಬಂಧವನ್ನು ಬಲಗೊಳಿಸಲಿದೆ.
- ಸೂರ್ಯ ಕಿರಣ ಸರಣಿಯನ್ನು ವಿಶ್ವದ ಬೃಹತ್ ಭೂಸೇನಾ ಸಮರಾಭ್ಯಾಸ ಎಂದು ಬಣ್ಣಿಸಲಾಗಿದೆ.
- ದ್ವೈವಾರ್ಷಿಕವಾಗಿ ನಡೆಯುವ ಈ ಯುದ್ಧಭ್ಯಾಸದಲ್ಲಿ ಎರಡು ದೇಶಗಳ ಸೇನಾಪಡೆಗಳು ಕಸರತ್ತು ನಡೆಸಲಿದ್ದು, ಜಂಟಿ ಸಮರಾಭ್ಯಾಸವು ನವೆಂಬರ್ 13ರವರೆಗೆ ನಡೆಯಲಿದೆ.
- ಕುಮಾವ್ ರೆಜಿಮೆಂಟ್ನ ತುಕಡಿಯು ಭಾರತ ಸೇನೆಯನ್ನು ಪ್ರತಿನಿಧಿಸಿದ್ದರೆ, ನೇಪಾಳ ಜಬರ್ ಜಂಗ್ ಬೆಟಾಲಿಯನ್ ಕಳುಹಿಸಿದೆ.
- ಪರ್ವತ ಶ್ರೇಣಿಗಳಲ್ಲಿ ಎದುರಾಗಬಹುದಾದ ಭಯೋತ್ಪಾದಕರ ಆಕ್ರಮಣ ನಿಗ್ರಹ, ವಿಪತ್ತು ನಿರ್ವಹಣೆ ಸೇರಿದಂತೆ ವಿವಿಧ ಸಂದರ್ಭಗಳ ಅಣಕು ಪ್ರಾತ್ಯಕ್ಷಿಕೆಯೊಂದಿಗೆ ಭಾರತ ಮತ್ತು ನೇಪಾಳ ಯೋಧರು ಜಂಟಿ ಸಮರಾಭ್ಯಾಸದಲ್ಲಿ ಪಾಲ್ಗೊಂಡಿದ್ದಾರೆ.