ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ನವೆಂಬರ್-15, 2016
Question 1 |
1.ಇತ್ತೀಚೆಗೆ ಬಿಡುಗಡೆಗೊಂಡ 2016 ಮೆಲ್ಬೋರ್ನ್ ಮರ್ಸರ್ ಜಾಗತಿಕ ಪಿಂಚಣಿ ಸೂಚ್ಯಂಕ (Melbourne Mercer Global Pension Index (MMGPI) ದಲ್ಲಿ ಭಾರತ ಎಷ್ಟನೇ ಸ್ಥಾನದಲ್ಲಿದೆ?
10 | |
15 | |
25 | |
30 |
2016 ಮೆಲ್ಬೋರ್ನ್ ಮರ್ಸರ್ ಜಾಗತಿಕ ಪಿಂಚಣಿ ಸೂಚ್ಯಂಕದಲ್ಲಿ 27 ರಾಷ್ಟ್ರಗಳ ಪೈಕಿ ಭಾರತ 25ನೇ ಸ್ಥಾನದಲ್ಲಿದೆ. ಈ ಸೂಚ್ಯಂಕದಲ್ಲಿ ಡೆನ್ಮಾರ್ಕ್ ಸತತವಾಗಿ ಐದನೇ ವರ್ಷ ಮೊದಲ ಸ್ಥಾನ ಪಡೆದುಕೊಂಡಿದೆ. ನೆದರ್ ಲ್ಯಾಂಡ್ ಮತ್ತು ಆಸ್ಟ್ರೇಲಿಯಾ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದೆ. ರಾಷ್ಟ್ರೀಯ ಪಿಂಚಣೆ ವ್ಯವಸ್ಥೆಯಡಿ ತೆರಿಗೆ ವಿನಾಯತಿ ಹಾಗೂ ಅಟಲ್ ಪಿಂಚಣಿ ಯೋಜನೆ ಪಿಂಚಣಿ ಕ್ಷೇತ್ರದಲ್ಲಿ ಭಾರತ ಸುಧಾರಣೆಗೊಳ್ಳಲು ಪ್ರಮುಖ ಪಾತ್ರವಹಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. 2015 ರಲ್ಲಿ ಈ ಸೂಚ್ಯಂಕದಲ್ಲಿ ಭಾರತ 40.3 ಅಂಕವನ್ನು ಗಳಿಸಿದ್ದರೆ, 2016 ರಲ್ಲಿ 43.3 ಅಂಕಗಳಿಸಿದೆ.
Question 2 |
2. ಇತ್ತೀಚೆಗೆ ನಿಧನರಾದ “ಲಿಯೊನ್ ರಸ್ಸೆಲ್ (Leon Russel)” ಯಾವ ಕ್ಷೇತ್ರದಲ್ಲಿ ಪ್ರಸಿದ್ದರಾಗಿದ್ದರು?
ವಿಜ್ಞಾನ | |
ಸಂಗೀತ | |
ಸಾಹಿತ್ಯ | |
ಕ್ರೀಡೆ |
ಖ್ಯಾತ ಸಂಗೀತಗಾರ ಹಾಗೂ ಗೀತರಚನೆಕಾರ ಲಿಯೊನ್ ರಸ್ಸೆಲ್ ನಿಧನರಾದರು. ರಸ್ಸೆಲ್ ರವರು 70ರ ದಶಕದಲ್ಲಿ ರಾಕ್ ಅಂಡ್ ರೋಲ್ ಸಂಗೀತ ಮೂಲಕ ವಿಶ್ವಮನ್ನಣೆಗಳಿಸಿದ್ದರು. 2011 ರಲ್ಲಿ ರಸ್ಸೆಲ್ ರವರು ರಾಕ್ ಅಂಡ್ ರೋಲ್ ಹಾಲ್ ಆಫ್ ಫೇಮ್ ಗೆ ಸೇರ್ಪಡೆಗೊಂಡಿದ್ದರು.
Question 3 |
3. ಭಾರತದ ರಸ್ತೆ ಸಾಂದ್ರತೆ (Road Density) ಪ್ರತಿ ಚದರ ಕಿ.ಮೀ ಗೆ _______ ರಷ್ಟಿದೆ?
1.66 ಕಿ.ಮೀ | |
2.05 ಕಿ.ಮೀ | |
2.5 ಕಿ.ಮೀ | |
3.0 ಕಿ.ಮೀ |
ದೇಶದ ರಸ್ತೆ ಸಾಂದ್ರತೆ ಪ್ರತಿ ಚದರ ಕಿ.ಮೀಗೆ 1.66 ಕಿ.ಮೀ ರಷ್ಟಿದೆ. ಈ ಪ್ರಮಾಣ ಜಪಾನ್, ಯುಎಸ್ಎ, ಚೀನಾ, ಬ್ರೆಜಿಲ್ ಮತ್ತು ರಷ್ಯಾಗಿಂತಲೂ ಅತಿ ಹೆಚ್ಚು.
Question 4 |
4. “ಹರ್ ಘರ್ ಬಿಜ್ಲಿ ಲಗತಾರ್ (Har Ghar Bijli Lagataar)” ಕಾರ್ಯಕ್ರಮವನ್ನು ಜಾರಿಗೆ ತಂದ ರಾಜ್ಯ ಯಾವುದು?
ಬಿಹಾರ | |
ಒಡಿಶಾ | |
ಚತ್ತೀಸಘರ್ | |
ರಾಜಸ್ತಾನ |
ಒಡಿಶಾ ಸರ್ಕಾರ ರಾಜ್ಯದ 50 ಲಕ್ಷ ಎಪಿಎಲ್ ಕುಟುಂಬಗಳಿಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸುವ ಹರ್ ಘರ್ ಬಿಜ್ಲಿ ಲಗತಾರ್ ಕಾರ್ಯಕ್ರಮವನ್ನು ಜಾರಿಗೊಳಿಸಿದೆ. ಮುಂದಿನ ಎರಡು ವರ್ಷಗಳಲ್ಲಿ ರಾಜ್ಯದ ಪ್ರತಿ ಕುಟಂಬಕ್ಕೂ ವಿದ್ಯುತ್ ಸಂಪರ್ಕ ಕಲ್ಪಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.
Question 5 |
5. ಭಾರತ-ಚೀನಾ ಜಂಟಿ ಮಿಲಿಟರಿ ಸಮರಾಭ್ಯಾಸ “ಹ್ಯಾಂಡ್ ಇನ್ ಹ್ಯಾಂಡ್” ಯಾವ ರಾಜ್ಯದಲ್ಲಿ ಆರಂಭಗೊಂಡಿದೆ?
ಉತ್ತರಖಂಡ್ | |
ರಾಜಸ್ತಾನ | |
ಮಹಾರಾಷ್ಟ್ರ | |
ಜಮ್ಮು ಮತ್ತು ಕಾಶ್ಮೀರ |
ಭಾರತ-ಚೀನಾ ಜಂಟಿ ಮಿಲಿಟರಿ ಸಮರಾಭ್ಯಾಸ “ಹ್ಯಾಂಡ್-ಇನ್-ಹ್ಯಾಂಡ್” ಆರನೇ ಆವೃತ್ತಿ ಮಹಾರಾಷ್ಟ್ರದ ಪುಣೆಯಲ್ಲಿರುವ ಔಂದ್ ಮಿಲಿಟರಿ ಕ್ಯಾಂಪ್ ನಲ್ಲಿ ಆರಂಭಗೊಂಡಿದೆ. ನವೆಂಬರ್ 15 ರಿಂದ ಆರಂಭಗೊಂಡ ಈ ಸಮರಾಭ್ಯಾಸ ನವೆಂಬರ್ 27 ರವರೆಗೆ ನಡೆಯಲಿದೆ.
Question 6 |
6. 2016 ಶೋಡೌನ್ ಚಾಂಪಿಯನ್ ಷಿಪ್ ಗೆದ್ದ ಭಾರತದ ಚೆಸ್ ಆಟಗಾರ ಯಾರು?
ಪಂಕಜ್ ಸಿಂಗ್ | |
ವಿಶ್ವನಾಥನ್ ಆನಂದ್ | |
ಕಿರಣ್ ಕಾರ್ತಿಕ್ | |
ಬಾಬು ಎಂ ಆರ್ ಲೋಹಿತ್ |
ಭಾರತದ ಸ್ಟಾರ್ ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಸೇಂಟ್ ಲೂಯಿಸ್ ಶೋಡೌನ್ ಚೆಸ್ ಕೂಟದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಜಪಾನ್ ನ ಹಿಕರು ನಕಮುರಾ ವಿರುದ್ಧ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿದ್ದಾರೆ.
Question 7 |
7. 2016 ಇಂಗ್ಲೀಷ್ ಕೌಶಲ್ಯ ಶ್ರೇಯಾಂಕ (English Proficiency Ranking) ದಲ್ಲಿ ಭಾರತದ ಸ್ಥಾನ ______?
22 | |
20 | |
18 | |
24 |
ಸ್ಟೀಡಿಶ್ ಶೈಕ್ಷಣಿಕ ಸಂಸ್ಥೆ ಎಜುಕೇಷನ್ ಫಸ್ಟ್ ಹೊರತರುವ ಇಂಗ್ಲೀಷ್ ಕೌಶಲ್ಯ ಶ್ರೇಯಾಂಕದಲ್ಲಿ ಭಾರತ 22ನೇ ಸ್ಥಾನವನ್ನು ಪಡೆದುಕೊಂಡಿದೆ. ಕಳೆದ ವರ್ಷ ಭಾರತ 20ನೇ ಸ್ಥಾನದಲ್ಲಿತ್ತು. ಇಂಗ್ಲೀಷ್ ಭಾಷೆ ಮಾತನಾಡದ ರಾಷ್ಟ್ರಗಳಲ್ಲಿ ನೆದರ್ ಲ್ಯಾಂಡ್ ಯುವಕರು ಸರಾಗವಾಗಿ ಇಂಗ್ಲೀಷ್ ಮಾತನಾಡುವ ಮೂಲಕ ಮೊದಲ ಸ್ಥಾನದಲ್ಲಿದೆ. ಪಟ್ಟಿಯಲ್ಲಿ ಚೀನಾ 39ನೇ ಸ್ಥಾನ ಹಾಗೂ ಪಾಕಿಸ್ತಾನ 48ನೇ ಸ್ಥಾನದಲ್ಲಿದೆ.
Question 8 |
8. ಇತ್ತೀಚೆಗೆ ಹಿಂದ್-ಇರಾನ್ ಪೋರ್ಟಲ್ (Hind-Iran Portal) ಅನ್ನು ಯಾವ ಉದ್ದೇಶಕ್ಕಾಗಿ ಆರಂಭಿಸಲಾಗಿದೆ?
ವ್ಯಾಪಾರ | |
ಸಾಮಾಜಿಕ ಕಳವಳಿ | |
ಶಿಕ್ಷಣ | |
ಉದ್ಯಮ |
ಹಿಂದ್-ಇರಾನ್ ಪೋರ್ಟನ್ ಅನ್ನು ಭಾರತ ಮತ್ತು ಇರಾನ್ ದೇಶಗಳ ನಡುವೆ ವ್ಯಾಪಾರವನ್ನು ಸುಲಭೀಕರಣಗೊಳಿಸಲು ಆರಂಭಿಸಲಾಗಿದೆ.
Question 9 |
9. ಜಲ ಸಂಪನ್ಮೂಲ ನಿರ್ವಹಣೆ ಮತ್ತು ಕೃಷಿ ಸಂಬಂಧಿಸಿದಂತೆ ಭಾರತ ಇತ್ತೀಚೆಗೆ ಯಾವ ದೇಶದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ?
ಯುಕೆ | |
ಅಮೆರಿಕ | |
ಇಸ್ರೇಲ್ | |
ಆಸ್ಟ್ರೇಲಿಯಾ |
ಭಾರತ ಮತ್ತು ಇಸ್ರೇಲ್ ಜಲ ಸಂಪನ್ಮೂಲ ನಿರ್ವಹಣೆ ಮತ್ತು ಕೃಷಿ ಸಂಬಂಧಿಸಿದಂತೆ ಒಪ್ಪಂದಕ್ಕೆ ಸಹಿ ಹಾಕಿವೆ. ಭಾರತ ಪ್ರವಾಸದಲ್ಲಿರುವ ಇಸ್ರೇಲ್ ಅಧ್ಯಕ್ಷ ರುವೆನ್ ರಿವ್ಲಿನ್ ಮತ್ತು ಭಾರತ ಪ್ರಧಾನಿ ನರೇಂದ್ರ ಮೋದಿ ರವರ ನಡುವೆ ಈ ಒಪ್ಪಂದಗಳಿಗೆ ಸಹಿ ಹಾಕಲಾಯಿತು.
Question 10 |
10. 2016 ವಿಶ್ವ ಇಂಟರ್ನೆಟ್ ಸಮ್ಮೇಳನ ಯಾವ ದೇಶದಲ್ಲಿ ನಡೆಯಲಿದೆ?
ಭಾರತ | |
ಚೀನಾ | |
ರಷ್ಯಾ | |
ಪಾಕಿಸ್ತಾನ |
ಚೀನಾ ವುಝೆನ್ ನಲ್ಲಿ ಮೂರನೇ ವಿಶ್ವ ಇಂಟರ್ನೆಟ್ ಸಮ್ಮೇಳನ ನವೆಂಬರ್ 16 ರಂದು ಆರಂಭಗೊಳ್ಳಲಿದೆ. ಡಿಜಿಟಲ್ ಎಕಾನಮಿ ಬಗ್ಗೆ ಈ ಸಮ್ಮೇಳನದಲ್ಲಿ ಚರ್ಚಿಸಲಾಗುವುದು. ಸುಮಾರು 120 ದೇಶಗಳ ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ
[button link=”http://www.karunaduexams.com/wp-content/uploads/2016/11/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ವಿಜ್-ನವೆಂಬರ್-15.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
u r a quiz master