ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ನವೆಂಬರ್-16, 2016
Question 1 |
ಟಿಯಾನ್ಹೆ-2 | |
ಸನ್ ವೇ ಟೈಹುಲೈಟ್ | |
ಜಾಗ್ವರ್ | |
ಟ್ವಿಂಕಲ್ |
ಇತ್ತೀಚೆಗೆ ಬಿಡುಗಡೆಗೊಂಡ ಟಾಪ್-500 ಸೂಪರ್ ಕಂಪ್ಯೂಟರ್ಸ್ ಪಟ್ಟಿಯಲ್ಲಿ ಚೀನಾದ ಸನ್ ವೇ ಟೈಹುಲೈಟ್ ಸೂಪರ್ ಕಂಪ್ಯೂಟರ್ ವಿಶ್ವದ ಅತ್ಯಂತ ವೇಗದ ಸೂಪರ್ ಕಂಪ್ಯೂಟರ್ ಎನಿಸಿದೆ. ಚೀನಾದ ನ್ಯಾಷನಲ್ ರಿಸರ್ಚ್ ಸೆಂಟರ್ ಆಫ್ ಪ್ಯಾರಲೆಲ್ ಕಂಪ್ಯೂಟರ್ ಎಂಜನಿಯರ್ ಅಂಡ್ ಟೆಕ್ನಾಲಜಿ ಇದನ್ನು ಅಭಿವೃದ್ದಿಪಡಿಸಿದೆ. ಟೈಹುಲೈಟ್ ಪ್ರತಿ ಸೆಕೆಂಡ್ ಗೆ 93 ಕ್ವಾಡ್ರಿಲಿಯನ್ ಕ್ಯಾಲುಕೇಷನ್ ಸಾಮರ್ಥ್ಯವನ್ನು ಹೊಂದಿದೆ.
Question 2 |
2. ಇತ್ತೀಚೆಗೆ ಈ ಕೆಳಗಿನ ಯಾವ ರಾಜ್ಯ ಡಿಜಿಟಲ್ ಅಭಿಯಾನಕ್ಕಾಗಿ ಮೈಕ್ರೋಸಾಫ್ಟ್ ಸಂಸ್ಥೆಯೊಂದಿಗೆ ಒಡಂಬಡಿಕೆಗೆ ಸಹಿ ಹಾಕಿದೆ?
ತೆಲಂಗಣ | |
ಕೇರಳ | |
ಮಹಾರಾಷ್ಟ್ರ | |
ಗುಜರಾತ್ |
ತೆಲಂಗಣ ಸರ್ಕಾರ ಡಿಜಿಟಲ್ ತೆಲಂಗಣ ಕಾರ್ಯಕ್ರಮದ ಅನುಷ್ಟಾನಕ್ಕಾಗಿ ಮೈಕ್ಟೋಸಾಫ್ಟ್ ಇಂಡಿಯಾದೊಂದಿಗೆ ಒಡಂಬಡಿಕೆಗೆ ಸಹಿ ಹಾಕಿದೆ. ಈ ಒಪ್ಪಂದದಡಿ ಮೊಬೈಲ್ ಆಧರಿತ ಮತ್ತು ಕ್ಲೌಡ್ ತಂತ್ರಜ್ಞಾನ ಅಭಿವೃದ್ದಿಗೆ ತೆಲಂಗಣ ಸರ್ಕಾರಕ್ಕೆ ಅಗತ್ಯ ಸಹಾಯವನ್ನು ನೀಡಲಿದೆ.
Question 3 |
3. “2016 ರೊಲೆಕ್ಸ್ ಆವಾರ್ಡ್ ಫಾರ್ ಎಂಟರ್ಪ್ರೈಸ್ ಪ್ರಶಸ್ತಿ” ಪಡೆದ ಸೋನಂ ವಾಂಗ್ ಚುಕ್ ಯಾವ ದೇಶದವರು?
ಚೀನಾ | |
ಬಾಂಗ್ಲದೇಶ | |
ಭಾರತ | |
ಸಿಂಗಪುರ |
ಲಡಾಖ್ ನ ಪ್ರಖ್ಯಾತ ಶಿಕ್ಷಣ ತಜ್ಞ ಮತ್ತು ಸಮಾಜ ವಿಜ್ಞಾನಿ ಡಾ. ಸೋನಂ ವಾಂಗ್ ಚುಕ್ ಅವರಿಗೆ ಪ್ರತಿಷ್ಠಿತ 2016 ರೋಲೆಕ್ಸ್ ಆವಾರ್ಡ್ ಫಾರ್ ಎಂಟರ್ಪ್ರೈಸ್ ಪ್ರಶಸ್ತಿ ಲಭಿಸಿದೆ. ಲಡಾಖ್ನಂತಹ ದುರ್ಗಮ, ಪ್ರತಿಕೂಲ ವಾತಾವರಣದ ಅಲ್ಪ ಸೌಕರ್ಯದ ಪ್ರದೇಶದಲ್ಲಿ ತೊಟ್ಟು ನೀರಿಗೂ ಪರದಾಡುತ್ತಿದ್ದ ಅಲ್ಲಿನ ಜನತೆಗೆ ನೀರುಣಿಸುವ ಕೆಲಸ ಮಾಡಿದವರು ಸೋನಂ ವಾಂಗ್ಚುಕ್. ಸೋನಂ ವಾಂಗ್ಚುಕ್ ಅವರ ಸಮಾಜಮುಖೀ ಕೆಲಸಗಳನ್ನು ಪರಿಗಣಿಸಿ ಅವರಿಗೆ ಅಮೆರಿಕದ ಪ್ರತಿಷ್ಠಿತ ರೊಲೆಕ್ಸ್ ನಾವೀನ್ಯತಾ ಪ್ರಶಸ್ತಿ ಸಂದಿದೆ. ಲಡಾಖ್ ನಲ್ಲಿ ತಮ್ಮ ಆವಿಷ್ಕಾರದ ಮೂಲಕ ಮಂಜುಗಡ್ಡೆಯ ಸ್ತೂಪಗಳು ಅಥವಾ ಕೃತಕ ನೀರ್ಗಲ್ಲುಗಳನ್ನು ನಿರ್ಮಿಸಿದ್ದು, ಅವು ವಾತಾವರಣದ ಶಾಖದಿಂದ ಹಂತಹಂತವಾಗಿ ನೀರಾಗುವಂತೆ ಮಾಡಿ, ಪೈಪ್ಗಳ ಮೂಲಕ ಹರಿಸುವ ಪ್ಲಾನ್ ಮಾಡಿದ್ದಾರೆ. ಈ ಸ್ತೂಪಗಳು 35ರಿಂದ 40 ಮೀಟರ್ ಗಳಷ್ಟು ಎತ್ತರವಿದ್ದು ಸುಮಾರು 16 ಸಾವಿರ ಕ್ಯೂಬಿಕ್ ಲೀಟರ್ ನೀರನ್ನು ಹಿಡಿದಿಟ್ಟುಕೊಳ್ಳುತ್ತವೆ. ಮೂಲಕ ಸುಮಾರು 10 ಹೆಕ್ಟೇರ್ ಭೂಮಿಗೆ ನೀರುಣಿಸುವ ಪ್ರಯತ್ನ ಮಾಡಿದ್ದಾರೆ. 80-90 ಇಂತಹ ಸ್ತೂಪಗಳನ್ನು ವಾಂಗ್ಚುಕ್ ಅವರ ತಂಡ ನಿರ್ಮಾಣ ಮಾಡಿದ್ದು, ಲಡಾಖ್ನ ನೀರ ದಾಹ ತಣಿಸುವ ಕೆಲಸ ಮಾಡಿದ್ದಾರೆ.
Question 4 |
4. ಅಮೆರಿಕದ ಪ್ರತಿಷ್ಠಿತ ರಿಪಬ್ಲಿಕನ್ ಗವರ್ನರ್ಗಳ ಸಂಘದ (ಆರ್ಜಿಎ) ಉಪಾಧ್ಯಕ್ಷರಾಗಿ ಆಯ್ಕೆಯಾದ ಭಾರತೀಯ ಮೂಲ ಮಹಿಳೆ ಯಾರು?
ಪ್ರಮೀಳಾ ಜೋನಾಥನ್ | |
ಕಮಲ ಹ್ಯಾರಿಸ್ | |
ನಿಕ್ಕಿ ಹ್ಯಾಲೆ | |
ಕೃಪಾ ಕೃಷ್ಣನ್ |
ದಕ್ಷಿಣ ಕರೊಲಿನಾದ ಗವರ್ನರ್ ಆಗಿರುವ ಭಾರತ ಮೂಲದ ಅಮೆರಿಕದ ಪ್ರಭಾವಿ ರಾಜಕಾರಣಿ ನಿಕ್ಕಿ ಹ್ಯಾಲೆ ಅವರು ಪ್ರತಿಷ್ಠಿತ ರಿಪಬ್ಲಿಕನ್ ಗವರ್ನರ್ಗಳ ಸಂಘದ (ಆರ್ ಜಿಎ ) ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ವಿಸ್ಕಾನ್ಸಿನ್ ಗವರ್ನರ್ ಸ್ಕಾಟ್ ವಾಲ್ಕರ್ ಆರ್ಜಿಎ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. 33 ರಾಜ್ಯಗಳು ರಿಪಬ್ಲಿಕನ್ ಗವರ್ನರ್ಗಳ ಹಿಡಿತದಲ್ಲಿದೆ.
Question 5 |
5. ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ದೇಶದ ಮೊದಲ ಮೂರು ಹುಲಿ ಮೀಸಲು ಪ್ರದೇಶಗಳು ಯಾವುವು?
ಜಿಮ್ ಕಾರ್ಬೆಟ್, ಬಂಡೀಪುರ, ಕಾಜೀರಂಗ | |
ನಾಗರಹೊಳೆ, ಕನ್ಹಾ, ಬಂಡೀಪುರ | |
ಜಿಮ್ ಕಾರ್ಬೆಟ್, ಕಾಜೀರಂಗ, ಬಂಡೀಪುರ | |
ನಾಗರಹೊಳೆ, ಜಿಮ್ ಕಾರ್ಬೆಟ್, ಬಂಡೀಪುರ |
ಜಿಮ್ ಕಾರ್ಬೆಟ್ ಹುಲಿ ಸಂರಕ್ಷಿತ ಪ್ರದೇಶ (261), ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ (134) ಮತ್ತು ಕಾಜೀರಂಗ ಹುಲಿ ಸಂರಕ್ಷಿತ ಪ್ರದೇಶ (115) ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಮೂಲಕ ಮೊದಲ ಮೂರು ಸ್ತಾನದಲ್ಲಿವೆ.
Question 6 |
6. ಆಕ್ಸಫರ್ಡ್ ನಿಘಂಟಿನ ಪ್ರಕಾರ ಯು.ಕೆ ಯಲ್ಲಿ ಅತ್ಯಂತ ಸಾಮಾನ್ಯವಾಗಿರುವ ಭಾರತೀಯ ಉಪನಾಮ (Surname) ಯಾವುದು?
ಪಟೇಲ್ | |
ಸಿಂಗ್ | |
ಚಕ್ರವರ್ತಿ | |
ನಾಯಕ್ |
ಆಕ್ಸಫರ್ಡ್ ನಿಘಂಟಿನ ಪ್ರಕಾರ ಪಟೇಲ ಯು.ಕೆ ಯಲ್ಲಿ ಅತ್ಯಂತ ಸಾಮಾನ್ಯವಾದ ಭಾರತೀಯ ಉಪನಾಮವಾಗಿ ಹೊರಹೊಮ್ಮಿದೆ. 2011ರ ಜನಗಣತಿ ಪ್ರಕಾರ ಬ್ರಿಟನ್ ನಲ್ಲಿ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ಜನರು ಪಟೇಲ ಉಪನಾಮವನ್ನು ಹೊಂದಿದ್ದಾರೆ. ಎರಡನೇ ಸ್ಥಾನದಲ್ಲಿ ಚಕ್ರವರ್ತಿ ಉಪನಾಮ ಹೊರಹೊಮ್ಮಿದೆ.
Question 7 |
7. 60ನೇ ರಾಷ್ಟ್ರೀಯ ಶಾಟ್ಗನ್ ಶೂಟಿಂಗ್ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕವನ್ನು ಗೆದ್ದುಕೊಂಡವರು _______?
ಅಧಿರಾಜ್ ಸಿಂಗ್ ರಾಥೋಡ್ | |
ಮಾನವಜಿತ್ ಸಿಂಗ್ ಸಂಧು | |
ಮಾನವಾದಿತ್ಯ ಸಿಂಗ್ ರಾಥೋಡ್ | |
ಲಕ್ಷ್ಯ ಶರಣ್ |
ಪಂಜಾಬ್ನ ಮಾನವಜಿತ್ ಸಿಂಗ್ ಸಂಧು 60ನೇ ರಾಷ್ಟ್ರೀಯ ಶಾಟ್ಗನ್ ಶೂಟಿಂಗ್ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು. ಪುರುಷರ ಟ್ರ್ಯಾಪ್ ವಿಭಾಗದ ಫೈನಲ್ನಲ್ಲಿ ಒಟ್ಟು 14ರಲ್ಲಿ 13 ಪಾಯಿಂಟ್ಸ್ ಕಲೆ ಹಾಕುವ ಮೂಲಕ ಸಂಧು ಸಮೀಪದ ಸ್ಪರ್ಧಿ ಒಡಿಶಾದ ರವೀಂದರ್ ಸಿಂಗ್ ಅವರನ್ನು ಮಣಿಸಿದರು.
Question 8 |
8. ನಿಷೇಧಿತ ಉದ್ದೀಪನಾ ಮದ್ದು ಸೇವನೆಯಿಂದ ಎಂಟು ವರ್ಷ ನಿಷೇಧ ಶಿಕ್ಷೆಗೆ ಒಳಗಾಗಿರುವ ಭಾರತದ ಅಥ್ಲೇಟಿಕ್ ಯಾರು?
ಧರ್ಮವೀರ್ ಸಿಂಗ್ | |
ನರಸಿಂಗ ದತ್ತ್ | |
ಅಶೋಕ್ ಚಾವ್ಹಾಣ | |
ರಮೇಶ್ ತೋಪರ್ |
ನಿಷೇಧಿತ ಉದ್ದೀಪನಾ ಮದ್ದು ಸೇವಿಸಿದ್ದು ಪರೀಕ್ಷಾ ವರದಿಯಿಂದ ಸಾಬೀತಾಗಿರುವುದರಿಂದ ಹರಿಯಾಣದ ಅಥ್ಲೀಟ್ ಧರ್ಮವೀರ್ ಸಿಂಗ್ ಮೇಲೆ ರಾಷ್ಟ್ರೀಯ ಉದ್ದೀಪನಾ ಮದ್ದು ತಡೆ ಘಟಕ (ನಾಡಾ) ಎಂಟು ವರ್ಷ ನಿಷೇಧ ಶಿಕ್ಷೆ ವಿಧಿಸಿದೆ. ಧರ್ಮವೀರ್ ನಾಲ್ಕು ವರ್ಷಗಳ ಹಿಂದೆ ರಾಷ್ಟ್ರೀಯ ಅಥ್ಲೆಟಿಕ್ ಚಾಂಪಿಯನ್ಷಿಪ್ನ 100 ಮೀಟರ್ಸ್ ಓಟದ ಸ್ಪರ್ಧೆಯಲ್ಲಿ ಚಿನ್ನದ ಸಾಧನೆ ಮಾಡಿದ್ದರು. ಬ್ರೆಜಿಲ್ನ ರಿಯೊ ಡಿ ಜನೈರೊದಲ್ಲಿ ನಡೆದ ಒಲಿಂಪಿಕ್ಸ್ಗೂ ಅರ್ಹತೆ ಪಡೆದುಕೊಂಡಿದ್ದರು. ಮದ್ದು ಸೇವಿಸಿದ ಆರೋಪವಿದ್ದ ಕಾರಣ ಕೊನೆಯಲ್ಲಿ ಒಲಿಂಪಿಕ್ಸ್ನಲ್ಲಿ ಪಾಲ್ಗೊಳ್ಳುವ ಅವಕಾಶ ಕಳೆದುಕೊಂಡಿದ್ದರು. ಧರ್ಮವೀರ್ ಅವರನ್ನು ಎರಡೂ ಸಲ ಪರೀಕ್ಷೆಗೆ ಒಳಪಡಿಸಿದ್ದಾಗ ಮದ್ದು ಸೇವಿಸಿದ್ದು ಸಾಬೀತಾಗಿದೆ. ಆದ್ದರಿಂದ ನಾಡಾ ಎಂಟು ವರ್ಷ ನಿಷೇಧ ಹೇರಿದೆ.
Question 9 |
9. “ಎ ಸೀಸನ್ ಆಫ್ ಘೋಸ್ಟ್ಸ್ (A Season of Ghosts)” ಪುಸ್ತಕದ ಲೇಖಕರು _____?
ರಸ್ಕಿನ್ ಬಾಂಡ್ | |
ಮಿಲನ್ ಗಂಗೂಲಿ | |
ಚೇತನ್ ಭಗತ್ | |
ಅಮಿತಾವ್ ಘೋಷ್ |
ಖ್ಯಾತ ಲೇಖಕ ರಸ್ಕಿನ್ ಬಾಂಡ್ ಅವರು “ಎ ಸೀಸನ್ ಆಫ್ ಘೋಸ್ಟ್ಸ್” ಪುಸ್ತಕವನ್ನು ಬರೆದಿದ್ದಾರೆ.
Question 10 |
10. 2016 ಗ್ಲೋಬಲ್ ಸಿಟಿಜನ್ ಇಂಡಿಯಾ ಉತ್ಸವ ಯಾವ ನಗದರದಲ್ಲಿ ನಡೆಯಲಿದೆ?
ನವದೆಹಲಿ | |
ಮುಂಬೈ | |
ಹೈದ್ರಾಬಾದ್ | |
ಕೊಲ್ಕತ್ತಾ |
2016 ಗ್ಲೋಬಲ್ ಸಿಟಿಜನ್ ಇಂಡಿಯಾ ಉತ್ಸವ ಮುಂಬೈ. ಮಹಾರಾಷ್ಟ್ರದಲ್ಲಿ ನಡೆಯಲಿದೆ. ಜನಪ್ರಿಯ ಸಂಸ್ಕೃತಿ ಮತ್ತು ಸಾರ್ವಜನಿಕ ನೀತಿಯನ್ನು ಒಟ್ಟಿಗೆ ತರುವಲ್ಲಿ ಈ ಉತ್ಸವ ವೇದಿಕೆಯಾಗಲಿದೆ.
[button link=”http://www.karunaduexams.com/wp-content/uploads/2016/11/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾನ್ಯ-ಜ್ಞಾನ-ಕ್ಚಿಜ್-ನವೆಂಬರ್-16.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ
ಧನ್ಯವಾದಗಳು ಸರ್