ಪಲ್ಯಾರ್ ನ್ಯಾವಿಗೇಷನ್ ಉಪಗ್ರಹ XPNAV-1 ಯಶಸ್ವಿಯಾಗಿ ಉಡಾಯಿಸಿದ ಚೀನಾ

ವಿಶ್ವದ ಮೊದಲ ಪಲ್ಸಾರ ನ್ಯಾವಿಗೇಷನ್ ಉಪಗ್ರಹ ಅಥವಾ ಬಾಹ್ಯಕಾಶ ನೌಕೆಯನ್ನು ಚೀನಾ ಯಶಸ್ವಿಯಾಗ ಉಡಾಯಿಸಿದೆ. ಇದಕ್ಕೆ XPNAV-1 ಎಂದು ಹೆಸರಿಡಲಾಗಿದೆ. ಚೀನಾದ ಜಿಂಕ್ವಾನ್ ರಾಕೆಟ್ ಉಡಾವಣಾ ಕೇಂದ್ರದಿಂದ ಲಾಂಗ್ ಮಾರ್ಚ್ 11 ರಾಕೆಟ್ ಬಳಸಿ ಈ ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಲಾಗಿದೆ.

XPNAV-1 ಪ್ರಮುಖಾಂಶಗಳು:

  • ಈ ಉಪಗ್ರಹದ ತೂಕ 200 ಕೆ.ಜಿ ಹಾಗೂ ಎರಡು ಡಿಟೆಕ್ಟರ್ ಗಳನ್ನು ಇದು ಹೊಂದಿದೆ.
  • ಈ ಉಪಗ್ರಹ ಸೂರ್ಯನ ಕಕ್ಷೆಯ ಸುತ್ತ ಸುತ್ತಲಿದೆ (500 ಕಿ.ಮೀ ಎತ್ತರದಲ್ಲಿ).
  • ಉಪಗ್ರಹ, ಅಂತರಿಕ್ಷದಲ್ಲಿನ ವಾತಾವರಣ ಮತ್ತು ಅದಕ್ಕೆ ಹೊಂದಿಕೊಳ್ಳಲು ಬೇಕಾದ ಉಪಗ್ರಹಗಳ ಗುಣಗಳನ್ನು ವಿಜ್ಞಾನಿಗಳಿಗೆ ತಿಳಿಸಲಿದೆ.

ಪಲ್ಸಾರ್ ಎಂದರೇನು?

 ಪಲ್ಸಾರ್ ಎಂದರೆ ಹೆಚ್ಚು ಕಾಂತೀಯ, ತಿರುಗುತ್ತಿರುವ ನ್ಯೂಟ್ರಾನ್ ನಕ್ಷತ್ರ. ಈ ನಕ್ಷತ್ರಗಳು ರೇಡಿಯೊ ಅಲೆಗಳನ್ನು ವಿಕಿರಣವಾಗಿ ಹೊರಸೂಸುತ್ತಿರುತ್ತವೆ. ಗೋಲಕಾರದಲ್ಲಿರುವ ಪಲ್ಸಾರ್ ಗಳು ದೊಡ್ಡ ನಗರದಷ್ಟು ಗಾತ್ರವಿರುತ್ತವೆ. ಸೂರ್ಯನಿಗಿಂತಲೂ ಹೆಚ್ಚು ದ್ರವ್ಯರಾಶಿಯನ್ನು ಇವು ಹೊಂದಿರುತ್ತವೆ.

36ನೇ ಅಂತಾರಾಷ್ಟ್ರೀಯ ವ್ಯಾಪಾರ ಮೇಳಕ್ಕೆ ದೆಹಲಿಯಲ್ಲಿ ಚಾಲನೆ

36ನೇ ಅಂತಾರಾಷ್ಟ್ರೀಯ ವ್ಯಾಪಾರ ಮೇಳಕ್ಕೆ ನವದೆಹಲಿಯ ಪ್ರಗತಿ ಮೈದಾನದಲ್ಲಿ ಚಾಲನೆ ನೀಡಲಾಯಿತು. ಈ ವ್ಯಾಪಾರ ಮೇಳ ನವೆಂಬರ್ 14 ರಿಂದ 18 ರವರೆಗೆ ನಡೆಯಲಿದೆ. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ರವರು ಈ ಮೇಳವನ್ನು ಉದ್ಘಾಟಿಸಿದರು.

ಪ್ರಮುಖಾಂಶಗಳು:

  • ಈ ವರ್ಷದ ಅಂತಾರಾಷ್ಟ್ರೀಯ ವ್ಯಾಪಾರ ಮೇಳದ ಥೀಮ್ “ಡಿಜಿಟಲ್ ಇಂಡಿಯಾ”
  • ಅಂತಾರಾಷ್ಟ್ರೀಯ ವ್ಯಾಪಾರ ಮೇಳವನ್ನ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಅಧೀನದಲ್ಲಿರುವ ಇಂಡಿಯನ್ ಟ್ರೇಡ್ ಪ್ರೊಮೊಶನ್ ಆರ್ಗನೈಸೇಷನ್ (ITPO) ಆಯೋಜಿಸುತ್ತಿದೆ.
  • ಈ ವರ್ಷ ವ್ಯಾಪಾರ ಮೇಳದ ಪಾಲುದಾರಿಕೆ ರಾಷ್ಟ್ರ ದಕ್ಷಿಣ ಕೊರಿಯಾ ಮತ್ತು ಪ್ರಾಮುಖ್ಯತ ರಾಷ್ಟ್ರ ಬೆಲಾರಸ್. ಜೊತೆಗೆ ಮಧ್ಯಪ್ರದೇಶ ಮತ್ತು ಜಾರ್ಖಂಡ್ ಪಾಲುದಾರಿಕೆ ರಾಜ್ಯಗಳಾಗಿದ್ದು, ಹರಿಯಾಣ ಪ್ರಾಮುಖ್ಯತೆ ರಾಜ್ಯವಾಗಿದೆ.
  • ಈ ವ್ಯಾಪಾರ ಮೇಳದಲ್ಲಿ ಸುಮಾರು 27 ರಾಷ್ಟ್ರಗಳ 150 ಸಂಸ್ಥೆಗಳು ಭಾಗವಹಿಸಲಿವೆ.
  • ಡಿಜಿಟಲ್ ತಂತ್ರಜ್ಞಾನ ಮತ್ತು ಇ-ಗವರ್ನೆಸ್ ಒಗ್ಗೂಡಿಸಿಕೊಂಡು ದೇಶದಲ್ಲಿನ ಬಡತನವನ್ನು ಹೋಗಲಾಡಿಸುವ ಪ್ರಯತ್ನವನ್ನು ಸಾರುವುದು ಈ ವರ್ಷದ ಥೀಮ್ ಉದ್ದೇಶ.
  • ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಿವಿಧ ಯೋಜನೆ, ಕಾರ್ಯಕ್ರಮಗಳ ಬಗ್ಗೆ ಮಾಹಿತಿ ತೋರ್ಪಡಿಸಲು ಈ ಮೇಳ ವೇದಿಕೆ ಕಲ್ಪಿಸಲಿದೆ.

ನವೆಂಬರ್ 12: ವಿಶ್ವ ನ್ಯುಮೋನಿಯಾ ದಿನ 

ವಿಶ್ವ ನ್ಯುಮೋನಿಯಾ ದಿನವನ್ನು ಜಾಗತಿಕವಾಗಿ ಪ್ರತಿ ವರ್ಷ ನವೆಂಬರ್ 12 ರಂದು ಆಚರಿಸಲಾಗುತ್ತದೆ. ನ್ಯುಮೋನಿಯಾ ಕಾಯಿಲೆ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ನ್ಯುಮೋನಿಯಾ ದಿನವನ್ನು ಹಮ್ಮಿಕೊಳ್ಳಲಾಗುತ್ತದೆ. ಈ ದಿನದಂದು ನ್ಯುಮೋನಿಯಾ ಕಾಯಿಲೆ ಗಂಭೀರತೆ ಹಾಗೂ ಜಗತ್ತಿನಾದ್ಯಂತ ರೋಗದ ಬಗ್ಗೆ ಅರಿವು ಮೂಡಿಸುವುದು, ತಡೆಯುವುದು ಮತ್ತು ಚಿಕಿತ್ಸೆ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

ಈ ವರ್ಷದ ಥೀಮ್: Keep the Promise, Stop Pneumonia Now

ಹಿನ್ನಲೆ:

ವಿಶ್ವ ನ್ಯುಮೋನಿಯಾ ದಿನವನ್ನು ಮೊದಲ ಬಾರಿಗೆ 2009ರಲ್ಲಿ ಆಚರಿಸಲಾಯಿತು. ಪ್ರಸ್ತುತ ವಿಶ್ವದಾದ್ಯಂತ 140ಕ್ಕೂ ಹೆಚ್ಚು NGOಗಳು, ಶೈಕ್ಷಣಿಕ ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳು ಮತ್ತು ಸಂಘ ಸಂಸ್ಥೆಗಳು ಆಚರಣೆಯಲ್ಲಿ ಭಾಗವಹಿಸುತ್ತಿವೆ.

ನ್ಯುಮೋನಿಯಾ ಬಗ್ಗೆ:

  • ನ್ಯುಮೋನಿಯಾವು ಸೋಂಕಿನಿಂದ ಬರುವ ಅತಿ ಸಾಮಾನ್ಯವಾದ ರೋಗ . ಇದು ಶ್ವಾಸಕೋಶದ ಸೋಂಕಿನಿಂದ ಬರುವುದು. ಅದರಲ್ಲಿನ ಅಲ್ವಿಯೊಲುಗಳು (ಉಸಿರಾಟದ ಮರದ ಕೊನೆಯ ಶಾಖೆಗಳು ಮತ್ತು ಶ್ವಾಸಕೋಶದಲ್ಲಿ ಅನಿಲ ವಿನಮಯದ ಪ್ರಾಥಮಿಕ ಘಟಕವಾಗಿ ಕೆಲಸಮಾಡುವವು) ಒಂದು ಇಲ್ಲವೆ ಹೆಚ್ಚು ಭಾಗಗಳಲ್ಲಿ ಸೋಂಕಿತವಾದರೆ ಶ್ವಾಶಕೋಶದಲ್ಲಿ ಜೀವ ದ್ರವ  ಸಂಗ್ರಹವಾಗುವುದು. ಇದನ್ನೆ ಕಂಜೆಷನ್ ಎನ್ನವರು. ಅದೆ ನ್ಯುಮೋನಿಯಾದ ಪ್ರಮುಖ ಲಕ್ಷಣ. ಸಂಗ್ರಹವಾದ ದ್ರವವು ಶ್ವಾಸಕೋಶದ ಕಾರ್ಯವನ್ನು ಕಡಿಮೆ ಕುಂಠಿತಗೊಳಿಸುವುದು.
  • ನ್ಯುಮೋನಿಯಾ ಸೋಂಕು ಒಂದು ಇಲ್ಲವೆ ಎರಡೂ ಶ್ವಾಸಕೋಶಗಳಿಗೆ ಆಗಬಹುದು. ಇದು ಬ್ಯಾಕ್ಟೀರಿಯಾ, ವೈರಾಣು ಅಥವ ಫಂಗೈನಿಂದ ಆಗಬಹುದು.

ಪ್ರಮುಖ ಲಕ್ಷಣಗಳು:

  • ಚಳಿ ಜ್ವರ, ಕಫ, ಕಡಿಮೆ ಉಸಿರಾಟದ ಅವಧಿ ಮತ್ತು ಸುಸ್ತು.

ಭಾರತ ವಿಶ್ವದಲ್ಲೆ ಅತಿ ಹೆಚ್ಚು ನ್ಯುಮೋನಿಯಾ ಹಾಗೂ ಡಯೋರಿಯಾ ಪ್ರಕರಣಗಳನ್ನು ಹೊಂದಿರುವ ರಾಷ್ಟ್ರವಾಗಿದೆ. ನ್ಯುಮೋನಿಯಾ ಮತ್ತು ಡಯೋರಿಯಾ ದೇಶದಲ್ಲಿ ಐದು ವರ್ಷದೊಳಗಿನ ಮಕ್ಕಳು ಹೆಚ್ಚಾಗಿ ಸಾವನ್ನಪ್ಪಲು ಪ್ರಮುಖವಾದ ಕಾಯಿಲೆಗಳಾಗಿವೆ. ದೇಶದಲ್ಲಿ 2015 ರಲ್ಲಿ 2,96,279 ಸಾವು ಈ ಕಾಯಿಲೆಗಳಿಂದ ಸಂಭವಿಸಿದೆ.

One Thought to “ಪ್ರಚಲಿತ ವಿದ್ಯಮಾನಗಳು- ನವೆಂಬರ್-12, 2016”

Leave a Comment

This site uses Akismet to reduce spam. Learn how your comment data is processed.