ಇಂಡಿಯನ್ ಓಪನ್ ಗಾಲ್ಫ್ ಪ್ರಶಸ್ತಿ ಗೆದ್ದ ಅದಿತಿ ಅಶೋಕ್

ಬೆಂಗಳೂರು ಮೂಲದ ಉದಯೋನ್ಮುಖ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ ಇಂಡಿಯನ್ ಓಪನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಈ ಮೂಲಕ  ಲೇಡೀಸ್ ಯುರೋಪಿಯನ್ ಟೂರ್ ಪಂದ್ಯವನ್ನು ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಕೀರ್ತಿಗೆ ಅದಿತಿ ಭಾಜನರಾಗಿದ್ದಾರೆ. ಹರಿಯಾಣದ ಗುರುಗ್ರಾಮದ ಡಿಎಲ್ಎಫ್ ಗಾಲ್ಫ್ ಮತ್ತು ಕಂಟ್ರಿ ಕ್ಲಬ್ ನಲ್ಲಿ ಅದಿರಿ ಈ ಸಾಧನೆ ಮಾಡಿದರು. ಆ ಮೂಲಕ 60,000 ಡಾಲರ್ ತಮ್ಮದಾಗಿಸಿಕೊಂಡರು.

  • ಒಂಭತ್ತನೇ ಸ್ಥಾನದಲ್ಲಿದ್ದ ಅದಿತಿ, 17ನೇ ಕುಳಿ (ಹೋಲ್) ನಂತರ 2ನೇ ಸ್ಥಾನಕ್ಕೆ ಜಿಗಿದಿದ್ದರು, ಇನ್ನೇನು ಕಿರೀಟ ಗೆಲ್ಲಲು ಒಂದೇ ಒಂದು ಪಾಯಿಂಟ್ ಅಂತರದಲ್ಲಿದ್ದಾಗ ಕೊನೆಯ ಹೋಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರಸ್ತುತ ಕಿರೀಟವನ್ನು ತನ್ನದಾಗಿಸಿಕೊಂಡರು.
  • ಏಷ್ಯನ್ ಯೂತ್ ಗೇಮ್ಸ್ (2013), ಯೂತ್ ಒಲಂಪಿಕ್ಸ್ ಗೇಮ್ಸ್ (2014), ಏಷ್ಯನ್ ಗೇಮ್ಸ್ (2014) ಮತ್ತು ರಿಯೋ ಒಲಂಪಿಕ್ಸ್ (2016) ಆಡಿದ ದೇಶದ ಮೊದಲ ಮಹಿಳಾ ಗಾಲ್ಫರ್.

ಮೆಂಗ್ ಹಾಂಗ್ ವೆ (Meng Hongwei) ಇಂಟರ್ಪೋಲ್ ನೂತನ ಮುಖ್ಯಸ್ಥ

ಚೀನಾದ ಹಿರಿಯ ಪೊಲೀಸ್ ಅಧಿಕಾರಿ ಮೆಂಗ್ ಹಾಂಗ್ ವೆ ಅವರನ್ನು ಅಂತಾರಾಷ್ಟ್ರೀಯ ಅಪರಾಧ ಪೊಲೀಸ್ ಸಂಸ್ಥೆ (International Criminal Police Organisation (INTERPOLE))ಇಂಟರ್ಪೋಲ್ ನ ಮುಖ್ಯಸ್ಥರನ್ನಾಗಿ ಆಯ್ಕೆಮಾಡಲಾಗಿದೆ. ಇಂಡೋನೇಷಿಯಾದ ಬಾಲಿಯಲ್ಲಿ ನಡೆದ 85ನೇ ಇಂಟರ್ಪೋಲ್ ವಾರ್ಷಿಕ ಸಭೆಯಲ್ಲಿ ವಾಂಗ್ ವೆ ಅವರನ್ನು ಮುಖ್ಯಸ್ಥರನ್ನಾಗಿ ಆಯ್ಕೆಮಾಡಲಾಯಿತು.ಆ ಮೂಲಕ ಈ ಹುದ್ದೆಯನ್ನು ಅಲಂಕರಿಸಿದ ಚೀನಾದ ಮೊದಲಗಿರಾಗಿದ್ದಾರೆ. ಹಾಂಗ್ ವೆ ನಾಲ್ಕು ವರ್ಷಗಳ ಕಾಲ ಈ ಹುದ್ದೆಯಲ್ಲಿಮುಂದುವರೆಯಲ್ಲಿದ್ದಾರೆ.

  • ಈ ನೇಮಕಾತಿಗೆ ಮುಂಚೆ ವಾಂಗ್ ವೆ ಅವರು ಚೀನಾದ ಸಾರ್ವಜನಿಕ ಭದ್ರತೆಯ ಉಪಾಧ್ಯಕ್ಷರಾಗಿದ್ದರು. ಕ್ರಿಮಿನಲ್ ಜಸ್ಟೀಸ್ ಮತ್ತು ಪೊಲೀಸ್ ಕ್ಷೇತ್ರದಲ್ಲಿ ಸುಮಾರು 40 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ಇಂಟರ್ಪೋಲ್:

  • ಇದು ಜಾಗತಿಕ ಪೊಲೀಸ್ ಸಹಕಾರ ಸಂಸ್ಥೆ ಹಾಗೂ ಸರ್ಕಾರೇತರ ಸಂಸ್ಥೆಯಾಗಿದೆ.
  • ಮಾನವರ ವಿರುದ್ದ ಅಪರಾಧ ತಡೆಯುವುದು, ಯುದ್ದ ಅಪರಾಧ, ಭಯೋತ್ಪಾದನೆ ವಿರುದ್ದ ಹೋರಾಡುವುದು ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡುವುದು ಇದರ ಪ್ರಮುಖ ಕರ್ತವ್ಯ.
  • 1923 ರಲ್ಲಿ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದ್ದು, ಇದರ ಕೇಂದ್ರ ಕಚೇರಿ ಫ್ರಾನ್ಸ್ ನ ಲಿಯೋನ್ ನಗರದಲ್ಲಿದೆ.
  • ವಿಶ್ವಸಂಸ್ಥೆಯ ನಂತರ ಅತಿ ಹೆಚ್ಚು ಸದಸ್ಯ ರಾಷ್ಟ್ರಗಳನ್ನು ಹೊಂದಿರುವ ವಿಶ್ವದ ಎರಡನೇ ಸಂಸ್ಥೆಯಾಗಿದೆ.

ಸೈಬರ್ ಭದ್ರತೆ ಹೆಚ್ಚಿಸಲು ಕೇಂದ್ರ ಸರ್ಕಾರದಿಂದ ವಿವಿಧ ಕ್ರಮ

ದೇಶದಲ್ಲಿ ಸೈಬರ್ ಭದ್ರತೆಯನ್ನು ಉತ್ತಮ ಪಡಿಸಲು ದಿಸೆಯಿಂದ ಕೇಂದ್ರ ಸರ್ಕಾರ ಅನೇಕ ಕ್ರಮಗಳನ್ನು ಕೈಗೊಂಡಿದೆ.  ಈ ವಿಷಯವನ್ನು ಕೇಂದ್ರ ಎಲೆಕ್ಟ್ರಾನಿಕ್ ಮತ್ತು ಐಟಿ ಸಚಿವ ರವಿಶಂಕರ್ ಪ್ರಸಾದ್ ರವರು ಖಚಿತಪಡಿಸಿದ್ದಾರೆ.

ಪ್ರಮುಖ ಕ್ರಮಗಳು:

  • ಕೇಂದ್ರ ಸರ್ಕಾರದ ಪ್ರಮುಖ ಸೈಬರ್ ಭದ್ರತೆ ಸಂಸ್ಥೆಯಾದ CERT-In (Computer Emergency Response Team India) ಬಲಪಡಿಸಲಾಗುವುದು.
  • ಗಮನಾರ್ಹ ಐಟಿ ಮೂಲಸೌಕರ್ಯವನ್ನು ಹೊಂದಿರುವ ಸಂಸ್ಥೆಗಳು ಕಡ್ಡಾಯ ಸೈಬರ್ ಭದ್ರತೆ ಅಧಿಕಾರಿಯನ್ನು ಹೊಂದಿರತಕ್ಕದ್ದು.
  • ಕೇರಳ, ತಮಿಳುನಾಡು, ಮಹಾರಾಷ್ಟ್ರ, ಜಾರ್ಖಂಡ್ ಮತ್ತು ತೆಲಂಗಣ ರಾಜ್ಯಗಳ ರಾಜ್ಯ CERT ಸಂಸ್ಥೆಗಳನ್ನು ಸ್ಥಾಪಿಸಲಾಗುವುದು.
  • ಬ್ಯಾಂಕಿಂಗ್ ಕ್ಷೇತ್ರದಲ್ಲಿರುವಂತಯೇ ವಿದ್ಯುತ್ ಕ್ಷೇತ್ರದಲ್ಲಿಯೂ ಸಹ CERT ಅನ್ನು ಸ್ಥಾಪಿಸಲಾಗುವುದು.
  • ನೈಜ್ಯ ಸಮಯದಲ್ಲಿ ಸೈಬರ್ ಅಪರಾಧ ಸ್ಥಿತಿಗತಿ ಅರಿಯಲು ಹಾಗೂ ಶೀಘ್ರವಾಗಿ ಪ್ರತಿಕ್ರಿಯೆ ನೀಡಲು ರಾಷ್ಟ್ರೀಯ ಸೈಬರ್ ಸಹಕಾರ ಕೇಂದ್ರ (NCCC)ವನ್ನು ಸ್ಥಾಪಿಸಲಾಗುವುದು. ಈ ಯೋಜನೆ ಮುಂದಿನ ಐದು ವರ್ಷದೊಳಗೆ ಪೂರ್ಣಗೊಳ್ಳಲಿದ್ದು, ರೂ 985 ಕೋಟಿ ಇದಕ್ಕಾಗಿ ವ್ಯಯಿಸಲಾಗುವುದು.

CERT-In ಬಗ್ಗೆ:

  • ಮಾಹಿತಿ ತಂತ್ರಜ್ಞಾನ ಭದ್ರತೆಗಾಗಿ ಸರ್ಕಾರ ಸ್ಥಾಪಿಸಿರುವ ನೊಡಲ್ ಏಜೆನ್ಸಿ CERT-In. ಇದನ್ನು 2004 ರಲ್ಲಿ ಸ್ಥಾಪಿಸಲಾಗಿದೆ.
  • ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ಮಾಹಿತಿ ತಂತ್ರಜ್ಞಾನ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿದೆ.
  • ಐಟಿ ತಿದ್ದುಪಡಿ ಕಾಯಿದೆ-2008 ರ ಪ್ರಕಾರ ಕಾಯಿದೆಯ ಅನುಷ್ಟಾನ ಮಾಡುವುದು CERT-In ಪ್ರಮುಖ ಕಾರ್ಯವಾಗಿದೆ.
  • ದೇಶದ ಸೈಬರ್ ಸ್ಪೇಸ್ ಮತ್ತು ಸಾಫ್ಟ್ ವೇರ್ ಮೂಲಸೌಕರ್ಯಕ್ಕೆ ಹ್ಯಾಕಿಂಗ್ ನಂತಹ ಅಪಾಯದಿಂದ ರಕ್ಷಿಸುವುದು, ಕಂಪ್ಯೂಟರ್ ಭದ್ರತೆಗೆ ಖನ್ನ ಹಾಕಿದ ಸಂದರ್ಭದಲ್ಲಿ ತುರ್ತಾಗಿ ರಕ್ಷಣ ಕ್ರಮಕೈಗೊಳ್ಳುವ ಹೊಣೆಗಾರಿಕೆಯನ್ನು ಇದು ಹೊಂದಿದೆ.

Leave a Comment

This site uses Akismet to reduce spam. Learn how your comment data is processed.