ಸ್ಟೀಲ್ ಆಥಾರಿಟಿ ಆಫ್ ಇಂಡಿಯಾಗೆ 2016 ಗೋಲ್ಡನ್ ಪಿಕಾಕ್ ಪ್ರಶಸ್ತಿ
ಸ್ಟೀಲ್ ಆಥಾರಿಟಿ ಆಫ್ ಇಂಡಿಯಾಗೆ ಪ್ರತಿಷ್ಠಿತ 2016 ಗೋಲ್ಡನ್ ಪಿಕಾಕ್ ಫಾರ್ ಕಾರ್ಪೋರೆಟ್ ಗವರ್ನೆನ್ಸ್ ಪ್ರಶಸ್ತಿ ಲಭಿಸಿದೆ. ಸ್ಟೀಲ್ ಆಥಾರಿಟಿ ಆಫ್ ಇಂಡಿಯಾ (SAIL) ಪರವಾಗಿ ರೂರ್ಕೆಲಾ ಸ್ಟೀಲ್ ಉತ್ಪಾದನ ಘಟಕದ ಸಿಇಓ ಅಶ್ವಿನ್ ಕುಮಾರ್ ರವರು ಪ್ರಶಸ್ತಿಯನ್ನು ಸ್ವೀಕರಿಸಿದರು. ಲಂಡನ್ ನಲ್ಲಿ ನಡೆದ 16ನೇ ಲಂಡನ್ ಗ್ಲೋನಲ್ ಕನ್ವೆಷನ್ ಆನ್ ಕಾರ್ಪೋರೆಟ್ ಗವರ್ನೆನ್ಸ್ ನಲ್ಲಿ ಪ್ರಶಸ್ತಿಯನ್ನು ನೀಡಲಾಯಿತು. ಕಾರ್ಪೋರೆಟ್ ಗವರ್ನೆನ್ಸ್ ಕ್ಷೇತ್ರದಲ್ಲಿ ಸೇಲ್ ಸೇವೆಯನ್ನು ಪರಿಗಣಿಸಿ ಪ್ರಶಸ್ತಿಯನ್ನು ನೀಡಲಾಗಿದೆ.
ಸ್ಟೀಲ್ ಆಥಾರಿಟಿ ಆಫ್ ಇಂಡಿಯಾ:
- ಸರ್ಕಾರಿ ಸ್ವಾಮ್ಯದ ಅತಿ ದೊಡ್ಡ ಉಕ್ಕು ಉತ್ಪಾದನ ಸಂಸ್ಥೆಯಾಗಿದೆ. ವಿಶ್ವದ ಉಕ್ಕು ಉತ್ಪಾದನೆ ಸಾಮರ್ಥ್ಯದಲ್ಲಿ 24ನೇ ಸ್ಥಾನದಲ್ಲಿದೆ.
- ಸೇಲ್ ಅನ್ನು 1954 ರಲ್ಲಿ ಸ್ಥಾಪಿಸಲಾಗಿದೆ. ಇದರ ಕೇಂದ್ರ ಕಚೇರಿ ನವದೆಹಲಿಯಲ್ಲಿದೆ.
- ಒಟ್ಟು ಐದು ಉಕ್ಕು ಉತ್ಪಾದನ ಘಟಕಗಳನ್ನು ಸೇಲ್ ಒಳಗೊಂಡಿದ್ದು, ಕಾರ್ಯನಿರ್ವಹಿಸುತ್ತಿವೆ. ಅವುಗಳೆಂದರೆ ಬಿಲಾಯ್, ದುರ್ಗಪುರ, ರೂರ್ಕೆಲಾ, ಬೊಕೊರೊ ಮತ್ತು ಬರ್ನಪುರ್. ಅಲ್ಲದೇ ಮೂರು ವಿಶೇಷ ಉಕ್ಕು ಉತ್ಪಾದನ ಘಟಕಗಳು ಸೇಲಂ, ದುರ್ಗಪುರ್ ಮತ್ತು ಭದ್ರವತಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.
ಭಾರತ-ಜಪಾನ್ ನಡುವೆ ನಾಗರಿಕ ಪರಮಾಣು ಒಪ್ಪಂದ ಸೇರಿ ಹತ್ತು ಒಪ್ಪಂದಗಳಿಗೆ ಸಹಿ
ಭಾರತ ಮತ್ತು ಜಪಾನ್ ನಡುವಿನ ದ್ವಿಪಕ್ಷೀಯ ಸಹಕಾರ ಬಲಗೊಳಿಸುವ ಸಲುವಾಗಿ ಉಭಯ ದೇಶಗಳ ನಡುವೆ ಒಟ್ಟು ಹತ್ತು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಮೂರು ದಿನಗಳ ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಹಾಗೂ ಜಪಾನ್ ಪ್ರಧಾನಿ ಶಿಂಜೊ ಅಬೆ ಅವರು ಟೋಕಿಯೋದಲ್ಲಿ ಈ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಒಪ್ಪಂದದ ಬಳಿಕ ಮಾತನಾಡಿದ ಪ್ರಧಾನಿ ಮೋದಿ ಅವರು, ನಾಗರೀಕ ಬಳಕೆಗಾಗಿ ಪರಸ್ಪರ ಸಹಕಾರಕ್ಕೆ ಭಾರತ-ಜಪಾನ್ ತೀರ್ಮಾನಿಸಲಾಗಿದ್ದು, ಇದೊಂದು ಐತಿಹಾಸಿಕ ನಿರ್ಧಾರ ಎಂದು ಬಣ್ಣಿಸಿದ್ದಾರೆ.
ಸಹಿ ಹಾಕಲಾದ ಒಪ್ಪಂದಗಳು
ನಾಗರಿಕ ಪರಮಾಣು ಒಪ್ಪಂದ: ಹಲವು ದಿನಗಳಿಂದ ಭಾರತ ಎದುರು ನೋಡುತ್ತಿದ್ದ ಈ ಐತಿಹಾಸಿಕ ಒಪ್ಪಂದಕ್ಕೆ ಉಭಯ ದೇಶಗಳು ಸಹಿ ಹಾಕಿದವು. ಒಪ್ಪಂದದಡಿ ಶಾಂತಿ ಉದ್ದೇಶಕ್ಕೆ ಮಾತ್ರ ಪರಮಾಣು ಉದ್ದೇಶವನ್ನು ಬಳಸಲಾಗುವುದು. ಇದರಿಂದ ಅಣು ವಿದ್ಯುತ್ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವ ಮೂಲಕ ಭಾರತದ ಇಂಧನ ಭದ್ರತೆ ಬಲಗೊಳ್ಳಲಿದೆ.
ತಯಾರಿಕ ಕೌಶಲ್ಯ ವೃದ್ದಿಸಲು ಒಪ್ಪಂದ: ಈ ಒಪ್ಪಂದದಡಿ 30,000 ಭಾರತೀಯ ಯುವಕರಿಗೆ ಮುಂದಿನ ಹತ್ತು ವರ್ಷದಲ್ಲಿ ಜಪಾನ್ ತಯಾರಿಕೆ ಶೈಲಿಯಲ್ಲಿ ಕೌಶಲ್ಯ ಹೆಚ್ಚಿಸಲು ತರಭೇತಿ ನೀಡಲಾಗುವುದು. ಭಾರತ-ಜಪಾನ್ ತಯಾರಿಕೆ ಸಂಸ್ಥೆ ಮತ್ತು ಆಯ್ದಾ ಎಂಜನಿಯರಿಂಗ್ ಕಾಲೇಜುಗಳಲ್ಲಿ ಜಪಾನೀಸ್ ಎಂಡೋವೊಡ್ ಕೋರ್ಸ್ ಮೂಲಕ ತರಭೇತಿ ನೀಡಲಾಗುವುದು.
ಬಾಹ್ಯಕಾಶ ಸಂಬಂಧ ಒಪ್ಪಂದ: ನಾಸಾ ಮತ್ತು JAXA ನಡುವೆ ಈ ಒಪ್ಪಂದಕ್ಕೆ ಸಹಿಹಾಕಲಾಗಿದೆ. ಇದರಡಿ ಬಾಹ್ಯಕಾಶ ಕುರಿತಾದ ಸಂಶೋಧನೆ ಕೈಗೊಳ್ಳಲು ಉಭಯ ದೇಶಗಳ ನಡುವೆ ಪರಸ್ಪರ ನೀಡಲಾಗುವುದು.
ಕೃಷಿ ಮತ್ತು ಆಹಾರ ಸಂಬಂಧಿತ ಕೈಗಾರಿಕೆ ಒಪ್ಪಂದ: ಕೃಷಿ ಮತ್ತು ಆಹಾರ ಕೈಗಾರಿಕೆ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರ ವೃದ್ದಿಸುವ ಸಲುವಾಗಿ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಸಾಗರ, ಭೂ ವಿಜ್ಞಾನ ಮತ್ತು ತಂತ್ರಜ್ಞಾನ ಒಪ್ಪಂದ: ಭೂ ವಿಜ್ಞಾನ ಸಚಿವಾಲಯ ಮತ್ತು ಜಪಾನ್ ಏಜೆನ್ಸಿ ಫಾರ್ ಅರ್ಥ್ ಸೈನ್ಸ್ ಅಂಡ್ ಟೆಕ್ನಾಲಜಿ ನಡುವೆ ಈ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಸಾರಿಗೆ ಮತ್ತು ನಗರಾಭಿವೃದ್ದಿ ಕುರಿತಾದ ಒಪ್ಪಂದ: ಈ ಒಪ್ಪಂದದಡಿ ಮೂಲಭೂತ ಸೌಕರ್ಯಗಳಾದ ಸಾರಿಗೆ, ರೈಲ್ವೆ, ಬಂದರು, ಏರ್ಪೋರ್ಟ್ ಟರ್ಮಿನಲ್, ನಗರಾಭಿವೃದ್ದಿ ಸೇರಿದಂತೆ ಪರಸ್ಪರ ಸಹಕಾರ ಮತ್ತು ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುವುದು.
ಸಂಸ್ಕೃತಿ ವಿನಿಮಯ ಕ್ಷೇತ್ರದಲ್ಲಿ ಒಪ್ಪಂದ: ಉಭಯ ದೇಶಗಳನ ನಡುವೆ ಕಲೆ ಮತ್ತು ಸಂಸ್ಕೃತಿ ವಿನಿಮಯ ಮಾಡಿಕೊಳ್ಳಲಾಗುವುದು.
ಕ್ರೀಡಾ ಸಹಕಾರ ಒಪ್ಪಂದ: ಮುಂಬರುವ 2020 ಟೋಕಿಯೊ ಒಲಂಪಿಕ್ಸ್ ಮತ್ತು ಪ್ಯಾರಾಲಿಂಪಿಕ್ ಸಲುವಾಗಿ ಉಭಯ ದೇಶಗಳ ನಡುವೆ ಕ್ರೀಡಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ಚೌಕಟ್ಟು ನೀಡುವುದು ಒಪ್ಪಂದದ ಉದ್ದೇಶ.
ಗುಜರಾತ್ ಮತ್ತು ಹ್ಯೊಗೊ ಸರ್ಕಾರ ನಡುವೆ ಒಪ್ಪಂದ: ಹ್ಯೊಗೊ ಮತ್ತು ಗುಜರಾತ್ ನಡುವೆ ವ್ಯವಹಾರ, ಶೈಕ್ಷಣಿಕ, ಸಾಂಸ್ಕೃತಿಕ. ವಿಪತ್ತು ನಿರ್ವಹಣೆ ಮತ್ತು ಪರಿಸರ ಸಂರಕ್ಷಣೆಯಲ್ಲಿ ಪರಸ್ಪರ ಸಹಕಾರ ನೀಡುವುದು.