ಕರ್ನಾಟಕ ರಾಜ್ಯದಲ್ಲಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್(KAS), ಪಿಎಸ್ಐ (PSI), ಪಿಡಿಓ (PDO), ಎಫ್ ಡಿ ಎ (FDA), ಎಸ್ ಡಿ ಎ (SDA) ಪರೀಕ್ಷೆಗಳಿಗೆ ಸಹಾಯವಾಗಲಿದೆ.
ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿದ್ಯಮಾನ ಕ್ವಿಜ್- ನವೆಂಬರ್-24, 2016
Question 1 |
1.ಬೆಂಗಳೂರಿನಲ್ಲಿ ನಡೆಯಲಿರುವ 14ನೇ ಪ್ರವಾಸಿ ಭಾರತೀಯ ದಿವಸ್ ನ ಮುಖ್ಯ ಅತಿಥಿಯಾಗಿ ಯಾರು ಭಾಗವಹಿಸಲಿದ್ದಾರೆ?
ಶಿಂಜೊ ಅಬೆ | |
ಅಂಟೊನಿಯೊ ಕೊಸ್ಟ | |
ಥೆರೆಸಾ ಮೇ | |
ವ್ಲಾದಿಮಿರ್ ಪುಟಿನ್ |
ಭಾರತೀಯ ಮೂಲದ ಪೊರ್ಚುಗಲ್ ಪ್ರಧಾನ ಮಂತ್ರಿ ಅಂಟೊನಿಯೊ ಕೊಸ್ಟ ರವರು 14ನೇ ಭಾರತೀಯ ಪ್ರವಾಸಿ ದಿವಸ್ ನ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅಲ್ಲದೇ ರಿಪಬ್ಲಿಕ್ ಆಫ್ ಸುರಿನೇಮ್ ನ ಉಪಾಧ್ಯಕ್ಷ ಮೈಕಲ್ ಅಶ್ವಿನ್ ಸತ್ಯಂದ್ರ ಅಧಿನ್ ರವರು ಯುವ ಪ್ರವಾಸಿ ಭಾರತೀಯ ದಿವಸ್ ನ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ.
Question 2 |
2. ಇತ್ತೀಚೆಗೆ ನಿಧನರಾದ ಎಂ. ಬಾಲಮುರಳಿಕೃಷ್ಣ, ಯಾವ ಕ್ಷೇತ್ರಕ್ಕೆ ಸಂಬಂಧಿಸಿದ್ದಾರೆ?
ಸಂಗೀತ | |
ಸಾಹಿತ್ಯ | |
ಕಲೆ | |
ವಿಜ್ಞಾನ |
ಕರ್ನಾಟಕ ಸಂಗೀತ ದಿಗ್ಗಜ ಎಂ. ಬಾಲಮುರಳಿಕೃಷ್ಣ ನಿಧನರಾದರು. ಬಾಲಮುರಳಿಕೃಷ್ಣ ರವರು ಗಾಯನ, ಸಂಗೀತ ಸಂಯೋಜನೆ, ನಟನೆ, ವಯಲಿನ್ ವಾದನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅನುಪಮ ಸಾಧನೆಗೈದಿದ್ದರು. ಮಾತೃಭಾಷೆ ತೆಲುಗಾದರೂ ಕನ್ನಡ, ಸಂಸ್ಕೃತ, ತಮಿಳು, ಮಲಯಾಳ, ಹಿಂದಿ, ಬಂಗಾಲಿ ಮತ್ತು ಪಂಜಾಬಿ ಭಾಷೆಗಳಲ್ಲಿ ಗಾನಸುಧೆ ಹರಿಸಿದ್ದ ಬಾಲಮುರಳಿಕೃಷ್ಣ ಅವರಿಗೆ ಸಿಕ್ಕ 2 ರಾಷ್ಟ್ರ ಪ್ರಶಸ್ತಿಗಳು ಕನ್ನಡದ ಮೂಲಕವೇ ಬಂದಿದ್ದವು. ಉಳಿದಂತೆ ಪದ್ಮಶ್ರೀ, ಪದ್ಮಭೂಷಣ, ಪದ್ಮವಿಭೂಷಣ ಸಹಿತ ಹಲವು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳು ಅವರನ್ನು ಅರಸಿ ಬಂದಿದ್ದವು. 1988ರಲ್ಲಿ ಬಿಡುಗಡೆಯಾಗಿ ದೂರದರ್ಶನದಲ್ಲಿ ಇಂದಿಗೂ ಪ್ರಸಾರವಾಗುತ್ತಿರುವ "ಮಿಲೇ ಸುರ್ ಮೇರಾ ತುಮ್ಹಾರಾ' ಎಂಬ ಐಕ್ಯತಾ ಗೀತೆಗೆ ಅವರ ಪ್ರಸ್ತುತಿ ವಿಶೇಷ ಮೆರುಗು ನೀಡಿತ್ತು.
Question 3 |
3. ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ ನೀಡುವ “ಲೆಜೆಂಡ್ಸ್ ಪ್ರಶಸ್ತಿ”ಯನ್ನು ಯಾರಿಗೆ ನೀಡಲಾಗುತ್ತಿದೆ?
ಸುಶೀಲ್ ಕುಮಾರ್ | |
ಮೇರಿ ಕೋಮ್ | |
ಯೋಗೆಶ್ವರ್ ದತ್ತ್ | |
ವಿಕಾಸ್ ಸಿಂಗ್ |
ಭಾರತದ ಎಮ್.ಸಿ ಮೇರಿ ಕೋಮ್ ಅವರಿಗೆ ಅಂತರರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಎಐಬಿಎ) ಡಿಸೆಂಬರ್ 20ರಂದು ‘ಲೆಜೆಂಡ್ಸ್ ಪ್ರಶಸ್ತಿ’ ನೀಡಲಿದೆ. ಲಂಡನ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದುಕೊಂಡಿರುವ ಬಾಕ್ಸರ್ ಮೇರಿ ಕೋಮ್ ಅವರಿಗೆ ಎಐಬಿಎ ತನ್ನ 70ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಗೌರವಿಸು ವುದಾಗಿ ಹೇಳಿದೆ.
Question 4 |
4. ಇತ್ತೀಚೆಗೆ ನಿಧನರಾದ ಪೊ. ಜಿ ಕೆ ಮೆನನ್ ರವರು ಈ ಕೆಳಗಿನ ಯಾವ ಸಂಸ್ಥೆಯ ಮುಖ್ಯಸ್ಥರಾಗಿದ್ದರು?
ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆ | |
ಬಾಬಾ ಪರಮಾಣು ಸಂಶೋಧನಾ ಸಂಸ್ಥೆ | |
ವಿಕ್ರಮ್ ಸಾರಾಬಾಯಿ ಬಾಹ್ಯಕಾಶ ಸಂಸ್ಥೆ | |
ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ದಿ ಸಂಸ್ಥೆ |
ಖ್ಯಾತ ವಿಜ್ಞಾನಿ ಹಾಗೂ ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆಯ ಮಾಜಿ ಮುಖ್ಯಸ್ಥ ಜಿ.ಕೆ.ಮೆನನ್ ರವರು ನಿಧನರಾದರು. ದೇಶದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಬೆಳವಣಿಗೆಗೆ ಅವರು ಅಪಾರ ಕೊಡುಗೆ ನೀಡಿದ್ದರು.
Question 5 |
5. 2016 ವಿಶ್ವ ರೊಬೊಟ್ ಒಲಂಪಿಯಡ್ (World Robot Olympiad) ಯಾವ ದೇಶದಲ್ಲಿ ನಡೆಯಲಿದೆ?
ಜಪಾನ್ | |
ಭಾರತ | |
ರಷ್ಯಾ | |
ಚೀನಾ |
13ನೇ ವಿಶ್ವ ರೊಬೊಟ್ ಒಲಂಪಿಯಡ್ ಗ್ರೇಟರ್ ನೊಯ್ಡಾ, ಉತ್ತರಪ್ರದೇಶದಲ್ಲಿ ನಡೆಯಲಿದೆ. ರೊಬೊಟ್ ತಂತ್ರಜ್ಞಾನ ಬಳಸಿ ತ್ಯಾಜ್ಯ ನಿರ್ವಹಣೆ ಮತ್ತು ಮರುಬಳಕೆ ತಂತ್ರಜ್ಞಾನವನ್ನು ವಿದ್ಯಾರ್ಥಿಗಳು ಪ್ರದರ್ಶಿಸಲಿದ್ದಾರೆ. ಪ್ರತಿ ವರ್ಷ ಈ ಒಲಂಪಿಯಡ್ ಅನ್ನು ಆಯೋಜಿಸುತ್ತಿದ್ದು, ರೊಬೊಟ್ ಬಳಕೆ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಇದು ವೇದಿಕೆಯಾಗಲಿದೆ.
Question 6 |
6. “ವಂಗಲ ಸುಗ್ಗಿ ಹಬ್ಬ (Wangala)”ವನ್ನು ಯಾವ ಬುಡಕಟ್ಟು ಜನರ ಪ್ರಮುಖ ಹಬ್ಬವಾಗಿದೆ?
ಖಾಸಿ ಬುಡಕಟ್ಟು ಜನರು | |
ಗಾರೊ ಬುಡಕಟ್ಟು ಜನರು | |
ದಿಯೊರಿ ಬುಡಕಟ್ಟು ಜನರು | |
ಕೊಂಗ ಬುಡಕಟ್ಟು ಜನರು |
ವಂಗಲ ಸುಗ್ಗಿ ಹಬ್ಬ ಮೇಘಾಲಯದ ಗಾರೊ ಬುಡಕಟ್ಟು ಜನರ ಪ್ರಸಿದ್ದ ಹಬ್ಬವಾಗಿದೆ. ಪ್ರತಿ ವರ್ಷ ಈ ಹಬ್ಬವನ್ನು ನವೆಂಬರ್ ತಿಂಗಳಲ್ಲಿ ಆಚರಿಸಲಾಗುತ್ತದೆ. ಈ ಹಬ್ಬವನ್ನು “100 ಡ್ರಮ್” ಹಬ್ಬವೆಂತಲೂ ಕರೆಯಲಾಗುತ್ತದೆ.
Question 7 |
7. “ಮಿಡ್ನೈಟ್ಸ್ ಫ್ಯೂರಿಸ್: ದಿ ಡೆಡ್ಲಿ ಲಿಗೆಸ್ಸಿ ಆಫ್ ಇಂಡಿಯಾಸ್ ಪಾರ್ಟಿಷನ್ (Midnight’s Furies: The Deadly Legacy of India’s Partition)”ಪುಸ್ತಕದ ಲೇಖಕರು ಯಾರು?
ಗೋಪಿ ಶ್ರೀಕಾಂತ್ | |
ಜಾವೇದ್ ರಾಜಾ | |
ನಿಸಿದ್ ಹಜಾರಿ | |
ಮಿಲನ್ ವೈಷ್ಣವ್ |
ಮಿಡ್ನೈಟ್ಸ್ ಫ್ಯೂರಿಸ್: ದಿ ಡೆಡ್ಲಿ ಲಿಗೆಸ್ಸಿ ಆಫ್ ಇಂಡಿಯಾಸ್ ಪಾರ್ಟಿಷನ್” ಪುಸ್ತಕವನ್ನು ಬರೆದಿದ್ದಾರೆ. ಪುಸ್ತಕದಲ್ಲಿ ಭಾರತ ಪಾಕಿಸ್ತಾನ ವಿಭಜನೆ ವೇಳೆಯಾದ ಹಿಂಸೆಯ ಬಗ್ಗೆ ಸಮಗ್ರವಾಗಿ ಬರೆಯಲಾಗಿದೆ.
Question 8 |
8. ವಿಶ್ವದ ಅತ್ಯಂತ ಸ್ಫುರದ್ರೂಪಿ ಪುರುಷರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ಭಾರತೀಯ ನಟ ಯಾರು?
ಹೃತಿಕ್ ರೋಷನ್ | |
ಸಲ್ಮಾನ್ ಖಾನ್ | |
ರಣವೀರ್ ಸಿಂಗ್ | |
ಅಕ್ಷಯ್ ಕುಮಾರ್ |
ವಿಶ್ವದ ಅತ್ಯಂತ ಸ್ಫುರದ್ರೂಪಿ ಪುರುಷರ ಪಟ್ಟಿಯಲ್ಲಿ ‘ಗ್ರೀಕ್ ಗಾಡ್ ಆಫ್ ಬಾಲಿವುಡ್ಖ್ಯಾತಿಯ ನಟ ಹೃತಿಕ್ ರೋಷನ್ ಮೂರನೇ ಸ್ಥಾನ ಪಡೆದಿದ್ದಾರೆ. Worldstopmost.com. ವೆಬ್ಸೈಟ್ ನಡೆಸಿದ ಸಮೀಕ್ಷೆಯಲ್ಲಿ ಹಾಲಿವುಡ್ನ ತಾರೆಗಳಾದ ಜಾನಿ ಡೆಪ್ ಮತ್ತು ಬ್ರಾಡ್ ಪಿಟ್ ಇವರನ್ನು ಮೀರಿಸಿ ಹೃತಿಕ್ ಈ ಸ್ಥಾನ ಗಳಿಸಿದ್ದಾರೆ. ನಟ ಸಲ್ಮಾನ್ ಖಾನ್ ಅವರು 7ನೇ ಸ್ಥಾನ ಪಡೆದಿದ್ದಾರೆ.ಟಾಮ್ ಕ್ರೂಸ್, ರಾಬರ್ಟ್ ಪ್ಯಾಟಿನ್ಸನ್, ಜಾನಿ ಡೆಪ್, ಟಾಮ್ ಹಿಡ್ಲಿಸ್ಟನ್, ಒಮರ್ ಬೊರ್ಕಾನ್ ಅಲ್ ಗಲ, ಬ್ರಾಡ್ ಪಿಟ್, ಹಗ್ ಜಾಕ್ಮನ್, ಮತ್ತು ಬಿಲ್ಲಿ ಉಂಗರ್ ಕ್ರಮವಾಗಿ ಟಾಪ್ 10ರಲ್ಲಿ ಆಯ್ಕೆಯಾದವರು.
Question 9 |
9. ಇತ್ತೀಚೆಗೆ ನಿಧನರಾದ “ದಿಲೀಪ್ ಪಡಗಾಂವ್ಕರ್” ಯಾವ ಪತ್ರಿಕೆಯ ಸಂಪಾದಕರಾಗಿದ್ದರು?
ಟೈಮ್ಸ್ ಆಫ್ ಇಂಡಿಯಾ | |
ಇಂಡಿಯನ್ ಎಕ್ಸ್ ಪ್ರೆಸ್ | |
ದಿ ಹಿಂದೂ | |
ಮಾತೃಭೂಮಿ |
ಹಿರಿಯ ಪತ್ರಕರ್ತ ಹಾಗೂ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯ ಮಾಜಿ ಸಂಪಾದಕರಾಗಿದ್ದ ದಿಲೀಪ್ ಪಡಗಾಂವ್ಕರ್ ನಿಧನರಾದರು. 1968ರಲ್ಲಿ ಮಾನವಿಕ ಶಾಸ್ತ್ರದಲ್ಲಿ ಡಾಕ್ಟರೇಟ್ ಪಡೆದಿದ್ದ ಅವರು ಟೈಮ್ಸ್ ಆಫ್್ ಇಂಡಿಯಾ ಪತ್ರಿಕೆ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದರು. 1988ರಿಂದ ಆರು ವರ್ಷಗಳ ಅವಧಿಗೆ ಅವರು ಟೈಮ್ಸ್ ಆಫ್ ಇಂಡಿಯಾ ಸಂಪಾದಕರಾಗಿದ್ದರು1978ರಿಂದ 1986ರವರೆಗೆ ಅವರು ಬ್ಯಾಂಕಾಕ್ ಹಾಗೂ ಪ್ಯಾರಿಸ್ನಲ್ಲಿ ಯುನೆಸ್ಕೊ ಜತೆ ಅವರು ಕಾರ್ಯನಿರ್ವಹಿಸಿದ್ದರು. 2008ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸತತವಾಗಿ ಉದ್ವಿಗ್ನ ವಾತಾವರಣ ಉಂಟಾದ ಬಳಿಕ ಕೇಂದ್ರ ಸರ್ಕಾರ ಮಾತುಕತೆಗೆ ಮೂವರು ಸದಸ್ಯರ ಗುಂಪೊಂದನ್ನು ರಚಿಸಿತ್ತು. ಪಡಗಾಂವ್ಕರ್ ಇದರಲ್ಲಿ ಒಬ್ಬರಾಗಿದ್ದರು.
Question 10 |
10. ಬೆಸ್ಮೆರ್ ವಿಧಾನ (Bessmer Process) ಅನ್ನು ಈ ಕೆಳಗಿನ ಯಾವ ಕೈಗಾರಿಕೆಯಲ್ಲಿ ಬಳಸಲಾಗುತ್ತದೆ?
ಕಲ್ಲಿದ್ದಲು | |
ಉಕ್ಕು | |
ಅಲ್ಯೂಮಿನಿಯಂ | |
ಕಬ್ಬಿಣ |
[button link=”http://www.karunaduexams.com/wp-content/uploads/2016/11/ಪ್ರಚಲಿತ-ವಿದ್ಯಮಾನ-ಮತ್ತು-ಸಾಮಾಜ್ಯ-ಜ್ಞಾನ-ಕ್ವಿಜ್-ನವೆಂಬರ್-24.pdf”]ಡೌನ್ಲೋಡ್ ಮಾಡಲು ನೀಲಿ ಬಟನ್ ಕ್ಲಿಕ್ ಮಾಡಿ